ಡಬ್ಲ್ಯುಟಿಸಿ ಫೈನಲ್‌ನಲ್ಲಿ ದ್ವಿಶತಕ ಸಿಡಿಸಬಹುದಾದ ಭಾರತದ ಆಟಗಾರನನ್ನು ಹೆಸರಿಸಿದ ರಾಜಾ!

ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ಧ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪೈನಲ್ ಹಣಾಹಣಿಗೆ ಭಾರತ ತಂಡದ ಆರಂಭಿಕ ಜೋಡಿಯ ಬಗ್ಗೆ ಗೊಂದಲವಿದೆ. ಇಂಗ್ಲೆಂಡ್‌ ಸೌತಾಮ್ಟನ್‌ನಲ್ಲಿ ಜೂನ್‌ 18 ರಿಂದ 22ರವರೆಗೆ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಡಬ್ಲ್ಯುಟಿಸಿ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ 20 ಸದಸ್ಯರ ಭಾರತ ಟೆಸ್ಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆದರೆ, ಕಿವೀಸ್‌ ವಿರುದ್ಧ ಆರಂಭಿಕ ಜೋಡಿಯನ್ನಾಗಿ ಯಾರನ್ನು ಕಣಕ್ಕೆ ಇಳಿಸಬೇಕೆಂದು ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿ ಗೊಂದಲದಲ್ಲಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಹಾಗೂ ಶುಭಮನ್‌ ಗಿಲ್‌ ಓಪನಿಂಗ್‌ ಮಾಡಿ ಯಶಸ್ವಿಯಾಗಿದ್ದರು. ಆದರೆ, ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ ಗಿಲ್‌ ಸತತ ವೈಫಲ್ಯ ಅನುಭವಿಸಿದ್ದರು. ಆದರೆ, ಈ ಬಾರಿ ಅವರು ಇನಿಂಗ್ಸ್ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಪಾಕಿಸ್ತಾನದ ತಂಡದ ಮಾಜಿ ಕ್ರಿಕೆಟಿಗ ರಮೀಝ್‌ ರಾಜಾ ಅವರು ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ ಅವರನ್ನು ಬಿಂಬಲಿಸಿದ್ದಾರೆ ಹಾಗೂ ಒಮ್ಮೆ ರೋಹಿತ್‌ ಕ್ರೀಸ್‌ನಲ್ಲಿ ನೆಲೆಗೊಂಡರೆ ದ್ವಿಶತಕ ಸಿಡಿಸುತ್ತಾರೆಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪಂದ್ಯ ಆಕ್ರಮಣಕಾರಿ ಆಟವನ್ನು ನಿರೀಕ್ಷಿಸುತ್ತಿದ್ದು, ರೋಹಿತ್‌ ಹಾಗೂ ಗಿಲ್‌ ಓಪನಿಂಗ್‌ಗೆ ಸೂಕ್ತ ಎಂದು ಹೇಳಿದ್ದಾರೆ. "ಇದು ಅಪಾಯಕಾರಿಯಾಗಿಲ್ಲ. ನಿಮ್ಮಲ್ಲಿರುವ ಓಪನಿಂಗ್‌ ಜೋಡಿಗೆ ನೀವು ಬೆಂಬಲಿಸುವ ಅಗತ್ಯವಿದೆ. ರೋಹಿತ್‌ ಶರ್ಮಾ ಕ್ರೀಸ್‌ನಲ್ಲಿ ಹೊಂದಾಣಿಕೆ ಸಾಧಿಸಿದರೆ, ಖಂಡಿತಾ ದ್ವಿಶತಕ ಸಿಡಿಸುತ್ತಾರೆ," ಎಂದು ರಮೀಝ್‌ ರಾಜಾ ಇಂಡಿಯಾ ನ್ಯೂಸ್‌ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನೀವು ಜಾಸ್ತಿ ಯೋಚಿಸುವ ಅಗತ್ಯವಿಲ್ಲ. ನೀವು ಕ್ರೀಸ್‌ಗೆ ತೆರಳಿ ನಿಮ್ಮ ಆಟವನ್ನು ಆಡುವ ಅಗತ್ಯವಿದೆ ಅಷ್ಟೆ. ಆದರೆ, ನೀವು ಆಕ್ರಮಣಕಾರಿಯಾಗಿ ಆಡಬೇಕು. ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ದಾಳಿಯನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಏಕೆಂದರೆ ಅವರು ಆಲೋಚನೆ ಆಕ್ರಮಣಕಾರಿಯಾಗಿದೆ," ಎಂದು ಹೇಳಿದರು. ಭಾರತದ ಪಿಚ್‌ಗಳಲ್ಲಿ ಇನಿಂಗ್ಸ್‌ನ ಆರಂಭದಲ್ಲಿ ಭಾರತ ತಂಡವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ರಮೀಝ್‌ ಒಪ್ಪಿಕೊಂಡರು. ಆದರೆ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್‌ ಮೊದಲ ಅರ್ಧ ಗಂಟೆಯವರೆಗೆ ಮೃದು ಕೈಗಳಿಂದ ಮಾತ್ರ ಆಡಬೇಕಾಗಿದೆ ಎಂದು ಅವರು ನಂಬುತ್ತಾರೆ, ಒಮ್ಮೆ ಅವರು ಪರಿಸ್ಥಿತಿಗಳಿಗೆ ಹೊಂದಿಕೊಂಡರೆ, ಅವರು ತಮ್ಮ ಸ್ವಾಭಾವಿಕ ಆಟವನ್ನು ಆಡುಬೇಕಾಗುತ್ತದೆ ಎಂದರು. "ಇದು ಅರ್ಧದ ದಾರಿಯಾಗಿದ್ದರೆ, ನೀವು ಇಂಗ್ಲೆಂಡ್‌ ಆಗಿರಲಿ ಅಥವಾ ಭಾರತವಾಗಿರಲಿ ನೀವು ಪರಿಸ್ಥಿತಿಗೆ ಹೊಂದಿಕೊಂಡು ಆಡಬೇಕಾಗುತ್ತದೆ. ಆರಂಭಿಕ ಅರ್ಧ ಗಂಟೆಯಲ್ಲಿ ನೀವು ಮೃದು ಕೈಗಳಿಂದ ಬೌಲರ್‌ಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಕ್ರೀಸ್‌ನಲ್ಲಿ ಹೊಂದಿಕೊಂಡರೆ, ಆಗ ನೀವು ನಿಮ್ಮ ಸ್ವಾಭಾವಿಕ ಆಟವನ್ನು ಪ್ರದರ್ಶಿಸಿಬಹುದು," ಎಂದು ರಮೀಝ್‌ ರಾಜಾ ಅಭಿಪ್ರಾಯ ಪಟ್ಟರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fHjyrd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...