ಕೆಕೆಆರ್‌ ವಿರುದ್ಧ ಇಂದಿನ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ?

ಅಹ್ಮದಾಬಾದ್‌: ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 5 ರಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ವಿರುದ್ಧ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸೆಣಸಲಿದೆ. ಕಳೆದ ಪಂದ್ಯದಲ್ಲಿ ಇದೇ ಅಂಗಳದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ 34 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಒಂದೇ ಒಂದು ರನ್‌ ಅಂತರದಲ್ಲಿ ಕೊಹ್ಲಿ ಪಡೆ ಗೆದ್ದಿತ್ತು. ಮೊಟೆರಾ ಅಂಗಣದಲ್ಲಿ ಇಂದು ತಮ್ಮ ನಾಲ್ಕನೇ ಪಂದ್ಯವನ್ನು ಗೆದ್ದುಕೊಳ್ಳಲು ಆರ್‌ಸಿಬಿ ಎದುರು ನೋಡುತ್ತಿದೆ. ಮತ್ತೊಂದೆಡೆ ಕೋಲ್ಕತಾ ನೈಟ್‌ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ಏಳನೇ ಸ್ಥಾನದಲ್ಲಿರುವ ನೈಟ್‌ ರೈಡರ್ಸ್ ಇಂದಿನ ಪಂದ್ಯ ಗೆಲುವಿಗಾಗಿ ಎದುರು ನೋಡುತ್ತಿದೆ. ಆದರೆ, ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಎದುರು ಸುಲಭವಲ್ಲ. ಪಿಚ್‌ ರಿಪೋರ್ಟ್: ಇಲ್ಲಿನ ಮೊಟೆರಾ ಕ್ರೀಡಾಂಗಣದ ಪಿಚ್‌ ತಕ್ಕಮಟ್ಟಿಗೆ ಬ್ಯಾಟ್ಸ್‌ಮನ್‌ಗಳಿಗೆ ಸ್ನೇಹಿಯಾಗಿದೆ. ಜತೆಗೆ ಇಲ್ಲಿನ ವಿಕೆಟ್‌ ನಿಧಾನಗತಿಯ ಬೌಲರ್‌ಗಳಿಗೂ ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಸ್ಪಿನ್ನರ್‌ಗಳು ಬ್ಯಾಟ್ಸ್‌ಮನ್‌ಗಳ ವಿರುದ್ಧ ಪ್ರಾಬಲ್ಯ ಸಾಧಿಸಬಹುದು. ಇಲ್ಲಿ ಟಾಸ್‌ ಗೆಲ್ಲುವ ತಂಡಗಳು ಚೇಸಿಂಗ್‌ ಆಯ್ಕೆ ಮಾಡಿಕೊಳ್ಳುತ್ತಿವೆ. ಇನ್ನು ಇದೇ ಅಂಗಳದಲ್ಲಿ ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡ ಆರ್‌ಸಿಬಿ ವಿರುದ್ಧ 180 ರನ್‌ ಗುರಿ ನೀಡಿತ್ತು. ನಂತರ ಗುರಿ ಹಿಂಬಾಲಿಸಿದ್ದ ಆರ್‌ಸಿಬಿ 34 ರನ್‌ಗಳ ಅಂತರದಲ್ಲಿ ಸೋತಿತ್ತು. ಇಂದಿನ ಪಂದ್ಯದಲ್ಲಿಯೂ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುವ ತಂಡ 175 ರಿಂದ 185 ರನ್‌ ಕಲೆ ಹಾಕಿದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಎದುರಾಳಿ ತಂಡವನ್ನು ನಿಯಂತ್ರಿಸಬಹುದು. ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ರಾಯಲ್‌ ಚಾಲೆಂಜರ್ಸ್ ಬೆಂಗಳೂರು: ದೇವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ (ನಾಯಕ), ವಾಷಿಂಗ್ಟನ್‌ ಸುಂದರ್/ರಜತ್ ಪಾಟಿದರ್, ಗ್ಲೆನ್‌ ಮ್ಯಾಕ್ಸ್‌ವೆಲ್‌ (ವಿ.ಕೀ), ಎಬಿ ಡಿವಿಲಿಯರ್ಸ್, ಶಹಬಾಝ್‌ ಅಹ್ಮದ್‌, ಡೇನಿಯಲ್ ಸ್ಯಾಮ್ಸ್, ಕೈಲ್‌ ಜೇಮಿಸನ್‌, ಹರ್ಷಲ್ ಪಟೇಲ್‌, ಯುಜ್ವೇಂದ್ರ ಚಹಲ್‌, ಮೊಹಮ್ಮದ್‌ ಸಿರಾಜ್‌. ಕೋಲ್ಕತಾ ನೈಟ್‌ ರೈಡರ್ಸ್: ನಿತೀಶ್‌ ರಾಣಾ, ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ಸುನೀಲ್‌ ನರೇನ್‌, ಐಯಾನ್‌ ಮಾರ್ಗನ್‌ (ನಾಯಕ), ದಿನೇಶ್‌ ಕಾರ್ತಿಕ್‌ (ವಿ.ಕೀ), ಆಂಡ್ರೆ ರಸೆಲ್‌, ಪ್ಯಾಟ್‌ ಕಮಿನ್ಸ್, ಪ್ರಸಿಧ್‌ ಕೃಷ್ಣ, ವರುಣ್‌ ಚಕ್ರವರ್ತಿ, ಶಿವಂ ಮಾವಿ ಮುಖಾಮುಖಿ ದಾಖಲೆ ಆಡಿರುವ ಒಟ್ಟು ಪಂದ್ಯಗಳು: 28 ಆರ್‌ಸಿಬಿ ಗೆಲುವು: 13 ಕೆಕೆಆರ್‌ ಗೆಲುವು: 15 ಪಂದ್ಯದ ವಿವರ ಪಂದ್ಯ: ರಾಯಲ್‌ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತಾ ನೈಟ್‌ ರೈಡರ್ಸ್ ದಿನಾಂಕ, ಸಮಯ: ಮೇ.3 2021, ರಾತ್ರಿ 07:30ಕ್ಕೆ ಸ್ಥಳ: ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣ, ಅಹ್ಮದಾಬಾದ್‌ ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3eS0R22

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...