: ದೇಶದೆಲ್ಲೆಡೆ ಕೊರೊನಾ ರೋಗಿಗಳಿಗೆ ದೊಡ್ಡ ಮಟ್ಟದಲ್ಲಿ ಆಕ್ಸಿಜನ್ ಕೊರತೆ ಎದುರಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲಿ ಭಾನುವಾರ ತಡರಾತ್ರಿ ಆಕ್ಸಿಜನ್ ಖಾಲಿಯಾಗಿ ಹನ್ನೆರಡು ಜನ ರೋಗಿಗಳು ಮೃತಪಟ್ಟಿರುವ ಆತಂಕಕಾರಿ ಘಟನೆ ನಡೆದಿದೆ. ಚಾಮರಾಜ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ಆಕ್ಸಿಜನ್ ಖಾಲಿಯಾಗಿದ್ದು, ಈ ಹಿನ್ನೆಲೆ ವೆಂಟಿಲೇಟರ್‌ನಲ್ಲಿದ್ದ ಹನ್ನೆರಡು ಜನ ಕೊರೊನಾ ರೋಗಿಗಳು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಆರು ಸಾವಿರ ಲೀಟರ್ ಆಕ್ಸಿಜನ್ ಘಟಕ ಸ್ಥಾಪನೆಯಾಗಿದೆಯಾದರೂ ಅದಕ್ಕೆ ಆಕ್ಸಿಜನ್ ಪೂರೈಕೆ ಆಗಿರಲಿಲ್ಲ. ಅದರಲ್ಲಿದ್ದ ಆಕ್ಸಿಜನ್ ಮಧ್ಯರಾತ್ರಿ ವೇಳೆಗೆ ಮುಗಿದಿದೆ. ಹೀಗಾಗಿ ವೆಂಟಿಲೇಟರ್‌ನಲ್ಲಿದ್ದ ಹನ್ನೆರಡು ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಕ್ಸಿಜನ್ ಮುಗಿದ ತಕ್ಷಣ ವೈದ್ಯರು ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಇದ್ದ ಆಕ್ಸಿಜನ್ ಸಿಲಿಂಡರ್‌ಗಳನ್ನು ತರಿಸಿದ್ದಾರೆ. ಅಲ್ಲದೇ ಮೈಸೂರು ಸಂಸದರಿಗೆ ಮೆಡಿಕಲ್ ಕಾಲೇಜು ಡೀನ್ ಮನವಿ ಮಾಡಿದ ಮೇರೆಗೆ ಸಂಸದ ಪ್ರತಾಪ್ ಸಿಂಹ ಅವರು ಸ್ಪಂದಿಸಿದ್ದಾರೆ. ಅಷ್ಟೊತ್ತಿನಲ್ಲೇ ಮೈಸೂರಿನ ಜಿಲ್ಲಾಸ್ಪತ್ರೆಯಲ್ಲಿದ್ದ ಒಂದಷ್ಟು ಸಿಲಿಂಡರ್ ಪೂರೈಕೆಗೆ ತರಿಸಲಾಗಿದ್ದು, ಹೀಗಾಗಿ ಇನ್ನು ಸಂಭವಿಸಬಹುದಾದ ಸಾವುಗಳು ತಗ್ಗಿವೆ ಎನ್ನಲಾಗಿದೆ. ಇನ್ನು ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿಆಕ್ಸಿಜನ್ ಕೊರತೆ ಎದುರಾಗಿರುವ ಕುರಿತು ಮಾರ್ಚ್ ಮೂರರಂದು ‘ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ’ ಲೇಖನದ ಮೂಲಕ ವಿಜಯಕರ್ನಾಟಕ ಎಚ್ಚರಿಸಿತ್ತು.
from India & World News in Kannada | VK Polls https://ift.tt/2QNGmM9