Live Updates: ಉಪಚುನಾವಣೆ ಫಲಿತಾಂಶ; ಮತ ಎಣಿಕೆ ಆರಂಭ, ಅಭ್ಯರ್ಥಿಗಳ ಎದೆಯಲ್ಲಿ ಲಬ್‌ಡಬ್‌ ಶುರು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಡೆದಿರುವ ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಕಾರ್ಯ ಆಯಾ ಕ್ಷೇತ್ರಗಳ ಜಿಲ್ಲಾ ಕೇಂದ್ರಗಳಲ್ಲಿ ಮೇ 2ರಂದು ಬೆಳಗ್ಗೆ ಎಂಟರಿಂದ ನಡೆಯಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಮತದಾನ ಈಗಾಗಲೇ ಮುಗಿದಿದ್ದು, ಮತಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸತೀಶ್‌ ಜಾರಕಿಹೊಳಿ ಸ್ಪರ್ಧಿಸಿದರೆ, ಬಿಜೆಪಿಯಿಂದ ಮಂಗಳಾ ಸುರೇಶ್ ಅಂಗಡಿ ಕಣಕ್ಕಿಳಿದಿದ್ದಾರೆ. ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪ್‌ ಗೌಡ ಪಾಟೀಲ್, ಕಾಂಗ್ರೆಸ್‌ನಿಂದ ಬಸನಗೌಡ ತುರುವಿಹಾಳ, ಬಸವಕಲ್ಯಾಣದಲ್ಲಿ ಬಿಜೆಪಿಯಿಂದ ಶರಣು ಸಲಗರ ಮತ್ತು ಕಾಂಗ್ರೆಸ್‌ನಿಂದ ಮಾಲಾ ಬಿ ನಾರಾಯಣ ರಾವ್‌ ಕಣದಲ್ಲಿದ್ದಾರೆ. ಚುನಾವಣಾ ಫಲಿತಾಂಶದ ಕ್ಷಣಕ್ಷಣದ ಅಪ್‌ಡೇಟ್ಸ್‌ಗಳನ್ನು ವಿಜಯ ಕರ್ನಾಟಕ ವೆಬ್‌ ಮೂಲಕ ನೀವು ಇಲ್ಲಿ ತಿಳಿದುಕೊಳ್ಳಬಹುದು. *** 8.30 am: ಬೆಳಗಾವಿ ಲೋಕಸಭಾ ಚುನಾವಣೆಯ ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿಗೆ ಆರಂಭಿಕ ಮುನ್ನಡೆ ** 8.15 am: ರಾಯಚೂರಿನಲ್ಲಿ ಮಸ್ಕಿ ಕ್ಷೇತ್ರದ ಅಂಚೆ ಮತ ಎಣಿಕೆ ಆರಂಭ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ಗೆ 579 ಮತಗಳ ಮುನ್ನಡೆ *** 8.00 am: ಬೆಳಗಾವಿಯಲ್ಲಿ ಸ್ಟ್ರಾಂಗ್ ರೂಂ ತೆರೆದ ಅಧಿಕಾರಿಗಳು **** 7.45 am: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತಎಣಿಕೆಗೆ ಕ್ಷಣಗಣನೆ. ಬೀದರ್‌ನ ಬಿವಿ ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಮತಎಣಿಕೆ ನಡೆಯಲಿದ್ದು, ಪ್ರತಿ ಕೌಂಟಿಂಗ್ ಹಾಲ್‌ನಲ್ಲಿ ತಲಾ ನಾಲ್ಕು ಟೇಬಲ್‌ಗಳನ್ನು ಅಳವಡಿಕೆ. ಒಟ್ಟು 28 ಸುತ್ತುಗಳಲ್ಲಿ ಎಣಿಕೆ ನಡೆಯಲಿದ್ದು, ತಲಾ 20 ಸೂಪರ್‌ವೈಸರ್‌ಗಳು, ಮೈಕ್ರೋ ವೀಕ್ಷಕರು ಮತ್ತು ಅಸಿಸ್ಟಂಟ್ ನೇಮಿಸಲಾಗಿದೆ. ಮತ ಏಣಿಕೆ ಕೆಂದ್ರಕ್ಕೆ ಎಲ್ಲಾ ಅಭ್ಯರ್ಥಿ, ಅಭ್ಯರ್ಥಿ ಏಜೆಂಟ್ ಗಳು 7 ಗಂಟೆಯ ಒಳಗಾಗಿ ಆಗಮಿಸಿದ್ದು, ಕೋವಿಡ್ ವರದಿ‌ ನೆಗೆಟಿವ್ ಇದ್ದವರಿಗೆ ಮಾತ್ರ‌ ಎಣಿಕೆ ಕೇಂದ್ರದೊಂದಿಗೆ ಬಿಡಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. **** 7.30 am : ಮಸ್ಕಿ ವಿಧಾನಸಭಾ ಉಪ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ. ರಾಯಚೂರು ನಗರದ ಎಸ್‌ಆರ್‌ ಪಿಎಸ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ. ಮತ ಎಣಿಕೆಗಾಗಿ ಒಟ್ಟು 12 ಟೇಬಲ್, 03 ಎಣಿಕೆ ಕೊಠಡಿಗಳಲ್ಲಿ ಬಳಕೆ. 12 ಮತ ಎಣಿಕೆ ಮೇಲ್ವಿಚಾರಕರು, 12 ಮತ ಎಣಿಕೆ ಸಹಾಯಕರು, 12 ಮೈಕ್ರೋ ಅಬ್ಸರ್ವರ್ ನೇಮಕ.


from India & World News in Kannada | VK Polls https://ift.tt/3nChrHs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...