ಮೃತದೇಹಗಳಿವೆ ಆದರೆ ಡ್ರೈವರ್‌ಗೆ ಅನಾರೋಗ್ಯ: ಶವ ಸಾಗಿಸುವ ವಾಹನ ಓಡಿಸಿ ದಕ್ಷತೆ ಮೆರೆದ ಮೈಸೂರು ಪಾಲಿಕೆ ಅಧಿಕಾರಿ

ಮೈಸೂರು: ಶವ ಸಾಗಿಸುವ ವಾಹನದ ಚಾಲಕನಿಗೆ ಅನಾರೋಗ್ಯವಾದ ಕಾರಣ ಮಹಾನಗರ ಪಾಲಿಕೆಯ ಸಾಂಖ್ಯಿಕ ಅಧಿಕಾರಿಯೊಬ್ಬರು ಸ್ವತಃ ಸ್ಟೇರಿಂಗ್‌ ಹಿಡಿದು ವೃತ್ತಿಯಲ್ಲಿ ದಕ್ಷತೆ ಮೆರೆದಿದ್ದಾರೆ. ಶವಾಗಾರದ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಿಲ್‌ ಕ್ರಿಸ್ಟಿ ಎಂಬುವವರೇ ಶವ ಸಾಗಿಸುವ ವಾಹನ ಸ್ಟೇರಿಂಗ್‌ ಹಿಡಿದು ವಾಹನ ಚಾಲನೆ ಮಾಡಿ ಗಮನ ಸೆಳೆದವರು. ಇವರು ಪಾಲಿಕೆಯ ಜನನ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿಯಾಗಿದ್ದು, ಕೊರಾನಾ ಸೋಂಕಿತರ ಶವ ಸಾಗಿಸುವ ವಾಹನದ ಚಾಲಕ ಅನಾರೋಗ್ಯದ ಕಾರಣ ಕರ್ತವ್ಯಕ್ಕೆ ಗೈರಾದ ಹಿನ್ನೆಲೆ, ಸ್ವತಃ ನಗರದ ಕೆ.ಆರ್‌.ಆಸ್ಪತ್ರೆಯಿಂದ ವಿಜಯನಗರದ 4ನೇ ಹಂತದಲ್ಲಿರುವ ಮುಕ್ತಿಧಾಮದವರೆಗೆ ವಾಹನ ಚಾಲನೆ ಮಾಡಿದ್ದಾರೆ. ಇವರು ಶವ ಸಾಗಿಸುವ ವಾಹನ ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗರ್ಭಿಣಿ ಸಾವು, ಕರ್ತವ್ಯ ಲೋಪ ದೂರು!ನಂಜನಗೂಡು: ನಗರದ ಖಾಸಗಿ ಆಸ್ಪತ್ರೆಯಲ್ಲಿಬಾಣಂತಿ ಮೃತಪಟ್ಟಿದ್ದು, ಇದಕ್ಕೆ ಪ್ರಸೂತಿ ವೈದ್ಯೆ ಹೆರಿಗೆ ಮಾಡಿಸುವ ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಆರೋಪಿಸಿ ಮೃತರ ಪತಿ ಪಟ್ಟಣ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದ ನಿವಾಸಿ ಚಿಕ್ಕಯ್ಯ ಅವರ ಅವರ ಪತ್ನಿ ದಿವ್ಯ ಮೃತರು. ''ದಿವ್ಯಳನ್ನು ನಂಜನಗೂಡು ನಗರದ ಖಾಸಗಿ ಕ್ಲಿನಿಕ್‌ನ ಪ್ರಸೂತಿ ವೈದ್ಯರ ಬಳಿ ತಪಾಸಣೆಗೊಳ ಪಡಿಸಲಾಗಿತ್ತು. ಏ. 7ರಂದು ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ವೈದ್ಯರು ಸಹಜ ಹೆರಿಗೆ ಆಗುವುದಿಲ್ಲಎಂದು ಸಿಜೇರಿಯನ್‌ ಮೂಲಕ ಹೆರಿಗೆ ಮಾಡಿಸಿದರು. ದಿವ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಳು. ವಾರ ಕಳೆಯುತ್ತಿದ್ದಂತೆ ದಿವ್ಯಳಿಗೆ ವಿಪರೀತ ಹೊಟ್ಟೆನೋವು ಶುರುವಾಯಿತು. ಹೆರಿಗೆ ಮಾಡಿಸಿದ ಖಾಸಗಿ ಆಸ್ಪತ್ರೆಯ ಪ್ರಸೂತಿ ವೈದ್ಯರ ಬಳಿ ತಪಾಸಣೆಗೆ ಹೋದರೆ ಅವರು ಸರಿಯಾಗಿ ಸ್ಪಂದಿಸಲಿಲ್ಲ. ಹೀಗಾಗಿ ಏ. 23ರಂದು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದೆವು. ಈ ವೇಳೆ ಅಲ್ಲಿನ ವೈದ್ಯರು ಸಿಜೇರಿಯನ್‌ ಮಾಡಿದಾಗ ದಿವ್ಯಾಳ ಕರುಳನ್ನು ಕತ್ತರಿಸಿ ಎಡವಟ್ಟು ಮಾಡಿದ್ದಾರೆ ಎಂದು ತಿಳಿಸಿ ಚಿಕಿತ್ಸೆ ನೀಡಲು ಮುಂದಾ ದರು. ಏ. 30ರಂದು ಚಿಕಿತ್ಸೆ ಫಲಿಸದೇ ದಿವ್ಯ ಮೃತಪಟ್ಟಳು.


from India & World News in Kannada | VK Polls https://ift.tt/336qqqT

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...