ಬೆಂಗಳೂರು: ಪೀಣ್ಯ ಇಂಡಸ್ಟ್ರಿಯಲ್ ಗ್ಯಾಸ್ ಪ್ಲಾಂಟ್‌ನಲ್ಲಿ ಆಮ್ಲಜನಕವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಸಂಸ್ಥೆಯ ಸಹಾಯಕ ವ್ಯವಸ್ಥಾಪಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಸ್ಥೆಯ ವ್ಯವಸ್ಥಾಪಕ ಸುನಿಲ್ ಹೆಚ್ಚಿನ ದರದಲ್ಲಿ ಗ್ಯಾಸ್ ಮಾರಾಟ ಮಾಡುತ್ತಿದ್ದ ಆರೋಪಿ. ಆರೋಪಿಯ ವಿರುದ್ಧ ಅಗತ್ಯ ವಸ್ತುಗಳ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸ್ಥೆಯ ಸಹಾಯಕ ವ್ಯವಸ್ಥಾಪಕ ಸುನಿಲ್ 'ಡಿ' ಟೈಪ್ ಸಿಲಿಂಡರ್ ಅನ್ನು ಪ್ರತಿ ಸಿಲಿಂಡರ್‌ಗೆ 1233 ರೂ.ನಂತೆ, ಎರಡು ಸಿಲಿಂಡರ್‌ಗೆ 2466 ರೂ. ಗಳನ್ನು ಗೂಗಲ್ ಪೇ ಮೂಲಕ ಪಡೆದುಕೊಂಡಿದ್ದನು. ಕೇಂದ್ರ ಸರಕಾರ 1 ಕ್ಯೂಬಿಕ್ ಮೀಟರ್‌ಗೆ 25.71ರೂ ನಂತೆ ದರ ನಿಗದಿ ಮಾಡಿದೆ. 7.1 ಕ್ಯೂಬಿಕ್ ಮೀಟರ್ ಆಮ್ಲಜನಕಕ್ಕೆ 204 ರೂ. ನಿಗದಿ ಮಾಡಿದೆ. ಹೆಚ್ಚಿನ ಹಣ ಪಡೆದುಕೊಂಡಿರುವ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ದಾಬಸ್‌ಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
from India & World News in Kannada | VK Polls https://ift.tt/3uiobwG