ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬಳಕೆಗೆ ಮಾರ್ಗಸೂಚಿ ಪ್ರಕಟಿಸಿದ ಸರಕಾರ

ಬೆಂಗಳೂರು: ಖಾಸಗಿ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ವ್ಯರ್ಥ ಬಳಕೆಗೆ ಕಡಿವಾಣ ಹಾಕಲು ಮತ್ತು ಪರಿಣಾಮಕಾರಿಯಾಗಿ ಬಳಕೆಗೆ ಸೋಮವಾರ ಮಾರ್ಗಸೂಚಿ ಪ್ರಕಟಿಸಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ಆಕ್ಸಿಜನ್‌ ಬಳಕೆ,ಅನುಷ್ಠಾನದ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದೆ. ಸ್ಯಾಚುರೇಟ್‌ ಪಾಯಿಂಟ್‌ 94ಕ್ಕಿಂತ ಮೇಲ್ಪಟ್ಟವರಿಗೆ ಆಕ್ಸಿಜನ್‌ ಅನಗತ್ಯ ಎಂದು ತಿಳಿಸಿದೆ. ಕೋವಿಡ್‌ ಕೇರ್‌ ಸೆಂಟರ್‌, ಜಿಲ್ಲಾಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ನೋಡಲ್‌ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಿಸುತ್ತಾರೆ. ಆಕ್ಸಿಜನ್‌ ಬಳಕೆಯ ಕುರಿತು ಬೆಳಗ್ಗೆ 8 ಮತ್ತು ಸಂಜೆ 6 ಗಂಟೆಗೆ ನೋಡಲ್‌ ಅಧಿಕಾರಿಗಳು ಪರಿಶೀಲಿಸುವರು. ಆಕ್ಸಿಜನ್‌ ಅವಲಂಬಿತ ಸೋಂಕಿತರ ಮತ್ತು ಆಗತ್ಯವಿರುವವರ ಪ್ರಮಾಣವನ್ನು ನೋಡಲ್‌ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದು ಆರೋಗ್ಯ ಇಲಾಖೆಯ ಆಯುಕ್ತರಿಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ. 100ಕ್ಕೂ ಅಧಿಕ ಬೆಡ್‌ ಹೊಂದಿರುವ ಆಸ್ಪತ್ರೆಗಳಿಗೆ ಆಕ್ಸಿಜನ್‌ ಪೂರೈಕೆ ಮಾಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ಬಯೋ ಮೆಡಿಕಲ್‌ ಎಂಜಿನಿಯರ್‌ ಮೇಲ್ವಿಚಾರಣೆ ನಡೆಸಲು ಸೂಚಿಸಲಾಗಿದೆ. ಆಸ್ಪತ್ರೆಯ ವಾರ್ಡ್‌ಗಳನ್ನು ಎ, ಬಿ 1, ಬಿ 2, ಸಿ ಮತ್ತು ಡಿ ಎಂದು ವಿಂಗಡಿಸಿ ಪ್ರತಿ ವಿಭಾಗಕ್ಕೂ ಒಬ್ಬ ವಿಭಾಗ ಮಟ್ಟದ ವೈದ್ಯರು ಹಾಗೂ ಅಧಿಕಾರಿಯನ್ನು ನೇಮಿಸಲು ಆಸ್ಪತ್ರೆಯ ಆಡಳಿತ ಮಂಡಳಿಗೆ ಸೂಚಿಸಿದೆ. ಪ್ರತಿ 50 ಬೆಡ್‌ಗಳಿಗೆ ಒಬ್ಬ ಅಧಿಕಾರಿಯನ್ನೂ ನೇಮಿಸುವುದು ಸೂಕ್ತ ಎಂದು ಸಲಹೆ ನೀಡಿದೆ. ಪ್ರತಿ ನಾಲ್ಕು ಗಂಟೆಗೆ ವಿಚಾರಣೆ:ಆಸ್ಪತ್ರೆಗಳು ನೇಮಿಸಿದ ಮೇಲ್ವಿಚಾರಕರು ನಿಗದಿತ ನಮೂನೆಯಲ್ಲಿ ಸೋಂಕಿತರ ಮಾಹಿತಿಯನ್ನು ಪ್ರತಿ ನಾಲ್ಕು ಗಂಟೆಗೊಮ್ಮೆ ಬರೆದುಕೊಳ್ಳಬೇಕು. ಈ ನಮೂನೆಯ ಮಾದರಿಯನ್ನು ಮಾರ್ಗಸೂಚಿಯಲ್ಲಿ ಸರಕಾರ ತಿಳಿಸಿದೆ. ಆಕ್ಸಿಜನ್‌ ಬಳಕೆ ಮಾರ್ಗಸೂಚಿ
  • ಆಸ್ಪತ್ರೆಗಳಲ್ಲಿ ಅನಾವಶ್ಯಕ ದಾಖಲು ಬೇಡ
  • 3 ದಿನಗಳವರೆಗೆ ಆಕ್ಸಿಜನ್‌ ಸಾಕಾಗುವಷ್ಟು ಸಂಗ್ರಹ
  • ಪ್ರತಿ ಬೆಡ್‌ಗೆ 4 ಜಂಬೂ ಸಿಲಿಂಡರ್‌ ವ್ಯವಸ್ಥೆ
  • ಕೇರ್‌ ಸೆಂಟರ್‌ಗಳು ಆಕ್ಸಿಜನ್‌ ಉತ್ಪಾದನೆ ಸೂಚನೆ
  • ಹೈ ಫ್ಲೋ ಸಿಸ್ಟಮ್‌ ಅನಗತ್ಯ ಬಳಸದಂತೆ ಆಸ್ಪತ್ರೆಗಳಿಗೆ ನಿರ್ದೇಶನ
  • ಆಕ್ಸಿಜನ್‌ ಬಳಕೆಯ ಬಗ್ಗೆ ದತ್ತಾಂಶ ಸಂಗ್ರಹ
  • ಬೆಡ್‌ ಸಂಖ್ಯೆ, ಹೆಸರು, ವಯಸ್ಸು ಸೇರಿದಂತೆ ಸೋಂಕಿತ ಮಾಹಿತಿ ಸಂಗ್ರಹ
  • ಆಕ್ಸಿಜನ್‌ ಬಳಕೆ, ಪೂರೈಕೆ ಮತ್ತು ಸೋಂಕಿತರ ಸ್ಥಿತಿಯ ದತ್ತಾಂಶ ಸಂಗ್ರಹ


from India & World News in Kannada | VK Polls https://ift.tt/3edO3UQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...