ಕೇರಳದಲ್ಲಿ ಈ ಬಾರಿ ಹನ್ನೊಂದು ಮಹಿಳೆಯರು ಶಾಸಕಿಯರಾಗಿ ವಿಧಾನಸಭೆಗೆ ಪ್ರವೇಶ

ತಿರುವನಂತಪುರಂ: ಚುನಾವಣೆಯಲ್ಲಿ ಈ ಬಾರಿ 11 ಮಹಿಳಾ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2001ರ ಬಳಿಕ ಶಾಸಕಿಯರ ಸಂಖ್ಯೆ ಇದೇ ಮೊದಲ ಬಾರಿಗೆ ಡಬಲ್‌ ಡಿಜಿಟ್‌ ತಲುಪಿದೆ. 140 ಸದಸ್ಯಬಲದ ವಿಧಾನಸಭೆಯಲ್ಲಿ103 ಕ್ಷೇತ್ರಗಳಿಗೆ ವಿವಿಧ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ 11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಹತ್ತು ಹಾಗೂ ಒಬ್ಬರು ಯುಡಿಎಫ್‌ ಕೂಟದ ಶಾಸಕರಾಗಿದ್ದಾರೆ. 1996ರ ವಿಧಾನಸಭೆ ಚುನಾವಣೆಯಲ್ಲಿ13 ಮಹಿಳಾ ಶಾಸಕರು ಕೇರಳ ವಿಧಾನಸಭೆ ಪ್ರವೇಶಿಸಿದ್ದರು. 2016ರಲ್ಲಿ ಎಂಟು ಮಹಿಳಾ ಶಾಸಕರು ಆಯ್ಕೆಯಾಗಿದ್ದರು. ಈ ಸಲ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ದಾಖಲೆಯ 60 ಸಾವಿರ ಮತಗಳ ಅಂತರದಲ್ಲಿ ಮಟ್ಟನ್ನೂರು ಕ್ಷೇತ್ರದಿಂದ ಗೆದ್ದು ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಆರ್‌ಎಂಪಿ ನಾಯಕಿ ಕೆ.ಕೆ. ರಮಾ ಅವರು ಯುಡಿಎಫ್‌ ಕೂಟದಿಂದ ಗೆದ್ದ ಏಕೈಕ ಮಹಿಳಾ ಶಾಸಕಿಯಾಗಿದ್ದಾರೆ.


from India & World News in Kannada | VK Polls https://ift.tt/3nIheT9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...