ಬಿಜೆಪಿ ಸಂಸದರು ಡ್ರಗ್‌ ಕಂಟ್ರೋಲರಾ? ಅವರಿಗೆ ಹೇಗೆ ಬಾಕ್ಸ್‌ಗಟ್ಟಲೆ ರೆಮ್‌ಡೆಸಿವಿರ್‌ ಸಿಗುತ್ತೆ: ಡಿಕೆಶಿ ಕಿಡಿ

ಬೆಂಗಳೂರು : ಆಸ್ಪತ್ರೆಗಳಲ್ಲೇ ರೆಮ್‌ಡೆಸಿವಿರ್‌ ಲಭ್ಯವಿಲ್ಲ. ಇಂತಹ ಸಮಯದಲ್ಲಿ ಬಿಜೆಪಿ ಸಂಸದರಿಗೆ ಬಾಕ್ಸ್‌ಗಟ್ಟಲೆ ರೆಮ್‌ಡೆಸಿವಿರ್‌ ಸಿಕ್ಕಿದೆ. ಇದೆಲ್ಲ ಹೇಗೆ ನಡೆಯಲು ಸಾಧ್ಯ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಯೋಧರ ನೇಮಕ, ಸಹಾಯವಾಣಿ, ಆ್ಯಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ''ಬಿಜೆಪಿ ಸಂದದರು, ನಾಯಕರು ಆಸ್ಪತ್ರೆ ಮಾಲೀಕರಾ? ಇವರು ಡ್ರಗ್‌ ಕಂಟ್ರೋಲರ್‌ಗಳಾ? ಔಷಧ ಪಡೆಯಲು ಇವರು ಪರವಾನಗಿ ತೆಗೆದುಕೊಂಡಿದ್ದಾರಾ? ಔಷಧ ತಂದವರು ಜನರಿಗೆ ನೀಡುತ್ತಿರುವ ಬಗ್ಗೆ ಆಕ್ಷೇಪವಿಲ್ಲ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ತರಿಸಿಕೊಳ್ಳುವುದು ಕಾನೂನು ಪ್ರಕಾರ ಸರಿಯಲ್ಲ. ಈ ಬಗ್ಗೆ ಪ್ರಧಾನಿ ಮತ್ತು ಆರೋಗ್ಯ ಸಚಿವಾಲಯ ಗಮನ ಹರಿಸಬೇಕು,'' ಎಂದು ಒತ್ತಾಯಿಸಿದರು. ''ನನಗೆ ಛತ್ತೀಸ್‌ಘಡ, ರಾಜಸ್ಥಾನದ ಮುಖ್ಯಮಂತ್ರಿಗಳು ಕರೆ ಮಾಡಿದ್ದಾರೆ. ನಾವು ನಿಮ್ಮ ರಾಜ್ಯದ ಡಿಎಚ್‌ಒಗಳಿಗೆ ಔಷಧ ಪೂರೈಸಲು ಅನುಮತಿ ನೀಡಿದ್ದೇವೆ. ಆದರೆ, ನಿಮ್ಮ ರಾಜ್ಯ ಸರಕಾರವೇ ತಡೆ ನೀಡುತ್ತಿದೆ. ಈ ಕುರಿತು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಕರೆ ಮಾಡಿ ಕೇಳಿದಾಗ ಅವರು ಏನನ್ನೂ ಹೇಳಲಿಲ್ಲ,'' ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಬಾಕ್ಸ್‌ಗಟ್ಟಲೇ ರೆಮ್‌ಡೆಸಿವಿರ್‌ ಔಷಧವನ್ನು ವಿಮಾನದ ಮೂಲಕ ತರಿಸಿದ್ದರು. ಈ ಸಂಬಂಧ ಫೋಟೊಗಳು ವೈರಲ್‌ ಆಗಿದೆ. ಯಾವ ಕಾರಣಕ್ಕೆ ತರಿಸಿದ್ದಾರೆ ಎನ್ನುವುದು ಇನ್ನು ನಿಗೂಢವಾಗಿದೆ. 40 ನಿಮಿಷಕ್ಕೆ ಮನೆ ಬಾಗಿಲಿಗೆ ಆಂಬ್ಯುಲೆನ್ಸ್‌! ''ಕಾಂಗ್ರೆಸ್‌ನ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ 40 ನಿಮಿಷಕ್ಕೆ ಮನೆ ಬಾಗಿಲಿಗೆ ತಲುಪು 10 ವಾಹನವಿದೆ. ಪ್ರತಿ ವಾಹನದಲ್ಲೂ ಆಕ್ಸಿಜನ್‌ ಇರುತ್ತದೆ. ಜಿಲ್ಲಾ ಕೇಂದ್ರಗಳಲ್ಲೂ ಈ ಸೇವೆ ಪ್ರಾರಂಭಿಸಲು ಸೂಚಿಸಲಾಗಿದೆ,'' ಎಂದು ತಿಳಿಸಿದರು. ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣಕ್ಕೆ ಹೊಸ ಸ್ವರೂಪ ನೀಡಲಾಗುತ್ತಿದೆ. ಅದಕ್ಕೆ ಯೋಧರ ನೇಮಕ ಮಾಡಲಾಗುತ್ತಿದೆ. ಮಿಸ್ಡ್‌ ಕಾಲ್‌ (1800 1200 00044 ನಂಬರ್‌ಗೆ ಮಿಸ್ಡ್‌ ಕಾಲ್‌ ಮಾಡಬಹುದು. ಜತೆಗೆ 7574000525 ನಂಬರಿಗೆ ವಾಟ್ಸ್‌ ಆಪ್‌ ಮಾಡಬಹುದು.) ಕೊಟ್ಟು ಸೇರ್ಪಡೆಯಾಗಬಹುದು ಎಂದರು.


from India & World News in Kannada | VK Polls https://ift.tt/3xAB2MR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...