ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿದೆ ಕೊರೊನಾ: ಒಂದೇ ದಿನ 996 ಮಂದಿಗೆ ಪಾಸಿಟಿವ್‌, ಒಂದೇ ದಿನ 7 ಕಂಟೈನ್‌ಮೆಂಟ್‌ ವಲಯ ಘೋಷಣೆ

ಮಂಗಳೂರು: ಜಿಲ್ಲೆಯಲ್ಲಿ ಭಾನುವಾರ 996 ಮಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿದೆ. ಇದರ ಜತೆಗೆ ಕೋವಿಡ್‌ ಕಾರಣದಿಂದ ಮಂಗಳೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯ ಏಳು ಕಡೆಯಲ್ಲಿ ಒಂದೇ ದಿನ ಕಂಟೈನ್‌ಮೆಂಟ್‌ ವಲಯ ಘೋಷಣೆಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಗುಣಮುಖರಾಗಿ 413 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 7, 595 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 760 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಬಂಟ್ವಾಳದ ಕಡೇಶಿವಾಲಯದ ರಥಬೀದಿಯ ಮನೆಯೊಂದರಲ್ಲಿ 11 ಪಾಸಿಟಿವ್‌ ಪ್ರಕರಣ, ಬಂಟ್ವಾಳ ಮೂಡದ ಕುಪಿಳದಲ್ಲಿ 10 ಪಾಸಿಟಿವ್‌, ಜಪ್ಪಿನಮೊಗರಿನ ವಾಸುಕಿನಗರದ ಮನೆಯಂದರಲ್ಲಿ 7 ಮಂದಿ ಪಾಸಿಟಿವ್‌, ಸುರತ್ಕಲ್‌ ಕಡಂಬೋಡಿಯ ವೃದ್ಧಾಶ್ರಮದಲ್ಲಿ8 ಮಂದಿಗೆ ಪಾಸಿಟಿವ್‌, ಧರ್ಮಸ್ಥಳದ ಬೋಳಿಯಾರ್‌ನ ಹತ್ತು ಮನೆಯ ವಠಾರದಲ್ಲಿ 17 ಮಂದಿ, ಧರ್ಮಸ್ಥಳದ ಪೊಸವಳಿಕೆಯಲ್ಲಿ 6 ಮಂದಿ, ಧರ್ಮಸ್ಥಳದ ಶಿಶಿಲ ತಾರೇಗುಡ್ಡೆಯಲ್ಲಿ 6 ಮಂದಿಗೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಕಂಟೈನ್‌ ಮೆಂಟ್‌ ವಲಯವನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಕಂಟೈನ್‌ಮೆಂಟ್‌ ವಲಯ ಘೋಷಣೆಯಾಗಿದೆ. ಭಾನುವಾರ 508 ಮಂದಿ ಮಾತ್ರ ಲಸಿಕೆಯನ್ನು ಸ್ವೀಕಾರ ಮಾಡಿದ್ದಾರೆ. ಇಂದು ದ.ಕದಲ್ಲಿ ಲಸಿಕೆ ವ್ಯತ್ಯಯ ಸಾಧ್ಯತೆ! ಈಗಾಗಲೇ ಜಿಲ್ಲೆಯಲ್ಲಿ ಮೂರು ಸಾವಿರ ಕೋವಿಶೀಲ್ಡ್‌ ಲಸಿಕೆ ಇತ್ತು. ಭಾನುವಾರ ಅದರಲ್ಲಿ 508 ಖಾಲಿಯಾಗಿದೆ. ಇನ್ನು ಉಳಿದ ಲಸಿಕೆಯನ್ನು ಸೋಮವಾರ ವೆನ್ಲಾಕ್‌ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿತರಣೆ ಸಾಗಲಿದೆ. ಜಿಲ್ಲೆಗೆ ಭಾನುವಾರ ಕೂಡ ಲಸಿಕೆ ಬೆಂಗಳೂರಿನಿಂದ ಬಂದಿಲ್ಲ. ಈ ಕಾರಣದಿಂದ ಸೋಮವಾರ ಕೆಲವು ಭಾಗದಲ್ಲಿಲಸಿಕೆಯ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಸುಳ್ಯ ತಾಲೂಕಿನಲ್ಲಿ ಎಷ್ಟು ಕೇಸ್‌?ಸುಳ್ಯ ತಾಲೂಕಿನಲ್ಲಿಕೊರೊನಾ ತೀವ್ರಗತಿಯಲ್ಲಿಹರಧಿಡುತ್ತಿದ್ದು, ಭಾನುವಾರ 65 ಮಂದಿಗೆ ಪಾಸಿಟಿವ್‌ ಬಂದಿದೆ. ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ 15, ಉಬರಡ್ಕ ಮಿತ್ತೂರು 5, ಬೆಳ್ಳಾರೆ 3, ಹರಿಹರ ಪಳ್ಳತ್ತಡ್ಕ 5 ಮಂಡೆಕೋಲು 2, ಅಜ್ಜಾವರ 3, ಐವತ್ತೊಕ್ಲು 2, ಎಡಮಂಗಲ 1, ಕೊಲ್ಲಮೊಗ್ರ 3, ಅಮರಪಡ್ನೂರು 6, ಅಮರಮುಡ್ನೂರು 5, ಆಲೆಟ್ಟಿ 5, ಗುತ್ತಿಗಾರು 5, ಮುರುಳ್ಯ 1,ಕಲ್ಮಡ್ಕ 2, ಸಂಪಾಜೆ 2 ಪಾಸಿಟಿವ್‌ ಪ್ರಕರಣ ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಬಂಟ್ವಾಳ ತಾಲೂಕಿನಲ್ಲಿ ಭಾನುವಾರ 144 ಮಂದಿಗೆ ಕೊರೊನಾ! ಸರಕಾರಿ ಆಸ್ಪತ್ರೆಯಲ್ಲಿ 9, ಖಾಸಗಿ ಆಸ್ಪತ್ರೆಯಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಟ್ಲ 12, ಕುರ್ನಾಡು 18, ಪುದು 12 ಸಹಿತ ತಾಲೂಕಿನಾದ್ಯಂತ ಕೊರೊನಾ ಪ್ರಕರಣಗಳು ಕಂಡುಬಂದಿವೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ 31 ಪ್ರಕರಣಗಳು ಭಾನುವಾರ ವರದಿಯಾಗಿದೆ. ಕುಪ್ಪಿಲ ಎಂಬಲ್ಲಿಒಂದೇ ಮನೆಯ 8 ಮಂದಿಗೆ ಸೋಂಕು ತಗಲಿದ್ದು, ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಕೊರೊನಾ ಸೋಂಕು ಪ್ರತಿದಿನವೂ ಹೆಚ್ಚಾಗುತ್ತಿದ್ದು, ಮಾಸ್ಕ್‌ ಧರಿಸಿ, ಅಂತರ ಕಾಪಾಡುವುದರ ಜತೆಗೆ ಲಾಕ್‌ಡೌನ್‌ ಸಡಿಲಿಕೆ ಇರುವ ಹೊತ್ತಿನಲ್ಲಿ ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಿರಿ ಎಂದು ತಾಲೂಕು ಆರೋಗ್ಯಾಧಿಕಾರಿ ಸಲಹೆ ನೀಡಿದ್ದಾರೆ.


from India & World News in Kannada | VK Polls https://ift.tt/3xILMbJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...