ಕಾಲೇಜು ಶುಲ್ಕ ಕಟ್ಟಿಲ್ಲ ಎಂದು ಜಾತಿ ನಿಂದನೆ: ಕೊಟ್ಟೂರಿನಲ್ಲಿ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ

(): ಪಟ್ಟಣದ ಇಂದು ಪಿ.ಯು. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಕಾಲೇಜು ಪ್ರಾಚಾರ್ಯ ಹಾಗೂ ಮುಖ್ಯಸ್ಥರು ಪೂರ್ಣ ಶುಲ್ಕ ಕಟ್ಟುವಂತೆ ಒತ್ತಾಯ ಹೇರಿರುವುದು ಹಾಗೂ ಮಾಡಿರುವುದು ಕಾರಣ ಎಂದು ಹೇಳಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕೊರಚರ ಹಟ್ಟಿ ಗ್ರಾಮದ ಎನ್‌. ಆರ್‌. ಪೂಜಾ ಆತ್ಮಹತ್ಯೆಗೆ ಯತ್ನಿಸಿದ . ಈ ಬಾಲಕಿಯ ತಂದೆ ಎನ್‌. ರಾಜಣ್ಣ ಅವರು ನೀಡಿದ ದೂರು ಆಧರಿಸಿ, ಸ್ಥಳೀಯ ಠಾಣೆಯಲ್ಲಿ ಪ್ರಾಚಾರ್ಯ ಎನ್‌.ವೀರಭದ್ರಪ್ಪ ಮತ್ತು ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥ ಎನ್‌.ಸಂತೋಷ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನೆಲೆ: ಎನ್‌. ಆರ್‌. ಪೂಜಾ, ಕೊಟ್ಟೂರಿನ ಇಂದು ಕಾಲೇಜು ವಸತಿ ನಿಲಯದಲ್ಲಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಕಾಲೇಜು ಹಾಗೂ ಹಾಸ್ಟೆಲ್‌ನ ಪೂರ್ಣ ಶುಲ್ಕ ಒಟ್ಟು 90 ಸಾವಿರ ರೂ. ಕಟ್ಟುವಂತೆ ಪ್ರಾಚಾರ್ಯ ಹಾಗೂ ಮುಖ್ಯಸ್ಥರು ಒತ್ತಡ ಹೇರಿದ್ದರು. 50 ಸಾವಿರ ರೂ. ಪಾವತಿಸಿದ್ದ ವಿದ್ಯಾರ್ಥಿನಿ, ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಉಳಿದ ಮೊತ್ತವನ್ನು ನಂತರ ಕೊಡುವುದಾಗಿ ಮನವಿ ಮಾಡಿದ್ದಳು. ಆದರೂ ಹಣ ತರುವಂತೆ ವಿದ್ಯಾರ್ಥಿನಿಯನ್ನು ಕಾಲೇಜು ಮುಖ್ಯಸ್ಥರು ಊರಿಗೆ ಕಳಿಸಿದ್ದರು. ವಾರದೊಳಗೆ ಹಣ ಕಟ್ಟುವುದಾಗಿ ಮಗಳನ್ನು ಪಾಲಕರು ಮರಳಿ ಕಳಿಸಿದ್ದರು. ಹಣ ತರದೇ ಕಾಲೇಜಿಗೆ ಬರಬೇಡ ಎಂದು ಪ್ರಾಚಾರ್ಯರು ತಾಕೀತು ಮಾಡಿದ್ದರು. ಇಷ್ಟೇ ಅಲ್ಲದೆ ಇತರ ವಿದ್ಯಾರ್ಥಿಗಳೆದುರು ಜಾತಿ ನಿಂದನೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಅವಮಾನಿತಳಾದ ವಿದ್ಯಾರ್ಥಿನಿ ಮನನೊಂದು ಏ.3ರಂದು ವಸತಿ ನಿಲಯದ 3ನೇ ಅಂತಸ್ತಿನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಳು. ಮೇಲಿನಿಂದ ಬಿದ್ದ ಪರಿಣಾಮ ಎರಡು ಕಾಲು, ಬೆನ್ನು ಮೂಳೆ ಮುರಿದಿದ್ದು, ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಬಾಲಕಿಯ ತಂದೆ ರಾಜಪ್ಪ ತಿಳಿಸಿದ್ದಾರೆ. ಜಾತಿ ನಿಂದನೆ ದೂರು ಆಧರಿಸಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಎಚ್‌. ನಾಗಪ್ಪ ಮಾಹಿತಿ ನೀಡಿದ್ದಾರೆ. 'ನಮ್ಮ ಕಾಲೇಜಿನ ವಿದ್ಯಾರ್ಥಿನಿ ಪೂಜಾಳಿಗೆ ಶುಲ್ಕ ಕಟ್ಟುವಂತೆ ನಾವು ಒತ್ತಾಯಿಸಿಲ್ಲ. ಆಕೆಗೆ ಕೆಟ್ಟ ಮಾತುಗಳಿಂದ ನಿಂದಿಸಿಲ್ಲ. ನಮ್ಮ ಕಾಲೇಜಿನ 3ನೇ ಅಂತಸ್ತಿನಿಂದ ಬಿದ್ದು ಗಾಯಗೊಂಡಿರುವುದು ನೋವಿನ ಸಂಗತಿಯಾಗಿದೆ. ಕಾಲೇಜಿನ ಹೆಸರು ಕೆಡಿಸುವ ಯತ್ನ ಇದಾಗಿದೆ' ಎಂದು ಕೊಟ್ಟೂರಿನ ಇಂದು ಪಿಯು ಕಾಲೇಜು ಪ್ರಾಚಾರ್ಯ ಎನ್‌. ವೀರಭದ್ರಪ್ಪ ತಿಳಿಸಿದ್ದಾರೆ. 'ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದ ನನ್ನ ಮಗಳಿಗೆ ಪ್ರಾಚಾರ್ಯರು ಶುಲ್ಕ ಕಟ್ಟುವಂತೆ ಪದೇ ಪದೇ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಇತರ ವಿದ್ಯಾರ್ಥಿಗಳೆದುರು ಜಾತಿ ನಿಂದನೆ ಮಾಡಿದ ಕಾರಣ ಆಕೆ ಕಾಲೇಜು ಕಟ್ಟಡದ 3ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಪ್ರಯತ್ನ ಮಾಡಿದ್ಧಾಳೆ' ಎಂದು ಎನ್‌.ಆರ್‌.ಪೂಜಾ ತಂದೆ ಎನ್‌.ರಾಜಪ್ಪ ಆರೋಪಿಸಿದ್ದಾರೆ.


from India & World News in Kannada | VK Polls https://ift.tt/3xw8YKz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...