
: ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಯವಾಗಿ, ಮದುವೆ ಆಗುವುದಾಗಿ ನಂಬಿಸಿದ ಯುವಕನೊಬ್ಬ ಯುವತಿಯ , ವಿಡಿಯೋವನ್ನು ಅಶ್ಲೀಲ ವೆಬ್‌ಸೈಟ್‌ನಲ್ಲಿಅಪ್ಲೋಡ್ ಮಾಡಿರುವ ಪ್ರಕರಣವೊಂದು ಕುಂದಾ ನಗರಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಪುಣೆಯ ಲುಲ್ಲಾ ನಗರದ ನಿವಾಸಿ ಮೊಹ್ಮದ್ ಮುಬೀನ್ ಅಬ್ದುಲ್ ಅಲೀಂ ಸಯ್ಯದ್ (31) ಎನ್ನುವವನ ವಿರುದ್ಧ ನೊಂದ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ. ಬೆಳಗಾವಿ ನಗರದ ಯುವತಿ ವೈವಾಹಿಕ ವೆಬ್‌ಸೈಟ್‌ನಲ್ಲಿ 2019ರ ಡಿಸೆಂಬರ್ ತಿಂಗಳಲ್ಲಿ ಪ್ರೊಫೈಲ್ ಅಪ್ಲೋಡ್ ಮಾಡಿದ್ದರು. ಕೆಲವೇ ದಿನಗಳಲ್ಲಿ ಯುವಕ ಫೋಟೋ ಲೈಕ್ ಮಾಡಿದ್ದು, ಬಳಿಕ ಇಬ್ಬರೂ ವಾಟ್ಸ್ ಆ್ಯಪ್ ನಂಬರ್ ಹಂಚಿಕೊಂಡು ಸಂವಹನ ನಡೆಸಿದ್ದರು. ಯುವಕ ಮದುವೆ ಆಗುವುದಾಗಿ ನಂಬಿಸಿ, ಯುವತಿಯೊಂದಿಗೆ ಸಲುಗೆಯಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾನೆ. ಬಳಿಕ ತಮ್ಮ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ಹೇಳಿ ಯುವತಿಯ ಫೋಟೋ ಪಡೆದು, ಅಶ್ಲೀಲ ವಿಡಿಯೋ ಸಿದ್ಧಪಡಿಸಿ, ಯುವತಿಯ ಮೊಬೈಲ್ ಸಂಖ್ಯೆ ಸಮೇತ ಅಶ್ಲೀಲ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಮೊಬೈಲ್‌ಗೆ ಅಪರಿಚಿತ ಕರೆಗಳು ಬರಲಾರಂಭಿಸಿದ ಬಳಿಕ ವೆಬ್‌ಸೈಟ್‌ನಲ್ಲಿ ವಿಡಿಯೋ ಹಾಗೂ ಮೊಬೈಲ್ ಸಂಖ್ಯೆ ಅಪ್ಲೋಡ್ ಮಾಡಿದ್ದು ಗೊತ್ತಾಯ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
from India & World News in Kannada | VK Polls https://ift.tt/3dPdnQL