ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿಯಮ ಉಲ್ಲಂಘನೆ; ಅದಾನಿ ಸಂಸ್ಥೆಗೆ ಏರ್‌ಪೋರ್ಟ್‌ ಅಥಾರಿಟಿಯಿಂದ ನೋಟಿಸ್‌

ವಿಜಯ್‌ ಕೋಟ್ಯಾನ್‌ ಮಂಗಳೂರು: ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದುಕೊಂಡ ಅದಾನಿ ಏರ್‌ಪೋರ್ಟ್ಸ್ ಸಂಸ್ಥೆ ಮಂಗಳೂರು ಸೇರಿದಂತೆ ಮೂರು ವಿಮಾನ ನಿಲ್ದಾಣಗಳಲ್ಲಿ ಗುತ್ತಿಗೆ ಒಪ್ಪಂದ ಉಲ್ಲಂಘಿಸಿ ತನ್ನ ಬ್ರ್ಯಾಂಡ್‌ ಪ್ರಚುರಪಡಿಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ನೋಟಿಸ್‌ ಜಾರಿಗೊಳಿಸಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರ 50 ವರ್ಷಗಳ ಒಪ್ಪಂದ ಮೇರೆಗೆ ಗುಜರಾತ್‌ನ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿದ್ದು, 2020ರ ಅಕ್ಟೋಬರ್‌ನಲ್ಲಿ ಹಸ್ತಾಂತರಗೊಂಡಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಪ್ಪಂದ ಪ್ರಕಾರ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಹೊಣೆಯನ್ನು ಅದಾನಿ ಎಂಟರ್‌ಪ್ರೈಸಸ್‌ ಸಂಸ್ಥೆಗೆ ವಹಿಸಲಾಗಿದೆ. ಆದರೆ ಅದಾನಿ ಸಂಸ್ಥೆ ಇದನ್ನು ದುರಪಯೋಗಪಡಿಸಿ ಒಪ್ಪಂದ ಮೀರಿ ತಮ್ಮ ಬ್ರ್ಯಾಂಡ್‌ ಪ್ರಚಾರ ಮಾಡುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಅಥಾರಿಟಿ ನೋಟಿಸ್‌ ಜಾರಿ ಮಾಡಿದೆ. ಇದೇ ರೀತಿ ಲಖನೌ, ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲೂನಿಯಮ ಉಲ್ಲಂಘಿಸಿದೆ ಎಂದು ತಿಳಿದು ಬಂದಿದೆ. ದೇಶದ ನಾನಾ ವಿಮಾನ ನಿಲ್ದಾಣಗಳನ್ನು ಜಿವಿಕೆ, ಜಿಎಂಆರ್‌, ಅದಾನಿ ಸಂಸ್ಥೆಗೆ ಗುತ್ತಿಗೆಗೆ ವಹಿಸಲಾಗಿದೆ. ಇವುಗಳಲ್ಲಿಅದಾನಿ ಸಂಸ್ಥೆ ನಿಯಮ ಉಲ್ಲಂಘಿಸಿರುವುದನ್ನು ಆಕ್ಷೇಪಿಸಿ ನೋಟಿಸ್‌ ಜಾರಿ ಮಾಡಲಾಗಿದೆ. ಗುತ್ತಿಗೆ ಒಪ್ಪಂದ ಏನು ಹೇಳುತ್ತದೆ?ವಿಮಾನ ನಿಲ್ದಾಣದ ಗುತ್ತಿಗೆ ಒಪ್ಪಂದ ಪ್ರಕಾರ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ತನ್ನ ಸಂಸ್ಥೆಯ ಹೆಸರನ್ನು ವಿಮಾನ ನಿಲ್ದಾಣದ ಯಾವುದೇ ಭಾಗದಲ್ಲಿ ಜಾಹೀರಾತು, ಡಿಸ್‌ಪ್ಲೇ, ರಿಫ್ಲೆಕ್ಟ್ ಮಾದರಿಯಲ್ಲಿ ಹಾಕುವಂತಿಲ್ಲ. ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾ ಹೆಸರು, ಲೋಗೋ ಯಾವುದೇ ಬೋರ್ಡ್‌ನಲ್ಲಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಜತೆ ಬಳಸುವಂತಿಲ್ಲ. ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟ ಜಾಹೀರಾತು ನೀಡುವಾಗಲೂ ‘ಮಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌’ ಎಂದು ಮಾತ್ರ ಉಲ್ಲೇಖ ಮಾಡಿ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಬೋರ್ಡ್‌ ತೆರವಿಗೆ ಹೋರಾಟಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದುಕೊಂಡ ಅದಾನಿ ಸಂಸ್ಥೆ ಒಪ್ಪಂದ ಮೀರಿ ಅದಾನಿ ಏರ್‌ಪೋರ್ಟ್ಸ್ ಎಂದು ಹಾಕಿರುವುದನ್ನು ಖಂಡಿಸಿ ಸಾಮಾಜಿಕ ಹೋರಾಟಗಾರ ದಿಲ್‌ರಾಜ್‌ ಆಳ್ವ ಆಕ್ಷೇಪ ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌, ಮೂಲ್ಕಿ-ಮೂಡುಬಿದಿರೆ ಕಾಂಗ್ರೆಸ್‌ ವತಿಯಿಂದಲೂ ಪ್ರತಿಭಟನೆ ನಡೆದಿತ್ತು. ಆದರೆ ಅದಾನಿ ಸಂಸ್ಥೆ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದೆ. ಸ್ವಾಗತ ಗೋಪುರದಲ್ಲೂ ಯಡವಟ್ಟು: ಗುತ್ತಿಗೆ ನಿಯಮ ಪ್ರಕಾರ ಮಂಗಳೂರು ವಿಮಾನ ನಿಲ್ದಾಣದ ಸ್ವಾಗತ ಗೋಪುರದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಹೆಸರಿನ ಜತೆ ಅದಾನಿ ಸಂಸ್ಥೆ ಹೆಸರು ಹಾಕಿರುವುದು ನಿಯಮ ಸ್ಪಷ್ಟ ಉಲ್ಲಂಘನೆಯಾಗಿದೆ. ಈಗ ಅದಾನಿ ಸಂಸ್ಥೆ ಅಥಾರಿಟಿ ನೋಟಿಸ್‌ ನೀಡಿದ ಕಾರಣ ಮುಂದಿನ ನಡೆ ಏನೆಂಬುದು ಪ್ರಶ್ನೆಯಾಗಿ ಉಳಿದಿದೆ. ಗೂಗಲ್‌ ಮಾಹಿತಿಯಲ್ಲೂ ದುರ್ಬಳಕೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೂಗಲ್‌ ಮ್ಯಾಪ್‌ನಲ್ಲೂ ತಪ್ಪು ತಪ್ಪಾಗಿ ಮಾಹಿತಿ ನೀಡಿ ದುರ್ಬಳಕೆ ಮಾಡಲಾಗಿದೆ. ಗೂಗಲ್‌ ಮ್ಯಾಪ್‌ನಲ್ಲಿ Mangalore International Airport by Adani Airports ಎಂದು ಹಾಕಲಾಗಿದೆ. ಇದು ಹೋರಾಟಗಾರರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪಿಐಎಲ್‌ಗೆ ಸಿದ್ಧತೆ: ಅದಾನಿ ಏರ್‌ಪೋರ್ಟ್ಸ್ ನಿಯಮ ಉಲ್ಲಂಘಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಾಮಾಜಿಕ ಹೋರಾಟಗಾರ ದಿಲ್‌ರಾಜ್‌ ಆಳ್ವ, ಒಂದು ವೇಳೆ ಏರ್‌ಪೋರ್ಟ್‌ ಅಥಾರಿಟಿ ನೋಟಿಸ್‌ಗೆ ಅದಾನಿ ಸಂಸ್ಥೆ ಮಣಿಯದಿದ್ದಲ್ಲಿ ಹೈಕೋರ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಹಾಕುವುದಾಗಿ ಎಚ್ಚರಿಸಿದ್ದಾರೆ.


from India & World News in Kannada | VK Polls https://ift.tt/3fEoyNl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...