ಬೈಎಲೆಕ್ಷನ್‌ನಲ್ಲಿ ಬಿಜೆಪಿಗೆ ಮುಳುವಾಗುತ್ತಾ ಈಶ್ವರಪ್ಪ ಪತ್ರ? ಡ್ಯಾಮೇಜ್‌ ಕಂಟ್ರೋಲ್‌ಗೆ ಕಮಲಪಾಳಯ ಹರಸಾಹಸ!

ಬೆಂಗಳೂರು: ಸಿಎಂ ವಿರುದ್ಧ ರಾಜ್ಯಪಾಲರಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ದೂರು ನೀಡಿದ ಪ್ರಕರಣದ ಬಿಸಿ ಆರಿದಂತೆ ಕಂಡರೂ ಬೈ ಎಲೆಕ್ಷನ್‌ ಅಖಾಡದಲ್ಲಿ ಈ ವಿಚಾರ ಸದ್ದು ಮಾಡುವುದು ಖಚಿತವಾಗಿದೆ. ಪ್ರತಿಪಕ್ಷಗಳು ಈ ಅವಕಾಶವನ್ನು ಬಳಸಿಕೊಳ್ಳಲು ಹೊರಟಿದ್ದರಿಂದ ಬಿಜೆಪಿಗೆ ಒಳಗೊಳಗೇ ದಿಗಿಲು ಶುರುವಾಗಿದೆ. ಈಶ್ವರಪ್ಪ ಅವರೇನೋ ಲೆಟರ್‌ ವಾರ್‌ ಬೆನ್ನಿಗೇ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ತಾವು ಯಾಕಾಗಿ ಈ ಪತ್ರ ಬರೆಯಬೇಕಾಯಿತೆಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಸಂಪುಟದ ಇತರ ಸದಸ್ಯರು, ಸಿಎಂ ಆಪ್ತ ವಲಯದ ಶಾಸಕರು ಈಶ್ವರಪ್ಪ ನಡೆಗೆ ಆಕ್ಷೇಪಿಸಿದ್ದಾರೆ. ಈಶ್ವರಪ್ಪ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದ ಶಾಸಕರು ಸಹಿ ಮಾಡಿ ಸಿಎಂ ಅವರಿಗೆ ಹಸ್ತಾಂತರಿಸಿದ ಪತ್ರವೂ ಬಯಲಿಗೆ ಬಂದಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆಯೂ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತ್ರ ಯಾವುದೇ ಹೇಳಿಕೆ ನೀಡದೆ ಸಂಯಮ ಕಾಯ್ದುಕೊಂಡಿದ್ದಾರೆ. ಇದರ ಮಧ್ಯೆ ಈಶ್ವರಪ್ಪ ರಾಜೀನಾಮೆ ಸುದ್ದಿ ಹರಿದಾಡಿತ್ತಾದರೂ ಅಂತಹ ತೀರ್ಮಾನ ಕೈಗೊಳ್ಳದಂತೆ ಹೈಕಮಾಂಡ್‌ ಅವರಿಗೆ ಸೂಚಿಸಿದೆ. ಇದರಿಂದಾಗಿ ಈ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ ಎಂದು ಭಾವಿಸಲಾಗಿದೆ. ಆದರೆ, ಪ್ರತಿಪಕ್ಷಗಳು ನಿರಾಯಾಸವಾಗಿ ಸಿಕ್ಕ ಅಸ್ತ್ರವನ್ನು ಪ್ರತಿಪಕ್ಷಗಳು ಝಳಪಿಸದೆ ಬಿಡುವುದಿಲ್ಲಎಂಬುದು ಚಿಂತೆಯಾಗಿದೆ. ಈಗಷ್ಟೇ ಉಪ ಚುನಾವಣೆ ಪ್ರಚಾರದ ಕಾವು ಏರುತ್ತಿದೆ. ಬಸವಕಲ್ಯಾಣ ಹೊರತು ಪಡಿಸಿದರೆ ಮಸ್ಕಿ ಮತ್ತು ಬೆಳಗಾವಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಫೈಟ್‌ ಇದೆ. ನೇರಾನೇರ ಫೈಟ್‌ ಇದ್ದಾಗ ಯಾವುದೇ ಪಕ್ಷಗಳಿಗೂ ಚುನಾವಣೆ ಎದುರಿಸುವುದು ತ್ರಾಸದಾಯಕ. ಆಡಳಿತ ಪಕ್ಷಗಳಿಗೆ ಇಂತಹ ಉಪ ಚುನಾವಣೆಗಳು ಯಾವಾಗಲೂ ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತವೆ. ಮತ್ತೊಂದು ರೀತಿಯಲ್ಲಿಆಡಳಿತ ಪಕ್ಷದ ನೆಲೆಯಲ್ಲಿಇಂಥ ಚುನಾವಣೆ ಎದುರಿಸುವುದು ಸುಲಭವೂ ಆಗಿರುತ್ತದೆ. ಆದರೆ, ಪ್ರತಿಪಕ್ಷಗಳೂ ಅಷ್ಟೇ ಕೆಚ್ಚಿನಿಂದ ಅಖಾಡ ಪ್ರವೇಶಿಸಿರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಅದರಲ್ಲೂ ಈ ಬಾರಿಯ ಬೈ ಎಲೆಕ್ಷನ್‌ಗೆ ನಾನಾ ಕಾರಣದಿಂದ ಮಹತ್ವ ಬಂದಿದೆ. ಅದರಲ್ಲಿ ಸಿ.ಡಿ ಪ್ರಕರಣವೂ ಒಂದು. ಅದರೊಂದಿಗೆ ಈಶ್ವರಪ್ಪ ಲೆಟರ್‌ ವಾರ್‌ ಕೂಡ ಪ್ರತಿಪಕ್ಷಗಳ ಬಾಯಿಗೆ ಆಹಾರವಾಗುವಂತಾಗಿದೆ. ಬಿಜೆಪಿಗೆ ಸಮರ್ಥನೆ ಕಷ್ಟಉಪ ಚುನಾವಣೆ ಇರುವುದರಿಂದ ಈಶ್ವರಪ್ಪ ಅವರು ಈ ಬಗ್ಗೆ ಮಾತನಾಡದೆ ಇರಬಹುದು. ಆದರೆ, ಅವರ ಹೇಳಿಕೆಯಿಂದ ವಿವಾದವಂತೂ ಸೃಷ್ಟಿಯಾಗಿದೆ. ಈಗ ಬಿಜೆಪಿ ಕಡೆಯಿಂದ ಏನೇ ಸಮರ್ಥನೆ ಬಂದರೂ ಈಶ್ವರಪ್ಪ ಬರೆದ ಪತ್ರ ಜಗಜ್ಜಾಹೀರಾಗಿದೆ. ಅದರ ಬಗ್ಗೆ ರಾಜ್ಯಾದ್ಯಂತ ಚರ್ಚೆಯಾಗುತ್ತಿದೆ. ಈ ಹಂತದಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗಾಗಿ ಬಿಜೆಪಿ ಎಷ್ಟೇ ಕಸರತ್ತು ನಡೆಸಿದರೂ ಪ್ರತಿಪಕ್ಷ ಕಾಂಗ್ರೆಸ್‌ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಕಾಂಗ್ರೆಸ್‌ ನಾಯಕರು ಹೋದಲ್ಲಿ ಬಂದಲ್ಲಿ ಈಶ್ವರಪ್ಪ ಪತ್ರದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಜತೆಗೆ ಈಶ್ವರಪ್ಪ ಅವರಿಗೆ ಥ್ಯಾಂಕ್ಸ್‌ ಕೂಡ ಹೇಳುತ್ತಿದ್ದಾರೆ. ಪ್ರತಿಪಕ್ಷದ ಈ ವರಸೆಯಿಂದ ಬಿಜೆಪಿ ಕಾರ್ಯಕರ್ತರು ಕಂಗಾಲಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಹೇಗೆ ಸಮಜಾಯಿಷಿ ನೀಡಬೇಕು ಎನ್ನುವುದೇ ಅವರಿಗೆ ಹೊಳೆಯುತ್ತಿಲ್ಲ. ಇದು ಈಶ್ವರಪ್ಪ ಪತ್ರದಿಂದ ಆಗಿರುವ ಅವಾಂತರ. ಹಾಗಾಗಿ ಈ ವಿಚಾರ ಉಪ ಚುನಾವಣೆ ಮೇಲೆ ಪ್ರಭಾವ ಬೀರುವುದನ್ನು ತಳ್ಳಿ ಹಾಕಲಾಗದು. ಈಶ್ವರಪ್ಪಗೆ ಹೈಕಮಾಂಡ್‌ ಸೂಚನೆಈ ಮಧ್ಯೆ ಈ ವಿವಾದ ಬೆಳೆಸಬಾರದು. ಉಪ ಚುನಾವಣೆ ಇರುವುದರಿಂದ ಅಳೆದೂ ತೂಗಿ ಮಾತನಾಡಬೇಕು. ಲೆಟರ್‌ ಬರೆದದ್ದರ ಬಗ್ಗೆ ಮತ್ತೆ ಸಮರ್ಥನೆಗೆ ಇಳಿಯಬಾರದು. ಇನ್ನು ಮುಂದೆ ಯಾವುದೇ ಸಮಸ್ಯೆಯಿದ್ದರೆ ನಾಲ್ಕು ಗೋಡೆಯ ಮಧ್ಯೆ ಪಕ್ಷದ ವೇದಿಕೆಯಲ್ಲಿ ಹಂಚಿಕೊಳ್ಳಬೇಕು ಎಂದು ಸಚಿವ ಈಶ್ವರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್‌ನಿಂದ ಸೂಚನೆ ಬಂದಿದೆ ಎಂದು ಗೊತ್ತಾಗಿದೆ.


from India & World News in Kannada | VK Polls https://ift.tt/3dOtWeD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...