ಬೆಂಗಳೂರು: ಬ್ಲೌಸ್‌ ಖರೀದಿಸಲು ಮಾರುಕಟ್ಟೆಗೆ ಹೋಗಿದ್ದ ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿಯ ಪರ್ಸ್‌ ಕದ್ದ ಖತರ್ನಾಕ್‌ ಕಳ್ಳಿ!

ಬೆಂಗಳೂರು : ನಗರದ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಶಾಪಿಂಗ್‌ಗೆ ತೆರಳಿದ್ದ ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿಯವರ ಪರ್ಸ್‌ ಮಾಡಿದ್ದ ಆರೋಪಿಯನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ನಿರ್ಮಲಾ(43) ಬಂಧಿತ ಆರೋಪಿ. ಈಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಏ.1ರಂದು ಮಧ್ಯಾಹ್ನ 1.30ರ ಹೊತ್ತಿಗೆ ಭಾರತಿ ಶೆಟ್ಟಿ ಬ್ಲೌಸ್‌ ಅಂಗಡಿಗೆ ತೆರಳಿದ್ದರು. ಪರ್ಸ್‌ ಅನ್ನು ಟೇಬಲ್‌ ಮೇಲೆ ಇಟ್ಟಿದ್ದರು. ಹೋಗುವಾಗ ಪರ್ಸ್‌ ಮರೆತು ಹೋಗಿದ್ದರು. 3.45ಕ್ಕೆ ವಾಪಸ್‌ ಬಂದು ಕೇಳಿದಾಗ, ಗೊತ್ತಿಲ್ಲ ಎಂಬ ಉತ್ತರ ಬಂತು. ''ನಿಮ್ಮಲ್ಲೇ ಯಾರಾದರೂ ತೆಗೆದುಕೊಂಡಿದ್ದರೆ ಕೊಟ್ಟುಬಿಡಿ. ಅದರಲ್ಲಿ ಕಾರ್ಡ್‌ ಗಳು ಇವೆ. ನಿಮಗೆ ಹಣ ಬೇಕಿದ್ದರೆ ಕೊಡುತ್ತೇನೆ,'' ಎಂದು ಮಳಿಗೆ ನೌಕರರಲ್ಲಿ ಮನವಿ ಮಾಡಿದ್ದರು. ಆದರೆ, ಯಾರಿಂದಲೂ ಉತ್ತರ ಬಂದಿರಲಿಲ್ಲ. ಹಣ ತೆಗೆದು ಕಸದ ಬುಟ್ಟಿಗೆ ಪರ್ಸ್‌! ಈ ಬಗ್ಗೆ ತನಿಖೆ ನಡೆಸಿದಾಗ ಕೆಲಸದ ಮಹಿಳೆ ಪರ್ಸ್‌ ಎತ್ತಿಕೊಂಡಿರುವುದು ಪತ್ತೆಯಾಯಿತು. ಹಣ ಇಟ್ಟುಕೊಂಡು ಆಕೆ ಪರ್ಸ್‌ ಅನ್ನು ಪೇಪರ್‌ನಲ್ಲಿ ಸುತ್ತಿ ಬಿಬಿಎಂಪಿ ಕಸದ ವಾಹನಕ್ಕೆ ಬಿಸಾಡಿದ್ದಳು. ಬಿಬಿಎಂಪಿಯ ಅಧಿಕಾರಿಗಳನ್ನು ಸಂಪರ್ಕಿಸಿ ಪರ್ಸ್‌ ಹುಡುಕಲು ಯತ್ನಿಸಿದರೂ ಸಿಗಲಿಲ್ಲ. ಪರ್ಸ್‌ನಲ್ಲಿ 25,000 ರೂ. ನಗದು, ಎಂಟಿಎಂ ಕಾರ್ಡ್‌, ಗುರುತಿನ ಚೀಟಿ ಇತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು.


from India & World News in Kannada | VK Polls https://ift.tt/3dAU3W2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...