ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಎಂಬ ವಿಷದ ರುಚಿ ನೋಡಿದರೆ ಸಾವು ಖಚಿತ: ಖರ್ಗೆ!

ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಮತ್ತು ಬಿಜೆಪಿ ವಿಷವಿದ್ದಂತೆ. ಈ ವಿಷದ ರುಚಿ ಯಾರು ನೋಡುತ್ತಾರೋ ಅವರ ಸಾವು ಖಚಿತ ಎಂದು ರಾಜ್ಯಸಭೆ ವಿಪಕ್ಷ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಎಂಬ ವಿಷಜಂತುಗಳು ದೇಶಾದ್ಯಂತ ತಮ್ಮ ವಿನಾಶಕಾರಿ ರಾಜಕಾರಣದ ವಿಷ ಬೀಜ ಬಿತ್ತುತ್ತಿದ್ದು, ಈ ವಿಷದ ರುಚಿ ನೋಡಿದವರಿಗೆ ಸಾವು ಬರದೇ ಇರದು ಎಂದು ಮಲ್ಲಿಕಾರ್ಜುನ್ ಖರ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಕರ್ನಾಟಕದೊಳಕ್ಕೆ ಬರುವಲ್ಲಿ ಯಶಸ್ವಿಯಾಗಿವೆ. ಆದರೆ ಈ ಎರಡೂ ವಿಷಜಂತುಗಳನ್ನು ತಮಿಳುನಾಡು ಮತ್ತು ಪುದುಚೇರಿಯೊಳಗೆ ಬರಲು ನಾವು ಬಿಡುವುದಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಗುಡುಗಿದ್ದಾರೆ. ಕರ್ನಾಟಕದಲ್ಲಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಬೇರು ಬಿಡುವಲ್ಲಿ ಸಾಧ್ಯವಾಗಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನಾವು ಪತ್ತೆ ಹದಚ್ಚಬೇಕಿದೆ. ಆದರೆ ಈ ವಿಷಜಂತುಗಳು ತಮಿಳುನಾಡು ಮತ್ತು ಪುದುಚೇರಿಯ ರಾಜಕಾರಣದೊಳಕ್ಕೆ ಬರಲು ಬಿಡಲು ಸಾಧ್ಯವೇ ಇಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬಲ್ಲ ಕಾಂಗ್ರೆಸ್‌ನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದ ಮಲ್ಲಿಕಾರ್ಜುನ್ ಖರ್ಗೆ, ದಕ್ಷಿಣದ ಸಂಸ್ಕೃತಿ ಮತ್ತು ಇತಿಹಾಸ ಉಳಿಯಬೇಕಾದರೆ ತಮಿಳುನಾಡು ಮತ್ತು ಪುದುಚೇರಿ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಹೇಳಿದರು. ಬಿಜೆಪಿ ದಕ್ಷಿಣದ ರಾಜ್ಯಗಳ ಸಂಸ್ಕೃತಿ ಮೇಲೆ ದಾಳಿ ಮಾಡುವ ಸಂಚು ರೂಪಿಸಿದೆ. ಆದರೆ ತನ್ನದೇ ಆದ ಇತಿಹಾಆಸ ಹೊಂದಿರುವ ದಕ್ಷಿಣದ ರಾಜ್ಯಗಳು ತಮ್ಮ ಸಂಸ್ಕೃತಿಯ ಉಳಿವಿಗಾಗಿ ಹೋರಾಡಲಿವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಭರವಸೆ ವ್ಯಕ್ತಪಡಿಸಿದರು. ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಆರ್‌ಎಸ್ಎಸ್‌ ಮತಗ್ತು ಬಿಜೆಪಿ ದಕ್ಷಿಣದ ರಾಜ್ಯಗಳ ಪಾಲಿಗೆ ವಿಷಜಂತುಗಳು ಎಂದು ಕರೆದಿರುವುದು ಗಮನ ಸೆಳೆದಿದೆ.‌


from India & World News in Kannada | VK Polls https://ift.tt/3cGaSzA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...