ಕರುನಾಡಿನ ರಾಗಿಗೆ ಅಮೆರಿಕದಲ್ಲಿ ಚಿನ್ನದ ಬೆಲೆ: ಎಷ್ಟು ಬೆಲೆ? ಯಾವ ಕಾರಣಕ್ಕೆ ಬೇಡಿಕೆ ಗೊತ್ತಾ?

ತಿ.ನಾ ಪದ್ಮನಾಭ ಮಾಗಡಿ ಗ್ರಾಮಾಂತರ ಬೆಂಗಳೂರು: ಕರುನಾಡ ರಾಗಿ ಮೊದಲಾದ ಪಾಶ್ಚಿಮಾತ್ಯ ದೇಶಗಳ ಸಂತೆಯಲ್ಲಿ ಬಂಗಾರದ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಅನಿವಾಸಿ ಭಾರತೀಯರು ಮಾತ್ರವಲ್ಲ ವಿದೇಶಿಯರು ಕೂಡಾ ಈಗ ಹೆಚ್ಚು ಹೆಚ್ಚು ರಾಗಿ ಬಳಸುತ್ತಿರುವುದರಿಂದ ವಾಷಿಂಗ್ಟನ್‌ನಲ್ಲಿ 1 ಕೆಜಿ 10 ಡಾಲರ್‌ ಅಂದರೆ 730 ರೂ.ಗೆ ಮಾರಾಟವಾಗುತ್ತಿದೆ. ಅಮೆರಿಕದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳಿಗೆ ಈಗ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಮಧುಮೇಹಿಗಳಿಗೆ ರಾಗಿ ಉತ್ತಮ ಎಂಬ ನೆಲೆಯಲ್ಲಿ ಹೆಚ್ಚಿನ ಮಾನ್ಯತೆ ಇದೆ. ರಾಗಿಯನ್ನು ಭಾರತ, ನೇಪಾಳ ಹಾಗೂ ಆಫ್ರಿಕಾ ಕೆಲವು ರಾಷ್ಟ್ರಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಹೀಗಾಗಿ ನಮ್ಮಲ್ಲಿ 35 ರೂ.ಗೆ ಸಿಗುವ ರಾಗಿಗೆ ಅಲ್ಲಿ ಕೆಜಿಗೆ 73೦ ರೂ. ಇದೆ. ದುರ್ಬಲ ಪೂರೈಕೆ ಜಾಲ! ವಿದೇಶಗಳಲ್ಲಿಸಾಕಷ್ಟು ಬೇಡಿಕೆ, ದೇಶದಲ್ಲಿಸಾಕಷ್ಟು ಸಂಗ್ರಹವಿದ್ದರೂ, ಬೇಡಿಕೆ ತಕ್ಕಂತೆ ಪೂರೈಕೆ ಮಾಡುವ ವ್ಯವಸ್ಥೆ ಇಲ್ಲ. ದೇಶದಲ್ಲಿಈ ವರ್ಷವಂತೂ ರಾಗಿ ಇಳುವರಿ ಚೆನ್ನಾಗಿದೆ. ಸರಕಾರಿ ಗೋದಾಮುಗಳೆಲ್ಲಾ ತುಂಬಿ ತುಳುಕುತ್ತಿವೆ. ರೈತರ ಬಳಿಯೂ ಸಾಕಷ್ಟು ದಾಸ್ತಾನು ಇದೆ. ಇದೆಲ್ಲದಕ್ಕೂ ಮಾರುಕಟ್ಟೆ ಕಲ್ಪಿಸುವ ಅವಕಾಶವೂ ಇದೆ. ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ರಾಗಿ ರಫ್ತು ಮಾಡುವ ಮೂಲಕ ರೈತರ ಜೇಬನ್ನು ಹಾಗೆಯೇ ಸರಕಾರದ ಖಜಾನೆಯನ್ನೂ ಸರಕಾರ ತುಂಬಿಕೊಳ್ಳಲು ಅವಕಾಶವಿದೆ. ಮಂಡಳಿ ತೆರೆದರೆ ಸೂಕ್ತ! ಕೇಂದ್ರ ಸರಕಾರ ರೇಷ್ಮೆ ಮತ್ತು ಇತರೆ ಬೆಳೆಗಳಿಗೆ ಮಂಡಳಿ ತೆರೆದಂತೆ ರಾಗಿ ಬೆಳೆಗೂ ಕೇಂದ್ರ ಮಟ್ಟದಲ್ಲಿ ಮಂಡಳಿ ಸ್ಥಾಪನೆ ಮಾಡಿ, ರಾಗಿಗೆ ಇರುವ ಎಲ್ಲ ಮಾರುಕಟ್ಟೆಗಳನ್ನು ಬಳಸಿಕೊಳ್ಳಬೇಕಾಗಿದೆ ಎನ್ನುವುದು ರಾಗಿ ಬೆಳೆಗಾರರ ಅಭಿಪ್ರಾಯ. ಉತ್ತಮ ಪ್ರಚಾರ ಅಗತ್ಯ ಜಗತ್ತಿನೆಲ್ಲೆಡೆ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ರಾಗಿ ಬಳಕೆ ಬಗ್ಗೆ ವಿದೇಶಗಳಲ್ಲಿ ಹೆಚ್ಚು ಪ್ರಚಾರ ಮಾಡಿದರೆ ಅಲ್ಲಿ ಇನ್ನಷ್ಟು ಮಾರುಕಟ್ಟೆ ಸೃಷ್ಟಿಸಬಹುದು ಎಂಬ ಅಭಿಪ್ರಾಯವಿದೆ.


from India & World News in Kannada | VK Polls https://ift.tt/3sZmhjC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...