ಸುಡುಬಿಸಿಲ ಬೇಗೆ ತಪ್ಪಿಸಲು ತಾಟಿನಿಂಗು ಮೊರೆಹೋದ ಜನತೆ; ಎಲ್ಲೆಡೆ ತಾಳೆ ಹಣ್ಣು ಮಾರಾಟ ಬಲು ಜೋರು

ಎನ್‌ ಎಂ ನಾಗರಾಜ ನಂದಗುಡಿ ಬೆಂಗಳೂರು: ಬೇಸಿಗೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದಂತೆ ಜನರು ತಂಪು ಪಾನೀಯ, ಹಣ್ಣುಗಳ ಸೇವನೆಗೆ ಆಸಕ್ತಿ ತೋರುತ್ತಿದ್ದಾರೆ. ಮಾರುಕಟ್ಟೆ, ರಸ್ತೆ ಬದಿ ಎತ್ತ ಕಣ್ಣಾಡಿಸಿದರೂ ತಾಟಿ ನಿಂಗಿನ ದರ್ಶನವಾಗುತ್ತಿದ್ದು, ಜನರು ಸಹ ಖರೀದಿಯಲ್ಲಿ ನಿರತರಾಗುತ್ತಿದ್ದಾರೆ. ಎಳ ನೀರಿನಷ್ಟೇ ಆರೋಗ್ಯಕರ ಗುಣ ತಾಟಿನಿಂಗುಗೆ ಇದೆ. ಇದು ಸಾಕಷ್ಟು ಪ್ರಮಾಣದ ಶರ್ಕರ, ರಂಜಕ, ಕಬ್ಬಿಣ, ವಿಟಮಿನ್‌ ಸಿ ಹೊಂದಿದ್ದು, ಜನರು ಎಳನೀರಿಗೆ ಪರ್ಯಾಯವಾಗಿ ತಾಟಿನಿಂಗುಗೆ ಮೊರೆ ಹೋಗುತ್ತಿದ್ದು, ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದೆ. ಎಳನೀರಿಗಿಂತ ಕಡಿಮೆ ದರಕ್ಕೆ ಸುಲಭವಾಗಿ ತಾಟಿ ನಿಂಗು ಬಡವರ ಕೈಗೆ ಎಟಕುತ್ತದೆ. ಇದು ದೇಹವನ್ನು ತಂಪಾಗಿಸುತ್ತದೆ. ಕೃತಕ ತಂಪು ಪಾನೀಯಗಳನ್ನು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲಾಗಿ ಪ್ರಕೃತಿದತ್ತವಾಗಿ ಸಿಗುವ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ತಮಿಳುನಾಡಿನ ಸೇಲಂ, ಧರ್ಮಪುರಿ, ಹೊಸೂರು ಮುಂತಾದ ಭಾಗಗಳಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಬೇಸಿಗೆಯ ಆರಂಭದಿಂದ ನಿಧಾನವಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ತಮಿಳುನಾಡಿನ ಮೂಲಕ (ತಾಟಿನಿಂಗು) ಮಾರುಕಟ್ಟೆಗೆ ರವಾನೆಯಾಗಿ, ಮಾರಾಟ ಮಾಡಲಾಗುತ್ತದೆ. ಹೊಟ್ಟೆಹುರಿ, ಗ್ಯಾಸ್‌ ಸಮಸ್ಯೆ, ಸಕ್ಕರೆ ಕಾಯಿಲೆಗೆ ರಾಮಬಾಣ. ಸಣ್ಣ ಗಾತ್ರದ ಎಳನೀರಿನ ಕಾಯಿಯಂತೆ ಕಂಡರೂ, ಇದರ ಒಳಗೆ ಎಳೆ ಕೊಬ್ಬರಿಯಂತೆ ಕಾಣು ವ 3ರಿಂದ 4 ತೊಳೆಗಳು ಎಳನೀರಿನ ಗಂಜಿ ಸವಿದಂತೆ ಅನುಭವ ಉಂಟಾಗುತ್ತದೆ. ಇದರಲ್ಲಿರುವ ನೀರು ಸಿಹಿಯಾಗಿರೋದ್ರಿಂದ ಜನರು ಬೇಸಿಗೆಯಲ್ಲಿಇಷ್ಟಪಟ್ಟು ಖರೀದಿಸುತ್ತಾರೆ. ಬೇಸಿಗೆಯಲ್ಲಿ ಬಹು ಬೇಡಿಕೆಯ ಪಾನೀಯವಾಗಿ ಬೀದಿಗಳಲ್ಲಿ, ರಸ್ತೆ ಬದಿ ತಳ್ಳು ಗಾಡಿಗಳ ಮೇಲೆ ತಾಟಿನಿಂಗು ಮಾರಾಟವಾಗುತ್ತಿದೆ. 35 ಕಾಯಿಗಳು ಇರುವ ಒಂದು ಗೊಂಚಲಿಗೆ 250-300 ರೂ.ಗೆ ಮಾರಾಟವಾಗುತ್ತಿದೆ. ಒಂದು ಕಾಯಿಯನ್ನು 30 ರೂ.ಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ವ್ಯಾಪಾರಸ್ಥರು. ತಾಟಿನಿಂಗು ಕಿಡ್ನಿಯಲ್ಲಿರುವ ಕಲ್ಲುಗಳ ನಿವಾರಣೆಗೆ ತುಂಬಾ ಸಹಕಾರಿ. ಬಾಣಂತಿಯರು, ಮುಟ್ಟಿನ ತೊಂದರೆ ಇರುವ ಮಹಿಳೆಯರು ಸೇವಿಸುವುದರಿಂದ ಸಮಸ್ಯೆಯಿಂದ ಮುಕ್ತರಾಗಬಹುದು ಎನ್ನುತ್ತಾರೆ ಅಯುರ್ವೇದ ಪಂಡಿತರು.


from India & World News in Kannada | VK Polls https://ift.tt/3wq7px2

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...