ಮಂಗಳೂರು: ಪಬ್ಜಿ ಆಡಲು ರಾತ್ರಿ ಮನೆಯಿಂದ ಹೊರ ಹೋಗಿದ್ದ 12ರ ಬಾಲಕ ಶವವಾಗಿ ಪತ್ತೆ, ಕೊಲೆ ಶಂಕೆ!

ಮಂಗಳೂರು: ಉಳ್ಳಾಲದ ಕೆ‌.ಸಿ. ರೋಡ್ ನ ಮೈದಾನವೊಂದರ ಮೂಲೆಯಲ್ಲಿ 12ವರ್ಷದ ಬಾಲಕನ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂಬ ಸಂಶಯ ಪೊಲೀಸರಿಗೆ ವ್ಯಕ್ತವಾಗಿದೆ. ಕೆ.ಸಿ. ರೋಡ್ ನಿವಾಸಿ 12ವರ್ಷದ ಹಕೀಫ್‌ ಶನಿವಾರ ರಾತ್ರಿ 9 ಗಂಟೆಗೆ ಗೆಳೆಯರೊಂದಿಗೆ ಆಟವಾಡಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೊರ ಹೋಗಿದ್ದಾನೆ. ತಡರಾತ್ರಿಯಾದರೂ ಪುತ್ರ ಬಾರದ ಕಾರಣ ಪೋಷಕರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಕೂಡಲೇ ಪೊಲೀಸ್ ತಂಡ ರಾತ್ರಿಯಿಡೀ ಶೋಧ ಕಾರ್ಯ ಆರಂಭಿಸಿ ನಾನಾ ಕಡೆ ಹುಡುಕಾಟ ನಡೆಸಿದರೂ ಹಕೀಫ್‌ ಪತ್ತೆಯಾಗಿರಲಿಲ್ಲ. ಕೊಲೆ ಸ್ಥಿತಿಯಲ್ಲಿ ಮೃತದೇಹ: ಭಾನುವಾರ ಬೆಳಗ್ಗಿನ ವೇಳೆ ಕೆ‌.ಸಿ. ರೋಡ್ ಮೈದಾನದ ಒಂದು ಮೂಲೆಯಲ್ಲಿ ಬಾಲಕನ ದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಲೆಯ ಮೇಲೆ ಕಲ್ಲಿನಿಂದ ಜಜ್ಜಿದ ಗಾಯವಿದೆ. ಮೃತದೇಹವನ್ನು ತರಗೆಲೆಯಿಂದ ಮುಚ್ಚಿ ಬಚ್ಚಿಡುವ ಪ್ರಯತ್ನ ಮಾಡಲಾಗಿದೆ. ಇದು ತಂಡವೊಂದು ನಡೆಸಿ ಕೊಲೆ ಕೃತ್ಯವಿರಬಹುದೆಂದು ಶಂಕಿಸಲಾಗಿದೆ. ವಿಡಿಯೋ ಗೇಮ್ ಚಟ:6ನೇ ತರಗತಿಯಲ್ಲಿ ಕಲಿಯುತ್ತಿರುವ ಹಕೀಫ್‌ ಗೆಳೆಯರ ಜತೆ ಸೇರಿ ವಿಡಿಯೋ ಗೇಮ್ ಆಟವಾಡುವ ಚಟ ಅಧಿಕವಾಗಿತ್ತು. ಈಗಲೂ ಬೇರೆ ದೇಶದ ವಿಪಿಎನ್ ಬಳಸಿ ಪಬ್ಜಿ ಕೂಡಾ ಆಡಲಾಗುತ್ತಿದೆ. ಬಾಲಕರ ತಂಡವೊಂದು ಇದೇ ರೀತಿ ವಿಡಿಯೋ ಗೇಮ್ ನಲ್ಲಿ ತಲ್ಲೀನವಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ. ತನಿಖೆ ಚುರುಕುಬಾಲಕನ ಮೃತದೇಹ ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬಾಲಕನ ಆತ್ಮೀಯರು, ನೆರೆಹೊರೆಯವರು, ಸಹಪಾಠಿಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


from India & World News in Kannada | VK Polls https://ift.tt/3dz7FRE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...