
ಮುಂಬೈ: ಚೇಸಿಂಗ್ ವೇಳೆ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೇವಾಟಿಯಾ ಅವರನ್ನು ತಮಗಿಂತ ಮೇಲಿನ ಕ್ರಮಾಂಕದಲ್ಲಿ ಆಡಿಸಿದ್ದು ತಂಡದ ತಾಂತ್ರಿಕ ನಿರ್ಧಾರ ಎಂದು ತಂಡದ ಡೇವಿಡ್ ಮಿಲ್ಲರ್ ಹೇಳಿದರು. ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಾಯಕ ಸಂಜು ಸ್ಯಾಮ್ಸನ್ ಹಾಗೂ ಡೇವಿಡ್ ಮಿಲ್ಲರ್ ಅವರು ಕ್ರಮವಾಗಿ ಅಜೇಯ 42 ಹಾಗೂ 24 ರನ್‌ಗಳ ಸಹಾಯದಿಂದ ರಾಜಸ್ಥಾನ್ ರಾಯಲ್ಸ್, ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಶಿವಮ್ ದುಬೇ ಹಾಗೂ ಯಶಸ್ವಿ ಜೈಸ್ವಾಲ್ ಕೂಡ 22 ರನ್‌ಗಳನ್ನು ಗಳಿಸಿ ತಂಡದ ಗೆಲುವಿಗೆ ನೆರವಾದರು. "ನನ್ನನ್ನು ಬ್ಯಾಕೆಂಡ್‌ನಲ್ಲಿ ಬಳಿಸಿಕೊಳ್ಳಲಾಯಿತು. ಆದರೆ, ಪಂದ್ಯವನ್ನು ಅತ್ಯುತ್ತಮವಾಗಿ ಮುಗಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಯಿತು. ಸಂಜು ಸ್ಯಾಮ್ಸನ್ ನಿಜವಾಗಲೂ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಇದೇ ರೀತಿ ಅವರು ತಮ್ಮ ಮೊದಲನೇ ಪಂದ್ಯದಲ್ಲಿಯೂ ಆಡಿದ್ದರು. ಅವರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಿದರು," ಎಂದು ಸಹ ಆಟಗಾರನನ್ನು ಶ್ಲಾಘಿಸಿದರು. ಇನ್ನು ತಮ್ಮ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, "ಟಿ20 ಪಂದ್ಯ ಎಂದ ಮೇಲೆ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಮಾಡಬಹುದು. ಟೀಮ್ ಮ್ಯಾನೇಜ್‌ಮೆಂಟ್‌ನ ತಾಂತ್ರಿಕ ನಿರ್ಧಾರ ಇದಾಗಿತ್ತು. ಆದರೆ, ನಾವು ಪಂದ್ಯವನ್ನು ಅತ್ಯುತ್ತಮವಾಗಿ ಮುಗಿಸಿದ್ದೇವೆ. ಬ್ಯಾಟಿಂಗ್ ಯಾವುದೇ ಕ್ರಮಾಂಕದಲ್ಲಿ ಆಡುವ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ತಂಡದ ಗೆಲುವಿಗೆ ನೆರವಾಗುವುದಷ್ಟೇ ನನ್ನ ಉದ್ದೇಶ," ಎಂದು ಮಿಲ್ಲರ್ ಸ್ಟಾರ್‌ಸ್ಪೋರ್ಟ್‌ಗೆ ತಿಳಿಸಿದರು. "ರಾಹುಲ್ ತೇವಾಟಿಯಾ ಸ್ಥಳೀಯ ಆಟಗಾರ ಹಾಗೂ ಅವರು ಸ್ಪಿನ್ನರ್‌ಗೆ ಚೆನ್ನಾಗಿ ಆಡುತ್ತಾರೆ. ಅವರು ಸ್ಪಿನ್ನರ್‌ಗಳಿಗೆ ಸ್ವೀಪ್ ಹಾಗೂ ರಿವರ್ಸ್ ಸ್ವೀಪ್ ಮೂಲಕ ರನ್ ಗಳಿಸುತ್ತಾರೆ. ಅಲ್ಲದೆ, ನಮ್ಮ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಇವತ್ತಿನ ರಾತ್ರಿ(ಶನಿವಾರ) ತಂಡದ ಎಲ್ಲಾ ಆಟಗಾರರಲ್ಲಿ ಅದ್ಭುತವಾ ಶಕ್ತಿ ಎದ್ದು ಕಾಣುತ್ತಿತ್ತು. ಮುಂದಿನ ಪಂದ್ಯಕ್ಕೆ ನಮ್ಮಲ್ಲಿ ವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ಆರಂಭದಲ್ಲಿ ನನ್ನ ಬ್ಯಾಟ್‌ಗೆ ಚೆಂಡು ಸರಿಯಾಗಿ ಬರುತ್ತಿರಲಿಲ್ಲ. ಆದರೆ, ಪಂದ್ಯವನ್ನು ಮುಗಿಸಿದ ರೀತಿ ಅತ್ಯುತ್ತಮವಾಗಿತ್ತು," ಎಂದು ಹೇಳಿದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ಪಡೆದು 133 ರನ್‌ಗಳಿಗೆ ನಿಯಂತ್ರಿಸಿತ್ತು. ಕ್ರಿಸ್ ಮಾರಿಸ್ ನಾಲ್ಕು ವಿಕೆಟ್ ಪಡೆದುಕೊಂಡು ಯಶಸ್ವಿ ಬೌಲರ್ ಎನಿಸಿಕೊಂಡರು. ಕೆಕೆಆರ್ ಪರ ರಾಹುಲ್ ತ್ರಿಪಾಠಿ ಹಾಗೂ ದಿನೇಶ್ ಕಾರ್ತಿಕ್ ಕ್ರಮವಾಗಿ 36 ಮತ್ತು 25 ರನ್‌ಗಳನ್ನು ಗಳಿಸಿದ್ದರು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನಕ್ಕೇರಿತು. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮುಂದಿನ ಗುರುವಾರ ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dTN8sF