
: ತಮ್ಮ ಮಾಸಿಕ ಮನ್ ಕಿ ಬಾತ್‌ನಲ್ಲಿ ದೇಶದಲ್ಲಿನ ಸ್ಥಿತಿಗತಿ ಬಗ್ಗೆ ಮಾತನಾಡಿದ್ದಾರೆ. ಈ ಹೋರಾಟದಲ್ಲಿ ಧನಾತ್ಮಕ ಮನಸ್ಥಿತಿ ಮುಖ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಕೊರೊನಾ ವೈರಸ್‌ನ 2ನೇ ಅಲೆ ದೇಶವನ್ನೇ ನಡುಗಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ತಾವು ಲೆಕ್ಕವಿಲ್ಲದಷ್ಟು ಆರೋಗ್ಯ ತಜ್ಞರು, ಲ್ಯಾಬ್ ತಂತ್ರಜ್ಞರು ಹಾಗೂ ಮುನ್ನಲೆಯ ಕೊರೊನಾ ವಾರಿಯನರ್ಸ್‌ಗಳ ಜೊತೆ ಸಂದರ್ಶಿಸಿರೋದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೊನಾ ವೈರಸ್ ನಮ್ಮ ತಾಳ್ಮೆ ಹಾಗೂ ಸಹನಾಶಕ್ತಿಯನ್ನು ಪರೀಕ್ಷಿಸುತ್ತಿದೆ. ನಾವು ನೋವು ತಡೆದುಕೊಳ್ಳುವ ಶಕ್ತಿಯನ್ನು ಪರೀಕ್ಷಿಸುತ್ತಿದೆ. ಈ ಹಂತದಲ್ಲಿ ನಾವು ನಮ್ಮ ಹಲವು ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ಮೊದಲ ಅಲೆಯನ್ನು ನಾವು ಯಶಸ್ವಿಯಾಗಿ ಎದುರಿಸಿದೆವು. ಆತ್ಮವಿಶ್ವಾಸದಿಂದ ಪುಟಿದೆದ್ದಿದ್ದೆವು. ಆದ್ರೆ ಎರಡನೇ ಅಲೆ ದೇಶವನ್ನೇ ನಡುಗಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೊರೊನಾ ವಿರುದ್ಧ ಜಯ ಸಾಧಿಸಲು ನಾವೀಗ ಆರೋಗ್ಯ ತಜ್ಞರು ಹಾಗೂ ವಿಜ್ಞಾನಿಗಳ ಸಲಹೆಯನ್ನು ಪಾಲಿಸಬೇಕು. ಕೇಂದ್ರ ಸರ್ಕಾರ ಕೂಡಾ ಎಲ್ಲಾ ರಾಜ್ಯಗಳಿಗೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಹಂತದಲ್ಲಿ ಜನರು ಕೊರೊನಾ ಕುರಿತ ಯಾವುದೇ ರೀತಿಯ ವದಂತಿಗಳಿಗೆ, ಸುಳ್ಳು ಸುದ್ದಿಗಳಿಗೆ ಕಿವಿಕೊಡಬಾರದು. ರಾಜ್ಯಗಳಿಗೆ ಉಚಿತವಾಗಿ ಕೊರೊನಾ ಲಸಿಕೆ ರವಾನಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ಧಾರೆ. ಸದ್ಯದ ಮಟ್ಟಿಗೆ 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಪಡೆಯಬಹುದು. ಮೇ 1ರಿಂದ 18 ವರ್ಷ ಮೇಲ್ಪಟ್ಟವರೂ ಲಸಿಕೆ ಪಡೆಯಬಹುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೊರೊನಾ ವೈರಸ್ ಲಸಿಕಾ ಅಭಿಯಾನದಲ್ಲಿ ಕಾರ್ಪೊರೇಟ್ ಸಂಸ್ಥೆಗಳೂ ಭಾಗಿ ಆಗಬಹುದು. ತಮ್ಮ ನೌಕರರಿಗೆ ಕೊರೊನಾ ಲಸಿಕೆ ಕೊಡಿಸಬಹುದು. ರಾಜ್ಯ ಸರ್ಕಾರಗಳೂ ಕೂಡಾ ಲಸಿಕೆಯನ್ನು ಜನ ಸಾಮಾನ್ಯರಿಗೆ ತಲುಪಿಸಲು ಶ್ರಮಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಧನಾತ್ಮಕ ಮನಸ್ಥಿತಿ ಬೇಕು, ಇದೀಗ ಸರ್ಕಾರದ ಮುಂದೆ ಕೊರೊನಾ ನಿರ್ಮೂಲನೆಯೇ ಪ್ರಥಮ ಆದ್ಯತೆಯಾಗಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ಧಾರೆ.
from India & World News in Kannada | VK Polls https://ift.tt/2S1Soln