ಸಿದ್ದರಾಮಯ್ಯ ಜತೆ ಯಾರ್ರೀ ಹೋಗ್ತಾರೆ? ಮೈತ್ರಿ ಬಗ್ಗೆ ದೇವೇಗೌಡರ ಪ್ರಶ್ನೆ!

ಬೆಂಗಳೂರು: ''ರಾಜ್ಯದಲ್ಲಿಮತ್ತೆ ಮೈತ್ರಿ ಸರಕಾರ ಅಧಿಕಾರಕ್ಕೆ ಬರಬೇಕಿದ್ದರೆ , ನಾವು ಒಟ್ಟಿಗೆ ಸೇರಬೇಕಲ್ಲ? ನಮಗೂ ಈಗ ತಿಳುವಳಿಕೆ ಬಂದಿದೆ. ಮತ್ತೆ ಆ ತಪ್ಪು ಮಾಡುವುದಿಲ್ಲ,'' ಸೋನಿಯಾ ಗಾಂಧಿ ಒಪ್ಪಿದರೆ ಮೈತ್ರಿ ಸರಕಾರ ಸಾಧ್ಯ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮತ್ತೆ ಮೈತ್ರಿ ಸರಕಾರ ರಚನೆಯ ಮಾತುಗಳಿಗೆ ಹೊಸತೊಂದು ವರಸೆ ತೆಗೆದಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಿಜೆಪಿಯ ಆಪರೇಷನ್‌ ಕಮಲದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದ ದೇವೇಗೌಡರ ನಡೆಯ ಬಗ್ಗೆ ವ್ಯಾಖ್ಯಾನ ಮಾಡಿದ್ದ ರಾಜಕೀಯ ಪಂಡಿತರು ರಾಜ್ಯದಲ್ಲಿ ಮತ್ತೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುನ್ಸೂಚನೆ ಇದು ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ತಕ್ಕಂತೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರ 'ದಿನಕ್ಕೊಂದು ಹೇಳಿಕೆ' ಮರು ಮೈತ್ರಿ ಸಾಧ್ಯತೆಯ ಚರ್ಚೆ ಹುಟ್ಟು ಹಾಕಿತ್ತು. ಆದರೆ ದೇವೇಗೌಡರ ಈ ಹೇಳಿಕೆಯಿಂದ ಚರ್ಚೆಯ ಜಾಡು ಒಮ್ಮೆಗೇ ತಿರುವು ತೆಗೆದುಕೊಂಡಿದೆ. ಬೆಂಗಳೂರಿನ ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿಪಕ್ಷದ ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರ ನಡೆಸುವ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ''ಜೆಡಿಎಸ್‌ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ವರದಿ ಪ್ರಕಟಿಸುವುದನ್ನು ಇವತ್ತೆ ನಿಲ್ಲಿಸಿ. ಅಂಥ ಯಾವ ಬೆಳವಣಿಗೆಯೂ ಆಗುವುದಿಲ್ಲ. ಬಿಜೆಪಿ ಸರಕಾರ ಯಾಕೆ ಬೀಳುತ್ತದೆ? ಯಡಿಯೂರಪ್ಪ ಕೈಯಲ್ಲಿ 105 ಮಂದಿ ಶಾಸಕರಿಲ್ವಾ? ಕುಮಾರಸ್ವಾಮಿ ಸರಕಾರ ಬಂದ ದಿನದಿಂದಲೂ ಕೊಡಬಾರದ ಕಾಟ ಕೊಟ್ರಿ,'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ''ಬಿಜೆಪಿ ಸರಕಾರ ಏಕೆ ಹೋಗಬೇಕು? ಅದಾಗಬೇಕಿದ್ದರೆ ಸಿದ್ದರಾಮಯ್ಯ ನಾವು ಒಟ್ಟಿಗೆ ಸೇರಬೇಕಲ್ಲವೇ ? ನಮಗೆ ತಿಳುವಳಿಕೆ ಬಂದಿದೆ. ಮತ್ತೆ ಆ ತಪ್ಪನ್ನು ಮಾಡುವುದಿಲ್ಲ,'' ಎಂದು ಹೇಳುವ ಮೂಲಕ ಮೈತ್ರಿ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟವಾದ ದಿನ ಮಾತನಾಡಿದ್ದ ದೇವೇಗೌಡರು, ಇನ್ನು ಮೂರುವರೆ ವರ್ಷ ಯಡಿಯೂರಪ್ಪ ಸೇಫ್‌ ಎಂದಿದ್ದರು. 'ಬಿಜೆಪಿ ಸರಕಾರ ಏಕೆ ಬೀಳಬೇಕು ?' ಎಂಬ ಅವರ ಪ್ರಶ್ನೆಯಿಂದ ಮೈತ್ರಿ ಸಾಧ್ಯತೆ ಸೃಷ್ಟಿಯಾದಾಗ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ಗೆ ಇನ್ನಷ್ಟು ಷರತ್ತು ವಿಧಿಸಬಹುದೆಂಬ ಅನುಮಾನ ಹುಟ್ಟಿಸಿದೆ.


from India & World News in Kannada | VK Polls https://ift.tt/2rGtMBA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...