ಹನಿಟ್ರ್ಯಾಪ್‌ ಕೇಸ್‌: 'ಮೋಸ'ಕ್ಕೊಳಗಾದ ಯಾವೊಬ್ಬ ಶಾಸಕನೂ ದೂರು ಕೊಡೋಕೆ ಬಂದಿಲ್ಲ!

ಬೆಂಗಳೂರು: ಬಂಧಿತ ಆರೋಪಿಗಳು ವಿಚಾರಣೆ ವೇಳೆ ಇಬ್ಬರು ಅನರ್ಹ ಶಾಸಕರೂ ಸೇರಿದಂತೆ ಹಲವು ಶಾಸಕರ ಹೆಸರು ಮತ್ತು ಅವರು ಹೇಗೆ ತಮ್ಮಿಂದ ನಾನಾ ರೀತಿಯ ರಾತ್ರಿ ಸೇವೆಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಬಗ್ಗೆ ತನಿಖಾಧಿಕಾರಿಗಳ ಎದುರು ಬಾಯಿ ಬಿಡುತ್ತಲೇ ಇದ್ದಾರೆ. ಆರೋಪಿಗಳು ಹೇಳಿದ ಹೆಸರಿನ ಜನಪ್ರತಿನಿಧಿಗಳನ್ನು ಕರೆಸಿ ಅವರಿಂದ ಹೇಳಿಕೆ ದಾಖಲಿಸಿಕೊಳ್ಳುವುದೂ ಕೂಡ ತನಿಖೆಯ ದೃಷ್ಟಿಯಿಂದ ತನಿಖಾಧಿಕಾರಿಗಳಿಗೆ ಅನಿವಾರ್ಯ. ಆದರೆ ಆ ಶಾಸಕರನ್ನು ತಾವಾಗೇ ಕರೆಸುವುದು ಕಷ್ಟ. ಹೀಗಾಗಿ, ಅವರೇ ಬಂದು ದೂರು ನೀಡಿದರೆ ಒಳ್ಳೆಯದು ಎಂದು ಪೊಲೀಸರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪ್ರಕರಣದ ಆರೋಪ ಪಟ್ಟಿ: ಆರೋಪಿಗಳ ಜತೆ ಸೇರಿ ಲೈಂಗಿಕ ಸಂಪರ್ಕ ಬೆಳೆಸಿದ ಶಾಸಕರು ದೂರು ಕೊಡಲು ಮುಂದೆ ಬಾರದೇ ಇರುವುದರಿಂದ ಈಗಾಗಲೇ ದಾಖಲಾಗಿರುವ ದೂರಿನ ಆಧಾರದಲ್ಲಿ ಮಾತ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಪೊಲೀಸ್‌ ಅಧಿಕಾರಿಗಳು ನಿರ್ಧರಿಸಿದ್ದಾರೆ. ದೂರುದಾರ ಶಾಸಕರನ್ನು ಇವರು ಹೇಗೇಗೆ ಪಳಗಿಸಿಕೊಂಡರು, ಎಷ್ಟು ಹಣ ಕೇಳಿದರು, ಬ್ಲ್ಯಾಕ್‌ಮೇಲ್‌ ಹೇಗೆಲ್ಲ ನಡೆಯಿತು ಎನ್ನುವ ವಿವರಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಅವಧಿಗೆ ಮೊದಲೇ ನ್ಯಾಯಾಂಗ ಬಂಧನ: ಉಪ ಚುನಾವಣೆ ವೇಳೆಯಲ್ಲಿ ಪ್ರಕರಣ ಆಡಳಿತ ಪಕ್ಷಕ್ಕೆ ಭಾರೀ ಮುಜುಗರ ತಂದಿದೆ. ಇದರ ಬೆನ್ನಲ್ಲೇ ಬಂಧಿತರನ್ನು ಅವಧಿ ಮುಗಿಯುವ ಮೊದಲೇ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಘವೇಂದ್ರ, ಪುಷ್ಪ, ಮಂಜುನಾಥ ಹಾಗೂ ಕಲ್ಪನಾ ಅವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಹೆಚ್ಚಿನ ವಿಚಾರಣೆಗೆ ಪ್ರಮುಖ ಆರೋಪಿ ರಾಘವೇಂದ್ರನನ್ನು 10 ದಿನಗಳ ಅವಧಿಗೆ ಅಂದರೆ ಡಿ.4ರವರೆಗೆ ಪೊಲೀಸ್‌ ವಶಕ್ಕೆ ಪಡೆಯಲಾಗಿತ್ತು. ಆದರೆ ಈತನ ವಿಚಾರಣೆ ನಡೆದು ಹೊಸ ಹೆಸರುಗಳು ಹೊರಗೆ ಬರುತ್ತಿದ್ದಂತೆ ಪೊಲೀಸ್‌ ಕಸ್ಟಡಿ ಅವಧಿ ನಾಲ್ಕು ದಿನ ಬಾಕಿ ಇರುವಾಗಲೇ ಆರೋಪಿಯನ್ನು ಶನಿವಾರ (ನ.30) ರಾತ್ರಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪೊಲೀಸರು ಕೈತೊಳೆದುಕೊಂಡಿದ್ದಾರೆ. ಆದಷ್ಟು ಬೇಗ ತನಿಖೆಗೆ ಮುಕ್ತಾಯ ಹಾಡಿ ಎನ್ನುವ ಒತ್ತಡಗಳೂ ಇಲಾಖೆ ಮೇಲೆ ಇತ್ತು ಎನ್ನಲಾಗುತ್ತಿದೆ.


from India & World News in Kannada | VK Polls https://ift.tt/34FEFCe

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...