ಸೈಯದ್‌ ಮಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕ್ಕೆ ಸತತ 2ನೇ ಬಾರಿ ಚಾಂಪಿಯನ್‌ ಪಟ್ಟ

ಸೂರತ್‌: ಅಂತಿಮ ಎಸೆತದ ವರೆಗೂ ರೋಚಕತೆ ಹಿಡಿದಿಟ್ಟಿದ್ದ ಹೈವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ಬದ್ಧ ಎದುರಾಳಿ ವಿರುದ್ಧದ 1 ರನ್‌ಗಳ ರೋಚಕ ಜಯ ದಾಖಲಿಸಿದ ತಂಡ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಗೆದ್ದುಕೊಂಡಿದೆ. ಇಲ್ಲಿನ ಲಾಲಾಭಾಯ್‌ ಕಂಟ್ರ್ಯಾಕ್ಟರ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡ ತನ್ನ ಪಾಲಿನ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 180 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ತಮಿಳುನಾಡು ತಂಡ ಸತತ ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತಾದರೂ ಬಾಬಾ ಅಪರಾಜಿತ್‌ (40) ಮತ್ತು ವಿಜಯ್‌ ಶಂಕರ್‌ (44) ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗೆಲುವಿನ ದಡದತ್ತ ಮುನ್ನುಗ್ಗಿತ್ತು. ಆದರೆ, ಒನೆಯ ಓವರ್‌ಗಳಲ್ಲಿ ಒತ್ತಡ ಮೆಟ್ಟಿನಿಂತ ಕರ್ನಾಟಕ ತಂಡ ಅದ್ಭುತ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್‌ ಮೂಲಕ ಎದುರಾಳಿಯನ್ನು 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್‌ಗಳಿಗೆ ನಿಯಂತ್ರಿಸಿ 1 ರನ್‌ಗಳ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ವಿಜಯ್‌ ಹಜಾರೆ ಟ್ರೋಫಿ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಎರಡನ್ನೂ ಗೆದ್ದ ಸಾಧನೆ ಮಾಡಿದ್ದು, ಮುಂಬರುವ ರಣಜಿ ಟ್ರೋಫಿಯಲ್ಲೂ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿದೆ. ಸಂಕ್ಷಿಪ್ತ ಸ್ಕೋರ್‌ ಕರ್ನಾಟಕ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 (ಕೆಎಲ್‌ ರಾಹುಲ್‌ 22, ದೇವದತ್‌ ಪಡಿಕ್ಕಲ್‌ 32, ಮನೀಶ್‌ ಪಾಂಡೆ ಔಟಾಗದೆ 60, ರೋಹನ್‌ ಕದಮ್‌ 35, ಕರುಣ್‌ ನಾಯರ್‌ 17; ಆರ್ ಅಶ್ವಿನ್‌ 34ಕ್ಕೆ 2, ಮುರುಗನ್‌ ಅಶ್ವಿನ್‌ 33ಕ್ಕೆ 2, ವಾಷಿಂಗ್ಟನ್‌ ಸುಂದರ್‌ 28ಕ್ಕೆ 1). ತಮಿಳುನಾಡು: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 (ವಾಷಿಂಗ್ಟನ್‌ ಸುಂದರ್‌ 24, ದಿನೇಶ್‌ ಕಾರ್ತಿಕ್‌ 20, ಬಾಬಾ ಅಪರಾಜಿತ್‌ 40, ವಿಜಯ್‌ ಶಂಕರ್‌ 44; ರೋನಿತ್‌ ಮೋರೆ 32ಕ್ಕೆ 2, ಶ್ರೇಯಸ್‌ ಗೋಪಾಲ್‌ 37ಕ್ಕೆ 1, ಜೆ ಸುಚಿತ್‌ 38ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/34A5AiG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...