ಬಿಜೆಪಿ-ಜೆಡಿಯು ದೋಸ್ತಿ ಚೆನ್ನಾಗಿಯೇ ಇದೆ: ಪ್ರಶಾಂತ್‌ ಕಿಶೋರ್‌ ಹೇಳಿಕೆಗೆ ನಿತೀಶ್ ಆಕ್ಷೇಪ

ಪಟನಾ: ಬಿಹಾರದಲ್ಲಿ ಹಾಗೂ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೈತ್ರಿ ಸಂಬಂಧ ಚೆನ್ನಾಗಿಯೇ ಇದೆ ಎಂದು ಮುಖ್ಯಮಂತ್ರಿ ಹಾಗೂ ಜೆಡಿಯು ವರಿಷ್ಠ ಹೇಳಿದ್ದಾರೆ. ಈ ಮೂಲಕ ಜೆಡಿಯು ಉಪಾಧ್ಯಕ್ಷ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ಬಿಹಾರ ವಿಧಾನಸಭೆ ಚುನಾವಣೆಯನ್ನು ಪ್ರಧಾನಿ ಮೋದಿ ಹಾಗೂ ನಿತೀಶ್‌ ನೇತೃತ್ವದಲ್ಲಿಎದುರಿಸಲಾಗುವುದು. ಸೀಟುಗಳು ಸಮಾನ ಹಂಚಿಕೆಯಾಗುವುದೇ ಸೂಕ್ತ ಎಂದು ತಿರುಗೇಟು ನೀಡಿದ್ದರು. ಈ ಇಬ್ಬರ ಮಾತಿನ ಚಕಮಕಿ ನಡುವೆ ನಿತೀಶ್‌ ಅವರಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಈ ಹಿಂದೆ ಹೇಳಿಕೆ ನೀಡಿದ್ದ ಜೆಡಿಯುನ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌ ಮುಂದಿನ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನಗಳಲ್ಲಿ ಜೆಡಿಯು ಸ್ಪರ್ಧಿಸಲಿದೆ ಎಂದಿದ್ದರು. ಎನ್‌ಡಿಎಯಲ್ಲಿ ಜೆಡಿಯು ಪ್ರಮುಖ ಪಾಲುದಾರ ಪಕ್ಷವಾಗಿದೆ. ಈ ವರ್ಷ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. 'ನನ್ನ ಪ್ರಕಾರ, ಲೋಕಸಭಾ ಚುನಾವಣಾ ಸೂತ್ರವನ್ನೇ ವಿಧಾನಸಭಾ ಚುನಾವಣೆಯಲ್ಲೂ ಅನುಸರಿಸಲಾಗದು ಎಂದು ‍ಪ್ರಶಾಂತ್‌ ಹೇಳಿ ಕೆ ಕೊಟ್ಟಿದ್ದರು. ಬಿಹಾರದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ. ನಿತೀಶ್‌ ಕುಮಾರ್‌ ಅವರ ಓಟಕ್ಕೆ ತಡೆಹಾಕಲು ಕೂಡ ಹೆಚ್ಚಿನ ತಂತ್ರ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.


from India & World News in Kannada | VK Polls https://ift.tt/2SJRCrE

2019ರ ಸಾಧನೆಗಳು 2020ರಲ್ಲೂ ಮುಂದುವರಿಯಲಿವೆ: ಪ್ರಧಾನಿ ನರೇಂದ್ರ ಮೋದಿ

ಹೊಸದಿಲ್ಲಿ: ನೂತನ ವರ್ಷದಲ್ಲೂ ಭಾರತ ಯಶಸ್ಸಿನತ್ತ ಮುನ್ನಡೆಯಲಿದೆ ಎಂಬ ವಿಶ್ವಾಸವಿದೆ. 130 ಕೋಟಿ ಭಾರತೀಯರ ಜೀವನದಲ್ಲಿ ಏಳ್ಗೆ ಸಂಭವಿಸಲಿದೆ ಎಂದು ಪ್ರಧಾನಿ ಬುಧವಾರ 2020 ಹೊಸ ವರ್ಷಾಚರಣೆ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮೋ 2.0 ಎಂಬ ಟ್ವೀಟರ್‌ ಬಳಕೆದಾರರ ಟ್ವೀಟ್‌ ಮಾಡಿರುವ ವಿಡಿಯೋ ಪೋಸ್ಟ್‌ಅನ್ನು ರೀಟ್ವೀಟ್‌ ಮಾಡಿರುವ ನರೇಂದ್ರ ಮೋದಿ "ಇದೊಂದು ಸುಂದರವಾದ ಸಂಕಲನ" ಎಂದು ಶ್ಲಾಘಿಸಿದ್ದಾರೆ. 2020 ಯಿಯರ್‌ ಸಾಂಗ್‌ ಎಂಬ ಟೈಟಲ್‌ ಇರುವ ಹಾಡಿನಲ್ಲಿ ಮೋದಿ ಸರಕಾರದ 2019ರ ಸಾಧನೆಗಳನ್ನು ಬಿಂಬಿಸಲಾಗಿದೆ. 2019ರಲ್ಲಿ ನಮ್ಮ ಸರಕಾರದ ಸಾಧನೆಗಳನ್ನು ಈ ಹಾಡಿನಲ್ಲಿ ತೋರ್ಪಡಿಸಲಾಗಿದೆ. 2020ರಲ್ಲೂ ಈ ಸಾಧನೆಗಳು ಮುಂದುವರಿಯಲಿದೆ. ಭಾರತ ಯಶಸ್ಸಿನತ್ತ ಸಾಗಲಿದೆ ಎಂಬ ವಿಶ್ವಾಸವಿದೆ. 130 ಕೋಟಿ ಭಾರತೀಯರ ಜೀವನ ಸದೃಡ ಗೊಳಿಸವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್‌ 370 ತೆರವುಗೊಳಿಸಿದ್ದು, ಕರ್ತಾರ್‌ಪುರ್‌ ಕಾರಿಡಾರ್‌ ಮುಕ್ತಗೊಳಿಸಿದ್ದು, ಭಾರತದ ಮೊದಲ ಸೆಮಿ ಹೈಸ್ಪೀಡ್‌ ರೈಲಿಗೆ ಚಾಲನೆ ನೀಡಿದ್ದು, ಪ್ಲಾಸ್ಟಿಕ್‌ ಬಳಕೆ ನಿಯಂತ್ರಣದ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ಮುಂತಾದ ಸಂಗತಿಗಳನ್ನು ಹಾಡಿನಲ್ಲಿ ಹೇಳಲಾಗಿದೆ. ''2019 ಒಂದು ಅದ್ಭುತ ವರ್ಷವಾಗಿತ್ತು. ಯಾವುದು ಸಾಧ್ಯವಿಲ್ಲ ಎಂಬಂತಿತ್ತೋ ಅಂತಹವುಗಳನ್ನು ಸಾಧ್ಯವಾಗಿಸಿದ ವರ್ಷ. ನಾವೆಂದೂ ಸಾಧಿಸಲು ಸಾಧ್ಯವಿಲ್ಲವೆಂದು ಯೋಚಿಸಿದ್ದೆವೋ ಅವುಗಳನ್ನು ನಾವು ಸಾಧಿಸಿದ್ದೇವೆ. ಅದರ ಸಣ್ಣ ತುಣುಕುಗಳು ಇಲ್ಲವೆ. ಪ್ರಧಾನಿ ನರೇಂದ್ರ ಮೋದಿಜಿ ಅವರಿಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ'' ಎಂದು ಟ್ವೀಟರ್‌ ಬಳಕೆದಾರರು ಹೇಳಿಕೊಂಡಿದ್ದಾರೆ. ಪುಲ್ವಾಮ ಪೈಶಾಚಿಕ ಉಗ್ರ ದಾಳಿಯ ನಂತರ ಪಾಕಿಸ್ತಾನದ ಬಾಲಾಕೋಟ್‌ನ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ವಾಯು ಸೇನೆ ನಡೆಸಿದ ಸರ್ಜಿಕಲ್‌ ದಾಳಿ, ಅಮೆರಿಕದ ಹೌದಿ-ಮೋದಿ ಕಾರ್ಯಕ್ರಮದ ಬಗ್ಗೆಯೂ ವಿಡಿಯೋದಲ್ಲಿ ಹೇಳಲಾಗಿದೆ.


from India & World News in Kannada | VK Polls https://ift.tt/36gbiXZ

ಶಿಕ್ಷಕರ ಕೊರತೆ ತುಂಬಲು ಶಿಕ್ಷಣ ಇಲಾಖೆಯ ವಿನೂತನ ಕ್ರಮವೇ ಯೂಟ್ಯೂಬ್‌ ಟೀಚರ್‌!

- ಜಯಂತ್‌ ಗಂಗವಾಡಿ, ಬೆಂಗಳೂರು ಉಪನ್ಯಾಸಕರ ಕೊರತೆಯಿಂದ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಕ್ಕೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಲು ಇಲಾಖೆಯು ಯೂಟ್ಯೂಬ್‌ ಮೂಲಕ 'ಆನ್‌ಲೈನ್‌ ಇಂಟರ್ಯಾಕ್ಟೀವ್‌' ತರಗತಿಗಳನ್ನು ನಡೆಸಲು ಕ್ರಮ ಕೈಗೊಂಡಿದೆ. ರಾಜ್ಯದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪಾಲಿಟೆಕ್ನಿಕ್‌ಗಳಲ್ಲಿ ಸಾವಿರಾರು ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಶಿಕ್ಷಕರ ಕೊರತೆ ನೀಗಿಸಿಕೊಳ್ಳಲು ತಾಂತ್ರಿಕ ಶಿಕ್ಷಣ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದೆ. ಹಾಗಾಗಿ, ಪಾಲಿಟೆಕ್ನಿಕ್‌ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿ ಕೊರತೆಯಿರುವ ಉಪನ್ಯಾಸಕರು ಹಾಗೂ ಅಗತ್ಯವಿರುವ ಪಾಠ ಪ್ರವಚಗಳ ಬಗ್ಗೆ ಇಲಾಖೆಗೆ ಬೇಡಿಕೆ ಸಲ್ಲಿಸಬೇಕು. ನಂತರ ಇಲಾಖೆಯು ವಿಷಯ ತಜ್ಞರನ್ನು ಕರೆಸಿ, ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿರುವ ಸ್ಟುಡಿಯೋಗಳಲ್ಲಿ ಕಾಲೇಜುಗಳು ಸಲ್ಲಿಸಿರುವ ಬೇಡಿಕೆಗೆ ಅನುಗುಣವಾಗಿ ಪಾಠ ಏರ್ಪಡಿಸಿ, ಆನ್‌ಲೈನ್‌ ಮೂಲಕ ನೇರ ಪ್ರಸಾರ ಮಾಡುತ್ತದೆ. ನಿಗದಿತ ಸಮಯದಲ್ಲಿ ಪ್ರಸಾರವಾಗುವ ಈ ಪಾಠಗಳನ್ನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌, ಪ್ರೊಜೆಕ್ಟರ್‌ ಹಾಗೂ ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಜ.6ರಿಂದ ಇಂಟರ್ಯಾಕ್ಟೀವ್‌ ತರಗತಿ: ಆನ್‌ಲೈನ್‌ ಇಂಟರ್ಯಾಕ್ಟೀವ್‌ ತರಗತಿಗಳನ್ನು ಜ.6ರಿಂದ ಮಾ.13ರವರೆಗೆ ನಡೆಸಲು ತಾಂತ್ರಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ವಿಷಯ ತಜ್ಞರಸಹಿತ ವೇಳಾಪಟ್ಟಿ ಹೊರಡಿಸಿದೆ. ತರಗತಿಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 2.30ರಿಂದ 3.30ರ ವರೆಗೆ ನಡೆಯಲಿವೆ. ಯು-ಟ್ಯೂಬ್‌ ಚಾನೆಲ್‌ನಲ್ಲೂ ಲಭ್ಯ: ಆನ್‌ಲೈನ್‌ ಇಂಟರ್ಯಾಕ್ಟೀವ್‌ ತರಗತಿಗಳಲ್ಲಿ ಪ್ರಸಾರಗೊಂಡ ಪಾಠಗಳು ವಿದ್ಯಾರ್ಥಿಗಳಿಗೆ ನಿರಂತರವಾಗಿ ಲಭ್ಯವಾಗುವಂತೆ ಮಾಡಲು ಇಲಾಖೆಯು ಯುಟ್ಯೂಬ್‌ ಚಾನೆಲ್‌ ತೆರೆದಿದೆ. ಹಾಗಾಗಿ, ವಿದ್ಯಾರ್ಥಿಗಳು ಅಗತ್ಯವೆನಿಸಿದಾಗ ಯೂಟ್ಯೂಬ್‌ನಿಂದ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವೀಕ್ಷಿಸಬಹುದಾಗಿದೆ. ಜತೆಗೆ, ಇಲಾಖೆಯ ಅಂತರ್ಜಾಲ ತಾಣದಲ್ಲೂ ವಿಡಿಯೋ ಸಿಗುತ್ತದೆ. ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‌ ಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಯೂಟ್ಯೂಬ್‌ ಚಾನೆಲ್‌ನ ಚಂದಾದಾರರಾಗಲು (ಸಬ್ಸ್‌ಕ್ರೈಬರ್ಸ್‌) ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಹಾಗೂ ಡಿಟಿಇ ಸ್ಟುಡಿಯೊ ಸಂಯೋಜಕರಿಗೆ ಸೂಚಿಸಿದೆ. ಉಪನ್ಯಾಸಕರ ಕೊರತೆಯಿರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಆನ್‌ಲೈನ್‌ ಇಂಟರ್ಯಾಕ್ಟೀವ್‌ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಜ.6ರಿಂದ ತರಗತಿಗಳು ಪ್ರಾರಂಭವಾಗಲಿವೆ. ಬಹುತೇಕ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಸ್ಮಾರ್ಟ್‌ ಫೋನ್‌ಗಳನ್ನು ಬಳಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠಗಳು ಸುಲಭವಾಗಿ ದೊರೆಯುವಂತೆ ಮಾಡಲು ಇಲಾಖೆಯ ಯೂಟ್ಯೂಬ್‌ ಚಾನೆಲ್‌ ಆರಂಭಿಸಿದೆ. - ಎಚ್‌.ಯು.ತಳವಾರ್‌, ನಿರ್ದೇಶಕ, ತಾಂತ್ರಿಕ ಶಿಕ್ಷಣ ಇಲಾಖೆ


from India & World News in Kannada | VK Polls https://ift.tt/2QbRijA

ಕೇರಳ ಜಿಹಾದಿ ಗುಂಪುಗಳಿಗೆ ದುಬೈ, ಟರ್ಕಿಯಿಂದ ಭಾರಿ ಪ್ರಮಾಣದಲ್ಲಿ ಹಣ

ಶಾರೂಕ್ ಖಾನ್, ರವೀನಾ ಟಂಡನ್ ಜತೆ ರವಿ ಶಾಸ್ತ್ರಿ ನೈಟ್ ಪಾರ್ಟಿ; ಶಾಂಪೇನ್ ಬಾಟಲಿ ಹಂಚಿದ ಇಂಗ್ಲೆಂಡ್ ಮಾಜಿ ನಾಯಕ

ಹೊಸದಿಲ್ಲಿ: ಹೊಸ ವರ್ಷಕ್ಕೆ ಕಾಲಿಡುತ್ತಿರುವಂತೆಯೇ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ , ಬಾಲಿವುಡ್ ಬಾದ್‌ಶಾ ಹಾಗೂ ನಟಿ ಜತೆಗೆ ರಾತ್ರಿ ಪಾರ್ಟಿಯಲ್ಲಿ ಸಂತೋಷದ ಸಮಯವನ್ನು ಕಳೆದಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಚಿತ್ರವನ್ನು ಹಂಚಿದ್ದಾರೆ. ಉದ್ಯಮಿ ಗೌತಮ್ ಸಿಂಘಾನಿಯ ಸಹ ಜತೆಗಿದ್ದರು. ರವಿ ಶಾಸ್ತ್ರಿ ಚಿತ್ರಕ್ಕೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಕಾಮೆಂಟ್‌ವೊಂದನ್ನು ಹಾಕಿರುವುದು ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ರವಿ ಶಾಸ್ತ್ರಿಗೆ ಕಾಮೆಂಟ್ ಮೂಲಕ ಶಾಂಪೇನ್ ಬಾಟಲಿ ಹಂಚಿರುವ ವಾನ್, ಹ್ಯಾಪಿ ನ್ಯೂ ಇಯರ್ ಸಂದೇಶವನ್ನು ಸಾರಿದ್ದಾರೆ. ಕಳೆದೊಂದು ವರ್ಷದಲ್ಲಿ ರವಿಶಾಸ್ತ್ರಿ ಮಾರ್ಗದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಏಕದಿನ ವಿಶ್ವಕಪ್ ಹೊರತುಪಡಿಸಿದರೆ ಬಹುತೇಕ ಎಲ್ಲ ಟೂರ್ನಿಗಳಲ್ಲೂ ವಿರಾಟ್ ಕೊಹ್ಲಿ ಪಡೆ ಅತ್ಯುನ್ನತ್ತ ನಿರ್ವಹಣೆ ನೀಡಿದೆ. ಇದರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸೇರಿದೆ. ಇಷ್ಟೆಲ್ಲ ಆದರೂ ರವಿಶಾಸ್ತ್ರಿಗೆ ಅಭಿಮಾನಿಗಳಿಂದ ಪರ-ವಿರೋಧ ಅಭಿಪ್ರಾಯಗಳನ್ನು ವ್ಯಕ್ತವಾಗುತ್ತಲೇ ಇದೆ. ಟೀಮ್ ಇಂಡಿಯಾ ಬೆಳವಣಿಗೆಯಲ್ಲಿ ರವಿ ಶಾಸ್ತ್ರಿ ಪಾತ್ರದ ಅಭಿಮಾನಿಗಳು ನಿರಂತರ ಪ್ರಶ್ನೆಯನ್ನು ಹಾಕುತ್ತಲೇ ಬಂದಿದ್ದಾರೆ. ಬರಿ ಬಿಯರ್ ಕುಡಿಯುವುದರಲ್ಲಷ್ಟೇ ರವಿ ಪಾತ್ರ ಸೀಮಿತ ಎಂದು ಟ್ರೋಲ್ ಮಾಡಲಾಗಿದೆ. ಪಂದ್ಯ ನಡೆಯುತ್ತಿರಬೇಕಾದರೆ ರವಿ ಶಾಸ್ತ್ರಿ ನಿದ್ರೆಗೆ ಜಾರುತ್ತಿರುವ ಚಿತ್ರವು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಪ್ರಮುಖವಾಗಿಯೂ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಸ್ಥಾನಕ್ಕೆ ರವಿ ಶಾಸ್ತ್ರಿ ಕೋಚ್ ಆಗಿ ನೇಮಕವಾಗಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಅನಿಲ್ ಕುಂಬ್ಳೆ ಜತೆಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದ ವಿರಾಟ್ ಕೊಹ್ಲಿ, ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ನೇಮಕ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಎರಡನೇ ಬಾರಿಯೂ ಟೀಮ್ ಇಂಡಿಯಾ ಮುಖ್ಯತರಬೇತುದಾರನಾಗಿ ಆಯ್ಕೆಯಾಗಿದ್ದರು. ಒಟ್ಟಾರೆಯಾಗಿ ವರ್ಷಾಂತ್ಯದ ವೇಳೆಯಲ್ಲಿ ರವಿ ಶಾಸ್ತ್ರಿ ಮಾಡಿರುವ ಟ್ವೀಟ್ ಮಗದೊಮ್ಮೆ ಟ್ರೋಲ್‌ಗೆ ಗುರಿಯಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35cnlnV

ಸಿಎಎ ಹಿಂತೆಗೆತಕ್ಕೆ ಆಗ್ರಹಿಸಿ ನಿರ್ಣಯ ತೆಗೆದುಕೊಂಡ ಕೇರಳ ವಿಧಾನಸಭೆ

ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ ದೇಶದಾದ್ಯಂತ ಸರಣಿ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಲ್ಲೇ ಕಾಯಿದೆ ವಾಪಸ್‌ ತೆಗೆದುಕೊಳ್ಳುವಂತೆ ಆಗ್ರಹಿಸಿ ನಿರ್ಣಯ ತೆಗೆದುಕೊಂಡಿದೆ. ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಯನ್ನು ಮತ್ತೊಂದು ದಶಕಗಳವರೆಗೆ ವಿಸ್ತರಿಸುವುದನ್ನು ಅಂಗೀಕರಿಸಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇದೇ ವೇಳೆ ಕಾಯಿದೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ವ್ಯಾಪಕವಾದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸಿಎಎ ವಿರುದ್ಧದ ನಿರ್ಣಯವನ್ನು ಸಹ ಕೈಗೊಳ್ಳಲಾಯಿತು. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ನಿರ್ಣಯವನ್ನು ಮಂಡಿಸುವಾಗ, ವಿಜಯನ್ ಸಿಎಎ ದೇಶದ 'ಜಾತ್ಯತೀತ' ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಮತ್ತು ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು. ಈ ಕಾಯಿದೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದರು.

“ದೇಶದ ಜನರಲ್ಲಿರುವ ಆತಂಕದ ಹಿನ್ನೆಲೆಯಲ್ಲಿ, ಸಿಎಎಯನ್ನು ಕೈಬಿಡಲು ಮತ್ತು ಸಂವಿಧಾನದ ಜಾತ್ಯತೀತ ದೃಷ್ಟಿಕೋನವನ್ನು ಎತ್ತಿಹಿಡಿಯಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬೇಕು,” ಎಂದು ಅವರು ಹೇಳಿದರು. ಇದೇ ವೇಳೆ ಅವರು ರಾಜ್ಯದಲ್ಲಿ ಯಾವುದೇ ನಿರಾಶ್ರಿತರ ಬಂಧನ ಶಿಬಿರವನ್ನು ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿವೇಶನದ ಆರಂಭದಲ್ಲಿ ಬಿಜೆಪಿಯ ಏಕೈಕ ಶಾಸಕ ಒ ರಾಜಗೋಪಾಲ್‌ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು. ಸಂಸತ್‌ನ ಎರಡೂ ಸದನಗಳಲ್ಲಿ ಸಿಎಎ ಅನುಮೋದನೆ ಪಡೆದುಕೊಂಡಿರುವುದರಿಂದ ನಿರ್ಣಯ ಅಕ್ರಮ ಎಂದರು.

ಆದರೆ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ಮೈತ್ರಿಕೂಟವೂ ಈ ನಿರ್ಣಯವನ್ನು ಬೆಂಬಲಿಸಿದ್ದರಿಂದ ಒಕ್ಕೊರಲ ಧ್ವನಿಯಲ್ಲಿ ಸದನ ನಿರ್ಣಯವನ್ನು ತೆಗೆದುಕೊಂಡಿತು.


from India & World News in Kannada | VK Polls https://ift.tt/37iSAim

ಬಿಜೆಪಿಗೆ 'ಏಳುಬೀಳು'ಗಳ ವರ್ಷ 2019..! 2020ಕ್ಕೆ ಬಿಟ್ಟು ಹೋಗುತ್ತಿದೆ ಆ '2' ದೊಡ್ಡ ಸವಾಲು..!

ಹೊಸ ದಿಲ್ಲಿ: 2019 ಪಾಲಿಗೆ ಏಳುಬೀಳಿನ ವರ್ಷ ಅಂದ್ರೆ ತಪ್ಪಾಗಲಾರದು. ವರ್ಷಾರಂಭದಲ್ಲೇ ನಡೆದ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಕೇಸರಿ ಪಡೆ, ಕಾಂಗ್ರೆಸ್ ಜೊತೆಗಿನ ತನ್ನ ಸೈದ್ಧಾಂತಿಕ ಸಮರದಲ್ಲಿ ಭಾರೀ ಜಯವನ್ನೇನೋ ಸಾಧಿಸಿತು. 2ನೇ ಅವಧಿಯ ಸರ್ಕಾರ ‘ಕೇಸರಿ ಅಜೆಂಡಾ’ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಡುತ್ತಿದೆ. ಆದ್ರೆ, ಪ್ರಾದೇಶಿಕ ಮಟ್ಟದಲ್ಲಿ ಹಿನ್ನೆಡೆ ಅನುಭವಿಸುವಂತಾಗಿದೆ. ‘ಮಿತ್ರ ಪಡೆ’ ಜೊತೆ ‘ಕೈ’ ಕಮಾಲ್..! ಕೇಂದ್ರದಲ್ಲಿ ಪಾರಮ್ಯ ಮೆರೆದಿರುವ ಬಿಜೆಪಿ ಸರ್ಕಾರ, ಪ್ರಾದೇಶಿಕ ಮಟ್ಟದಲ್ಲಿ ಹಿಂಜರಿತ ಅನುಭವಿಸುತ್ತಿರೋದು ಎದ್ದು ಕಾಣುತ್ತಿದೆ. ಹರ್ಯಾಣದಲ್ಲಿ ಕಟ್ಟರ್ ಸರ್ಕಾರ ಏದುಸಿರು ಬಿಟ್ಟು ತನ್ನ ಸರ್ಕಾರ ಉಳಿಸಿಕೊಂಡರೆ, ಮಹಾರಾಷ್ಟದಲ್ಲಿ ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಇನ್ನು ಜಾರ್ಖಂಡ್‌ನಲ್ಲಂತೂ ಕೇಸರಿ ಕಳೆಗುಂದಿ ಹೋಯ್ತು. ಹರ್ಯಾಣ ಹೊರತುಪಡಿಸಿದ್ರೆ, ಈ ವರ್ಷ ಚುನಾವಣೆ ನಡೆದ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಿತ್ರ ಪಡೆ ಜೊತೆ ಕಮಾಲ್ ಮಾಡುತ್ತಿದೆ. ಆದ್ರೆ, ಕಾಂಗ್ರೆಸ್ ಮಿತ್ರಪಡೆಯಿಂದ ಬಿಜೆಪಿ ಪಾಲಾದ ಹೆಗ್ಗಳಿಕೆ ಕರ್ನಾಟಕಕ್ಕಿದೆ. ಪ್ರತಿಭಟನೆಗಳ ಅಬ್ಬರ..! ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು, 2020ರ ಆರಂಭದಲ್ಲೂ ಮುಂದುವರೆಯುವ ಎಲ್ಲಾ ಲಕ್ಷಣಗಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಎದುರು ಬೆಟ್ಟದಂತೆ ಬೆಳೆದು ನಿಂತಿರುವ ಈ ಪ್ರತಿಭಟನೆಯ , ಅಷ್ಟು ಬೇಗ ಮುಗಿಯುವಂತೆ ಕಾಣುತ್ತಿಲ್ಲ. ಬಿಜೆಪಿ ತನ್ನ ಸೈದ್ಧಾಂತಿಕ ಅಜೆಂಡಾ ಜಾರಿಗೊಳಿಸಲು ಪ್ರತಿಭಟನೆಯ ಸವಾಲನ್ನು ಮೆಟ್ಟಿ ನಿಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಇದಕ್ಕಾಗಿ ದೊಡ್ಡ ಮಟ್ಟದ ಜನಜಾಗೃತಿ ಆಂದೋಲನಕ್ಕೆ ದೇಶಾದ್ಯಂತ ಚಾಲನೆ ನೀಡಿದೆ ಬಿಜೆಪಿ. ಕೇಸರಿಗೆ ಗೆಲುವಿನ ಸಂಭ್ರಮವೂ ಇದೆ..! ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳೇನೇ ಇರಲಿ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದುಹಾಕಿದ ವೇಳೆ ಸೃಷ್ಟಿಯಾಗಿದ್ದ ಉದ್ವಿಗ್ನತೆಯನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಬಿಜೆಪಿಗೆ ಇದ್ದೇ ಇದೆ. ಜೊತೆಯಲ್ಲೇ ತ್ರಿವಳಿ ತಲಾಖ್ ಕಾಯ್ದೆಯ ಸಮರ್ಪಕ ಜಾರಿಗೂ 2019 ವೇದಿಕೆಯಾಯ್ತು. ಎಲ್ಲಕ್ಕಿಂತಾ ಹೆಚ್ಚಾಗಿ ಶತಮಾನಗಳ ಅಯೋಧ್ಯಾ ವಿವಾದಕ್ಕೆ ಅಂತ್ಯಕಾಣಿಸಿದ ವರ್ಷವಿದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾರಣವಾಗಿ ಮೈಲುಗಲ್ಲು ಸ್ಥಾಪಿಸಿದ ವರ್ಷವಾಗಿ 2019 ನಿಲ್ಲೋದು ಶತಃಸಿದ್ಧ. ಲೋಕಸಭೆಯ ಒಟ್ಟು 543 ಸಂಸದರ ಪೈಕಿ 303 ಸಂಸದರು ಬಿಜೆಪಿಯವರೇ ಇದ್ದರೂ ಕೂಡಾ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿನ ಬಿಜೆಪಿ ಸಾಧನೆ 2019ರಲ್ಲಿ ತೀರಾ ನೀರಸ. 2017ರಲ್ಲಿ ದೇಶದ ಶೇ. 71ರಷ್ಟು ಭೂ ಪ್ರದೇಶದಲ್ಲಿ ಕೇಸರಿ ಬಾವುಟ ಹಾರಾಡಿತ್ತು. ಆದ್ರೆ, 2019ರಲ್ಲಿ ಆ ಪ್ರಮಾಣ ಶೇ. 35ಕ್ಕೆ ಕುಸಿದಿದೆ. ಅಂದ್ರೆ, ಸರಿಸುಮಾರು ಅರ್ಧದಷ್ಟು ರಾಜ್ಯಗಳನ್ನು ಬಿಜೆಪಿ ಕಳೆದುಕೊಂಡಿದೆ. ಹಾಗೆ ನೋಡಿದ್ರೆ, ಲೋಕಸಭಾ ಚುನಾವಣೆಯಲ್ಲಿ ವರ್ಕೌಟ್‌ ಆದ ‘ಬ್ರಾಂಡ್ ಮೋದಿ’ ಅಜೆಂಡಾ, ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಕೆಲಸ ಮಾಡಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ನಿರ್ಧಾರಗಳು, ವಿಧಾನಸಭಾ ಚುನಾವಣಾ ಅಖಾಡದಲ್ಲಿ ಮತ ವಿಭಜನೆ ಮಾಡುವಲ್ಲಿ ವಿಫಲವಾದವು ಅಂತಾನೇ ಹೇಳಬಹುದು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ 303 ಸ್ಥಾನಗಳು ಕೇಂದ್ರದಲ್ಲಿ ಮೋದಿಗೆ ಅತಿಹೆಚ್ಚು ಬಲ ತುಂಬಿರೋದು ಸುಳ್ಳಲ್ಲ. ಬಿಜೆಪಿಗೆ ಸಿಕ್ಕ ಅತಿದೊಡ್ಡ ಸಂಖ್ಯಾಬಲ ಎನ್‌ಡಿಎ ಅಂಗಪಕ್ಷಗಳ ಬಾಯಿ ಮುಚ್ಚಿ ಕೂರಿಸಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕೈಕೊಟ್ಟ ಶಿವಸೇನೆ, ಕೇಂದ್ರದಲ್ಲೂ ಎನ್‌ಡಿಎಗೆ ಬೆಂಬಲ ನೀಡದಿರೋದು ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬಿಜೆಪಿಯ ಅತಿದೊಡ್ಡ ಮಿತ್ರ ಜೆಡಿಯುಗೆ ಕೇಂದ್ರ ಸಂಪುಟದಲ್ಲಿ ಕೇವಲ 1 ಸಚಿವ ಸ್ಥಾನ ಕೊಟ್ಟಿದ್ದ ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಮುನಿಸಿಕೊಂಡಿದ್ದರೂ ಕೂಡಾ ‘ದೊಡ್ಡ ನಿರ್ಧಾರ’ ಕೈಗೊಂಡಿಲ್ಲ. ಮೋದಿ ಇಮೇಜ್ ಜೊತೆಯಲ್ಲೇ ಬೆಳೆದ ಅಮಿತ್ ಶಾ..! ಅಮಿತ್ ಶಾ ವರ್ಷ ಎಂದೇ ಹೇಳಬಹುದು! ಮೋದಿ ಇಮೇಜ್ ಜೊತೆಯಲ್ಲೇ ಅಮಿತ್ ಶಾ ಬೆಳೆದಿದ್ದು ಈ ವರ್ಷದ ಅಚ್ಚರಿ..! ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿಯಿರಲಿ, ಪೌರತ್ವ ತಿದ್ದುಪಡಿ ಕಾಯ್ದೆಯಿರಲಿ ಎಲ್ಲದರಲ್ಲೂ ಶಾ ಕಮಾಲ್ ಎದ್ದು ಕಾಣ್ತಿತ್ತು. ಮೊದಲ ಅವಧಿಯ ಮೋದಿ ಸರ್ಕಾರದಲ್ಲಿ ಪಕ್ಷ ಮುನ್ನಡೆಸುವುದಕ್ಕಷ್ಟೇ ಸೀಮಿತವಾಗಿದ್ದ ಅಮಿತ್ ಶಾ, ಎರಡನೇ ಅವಧಿಯಲ್ಲಿ ಪ್ರಧಾನಿ ನಂತರದ ನಂಬರ್ 2 ಸ್ಥಾನ ನನ್ನದೇ ಎಂದು ಸಾಬೀತು ಮಾಡಿದ್ರು. 2020ರಲ್ಲಿ ಬಿಜೆಪಿಗಿದೆ ಕಠಿಣ ಸವಾಲುಗಳು..! ಹೊಸ ವರ್ಷಾರಂಭದಲ್ಲೇ ಬಿಜೆಪಿ ಚುನಾವಣೆಗಳಿಗೆ ಸಜ್ಜಾಗುತ್ತಿದೆ. ದಿಲ್ಲಿ ಹಾಗೂ ಬಿಹಾರ ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಅತಿದೊಡ್ಡ ಸವಾಲು..! ದಿಲ್ಲಿಯಲ್ಲಿ ಕೇಜ್ರಿವಾಲ್ ಸಾರಥ್ಯದ ಆಮ್ ಆದ್ಮಿಗಳನ್ನು ಎದುರಿಸಬೇಕು ಬಿಜೆಪಿ. ದಿಲ್ಲಿ ದಂಗಲ್ ಬೆನ್ನಲ್ಲೇ ಬಿಹಾರ ಚುನಾವಣೆಯೂ ಎದುರಾಗುತ್ತೆ. ಬಿಹಾರದಲ್ಲಿ ಮೊದಲಿನಂತೆ ಜೆಡಿಯು ಜೊತೆಗೆ ಬಿಜೆಪಿ ಮಧುರ ಸಂಬಂಧವಿಲ್ಲ. ಆದ್ರೆ, ಲಾಲೂ ಸಾರಥ್ಯದ ಆರ್‌ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಮುರಿಯಲು ಬಿಜೆಪಿ-ಜೆಡಿಯು ಹಾಗೂ ಎಲ್‌ಜೆಪಿ ಒಗ್ಗಟ್ಟಾಗದೇ ವಿಧಿಯಿಲ್ಲ.



from India & World News in Kannada | VK Polls https://ift.tt/2F7dJA3

ಹೊಸ ವರ್ಷ: ರಾತ್ರಿ 2ರವೆರೆಗೆ ಮದ್ಯ ಮಾರಾಟ, ಬಡವರಿಗೆ ಸಬ್ಸಿಡಿ ದರ ನೀಡಲು ಚಿಂತನೆ- ಅಬಕಾರಿ ಸಚಿವ

ಬೆಂಗಳೂರು: ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆಯವರಗೆ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ನಾಗೇಶ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಮಾನ್ಯವಾಗಿ ವೈನ್ ಶಾಪ್ ಗಳು ರಾತ್ರಿ 11 ಗಂಟೆವರಗೆ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್ ಗಳು ಮಧ್ಯರಾತ್ರಿ 1ಗಂಟೆಯವರೆಗೆ ತೆರೆದಿರುತ್ತವೆ. ಹೊಸ ವರ್ಷದ ದಿನದಂದು ಮದ್ಯ ಮಾರಾಟದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದೆ. ಅಂದರೆ, ಮಧ್ಯರಾತ್ರಿ 2 ಗಂಟೆವರಗೆ ಅವಕಾಶ ಕೊಡಲು ಗೃಹ ಇಲಾಖೆ ಕೂಡ ಸಮ್ಮತಿಸಿದೆ ಎಂದು ಹೇಳಿದರು. ಬಡ ಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಕೊಡಬೇಕಂದು ಸರ್ಕಾರದ ಚಿಂತನೆ ಇದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು. ಬಿಯರ್ ಮಾರಾಟವನ್ನು ಕಡಿಮೆ ಮಾಡಿ ಹಾಟ್ ಲಿಕ್ಕರ್ ಅನ್ನು ಹೆಚ್ಚು ಮಾರಾಟ ಮಾಡುವಂತೆ ಅಬಕಾರಿ ಅಧಿಕಾರಿಗಳು ಮದ್ಯ ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿರುವ ದೂರುಗಳು ಬಂದಿವೆ. ಈ ಬಗ್ಗೆ ಅಬಕಾರಿ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಕರಾವಳಿ ಭಾಗದಲ್ಲಿ ಬಿಯರ್ ಮಾರಾಟ ನಿಯಂತ್ರಿಸದಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/2SGhIvB

ಕಪಾಲಿ ಬೆಟ್ಟದ 'ಬಂಡೆ'ಗೆ ಟ್ರೋಲ್‌ ಬಿಸಿ..! ಏಸು ಪ್ರತಿಮೆ ನಿರ್ಮಿಸಲು ಜ್ಞಾನೋದಯವಾಯ್ತಂತೆ..!

ಬೆಂಗಳೂರು: ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರ, ಇನ್ನೂ ಕುದಿಕುದಿ ಕೆಂಡವಾಗಿಯೇ ಇದೆ. ಪರ ಹಾಗೂ ವಿರೋಧ ಚರ್ಚೆಗಳು, ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇವೆ. ಕೆಲವರು ಡಿಕೆಶಿ ಪರ ವಾದ ಮಂಡಿಸಿದ್ರೆ, ಇನ್ನೂ ಕೆಲವರು ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ. ಕೆಲವರು ಇಡೀ ಪ್ರಸಂಗಕ್ಕೆ ಹಾಸ್ಯ ಲೇಪ ನೀಡಿದ್ಧಾರೆ. ಈ ಪೈಕಿ ಇಂಟರೆಸ್ಟಿಂಗ್‌ ಆದ ಕೆಲವೊಂದು ಚರ್ಚೆಗಳು ಇಲ್ಲಿವೆ. ಸಾವಿರಾರು ಕೋಟಿ ಸರ್ಕಾರದ ಹಣ ಖರ್ಚು ಮಾಡಿ ಪಟೇಲರ ಪ್ರತಿಮೆ ಮಾಡಬಹುದು. ಆದರೆ ಸ್ವಂತ ದುಡ್ಡಿನಲ್ಲಿ ಡಿಕೆಶಿ ಏಸು ಪ್ರತಿಮೆ ಮಾಡಬಾರದು. ಮಾಡಿದರೆ, ಅದು ಮತ ಬ್ಯಾಂಕ್ ರಾಜಕಾರಣ... ಇದೇ ಕಾರಣಕ್ಕೆ ಬಿಜೆಪಿ ಎಂದರೆ ಭಾರತೀಯ ಜೋಕರ್ಸ್ ಪಾರ್ಟಿ, ಬಫೂನ್ಸ್ ಜನತಾ ಪಾರ್ಟಿ ಎಂದು ನಾಗರಾಜ್ ಸಜ್ಜನ್ ಎಂಬುವರು ಟ್ವೀಟ್ ಮಾಡಿದ್ಧಾರೆ. ಡಿಕೆ ಶಿವಕುಮಾರ್ ಅವರು ಆಂಧ್ರದ ಸಿಎಂ ಜಗನ್‌ರನ್ನು ಕಾಪಿ ಮಾಡುತ್ತಿದ್ದಾರೆ. ಗೆಳೆಯರೇ, ಅಲ್ಲಿ ಜಗನ್ ಅಧಿಕಾರಕ್ಕೆ ಬರಲು ಕ್ರಿಶ್ಚಿಯನ್ "ಮಿಷನರಿ"ಗಳು ಚೆನ್ನಾಗಿ ಕೆಲಸ ಮಾಡಿವೆ. ಅದೇ ದಾರಿಯಲ್ಲಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲು ಏಸು ಪ್ರತಿಮೆ, ಓಲೈಕೆ ನಡೆಯುತ್ತಿದೆ. ದೊಡ್ಡ ಮಟ್ಟದಲ್ಲಿ ಹಿಂದೂ ಮತಾಂತರ ನಡೆಯುತ್ತಿದೆ. ಎಚ್ಚರ! ಎಂದು ಡಾ. ಸ್ವಾಮಿ ಎಂಬುವರು ಟ್ವೀಟ್ ಮಾಡಿದ್ದಾರೆ. ಡಿಕೆಶಿ ಜೈಲಿಗೆ ಹೋದಾಗ ಪ್ರತಿಭಟನೆ ಮಾಡಿದ್ದ ಒಕ್ಕಲಿಗರೇ ನೆನಪಿರಲಿ ಎಂದು ಎಚ್ಚರಿಸಿರುವ ಸತೀಶ್ ಎಂಬುವರು, ಡಿಕೆಶಿಗೆ ಅಭಿಮಾನ ಇರುವುದು ಇಟಲಿಯ ಕ್ರೈಸ್ತ ನಾಯಕ ನಾಯಕಿಯರ ಮೇಲೆಯೇ ಹೊರತು, ಕನ್ನಡಿಗ ಒಕ್ಕಲಿಗರ ಮೇಲಲ್ಲ ಎಂದು ಬರೆದುಕೊಂಡಿದ್ಧಾರೆ. ಬುದ್ದನಿಗೆ ಜ್ಞಾನೋದಯದವಾಗಿದ್ದು ಮಹಾ ಬೋದಿ ವೃಕ್ಷದ ಕೆಳಗೆ, ಸ್ಥಾಪಿಸಿದ್ದು ಬೌದ್ಧ ಧರ್ಮ! ಡಿಕೆಶಿಗೆ ಜ್ಞಾನೋದಯವಾಗಿದ್ದು ತಿಹಾರ್ ಜೈಲಿನ ಒಳಗೆ, ಸ್ಥಾಪಿಸುತ್ತಿರುವುದು ಏಸು ಮೂರ್ತಿ!!!! ಎಂದು ನಾಗರಾಜು ಎಂಬುವರು ಲೇವಡಿ ಮಾಡಿದ್ದಾರೆ. ಡಿಕೆಶಿ ಒಬ್ಬ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ಅಂತೆ. ಅಂದರೆ, 'ಬಂಡೆ'ದ್ದ ಕ್ರೈಸ್ತರಂತೆ. ಕನಕಪುರದ ಬಂಡೆ ಎಂಬ ಅನ್ವರ್ಥ ನಾಮವನ್ನೇ ವ್ಯಂಗ್ಯವಾಡಲು ಬಳಸಿಕೊಂಡಿದ್ದಾರೆ ನವೀನ್ ಸಾಗರ್.


from India & World News in Kannada | VK Polls https://ift.tt/37p7UtT

2019ರಲ್ಲಿ ಮಾಡಿಕೊಂಡ ಎಡವಟ್ಟಿನ ಬಗ್ಗೆ ಬಾಯ್ಬಿಟ್ಟ ಸಂಜಯ್‌ ಮಾಂಜ್ರೇಕರ್‌!

ಹೊಸದಿಲ್ಲಿ: ಟೀಮ್‌ ಇಂಡಿಯಾದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್‌ ಸಂಜಯ್‌ ಮಂಜ್ರೇಕರ್‌, 2019ರಲ್ಲಿ ತಾವು ಕ್ರಿಕೆಟ್‌ ವೀಕ್ಷಕ ವಿವರಣೆಗಾರನಾಗಿ ಹಾಗೂ ಕ್ರಿಕೆಟ್‌ ಪರಿಣತನಾಗಿ ಮಾಡಿಕೊಂಡ ಎಡವಟ್ಟುಗಳಕುರಿತಾಗಿ ಮಾತನಾಡಿದ್ದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಆಶ್ರಯದಲ್ಲಿ ನಡೆದ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಆಲ್‌ರೌಂಡರ್‌ ಅವರನ್ನು 'ಚೂರು ಪಾರು' ಕ್ರಿಕೆಟಿಗ ಎಂದು ಕರೆದದ್ದು ಮತ್ತು ಸಹ ಕಾಮೆಂಟೇಟರ್‌ ಅವರೊಟ್ಟಿಗೆ ನಡೆದುಕೊಂಡ ರೀತಿ ವೃತ್ತಿ ಪರವಾದುದ್ದಲ್ಲ ಎಂದು ಇಎಸ್‌ಪಿಎನ್‌ ಕ್ರಿಕ್ಇನ್ಫೋಗೆ ನೀಡಿರುವ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಕಳೆದ ಜುಲೈನಲ್ಲಿ ನಡೆದ ವಿಶ್ವಕಪ್‌ ವೇಳೆ ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೂ ಮುನ್ನ ರವೀಂದ್ರ ಜಡೇಜಾ ಒಬ್ಬ ಚೂರು ಪಾರು ಆಟಗಾರನಾಗಿದ್ದು, ಪ್ಲೇಯಿಂಗ್‌ 11ನಿಂದ ಅವರನ್ನು ಕೈಬಿಡುವುದು ವಾಸಿ ಎಂದು ಕಾಮೆಂಟ್‌ ಮಾಡಿದ್ದರು. ಇದಕ್ಕೆ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಟ್ರೋಲ್‌ ಆಗಿತ್ತು. ರವೀಂದ್ರ ಜಡೇಜಾ ಕೂಡ ತಮ್ಮ ಟ್ವಿಟರ್‌ ಖಾತೆ ಮೂಲಕ ಮಾಂಜ್ರೇಕರ್‌ ಅವರನ್ನು ಜಾಡಿಸಿದ್ದರು. "1997-1998ರಲ್ಲಿ ಈ ವೃತ್ತಿ ಆರಂಭಿಸಿದೆ. ಇದೀಗ 20-21 ವರ್ಷ ಕಾಲ ಈ ವೃತ್ತಿಯಲ್ಲಿ ಸಾಗಿಬಂದಿದ್ದೇನೆ. ಇದರಲ್ಲಿ 2019 ನನ್ನ ಪಾಲಿಗೆ ಒಬ್ಬ ಕ್ರಿಕೆಟ್‌ ಕಾಮೆಂಟೇಟರ್‌ ಆಗಿಯೂ ಕ್ರಿಕೆಟ್‌ ಪರಿಣತನಾಗಿಯೂ ಅತ್ಯಂತ ಕೆಟ್ಟ ವರ್ಷ," ಎಂದು ಸಂಜಯ್‌ ಹೇಳಿಕೊಂಡಿದ್ದಾರೆ. ಜಡೇಜಾ ವಿರುದ್ಧ ನೀಡಿದ ಕಾಮೆಂಟ್‌ ಬಳಿಕ ತಾವೆಂದೂ ಅವರನ್ನು ಭೇಟಿಯಾಗಿಲ್ಲ ಎಂದು ಸಂಜಯ್‌ ಹೇಳಿಕೊಂಡಿದ್ದಾರೆ. "ಇಲ್ಲಿ ಯಾವುದೇ ರೀತಿಯ ತಪ್ಪು ತಿಳುವಳಿಕೆ ಇಲ್ಲ. ಜಡೇಜಾ ಬಗ್ಗೆ ನಾನು ಹೇಳಿದ್ದು ಸರಿ ಇದೆ. ಚೂರು ಪಾರು ಆಟಗಾರ ಎಂಬುದು ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಬಳಕೆ ಮಾಡಲಾಗುವ ಪದ. ಇದರ ಬಗ್ಗೆ ಯಾವುದೇ ರೀತಿಯ ಪಶ್ಚಾತಾಪವಿಲ್ಲ," ಎಂದಿದ್ದಾರೆ. ಸಂಜಯ್‌ ಅವರ ಅಸಮಂಜಸ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜಡೇಜಾ, "ನಾನು ನಿಮಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ಪಂದ್ಯಗಳನ್ನಾಡಿದ್ದೇನೆ. ಈಗಲೂ ಆಡುತ್ತಿದ್ದೇನೆ ಕೂಡ. ಸಾಧಕರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ. ನಿಮ್ಮ ಮಾತಿನ ವಾಂತಿ ಕಂಡು ಸಾಕಾಗಿದೆ," ಎಂದು ಟ್ವೀಟ್‌ ಮೂಲಕ ಜಾಡಿಸಿದ್ದರು. ಇದೇ ವೇಳೆ ಕಾಮೆಂಟರಿ ವೇಳೆ ಹರ್ಷ ಭೋಗ್ಲೆ ಅವರನ್ನು ತುಚ್ಚವಾಗಿ ಕಂಡಿದ್ದಕ್ಕೆ ತಮಗೆ ಪಶ್ಚಾತಾಪವಿದೆ ಎಂದು ಸಂಜಯ್‌ ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ಬಾಂಗ್ಲಾದೇಶ ನಡುವಣ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಪಂದ್ಯದ ಕುರಿತಾಗಿ ಮಾತನಾಡಿದ ಹರ್ಷ ಭೋಗ್ಲೆ, ಪಿಂಕ್‌ ಬಾಲ್‌ ಟೆಸ್ಟ್‌ ಬಳಿಕ ಕೂಲಂಕಶ ಪರೀಕ್ಷೆಯಾಗಬೇಕಿದೆ. ಆಟಗಾರರಿಗೆ ಚೆಂಡು ಸರಿಯಾಗಿ ಕಾಣುತ್ತಿದೆಯೇ ಇಲ್ಲವೇ ಎಂದು ನೈಜ ಉತ್ತರ ಕೇಳಿ ಪಡೆಯುವ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸಂಜಯ್‌, "ಕೇವಲ ನೀವಷ್ಟೇ ಕೇಳಬೇಕು. ಏಕೆಂದರೆ ನಾವೆಲ್ಲಾ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದೇವೆ," ಎಂದಿದ್ದರು. ಈ ಮೂಲಕ ಹರ್ಷ ಭೋಗ್ಲೆ ಯಾವುದೇ ಹಂತದ ಕ್ರಿಕೆಟ್‌ ಆಡಿಲ್ಲ ಎಂದು ಇಲ್ಲಿ ಪರೋಕ್ಷವಾಗಿ ಅಣಕಿಸಿದ್ದರು. "ಈ ವಿಚಾರ ಗಂಭೀರವಾದದ್ದು. ಈ ಸಂದರ್ಭದಲ್ಲಿ ನಾನು ಒಬ್ಬ ವೃತ್ತಿಪರನಾಗಿ ನಡೆದುಕೊಳ್ಳಲಿಲ್ಲ. ಅದು ನಿಜಕ್ಕೂ ತಪ್ಪು. ಇದಕ್ಕೆ ಪಶ್ಚಾತಾಪ ಖಂಡಿತವಾಗಿಯೂ ಇದೆ. ಈ ಬಗ್ಗೆ ಕೂಡಲೇ ಕಾರ್ಯಕ್ರಮದ ನಿರ್ಮಾಪಕರ ಬಳಿ ಕ್ಷಮೆಯಾಚಿಸಿದೆ. ಏಕೆಂದರೆ ನನ್ನ ತಪ್ಪಿನ ಅರಿವು ನನಗಾಗಿತ್ತು," ಎಂದು ಸಂಜಯ್‌ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39rS5Vi

ದೇಶದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ದೇಶದ ಮೊದಲ "ಸೇನಾ ಸಿಬ್ಬಂದಿ ಮುಖ್ಯಸ್ಥ" ( 'ಸಿಡಿಎಸ್‌- ) ರಾಗಿ ಭೂಸೇನಾ ಮುಖ್ಯಸ್ಥರಾಗಿದ್ದ ಬಿಪಿನ್‌ ರಾವತ್‌ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಇವರು ದೇಶದ ಮೂರೂ ಸಶಸ್ತ್ರ ಪಡೆಗಳಿಗೆ (ಭೂಸೇನೆ, ನೌಕಾಸೇನೆ, ವಾಯುಸೇನೆ) ನಡುವೆ ಸಮನ್ವಯಕಾರರಂತೆ ಕಾರ್ಯನಿರ್ವಹಿಸಲಿದ್ದಾರೆ. ದೇಶದ ಮೊದಲ ಆಗಿ ಅಧಿಕಾರ ಸ್ವೀಕರಿಸಿವ ಮೊದಲು 'ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಹೂಗುಚ್ಚ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ಭೂಸೇನಾ ಮುಖ್ಯಸ್ಥರಾಗಿದ್ದ (ಜನರಲ್‌) ಬಿಪಿನ್‌ ರಾವತ್‌ ಅವರಿಗೆ ಭಾರತೀ ಭೂ ಸೇನೆಯು ಸಕಲ ಸೇನಾ ಗೌರವಗಳೊಂದಿಗೆ ಬೀಳ್ಕೊಟ್ಟಿತು. ರಾವತ್‌ ಅವರು ಫೇರ್‌ವೆಲ್‌ ಗಾರ್ಡ್ ಆಫ್‌ ಹಾನರ್‌ ಅನ್ನು ಸ್ವೀಕರಿಸಿದರು.


from India & World News in Kannada | VK Polls https://ift.tt/2F4mgUm

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸ್ಥಳ ಗುರುತಿಸಿದ ಯೋಗಿ ನೇತೃತ್ವದ ಯುಪಿ ಸರಕಾರ

ಲಕ್ನೋ: ಇತ್ತೀಚೆಗೆ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನಿರ್ಮಾಣ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ ಐದು ಸ್ಥಳಗಳನ್ನು ಗುರುತಿಸಿದೆ. ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಿ, ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಐದು ಎಕರೆ ಸ್ಥಳ ನೀಡಬೇಕೆಂದು ಸುಪ್ರೀಂಕೋರ್ಟ್ ನವೆಂಬರ್ 9 ರಂದು ನೀಡಿದ ತನ್ನ ಐತಿಹಾಸಿಕ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಮಿರ್ಜಾಪುರ, ಶಂಶುದ್ದೀನ್ ಪುರ ಮತ್ತು ಚಾಂದ್ ಪುರ ನಲ್ಲಿ ಐದು ಸ್ಥಳಗಳನ್ನು ಗುರುತಿಸಿದ್ದು, ಈ ಪ್ರದೇಶ ಪವಿತ್ರ ಸ್ಥಳ ಎಂದು ಗುರುತಿಸಿರುವ ಪಂಚ್ ಕೋಶಿ ಪರಿಕ್ರಮದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಸುಪ್ರೀಂ ಆದೇಶದಂತೆ ಟ್ರಸ್ಟಿಗಳು ಈ ಸ್ಥಳವನ್ನು ಪರಿಶೀಲಿಸಿ ಮಸೀದಿ ನಿರ್ಮಾಣಕ್ಕೆ ಯಾವ ಸ್ಥಳ ಸೂಕ್ತ ಎಂಬುದನ್ನು ತಿಳಿಸಲು ಉತ್ತರಪ್ರದೇಶ ಸರಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಅಯೋಧ್ಯೆ-ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧಸಲ್ಲಿಸಲಾಗಿದ್ದ 18 ಅರ್ಜಿಗಳನ್ನು ಡಿಸೆಂಬರ್ 12 ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.


from India & World News in Kannada | VK Polls https://ift.tt/39sgslx

ಕ್ರೀಸ್ ತೊರೆದರೆ ಈ ಬಾರಿಯೂ 'ಮಂಕಡ್' ರನೌಟ್ ಮಾಡಲಿದ್ದೇನೆ: ಅಶ್ವಿನ್ ಎಚ್ಚರಿಕೆ

ಹೊಸದಲ್ಲಿ: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ , ನಾನ್ ಸ್ಟ್ರೈಕರ್‌ನಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು '' ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರು. ಇದರ ವಿರುದ್ಧ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಕ್ರಿಕೆಟ್ ನಿಯಮ ಪುಸ್ತಕದ ಪ್ರಕಾರ ಅಶ್ವಿನ್ ಮಾಡಿರುವುದು ಸರಿಯೆಂದು ಅನಿಸಿದರೂ ಸಭ್ಯರ ಆಟ ಕ್ರಿಕೆಟ್‌ನಲ್ಲಿ ಓರ್ವ ತಂಡದ ನಾಯಕರಾಗಿ ಅಶ್ವಿನ್ ನಡವಳಿಕೆಯನ್ನು ಪ್ರಶ್ನಿಸುವಂತಿತ್ತು. ಹಾಗಿರಬೇಕೆಂದರೆ ಈ ಬಾರಿಯ ಐಪಿಎಲ್‌ನಲ್ಲಿ ರವಿಚಂದ್ರನ್ ಅಶ್ವಿನ್‌ರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವಿನಿಮಯ ಮಾಡಿಕೊಂಡಿದೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಅಶ್ವಿನ್, ಹಾಗೊಂದು ವೇಳೆ ಈ ಬಾರಿಯೂ ಬೌಲಿಂಗ್ ವೇಳೆಯಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ಕ್ರೀಸ್ ತೊರೆದರೆ ಮಂಕಡ್ ರನೌಟ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿಮಾನಿಗಳ ಜತೆಗೆ ನಡೆಸಿದ ನೇರ ಪ್ರಶ್ನೋತ್ತರ ವೇಳೆಯಲ್ಲಿ ಅಶ್ವಿನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರವಾಗಿ ಅಶ್ವಿನ್, ಬ್ಯಾಟ್ಸ್‌ಮನ್ ಕ್ರೀಸ್ ತೊರೆದರೆ ಮಂಕಡ್ ರನೌಟ್ ಮಾಡುವುದಾಗಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಳೆದೊಂದು ದಶಕದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎಂಬ ಹಿರಿಮೆಗೆ ಅಶ್ವಿನ್ ಭಾಜನವಾಗಿದ್ದಾರೆ. ಈ ಬಗ್ಗೆ ಅಭಿಮಾನಿ ಕೇಳಿದಾಗ, ಅತ್ಯುತ್ತಮ ಭಾವನೆ ಎಂದು ಉತ್ತರಿಸಿದ್ದಾರೆ. ಭಾರತದ ಏಕದಿನ ಹಾಗೂ ಟ್ವೆಂಟಿ-20 ತಂಡದ ಭಾಗವಾಗದೇ ಇರುವುದಕ್ಕೆ ಬೇಸರವಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ಜೀವನದಲ್ಲಿ ಎಂದೂ ಬೇಸರಪಟ್ಟುಕೊಳ್ಳುವುದಿಲ್ಲ. ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದು ನುಡಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನಡೆಸಿದ ದಾಳಿಯು ಈ ದಶಕದ ಅತ್ಯುತ್ತಮ ಸ್ಪೆಲ್ ಎಂದರು. ಹಾಗೆಯೇ ಪಾಕಿಸ್ತಾನದ ಫೇವರಿಟ್ ಬ್ಯಾಟ್ಸ್‌ಮನ್ ಎಂಬುದಕ್ಕೆ ಸಯೀದ್ ಅನ್ವರ್ ಎಂದು ಉತ್ತರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2rHIIQd

ಆಲ್‌ರೌಂಡರ್‌ಗಿಂತಲೂ ವಿಕೆಟ್ ಟೇಕಿಂಗ್ ವೇಗಿಗಳ ಅವಶ್ಯಕತೆಯಿದೆ: ಅನಿಲ್ ಕುಂಬ್ಳೆ

ಹೊಸದಿಲ್ಲಿ: 2020ನೇ ಸಾಲಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ಪ್ರತಿಯೊಂದು ತಂಡಗಳು ಯೋಜನೆ ರೂಪಿಸಿಕೊಳ್ಳುತ್ತಿದೆ. ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವುದರತ್ತ ಕಾರ್ಯಮಗ್ನವಾಗಿದೆ. ಟೀಮ್ ಇಂಡಿಯಾ ಸಹ ನೂತನ ಸಂಯೋಜನೆಯ ಹುಡುಕಾಟದಲ್ಲಿದೆ. ಈ ಮಧ್ಯೆ ಪ್ರತಿಕ್ರಿಯೆ ನೀಡಿರುವ ಜಂಬೋ ಖ್ಯಾತಿಯ ಲೆಗ್ ಸ್ಪಿನ್ನರ್ , ಆಲ್‌ರೌಂಡರ್‌ಗಿಂತಲೂ ವಿಕೆಟ್ ಟೇಕಿಂಗ್ ವೇಗದ ಬೌಲರ್‌ಗಳ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಟ್ವೆಂಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ಆಯೋಜನೆಯಾಗಲಿದೆ. ವೇಗಿ ಸ್ನೇಹಿ ಆಸೀಸ್ ಪಿಚ್‌ನಲ್ಲಿ ವಿಕೆಟ್ ಟೇಕಿಂಗ್ ವೇಗದ ಬೌಲರ್‌ಗಳು ಹೆಚ್ಚು ಪ್ರಭಾವಿ ಎನಿಸಿಕೊಳ್ಳುವ ಸಾಧ್ಯತೆಯಿದೆ. ನನ್ನ ಪ್ರಕಾರ ಕುಲ್‌ದೀಪ್ ಯಾದವ್ ಹಾಗೂ ಯುಜ್ವೇಂದ್ರ ಚಹಲ್ ಅವರಂತಹ ವಿಕೆಟ್ ಪಡೆಯಬಲ್ಲ ಬೌಲರ್‌ಗಳು ತಂಡದಲ್ಲಿರಬೇಕು. ತೇವಯುಕ್ತವಾದ ಮೈದಾನದಿಂದ ಚೆಂಡು ಒದ್ದೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಎರಡು ರಿಸ್ಟ್ ಸ್ಪಿನ್ನರ್‌ಗಳು ತಂಡದಲ್ಲಿರಬೇಕಾಗಿರುವುದು ಅತಿ ಅಗತ್ಯ ಎಂದು ಕುಂಬ್ಳೆ ವಿವರಿಸಿದರು. ವಿಕೆಟ್ ಕಬಳಿಸಬಲ್ಲ ಬೌಲರ್‌ಗಳ ಆಯ್ಕೆಯತ್ತ ಗಮನ ಹರಿಸಬೇಕಾಗಿರುವುದು ಅತಿ ಅಗತ್ಯವೆನಿಸುತ್ತದೆ. ಆಲರೌಂಡರ್‌ಗಳ ಬದಲು ವಿಕೆಟ್ ಪಡೆಯುವ ವೇಗದ ಬೌಲರ್‌ಗಳತ್ತ ಗಮನ ಹರಿಸಬೇಕು. ಇದು ನಿರ್ಣಾಯಕ ಎಂದು ಟೆಸ್ಟ್ ಹಾಗೂ ಏಕದಿನದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿರುವ ಅನಿಲ್ ಕುಂಬ್ಳೆ ತಿಳಿಸಿದರು. ಪರಿಸ್ಥಿತಿಗೆ ಹೊಂದಿಕೊಂಡು ನಿರ್ವಹಣೆ ನೀಡಬಲ್ಲ ಆಟಗಾರರನ್ನು ಗುರುತಿಸಬೇಕಾಗಿರುವುದು ಅತಿ ಅಗತ್ಯ ಎಂದು ಅನಿಲ್ ಕುಂಬ್ಳೆ ಸೇರಿಸಿದರು. ಧೋನಿ ಭವಿಷ್ಯ? ಏತನ್ಮಧ್ಯೆ ಮಹೇಂದ್ರ ಸಿಂಗ್ ಧೋನಿ ಭವಿಷ್ಯದ ಬಗ್ಗೆ ಕೇಳಿದಾಗ, ಅನಿಲ್ ಕುಂಬ್ಳೆ ಕೂಡಾ ಐಪಿಎಲ್ ನಿರ್ವಹಣೆ ನಿರ್ಣಾಯಕವೆನಿಸಲಿದೆ ಎಂದರು. ಇವೆಲ್ಲವೂ ಧೋನಿಗೆ ಬಿಟ್ಟ ವಿಚಾರ. ಐಪಿಎಲ್‌ನಲ್ಲಿ ಹೇಗೆ ನಿರ್ವಹಣೆ ನೀಡುತ್ತಾರೆ ಎಂಬುದು ಮುಖ್ಯವೆನಿಸಲಿದೆ. ಭಾರತ ತಂಡವು ಸಹ ವಿಶ್ವಕಪ್‌ನಲ್ಲಿ ಧೋನಿ ಸೇವೆಯನ್ನು ಬಯಸಲಿದೆಯೇ ಎಂಬುದು ಕೂಡಾ ಗಮನಾರ್ಹವೆನಿಸುತ್ತದೆ. ಅಲ್ಲಿಯ ವರೆಗೂ ಕಾದು ನೋಡೋಣ ಎಂದರು. ಕೆಎಲ್‌ಗೆ ವಿಕೆಟ್ ‌ಕೀಪಿಂಗ್ ಹೊಣೆ? ಅದೇ ಹೊತ್ತಿಗೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ಸಹ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೂಪದಲ್ಲಿ ಉತ್ತಮ ಆಯ್ಕೆಯಾಗಲಿದ್ದಾರೆ ಎಂಬುದನ್ನು ಕುಂಬ್ಳೆ ಅಭಿಪ್ರಾಯಪಟ್ಟರು. ಆದರೆ ಏನೇ ನಿರ್ಧಾರ ತೆಗೆದುಕೊಂಡರೂ ವಿಶ್ವಕಪ್‌ಗೂ 10-12 ಪಂದ್ಯಗಳಿಗೂ ಮೊದಲೇ ನಿರ್ಧರಿಸಬೇಕು ಎಂಬುದನ್ನು ಒತ್ತಿ ಹೇಳಿದರು. ರೋಹಿತ್ ಅತ್ಯುತ್ತಮ, ಮಯಾಂಕ್ ಯುವ ಪ್ರತಿಭೆ ಇನ್ನು ರೋಹಿತ್ ಶರ್ಮಾ 2019ನೇ ಸಾಲಿನ ಅತ್ಯುತ್ತಮ ಕ್ರಿಕೆಟಿಗ ಮತ್ತು ಮಯಾಂಕ್ ಅಗರ್ವಾಲ್ ಅತ್ಯುತ್ತಮ ಯುವ ಪ್ರತಿಭೆ ಎಂದು ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36cvLN9

ಸೇನಾ ಪಡೆಯ ನೂತನ ಮುಖ್ಯಸ್ಥರಾಗಿ ಮನೋಜ್‌ ಮುಕುಂದ್‌ ನರವಾನೆ ನೇಮಕ

ಹೊಸದಿಲ್ಲಿ: ಭೂಸೇನೆಯ ಉಪಮುಖ್ಯಸ್ಥರಾಗಿದ್ದ ಲೆ.ಜನರಲ್‌ ಅವರು ಭೂಸೇನೆಯ ಮುಖ್ಯಸ್ಥರಾಗಿ (ಜನರಲ್‌) ಆಗಿ ನೇಮಕರಾಗಿದ್ದಾರೆ. ಮಂಗಳವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಭೂಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್‌ ರಾವತ್‌ ಅವರನ್ನು ದೇಶದ ಮೊದಲ "ಸೇನಾ ಸಿಬ್ಬಂದಿ ಮುಖ್ಯಸ್ಥ" ( 'ಸಿಡಿಎಸ್‌- ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌) ರನ್ನಾಗಿ ಸೋಮವಾರ ನೇಮಕ ಮಾಡಲಾಗಿತ್ತು. ಈ ಮೂಲಕ ತೆರವಾಗಿದ್ದ 'ಜನರಲ್‌' ಸ್ಥಾನಕ್ಕೆ ಮನೋಜ್‌ ಮುಕುಂದ್‌ ನರವಾನೆ ನೇಮಕವಾಗಿದ್ದಾರೆ. ಮನೋಜ್‌ ಅವರು ಪ್ರಸ್ತುತ ಭೂಸೇನೆಯ ಉಪಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಅವರು ಚೀನಾದೊಂದಿಗಿನ ಭಾರತದ 4000 ಕಿ.ಮೀ ಗಡಿಯ ಮೇಲೆ ನಿಗಾ ಇರಿಸುವ ಸೇನೆಯ ಈಸ್ಟರ್ನ್‌ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ನಿರತವಾಗಿರುವ ರಾಷ್ಟ್ರೀಯ ರೈಫಲ್ಸ್‌ ಬೆಟಾಲಿಯನ್‌ನಲ್ಲಿ ಕಮಾಂಡರ್‌ ಆಗಿಯೂ ಮುಕುಂದ್‌ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 37 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಸೇನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ರಾಷ್ಟ್ರೀಯ ರಕ್ಷಣಾ ಆಕಾಡೆಮಿಯಲ್ಲಿ ವ್ಯಾಸಂಗ ಮಾಡಿರುವ ಮುಕುಂದ್‌ ಅವರಿಗೆ ಸೇನೆಯಲ್ಲಿನ ದೀರ್ಘಾವಧಿ ಸೇವೆ ಹಾಗೂ ಅವರ ಸಾಧನೆಗಳನ್ನು ಗುರುತಿಸಿ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಹಾಗೂ ಪರಮ ವಿಶಿಷ್ಟ ಸೇವಾ ಪದಕಗಳು ಸಂದಿವೆ.


from India & World News in Kannada | VK Polls https://ift.tt/37yAJEv

4 ದಿನಗಳ ಟೆಸ್ಟ್ ಕ್ರಿಕೆಟ್; ತಕ್ಷಣ ಪ್ರತಿಕ್ರಿಯಿಸಲು ನಿರಾಕರಿಸಿದ ಸೌರವ್ ಗಂಗೂಲಿ

ಕೋಲ್ಕತಾ: ಪಂದ್ಯವನ್ನು ಐದರಿಂದ ನಾಲ್ಕು ದಿನಗಳಿಗೆ ಇಳಿಸುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯೋಜನೆಗೆ ತಕ್ಷಣ ಪ್ರತಿಕ್ರಿಯಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ನಿರಾಕರಿಸಿದ್ದಾರೆ. 2023ರಿಂದ ಆರಂಭವಾಗಲಿರುವ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಆಯೋಜಿಸಲು ಯೋಜನೆ ಇರಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದಾದಾ, ಮೊದಲು ನಾವು ಪ್ರಸ್ತಾಪ ನೋಡಲಿದ್ದೇವೆ. ಮೊದಲು ಪ್ರಸ್ತಾಪ ಬರಲಿ ಆಮೇಲೆ ನೋಡೋಣ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಫ್ಯೂಚರ್ ಟೂರ್ ಪ್ರೋಗ್ರಾಂ ಪ್ರಕಾರ 2023ರಿಂದ 2031ರ ಅವಧಿಯ ವರೆಗಿನ ಟೆಸ್ಟ್‌ ಕ್ರಿಕೆಟ್ ಪಂದ್ಯವನ್ನು ನಾಲ್ಕು ದಿನಗಳಿಗೆ ಸಂಕ್ಷಿಪ್ತಗೊಳಿಸುವ ಉದ್ದೇಶವನ್ನು ಐಸಿಸಿ ಹೊಂದಿದೆ. ಈ ಮೂಲಕ ದೀರ್ಘ ಅವಧಿಯ ಕ್ರಿಕೆಟ್‌ಗೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆಯುವ ಗುರಿ ಹೊಂದಿದೆ. ಹೆಚ್ಚು ಜಾಗತಿಕ ಟೂರ್ನಿಗಳನ್ನು ಆಯೋಜಿಸುವ ಉದ್ದೇಶವನ್ನು ಐಸಿಸಿ ಹೊಂದಿದೆ. ಇನ್ನೊಂದೆಡೆ ಬಿಸಿಸಿಐ, ಕ್ಯಾಲೆಂಡರ್‌ ವರ್ಷದಲ್ಲಿ ಹೆಚ್ಚು ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಯೋಜನೆ ರೂಪಿಸುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಾಲ್ಕು ಬಲಿಷ್ಠ ತಂಡಗಳನ್ನು ಒಳಗೊಂಡಿರುವ 'ಸೂಪರ್‌ ಸೀರಿಸ್‌' ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ದಿನಗಳ ಪಂದ್ಯವು ಆಡಳಿತ ಮಂಡಳಿಗೆ ವೆಚ್ಚದಾಯಕ ಎನ್ನುವ ಅಭಿಪ್ರಾಯವೂ ಕೇಳಿ ಬಂದಿದೆ. ಒಟ್ಟಿನಲ್ಲಿ ಹೊಸ ಯೋಜನೆ ಜಾರಿಯಾದರೆ ಭಾರತೀಯ ಕ್ರಿಕೆಟ್ ಮೇಲೆ ಹೇಗೆ ಪರಿಣಾಮ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ. 2019 ವರ್ಷಾರಂಬಧಲ್ಲಿ ನಡೆದ ಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ ನಡುವಣ ಪಂದ್ಯವು ನಾಲ್ಕು ದಿನಗಳ ಪಂದ್ಯವಾಗಿತ್ತು. ಇದಕ್ಕೂ ಮೊದಲು 2017ರ ಲ್ಲಿದಕ್ಷಿಣ ಆಫ್ರಿಕಾ ಹಾಗೂ ಜಿಂಬಾಂಬ್ವೆ ನಡುವೆಯೂ ಒಂದು ಪಂದ್ಯ ಆಯೋಜಿಸಲಾಗಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QypxAH

ಎನ್‌ಸಿಎಫ್‌ ಶುಲ್ಕ ಕಡಿತಕ್ಕೆ ಟ್ರಾಯ್‌ ಚಿಂತನೆ, ಕೇಬಲ್‌ ಟಿವಿ ಬಿಲ್‌ ಇಳಿಕೆ?

ಕಪಾಲಿ ಗುಡ್ಡದಲ್ಲಿ ಏಸು ಪ್ರತಿಮೆ, ಎಚ್ಚರಿಕೆಯ ನಡೆಗೆ ಬಿಜೆಪಿ ತೀರ್ಮಾನ

ಪ್ರಬಲ ತಂಡ ಘೋಷಿಸಿದ ಮುಂಬಯಿ; ಕರ್ನಾಟಕ ತಂಡದಿಂದ ಸಮರ್ಥ್ ಔಟ್‌, ಅಭಿಷೇಕ್‌ ಇನ್‌

ಬೆಂಗಳೂರು: ಮುಂಬಯಿನಲ್ಲಿ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ 'ಎ' ಮತ್ತು 'ಬಿ' ಗುಂಪಿನ ಪಂದ್ಯಕ್ಕೆ ಪ್ರಕಟಿಸಲಾದ 15 ಸದಸ್ಯರ ತಂಡದಿಂದ ರವಿಕುಮಾರ್‌ ಸಮರ್ಥ್ ಅವರನ್ನು ಕೈಬಿಡಲಾಗಿದ್ದು, ಅಭಿಷೇಕ್‌ ರೆಡ್ಡಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಮಧ್ಯೆ ಗಾಯದಿಂದ ಚೇತರಿಸಿಕೊಂಡಿರುವ ರೋನಿತ್‌ ಮೋರೆ ತಂಡಕ್ಕೆ ಮರಳಿದ್ದಾರೆ. ಸದ್ಯ ಆಡಿರುವ ಮೂರು ಪಂದ್ಯಗಳಲ್ಲಿಒಂದು ಗೆಲುವು ಹಾಗೂ ಎರಡು ಡ್ರಾ ದೊಂದಿಗೆ ಒಟ್ಟು 10 ಅಂಕ ಹೊಂದಿರುವ ಕರ್ನಾಟಕ ಮುಂದಿನ ಹಾದಿಯನ್ನು ಸುಗಮವಾಗಿರಿಸಿಕೊಳ್ಳಲು ವಿರುದ್ಧ ಗೆಲುವು ಸಾಧಿಸುವುದು ಅಗತ್ಯವಾಗಿದೆ. ಇನ್ನೊಂದೆಡೆ ಕರ್ನಾಟಕ ವಿರುದ್ಧದ ರೋಚಕ ಹಣಾಹಣಿಗೆ 15 ಸದಸ್ಯ ಬಲದ ಬಲಿಷ್ಠ ತಂಡವನ್ನು ಮುಂಬಯಿ ಘೋಷಿಸಿದೆ. ಅನುಭವಿ ಅಜಿಂಕ್ಯ ರಹಾನೆ ಹಾಗೂ ಉದಯೋನ್ಮುಖ ಪೃಥ್ವಿ ಶಾ ತಂಡದಲ್ಲಿದ್ದಾರೆ. ಈ ಮಧ್ಯೆ ರಾಷ್ಟ್ರೀಯ ಕರ್ತವ್ಯದಲ್ಲಿರುವ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ಹಿಂದೆ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಹಾಗೂ ದುಬೆ ಆಡದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಮಾಜಿ ಆಟಗಾರ ವಿನೋದ್ ಕಾಂಬ್ಳಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಆಟಗಾರರು ಬದ್ಧತೆ ಮರೆತಿರುವುದು ಟೀಕೆಗೆ ಗುರಿಯಾಗಿತ್ತು. ಕರ್ನಾಟಕ ಹಾಗೂ ಮುಂಬಯಿ ನಡುವಣ ರಣಜಿ ಹಣಾಹಣಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಜನವರಿ 3ರಿಂದ 6ರವರೆಗೆ ನಡೆಯಲಿದೆ. ತಮಿಳುನಾಡು ವಿರುದ್ದ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಬಾರಿಸಿರುವ ಕರ್ನಾಟಕ ಬಳಿಕದ ಎರಡು ಪಂದ್ಯಗಳಲ್ಲಿ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದ್ದವು. ಇದೀಗ ಕರುಣ್ ನಾಯರ್ ಪಡೆ ಗೆಲುವಿನ ಹಾದಿಗೆ ಮರಳುವ ಇರಾದೆಯಲ್ಲಿದೆ. ಕರ್ನಾಟಕದ ಇದುವವರೆಗಿನ ಫಲಿತಾಂಶಗಳು: ತಮಿಳುನಾಡು ವಿರುದ್ಧ 26 ರನ್ ಅಂತರದ ಗೆಲುವು ಉತ್ತರ ಪ್ರದೇಶ ವಿರುದ್ದ ಡ್ರಾ ಫಲಿತಾಂಶ (ಇನ್ನಿಂಗ್ಸ್ ಮುನ್ನಡೆ) ಹಿಮಾಚಲ ಪ್ರದೇಶ ವಿರುದ್ದ ಡ್ರಾ ಫಲಿತಾಂಶ (ಇನ್ನಿಂಗ್ಸ್ ಹಿನ್ನಡೆ)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QtKBby

ಅಗ್ನಿ ಅವಘಡ; ತಕ್ಷಣ ಎಚ್ಚೆತ್ತುಕೊಂಡು ಬೆಂಕಿ ನಂದಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ಸಿಡ್ನಿ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಹೊರಬಂದು ಈಗಷ್ಟೇ ಟ್ವೆಂಟಿ-20 ಟೂರ್ನಿಯಲ್ಲಿ ಪುನರಾಗಮನ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್, ಇದೀಗ ತಮ್ಮ ಸಮಯ ಪ್ರಜ್ಞೆಗಾಗಿ ಎಲ್ಲರ ಹೃದಯ ಗೆದ್ದಿದ್ದಾರೆ. ಸ್ಟೇಡಿಯಂ ಹೊರಗಡೆ ಅಗ್ನಿ ಅನಾಹುತವನ್ನು ಕಂಡ ಗ್ಲೆನ್ ಮ್ಯಾಕ್ಸ್‌ವೆಲ್ ತಕ್ಷಣ ಎಚ್ಚೆತ್ತುಕೊಂಡು ಅಗ್ನಿ ಆರಿಸುವ ಯಂತ್ರದೊಂದಿಗೆ ಬೆಂಕಿ ಆರಿಸುವ ಮೂಲಕ ಮೆಚ್ಚುಗೆಗೆ ಸೆಳೆದಿದ್ದಾರೆ. ಬಿಗ್ ಬಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಮುನ್ನಡೆಸುತ್ತಿದ್ದಾರೆ. ಇದರಂತೆ ಲಾನ್ಸೆಸ್ಟನ್ ಪಂದ್ಯದ ಪೂರ್ವಭಾವಿಯಾಗಿ ಸಂಭವಿಸಿತ್ತು. ಗ್ಲೆನ್ ಮ್ಯಾಕ್ಸ್‌ವೆಲ್ ಸಹ ಆಟಗಾರನಾಗಿರುವ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಅನುಭವಿ ವೇಗದ ಬೌಲರ್ ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್, ಈ ವೀಡಿಯೋವನ್ನು ಹಂಚಿದ್ದಾರೆ. ಬಳಿಕ ಈ ವೀಡಿಯೋವನ್ನು ಬಿಬಿಎಲ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. 2019ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಸ್ಟೇನ್, ಇದೀಗ ಆಯ್ದ ಟ್ವೆಂಟಿ-20 ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 360 ಡಿಗ್ರಿ ಖ್ಯಾತಿಯ ಎಬಿಡಿ ವಿಲಿಯರ್ಸ್ ಜತೆ ಹೋಲಿಸಿದ್ದರು. ಒಟ್ಟಾರೆಯಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಿರುವುದು ಸಾಮಾಜಿಕ ಜಾಲಜಾಣಗಳಲ್ಲಿ ಅಭಿಮಾನಿಗಳಿಂದಲೂ ವ್ಯಾಪಕ ಮನ್ನಣೆಗೆ ಪಾತ್ರವಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾನಸಿಕ ಆರೋಗ್ಯತೊಂದರೆಯನ್ನು ಎದುರಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅನಿರ್ದಿಷ್ಟಾವಧಿಯ ವಿರಾಮ ತೆಗೆದುಕೊಂಡಿದ್ದರು. ಮ್ಯಾಕ್ಸ್‌ವೆಲ್ ಈ ನಿರ್ಧಾರವನ್ನು ಕ್ರಿಕೆಟ್ ಪ್ರೇಮಿಗಳು ಸ್ವಾಗತಿಸಿದ್ದರು. ಇದೀಗ ಬಿಬಿಎಲ್‌ನಲ್ಲಿ ಕಮ್‌ಬ್ಯಾಕ್ ಮಾಡಿರುವ ಮ್ಯಾಕ್ಸ್‌ವೆಲ್ ಆಸೀಸ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಮರಳುವ ಇರಾದೆಯಲ್ಲಿದ್ದಾರೆ. ಈ ಮಧ್ಯೆ ಐಪಿಎಲ್ 13ನೇ ಆವೃತ್ತಿಯ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾಗಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2F47Dk3

ನೈಟ್‌ ಶಿಫ್ಟ್‌ ಮಹಿಳೆಯರಿಗೆ ರಕ್ಷಣೆ: ಕಾಯದೆ ತಿದ್ದುಪಡಿ ಶೀಘ್ರ

ಬೆಂಗಳೂರು: ವಾಣಿಜ್ಯ ಮಳಿಗೆಗಳಲ್ಲಿರಾತ್ರಿ ಪಾಳಿಯಲ್ಲಿಕೆಲಸ ಮಾಡುವ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕಾಯಿದೆಗೆ ತಿದ್ದುಪಡಿ ತರಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ''ಸಂಸ್ಥೆ, ಕಂಪನಿಯವರು ಸುರಕ್ಷತೆ ನೀಡಬೇಕು. ಮನೆಯಿಂದ ಕೆಲಸದ ಸ್ಥಳ, ಕೆಲಸದ ಸ್ಥಳದಿಂದ ಮನೆಗೆ ತೆರಳಲು ಕಡ್ಡಾಯವಾಗಿ ವಾಹನದ ವ್ಯವಸ್ಥೆ ಮಾಡಬೇಕು. ಈ ವಾಹನಗಳಿಗೆ ಜಿಪಿಎಸ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಅಳವಡಿಸಬೇಕು. ಕಂಪನಿಯ ಸೆಕ್ಯೂರಿಟಿ ಗಾರ್ಡ್‌ಗಳೂ ಇರಬೇಕು. ವಾಹನ ಚಾಲಕರ ಸ್ವ ವಿವರ ಕಂಪನಿ ಬಳಿಯಿರಬೇಕು. ಮಹಿಳಾ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲಿಸೂಕ್ತ ವಿಶ್ರಾಂತಿ ಕೊಠಡಿ, ಶೌಚಾಲಯಧಿವಿರಬೇಕು. ಮಹಿಳಾ ಸಿಬ್ಬಂದಿಯ ಮೊಬೈಲ್‌ ನಂಬರ್‌, ಇಮೇಲ್‌ ವಿಳಾಸವನ್ನು ಬೇರೆಯಧಿವರ ಜತೆಗೆ ಹಂಚಿಕೊಳ್ಳಧಿಬಾರದು. ಈ ಷರತ್ತುಗಳನ್ನು ಉಲ್ಲಂಘಿಸುವ ಸಂಸ್ಥೆಗಳ ನೋಂದಣಿ ರದ್ದು ಪಡಿಸುವ ಅಂಶವನ್ನು ವಿಧೇಯಕದಲ್ಲಿಸೇರಿಸಲಾಗಿದೆ,''ಎಂದರು. ಲಾ ಸ್ಕೂಲ್‌ನಲ್ಲಿ ಮೀಸಲು ಪಬ್ಲಿಕ್‌ ಯುಟಿಲಿಟಿ ಸವೀರ್ಸ್‌ಗೆ ಸಂಬಂಧಿಸಿದ ಕೈಗಾರಿಕೆಗಳ ಪರವಾನಗಿಯನ್ನು 6 ತಿಂಗಳಿಗೊಮ್ಮೆ ನವೀಕರಿಸುವ ಬದಲು 3 ವರ್ಷಕ್ಕೊಮ್ಮೆ ಈ ಪ್ರಕ್ರಿಯೆ ಮಾಡಲು ತೀರ್ಮಾನಿಸಿದ್ದು, ಈ ಸಂಬಂಧ ತಿದ್ದುಪಡಿ ವಿಧೇಯಕ ಮಂಡಿಸಲಾಗುವುದು. ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ಕರ್ನಾಟಕದಲ್ಲಿಕನಿಷ್ಠ 10 ವರ್ಷ ವ್ಯಾಸಂಗ ಮಾಡಿದವರಿಗೆ ಶೇ.25ರಷ್ಟು ಸೀಟು ಮೀಸಲಿಡುವ ಬಗ್ಗೆಯೂ ವಿಧೇಯಕ ಮಂಡಿಸಲಾಗುವುದು.


from India & World News in Kannada | VK Polls https://ift.tt/37fXkW6

ದೇಶಾದ್ಯಂತ ಸಂಭ್ರಮದ ರಾಮೋತ್ಸವಕ್ಕೆ ವಿಎಚ್‌ಪಿ ತೀರ್ಮಾನ

2023ರಿಂದ ಟೆಸ್ಟ್‌ ಪಂದ್ಯ ನಾಲ್ಕೇ ದಿನ: ಐಸಿಸಿ ಚಿಂತನೆ

ಮೆಲ್ಬೋರ್ನ್‌: ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು 5ರಿಂದ ನಾಲ್ಕು ದಿನಕ್ಕೆ ಇಳಿಸುವ ಹೊಸ ಯೋಜನೆಯೊಂದನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಪ್ರಸ್ತಾಪಿಸಿದ್ದು, 2023ರಿಂದ ಜಾರಿಗೆ ಬರಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ಈ ಉಪಕ್ರಮ ಜಾರಿಯಾಗಲಿದ್ದು, ಬಿಡುವಿಲ್ಲದ ಕ್ರಿಕೆಟ್‌ಗೊಂದು ಪರಿಹಾರ ಸೂಚಿಸುವ ಇರಾದೆಯಿದೆ. 2023ರಿಂದ ಆರಂಭಗೊಂಡು 2031ರ ಅವಧಿಗೆ ಟೆಸ್ಟ್‌ ಪಂದ್ಯವನ್ನು ಸಂಕ್ಷಿಪ್ತ­ಗೊಳಿಸುವ ಉದ್ದೇಶ ಮುಂದಿದೆ. ದೀರ್ಘ ಅವಧಿಯ ಕ್ರಿಕೆಟ್‌ಗೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆಯುವುದು ಕೂಡ ಇದರ ಮತ್ತೊಂದು ಉದ್ದೇಶ ಎಂದು ಹೇಳಲಾಗಿದೆ. ಕ್ರಿಕೆಟ್‌ ಕ್ಯಾಲೆಂಡರ್‌ ವರ್ಷದಲ್ಲಿ ಹೆಚ್ಚು ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಕ್ರಿಕೆಟ್‌ ಲೋಕದ ದೈತ್ಯ ಸಂಸ್ಥೆಯಾಗಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಯೋಜನೆ ರೂಪಿಸುತ್ತಲೇ ಇದೆ. ಇದೀಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ನಾಲ್ಕು ಬಲಿಷ್ಠ ತಂಡಗಳನ್ನು ಒಳಗೊಂಡಿರುವ 'ಸೂಪರ್‌ ಸೀರಿಸ್‌' ನಡೆಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಐದು ದಿನಗಳ ಪಂದ್ಯವು ಆಡಳಿತ ಮಂಡಳಿಗೆ ವೆಚ್ಚದಾಯಕ ಎನ್ನುವ ಅಭಿಪ್ರಾಯವೂ ಇದೆ. ಭಾರತದಲ್ಲಿ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ಪಡೆಯುವ ರಾಜ್ಯ ಸಂಸ್ಥೆಗಳಿಗೆ ದಿನ ಲೆಕ್ಕದಲ್ಲಿ ಪಂದ್ಯದ ವೆಚ್ಚವನ್ನು ಅನುದಾನ ರೂಪದಲ್ಲಿ ಬಿಸಿಸಿಐ ಕೊಡುತ್ತದೆ. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿಈ ವೆಚ್ಚ ಅಧಿಕವಾಗಿರುವ ಮಾತುಗಳು ಕೇಳಿ ಬಂದಿದ್ದವು. ಈ ಹಿಂದೆಯೂ ನಡೆದಿತ್ತು: ಪ್ರಸಕ್ತ ವರ್ಷದ ಆರಂಭದಲ್ಲಿಇಂಗ್ಲೆಂಡ್‌ ಹಾಗೂ ಐರ್ಲೆಂಡ್‌ ನಡುವೆ ನಾಲ್ಕು ದಿನಗಳ ಟೆಸ್ಟ್‌ ಪಂದ್ಯ ನಡೆದಿತ್ತು. ಜತೆಗೆ 2017ರಲ್ಲಿದಕ್ಷಿಣ ಆಫ್ರಿಕಾ ಹಾಗೂ ಜಿಂಬಾಂಬ್ವೆ ನಡುವೆಯೂ ಒಂದು ಪಂದ್ಯ ಆಯೋಜಿಸಲಾಗಿತ್ತು. ಹೇಗೆ ಲಾಭ?: ಒಂದು ವೇಳೆ 2015­ ರಿಂದಲೇ ನಾಲ್ಕು ದಿನದ ಟೆಸ್ಟ್‌ ನಡೆಸಿದ್ದರೆ ಇದುವರೆಗೆ ನಡೆದಿರುವ ಒಟ್ಟು 335 ಟೆಸ್ಟ್‌ ಪಂದ್ಯಗಳಲ್ಲಿ335 ದಿನಗಳನ್ನು ಉಳಿಸಲು ಸಾಧ್ಯವಾಗುತ್ತಿತ್ತು. ಪ್ರೇಕ್ಷಕರ ಹೆಚ್ಚಳದ ಉದ್ದೇಶ: ಕಳೆದ ಎರಡು ದಶಕಗಳಲ್ಲಿದೀರ್ಘ ಅವಧಿಯ ಕ್ರಿಕೆಟ್‌ ಕಡೆಗೆ ಜನರ ಆಕರ್ಷಣೆ ಕಡಿಮೆ­ಯಾಗುತ್ತಿದೆ ಎನ್ನುವ ಆರೋಪಗಳಿವೆ. ಸೀಮಿತ ಓವರ್‌ಗಳ ಒಡಿಐ ಹಾಗೂ ಟಿ20 ಕಡೆಗೆ ಜನರು ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಟೆಸ್ಟ್‌ನೆಡೆಗೂ ಜನರ ಗಮನ ಸೆಳೆಯಲು ನಾನಾ ಯೋಜನೆ­ಗಳನ್ನು ಕೈಗೊಳ್ಳಲಾಗುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2rL8lzE

'ಹೆಬ್ಬೆಟ್ಟು' ನೀಡದಿದ್ರೆ ಪಡಿತರ ಕಟ್‌ ! : 2020 ಫೆಬ್ರವರಿಗೆ ಅಂತಿಮ ಗಡುವು

ನಾಗರಾಜ್‌ ನವೀಮನೆ ಮೈಸೂರು : ಮುಂದಿನ ಫೆಬ್ರವರಿ ತಿಂಗಳ ಅಂತ್ಯದೊಳಗೆ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಆಯಾ ಕೇಂದ್ರಗಳಿಗೆ ತೆರಳಿ ಹೆಬ್ಬೆಟ್ಟು ಗುರುತು ಸಂಗ್ರಹ ಮಾಡಿಸದಿದ್ದರೆ ನಿಮ್ಮ ಪಡಿತರ ಕಟ್‌ ಆಗಲಿದೆ! ರಾಜ್ಯ ಸರಕಾರ ಈಗಾಗಲೇ ಮೈಸೂರು ನಗರ ಸೇರಿದಂತೆ ಜಿಲ್ಲೆಯ 7,29,595 ಮಂದಿಗೆ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ನೀಡಿದ್ದು, ಅವರೆಲ್ಲರಿಗೂ ದವಸ ಧಾನ್ಯಗಳನ್ನು ನೀಡುತ್ತಿದೆ. ಈಗಾಗಲೇ ಅಂತರ್ಜಾಲದ ಮೂಲಕ ನೀಡಿ 7 ವರ್ಷ ಕಳೆದಿದ್ದು, ಪಡಿತರ ಚೀಟಿಯಲ್ಲಿನ ಗೊಂದಲ ನಿವಾರಿಸಲು ಹಾಗೂ ಪಡಿತರ ಚೀಟಿದಾರರು ಜೀವಂತವಾಗಿದ್ದಾರೆಯೇ? ಅವರ ಹೆಸರಿನಲ್ಲಿ ಬೇರೆಯವರು ಅಕ್ರಮವಾಗಿ ಪಡಿತರ ಪಡೆಯುತ್ತಿದ್ದಾರೆಯೇ? ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಮತ್ತೆ ಹೆಬ್ಬೆಟ್ಟು ಸಂಗ್ರಹಕ್ಕೆ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಈ ಪ್ರಕ್ರಿಯೆ ಜಾರಿಯಲ್ಲಿದ್ದು, ಫೆಬ್ರವರಿ ತಿಂಗಳ ಗಡುವು ನೀಡಲಾಗಿದೆ. ಒಂದು ಮನೆಯಲ್ಲಿ10, 5 ಇದ್ದೇವೆ ಎಂದು ಕಾರ್ಡ್‌ ಮಾಡಿಸಿಕೊಂಡವರ ನಿಜ ಸ್ಥಿತಿ ತಿಳಿಯಲು ಹೆಬ್ಬೆರಳು ಗುರುತು ಸಂಗ್ರಹ ನಡೆಸಲಾಗುತ್ತದೆ. 5 ಅಥವಾ 7 ವರ್ಷಕ್ಕೊಮ್ಮೆ ಇದು ನವೀಕರಣ ಆಗಬೇಕೆಂದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾಲಾವಕಾಶ ವಿಸ್ತರಣೆ: ಸದ್ಯ ಆನ್‌ಲೈನ್‌ ಮೂಲಕ ಪಡಿತರ ಚೀಟಿ ಪಡೆದಿರುವ ಕುಟುಂಬದ ಸದಸ್ಯರ ಆಧಾರ್‌ ಕಾರ್ಡ್‌ ಜೋಡಣೆ ಮಾಡಲಾಗಿದೆ. ಹೆಬ್ಬೆರಳು ಗುರುತು ಸಂಗ್ರಹಕ್ಕಾಗಿ ಬಯೋ ಮೆಟ್ರಿಕ್‌ ಪ್ರಕ್ರಿಯೆ ನಡೆದಿದೆ. ಇದಕ್ಕಾಗಿ ಡಿ.31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಕಡಿಮೆ ಸಮಯದಲ್ಲಿಜಿಲ್ಲೆಯ ಎಲ್ಲಾನಾಗರಿಕರ ಹೆಬ್ಬೆಟ್ಟು ಗುರುತು ಸಂಗ್ರಹ ನೀಡಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿಶೇ.35ರಷ್ಟು ಮಂದಿ ಮಾತ್ರ ಹೆಬ್ಬೆರಳು ಸಂಗ್ರಹವನ್ನು ಆಯಾ ಕೇಂದ್ರಗಳಲ್ಲಿಮಾಡಿಸಿದ್ದಾರೆ. ಶೇ.65ರಷ್ಟು ಮಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿಬಿಪಿಎಲ್‌ ಕಾರ್ಡುದಾರರು ಫೆಬ್ರವರಿ ತಿಂಗಳೊಳಗೆ ಹೆಬ್ಬೆಟ್ಟು ಸಂಗ್ರಹ ಕೊಡಲು ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಒಂದು ವೇಳೆ ಫೆಬ್ರವರಿ ಮುಗಿದ ನಂತರವೂ ಹೆಬ್ಬೆಟ್ಟು ಸಂಗ್ರಹಕ್ಕೆ ಕುಟುಂಬದ ಸದಸ್ಯರು ಮುಂದಾಗದಿದ್ದರೆ ಅವರಿಗೆ ನೀಡುತ್ತಿರುವ ಪಡಿತರ ನಿಲ್ಲಿಸುವ ಎಚ್ಚರಿಕೆಯನ್ನು ಆಹಾರ ಇಲಾಖೆ ನೀಡಿದೆ. ಕಾರ್ಡ್‌ ಹಿಂದಿರುಗಿಸಿ: ಇದೇ ವೇಳೆ ಜಿಲ್ಲೆಯಲ್ಲಿಅಕ್ರಮವಾಗಿ ಕೆಲವರು ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿದ್ದಾರೆ. ವಾರ್ಷಿಕ ವೇತನ ಹೆಚ್ಚಿದ್ದರೂ, ಕಾರು, ಸ್ವತಃ ಮನೆ ಇರುವವರು ಸುಳ್ಳು ದಾಖಲೆ ನೀಡಿ ಪ್ರತಿ ತಿಂಗಳು ಪಡಿತರ ಪಡೆಯುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿಅಕ್ರಮ ಪತ್ತೆ ಹಚ್ಚಲು ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮೂರು ಬಾರಿ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಜಗ್ಗದಿದ್ದರೆ ಅಕ್ರಮ ಕಾರ್ಡ್‌ಗಳನ್ನು ರದ್ದುಪಡಿಸಿ, ಇದುವರೆಗೂ ಪಡೆದ ಪಡಿತರಕ್ಕೆ ಬದಲು ಅವರಿಂದ ನಗದು ಸಂಗ್ರಹಿಸಲು ಆಲೋಚಿಸಿದೆ. ಕುಟುಂಬ ಸದಸ್ಯರ ಖಾತರಿ ಪ್ರಕ್ರಿಯೆಯೂ ಇದಕ್ಕೆ ಪೂರಕವಾಗಿದೆ. ಸರಕಾರಕ್ಕೆ ಪ್ರಸ್ತಾವ: ಇದೇ ವೇಳೆ ವೃದ್ಧರ ಬಗ್ಗೆ ವಿಶೇಷ ಗಮನ ನೀಡಲು ಆಹಾರ ಇಲಾಖೆ ಚಿಂತನೆ ನಡೆಸಿದೆ. 70 ವರ್ಷ ಮೀರಿರುವವರ ಹೆಬ್ಬೆಟ್ಟು ಬಯೋಮೆಟ್ರಿಕ್‌ ಗುರುತಿಸದೇ ಇದ್ದರೆ ಅವರಿಗೆ ವಿಶೇಷ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಆ ನಂತರ ಏನು ಮಾಡಬೇಕೆಂಬ ತೀರ್ಮಾನವನ್ನು ಸರಕಾರಕ್ಕೆ ಬಿಡಲಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ. ಯಾವ ಸಮಯದಲ್ಲಿಪಡಿತರ?: ಬಹುತೇಕರು ಮಧ್ಯಾಹ್ನ, ಸಂಜೆ ಅಂತ ಹೊತ್ತಲ್ಲದ ಸಮಯದಲ್ಲಿಪಡಿತರ ಪಡೆಯಲು ಹೋಗುತ್ತಾರೆ. ಆದರೆ, ನ್ಯಾಯಬೆಲೆ ಅಂಗಡಿ ಸಮಯ ಬೆಳಗ್ಗೆ 7ರಿಂದ 12 ಗಂಟೆ, ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಇರುತ್ತದೆ. ಪ್ರತಿ ಮಂಗಳವಾರ ರಜೆ ಇರುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಾದ ಶಿವಣ್ಣ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ. ಅಶಕ್ತರಿಗೆ ನೆರವು: ಅಶಕ್ತರು ಹಾಗೂ ವೃದ್ಧರು ಸರತಿ ಸಾಲಿನಲ್ಲಿನಿಂತು ಪಡಿತರ ಪಡೆಯಲು ಆಗುವುದಿಲ್ಲ. ಈ ನಿಟ್ಟಿನಲ್ಲಿಅಂತವರಿಗೂ ಅನುಕೂಲವಾಗುವ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಚಿಂತನೆ ನಡೆಸುತ್ತಿದೆ. ಜಿಲ್ಲೆಯಲ್ಲಿಬಿಪಿಎಲ್‌ ಕಾರ್ಡುದಾರರು- 7,08,000 ಎಪಿಎಲ್‌ ಕಾರ್ಡುದಾರರು- 21,595 ನ್ಯಾಯಬೆಲೆ ಅಂಗಡಿ- 1014 "ಇಲ್ಲಿಯವರೆಗೆ ಶೇ.35ರಷ್ಟು ಮಂದಿ ಮಾತ್ರ ಹೆಬ್ಬೆರಳು ಸಂಗ್ರಹ ಮಾಡಿದ್ದಾರೆ. ಫೆಬ್ರವರಿವರೆಗೂ ಕಾಲಾವಕಾಶವಿದೆ. ಆನಂತರವೂ ಮಾಡಿಸಿಕೊಳ್ಳದಿದ್ದರೆ ತಾತ್ಕಾಲಿಕವಾಗಿ ಪಡಿತರ ರದ್ದು ಮಾಡಲಾಗುವುದು. ಹೆಬ್ಬೆಟ್ಟು ಮಾಡಿದ ಮೇಲೆ ಪುನಃ ನೀಡಲಾಗುವುದು." -ಶಿವಣ್ಣ, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.


from India & World News in Kannada | VK Polls https://ift.tt/2MJJJhR

ಹೊಸ ವರ್ಷಾಚರಣೆ ಅಬ್ಬರ: ರಾಜ್ಯದೆಲ್ಲೆಡೆ ಪೊಲೀಸರ ಕಟ್ಟೆಚ್ಚರ

ಬೆಂಗಳೂರು: ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಎಲ್ಲೆಡೆ ಸಿದ್ಧತೆಗಳು ನಡೆದಿದ್ದು, ಯಾವುದೇ ಅಪಾಯಗಳು ಸಂಭವಿಸದಂತೆ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದೆ. ರಾಜಧಾನಿ ಸೇರಿದಂತೆ ಎಲ್ಲಪ್ರಮುಖ ನಗರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಗಿರಿಧಾಮಗಳು, ಪ್ರವಾಸಿ ತಾಣಗಳು, ರಕ್ಷಿತಾರಣ್ಯಗಳಲ್ಲಿ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದ್ದು, ರಾತ್ರಿ ಸಂಭ್ರಮಕ್ಕೆ ಬ್ರೇಕ್‌ ಹಾಕಲಾಗಿದೆ. ಡ್ರಂಕ್‌ ಆ್ಯಂಡ್‌ ಡ್ರೈವ್‌ಗೆ ಕಡಿವಾಣ: ಡಿ. 31ರ ರಾತ್ರಿ ಕುಡಿತದ ಮತ್ತಿನಲ್ಲಿ ವಾಹನ ಚಲಾಯಿಸಿ ಅವಘಡ ಉಂಟಾಗುವುದನ್ನು ತಡೆಯಲು ಈ ಬಾರಿ ತೀವ್ರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗವೂ ಸೇರಿ ಎಲ್ಲೆಡೆ ವಾಹನ ಚಾಲಕರನ್ನು ತಪಾಸಣೆಗೆ ಒಳಪಡಿಸಿ, ಮದ್ಯಪಾನ ಮಾಡಿದ್ದರೆ ಭಾರಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಕಿವಿಮಾತು
  • - ವರ್ಷಾಚರಣೆ ಸಂಭ್ರಮ ಹಿತಮಿತವಾಗಿರಲಿ
  • - ಮನೋಲ್ಲಾ ಸಗೊಳಿಸುವ ಕಾರ‍್ಯಕ್ರಮಗಳಿರಲಿ
  • - ಕುಡಿತ, ಮೋಜು ಮಿತಿ ಮೀರದಿರಲಿ
  • - ಕುಡಿದು ವಾಹನ ಚಲಾಯಿಸದಿರಿ
  • - ಪ್ರವಾಸಿ ತಾಣಗಳಲ್ಲಿ ಮೋಜು ಬೇಡ
ಬಂಡೀಪುರದಲ್ಲಿಮೋಜಿಗೆ ಬ್ರೇಕ್‌ ಚಾಮುಂಡಿ ಬೆಟ್ಟ, ನಂದಿ ಗಿರಿಧಾಮಕ್ಕೆ ರಾತ್ರಿ ಪ್ರವೇಶವಿಲ್ಲ ಕಡಲ ತೀರಗಳಲ್ಲೂರಾತ್ರಿ 12ರ ಬಳಿಕ ಉಳಿಯುವಂತಿಲ್ಲ.


from India & World News in Kannada | VK Polls https://ift.tt/2Q8G2EC

ವಿದ್ಯಾಪೀಠದಲ್ಲಿ 5 ಸ್ತರಗಳ ಕಲ್ಲಿನ ಭವ್ಯ ಬೃಂದಾವನ

ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ತಾತ್ಕಾಲಿಕವಾದ ಬೃಂದಾವನದ ಜಾಗದಲ್ಲಿ ಐದು ಸ್ತರಗಳ ಕಲ್ಲಿನ ಭವ್ಯ ಬೃಂದಾವನ ಪ್ರತಿಷ್ಠಾಪನೆಯಾಗಲಿದೆ. ವಿದ್ಯಾಪೀಠದಲ್ಲಿ ಸದ್ಯಕ್ಕೆ ತಾತ್ಕಾಲಿಕ ಬೃಂದಾವನ ಸ್ಥಾಪಿಸಲಾಗಿದೆ. ಶ್ರೀಗಳ ಪಾರ್ಥಿವ ಶರೀರ ಇರಿಸಿದ ಜಾಗದ ಮೇಲೆ ಮಣ್ಣು ಹಾಕಿ ಅದರ ಮೇಲೆ ಸಣ್ಣ ಕಲ್ಲಿನ ಬೃಂದಾವನ ಇರಿಸಲಾಗಿದೆ. ಅತಿ ಸಮೀಪ ಹೋಗದಂತೆ ಸುತ್ತಲೂ ಬೇಲಿ ಅಳವಡಿಸಲಾಗಿದೆ. ಮುಂಭಾಗದಲ್ಲಿ ಶ್ರೀಗಳ ಭಾವಚಿತ್ರ ಹಾಗೂ ದೀಪಗಳನ್ನು ಇರಿಸಲಾಗಿದೆ. ಇನ್ನು 12 ದಿನಗಳ ಕಾಲ ಭಜನೆ, ಪಾರಾಯಣ ಹಾಗೂ ವಿದ್ವಾಂಸರ ಗೋಷ್ಠಿಗಳು ನಡೆಯಲಿವೆ. ನಂತರ ಸುಂದರವಾದ ಕಲ್ಲಿನ ಬೃಂದಾವನ ಕೆತ್ತಿಸಿ ಪ್ರತಿಷ್ಠಾಪಿಸಲಾಗುತ್ತದೆ. ಇದು ಐದು ಸ್ತರಗಳನ್ನು ಹೊಂದಿರಲಿದೆ. ವಿದ್ಯಾಪೀಠದಲ್ಲಿಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ''ಗುರುಗಳಿಗೆ ರಾಜ್ಯ ಸರಕಾರ ಗೌರವ ಸಲ್ಲಿಸಿದೆ. ಗುರುಗಳಿಗೆ ಸಕಲ ಸರಕಾರಿ ಗೌರವ ನೀಡಿದ್ದಕ್ಕೆ ಅಕಾರಿಗಳೂ ಸೇರಿದಂತೆ ಇಡೀ ಸರಕಾರವನ್ನು ಅಭಿನಂದಿಸುತ್ತೇವೆ,'' ಎಂದರು. ಇದೇ ವೇಳೆ, ''ಶ್ರೀಗಳ ಕಾರ್ಯವನ್ನು ಮಠ ಮುಂದುವರಿಸಲಿದೆ,'' ಎಂದು ಹೇಳಿದರು. 13ನೇ ದಿನ ಅನ್ನ ಸಂತರ್ಪಣೆ: ವಿದ್ಯಾಪೀಠದ ವಿದ್ವಾಂಸ ಹರಿದಾಸ ಭಟ್‌ ಮಾತನಾಡಿ, ''12ನೇ ದಿನ ದ್ವಾದಶಮೂರ್ತಿ ಆರಾಧನೆ, 12 ವಿದ್ವಾಂಸರಿಂದ ವಿಶೇಷ ಆರಾಧನೆ ಮಾಡಲಾಗುವುದು. ಜಯನಗರದ ಸರಕಾರಿ ಆಸ್ಪತ್ರೆಯಲ್ಲಿಜನ ಸಾಮಾನ್ಯರಿಗೆ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮ ಏರ್ಪಡಿಸಲಾಗುವುದು. 13ನೇ ದಿನ ಶ್ರೀಗಳ ಸಂಕಲ್ಪ ನಡೆಯಲಿದೆ. ಶ್ರೀಗಳು ಹಿಂದುಳಿದ ವರ್ಗದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. 13 ನೇ ದಿನ ಬೆಂಗಳೂರಿನಲ್ಲಿಹಿಂದುಳಿದ ವರ್ಗದ ಜನರು ನೆಲೆಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಅನ್ನ ಸಂತರ್ಪಣೆ ಮಾಡಲಾಗುವುದು. ವಿದ್ಯಾಪೀಠದಲ್ಲಿಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುವುದು,'' ಎಂದು ಮಾಹಿತಿ ನೀಡಿದರು. ಸ್ವಯಂಪ್ರೇರಣೆಯಿಂದ ನೀಡಿ: ''ಕೂರ್ಮಾಸನದಿಂದ ಆರಂಭವಾಗಿ ಐದು ಸ್ತರಗಳನ್ನು ಹೊಂದಿರುವ ಶಿಲೆಯ ಬೃಂದಾವನ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಭಕ್ತರು ಬಂದು ದೀಪ ಹಚ್ಚಲು ನೆರವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮಠದಿಂದಲೇ ಈ ಅಭಿವೃದ್ ಕಾರ್ಯ ನಡೆಯಲಿದೆ. ಇದಕ್ಕಾಗಿ ಸರಕಾರ ಹಾಗೂ ಸಾರ್ವಜನಿಕರ ನೆರವನ್ನು ನಾವಾಗಿಯೇ ಕೇಳುವುದಿಲ್ಲ. ಸ್ವಯಂಪ್ರೇರಣೆಯಿಂದ ಸಹಾಯ ಮಾಡಿದರೆ ಬಳಸಿಕೊಳ್ಳುತ್ತೇವೆ,'' ಎಂದು ವಿದ್ಯಾಪೀಠದ ವಿದ್ವಾಂಸ ಹರಿದಾಸ ಭಟ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/35bCSnC

ಗಲ್ಲುಶಿಕ್ಷೆ ಪ್ರಶ್ನಿಸಿ ಮುಷರ್ರಫ್‌ ಸಲ್ಲಿಸಿದ್ದ ಅರ್ಜಿ ಹಿಂತಿರುಗಿಸಿದ ಲಾಹೋರ್‌ ಹೈಕೋರ್ಟ್‌

ಇಸ್ಲಾಮಾಬಾದ್‌: ತಮಗೆ ವಿಧಿಸಿರುವ ಗಲ್ಲುಶಿಕ್ಷೆ ಪ್ರಶ್ನಿಸಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಅವರು ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್‌ ಹೈಕೋರ್ಟ್‌ ಹಿಂದಿರುಗಿಸಿದೆ. ''ಚಳಿಗಾಲದ ರಜಾಕಾಲ ಇರುವುದರಿಂದ ಪೂರ್ಣ ನ್ಯಾಯಪೀಠ ಸದ್ಯಕ್ಕೆ ವಿಚಾರಣೆಗೆ ಲಭ್ಯವಿಲ್ಲ,'' ಎಂದು ಹೈಕೋರ್ಟ್‌ ಕಾರಣ ನೀಡಿ ಅರ್ಜಿಯನ್ನು ಮರಳಿಸಿದೆ. 86 ಪುಟಗಳ ಸುದೀರ್ಘ ಅರ್ಜಿ ಸಲ್ಲಿಸಿದ್ದ ಮುಷರ್ರಫ್‌ ಅವರು ತ್ರಿಸದಸ್ಯ ನ್ಯಾಯಪೀಠ ತಮಗೆ ವಿಧಿಸಿರುವ ಶಿಕ್ಷೆಯ ಮರುಪರಿಶೀಲನೆಗೆ ಆಗ್ರಹಿಸಿದ್ದರು. ಜತೆಗೆ ಹೊಸ ನ್ಯಾಯಪೀಠದಿಂದ ವಿಚಾರಣೆಗೆ ಮನವಿ ಮಾಡಿದ್ದರು. ಆದರೆ ಕೋರ್ಟ್‌ನ ರಿಜಿಸ್ಟ್ರಾರ್‌ ಅವರು ಅರ್ಜಿಯನ್ನು ಸ್ವೀಕರಿಸದೆ ಮುಷರ್ರಫ್‌ ಅವರ ವಕೀಲರಾದ ಅಝರ್‌ ಸಿದ್ದಿಕಿಗೆ ಅದನ್ನು ಹಿಂದುರಿಗಿಸಿದ್ದಾರೆ. ಜನವರಿ ತಿಂಗಳ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸುವಂತೆಯೂ ಸೂಚಿಸಿದ್ದಾರೆ. 2007ರಲ್ಲಿ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ತಿರುಚಿದ ಪ್ರಕರಣದಲ್ಲಿ ಡಿ.17ರಂದು ಲಾಹೋರ್‌ ಹೈಕೋರ್ಟ್‌ ಮುಷರ್ರಫ್‌ ಅವರು ಅಪರಾಧಿ ಎಂದು ಘೋಷಿಸಿ ಅವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. 2001ರಿಂದ 2008ರವರೆಗೆ ಅಧಿಕಾರದಲ್ಲಿದ್ದ ಮುಷರ್ರಫ್‌, ಕಂಡ ಅತಿ ದೀರ್ಘಾವಧಿಯ ಮಿಲಿಟರಿ ರೂಲರ್‌. 2008ರಲ್ಲಿಒಮ್ಮೆ ದೇಶದಿಂದ ಪರಾರಿಯಾಗಿದ್ದ ಅವರು 2013ರಲ್ಲಿ ಮರಳಿದ್ದರು. 2014ರಲ್ಲೇ ಇವರ ತಪ್ಪು ಕೋರ್ಟ್‌ ಮುಂದೆ ಸಾಕ್ಷ್ಯ ಸಹಿತ ರುಜುವಾತಾಗಿತ್ತು. ಆದರೆ ಶಿಕ್ಷೆ ಘೋಷಣೆಯಾಗಿರಲಿಲ್ಲ. ಬಹುಶಃ ಇಂಥದೊಂದು ಶಿಕ್ಷೆಯ ನಿರೀಕ್ಷೆಯಲ್ಲಿದ್ದ ಮುಷರ್ರಫ್‌, 2016ರಲ್ಲಿ ಚಿಕಿತ್ಸೆಯ ನೆವ ನೀಡಿ ದುಬೈಗೆ ಪರಾರಿಯಾಗಿದ್ದರು.


from India & World News in Kannada | VK Polls https://ift.tt/2Q9rKDC

ಐಪಿಎಲ್‌ನಲ್ಲಿ ವಿಶೇಷ ಬ್ಯಾಟ್‌ ಪ್ರಯೋಗ ಮಾಡಲಿರುವ ರಶೀದ್‌ ಖಾನ್‌!

ಮೆಲ್ಬೋರ್ನ್‌: ತಂಡದ ಸ್ಟಾರ್‌ ಆಟಗಾರ ಅಫಘಾನಿಸ್ತಾನದ ಲೆಗ್‌ಸ್ಪಿನ್ನರ್‌ , 13ನೇ ಆವೃತ್ತಿತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ವಿಶೇಷ ಬ್ಯಾಟ್‌ ಬಳಕೆ ಮಾಡುವ ಸುಳಿವು ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಟೂರ್ನಿಯಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಪರ ಆಡುತ್ತಿರುವ 21 ವರ್ಷದ ರಶೀದ್‌ ಖಾನ್‌, ಹಾಲಿ ಚಾಂಪಿಯನ್ಸ್‌ ಮೆಲ್ಬೋರ್ನ್‌ ರೆನೆಗೇಡ್ಸ್‌ ವಿರುದ್ಧದ ಪಂದ್ಯದಲ್ಲಿ ವಿಭಿನ್ನ ರೀತಿಯ ಬ್ಯಾಟ್‌ ಬಳಕೆ ಮಾಡಿ ಇಡೀ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದಾರೆ. ರಶೀದ್‌ ಖಾನ್‌ ಬಳಕೆ ಮಾಡಿದ ಈ ವಿಶೇಷ ಬ್ಯಾಟ್‌ನ ವಿನ್ಯಾಸವು ಒಂಟೆಯ ಬೆನ್ನಿನಂತಿದೆ. ಆದ್ದರಿಂದಲೇ ಇದನ್ನು ಎಂದೇ ಕರೆಯಲಾಗುತ್ತಿದೆ. ಕ್ರಿಕೆಟ್‌ ಆಸ್ಟ್ರೇಲಿಯಾ ತನ್ನ ಅಧಿಕೃತ ವೆಬ್‌ಸೈಟ್‌ ಮೂಲಕ ಈ ಕುರಿತಾಗಿ ಟ್ವೀಟ್‌ ಮಾಡಿದ್ದು, 'ಕ್ಯಾಮಲ್‌ ಬ್ಯಾಟ್‌' ಎಂದು ಹೆಸರಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಕ್ಯಾಮಲ್‌ ಬ್ಯಾಟ್‌ ಅನ್ನು ರ ಟೂರ್ನಿಗೆ ತರುವುದನ್ನು ಮರೆಯಬೇಡಿ ಎಂದು ರಶೀದ್‌ ಖಾನ್‌ಗೆ ಟ್ವೀಟ್‌ ಮಾಡಿದೆ. ಇದಕ್ಕೆ ಉತ್ತರಿಸಿರುವ ರಶೀದ್‌ ಖಂಡಿತವಾಗಿಯೂ ಈ ಬ್ಯಾಟ್‌ ಐಪಿಎಲ್‌ನಲ್ಲಿ ಇರಲಿದೆ ಎಂದಿದ್ದಾರೆ. ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಪರ ಆಲ್‌ರೌಂಡರ್‌ ಪ್ರದರ್ಶನ ನೀಡಿದ ರಶೀದ್‌ ಖಾನ್‌, ತಮ್ಮ ಕ್ಯಾಮಲ್‌ ಬ್ಯಾಟ್‌ ಮೂಲಕ 16 ಎಸೆತಗಳಲ್ಲಿ 25 ರನ್‌ ಚಚ್ಚಿದ್ದರು. ಇದರೊಂದಿಗೆ ಅಡಿಲೇಡ್‌ ತಂಡ 18 ಓವರ್‌ಗಳಲ್ಲಿ 6 ವಿಕೆಟ್‌ಗೆ 155 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.ಬಳಿಕ ಬೌಲಿಂಗ್‌ನಲ್ಲೂ ಅಷ್ಟೇ ಅದ್ಭುತ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನು ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿದರು. ರೆನೆಗೇಡ್ಸ್‌ ತಂಡ 18 ಓವರ್‌ಗಳಲ್ಲಿ 8 ವಿಕೆಟ್‌ಗೆ 137 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಯಿತು. ಇದರೊಂದಿಗೆ 4 ಪಂದ್ಯಗಳಿಂದ ಒಟ್ಟು 7 ಅಂಕಗಳನ್ನು ಗಳಿಸಿರುವ ಅಡಿಲೇಡ್‌ ಸ್ಟ್ರೈಕರ್ಸ್‌ ತಂಡ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದೆ. ಇದೇ ವೇಳೆ ಪಂದ್ಯದಲ್ಲಿ ಅಂಪೈರ್‌ ಭಾರಿ ವಿವಾದ ಸೃಷ್ಠಿಸಿದ್ದು, ಔಟ್‌ ನೀಡಲು ಮುಂದಾಗಿ ಇನ್ನೇನು ಕೈಬೆರಳನ್ನು ಮೇಲೆತ್ತುವ ಸಂದರ್ಭದಲ್ಲಿ ಮೂಗು ತುರಿಸಿಕೊಳ್ಳುವಂತೆ ನಟಿಸಿದರು. ಅಂಪೈರ್‌ನ ಈ ವರ್ತನೆ ವಿರುದ್ಧ ಎರಡೂ ತಂಡದವರು ಬೇಸರ ವ್ಯಕ್ತ ಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2QJmcPx

ಸಚಿವ ಸಂಪುಟ ಸಭೆ: ಕೆಪಿಎಸ್‌ಸಿ ಸಂದರ್ಶನ ರದ್ದು, ಜಂಟಿ ಅಧಿವೇಶನ ಫೆಬ್ರವರಿ 17ಕ್ಕೆ ಮುಂದೂಡಿಕೆ

ಬೆಂಗಳೂರು: ಕೆಪಿಎಸ್‌ಸಿಯ ಎ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಸಂದರ್ಶನವನ್ನು ರದ್ದು ಮಾಡುವ ಮಹತ್ತರ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಜನವರಿಯಲ್ಲಿ ಕರೆದಿದ್ದ ಅಧಿವೇಶನ ಫೆಬ್ರವರಿ 17ಕ್ಕೆ ಮುಂದೂಡಿಕೆಯಾಗಿದ್ದು, ಫೆಬ್ರವರಿ 21ರ ವರೆಗೆ ನಡೆಯಲಿದೆ. ರಾಜ್ಯ ಸಚಿವ ಸಂಪುಟ ಸಭೆ ಅಂತ್ಯಗೊಂಡ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಂಸದೀಯ ಸಚಿವ , ವಿಧಾನಸಭೆ ಜಂಟಿ ಅಧಿವೇಶನವು ಫೆಬ್ರವರಿ 17ರಿಂದ 21ರ ವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಫೆಬ್ರವರಿ 17ರಂದು ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಬಜೆಟ್‌ ಅಧಿವೇಶನ ಮಾರ್ಚ್‌ 2ರಿಂದ ಪ್ರಾರಂಭಗೊಳ್ಳಲಿದೆ. ಮಾರ್ಚ್‌ 5ರಂದು ರಾಜ್ಯ ಆಯವ್ಯಯ ಮಂಡನೆಯಾಗಲಿದೆ. ನವೆಂಬರ್‌ 3, 4 ಮತ್ತು 5ರಂದು ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಮಾಧುಸ್ವಾಮಿ ಹೇಳಿದರು. ಮುಖ್ಯಮಂತ್ರಿ ಅವರು ವಿದೇಶ ಪ್ರವಾಸ ಇರುವ ಕಾರಣ ಜಂಟಿ ಅಧಿವೇಶನವನ್ನು ಮುಂದೂಡಲಾಗಿದೆ ಎನ್ನಲಾಗಿದೆ.


from India & World News in Kannada | VK Polls https://ift.tt/2QuERyi

ಮಹಾಸಂಪುಟ ವಿಸ್ತರಣೆ: ಆದಿತ್ಯ ಠಾಕ್ರೆಗೆ ಮಂತ್ರಿ, ಅಜಿತ್ ಪವಾರ್‌ಗೆ ಡಿಸಿಎಂ ಪಟ್ಟ

ಮುಂಬೈ: ಮೈತ್ರಿ ಸರಕಾರದ ಸಂಪುಟ ವಿಸ್ತರಣೆಯಾಗಿದ್ದು ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಪ್ರಮಾಣವಚನ ಸ್ವೀಕಾರ ಮಾಡಿದರು. ಇಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಸೇನೆಯ ಆದಿತ್ಯ ಠಾಕ್ರೆ ಸೇರಿದಂತೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷದ ಒಟ್ಟು 34 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶಿವಸೇನೆಯ ಜೊತೆಗೆ ಎನ್‌ಸಿಪಿ ಹಾಗೂ ಕಾಂಗ್ರೆಸ್ ಸರಕಾರ ರಚನೆ ಮಾಡುವ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಅಜಿತ್ ಪವಾರ್ ರಾತ್ರೋ ರಾತ್ರಿ ಬಿಜೆಪಿ ಜೊತೆಗೆ ಕೈಜೋಡಿಸಿ ದೇವೇಂದ್ರ ಫಡ್ನವೀಸ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಅಜಿತ್ ಪವಾರ್ ರಾಜೀನಾಮೆ ಸಲ್ಲಿಸಿದ್ದರು. ಅಜಿತ್ ಪವಾರ್ ಈ ನಡೆ ಚರ್ಚೆಗೆ ಗ್ರಾಸವಾಗಿದ್ದರೂ ಬಳಿಕ ಪಕ್ಷದಲ್ಲಿ ಸಂಧಾನ ನಡೆದಿತ್ತು. ಇದೀಗ ಅಜಿತ್ ಪವಾರ್ ಅವರು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಅದರ ಜೊತೆಗೆ ಮಹಾರಾಷ್ಟ್ರ ಚುನಾವಣೆಯ ಸಂದರ್ಭದಲ್ಲಿ ಶಿವಸೇನೆಯ ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮೈತ್ರಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್‌ನಿಂದ, ಅಶೋಕ್ ಚೌಹಾನ್, ಅಮಿತ್ ದೇಶ್‌ಮುಖ್, ವರ್ಷಾ ಗಾಯಕ್‌ವಾಡ್ ಪ್ರಮಾಣವಚನ ಸ್ವೀಕರಿಸಿದರು. ಎನ್‌ಸಿಪಿಯಿಂದ ನವಾಬ್ ಮಲ್ಲಿಕ್, ದಿಲಿಪ್ ವಾಲ್ಸ್ ಪಾಟೀಲ್, ಧನಂಜಯ್ ಮುಂಡೆ, ಅನಿಲ್ ದೇಶ್‌ಮುಖ್, ಹಸನ್ ಮುಶ್ರಿಫ್ ಹಾಗೂ ಶಿವಸೇನೆಯಿಂದ ಅನಿಲ್ ಪರಬ್, ಸಂಜಯ್ ರಾಥೋಡ್, ಗುಲಾಬ್ ರಾವ್ ಪಾಟೀಲ್, ದಾದಾ ಬೋಸ್ಲೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.


from India & World News in Kannada | VK Polls https://ift.tt/2QbchmK

ವಿವಾದಕ್ಕೆ ಕಾರಣವಾಗಿದೆ ಪ್ರಿಯಾಂಕಾ ವಾದ್ರಾ ಮೇಲಿನ ಹಲ್ಲೆ ಆರೋಪ

ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಕೇರಳದಲ್ಲಿ 60 ಹರೆಯದ ಜೋಡಿಗಳ ಪ್ರೇಮ ವಿವಾಹ

ತ್ರಿಶೂರ್: ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಇದಕ್ಕೆ ಸಾಕ್ಷಿ 60 ರ ಪ್ರಾಯದಲ್ಲಿ ಜೋಡಿಯೊಂದು ಹಸೆಮಣೆ ಏರಿದ್ದಾರೆ. ಲಕ್ಷ್ಮೀ ಅಮ್ಮಾಳ್‌ (65) ಹಾಗೂ ಕೊಚನಿಯಾನ್‌ ಮೆನನ್‌ (67) ಮದುವೆಯಾದ ವೃದ್ಧ ಜೋಡಿಗಳು. ಕೇರಳದ ನ ಲಕ್ಷ್ಮೀ ಅಮ್ಮಾಳ್ 21 ವರ್ಷಗಳ ಹಿಂದೆಯೇ ತಮ್ಮ ಪತಿ ಲಕ್ಷ್ಮೀ ಪತಿಯನ್ನು ಕಳೆದುಕೊಂಡಿದ್ದರು. ಅಮ್ಮಾಳ್ ಅವರ ಪತಿ ಬಳಿ ಕೊಚನಿಯಾನ್ ಅಡುಗೆ ಸಹಾಯಕರಾಗಿದ್ದರಿಂದ ಪರಸ್ಪರ ಪರಿಚಯವಿತ್ತು. ಲಕ್ಷ್ಮೀ ಪತಿ ಮೃತಪಟ್ಟ ಬಳಿಕ ಅಮ್ಮಾಳ್ ಸೇರಿಕೊಂಡಿದ್ದರು. ಇದಾದ ಬಳಿಕ ಮೆನನ್ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯವಾಗಿದ್ದ ಕೊಚನಿಯನ್ ಸ್ವಯಂಸೇವಾ ಸಂಸ್ಥೆಯೊಂದು ನೆರವಿಗೆ ಬಂದು ವೃದ್ದಾಶ್ರಮ ಸೇರಿದರು. ಬಳಿಕ ತ್ರಿಶೂರ್ ಜಿಲ್ಲೆಯ ರಾಮವರ್ಮಪುರಂನಲ್ಲಿರುವ ವೃದ್ಧಾಶ್ರಮದಲ್ಲಿ ಪರಸ್ಪರ ಮೊದಲಿಗೆ ಇಬ್ಬರು ಭೇಟಿಯಾದರು. ಮೊದಲೇ ಪರಿಚಯ ಇದ್ದುದರಿಂದ ಇಬ್ಬರ ನಡುವೆ ಸಲುವೆ ಹೆಚ್ಚಿತು. ಅದು ಪ್ರೀತಿಯಾಗಿ ಮಾರ್ಪಾಡಾಯ್ತು. ಇದು ಇತರರಿಗೆ ತಿಳಿದು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದರು. ಕೇರಳದ ವೃದ್ದಾಶ್ರಮದಲ್ಲಿ ಇದೇ ಮೊದಲಿಗೆ ನಡೆದ ವಿವಾಹವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಭಿನಂದನೆಯ ಸಂದೇಶಗಳು ಹರಿದುಬರುತ್ತಿವೆ.


from India & World News in Kannada | VK Polls https://ift.tt/354OoBj

ಸಿಎಎ ಪೌರತ್ವ ನೀಡುತ್ತದೆಯೇ ಹೊರತು ಯಾರ ಪೌರತ್ವವನ್ನೂ ಕಿತ್ತುಕೊಳ್ಳುವುದಿಲ್ಲ: ಪ್ರಧಾನಿ ಸ್ಪಷ್ಟನೆ

ಹೊಸದಿಲ್ಲಿ: (ಸಿಎಎ) ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಆಶ್ರಯ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಇನ್ನು, ಹೊಸ ಶಾಸನವನ್ನು ಬೆಂಬಲಿಸುವ ಸಲುವಾಗಿ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಆರಂಭಿಸಿದ್ದಾರೆ. ಬಿಜೆಪಿ ಸಹ ಸಿಎಎ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳುಗಳನ್ನು ನಂಬಬೇಡಿ. ಸತ್ಯ ಹರಡಿ ಎಂದು ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿತ್ತು. ಸಿಎಎ ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಪ್ರಧಾನಿ ಟ್ವೀಟ್ ನಲ್ಲಿ ಪ್ರತಿಪಾದಿಸಿದ್ದಾರೆ. #IndiaSupportsCAA (ಭಾರತ ಸಿಎಎಯನ್ನು ಬೆಂಬಲಿಸುತ್ತದೆ). ಏಕೆಂದರೆ ಸಿಎಎ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ನೀಡುತ್ತದೆಯೇ ಹೊರತು ಯಾರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಈ ಸಂಬಂಧದ ಗ್ರಾಫಿಕ್ಸ್, ವೀಡಿಯೊಗಳು ಮತ್ತು ಹೆಚ್ಚಿನವುಗಳಿಗಾಗಿ ನಮೋ ಅಪ್ಲಿಕೇಶನ್‌ನಲ್ಲಿ ಸ್ವಯಂಸೇವಕ ಮಾಡ್ಯೂಲ್‌ನ ನಿಮ್ಮ ಧ್ವನಿ ವಿಭಾಗದಲ್ಲಿ ಈ ಹ್ಯಾಶ್‌ಟ್ಯಾಗ್ ಪರಿಶೀಲಿಸಿ. ಸಿಎಎಗೆ ನಿಮ್ಮ ಬೆಂಬಲವನ್ನು ಹಂಚಿಕೊಳ್ಳಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ನಾಂದಿ ಹಾಡಿದ ಕಾನೂನಿಗೆ ತಮ್ಮ ಬೆಂಬಲವನ್ನು ತೋರಿಸಲು ಸಹ ನಮೋ ಅಪ್ಲಿಕೇಶನ್‌ನಿಂದ ವಿಷಯ, ಗ್ರಾಫಿಕ್ಸ್ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಜನರನ್ನು ಪ್ರಧಾನಿ ಮೋದಿ ಕೇಳಿದ್ದಾರೆ. ಅಲ್ಲದೆ, ಸದ್ಗುರು ಮಾತನಾಡಿರುವ ವಿಡಿಯೋವೊಂದನ್ನು ಟ್ವೀಟ್‌ ಮಾಡಿರುವ ಪ್ರಧಾನಿ, ಸಿಎಎಗೆ ಸಂಬಂಧಿಸಿದ ಅಂಶಗಳ ಈ ಸ್ಪಷ್ಟ ವಿವರಣೆಯನ್ನು ತಪ್ಪದೆ ಕೇಳಿ ಎಂದೂ ಹೇಳಿದ್ದಾರೆ. ಪ್ರಧಾನಿ ಮೋದಿಗೂ ಮೊದಲು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸುವ ಸಲುವಾಗಿ ಟ್ವೀಟ್‌ ಮಾಡಿದ್ದ ಬಿಜೆಪಿ "ಸತ್ಯವನ್ನು ಹರಡಿ ಸುಳ್ಳನ್ನಲ್ಲ" ಎಂಬ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಿದೆ. ಮತ್ತು ಸರಣಿ ಟ್ವೀಟ್‌ಗಳಲ್ಲಿ, ಸಿಎಎಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು, ಅನುಮಾನಗಳನ್ನು ಬಗೆಹರಿಸಿದೆ. ನೂತನ ಕಾನೂನು ವಿದೇಶಿ ನಿವಾಸಿಗಳಿಗೆ ಪೌರತ್ವ ನೀಡುವ ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳನ್ನು ಬದಲಾಯಿಸುವುದಿಲ್ಲ. ಸಿಎಎ 1985 ರ ಅಸ್ಸಾಂ ಒಪ್ಪಂದವನ್ನು ದುರ್ಬಲಗೊಳಿಸುತ್ತದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಬಿಜೆಪಿ, ಇದು ಅಸ್ಸಾಮಿಯರ ಸಂಸ್ಕೃತಿ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈಶಾನ್ಯ ಜನರ ಭಾಷಾ, ಸಾಂಸ್ಕೃತಿಕ ಮತ್ತು ಸಾಮಾಜಿಕ ಗುರುತಿಗೆ ಅಪಾಯವಿಲ್ಲ. ಆರ್ಟಿಕಲ್ 371 ರ ಯಾವುದೇ ನಿಬಂಧನೆಯನ್ನು ಉಲ್ಲಂಘಿಸಲಾಗುವುದಿಲ್ಲ" ಎಂದು ಪಕ್ಷ ಸರಣಿ ಟ್ವೀಟ್‌ಗಳ ಮೂಲಕ ತಿಳಿಸಿದೆ.


from India & World News in Kannada | VK Polls https://ift.tt/2ZC4fX1

ಬಿಹಾರದಲ್ಲೊಂದು ವಿಚಿತ್ರ..! ಹೆಣ್ಣು ಕೊಟ್ಟ ಅತ್ತೆಯನ್ನೇ ಪ್ರೀತಿಸಿ ಓಡಿಸಿಕೊಂಡು ಹೋದ ಅಳಿಮಯ್ಯ..!

ಪಟ್ನಾ (): ಅತ್ತೆ ನಮ್ಮತ್ತೆ ನಾನ್ ದಡ್ಡ ಅಂತೆ ನೋಡತ್ತೆ ಅನ್ನೋ ಜನಪದ ಗೀತೆಯನ್ನು ನೀವು ಕೇಳಿರಬಹುದು. ಈ ಗೀತೆಯ ಕೊನೆಯಲ್ಲಿ ದೊಡ್‌ ಮಗಳು ಬೇಕೋ ನನ್ನಳಿಯಾ, ನಿಂಗೆ ಚಿಕ್ಕ ಮಗಳು ಬೇಕೋ ನನ್ನಳಿಯ ಅನ್ನೋ ಸಾಲು ಬರುತ್ತೆ. ಆಗ ದೊಡ್ಡ ಮಗಳೂ ಬೇಡ, ಚಿಕ್ಕ ಮಗಳೂ ಬೇಡ ನೀನೇ ಸಾಕು ಬಿಡತ್ತೆ ಅಂತಾ ಹೇಳುವ ಸಖತ್ತಾಗಿ ಒದೆ ತಿಂತಾನೆ. ಅಂತಾದ್ದೇ ಒಂದು ಘಟನೆ ಇದೀಗ ಬಿಹಾರದಲ್ಲಿ ನಡೆದಿದೆ. ಇಲ್ಲಿ ಅಳಿಮಯ್ಯ ಅತ್ತೆಯಿಂದ ಒದೆ ತಿನ್ನುವ ಬದಲು ಆಕೆಯ ಜೊತೆಗೇ ಓಡಿ ಹೋಗಿದ್ದಾನೆ..! ಬಿಹಾರ ರಾಜ್ಯದ ಭಗಲ್‌ಪುರ ಜಿಲ್ಲೆಯ ಚೋಟಿ ಧನ್‌ಕರ್ ಎಂಬ ಗ್ರಾಮದ ನೇಹಾ ಎಂಬ ಯುವತಿ ಜೊತೆಗೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಯೋಗೇಂದ್ರ ಎಂಬಾತನ ವಿವಾಹ ನಡೆದಿತ್ತು. ಆದ್ರೆ, ಮದ್ವೆಯಾದ ಒಂದೇ ತಿಂಗಳಲ್ಲಿ ಆತ ತನ್ನ ಪತ್ನಿಯ ತಾಯಿಯ ಜೊತೆಯಲ್ಲೇ ಲವ್ವಿ ಡವ್ವಿ ಶುರುವಿಟ್ಟಿದ್ದಾನೆ! ಯೋಗೇಂದ್ರನಿಗೆ 23 ವರ್ಷ. ಆತನ ಅತ್ತೆಗೆ 35 ವರ್ಷ. ಅದ್ಯಾವ ಮಾಯದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆಯೇ ಇದೀಗ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಘಟನೆಯಿಂದ ಶಾಕ್‌ಗೆ ಒಳಗಾದ ಯೋಗೇಂದ್ರನ ಮಾವ, ಮರ್ಯಾದೆಗೆ ಅಂಜಿ ಆರಂಭದಲ್ಲಿ ಯಾರಿಗೂ ಹೇಳದೆ ಕದ್ದುಮುಚ್ಚಿ ತಾನೇ ಹುಡುಕಾಟ ನಡೆಸಿದ್ದಾನೆ. ಆದ್ರೆ, ಅಳಿಯ ಹಾಗೂ ಪತ್ನಿ ಸಿಗದೆ ಕಂಗಾಲಾಗಿ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಮೂರು ಮಕ್ಕಳ ತಾಯಿಯಾಗಿರುವ ತನ್ನ ಪತ್ನಿಯನ್ನು ತನ್ನ ಅಳಿಯನೇ ಓಡಿಸಿಕೊಂಡು ಹೋಗಿದ್ಧಾನೆ ಎಂದು ದೂರಿನಲ್ಲಿ ತಿಳಿಸಿದ್ದಾನೆ. ಪತ್ನಿಯನ್ನ ಆಕೆಯ ತವರಿಗೆ ಬಿಡಲು ಆಗಾಗ ಬರುತ್ತಿದ್ದ ಅಳಿಮಯ್ಯ, ಅತ್ತೆಯನ್ನೇ ಪ್ರೀತಿಸಿ ಓಡಿಸಿಕೊಂಡು ಹೋಗಿರುವ ಸಂಗತಿ ಇದೀಗ ಬಿಹಾರ ರಾಜ್ಯದಾದ್ಯಂತ ಭಾರೀ ತಮಾಷೆಯ ಸುದ್ದಿಯಾಗಿ ಹರಡುತ್ತಿದೆ. ಪೊಲೀಸರಿಗೂ ಈ ಪ್ರಕರಣ ದೊಡ್ಡ ತಲೆನೋವಾಗಿದೆ. ಉತ್ತರ ಪ್ರದೇಶದ ತನ್ನ ಸ್ವಂತ ಊರಿಗೂ ಅಳಿಮಯ್ಯ ಹೋಗಿಲ್ಲ. ಹಾಗಾದ್ರೆ ಎಲ್ಲಿಗೆ ಹೋಗಿದ್ದಾನೆ ಎಂದು ಪೊಲೀಸರು ಇಡೀ ಉತ್ತರ ಭಾರತದಾದ್ಯಂತ ಹುಡುಕಾಟ ನಡೆಸ್ತಿದ್ದಾರೆ. ಈ ಘಟನೆಯನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎನ್ನುತ್ತಾರೆ ಯೋಗೇಂದ್ರನ ಮಾವ ಮೇದಿ ಮಂಡಲ್. ತನ್ನ ತಾಯಿಯಂಥಾ ಅತ್ತೆಯ ಜೊತೆಗೇ ಅಳಿಯ ಓಡಿ ಹೋಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಸಮಾಜದಲ್ಲಿ ಇಂಥಾ ಘಟನೆಗಳು ನಡೆದರೆ ಸಂಬಂಧಗಳನ್ನು ನಂಬೋದಾದ್ರೂ ಹೇಗೆ ಅನ್ನೋದು ಅವರ ಪ್ರಶ್ನೆ.


from India & World News in Kannada | VK Polls https://ift.tt/2u4DtLd

ಪಂಟರ್‌ ಪ್ರಕಟಿಸಿದ ದಶಕದ ಟೆಸ್ಟ್‌ ತಂಡದಲ್ಲಿ ಒಬ್ಬ ಭಾರತೀಯನಿಗಷ್ಟೇ ಸ್ಥಾನ!

ಬೆಂಗಳೂರು: ವರ್ಷದ ಅಂತ್ಯಕ್ಕೆ ಅದರಲ್ಲೂ ದಶಕದ ಅಂತ್ಯವಾಗಿರುವ ಕಾರಣ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರೆಲ್ಲಾ ತಮ್ಮ ನೆಚ್ಚಿನ ಟೆಸ್ಟ್‌ ತಂಡಗಳನ್ನು ಪ್ರಕಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ತವೇನು ಹಿಂದೆ ಬಿದ್ದಿಲ್ಲ ಎಂಬಂತೆ ತಂಡದ ಮಾಜಿ ನಾಯಕ ಕೂಡ ಕಳೆದ ಹತ್ತು ವರ್ಷಗಳಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಿಂಚು ಮೂಡಿಸಿದ 11 ಶ್ರೇಷ್ಠ ಆಟಗಾರರ ತಂಡವನ್ನು ತಮ್ಮ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಅಂದಹಾಗೆ ಪಂಟರ್‌ ಖ್ಯಾತಿಯ ಪಾಂಟಿಂಗ್ ಪ್ರಕಟಿಸಿದ ತಂಡದಲ್ಲಿ ಕೇವಲ ಒಬ್ಬ ಭಾರತೀಯ ಆಟಗಾರ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಪಾಂಟಿಂಗ್ ಟೆಸ್ಟ್‌ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ಕು ಮಂದಿ ಆಟಗಾರರು ಸ್ಥಾನ ಗಿಟ್ಟಿಸಿದ್ದಾರೆ. ಅಂತಯೇ ಆರಂಭಕಾರನಾಗಿ ಅಲಸ್ಟೇರ್‌ ಕುಕ್‌ ಮತ್ತು ಡೇವಿಡ್‌ ವಾರ್ನರ್‌ ಕಾಣಿಸಿಕೊಂಡರೆ, ನಂ.3 ಮತ್ತು ನಂ.4 ಸ್ಥಾನ ಟೆಸ್ಟ್‌ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆನಿಸಿರುವ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ ಮತ್ತು ಆಸೀಸ್‌ನ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಪಾಲಾಗಿದೆ. ಈ ದಶಕದಲ್ಲಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತಲೂ 5000ಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿ ಅಕ್ಷರಶಃ ಅಧಿಕಾರಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ನಾಯಕ , ರಿಕಿ ಪಾಂಟಿಂಗ್‌ ಪ್ರಕಟಿಸಿದ ದಶಕದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದ ಏಕಮಾತ್ರ ಭಾರತೀಯ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಪಂಟರ್‌ ಪಡೆಯಲ್ಲಿ ಭಾರತದ ಒಬ್ಬ ಆಟಗಾರ ಮಾತ್ರ ಕಾಣಿಸಿಕೊಂಡರೂ ಆತನಿಗೆ ನಾಯಕನ ಪಟ್ಟ ದೊರೆತಿರುವುದು ವಿಶೇಷ. ಶ್ರೀಲಂಕಾದ ಮಾಜಿ ನಾಯಕ ಹಾಗೂ ಸಾರ್ವಕಾಲಿಕ ಶ್ರೇಷ್ಠ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವ ಕುಮಾರ ಸಂಗಕ್ಕಾರ 6ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡರೆ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಏಕಮಾತ್ರ ಆಲ್‌ರೌಂಡರ್‌ ಆಗಿ ತಂಡದಲ್ಲಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ವೇಗಿಗಳಾಗಿ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ ಮತ್ತು ಜೇಮ್ಸ್‌ ಆಂಡರ್ಸನ್‌ ಇದ್ದರೆ, ಏಕಮಾತ್ರ ಸ್ಪಿನ್ನರ್‌ ಆಗಿ ಆಸ್ಟ್ರೇಲಿಯಾದ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಅಂದಹಾಗೆ ಪಾಂಟಿಂಗ್‌ ತಮ್ಮ ಟೆಸ್ಟ್‌ ತಂಡದಲ್ಲಿ ಈ ದಶಕದ ಅತ್ಯುತ್ತಮ ವಿಕೆಟ್‌ಕೀಪರ್‌ ಎನಿಸಿದ ನ್ಯೂಜಿಲೆಂಡ್‌ನ ಬಿಜೆ ವ್ಯಾಟ್ಲಿಂಗ್‌ಗೆ ಸಂಗಕ್ಕಾರ ಬದಲಾಗಿ ಸ್ಥಾನ ನೀಡಬಹುದಿತ್ತು. ಜೊತೆಗೆ ಈ ದಶಕದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಆಗಿರುವ ಆರ್‌. ಅಶ್ವಿನ್‌ ಅವರನ್ನು ನೇಥನ್‌ ಲಯಾನ್‌ ಅವರ ಬದಲಾಗಿ ಆಯ್ಕೆ ಮಾಡಬಹುದಿತ್ತು. ಇನ್ನು ಕಳೆದ ನಾಲ್ಕು ವರ್ಷಗಳಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ನಂ.1 ಸ್ಥಾನದಲ್ಲಿ ಇದ್ದರು ಕೂಡ ಕೇವಲ ಒಬ್ಬ ಆಟಗಾರನನ್ನು ಮಾತ್ರವೇ ತಮ್ಮ ದಶಕದ ಟೆಸ್ಟ್‌ ತಂಡದಲ್ಲಿ ಆಯ್ಕೆ ಮಾಡಿದ್ದು ಭಾರತೀಯ ಅಭಿಮಾನಿಗಳಿಗೆ ಕೊಂಚ ಬೇಸರ ತಂದಿದೆ. ರಿಕಿ ಪಾಂಟಿಂಗ್‌ ಪ್ರಕಟಿಸಿದ ದಶಕದ ಟೆಸ್ಟ್‌ ತಂಡ ಹೀಗಿದೆ ಅಲಸ್ಟೇರ್‌ ಕುಕ್, ಡೇವಿಡ್‌ ವಾರ್ನರ್‌, ಕೇನ್‌ ವಿಲಿಯಮ್ಸನ್‌, ಸ್ಟೀವ್‌ ಸ್ಮಿತ್‌, ವಿರಾಟ್‌ ಕೊಹ್ಲಿ (ನಾಯಕ), ಕುಮಾರ ಸಂಗಕ್ಕಾರ (ವಿಕೆಟ್‌ಕೀಪರ್‌), ಬೆನ್‌ ಸ್ಟೋಕ್ಸ್‌, ಡೇಲ್‌ ಸ್ಟೇನ್‌, ನೇಥನ್‌ ಲಯಾನ್‌, ಸ್ಟುವರ್ಟ್‌ ಬ್ರಾಡ್‌, ಜೇಮ್ಸ್‌ ಆಂಡರ್ಸನ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZI0Ea0

ಗಮನದಲ್ಲಿರಲಿ: ಜನವರಿಯಲ್ಲಿ ಬ್ಯಾಂಕ್‌ಗಳಿಗಿದೆ 14 ದಿನ ರಜೆ!

ಬೆಂಗಳೂರು: ಬ್ಯಾಂಕ್‌ ನೌಕರರ ಪಾಲಿಗೆ ಹೊಸ ವರ್ಷ ಭರ್ಜರಿ ಹರ್ಷವನ್ನು ಹೊತ್ತು ತಂದಿದೆ. ವರ್ಷಾರಂಭದ ತಿಂಗಳಲ್ಲಿ ಹೆಚ್ಚೂಕಡಿಮೆ ಅರ್ಧ ತಿಂಗಳು ರಜೆ ಸಿಗಲಿದೆ. ಗ್ರಾಹಕರ ಪಾಲಿಗೆ ಜನವರಿ ತಿಂಗಳು ತಲೆನೋವಾಗುವ ಎಲ್ಲ ಲಕ್ಷಣಗಳು ಕಂಡುಬಂದಿವೆ. ಬ್ಯಾಂಕ್‌ ವ್ಯವಹಾರಕ್ಕೆ ಸಂಬಂಧಿಸಿ ಜನವರಿ ಅತ್ಯಂತ ಪ್ರಮುಖ ತಿಂಗಳು. ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಮತ್ತು ತೆರಿಗೆ ಕಟ್ಟುವವರಿಗೆ ಹೀಗೆ ಎಲ್ಲರಿಗೂ ಜನವರಿ ತಿಂಗಳು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಶಾಕಿಂಗ್‌ ವಿಚಾರವೆಂಬಂತೆ ಮೊದಲ ತಿಂಗಳು ಬರೋಬ್ಬರಿ 14 ರಜೆಗಳು ಇವೆ. ಹಾಗಾಗಿ ಇದನ್ನು ಅರಿತು ಜಾಣ್ಮೆಯಿಂದ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜಾ ದಿನಗಳ ಪಟ್ಟಿ 1 ಜನವರಿ - ಹೊಸ ವರ್ಷಾಚರಣೆ 2 ಜನವರಿ - ಬ್ಯಾಂಕ್‌ ರಜಾ ದಿನ (ಗುರು ಗೋವಿಂದ ಸಿಂಗ್‌ ಜನ್ಮ ದಿನ) 11 ಜನವರಿ - 2ನೇ ಶನಿವಾರ 14 ಜನವರಿ - ಮಕರ ಸಂಕ್ರಾಂತಿ 15 ಜನವರಿ - ಪೊಂಗಲ್‌ 16 ಜನವರಿ - ತಿರುವಳ್ಳುವರ್‌ ದಿನ (ಚೆನ್ನೈ) 17 ಜನವರಿ - ಉಜಾವರ್‌ ತಿರುನಾಳ್‌ 23 ಜನವರಿ - ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಜನ್ಮ ದಿನ 25 ಜನವರಿ - 4ನೇ ಶನಿವಾರ 30 ಜನರಿ - ಸರಸ್ವತಿ ಪೂಜಾ 6, 13, 20 ಮತ್ತು 27 ಜನವರಿ - ಭಾನುವಾರ ಸೂಚನೆ: ಕೆಲವು ಹಬ್ಬ/ಉತ್ಸವಗಳು ಆಯಾ ಪ್ರಾದೇಶಿಕ ರಾಜ್ಯಗಳ ಪ್ರಾಮುಖ್ಯತೆಗೆ ಅನುಗುಣವಾಗಿ ರಜೆ ಇರಲಿದೆ. 2020ರ ಬ್ಯಾಂಕ್‌ ರಜಾ ದಿನಗಳ ಪಟ್ಟಿ 1 ಜನವರಿ - ಹೊಸ ವರ್ಷಾಚರಣೆ 15 ಜನವರಿ - ಪೊಂಗಲ್‌ 26 ಜನವರಿ - ಗಣ ರಾಜ್ಯೋತ್ಸವ 30 ಜನವರಿ - ವಸಂತ ಪಂಚಮಿ 21 ಫೆಬ್ರವರಿ - ಮಹಾ ಶಿವರಾತ್ರಿ 10 ಮಾರ್ಚ್‌ - ಹೋಳಿ 25 ಮಾರ್ಚ್‌ - ಯುಗಾದಿ 2 ಏಪ್ರಿಲ್‌ - ರಾಮ ನವಮಿ 6 ಏಪ್ರಿಲ್‌ - ಮಹಾವೀರ ಜಯಂತಿ 10 ಏಪ್ರಿಲ್‌ - ಗುಡ್‌ ಫ್ರೈಡೇ 14 ಏಪ್ರಿಲ್‌ - ಅಂಬೇಡ್ಕರ್‌ ಜಯಂತಿ 1 ಮೇ - ಮೇ ಡೇ 7 ಮೇ - ಬುದ್ಧ ಪೂರ್ಣಿಮಾ 31 ಜುಲೈ - ಬಕ್ರಿದ್‌ 3 ಆಗಸ್ಟ್‌ - ರಕ್ಷಾ ಬಂಧನ 11 ಆಗಸ್ಟ್‌ - ಕೃಷ್ಣ ಜನ್ಮಾಷ್ಟಮಿ 30 ಆಗಸ್ಟ್‌ - ಮುಹರಂ 2 ಅಕ್ಟೋಬರ್‌ - ಗಾಂಧಿ ಜಯಂತಿ 26 ಅಕ್ಟೋಬರ್‌ - ವಿಜಯ ದಶಮಿ 30 ಅಕ್ಟೋಬರ್‌ - ಈದ್‌ ಮಿಲಾದ್‌ 14 ನವೆಂಬರ್‌ - ದೀಪಾವಳಿ 16 ನವೆಂಬರ್‌ - ಭಾಯಿ ದೂಜ್‌ 30 ನವೆಂಬರ್‌ - ಗುರು ನಾನಕ್‌ ಜಯಂತಿ 25 ಡಿಸೆಂಬರ್‌ - ಕ್ರಿಸ್ಮಸ್‌ ಸೂಚನೆ: 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರದ ರಜಾ ದಿನಗಳು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.


from India & World News in Kannada | VK Polls https://ift.tt/3571uy5

ಇದೇ ಮೊದಲ ಬಾರಿಗೆ ಕಾಶ್ಮೀರ ಕಣಿವೆಯಲ್ಲಿ ಹೊರಗಿನವರಿಗೆ ಉದ್ಯೋಗ ಅವಕಾಶ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಆರ್ಟಿಕಲ್‌ 370 ಮತ್ತು 35ಎ ತೆರವುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಹೊರಗಿನವರಿಗೆ ಉದ್ಯೋಗಾವಕಾಶ ಕಲ್ಸಿಸಿದೆ. ಖಾಲಿಯಿರುವ 33 ಸರಕಾರಿ ಹುದ್ದೆಗಳಿಗೆ (ಗೆಜೆಟೆಡ್‌ ಅಲ್ಲದ) ಆಹ್ವಾನಿಸಿದ್ದು, ಕಾಶ್ಮೀರ ಮತ್ತು ಲಡಾಖ್‌ನ ಶಾಶ್ವತ ನಿವಾಸಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದವರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಟೆನೋಗ್ರಾಫರ್‌ಗಳು, ಬೆರಳಚ್ಚು ತಜ್ಞರು ಮತ್ತು ಚಾಲಕರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆ ಪ್ರಕ್ರಿಯೆಯು ಮೀಸಲು ನೀತಿ, 2005ರ ಪ್ರಕಾರ ನಡೆಯಲಿದೆ. ಶಾಶ್ವತ ನಿವಾಸಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಈ ನೀತಿ ಹೇಳುತ್ತದೆ. 33 ಹುದ್ದೆಗಳ ಪೈಕಿ 17 ಓಪನ್‌ ಮೆರಿಟ್‌ ಕೆಟಗರಿಗೆ ಸೇರ್ಪಡೆಗೊಂಡಿದ್ದು ಜಮ್ಮು ಮತ್ತು ಕಾಶ್ಮೀರದ ಹೊರಗಿನವರು ಅರ್ಜಿ ಸಲ್ಲಿಸಬಹುದು. ಕಾಶ್ಮೀರದ ನಿವಾಸಿಗಳಿಗೆ ಕೆಲವು ವಿನಾಯಿತಿ ನೀಡಬೇಕು ಎಂದು ಸ್ಥಳೀಯ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದೆ. 15 ರಿಂದ 20 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದವರಿಗೆ ಶಾಶ್ವತ ನಿವಾಸಿ ಎಂಬ ಸಾಮಾಜಿಕ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಕೇಂದ್ರ ಸರಕಾರ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಕ್ಕೆ ನೀಡಲಾಗಿರುವ ಮೀಸಲಾತಿ ಜೊತೆಗೆ ಶಾಶ್ವತ ಕಾಶ್ಮೀರಿಗರಿಗೂ ಮೀಸಲಾತಿ ಕಲ್ಪಿಸುವ ಭರವಸೆ ಇದೆ ಎಂದು ಜಮ್ಮುವಿನ ಬಿಜೆಪಿ ಯೂನಿಟ್‌ ತಿಳಿಸಿದೆ.


from India & World News in Kannada | VK Polls https://ift.tt/39lgxaG

ಮಗಳು 'ಆರತಿ' ಮಾಡಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ್ದ ಪಾಕ್ ಮಾಜಿ ನಾಯಕ ಶಾಹೀದ್ ಆಫ್ರಿದಿ

ಹೊಸದಿಲ್ಲಿ: ಹಿಂದೂ ಕ್ರಿಕೆಟಿಗ ಎಂಬ ಕಾರಣಕ್ಕೆ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಮೇಲೆ ಕೆಲವೊಂದು ಆಟಗಾರರು ತಾರತಮ್ಯ ತೋರುತ್ತಿದ್ದರು ಎಂಬ ಮಾಹಿತಿಯನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದರು. ಇದು ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿವಾದಕ್ಕೆ ಕಿಚ್ಚು ಹೊತ್ತಿಸಲು ಕಾರಣವಾಗಿತ್ತು. ಇದಾದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ನಾಯಕ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡುತ್ತಿದೆ. ಖಾಸಗಿ ಸಂದರ್ಶನವೊಂದರ ವೇಳೆಯಲ್ಲಿ ಭಾರತೀಯ ಸಂಪ್ರದಾಯವನ್ನು ಶಾಹೀದ್ ಆಫ್ರಿದಿ ಅಣಕಿಸುತ್ತಿರುವುದು ಬಯಲಾಗಿದೆ. ಮಗಳು ಭಾರತೀಯ ಸಂಪ್ರದಾಯದಂತೆ ಮಾಡುತ್ತಿರುವುದನ್ನು ಗಮನಿಸಿದ ಶಾಹೀದ್ ಆಫ್ರಿದಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಹಿಂದೂ ಸಂಪ್ರದಾಯವನ್ನು ಹೀಯಾಳಿಸಿದ್ದಾರೆ. ನೀವು ಎಂದಾದರೂ ಟಿವಿ ಒಡೆದಿದ್ದೀರಾ ಎಂಬ ನಿರೂಪಕಿಯ ಪ್ರಶ್ನೆಗೆ ಆಫ್ರಿದಿ, ಭಾರತೀಯ ಸಂಪ್ರದಾಯವನ್ನು ಅಣಕಿಸುತ್ತಾ ಉತ್ತರ ನೀಡುತ್ತಾರೆ. ನನ್ನ ಪತ್ನಿ ಪ್ರತಿ ನಿತ್ಯ ಧಾರವಾಹಿಗಳನ್ನು ನೋಡುತ್ತಿದ್ದರು. ಮಕ್ಕಳೊಂದಿಗೆ ಅಲ್ಲದೆ ಒಬ್ಬರೇ ಕುಳಿತು ಟಿವಿ ನೋಡುವಂತೆ ಹೇಳಿದ್ದೆ. ಒಮ್ಮೆ ಕೋಣೆಯೊಳಗೆ ಬಂದಾಗ ನನ್ನ ಮಗಳು ಟಿವಿ ನೋಡಿಕೊಂಡು ಆರತಿ ಮಾಡುತ್ತಿದ್ದಳು. ಈ ವೇಳೆ ಕೋಪಗೊಂಡು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿದ್ದಾರೆ. ಶಾಹೀದ್ ಆಫ್ರಿದಿ ಹಿಂದೂ ಸಂಪ್ರದಾಯವನ್ನು ಅಣಕಿಸಿರುವುದು ದೃಶ್ಯದಲ್ಲಿ ಕಂಡುಬರುತ್ತದೆ. ಭಾರತೀಯರು ಅದೇನೋ ಮಾಡುತ್ತಾರಲ್ಲಯೇ, ತಟ್ಟೆ ಹಿಡಿದುಕೊಂಡು? ಹೀಗೆ ಹೀಗೆ ಮಾಡಿ ಅದೇನು ಅಂತಾರೆ? ಈ ವೇಳೆಯಲ್ಲಿ ನಿರೂಪಕಿ ಆರತಿ ಎಂದಾಗ ಹೌದು, ಹೀಗೆ ಹೀಗೆ ಮಾಡಿ ಟಿವಿ ಮುಂದೆ ನಿಂತಿದ್ದಳು. ನಾನು ಸಿಟ್ಟೆದ್ದು ಟಿವಿಯನ್ನು ಗೋಡೆಯೊಳಗೆ ಸೇರಿಸಿಬಿಟ್ಟೆ ಎಂದು ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Q8TEzS

ಅಕ್ಷರಶ: ರಣರಂಗವಾದ ಡಿಡಿಸಿಎ ಸಭೆ; ಸದಸ್ಯರ ಮಾರಾಮಾರಿ

ಹೊಸದಿಲ್ಲಿ: ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರಿ ಮಾರಾಮಾರಿ ನಡೆದಿದೆ. ಸದಸ್ಯರು ಬಹಿರಂಗವಾಗಿಯೇ ಕೈ ಕೈ ಮಿಲಾಯಿಸುವಷ್ಟು ಹದೆಗೆಟ್ಟ ಪರಿಸ್ಥಿತಿಗೆ ತಲುಪಿರುವುದರಿಂದ ಆದಷ್ಟು ಬೇಗನೇ ಸಂಸ್ಥೆಯನ್ನು ವಿಸರ್ಜಿಸುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಸಂಸದ , ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಕಳೆದ ದಿನ ನಡೆದ ಡಿಡಿಸಿಎ ವಾರ್ಷಿಕ ಸಭೆಯು ಅಕ್ಷರಶ: ರಣರಂಗವಾಯಿತು. ಸದಸ್ಯರು ಬಹಿರಂಗವಾಗಿಯೇ ತೆೋಳ್ಬಲವನ್ನು ಪ್ರದರ್ಶಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಾಡಿಸಿತು. ಈ ಸಂಬಂಧ ವೀಡಿಯೋ ವೈರಲ್ ಆಗಿ ಹರಡುತ್ತಿದೆ. ಇದರ ವಿರುದ್ಧ ಸಿಡಿದೆದ್ದಿರುವ ಗೌತಮ್ ಗಂಭೀರ್, "ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು, ನಾನು ಈ ಸಂದರ್ಭದಲ್ಲಿ , ಸೌರವ್ ಗಂಗೂಲಿ ಹಾಗೂ ಜಯ್ ಶಾ ಅವರಲ್ಲಿ ದಿಲ್ಲಿ ಕ್ರಿಕೆಟ್ ಮಂಡಳಿಯನ್ನು ತುರ್ತಾಗಿ ವಿಸರ್ಜಿಸಲು ಬೇಡಿಕೊಳ್ಳುತ್ತೇನೆ. ಇದರಲ್ಲಿ ಭಾಗಿಯಾದ ಸದಸ್ಯರಿಗೆ ಆಜೀವ ನಿಷೇಧವಾಗಬೇಕು" ಎಂದು ಕೋರಿದರು. ಡಿಡಿಸಿಎ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎಲ್ಲ ನಿರ್ಣಯಗಳು ಮತ್ತು ಕಾರ್ಯಸೂಚಿಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದಿದೆ. ಆದರೆ ವೇದಿಕೆಯಲ್ಲಿ ನಡೆದಿದ್ದೇ ಬೇರೆ! ಎರಡು ಗುಂಪುಗಳ ನಡುವೆ ತೀವ್ರ ಮಾರಾಮಾರಿ ನಡೆದಿತ್ತು. ಮೂಲಗಳ ಪ್ರಕಾರ, ಆಡಳಿತ ಗುಂಪಿನ ಜಂಟಿ ಕಾರ್ಯದರ್ಶಿ ರಂಜನ್ ಮಂಚಂಡ ಮೇಲೆ ವಿರೋಧ ಗುಂಪಿನ ಮಕ್ಸೂದ್ ಅಲಾಂ ಹಲ್ಲೆ ಮಾಡಿದಾಗ ಇತ್ತ ಗುಂಪುಗಳ ಸದಸ್ಯರು ಮಾರಾಮಾರಿ ನಡೆಸಿದರು. ಮಗದೊಂದು ಮೂಲದ ಪ್ರಕಾರ ವಾರ್ಷಿಕ ಸಾಮಾನ್ಯ ಸಭೆಯನ್ನು ಪ್ರಧಾನ ಕಾರ್ಯದರ್ಶಿ ವಿನೋದ್ ತಿಹರಾ ಅವರ ಬೆಂಬಲಿಗರು ಅಡ್ಡಿಪಡಿಸಿದರು. ಪ್ರಸ್ತುತ ಘಟನೆಯು ದಿಲ್ಲಿ ಕ್ರಿಕೆಟ್‌ಗೆ ಕರಾಳ ದಿನವಾಗಿ ಪರಿಣಮಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/358Esqy

ಇಸ್ರೋ ಅಧ್ಯಕ್ಷ ಕೆ ಶಿವನ್‌ಗೆ ಸುವರ್ಣಶ್ರೀ ಪ್ರಶಸ್ತಿ

ಕೃಷ್ಣರಾಜಪುರ: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ಬಡ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷ ಣ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಮೆಚ್ಚುಗೆ ವ್ಯಕ್ತಪಡಿಸಿದರು. ವಿಭೂತಿಪುರ ಮಠದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಧರ್ಮ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಭಾರತೀಯ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ಕೆಲಸ ನಿರ್ವಹಿಸುತ್ತಿದೆ. ಅದೇ ಉದ್ದೇಶವಿರಿಸಿಕೊಂಡು ವಿಭೂತಿಪುರ ಮಠ ಕೂಡ ಕೆಲಸ ಮಾಡುತ್ತಿರುವುದು ದೇಶದ ಭವಿಷ್ಯಕ್ಕೆ ಉತ್ತಮ ಕೊಡುಗೆ,’’ ಎಂದು ಶ್ಲಾಘಿಸಿದರು. ಇದೇ ವೇಳೆ ಡಾ.ಶಿವನ್‌ ಅವರಿಗೆ ವಿಭೂತಿಪುರ ಮಠ ಕೊಡ ಮಾಡುವ 2019ನೇ ಸಾಲಿನ ಸುವರ್ಣ ಶ್ರೀ ಪ್ರಶಸ್ತಿಯನ್ನು ಶ್ರೀಮಠದ ಪೀಠಾಧಿಪತಿ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಶಿವನ್‌ ಅವರು ಪ್ರಶಸ್ತಿಯ ಮೊತ್ತ 50 ಸಾವಿರ ರೂಪಾಯಿಗಳನ್ನು ಶ್ರೀಮಠ ನಡೆಸುತ್ತಿರುವ ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸುವಂತೆ ಶ್ರೀಗಳಿಗೆ ಮರಳಿಸಿದರು. ಸಮಾರಂಭದಲ್ಲಿ ನಿವೃತ್ತ ಎಸಿಪಿ ಎಂ.ಬಿ.ಪಾಟೀಲ, ಪ್ರೊ.ಸಿದ್ಧಾನಂದ, ಡಾ.ಬಸವರಾಜ, ಡಾ.ಹನುಮಂತ ರಾಯಪ್ಪ, ಶ್ರೀಮಠದ ಕಾರ್ಯದರ್ಶಿ ಸಿ. ಬಸವರಾಜ ಮುಂತಾದವರು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/2tdTWMC

ಕೊನೆರು ಹಂಪಿ ಮುಡಿಗೆ ವಿಶ್ವ ಮುಕುಟ; ವಿಶ್ವ ಚಾಂಪಿಯನ್ ಪಟ್ಟ ಜಯಿಸಿದ ಭಾರತದ ಎರಡನೇ ಚೆಸ್ ಪಟು

ಮಾಸ್ಕೊ (ರಷ್ಯಾ): ಭಾರತದ ಪ್ರತಿಭಾನ್ವಿತ ಚೆಸ್‌ ತಾರೆ ಕೊನೆರು ಹಂಪಿ ಶನಿವಾರ ತಡರಾತ್ರಿ ಇಲ್ಲಿ ನಡೆದ ಕಿಂಗ್‌ ಸಲ್ಮಾನ್‌ ವಿಶ್ವ ಓಪನ್‌ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ಮ್ಯಾಗ್ನಸ್‌ ಕಾರ್ಲ್ಸನ್‌ ಮೂರನೇ ವಿಶ್ವ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಮುಕ್ತ ವಿಭಾಗದ ರ‍್ಯಾಪಿಡ್‌ ಸ್ಪರ್ಧೆಯಲ್ಲಿ ಭಾರತೀಯರು ಚಾಂಪಿಯನ್‌ ಪಟ್ಟಕ್ಕೇರಿದ್ದು ಇದು 2ನೇ ಬಾರಿ. ಇದಕ್ಕೂ ಮೊದಲು, ವಿಶ್ವನಾಥನ್‌ ಆನಂದ್‌ 2017ರಲ್ಲಿ ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದರು. 12 ಸುತ್ತುಗಳ ಹಣಾಹಣಿಯ ಪ್ರತಿ ಸುತ್ತಿನಲ್ಲಿ ತಲಾ 9 ಅಂಕ ಕಲೆಹಾಕಿದ 13ನೇ ಶ್ರೇಯಾಂಕಿತೆ ಹಂಪಿ ಚೀನಾದ ಲೀ ಟಿಂಗ್‌ಜೀ ಅವರೊಂದಿಗೆ ಟೈ (ಸಮಬಲ) ಮಾಡಿಕೊಂಡರು. ನಂತರ ಫಲಿತಾಂಶಕ್ಕಾಗಿ ನಡೆದ ಆರ್ಮಗೆಡಾನ್‌ ಗೇಮ್‌ನಲ್ಲಿ ಚೀನಾ ಆಟಗಾರ್ತಿ ಎದುರು ಭಾರತೀಯ ಆಟಗಾರ್ತಿ ಮೇಲುಗೈ ಸಾಧಿಸಿದರು. ಆರಂಭಿಕ ಪ್ಲೇಆಫ್‌ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಆಂಧ್ರಪ್ರದೇಶದ ಹಂಪಿ, ದ್ವಿತೀಯ ಗೇಮ್‌ನಲ್ಲಿತಿರುಗೇಟು ನೀಡಿದರು. ಬಳಿಕ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮತ್ತೊಮ್ಮೆ ಆಧಿಪತ್ಯ ಮೆರೆದು ಚೊಚ್ಚಲ ವಿಶ್ವ ಪ್ರಶಸ್ತಿಗೆ ಕೊರಳೊಡ್ಡಿದರು. 2016ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಯುಕ್ತ 2016ರಿಂದ 2018ರವರೆಗೆ ಸ್ಪರ್ಧಾ ಕಣದಿಂದ ದೂರ ಉಳಿದಿದ್ದ ಕೊನೆರು ಹಂಪಿ ಸ್ಪರ್ಧಾತ್ಮಕತೆಗೆ ಮರಳಿದ ಒಂದೇ ವರ್ಷದಲ್ಲಿ ಬಹು ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡರು. ''ಇದು ನನ್ನ ಮೊದಲ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ. ನಾನು ಹರ್ಷೋಲ್ಲಾಸಗೊಂಡಿದ್ದೇನೆ. ಮೊದಲ ಗೇಮ್‌ ಆರಂಭಿಸಿದಾಗ ಮೊದಲ ಸ್ಥಾನ ಗಳಿಸುತ್ತೇನೆಂದು ನಿರೀಕ್ಷಿಸಿರಲಿಲ್ಲ. ಅಗ್ರ ಮೂರರಲ್ಲೊಂದು ಸ್ಥಾನ ಗಳಿಸುತ್ತೇನೆಂದು ಭಾವಿಸಿದ್ದೆ. ಕೊನೆಗೂ ಮೊದಲಿಗಳಾದೆ,'' ಎಂದು ಹಂಪಿ ಹೇಳಿದರು. 12 ಸುತ್ತುಗಳ ಹೋರಾಟ ಹನ್ನೆರಡು ಸುತ್ತುಗಳ ರಾರ‍ಯಪಿಡ್‌ ಹಣಾಹಣಿಯಲ್ಲಿ ಹಂಪಿ, ದಾಖಲೆ ಎಂಬಂತೆ ಏಳರಲ್ಲಿ ಜಯ ಗಳಿಸಿದರು. ನಾಲ್ಕರಲ್ಲಿ ಡ್ರಾ ಹಾಗೂ 1ರಲ್ಲಿ(6ನೇ ಸುತ್ತು-ಇರಾನ್‌ನ ಐಎಂ ಬುಲ್ಮಾಗಾ ವಿರುದ್ಧ) ಸೋಲು ಕಂಡರು. ತಮಗಿಂತ ಕಡಿಮೆ ರಾರ‍ಯಂಕಿನ ಮಾರ್ಗರಿಟಾ ಪೊಟಪೊವಾ, ಖೊಮೆರಿಕಿ ನಿನೊ, ಕೊವಾಲೆವ್ಸಕಾಯಾ ಎಕಟೆರಿನಾ, ಗಿರಿ ಒಲ್ಗಾ ಮತ್ತು ವಯೆಟ್‌ ಡಾರಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ಆಟಗಾರ್ತಿ, ಎಂಟನೇ ಸುತ್ತಿನಲ್ಲಿ9ನೇ ರಾರ‍ಯಂಕಿನ ಗ್ರ್ಯಾಂಡ್‌ಮಾಸ್ಟರ್‌ ಡಾಗ್ನಿಡ್ಜ್‌ ನಾನಾ ಹಾಗೂ ಅಂತಿಮ ಸುತ್ತಿನಲ್ಲಿ ಟಾನ್‌ ಝಾಂಗಿ ಅವರಿಗೆ ಆಘಾತ ನೀಡಿದರು. ತಮಗಿಂತ ಕಡಿಮೆ ರಾರ‍ಯಂಕಿನ ಚಾರೊಚ್ಕಿನಾ ಡಾರಿಯಾ, ಲಗ್ನೊ ಕ್ಯಾಟರಿನಾ ಮತ್ತು ಅಟಾಲಿಕ್‌ ಎಕಾಟೆರಿನಾ ವಿರುದ್ಧ ಡ್ರಾ ಮಾಡಿಕೊಂಡರು. ಆರನೇ ಸುತ್ತಿನಲ್ಲಿಸೋತ ಬಳಿಕ ಏಳನೇ ಸುತ್ತಿನಲ್ಲಿಅಗ್ರ ಶ್ರೇಯಾಂಕಿತೆ ಮುಜಿಚಕ್‌ ಅನಾ ವಿರುದ್ಧ ಅಂಕ ಹಂಚಿಕೊಂಡರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZAqOv1

ವ್ಯವಸ್ಥೆ ವಿರುದ್ಧ ನನ್ನ ಹೋರಾಟ ಮೇರಿ ಕೋಮ್‌ ವಿರುದ್ಧ ಅಲ್ಲ: ನಿಖರ್ ಜರೀನ್

ಹೊಸದಿಲ್ಲಿ: ಆರು ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ವಿರುದ್ಧ ಶನಿವಾರ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ ಬಾಕ್ಸಿಂಗ್‌ ಟ್ರಯಲ್ಸ್‌ನಲ್ಲಿ ಸೋತ ಹೈದರಾಬಾದ್‌ ಮೂಲದ ಬಾಕ್ಸರ್‌ ನಿಖತ್‌ ಜರೀನ್‌ ಭಾನುವಾರ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ''ನನ್ನ ಹೋರಾಟ ವ್ಯವಸ್ಥೆ ವಿರುದ್ಧವೇ ಹೊರತು ಮೇರಿ ಕೋಮ್‌ ಅಥವಾ ಭಾರತೀಯ ಬಾಕ್ಸಿಂಗ್‌ ಒಕ್ಕೂಟದ ವಿರುದ್ಧವಾಗಿರಲಿಲ್ಲ,'' ಎಂದು ಹೇಳಿದ್ದಾರೆ. ''ಇಂತಹ ಸನ್ನಿವೇಶ ಸೃಷ್ಟಿಯಾಗಬಹುದು ಎಂದು ಅಂದುಕೊಂಡಿರಲಿಲ್ಲ. ಕ್ರೀಡಾ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಮೇರಿ ಕೋಮ್‌ ಅಷ್ಟೊಂದು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದೂ ಊಹಿಸಿರಲಿಲ್ಲ. ಅವರು ಎಲ್ಲವನ್ನೂ ವೈಯುಕ್ತಿವಾಗಿ ತೆಗೆದುಕೊಂಡಿದ್ದಾರೆ. ಅದು ಅವರ ಆಯ್ಕೆ. ನಾನು ಅದರ ಬಗ್ಗೆ ಏನೂ ಹೇಳಲಾರೆ. ಆದರೆ, ನನ್ನ ಹೋರಾಟ ನ್ಯಾಯಯುತವಾದ ಟ್ರಯಲ್ಸ್‌ ನಡೆಸುವ ಬಗ್ಗೆಯಾಗಿತ್ತು. ಸರಿಯಾಗಿ ಟ್ರಯಲ್ಸ್‌ ನಡೆಸಿದ ಬಳಿಕ ಆಯ್ಕೆ ಮಾಡಿ ಎಂದು ಒತ್ತಾಯಿಸುತ್ತಿದ್ದೆ. ನಾನು ಮೇರಿ ಕೋಮ್‌ ವಿರುದ್ಧ ಸೋತಿರಬಹುದು. ಆದರೆ ಹಲವರ ಹೃದಯ ಗೆದ್ದಿದ್ದೇನೆ. ತೆಲಂಗಾಣ ಬಾಕ್ಸಿಂಗ್‌ ಸಂಸ್ಥೆಯವರು ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಗೆ ದೂರು ನೀಡುವಂತೆ ತಿಳಿಸಿದರು. ಆದರೆ, ನಾನು ಟ್ರಯಲ್ಸ್‌ ಮುಗಿದ ಅಧ್ಯಾಯ ಎಂದು ಹೇಳಿದ್ದೇನೆ,'' ಎಂದರು. ಮುಂದಿನ ವರ್ಷ ಫೆಬ್ರವರಿಯಲ್ಲಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ ಹಣಾಹಣಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಮಹಿಳಾ ಬಾಕ್ಸರ್‌ ಆಯ್ಕೆಗಾಗಿ ಶನಿವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿಅರ್ಹತಾ ಟ್ರಯಲ್ಸ್‌ ಆಯೋಜಿಸಲಾಗಿತ್ತು. ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಅನುಭವಿ ಬಾಕ್ಸರ್‌ ಮೇರಿ ಕೋಮ್‌ ಜಯ ಗಳಿಸಿದ್ದಾರೆ. ಮೇರಿ ಕೋಮ್‌ ಮತ್ತು ನಿಖತ್‌ ಜರೀನ್‌ ನಡುವಣ 51 ಕೆ.ಜಿ ವಿಭಾಗದ ಅಂತಿಮ ಸುತ್ತಿನ ಸೆಣಸಾಟ ಆ ಜನ್ಮ ವೈರಿಗಳ ನಡುವಣ ಕಾದಾಟದಂತಿತ್ತು. ಕಳೆದ ಆರು ತಿಂಗಳಿಂದ ಸಾರ್ವಜನಿಕವಾಗಿ ಪರಸ್ಪರ ವಾಕ್ಸಮರ ನಡೆಸುತ್ತಾ ಬಂದಿದ್ದ ಆರು ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಹಾಗೂ ಜೂನಿಯರ್‌ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌ ಶನಿವಾರ ಬಾಕ್ಸಿಂಗ್‌ ರಿಂಗ್‌ನಲ್ಲಿ ಸ್ಪರ್ಧಿಗಳಂತೆ ಕಾಣಲಿಲ್ಲ. ಸಾಮ್ರಾಜ್ಯ ಸ್ಥಾಪಿಸಲು ಹೊರಟ ವೀರ ವನಿತೆಯರಂತೆ ಕಂಡುಬಂದರು. ಬಾಕ್ಸಿಂಗ್‌ ಅಖಾಡ ಅಕ್ಷರಶಃ ರಣಾಂಗಣವಾಗಿ ಮಾರ್ಪಟ್ಟಿತು. ಯುದ್ಧದಲ್ಲಿಅಪಾರ ಅನುಭವಿ ಮೇರಿ ಕೈ ಮೇಲಾಯಿತು. ಜರೀನ್‌ 1-9 ಅಂಕಗಳ ಭಾರೀ ಅಂತರದಿಂದ ಸೋತು ನಿರಾಸೆಯಿಂದ ಅಖಾಡದಿಂದ ನಿರ್ಗಮಿಸಿದರು. ಈ ಗೆಲುವಿನೊಂದಿಗೆ ಚೀನಾ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನಲ್ಲಿ ಕಾದಾಡುವ ಅರ್ಹತೆಯನ್ನು ಮೇರಿ ಕೋಮ್‌ ತಮ್ಮದಾಗಿಸಿಕೊಂಡರು. ಭಾರತೀಯ ಬಾಕ್ಸಿಂಗ್‌ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಶನಿವಾರ ಅರ್ಹತಾ ಸುತ್ತಿನ ಸ್ಪರ್ಧೆಯ ವೇಳೆ ರಿಂಗ್‌ನ ಒಳಗೆ ಹಾಗೂ ಹೊರಗೆ ದೊಡ್ಡ ಮಟ್ಟದ ವಾಕ್ಸಮರ ನಡೆಯಿತು. ಫಲಿತಾಂಶದ ಬಳಿಕ ಹೈದರಾಬಾದ್‌ ಮೂಲದ ನಿಖತ್‌ ಜರೀನ್‌ ಅವರ ತಂಡದ ಸಿಬ್ಬಂದಿ ಅಳುವುದೊಂದೇ ಬಾಕಿಯಿತ್ತು. ಮಾತಿನ ಸಮರ, ಕಚ್ಚಾಟ, ಪರಸ್ಪರ ದೂಷಣೆ, ಪ್ರತಿಧಿಭಟನೆ ಎಲ್ಲವೂ ನಡೆಯಿತು. ಮೇರಿ ಕೋಮ್‌ ಎದುರಾಳಿ ಜರೀನ್‌ ಅವರನ್ನು ಮನಸೋಇಚ್ಛೆ ಹೀಗಳೆದರು. ತುಚ್ಛವಾಗಿ ಕಂಡರು. ಕೋಮ್‌ ಅವರ ವರ್ತನೆ ಬಗ್ಗೆ ಜರೀನ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಗಳ ಬಿಡಿಸಿದ ಅಜಯ್‌ ಸಿಂಗ್‌ ಮೇರಿ ಕೋಮ್‌ ಪಂದ್ಯ ಗೆದ್ದ ಬಳಿಕ ರಿಂಗ್‌ನ ಹೊರಗೂ ಜರೀನ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದರು. ಇದನ್ನು ವಿರೋಧಿಸಿ ತೆಲಂಗಾಣ ಬಾಕ್ಸಿಂಗ್‌ ಸಮಿತಿಯ ಪ್ರತಿನಿಧಿ ಎ.ಪಿ. ರೆಡ್ಡಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಬಾಕ್ಸಿಂಗ್‌ ಫೆಡರೇಷನ್‌ ಅಧ್ಯಕ್ಷ ಅಜಯ್‌ ಸಿಂಗ್‌ ಮಧ್ಯಪ್ರವೇಶ ಮಾಡಿ ಎಲ್ಲಧಿರನ್ನೂ ಸಮಾಧಾನಗೊಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37lLb1P

ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಕೊಲೆಗೆ ಸ್ಕೆಚ್‌; ಅಡ್ಮಿನ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

ಬೆಂಗಳೂರು: ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬರ ಕೊಲೆ ಬಗ್ಗೆ ಚರ್ಚಿಸುತ್ತಾ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದ ಮೇರೆಗೆ ಗ್ರೂಪ್‌ ಅಡ್ಮಿನ್‌ ಮತ್ತು ಸದಸ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಠಾಣೆ ಇನ್ಸ್‌ಪೆಕ್ಟರ್‌ ಮೊಹಮದ್‌ ಮುಖ್ರಮ್‌ ಅವರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕೊಲೆ ಬಗ್ಗೆ ಚರ್ಚೆ ನಡೆಸಿದ ಗ್ರೂಪ್‌ ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ಸ್‌ಪೆಕ್ಟರ್‌ ಮುಕ್ರಮ್‌ ಅವರ ವಾಟ್ಸಾಪ್‌ಗೆ ಬಂದ ಕೆಲವೊಂದು ಧ್ವನಿ ಮುದ್ರಿಕೆಗಳು ಹಾಗೂ ಸ್ಕ್ರೀನ್‌ ಶಾಟ್‌ಗಳಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. 'ಸುಬೇದಾರ್ಸ್‌' ಹೆಸರಿನ ವಾಟ್ಸಾಪ್‌ ಗ್ರೂಪಿನಲ್ಲಿ ಈ ಕೊಲೆ ಚರ್ಚೆ ನಡೆದಿದ್ದು, ಈ ಗ್ರೂಪಿನ ಅಡ್ಮಿನ್‌ ಮತ್ತು ಸದಸ್ಯರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನಲ್ಲಿಏನಿದೆ?ಡಿ.25ರ ಮಧ್ಯಾಹ್ನ ಇನ್ಸ್‌ಪೆಕ್ಟರ್‌ ಮುಖ್ರಮ್‌ ಅವರ ವಾಟ್ಸ್‌ಆ್ಯಪ್‌ಗೆ ಕೆಲವೊಂದು ಸಂದೇಶಗಳು ಬಂದಿದ್ದವು. ಮಾಹಿತಿದಾರರ ಮೂಲಕ ಬಂದ ಧ್ವನಿ ಮುದ್ರಿಕೆ ಸಂದೇಶ ಹಾಗೂ ಸ್ಕ್ರೀನ್‌ ಶಾಟ್‌ಗಳಲ್ಲಿ'ಸುಬೇದಾರ್ಸ್' ಎನ್ನುವ ವಾಟ್ಸ್‌ಆ್ಯಪ್‌ ಗ್ರೂಪಿನದ್ದಾಗಿದ್ದವು. ಯಶವಂತಪುರ ಠಾಣೆ ವ್ಯಾಪ್ತಿಯ ಸುಬೇದಾರ್‌ಪಾಳ್ಯದ ಯುವಕರು ಮಾಡಿಕೊಂಡಿದ್ದ ಈ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಕೆಲವರನ್ನು ಕೊಲೆ ಮಾಡಬೇಕು ಎನ್ನುವ ಅರ್ಥದಲ್ಲಿ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಸಾರ್ವಜನಿಕರಲ್ಲಿ ಭಯ, ಭೀತಿ ಹುಟ್ಟಿಸಲು ಸಂಚು ರೂಪಿಸುತ್ತಿರುವುದು ಕಂಡು ಬಂದಿತು. ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವ ಮತ್ತು ಚರ್ಚಿಸಿರುವ ಕಾರಣದಿಂದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಚ್ಚರಿಕೆ ಬಳಿಕ ಕ್ರಮ: ಸಾಮಾಜಿಕ ತಾಣಗಳನ್ನು ಶಾಂತಿ ಕದಡಲು, ಸುಳ್ಳು ಸುದ್ದಿ ಹರಡಲು, ದ್ವೇಷಕ್ಕೆ ಪ್ರಚೋದನೆ ನೀಡಲು ಬಳಸಿಕೊಳ್ಳಬಾರದು. ಆ ರೀತಿ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇದ್ದರು. ಆದರೆ ಈ ದಿಕ್ಕಿನಲ್ಲಿಯಾವುದೇ ಕ್ರಮ ಆಗಿರಲಿಲ್ಲ. ಸದ್ಯ ಯಶವಂಯಪುರ ಠಾಣೆ ಇನ್ಸ್‌ಪೆಕ್ಟರ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.


from India & World News in Kannada | VK Polls https://ift.tt/2MEENuI

ಸ್ವಲ್ಪ ಎಚ್ಚರ ವಹಿಸಿದ್ದರೆ ಪೇಜಾವರ ಶ್ರೀ ನೂರ್ಕಾಲ ಬಾಳುತ್ತಿದ್ದರೇ?

ಔಟ್‌ ನೀಡಲು ಬೆರಳೆತ್ತಲು ಹೋಗಿ ಅರ್ಧದಲ್ಲೇ ಮನಸ್ಸು ಬದಲಾಯಿಸಿ ಮೂಗು ತುರಿಸಿಕೊಂಡ ಅಂಪೈರ್!

ಮೆಲ್ಬೋರ್ನ್‌: ಅಂಪೈರ್‌ವೊಬ್ಬರು ಔಟ್‌ ತೀರ್ಪು ನೀಡುವುದಕ್ಕಾಗಿ ಬೆರಳೆತ್ತಲು ಹೋಗಿ ಅರ್ಧದಲ್ಲಿ ಮನಸ್ಸು ಬದಲಾಯಿಸಿ ಮೂಗು ತುರಿಸಿಕೊಂಡ ವಿಲಕ್ಷಣ ಘಟನೆಗೆ ಬಿಗ್‌ ಬಾಷ್ ಲೀಗ್ ಟೂರ್ನಿ ಸಾಕ್ಷಿಯಾಗಿದೆ. ಭಾನುವಾರ ಮೆಲ್ಬೋರ್ನ್‌ನ ಡಾಕ್‌ಲ್ಯಾಂಡ್ಸ್‌ ಸ್ಟೇಡಿಯಮ್‌ನಲ್ಲಿ ಮೆಲ್ಬೋರ್ನ್‌ ರೆನೆಗೇಡ್ಸ್‌ ಹಾಗೂ ಅಡಿಲೇಡ್‌ ಸ್ಟ್ರೈಕರ್ಸ್‌ ನಡುವಣ ಪಂದ್ಯದ 17ನೇ ಓವರ್‌ ವೇಳೆ ಈ ಪ್ರಸಂಗ ನಡೆದಿದೆ. ರಶೀದ್‌ ಖಾನ್‌ ಎಸೆದ ಎಸೆತ ಬ್ಯಾಟ್ಸ್‌ಮನ್‌ ಪ್ಯಾಡ್‌ಗೆ ಬಡಿದಿದ್ದು, ಅವರು ಎಲ್‌ಬಿಡಬ್ಲ್ಯುಗೆ ಮನವಿ ಮಾಡಿದ್ದಾರೆ. ಆ ವೇಳೆ ಅಂಪೈರ್‌ ಗ್ರೆಗ್‌ ಡೇವಿಡ್ಸನ್‌ ಔಟ್‌ ಕೊಡುವುದಕ್ಕಾಗಿ ಬೆರಳೆತ್ತಲು ಹೋಗಿದ್ದಾರೆ. ಆದರೆ, ಅರ್ಧದಲ್ಲೇ ನಿರ್ಧಾರ ಬದಲಾಯಿಸಿ ಮೂಗು ತುರಿಸಿಕೊಂಡು ಸುಮ್ಮನಾಗಿದ್ದಾರೆ. ಅಂಪೈರ್‌ ಬೆರಳೆತ್ತುವುದನ್ನು ನೋಡಿ ಬ್ಯಾಟ್ಸ್‌ಮನ್‌ ಪೆವಿಲಿಯನ್‌ ಕಡೆ ಹೊರಟರೆ, ಫೀಲ್ಡರ್‌ಗಳು ಸಂಭ್ರಮಾಚರಣೆಗೆ ಮುಂದಾದರು. ಆದರೆ, ನಾನು ಔಟ್‌ ಕೊಟ್ಟೇ ಇಲ್ಲಎಂದು ವಾದಿಸಿದ ಅಂಪೈರ್‌ ಬ್ಯಾಟ್ಸ್‌ಮನ್‌ ಅನ್ನು ವಾಪಸ್‌ ಕರೆಸಿಕೊಂಡರು. ಬೌಲರ್ ರಶೀದ್ ಖಾನ್ ಸಹ ಬೆರಳತ್ತುವುದನ್ನು ನೋಡಿ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಗ್ಯಾಲರಿಯಲ್ಲಿ ನೆರೆದಿದ್ದ ಸರಿ ಸುಮಾರು 20000ದಷ್ಟು ಅಭಿಮಾನಿಗಳು ಅಂಪೈರ್ ನಿರ್ಧಾರದಿಂದ ಬೆರಗಾದರು. ಕೆಲವೇ ಕ್ಷಣಗಳಲ್ಲೇ ಈ ವಿಡಿಯೋ ಕ್ರಿಕೆಟ್ ಲೋಕದಲ್ಲಿ ವೈರಲ್ ಆಗಿ ಹರಡಿದೆ. ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಇಂತಹ ಪ್ರಸಂಗ ಎದುರಾಗುತ್ತಿರುವುದು. ಇದರಿಂದಾಗಿ ಅಂಪೈರ್‌ಗಳು ಕೂಡಾ ಮನುಷ್ಯರು ಎಂಬುದು ಸಾಬೀತಾಗಿದೆ. ಆಟಗಾರರಂತೆಯೇ ಅಂಪೈರ್‌ಗಳು ಅಷ್ಟೇ ಒತ್ತಡವನ್ನು ಎದುರಿಸುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಈ ಬಗ್ಗೆ ಬಳಿಕ ಸ್ಪಷ್ಟನೆ ನೀಡಿರುವ ಅಂಪೈರ್, "ಇಂತಹ ಬಿಸಿ ಬಿಸಿಯಾದ ಕ್ಷಣದಲ್ಲಿ ಹೀಗಾಗುತ್ತದೆ. ನಾನು ಯೋಚಿಸಲು ಪ್ರಾರಂಭಿಸಿದೆ. ಅಷ್ಟೊತ್ತಿಗೆ ನನ್ನ ತಲೆಯಲ್ಲಿ ಎರಡನೇ ಸದ್ದು ಕೇಳಿತು. ಆದ್ದರಿಂದ ನಿರ್ಧಾರವನ್ನು ಅರ್ಧದಾರಿಯಲ್ಲೇ ಬದಲಾಯಿಸಲು ನಿರ್ಧರಿಸಿದೆ. ಹಾಗಾಗಿ ನಾಟೌಟ್ ನೀಡಿದೆ" ಎಂದಿದ್ದಾರೆ. ಅಂತಿಮವಾಗಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಅಂಪೈರ್‌ಗೆ ಮೆಚ್ಚುಗೆ ಸಲ್ಲಿಸಬೇಕು ಎಂದು ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಪಂದ್ಯದ ಬಳಿಕ ರಶೀದ್ ಖಾನ್ ಸಹ ಇದನ್ನೇ ಉಲ್ಲೇಖಿಸಿದ್ದಾರೆ. "ಅಂಪೈರ್ ಬೆರಳೆತ್ತಲು ತೊಡಗಿದಾಗ ನಾನು ಸಂಭ್ರಮಾಚರಿಸಲು ಆರಂಭಿಸಿದೆ. ಆದರೆ ಬಿಗ್ ಸ್ಕ್ರೀನ್‌ ನೋಡಿದ ಬಳಿಕ ವಿಷಯದ ಅರಿವಾಯಿತು. ಇದೊಂದು ಉತ್ತಮ ನಿರ್ಧಾರ" ಎಂದು ಹೇಳಿದರು. ಮೊದಲು ಬ್ಯಾಟಿಂಗ್ ನೆಡಸಿದ ಅಡಿಲೇಡ್‌ ಸ್ಟ್ರೈಕರ್ಸ್‌ ಆರು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಮೆಲ್ಬೋರ್ನ್‌ ರೆನೆಗೇಡ್ಸ್‌ ಎಂಟು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಸ್ಟ್ರೈಕರ್ಸ್ ತಂಡವು 18 ರನ್‌ಗಳ ಅಂತರದಿಂದ ರೋಚಕ ಗೆಲುವು ಬಾರಿಸಿತು. ರಶೀದ್ ಖಾನ್ ಪ್ರತಿಕ್ರಿಯೆ ಅಂಪೈರ್ ಪ್ರತಿಕ್ರಿಯೆ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2F110ir

ದೇಶ ಮಾರಿದವರಿಗೆ ಮರ್ಯಾದೆ: ತಿರುಗೇಟು ನೀಡಿದ ದನೀಶ್ ಕನೇರಿಯಾ

ಕರಾಚಿ: ಧರ್ಮ ತಾರತಮ್ಯ ಹೇಳಿಕೆ ಬಳಿಕ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್ನರ್‌ ದನೀಶ್‌ ಕನೇರಿಯಾಗೆ ಪಾಕಿಸ್ತಾನದಲ್ಲಿ ಹಲವರಿಂದ ವಿರೋಧ ವ್ಯಕ್ತವಾಗಿದೆ. ಕನೇರಿಯಾ ವಿರುದ್ಧ ಇದೀಗ ನಾನಾ ರೀತಿಯ ಆರೋಪಗಳು ಕೇಳಿ ಬರತೊಡಗಿವೆ. ಈ ಹಿನ್ನೆಲೆಯಲ್ಲಿ ಭಾನುವಾರ ಯೂ ಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, ''ನಾನು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. ಬೆರಳಿಗೆ ಗಾಯವಾಗಿ ರಕ್ತ ಸುರಿಯುತ್ತಿರುವುದನ್ನೂ ಲೆಕ್ಕಿಸದೇ ಬೌಲಿಂಗ್‌ ಮಾಡಿದ್ದೇನೆ. ಆದರೆ, ಕೆಲವರು ದೇಶದ ಮರ್ಯಾದೆಯನ್ನು ಹರಾಜು ಹಾಕಿದರೂ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ನಾನು ಯಾವತ್ತೂ ದೇಶವನ್ನು ಮಾರಾಟ ಮಾಡಲು ಯತ್ನಿಸಿಲ್ಲ,'' ಎಂದು ಹೆಸರು ಹೇಳದೆ ಕನೇರಿಯಾ ಆರೋಪಿಸಿದ್ದಾರೆ. ಕೆಲವೇ ಆಟಗಾರರಿಂದ ತಾರತಮ್ಯ ದನೀಶ್‌ ಕನೇರಿಯಾ ಪ್ರಕರಣದ ಬಗ್ಗೆ ಭಾನುವಾರ ಮತ್ತೊಮ್ಮೆ ಮಾತನಾಡಿದ ಶೋಯೆಬ್‌ ಅಖ್ತರ್‌, ''ತಂಡದಲ್ಲಿದ್ದ ಒಂದಿಬ್ಬರು ಆಟಗಾರರು ಮಾತ್ರ ಕನೇರಿಯಾ ವಿರುದ್ಧ ಧಾರ್ಮಿಕ ತಾರತಮ್ಯ ಎಸಗುತ್ತಿದ್ದರು. ಆ ಬಗ್ಗೆ ನಾನು ಆಕ್ಷೇಪ ಎತ್ತಿದ್ದೆ. ಸಾಮಾಜಿಕ ಜೀವನದಲ್ಲಿಈ ರೀತಿಯ ವರ್ತನೆ ನಮ್ಮ ಸಂಸ್ಕೃತಿಯಲ್ಲ,'' ಎಂದು ಹೇಳಿದ್ದಾರೆ. ಕನೇರಿಯಾಗೆ ನಾನು ಅನ್ಯಾಯವೆಸಗಿಲ್ಲ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಅವರ ವಿರುದ್ಧ ಪ್ರತ್ಯೇಕತಾ ಮನೋಭಾವ ತೋರಲಾಗುತ್ತಿತ್ತು ಎಂದು ಶೋಯೆಬ್‌ ಅಖ್ತರ್‌ ಇತ್ತೀಚೆಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಭಾನುವಾರ ತಮ್ಮ ಯೂ ಟ್ಯೂಬ್‌ ಚಾನೆಲ್‌ 'ಇಂಜಮಮ್‌ ಉಲ್‌ ಹಕ್‌ - ದಿ ಮ್ಯಾಚ್‌ ವಿನ್ನರ್‌'ನಲ್ಲಿ ಮಾತನಾಡಿದ ಇಂಜಮಮ್‌, ''ಕನೇರಿಯಾ ನನ್ನ ನಾಯಕತ್ವದಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಅದೇ ಸಂದರ್ಭದಲ್ಲಿ ಸಕ್ಲೇನ್‌ ಮುಷ್ತಾಕ್‌ ಕೂಡ ಪಾಕ್‌ ತಂಡದಲ್ಲಿದ್ದರು. ಆದರೆ, ನಾನು ಕನೇರಿಯಾಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದೆ. ಸಕ್ಲೇನ್‌ ನನ್ನ ಬಾಲ್ಯದ ಗೆಳೆಯನಾಗಿದ್ದರೂ, ದನೀಶ್‌ ಅವರ ಕ್ರಿಕೆಟ್‌ ಸಾಮರ್ಥ್ಯವನ್ನು ಪರಿಗಣಿಸುತ್ತಿದ್ದೆ,'' ಎಂದು ಹೇಳಿದ್ದಾರೆ. ''2005ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಬಂದಿದ್ದಾಗ ನಮ್ಮ ಜನರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ನಾನು ಭಾರತಕ್ಕೆ ಹೋಗಿದ್ದಾಗ ಅಲ್ಲಿನ ಜನರು ಪ್ರೀತಿಯಿಂದ ಸತ್ಕರಿಸಿದ್ದಾರೆ. ಆ ಅವಧಿಯಲ್ಲಿ ಭಾರತ ತಂಡದ ನಾಯಕರಾಗಿದ್ದ ಸೌರವ್‌ ಗಂಗೂಲಿ ನೂತನವಾಗಿ ತೆರೆದಿದ್ದ ರೆಸ್ಟೋರೆಂಟ್‌ ಒಂದನ್ನು ನಾನು ಹಾಗೂ ಸಚಿನ್‌ ಸೇರಿ ಉದ್ಘಾಟಿಸಿದ್ದೆವು,'' ಎಂದು ಇಂಜಮಮ್‌ ಸ್ಮರಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SD8W16

ಇಂಗ್ಲೆಂಡ್ ವಿರುದ್ದ ರೋಚಕ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ

ಸೆಂಚುರಿಯನ್‌: ಕಗಿಸೊ ರಬಾಡ ಮತ್ತು ಆ್ಯನ್ರಿಚ್‌ ನೋರ್ಜೆ ಅವರ ಶಿಸ್ತಿನ ಬೌಲಿಂಗ್‌ ನೆರವಿನಿಂದ ತಂಡ ಇಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ತಂಡದ ವಿರುದ್ದ 107 ರನ್‌ಗಳ ರೋಚಕ ಗೆಲುವು ಬಾರಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ1-0 ಅಂತರದ ಮುನ್ನಡೆ ಸಾಧಿಸಿದೆ. 376 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ ರೋರಿ ಬನ್ಸ್‌ರ್‍ (84) ಮತ್ತು ಜೋ ರೂಟ್‌(48) ಅವರ ಜವಾಬ್ದಾರಿಯುತ ಪ್ರದರ್ಶನದ ಹೊರತಾಗಿಯೂ 268 ರನ್‌ಗಳಿಗೆ ಸರ್ವಪತನಗೊಂಡಿತು. ಒಂದು ಹಂತದಲ್ಲಿ ಮೂರು ವಿಕೆಟ್ ಮಾತ್ರ ನಷ್ಟಕ್ಕೆ 204 ರನ್ ಗಳಿಸಿದ್ದ , ಚಾರಿತ್ರಿಕ ಸಾಧನೆ ಮಾಡಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಪಂದ್ಯದ ಕೊನೆಯ ಹಂತದಲ್ಲಿ ಹರಿಣಗಳ ಪಡೆ ತಿರುಗಿ ಬೀಳುವುದರೊಂದಿಗೆ ಇಂಗ್ಲೆಂಡ್‌ಗೆ ಗೆಲುವು ನಿರಾಕರಿಸಲಾಯಿತು. ಅಲ್ಲದೆ ಕೊನೆಯ ಏಳು ವಿಕೆಟ್‌ಗಳನ್ನು ಕೇವಲ 64 ರನ್ ಅಂತರದಲ್ಲಿ ಕಳೆದುಕೊಳ್ಳುವ ಮೂಲಕ ಹಿನ್ನಡೆಗೊಳಗಾಯಿತು. ಸಂಕ್ಷಿಪ್ತ ಸ್ಕೋರ್ ಇಂತಿದೆ: ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 284ಕ್ಕೆ ಆಲೌಟ್ (ಕ್ವಿಂಟನ್ ಡಿ ಕಾಕ್ 95, ಸ್ಟುವರ್ಟ್ ಬ್ರಾಡ್ 58/4, ಸ್ಯಾಮ್ ಕರ್ರನ್ 58/4) ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 181ಕ್ಕೆ ಆಲೌಟ್ (ಜೋ ಡೆನ್ಲಿ 50, ವೆರ್ನಾನ್ ಪಿಲಾಂಡರ್ 16/4) ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 272ಕ್ಕೆ ಆಲೌಟ್ (ರಾಸ್ಸಿ ವ್ಯಾನ್ ಡೆರ್ ದುಸಾನ್ 51, ವೆರ್ನಾನ್ ಪಿಲಾಂಡರ್ 46, ಜೋಫ್ರಾ ಆರ್ಚರ್ 102/5) ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 268ಕ್ಕೆ ಆಲೌಟ್ (ರೋರಿ ಬರ್ನ್ಸ್ 84, ಜೋ ರೂಟ್ 48, ಕಗಿಸೋ ರಬಡ 103/4) ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್‌ ಕೇಪ್‌ಟೌನ್‌ನಲ್ಲಿ ಜನವರಿ 3ರಂದು ಆರಂಭವಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/355iGnG

ದೊಡ್ಡಬಳ್ಳಾಪುರದಲ್ಲಿ ಜಾಗೃತ ಮಕ್ಕಳ ಸೃಷ್ಟಿಗೆ ಪಣತೊಟ್ಟ ಜಾಂಬೋರೇಟ್‌!

- ನಾಗರಾಜು ಎ., ಶಾಲೆ, ಪುಸ್ತಕ, ಅಂಕಗಳ ಹಿಂದೆ ಓಡುತ್ತಿದ್ದ ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ 28ನೇ ಶಿಬಿರ ಹೊಸ ಅನುಭವಗಳನ್ನು ನೀಡುತ್ತಿದೆ. ಇಲ್ಲಿ ಸೇರಿರುವ 5 ಸಾವಿರ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಿಗೆ ನಿತ್ಯ ಒಂದಿಲ್ಲೊಂದು ಅನುಭವಗಳು ಜತೆಯಾಗುತ್ತಿವೆ. 7 ದಿನಗಳ ಶಿಬಿರದಲ್ಲಿ 3 ದಿನಗಳ ಕಾರ್ಯಕ್ರಮಗಳು ಮುಕ್ತಾಯವಾಗಿದ್ದು, ಮೂರು ದಿನದಲ್ಲಿ ಅನೇಕ ತರಬೇತಿಯನ್ನು ನೀಡಲಾಗಿದೆ. ಸಾಹಸ, ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರ ಗೋಷ್ಠಿಗಳು, ಚಾರಣ, ಪ್ರವಾಸ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಬದಲಾವಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಸರ್‌.ಎಂ.ವಿ. ನೆಲೆಗೆ ಸ್ಕೌಟ್ಸ್‌! ಸರ್‌ ಎಂ. ವಿಶ್ವೇಶ್ವರಯ್ಯರ ಮುದ್ದೇನಹಳ್ಳಿ ಗ್ರಾಮಕ್ಕೂ ಜಾಂಬೋರಿ ಶಿಬಿರದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ. ಆ ಮೂಲಕ ಸರ್‌ ಎಂ.ವಿ. ಬಳಸಿದ ವಸ್ತುಗಳು, ಓಡಾಡಿದ ಜಾಗ, ಓದಿದ ಪುಸ್ತಕ ಸೇರಿದಂತೆ ಅವರಿದ್ದ ಮನೆ, ಅವರ ಸಮಾಧಿ ಸ್ಥಳವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಸಾಮಾನ್ಯ ಬಡ ಕುಟುಂಬದಲ್ಲಿ ಬೆಳೆದ ಬಾಲಕ ಅಸಾಮಾನ್ಯ ಎಂಜಿನಿಯರ್‌ ಆಗಿ, ಮೈಸೂರು ದಿವಾನರಾದ ವ್ಯಕ್ತಿತ್ವದ ಪರಿಚಯ ಮಾಡಿ ಮಕ್ಕಳಲ್ಲಿ ಸ್ಫೂರ್ತಿ ತುಂಬಲಾಯಿತು. ನಂದಿಬೆಟ್ಟದಲ್ಲಿ ಪರಿಸರ ಪಾಠ 28ನೇ ಜಾಂಬೋರೇಟ್‌ನಲ್ಲಿ ಪ್ರವಾಸದ ಒಂದು ಭಾಗವಾಗಿ ಇಲ್ಲಿನ ಶಿಬಿರಾರ್ಥಿಗಳನ್ನು ವಿಶ್ವಪ್ರಸಿದ್ಧ ನಂದಿಬೆಟ್ಟಕ್ಕೆ ಕರೆದುಕೊಂಡು ಹೋಗಲಾಗಿದ್ದು, ಮಕ್ಕಳಿಗೆ ಅಲ್ಲಿನ ಪರಿಸರದ ಪ್ರಾಮುಖ್ಯತೆ, ಗಿಡಮರಗಳ ಮಹತ್ವ, ಧಾರ್ಮಿಕ ಕ್ಷೇತ್ರವಾಗಿ ಯೋಗನಂದೀಶ್ವರ ದೇವಾಲಯದ ಐತಿಹಾಸಿಕ ಮಹತ್ವ , ಟಿಪ್ಪುವಿನ ಬೇಸಿಗೆ ಅರಮನೆ, ಗಾಂಧೀಜಿ ನೆಲೆಸಿದ್ದ ವಿಚಾರವನ್ನು ಮಕ್ಕಳಿಗೆ ತಿಳಿಸಲಾಯಿತು. ಜತೆಗೆ, ನಂದಿಬೆಟ್ಟದ ಮೇಲಿರುವ ಕಂಬಗಳ ಮನೆಗಳ ಮೇಲೆ ಸಾಹಸ ನಡಿಗೆಯನ್ನು ಮಾಡಿಸಲಾಗಿದೆ. ವಿಶ್ರಾಂತಿ ಗೃಹ ಸೇರಿದಂತೆ ನಂದಿಬೆಟ್ಟದ ಮೇಲಿನ ಸ್ಥಳಗಳ ಭೇಟಿ ಮಕ್ಕಳಿಗೆ ವಿಶೇಷ ಆಕರ್ಷಣೆ, ಹುಮ್ಮಸ್ಸು ಮೂಡಿಸಿದೆ. ಸರ್ವಧರ್ಮಗಳ ವಿವರಣೆ! ಪ್ರಸ್ತುತ ಸಮಾಜದಲ್ಲಿಧರ್ಮಗಳ ನಡುವೆ ಸಂಭವಿಸುತ್ತಿರುವ ಗಲಭೆಗಳಿಗೆ ಪರಿಹಾರೋಧಿಪಾಯಗಳನ್ನು ಕಂಡುಕೊಳ್ಳುವುದರೊಂದಿಗೆ, ಮುಂದಿನ ಪೀಳಿಗೆಯ ಮಕ್ಕಳಲ್ಲಿ ಸಮಾಧಿನತೆಯ ಭಾವನೆ ಮೂಡಬೇಕು. ಜತೆಗೆ, ಪ್ರತಿಯೊಂದು ಧರ್ಮಗಳಲ್ಲಿನ ಮಹತ್ವವನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಶಿಬಿರದಲ್ಲಿ ಮಕ್ಕಳಿಗೆ ಸರ್ವಧರ್ಮಗಳ ಸಮನ್ವಯದ ಕುರಿತಾದ ವಿಚಾರ ವಿನಿಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.


from India & World News in Kannada | VK Polls https://ift.tt/39kYiSK

2019ರ ಷೇರು ಮಾರುಕಟ್ಟೆ ಹೇಗಿತ್ತು, 2020 ಹೇಗಿರಲಿದೆ?

- ಹ.ಚ.ನಟೇಶಬಾಬು, ಬೆಂಗಳೂರು 2019ರ ಮುಕ್ತಾಯಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಈ ವರ್ಷ ಯಾರೂ ನಿರೀಕ್ಷಿಸದ ಮಟ್ಟದಲ್ಲಿತ್ತು. ಆರ್ಥಿಕ ಹಿಂಜರಿತ, ಸ್ಥಳೀಯ ಮತ್ತು ಜಾಗತಿಕ ಬೆಳವಣಿಗೆಗಳು ಸೆನ್ಸೆಕ್ಸ್‌ನ ಏರಿಳಿತಕ್ಕೆ ಕಾರಣವಾದವು. ಈ ವರ್ಷ ಐತಿಹಾಸಿಕ ಮತ್ತು ಸಾರ್ವಕಾಲಿಕ ದಾಖಲೆಯ 40,000 ಅಂಕವನ್ನು ದಾಟಿದರೆ, ನಿಫ್ಟಿ 12,000 ಅಂಕ ಮುಟ್ಟಿತು. ಆದಾಗ್ಯೂ, ಹೂಡಿಕೆದಾರರಿಗೆ ಈ ವರ್ಷ ಸಮಾಧಾನಕರವಾಗಿಯೇನೂ ಇರಲಿಲ್ಲ. ಸೆನ್ಸೆಕ್ಸ್‌ ಏರಿಳಿತದ ಹಾವು-ಏಣಿಯಾಟ ಈ ವರ್ಷ ಬಿರುಸಾಗಿತ್ತು. ಸೆನ್ಸೆಕ್ಸ್‌ ದಾಖಲೆಯ ಜಿಗಿತ ಕಂಡಿದ್ದರೂ, ಕಾರ್ಪೊರೇಟ್‌ ಆದಾಯ ಆಶಾದಾಯಕವಾಗಿಲ್ಲ. ಐಎಲ್‌ಆ್ಯಂಡ್‌ಎಫ್‌ಎಸ್‌ನ 91 ಸಾವಿರ ಕೋಟಿ ರೂ. ಸಾಲ ಬಿಕ್ಕಟ್ಟು, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ನ(ಡಿಎಚ್‌ಎಫ್‌ಎಲ್‌) 31 ಸಾವಿರ ಕೋಟಿ ರೂ. ಅವ್ಯವಹಾರ, ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಕೋ-ಆಪರೇಟಿವ್‌ ಬ್ಯಾಂಕ್‌ನ(ಪಿಎಂಸಿ) 6,700 ಕೋಟಿ ರೂ. ಹಗರಣ ಮತ್ತು ಅವ್ಯವಹಾರಗಳು ಷೇರು ಮಾರುಕಟ್ಟೆ ಮೇಲೆ ಈ ವರ್ಷ ನಕಾರಾತ್ಮಕ ಪ್ರಭಾವ ಬೀರಿವೆ. ಮಾರುಕಟ್ಟೆ ಮತ್ತು ಹೂಡಿಕೆದಾರರ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿ, ನಿರಾಶಾದಾಯಕ ಪರಿಸ್ಥಿತಿ ನಿರ್ಮಾಣವಾಗಿತ್ತು. 2019ನೇ ವರ್ಷದ ಆರಂಭದಲ್ಲಿ ಸೆನ್ಸೆಕ್ಸ್‌ 36,254.57 ತಲುಪಿತ್ತು. ಮಾರ್ಚ್ ತನಕ ಮೇಲ್ಮುಖವಾಗಿಯೇ ಸೆನ್ಸೆಕ್ಸ್‌ ಸಾಗಿತು. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಬಳಿಕ ಏ.2ರಂದು ಸೆನ್ಸೆಕ್ಸ್‌ 39,000ಕ್ಕೆ ಜಿಗಿಯಿತು. ಮೋದಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಮಾರುಕಟ್ಟೆಗೆ ಚೈತನ್ಯ ನೀಡಿತ್ತು. ಸರಕಾರ ಅಸ್ತಿತ್ವಕ್ಕೆ ಬಂದು ಜು.5ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡಿಸಿದರು. ಬಜೆಟ್‌ನಲ್ಲಿನ ತೆರಿಗೆ-ಮೇಲ್ತೆರಿಗೆ ತೀರ್ಮಾನಗಳಿಂದ ಬಜೆಟ್‌ ದಿನವೇ ಸೆನ್ಸೆಕ್ಸ್‌ 400 ಅಂಕ, ಮಾರನೇ ದಿನ 793 ಅಂಕ ನಷ್ಟವಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್‌ಪಿಐ) ಮೇಲ್ತೆರಿಗೆ ಹೆಚ್ಚಿಸುವ ಸರಕಾರದ ತೀರ್ಮಾನ ಷೇರು ಮಾರುಕಟ್ಟೆಗೆ ಪೆಟ್ಟು ನೀಡಿತು. ಇದರಿಂದಾಗಿ ಭಾರತದ ಈಕ್ವಿಟಿ ಮಾರುಕಟ್ಟೆಯಿಂದ ಜುಲೈನಲ್ಲಿ ಎಫ್‌ಪಿಐಗಳು 12,418.73 ಕೋಟಿ ರೂ. ಹೊರ ತೆಗೆದರು. ಉದ್ಯಮ ಮತ್ತು ಮಾರುಕಟ್ಟೆ ಪ್ರತಿರೋಧದಿಂದ ಆಗಸ್ಟ್‌ನಲ್ಲಿ ಸರ್‌ಚಾರ್ಜ್‌ಅನ್ನು ಸರಕಾರ ವಾಪಸ್‌ ಪಡೆಯಿತು. ಆರ್ಥಿಕತೆ ಉತ್ತೇಜನಕ್ಕೆ ಸರಕಾರ ಕ್ರಮಗಳನ್ನು ಪ್ರಕಟಿಸಿತು. ಕಾರ್ಪೊರೇಟ್‌ ತೆರಿಗೆ ಇಳಿಕೆ ಮಾಡಿದ ಕ್ರಮ, ಷೇರುಪೇಟೆಗೆ ಚೈತನ್ಯ ನೀಡಿತು. ಸೆ.20ರಂದು ಸೆನ್ಸೆಕ್ಸ್‌ 1,921 ಅಂಕ ಏರಿಕೆ ಕಂಡಿತು. ಇದು ದಶಕದಲ್ಲೇ ದೊಡ್ಡ ಏರಿಕೆ. ಖರೀದಿ ಭರಾಟೆಯಿಂದ ನ.27ರಂದು ಸೆನ್ಸೆಕ್ಸ್‌ 41,000 ಮುಟ್ಟಿತು. ಡಿ.27ರ ತನಕದ ಷೇರು ಪೇಟೆ ಗಮನಿಸಿದರೇ, ಸೆನ್ಸೆಕ್ಸ್‌ ಶೇ.15.26 ಮತ್ತು ನಿಫ್ಟಿ 12.73ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಮೌಲ್ಯದ ವಿಷಯದಲ್ಲಿ ಮಾರುಕಟ್ಟೆ ತಜ್ಞರು ಸಮಾಧಾನಗೊಂಡಿಲ್ಲ. 30 ಸೆನ್ಸೆಕ್ಸ್‌ ಸ್ಟಾಕ್‌ಗಳ ಷೇರು ದರ-ಆದಾಯದ ದರದ(ಪಿಇ) ಅನುಪಾತ 29ಕ್ಕೆ ಮುಟ್ಟಿದೆ. ಅಂದರೇ, ಹೂಡಿಕೆದಾರರು ಭವಿಷ್ಯದ ಗಳಿಕೆಗೆ ಹೆಚ್ಚಿನ ಹಣವನ್ನು ಸುರಿದಿದ್ದಾರೆ. 2020 ಷೇರುಪೇಟೆಗೆ ಪುಷ್ಟಿ ನೀಡುವುದೇ?ಈ ವರ್ಷದ ಕೇಂದ್ರ ಬಜೆಟ್‌ ಹೇಗಿರಲಿದೆ ಅನ್ನುವುದನ್ನು ನೋಡಬೇಕು. ಆರ್ಥಿಕ ಮತ್ತು ಕಾರ್ಪೊರೇಟ್‌ ವಲಯದ ಬೆಳವಣಿಗೆಗೆ ಪ್ರೋತ್ಸಾಹದಾಯಕ ಕ್ರಮಗಳನ್ನು ಕೇಂದ್ರ ಸರಕಾರ ಹೇಗೆ ಪ್ರಕಟಿಸಲಿದೆಯೋ ಅದು ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಲಿದೆ. ಇದರ ಜೊತೆಗೆ ವಿದೇಶಿ ವಿತ್ತೀಯ ಸಂಸ್ಥೆಗಳೂ ಪ್ರಭಾವ ಬೀರಲಿವೆ. ಅವುಗಳ ಸಾಧನೆಗಿಂತಲೂ ಚಟುವಟಿಕೆಗಳು ಪ್ರಮುಖ ಪ್ರಭಾವವನ್ನು ಬೀರುತ್ತವೆ ಎನ್ನುತ್ತಾರೆ ಷೇರು ತಜ್ಞ ಕೆ.ಜಿ.ಕೃಪಾಲ್‌. ''ಆರ್‌ಬಿಐ ರೆಪೊ ದರವನ್ನು ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸಲು ಪ್ರಯತ್ನಿಸುತ್ತಿದೆ. ಹಣದ ಅಭಾವ ಆರ್ಥಿಕತೆಗೆ ಅಡ್ಡಿಯಾಗಬಾರದು ಎಂದು ಬಡ್ಡಿ ದರ ಕಡಿಮೆ ಮಾಡಿ ಸಾಲಗಳನ್ನು ಉತ್ತೇಜಿಸುತ್ತಿದೆ. ಆದರೆ, ಇಷ್ಟೇ ಸಾಲದು. ಉತ್ಪಾದನಾ ಆಧಾರಿತ ಸಾಲ ಚಟುವಟಿಕೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿದರೆ, ಷೇರುಮಾರುಕಟ್ಟೆಗೆ ಮುಂದಿನ ದಿನಗಳಲ್ಲಿ ಚೈತನ್ಯ ಬರುತ್ತದೆ,'' ಎಂದು ಕೃಪಾಲ್‌ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಜಿಡಿಪಿ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಶೇ.4.5ಕ್ಕೆ ಕುಸಿದಿದೆ. ಗ್ರಾಹಕ ಅನುಭೋಗ ಕುಸಿದಿದೆ. ಸರಕಾರ ಕೈಗೊಂಡಿರುವ ಕ್ರಮಗಳು ಫಲ ನೀಡಿದರೇ, ಆರ್ಥಿಕತೆ ಚೇತರಿಕೆ ಕಾಣಲಿದೆ. ಚೀನಾ-ಅಮೆರಿಕ ವಾಣಿಜ್ಯ ಸಂಘರ್ಷ ಒಂದು ಹದಕ್ಕೆ ಬಂದಿದ್ದು, ಇದು 2020ರ ಷೇರುಪೇಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಹೂಡಿಕೆದಾರರೇ ವ್ಯಾಲ್ಯು ಪಿಕ್‌ ಮಾಡಿ ಷೇರುಪೇಟೆಯಲ್ಲಿ ಏರಿಳಿತಗಳು ಸಹಜ. ವಿಚಲಿತರಾಗಬಾರದು. ಹೂಡಿಕೆದಾರರು 'ವ್ಯಾಲ್ಯು ಪಿಕ್‌, ಪ್ರಾಫಿಟ್‌ ಬುಕ್‌' ಎನ್ನುವ ಸೂತ್ರವನ್ನು ಸದಾ ನೆನಪಲ್ಲಿಟ್ಟುಕೊಳ್ಳಬೇಕು. ಯಾವುದೋ ಕಾರಣಕ್ಕೆ ಮಾರುಕಟ್ಟೆ ಬೀಳುತ್ತದೆ. ಆಗ ಷೇರು ದರ ಕುಸಿಯಬಹುದು. ಇಂಥ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಬೇಕು. ಇದು ಸುವರ್ಣ ಅವಕಾಶ. ಷೇರುಪೇಟೆಯಲ್ಲಿ ಅಧ್ಯಯನ ಮತ್ತು ತಜ್ಞರ ಮಾರ್ಗದರ್ಶನ ಅಗತ್ಯ. - ಕೆ.ಜಿ.ಕೃಪಾಲ್‌, ಷೇರುಪೇಟೆ ತಜ್ಞ


from India & World News in Kannada | VK Polls https://ift.tt/2F6cLE6

ಬೆಂಗಳೂರಲ್ಲಿ ಮತ್ತೆ 78ರ ಸಮೀಪಕ್ಕೆ ಬಂದ ಪೆಟ್ರೋಲ್‌ ದರ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಮತ್ತೆ ಪೆಟ್ರೋಲ್‌ ದರದಲ್ಲಿ ಏರಿಕೆ ಕಂಡು ಬರುತ್ತಿದ್ದು, 78 ರೂ. ಸಮೀಪಕ್ಕೆ ಬಂದಿದೆ. ಬುಧವಾರ 77.18 ರೂ. ಇದ್ದ ಈಗ 77.44 ರೂ.ಗೆ ತಲುಪಿದೆ. ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ 13-15 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಲೀಟರ್‌ ಒಂದಕ್ಕೆ ಪೆಟ್ರೋಲ್‌ ದರ 74.88 ರೂ. ಇದೆ. ಚೆನ್ನೈನಲ್ಲಿ 77.85 ರೂ. ಇದೆ. ಕೋಲ್ಕತಾದಲ್ಲಿ 77.54 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ ಲೀಟರ್‌ ಪೆಟ್ರೋಲ್‌ ದರ ಅತಿಹೆಚ್ಚು ಇದ್ದು, ಇಂದು 80.53 ರೂ. ಇದೆ. ಡೀಸೆಲ್‌ ದರವೂ ಪೆಟ್ರೋಲ್‌ ದರಕ್ಕೆ ತೀವ್ರ ಪೈಪೋಟಿ ನೀಡುವ ಲಕ್ಷಣವನ್ನು ತೋರುತ್ತಿದ್ದು ಈಗಾಗಲೇ 70 ರೂ. ಸಮೀಪದಲ್ಲಿದೆ. ಲೀಟರ್‌ ಒಂದಕ್ಕೆ ಬೆಂಗಳೂರಲ್ಲಿ 69.90 ರೂ. ಇದೆ. ರಾಷ್ಟ್ರದ ಎಲ್ಲ ಮೆಟ್ರೊ ನಗರಗಳಲ್ಲಿ 19 ರಿಂದ 21 ಪೈಸೆ ವರೆಗೆ ಏರಿಕೆಯಾಗಿದೆ. ರಾಜಧಾನಿ ದಿಲ್ಲಿಯಲ್ಲಿ 67.60 ರೂ. ಇದೆ. ಚೆನ್ನೈನಲ್ಲಿ 71.48 ರೂ., ಕೋಲ್ಕತಾದಲ್ಲಿ 70.02 ರೂ. ಹಾಗೂ ಮುಂಬಯಿನಲ್ಲಿ 70.93 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದ್ದು, ಬ್ಯಾರೆಲ್‌ ಒಂದಕ್ಕೆ 4,420 ರೂ. ಇದೆ. ಸೂಚನೆ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೆಟ್ರೋಲ್ ವಿತರಣಾ ಕಂಪೆನಿಗಳು ಮತ್ತು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ವ್ಯತ್ಯಾಸ ಇರುತ್ತದೆ ಎಂಬುದನ್ನು ಗಮನಿಸತಕ್ಕದ್ದು.


from India & World News in Kannada | VK Polls https://ift.tt/2SxGIVI

ಉಡುಪಿಯಲ್ಲಿ ಕೊನೆ ಪ್ರವಚನ: ಸ್ವರ್ಗದ ಕಥೆ ಹೇಳಿ ಕೃಷ್ಣನಲ್ಲಿ ಲೀನವಾದ ಪೇಜಾವರ ಶ್ರೀ

ತೀವ್ರ ಅನಾರೋಗ್ಯ ತುತ್ತಾಗುವ ಮುನ್ನ ಪೇಜಾವರ ಶ್ರೀಗಳು ಪ್ರವಚನದಲ್ಲಿ ತೊಡಗಿದ್ದರು. ಅದರಲ್ಲೂ ಸ್ವರ್ಗದಲ್ಲಿ ನಮ್ಮ ಸ್ಥಾನ ಗಟ್ಟಿಗೊಳಿಸುವುದು ಹೇಗೆ? ಯಾವ ಕೈಂಕರ್ಯದಲ್ಲಿ ತೊಡಗಿದರೆ ಸ್ವರ್ಗದಲ್ಲಿ ಶಾಶ್ವತ ಸ್ಥಾನ ಲಭ್ಯವಾಗುತ್ತದೆ ಎಂಬ ಬಗ್ಗೆ ಶ್ರೀಗಳು ಕಥೆಯ ಮೂಲಕ ಪ್ರವಚನದಲ್ಲಿ ತಿಳಿಸಿದ್ದರು. ಈ ಪ್ರವಚನವೇ ಅವರ ಆಶೀರ್ವಚನವನ್ನು ಆಲಿಸುವ ಕೊನೆ ಮಾತುಗಳು! ಉಡುಪಿಯ ರಾಜಾಂಗಣದಲ್ಲಿ ಡಿ.19ರಂದು ಪೇಜಾವರ ಶ್ರೀಗಳು 2 ಪ್ರೇರಣಾತ್ಮಕ ಕಥೆಗಳ ಮೂಲಕ ಲೌಖಿಕ ಜೀವನದಲ್ಲಿ ಅನುಸರಿಸಲೇ ಬಾರದ ಆಚಾರಗಳನ್ನು ವಿವರಿಸಿದ್ದರು. ಅದರಲ್ಲೂ ಕೊನೆಯ ಕಥೆ ಸ್ವರ್ಗದಲ್ಲಿ ಶಾಶ್ವತ ಸ್ಥಾನಗಳಿಸುವುದು ಯಾವಾಗ ಎಂಬುದನ್ನು ವಿವರಿಸಿದ್ದರು. ಪ್ರವಚನದ ಕಳೆದು 10 ದಿನಗಳಲ್ಲಿ ಪೇಜಾವರ ಶ್ರೀ ಕೃಷ್ಣನಲ್ಲಿ ಐಕ್ಯರಾಗಿದ್ದಾರೆ. ಆಸ್ಪತ್ರೆಗೆ ಸೇರುವ ಮುನ್ನಾದಿನ ಅವರ ಪ್ರವಚನದ ಸಾರ ಇಲ್ಲಿದೆ. ಇಂದ್ರದ್ಯುನ್ಮ ಎಂಬ ರಾಜ ತನ್ನ ಆಯಸ್ಸು ಮುಗಿದು ಮರಣಿಸುತ್ತಾನೆ. ಮಾಡಿದ ಸತ್ಕರ್ಮಗಳ ಫಲವಾಗಿ ಅವನು ಸ್ವರ್ಗಸ್ತನಾಗುತ್ತಾನೆ. ಸ್ವರ್ಗದಲ್ಲಿ ಎಲ್ಲ ಸುಖವನ್ನೂ ಅನುಭವಿಸುತ್ತಿರು ಸಂದರ್ಭದಲ್ಲಿ, ಈ ರಾಜನ ಎಲ್ಲ ಪುಣ್ಯಗಳು ಖರ್ಚಾಗಿ ಹೋಗಿವೆ. ಇನ್ನು ಸ್ವರ್ಗದಲ್ಲಿ ಇರಲು ಅವಕಾಶವಿಲ್ಲ. ಮತ್ತೆ ಭೂಮಿಗೆ ತೆರಳಬೇಕು ಎಂಬುದಾಗಿ ದೇವತೆಗಳು ಆಜ್ಞೆ ಮಾಡಿದರಂತೆ! ಆದೇಶದಂತೆಯೇ ಮತ್ತೆ ಭೂಮಿಗೆ ಬಿದ್ದ ರಾಜ, ತನ್ನ ಪರಿಚಯ ಯಾರಿಗಾದರೂ ಇದೆಯೇ ಎಂದು ಕೇಳಿಕೊಂಡು ಹೊರಟ. ಮೊದಲು ಕಾಣಸಿಕ್ಕ, ಗೂಬೆಯೊಂದರಲ್ಲಿ ತನ್ನ ಪರಿಚಯ ಮಾಡಿಕೊಂಡ ರಾಜ, ತನ್ನ ಬಗ್ಗೆ ನಿನಗೆ ಗೊತ್ತಿದೆಯೇ ಎಂದು ಕೇಳುತ್ತಾನೆ. ಆದರೆ ರಾಜನ ಹೆಸರೂ ಅದಕ್ಕೆ ಗೊತ್ತಿರುವುದಿಲ್ಲ. ಆದರೆ ತನಗಿಂತ ಹೆಚ್ಚು ವಯಸ್ಸಾದ ಬಕಪಕ್ಷಿಯೊಂದಿದೆ, ಅದರಲ್ಲಿ ಕೇಳೋಣ ಎಂದು ರಾಜನನ್ನು ಕರೆದೊಯ್ಯುತ್ತದೆ. ಆದರೆ ಬಕಪಕ್ಷಿಯೂ ರಾಜನನ್ನು ಗುರುತಿಸಿಲ್ಲ. ಬಕಪಕ್ಷಿ, ಹತ್ತಿರದ ಸರೋವರದಲ್ಲಿ ಆಮೆ ಇದೆ. ಅದರ ಬಳಿ ಕೇಳೋಣ ಎಂದು ಕರೆದೊಯ್ಯುತ್ತದೆ. ಆಮೆ ರಾಜನನ್ನು ಗುರುತಿಸುತ್ತದೆ. ಈ ಸರೋವರ ನಿರ್ಮಾಣ ಮಾಡಿದ್ದೇ ನೀನಲ್ಲವೇ ರಾಜ, ನಿನ್ನಿಂದಲೇ ಅನೇಕರ ಬಾಳು ಹಸನಾಗಿದೆ. ಕೃಷಿ ಚಟುವಟಿಕೆ ಸೇರಿ ಅನೇಕ ಜೀವಸಂಕುಲಗಳಿಗೆ ಸರೋವರ ಆಸರೆಯಾಗಿದೆ ಎಂದಿತು. ಆಮೆ ಕಣ್ಣೀರಿಟ್ಟು ರಾಜನ ಮಹಾತ್ಕಾರ್ಯವನ್ನು ಕೊಂಡಾಡಿತು!

ಅಷ್ಟರಲ್ಲಿ, ದೇವತೆಗಳು ಪ್ರತ್ಯಕ್ಷವಾಗಿ, ನಿನ್ನ ಪುಣ್ಯ ಇನ್ನೂ ಮುಗಿದಿಲ್ಲ ಎಂದು ಮತ್ತೆ ರಾಜನನ್ನು ಸ್ವರ್ಗಕ್ಕೇ ಒಯ್ದರು... ಭೂಮಿಯಲ್ಲಿ ಜನರು ನಮ್ಮನ್ನು ಸ್ಮರಿಸುವ ವರೆಗೆ ನಮಗೆ ಸ್ವರ್ಗದಲ್ಲಿ ಭದ್ರ ಸ್ಥಾನವಿರುತ್ತದೆ. ಧರ್ಮಾಚರಣೆ ಮಾಡಿ, ಮುಂದಿನ ಪೀಳಿಗೆಗೂ ಅದರ ಸ್ಮರಣೆ ಇರುವಂತ ಕಾರ್ಯ ಮಾಡಿದಲ್ಲಿ ಸ್ವರ್ಗದಲ್ಲಿ ಭದ್ರ ಸ್ಥಾನ ಎಂಬುದೇ ಈ ಪ್ರೇಕರ ಕಥೆಯ ಸಾರ ಎಂದು ಹೇಳಿ ಪೇಜಾವರ ಶ್ರೀ ತಮ್ಮ ಪ್ರವಚನ ಮುಕ್ತಾಯಗೊಳಿಸಿದ್ದರು...


from India & World News in Kannada | VK Polls https://ift.tt/2Q67O4v

ಯುವ ಜನತೆಗೆ ವರ್ಷದ ಕೊನೆಯ 'ಮನ್‌ ಕೀ ಬಾತ್‌' ಮೀಸಲಿಟ್ಟ ಪ್ರಧಾನಿ

ಹೊಸದಿಲ್ಲಿ: ಪ್ರಧಾನಿ ಭಾನುವಾರ ಈ ವರ್ಷದ ಕೊನೆಯ ಮನ್‌ ಕೀ ಬಾತ್‌ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರ 60ನೇ ಕಾರ್ಯಕ್ರಮ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಸಾರವಾಯಿತು. ತಮ್ಮ ಮನದಾಳದ ಮಾತುಗಳಲ್ಲಿ ಯುವಜನರಿಗೆ ಒತ್ತು ನೀಡಿದ ಅವರು, “ಮುಂದಿನ ದಶಕದಲ್ಲಿ ಆಧುನಿಕ ಭಾರತ ನಿರ್ಮಾಣದಲ್ಲಿ ಯುವ ಭಾರತ ಪ್ರಮುಖ ಪಾತ್ರ ವಹಿಸುತ್ತದೆ,” ಎಂದರು. ಇದೇ ವೇಳೆ ಅವರು, “ನಮ್ಮ ಯುವಕರು ಅರಾಜಕತೆ, ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ದ್ವೇಷಿಸುತ್ತಾರೆ ಮತ್ತು ಜಾತಿವಾದ ಮತ್ತು ಸ್ವಜನಪಕ್ಷಪಾತವನ್ನು ಇಷ್ಟಪಡುವುದಿಲ್ಲ,” ಎಂದರು. ಪ್ರಧಾನಿ ಮನ್‌ ಕೀ ಬಾತ್‌ನ ಪ್ರಮುಖ ಹೇಳಿಕೆಗಳು ಹೀಗಿವೆ, * ಮುಂಬರುವ ದಶಕದಲ್ಲಿ ಯುವ ಭಾರತ ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ಯುವಕರು ವ್ಯವಸ್ಥೆಯನ್ನು ನಂಬುತ್ತಾರೆ ಮತ್ತು ವ್ಯಾಪಕವಾದ ವಿಷಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು ಒಂದು ದೊಡ್ಡ ವಿಷಯ ಎಂದು ನಾನು ಪರಿಗಣಿಸುತ್ತೇನೆ. * ಇಂದಿನ ಯುವಜನರು ಅಸ್ಥಿರತೆ, ಅವ್ಯವಸ್ಥೆ, ಸ್ವಜನಪಕ್ಷಪಾತವನ್ನು ಇಷ್ಟಪಡುವುದಿಲ್ಲ. * ಭಾರತದ ಯುವಕರು ಮುಂದಿನ ದಶಕದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ. * ಭಾರತವು ಪ್ರತಿಭಾವಂತ ಯುವಕರ ಗುಂಪನ್ನು ಹೊಂದಿದೆ, ಅವರು ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದ್ದಾರೆ. ಅವರು ವ್ಯವಸ್ಥೆಯನ್ನು ಪ್ರಶ್ನಿಸುವುದರಲ್ಲಿ ನಂಬಿಕೆ ಹೊಂದಿದ್ದು, ಅವರ ಈ ನಡವಳಿಕೆ ಅತ್ಯಧ್ಭುತವಾದುದು. * ಹಳೆಯ ವಿದ್ಯಾರ್ಥಿಗಳ ಭೇಟಿಯು ಸಮಯವನ್ನು ಹಿಂದಕ್ಕೆ ಕೊಂಡೊಯ್ಯುವುದು. ಈ ವೇಳೆ ವಿದ್ಯಾರ್ಥಿ ಜೀವನದ ಉತ್ತಮ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಅನೇಕ ಹಳೆಯ ವಿದ್ಯಾರ್ಥಿಗಳ ಬ್ಯಾಚ್‌ಗಳು ತಮ್ಮ ಶಾಲೆ ಮತ್ತು ಕಾಲೇಜುಗಳ ಕಲ್ಯಾಣಕ್ಕೆ ಸಹಕರಿಸುತ್ತಿವೆ. * ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮತ್ತು ರಾಷ್ಟ್ರಕ್ಕಾಗಿ ಕನಸು ಕಂಡವರನ್ನು ನಾನು ಗೌರವಿಸುತ್ತೇನೆ. * ಕಳೆದ ಆರು ತಿಂಗಳುಗಳು ಉತ್ಪಾದಕ ಸಂಸದೀಯ ಅಧಿವೇಶನಗಳಿಗೆ ಸಾಕ್ಷಿಯಾಗಿವೆ. * ಭಾರತವು ಖಗೋಳಶಾಸ್ತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.


from India & World News in Kannada | VK Polls https://ift.tt/366ONET

ಮಗಳು ಆತಿಯಾ ಶೆಟ್ಟಿ ಜೊತೆ ಕೆಎಲ್ ರಾಹುಲ್ ಚಿತ್ರಕ್ಕೆ ಕಾಮೆಂಟ್ ಹಾಕಿದ ಸುನಿಲ್ ಶೆಟ್ಟಿ

ಮುಂಬಯಿ: ಕಳೆದ ಕೆಲವು ಸಮಯಗಳಿಂದ ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಾಲಿವುಡ್ ನಟಿ ಹಾಗೂ ಅವರ ಪುತ್ರಿ ಆತಿಯಾ ಶೆಟ್ಟಿ ನಡುವಣ ಡೇಟಿಂಗ್ ಗಾಸಿಪ್‌ಗಳು ಹರಿದಾಡುತ್ತಿದೆ. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಕೆಎಲ್ ರಾಹುಲ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಹಂಚಿದ್ದಾರೆ. ಬಾಲಿವುಡ್‌ನ ಜನಪ್ರಿಯ 'ಹೇರಾ ಫೇರಿ' ಚಿತ್ರದಲ್ಲಿನ ರಂಗವೊಂದನ್ನು ಕೆಎಲ್ ರಾಹುಲ್ ನಕಲು ಮಾಡಿದ್ದಾರೆ. ಹಲೋ ದೇವಿ ಪ್ರಸಾದ್ ? ಎಂಬ ಚಿತ್ರದಲ್ಲಿರುವ ಡೈಲಾಗ್ ಅನ್ನು ಉಲ್ಲೇಖಿಸಿದ್ದಾರೆ. ಹಳೆಯ ಟೆಲಿಫೋನ್ ಬೂತ್‌ನಲ್ಲಿ ನಟನಾ ಗಾಂಭೀರ್ಯವನ್ನು ಬೀರಿರುವ ರಾಹುಲ್ ಬಳಿಯಲ್ಲಿ ಆತಿಯಾ ನಗುಮುಖದೊಂದಿಗೆ ಕಾಣಿಸಿದ್ದಾರೆ. ಪ್ರಸ್ತುತ ಚಿತ್ರಕ್ಕೆ ಸ್ವತ: ಸುನಿಲ್ ಶೆಟ್ಟಿ ಅವರೇ ಕಾಮೆಂಟ್ ಮಾಡಿದ್ದಾರೆ. ನಗುವನ್ನು ತಡೆಯಲು ಸಾಧ್ಯವಾಗದ ಸುನಿಲ್ ಶೆಟ್ಟಿ, ನಗುಮುಖದ ಇಮೋಜಿಗಳನ್ನು ಹಂಚಿದ್ದಾರೆ. ಕೆಲ್ ರಾಹುಲ್ ಸಹ ಆಟಗಾರ ಹಾಗೂ ಗೆಳೆಯ ಹಾರ್ದಿಕ್ ಪಾಂಡ್ಯ ಕೂಡಾ 'ಕ್ಯೂಟ್' ಎಂಬ ಕಾಮೆಂಟ್ ಹಾಕಿದ್ದಾರೆ. ಹಿಂದೊಮ್ಮೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿರುವ ಪಾಂಡ್ಯ ಹಾಗೂ ರಾಹುಲ್ ದಂಡನೆಗೊಳಗಾಗಿದ್ದರು. ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಶಿಖರ್ ಧವನ್ ಕೂಡಾ 'ಗುಡ್ ಒನ್ ಬ್ರೋ' ಎಂದು ಉಲ್ಲೇಖಿಸಿದ್ದಾರೆ. ಕೆಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ನಡುವೆ ಪ್ರೇಮಾಂಕುರ ಆಗಿದೆಯೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಇವರಿಬ್ಬರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಏತನ್ಮಧ್ಯೆ ಭಾರತ ಕ್ರಿಕೆಟ್ ತಂಡಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಿರುವ ಕೆಎಲ್ ರಾಹುಲ್, ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಹಾಗೂ ಏಕದಿನ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಪತ್ನಿ ಜತೆ ಜಾಲಿ ಮೂಡ್‌ನಲ್ಲಿ ವಿರಾಟ್ ಕೊಹ್ಲಿ ಸದ್ಯ ಜಾಲಿ ಮೂಡ್‌ನಲ್ಲಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜತೆಗೆ ಸ್ವಿಜರ್ಲೆಂಡ್‌ನಲ್ಲಿ ಸಂತೋಷದ ಸಮಯಗಳನ್ನು ಕಳೆದಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗಾಗಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದಾರೆ. ವರ್ಷಾಂತ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟ್ವೆಂಟಿ-20 ಹಾಗೂ ಏಕದಿನ ಸರಣಿಗಳಲ್ಲಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಇದೀಗ ಹೊಸ ವರ್ಷಾರಂಭದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಜತೆಗೆ ಎರಡು ಪ್ರತ್ಯೇಕ ಸೀಮಿತ ಓವರ್‌ಗಳ ಸರಣಿಗಳಲ್ಲಿ ಭಾಗವಹಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2FeSI6N

ಪೇಜಾವರ ಯತಿ ಶ್ರೇಷ್ಠರ ಜೀವನದ ಪ್ರಮುಖ ಮೈಲಿಗಲ್ಲುಗಳು...

*ಬಿಹಾರದಲ್ಲಿ1966 ರಲ್ಲಿಭೀಕರ ಬರಗಾಲ ಬಂದಾಗ ಪರರ ನೆರವಿಗೆ ಧಾವಿಸಬೇಕೆನ್ನುವ ಸಮಾಜ ಮನೋಧರ್ಮ ಮೂಡಿಸಲು ಬರಗಾಲ ಮುಗಿಯುವ ತನಕ ಕೇವಲ ಒಂದು ಹಿಡಿ ಅಕ್ಕಿಯಲ್ಲಿಮಾಡಿದ ಅನ್ನ ಮಾತ್ರ ಸ್ವೀಕರಿಸಿದ್ದರು. *1963 ರಲ್ಲಿಕಲಬುರ್ಗಿಯಲ್ಲೂಭೀಕರ ಕ್ಷಾಮ. ಜಿಲ್ಲೆಯನ್ನು ಹಲವು ಬಾರಿ ಸುತ್ತಿ ಅನ್ನದಾನ ಕೇಂದ್ರ ಆರಂಭಿಸಿದರು. ವಿಜಯಪುರ, ಬೆಳಗಾವಿ, ರಾಯಚೂರಿನಲ್ಲೂ ಅನ್ನದಾನ ಕೇಂದ್ರ ತೆರೆದು ಸಂತ್ರಸ್ಥರಿಗೆ ಗಂಜಿ, ರೊಟ್ಟಿ, ಅನ್ನ ಉಣಿಸುವ ಕಾರ್ಯದಲ್ಲಿತೊಡಗಿದರು. *ಚಿಂಚೋಳಿಯಲ್ಲಿ1,000 ಗೋವುಗಳಿಗೆ ಮೇವು ಪೂರೈಸುವ ಗೋ ಕೇಂದ್ರ ಆರಂಭಿಸಿದರು. 1977 ರಲ್ಲಿಆಂಧ್ರದ ಕೃಷ್ಣ ಜಿಲ್ಲೆಯ ಅವನಿಗುಡ ಪ್ರದೇಶದಲ್ಲಿಭೀಕರ ಚಂಡಮಾರುತ. ವಿಹಿಂಪ ಕಾರ್ಯಕರ್ತರ ನೆರವಿನಿಂದ ಕೃಷ್ಣಸಾಗರ ಸಂಗಮದ ಸಮೀಪವಿರುವ ಹಂಸಲದೀವಿ ಗ್ರಾಮದಲ್ಲಿಪರಿಹಾರ ಕಾರ್ಯದಲ್ಲಿತೊಡಗಿದರು.

*1984 ರಲ್ಲಿಉತ್ತರ ಕರ್ನಾಟಕದಲ್ಲಿ ಬರ. ಬಾಗಲಕೋಟೆಯಲ್ಲಿಗೋ ಕೇಂದ್ರ ತೆರೆದು ಗದುಗಿನ ಸಮೀಪದ ಕುರುಡಗಿ ಗ್ರಾಮದಲ್ಲಿಕೆರೆ ಹೂಳೆತ್ತಲಾಯಿತು.1993 ರಲ್ಲಿಮಹಾರಾಷ್ಟ್ರದ ಲಾತೂರಿನಲ್ಲಿಭೂಕಂಪ ಪೀಡಿತ ಹಳ್ಳಿಗಳ ಭೇಟಿ, ಸ್ಥಳೀಯ ಸೇವಾ ಸಂಸ್ಥೆಗಳು ಮತ್ತು ಆಡಳಿತಕ್ಕೆ ಪರಿಹಾರ ಕಾರ್ಯದ ವ್ಯವಸ್ಥೆಗೆ ನೆರವಿನ ವ್ಯವಸ್ಥೆ ಮಾಡಿದ್ದರು. *ವಿಜಯಪು ಜಿಲ್ಲೆಯ ಇಂಡಿ ತಾಲೂಕಿನ ಭೀಮಾ ನದಿ ತೀರದ ಗೋವಿಂದಪುರದಲ್ಲೂಭೂಕಂಪ ಪೀಡಿತರಿಗಾಗಿ ಪರಿಹಾರ ಕೇಂದ್ರ. 60 ಮನೆ ನಿರ್ಮಾಣ. *1985 ರಲ್ಲಿಪಂಜಾಬ್‌ ಯುವಕರು ಸ್ವತಂತ್ರ ಸಿಖ್‌ ರಾಜ್ಯ ಸ್ಥಾಪನೆಗಾಗಿ ಭಯೋತ್ಪಾದಕ ಚಟುವಟಿಕೆಯಲ್ಲಿತೊಡಗಿದಾಗ ಶಾಂತಿ ಸ್ಥಾಪನೆ ನಿಟ್ಟಿನಲ್ಲಿಶ್ರೀವಿಶ್ವೇಶತೀರ್ಥ ಶ್ರೀಪಾದರು ವಿಹಿಂಪ ನೇತೃತ್ವದಲ್ಲಿಪಂಜಾಬಿನ ಪ್ರಮುಖ ನಗರಗಳಲ್ಲಿಶಾಂತಿ ಯಾತ್ರೆ ಮಾಡಿದರು. ಹಿಂದೂಗಳು ಬೇರೆ, ಸಿಖ್ಖರು ಬೇರೆ ಎನ್ನುವ ಭಾವನೆ ಬೇಡವೆಂದು ಪಂಜಾಬಿನ ಜನರಲ್ಲಿಮನವಿ ಮಾಡಿದರು. ಅಮೃತಸರದ ಸುವರ್ಣ ಮಂದಿರದಲ್ಲಿನಡೆದ ಸಿಖ್‌ ಧಾರ್ಮಿಕ ನಾಯಕರು ಮತ್ತು ದೇಶದ ಪ್ರಮುಖರ ಸಂತರ ಜತೆ ನಡೆದ ಮಾತುಕತೆಯಲ್ಲಿನಿರ್ಣಾಯಕ ಪಾತ್ರವನ್ನೂ ಶ್ರೀಪಾದರು ವಹಿಸಿದ್ದರು.


from India & World News in Kannada | VK Polls https://ift.tt/2MBxuns

ದಿನ ನಿತ್ಯವೂ ಸರಳ ಆಸನಗಳನ್ನು ಮಾಡುತ್ತಿದ್ದರು ಪೇಜಾವರ ಶ್ರೀ

ಬೆಂಗಳೂರು: "ಯೋಗ ಯಾರೋ ಒಬ್ಬರಿಗೆ, ಅಥವಾ ಅನಾರೋಗ್ಯ ಪೀಡಿತರಿಗೆ ಸೀಮಿತವಾದುದಲ್ಲ. ಇದು ಅತ್ಯಂತ ದೊಡ್ಡ ತಪ್ಪು ಕಲ್ಪನೆ. ಜಗತ್ತಿನ ಸಕಲರೂ ಅನುಸರಿಸಬೇಕಾದ ಒಂದು ಮಾರ್ಗ." ಯತಿ ಶ್ರೇಷ್ಠ ಶ್ರೀ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮಾತುಗಳಿವು. ಸದಾ ಚಟುವಟಿಕೆಯಿಂದಲೇ ಇರುತ್ತಿದ್ದ ಸ್ವಾಮೀಜಿ, ದಿನ ನಿತ್ಯ ಬೆಳಗ್ಗೆ ಯೋಗಾಭ್ಯಾಸ ಮಾಡುವುದನ್ನು ಎಂದೂ ಬಿಟ್ಟವರಲ್ಲ. ಜಳಕ, ಅನುಷ್ಠಾನಗಳ ಜತೆಗೆ ಸರಳ ಆಸನ, ಪ್ರಾಣಾಯಾಮಗಳನ್ನು ಮಾಡುತ್ತಿದ್ದರು. ಸಮಾಜಿಕ ಕೈಂಕರ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಪೇಜಾವರ ಶ್ರೀ, ಇತ್ತೀಚೆಗೆ ಗುರುಪೂರ್ಣಿಮೆಯ ದಿನದಂದು ದಿಲ್ಲಿಗೆ ತೆರಳಿದ್ದರು. ಅನಾರೋಗ್ಯಕ್ಕೆ ತುತ್ತಾಗುವ ವರೆಗೂ ಅವರು ದಿನ ನಿತ್ಯ ಯೋಗಾಭ್ಯಾಸ ಮಾಡುತ್ತಿದ್ದರು. ಐತಿಹಾಸಿಕ ಪರ್ಯಾಯದಲ್ಲೂ ದಿನ ನಿತ್ಯ ಯೋಗಾಭ್ಯಾಸ2017ರಲ್ಲಿ ಪೇಜಾವರ ಶ್ರೀ ಐತಿಹಾಸಿಕ ತಮ್ಮ ಐದನೇ ಪರ್ಯಾಯ ನಡೆಸುವ ವೇಳೆಯೂ ಒಂದು ದಿನವೂ ಯೋಗಭ್ಯಾಸ ಬಿಟ್ಟವರಲ್ಲ. ಆಧ್ಯಾತ್ಮಿಕ, ಶಾರೀರಿಕ ದೃಷ್ಟಿಯಿಂದ ಯೋಗಾಭ್ಯಾಸ ಮುಖ್ಯ. ದೇಹದಲ್ಲಿನ ಆರೋಗ್ಯ ಕಾಪಾಡಿಕೊಳ್ಳುವುದು, ಸದಾ ಲವಲವಿಕೆಯಿಂದಿರಲು ಯೋಗಾಭ್ಯಾಸ ಸಹಕಾರಿ ಎಂಬುದು ಶ್ರೀಗಳ ನಂಬಿಕೆಯಾಗಿತ್ತು. ಹೀಗಾಗಿಯೇ ಪರ್ಯಾಯದ ವೇಳೆ ಯತಿಗಳು ಮಾಡಬೇಕಾದ ಹಲವಾರು ಅನುಷ್ಠಾನಗಳಿರುತ್ತದೆ. ರಾತ್ರಿ ಎಷ್ಟೇ ತಡವಾಗಿ ಮಲಗಿದರೂ, ಮರುದಿನ ಬೆಳಗ್ಗೆ ಯೋಗಾಭ್ಯಾಸ ನಿತ್ಯ ಅನುಷ್ಠಾನದ ಒಂದು ಭಾಗವಾಗಿತ್ತು. ಯೋಗ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಪ್ರತಿಯೊಬ್ಬರಿಗೂ ಯೋಗಭ್ಯಾಸದಿಂದ ಅತ್ಯುತ್ತಮ ಆರೋಗ್ಯ ಲಭ್ಯವಾಗುತ್ತದೆ ಎಂದು ಶ್ರೀಗಳು ಆಗಾಗ್ಗೆ ಮಠದ ಭಕ್ತರಲ್ಲಿ ಹೇಳಿಕೊಳ್ಳುತ್ತಿದ್ದರು.

ಮಠದ ಯುವ ಶಿಷ್ಯರಿಗೆ ಪ್ರೇರಣಾಮಯಿಪೇಜಾವರ ಶ್ರೀಗಳು ಎಲ್ಲರ ಮುಂದೆ ಯೋಗಾಭ್ಯಾಸ ಮಾಡುತ್ತಿರಲಿಲ್ಲ. ಮುಂಜಾನೆ 3.30ರ ಸುಮಾರಿಗೇ ಎದ್ದು, ನಿತ್ಯ ಅನುಷ್ಠಾನಗಳಲ್ಲಿ ತೊಡಗಿಕೊಳ್ಳುತ್ತಿದ್ದ ಅವರು, ತಮ್ಮ ಕೊಠಡಿಯಲ್ಲಿ ಹದಿನೈದು-ಇಪ್ಪತ್ತು ನಿಮಿಷ ಯೋಗಾಭ್ಯಾಸ, ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ಇದು ಮಠದ ಎಲ್ಲ ಶಿಷ್ಯರಿಗೆ ತಿಳಿದಿರುವ ವಿಚಾರವೇ! 88 ಹರೆಯದ ಪೇಜಾವರ ಶ್ರೀಗಳು ವಿವಿಧ ಬಗೆಯ ಆಸನಗಳನ್ನು ಮಾಡುವುದು ಮಠದ ಯುವ ಶಿಷ್ಯರೆಲ್ಲರಿಗೆ ಪ್ರೇರಣಾದಾಯಕವಾಗಿತ್ತು. ಒಂದು ಧರ್ಮಕ್ಕೆ ಸೀಮಿತವಲ್ಲ ಅನ್ನುತ್ತಿದ್ದರು...ಎಲ್ಲ ಭಾರತೀಯರು ಯೋಗಾಭ್ಯಾಸದಲ್ಲಿ ತೊಡಗಬೇಕು. ಯೋಗ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಯೋಗಾಸನದ ವೇಳೆ ಓಂ ಹೇಳಲೇಬೇಕೆಂದೂ ಇಲ್ಲ. ಅದರ ಬದಲು ಅವರವರ ಧರ್ಮದ ಮಂತ್ರವನ್ನೂ ಜಪಿಸಬಹುದು. ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತವೂ ಆಗಬಾರದು. ಮನಸ್ಸು, ಶರೀರ ಸದೃಢಗೊಳ್ಳಲು ಯೋಗ ಸಹಕಾರಿ ಎನ್ನುತ್ತಿದ್ದರು ಪೇಜಾವರ ಶ್ರೀ.


from India & World News in Kannada | VK Polls https://ift.tt/2Q5Cym7

ಮೈದಾನದಲ್ಲೇ ವಾಗ್ವಾದಕ್ಕಿಳಿದ ಬೆನ್ ಸ್ಟೋಕ್ಸ್, ಸ್ಟುವರ್ಟ್ ಬ್ರಾಡ್

ಸೆಂಚುರಿಯನ್: ಆತಿಥೇಯ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ , ಮೈದಾನದ ಒಳಗೆ ಬಿಸಿ ಬಿಸಿ ಸನ್ನವೇಶ ಎದುರಿಸುವಂತಾಗಿದೆ. 2019ನೇ ಸಾಲಿನಲ್ಲಷ್ಟೇ ವಿಶ್ವಕಪ್ ಗೆಲುವು ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಆಂಗ್ಲರ ಪಡೆ ವರ್ಷಾಂತ್ಯದ ಪಂದ್ಯದಲ್ಲಿ ಅತೀವ ಒತ್ತಡಕ್ಕೊಳಗಾಗಿದೆ. ಎದುರಾಳಿ ಆಟಗಾರರ ವಿರುದ್ಧ ಜಟಾಪಟಿಗೊಳಗಾಗುವುದು ಸಾಮಾನ್ಯ ಕಂಡುಬರುತ್ತಿರುವ ದೃಶ್ಯವಾಗಿದೆ. ಆದರೆ ಇಂಗ್ಲೆಂಡ್ ಒಳಜಗಳ ತಾರಕ್ಕೇರುತ್ತಿದೆಯೇ ಎಂಬದು ಅನುಮಾನಕ್ಕೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಘಟನೆ ನಡೆದಿತ್ತು. ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ ವೇಳೆಯಲ್ಲಿ ಇಂಗ್ಲೆಂಡ್ ಉಪನಾಯಕ ಹಾಗೂ ಅನುಭವಿ ವೇಗದ ಬೌಲರ್ ಪರಸ್ಪರ ವಾಗ್ವಾದಕ್ಕಿಳಿದಿದ್ದರು. ಘಟನೆಯ ಹಿಂದಿನ ನೈಜ ಕಾರಣ ತಿಳಿದು ಬಂದಿಲ್ಲ. ಇದೀಗ ವೈರಲ್ ಆಗುತ್ತಿರುವ ವೀಡಿಯೋ ತುಣುಕುನಲ್ಲಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯ ಮಂಡಿಸುತ್ತಿರುವುದು ದರ್ಶನವಾಗುತ್ತಿದೆ. ಈ ವೇಳೆಯಲ್ಲಿ ಕುಪಿತಗೊಳ್ಳುವ ಬೆನ್ ಸ್ಟೋಕ್ಸ್ ತಮ್ಮ ಅಸಮಾಧಾನವನ್ನು ಹೊರಹಾಕುತ್ತಾ ಗುಂಪಿನಿಂದ ಹೊರ ನಡೆಯುತ್ತಾರೆ. ವೀಕ್ಷಕ ವಿವರಣೆಗಾರರಾದ ಇಂಗ್ಲೆಂಡ್ ಮಾಜಿ ನಾಯಕ ನಾಸೀರ್ ಹುಸೇನ್ ಹಾಗೂ ವೆಸ್ಟ್‌ಇಂಡೀಸ್ ಮಾಜಿ ದಿಗ್ಗಜ ಮೈಕಲ್ ಹೋಲ್ಡಿಂಗ್ ಈ ಬಗ್ಗೆ ಮೆಲುಕು ಹಾಕುತ್ತಾರೆ. ಆದರೆ ತದಾ ಬಳಿಕ ಇಬ್ಬರು ಆಟಗಾರರು ಕೈ ಮಿಲಾಯಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯುತ್ತಾರೆ. ವಾಗ್ವಾದದ ವೇಳೆಯಲ್ಲಿ ನಾಯಕ ಜೋ ರೂಟ್ ಸೇರಿದಂತೆ ತಂಡದ ಪ್ರಮುಖ ಆಟಗಾರರು ಸಮೀಪದಲ್ಲೇ ಇರುತ್ತಾರೆ. ಆದರೆ ಯಾರೂ ಕೂಡಾ ಮಧ್ಯೆ ಪ್ರವೇಶ ಮಾಡದೇ ಇರುವುದು ಹೆಚ್ಚಿನ ಗೊಂದಲ ಸೃಷ್ಟಿಸುವಂತಿದೆ. ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲಿ ತಂಡವು ಹಿನ್ನಡೆ ಎದುರಿಸುತ್ತಿದ್ದಾಗ ಆಟಗಾರರ ಮಧ್ಯೆ ಇಂತಹ ಸನ್ನಿವೇಶಗಳು ಎದುರಾಗುವುದು ಸಾಮಾನ್ಯವಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ME3uaD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...