ಲೀಡ್ಸ್: ಶನಿವಾರ ವಿಶ್ವಕಪ್ ಪ್ರಸಕ್ತ ಸಾಲಿನ ಲೀಗ್ ಕೊನೆಯ ಪಂದ್ಯದಲ್ಲಿ ಲೀಡ್ಸ್, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಟಾಸ್ ಗೆದ್ದಿರುವ ಮೊದಲು ಬ್ಯಾಟಿಂಗ್ ಮಾಡಲಿದೆ. ಭಾರತ vs ಶ್ರೀಲಂಕಾ: ಲೈವ್ ಸ್ಕೋರ್ ಅಪ್‌ಡೇಟ್ಸ್ ಈಗಾಗಲೇ ಗೆಲುವಿನ ವಿಶ್ವಾಸದಲ್ಲಿರುವ ಶನಿವಾರ ಶ್ರೀಲಂಕಾವನ್ನು ಎದುರಿಸುತ್ತಿದೆ. ಲೀಗ್‌ನ ಕೊನೆಯ ಪಂದ್ಯ ಇದಾಗಿದ್ದು, ಸೆಮಿಫೈನಲ್‌ಗೆ ಸಜ್ಜಾಗುವ ದೊಡ್ಡ ಜವಾಬ್ದಾರಿಯೂ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೇಲಿದೆ. ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ತನ್ನ ಪಾಲಿನ ಕೊನೆಯ ಲೀಗ್ ಪಂದ್ಯವನ್ನು ದೊಡ್ಡ ಗೆಲುವಿನೊಂದಿಗೆ ಮುಕ್ತಾಯಗೊಳಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಶ್ರೀಲಂಕಾ ತಂಡಕ್ಕಿದು ವಿಶ್ವಕಪ್ ಯಾನ ಮುಗಿಸುವ ಪಂದ್ಯವಾಗಿರುವುದರಿಂದ ಹೆಚ್ಚಿನ ನಿರೀಕ್ಷೆಗಳಿಲ್ಲ. ಆದರೆ, ಈ ಪಂದ್ಯದ ಮೂಲಕ ಭಾರತ ತಂಡ ಸೆಮಿಫೈನಲ್‌ಗೆ ಪೂರ್ವಸಿದ್ಧತೆ ಮಾಡಿಕೊಳ್ಳಬಹುದು. ವಿಶ್ವಕಪ್‌ನ ನಾಲ್ಕು ಸೆಮಿಫೈನಲ್ಸ್ ತಂಡಗಳ ನಿರ್ಧಾರವಾಗಿದ್ದರೂ ಯಾರು ನಂ.1 ಅಥವಾ ಯಾರು ನಂ.2 ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಲೀಗ್‌ನ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನೆಲ್ಲ ಸಾಮರ್ಥ್ಯ ಬಳಸಿಕೊಂಡು ಆಸ್ಪ್ರೇಲಿಯಾವನ್ನು ಸೋಲಿಸಿದರೆ ಅಂಕಪಟ್ಟಿಯಲ್ಲಿ ಭಾರತವನ್ನು ನಂಬರ್ ಒನ್ ಸ್ಥಾನದಲ್ಲಿ ಕಾಣಬಹುದು. ರೋಹಿತ್ ಶರ್ಮಾ 50ರಿಂದ 60 ಎಸೆತಗಳನ್ನು ಎದುರಿಸಿದರೆ ಟೀಮ್ ಇಂಡಿಯಾದ ಮೊತ್ತ ಜಾಸ್ತಿಯಾಗುತ್ತದೆ. ಇಂದಿನ ಪಂದ್ಯ ಉಭಯ ತಂಡಗಳ ಮೇಲೆ ದೊಡ್ಡ ಪರಿಣಾಮವೇನೂ ಬೀರದು. ಆದರೆ, ವಿಜೃಂಭಣೆಯಿಂದ ಲೀಗ್ ಮುಗಿಸುವ ಸಾಧ್ಯತೆ ಭಾರತ ತಂಡಕ್ಕಿದೆ. ತಂಡಗಳ ವಿವರ ಭಾರತ: ಕೊಹ್ಲಿ (ನಾಯಕ), ರೋಹಿತ್, ಕೆ.ಎಲ್.ರಾಹುಲ್, ಪಂತ್, ಹಾರ್ದಿಕ್ ಪಾಂಡ್ಯ, ಧೋನಿ, ದಿನೇಶ್ ಕಾರ್ತಿಕ್, ಚಹಲ್, ಶಮಿ, ಬುಮ್ರಾ, ಭುವನೇಶ್ವರ್, ಕುಲ್ದೀಪ್, ಮಯಾಂಕ್, ಆರ್.ಜಡೇಜಾ, ಕೇದಾರ್ ಜಾಧವ್. ಶ್ರೀಲಂಕಾ: ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಕುಸಾಲ್ ಪೆರೇರಾ, ಲಾಹಿರು ತಿರಿಮನ್ನೆ, ಎ.ಮ್ಯಾಥ್ಯೂಸ್, ಮಾಲಿಂಗ, ಜೀವನ್ ಮೆಂಡಿಸ್, ಧನಂಜಯ ಡಿ' ಸಿಲ್ವಾ, ಕಸುನ್ ರಿಜಿಥಾ, ಉದಾನ, ಲಕ್ಮಲ್, ಸಿರಿವರ್ದನ, ವಂಡರ್ಸೆ, ತಿಸಾರ ಪೆರೇರಾ, ಅವಿಷ್ಕ ಫೆರ್ನಾಂಡೊ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JgGux4