ಲೀಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಗುರುವಾರ ನಡೆಯುತ್ತಿರುವ ಪಂದ್ಯದಲ್ಲಿ ಅಫಘಾನಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿದೆ. ವೆಸ್ಟ್‌ಇಂಡೀಸ್ ದೈತ್ಯ ಕ್ರಿಸ್ ಗೇಲ್ ಪಾಲಿಗಿದು ಕೊನೆಯ ವಿಶ್ವಕಪ್ ಪಂದ್ಯವಾಗಿರಲಿದೆ. ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್‌ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆಡುವ ಬಳಗ ಇಂತಿದೆ: West Indies (Playing XI): , Evin Lewis, Shai Hope(w), Shimron Hetmyer, Nicholas Pooran, Jason Holder(c), Carlos Brathwaite, Fabian Allen, , Oshane Thomas, Kemar Roach Afghanistan (Playing XI): Rahmat Shah, Gulbadin Naib(c), Asghar Afghan, Mohammad Nabi, Samiullah Shinwari, Najibullah Zadran, Ikram Ali Khil(w), Rashid Khan, Dawlat Zadran, Sayed Shirzad, Mujeeb Ur Rahman ವಿಶ್ವಕಪ್ ಸೆಮಿಫೈನಲ್ಸ್ ಸ್ಪರ್ಧೆಯಿಂದ ಈಗಾಗಲೇ ಹೊರಬಿದ್ದಿರುವ ಅಫಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಗುರುವಾರ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಗೆಲುವಿನೊಂದಿಗೆ ಹೋರಾಟ ಕೊನೆಗೊಳಿಸುವುದು ಉಭಯ ತಂಡಗಳ ಇರಾದೆಯಾಗಿದೆ. ವೆಸ್ಟ್ ಇಂಡೀಸ್ ತಂಡ 8 ಪಂದ್ಯಗಳಿಂದ 3 ಅಂಕ ಹೊಂದಿದ್ದರೆ, ಇಷ್ಟೇ ಪಂದ್ಯಗಳನ್ನಾಡಿರುವ ಆಫ್ಘನ್ ತಂಡಕ್ಕೆ ಇಲ್ಲಿಯ ತನಕ ಖಾತೆ ತೆರೆಯುವುದಕ್ಕೇ ಸಾಧ್ಯವಾಗಿಲ್ಲ. ಹೀಗಾಗಿ ಗುರುವಾರ ಗೆಲುವಿನೊಂದಿಗೆ ಹೋರಾಟ ಅಂತ್ಯಗೊಳಿಸಲು ಕಾತರಿಸುತ್ತಿದೆ. ಕಳೆದ ವರ್ಷ ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಕ್ರಿಸ್ ಗೇಲ್, ಕಾರ್ಲೋಸ್ ಬ್ರಾತ್‌ವೇಟ್ ಮತ್ತು ಶಾಯ್ ಹೋಪ್‌ರಂಥ ಬಲಾಢ್ಯ ಆಟಗಾರರನ್ನು ಒಳಗೊಂಡಿರುವ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದಿರುವ ಅಫಘಾನಿಸ್ತಾನ, ವಿಶ್ವಕಪ್ ಮಹಾ ಸಮರದಲ್ಲಿ ಅಂಥದ್ದೇ ಪ್ರದರ್ಶನ ಸಂಘಟಿಸಲು ಹಾತೊರೆಯುತ್ತಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Javzos