ರೋಹಿತ್ ಬ್ಯಾಟಿಂಗ್ ಶೈಲಿ ಅನುಕರಿಸುವುದು ಮೂರ್ಖತನ: ರಾಹುಲ್

ಬರ್ಮಿಂಗ್‌ಹ್ಯಾಮ್: ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರ ಮೊದಲ ವಿಕೆಟ್‌ಗಾಗಿ 180 ರನ್‌ಗಳ ದಾಖಲೆಯ ಜತೆಯಾಟ ನೀಡಿರುವ ಹಾಗೂ ಆಧಾರ ಸ್ತಂಭವಾಗಿದ್ದಾರೆ. ಇಬ್ಬರು ತಮ್ಮದೇ ಆದ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ನಡುವೆ ಹೇಳಿಕೆ ಕೊಟ್ಟಿರುವ ಕೆಎಲ್ ರಾಹುಲ್, ರೋಹಿತ್ ಶರ್ಮಾ ಬ್ಯಾಟಿಂಗ್ ಅನುಕರಿಸುವುದು ಮೂರ್ಖತನ ಎಂದಿದ್ದಾರೆ. ರೋಹಿತ್ ವಿಭಿನ್ನ ವಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಅವರ ಬ್ಯಾಟಿಂಗ್ ಅನುಕರಿಸುವುದು ಅಸಾಧ್ಯ ಸರಿ ಎಂದು ಕರ್ನಾಟಕದ ರಾಹುಲ್ ಹೇಳುತ್ತಾರೆ. ರೋಹಿತ್ ಬ್ಯಾಟಿಂಗ್ ಅನುಕರಿಸಲು ಪ್ರಯತ್ನಿಸುವುದೇ ಮೂರ್ಖತನ. ಯಾಕೆಂದರೆ ವಿಶಿಷ್ಟ ಕ್ಲಾಸ್ ಹೊಂದಿರುವ ರೋಹಿತ್ ಒಮ್ಮೆ ಲಯಕ್ಕೆ ಬಂದರೆ ವಿಭಿನ್ನ ಪ್ಲಾನೆಟ್‌ನಲ್ಲಿರುತ್ತಾರೆ ಎಂದಿದ್ದಾರೆ. ವೈಯಕ್ತಿಕವಾಗಿ ನನ್ನ ಬ್ಯಾಟಿಂಗ್ ಬಗ್ಗೆ ಸಂತೃಪ್ತಿಯಿದೆ. ಆದರೆ ಉತ್ತಮ ಆರಂಭ ಪಡೆದಿರುವ ಹೊರತಾಗಿಯೂ ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗದೇ ಇರುವುದು ಬೇಸರಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಹೆಚ್ಚು ಚಿಂತಿತನಾಗಿಲ್ಲ ಎಂದಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2LAFntD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...