ತಿರುವನಂತಪುರಂ: ಇದೊಂದು ವಿಚಿತ್ರ ಪ್ರಕರಣ. ಅಕ್ರಮ ಸಂಬಂಧ ಎನ್ನುವುದು ಸಂಸಾರಗಳನ್ನು ಹಾಳು ಮಾಡಿದೆ. ಕೆಲವು ಪ್ರಕರಣಗಳು ಕೊಲೆಗಳಲ್ಲೂ ಅಂತ್ಯಗೊಂಡಿದೆ. ಆದರೆ ಇಲ್ಲೊಂದು ಅಕ್ರಮ ಸಂಬಂಧ ವಿಚಾರ ಭಾರಿ ಚರ್ಚೆಗೆ ಗುರಿಯಾಗಿದೆ. ಇಲ್ಲಿ ಅಕ್ರಮ ಸಂಬಂಧ ಹೊತ್ತಿರುವುದು ಯಾರು ಗೊತ್ತೇ? ನಾಯಿ. ಹೌದು ಸಾಕಿದ ಶ್ವಾನವೊಂದು ಅಕ್ರಮ ಸಂಬಂಧ ಹೊಂದಿದೆ ಅದನ್ನು ಮನೆಯಿಂದ ಹೊರಗೆ ಹಾಕಲಾಗಿದೆ. ಮನೆಯ ಒಡತಿಯೇ ಈ ರೀತಿಯ ಕೃತ್ಯ ಎಸಗಿದ್ದಾರೆ. ಮೂರು ವರ್ಷದ ಪೊಮೇರಿಯನ್ ನಾಯಿಯೊಂದನ್ನು ಅದರ ಮನೆಯ ಒಡತಿ ಮನೆಯಿಂದ ಹೊರ ಹಾಕಿದ್ದಾರೆ. ಮಳೆಯಲ್ಲಿ ನಿಂತು ಸಂಕಷ್ಟದಲ್ಲಿದ್ದ ನಾಯಿಮರಿಯನ್ನು ಕಂಡ ಪ್ರಾಣಿದಯಾ ಸಂಘದ ಕೆಲವರು ಕೂಡಲೇ ಅದನ್ನು ಸಂರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ತಿರುವನಂತಪುರಂನ ಚಾಕೈ ಎಂಬಲ್ಲಿ ಈ ನಾಯಿ ಏಕಾಂಗಿಯಾಗಿ ಅಡ್ಡಾಡುತ್ತಿತ್ತು. ಇದನ್ನು ಕಂಡ ಕೂಡಲೇ ಪ್ರಾಣಿ ದಯಾ ಸಂಘದ ಶಮೀಮ್ ಎಂಬುವರು ರಕ್ಷಿಸಿದ್ದಾರೆ. ಅಚ್ಚರಿ ಎಂದರೆ ಈ ನಾಯಿಯ ಕುತ್ತಿಗೆ ಪಟ್ಟಿಯಲ್ಲಿ ಒಂದು ಕಾಗದ ಕೂಡ ಇಡಲಾಗಿದೆ. ಈ ಹೊಂದಿತ್ತು. ಹೀಗಾಗಿ ನಾನು ಮನೆಯಿಂದ ಹೊರ ಹಾಕಿದ್ದೇನೆ. ಇದು ಬ್ರೆಡ್ ತಿನ್ನುತ್ತೆ. ಹಾಲು ಕುಡಿಯುತ್ತೆ. ಯಾವುದೇ ರೋಗವಿಲ್ಲ. ಆರೋಗ್ಯವಾಗಿದೆ. ಆದರೆ ಕೆಲವೊಮ್ಮೆ ಅತಿಯಾಗಿ ಬೊಗಳುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
from India & World News in Kannada | VK Polls https://ift.tt/2YjtJq0