ಜಪಾನ್ ಓಪನ್‌ನಲ್ಲಿ ಸಿಂಧೂ ಶುಭಾರಂಭ

ಟೊಕಿಯೊ: ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಸೂಪರ್‌ 750 ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ್ತಿ ಶುಭಾರಂಭ ಮಾಡಿಕೊಂಡಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಚೀನಾದ ಹಾನ್ ಯೂ ವಿರುದ್ಧ 21-9, 21-17ರ ಅಂತರದ ಸುಲಭ ಗೆಲುವು ದಾಖಲಿಸಿ ಪ್ರಿ ಕ್ವಾರ್ಟರ್‌ಗೆ ಮುನ್ನಡೆದಿದ್ದಾರೆ. ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಐದನೇ ಶ್ರೇಯಾಂಕಿತೆಯಾಗಿರುವ ಸಿಂಧೂ, ಪಂದ್ಯದ ಆರಂಭದಿಂದಲೇ ಎದುರಾಳಿಯ ಮೇಲೆ ಸವಾರಿ ಮಾಡಿದರು. ಈ ಮೂಲಕ ಕೇವಲ 37 ನಿಮಿಷಗಳಲ್ಲೇ ಪಂದ್ಯ ವಶಪಡಿಸಿಕೊಂಡರು. ಇದೀಗ ಗುರುವಾರ ನಡೆಯಲಿರುವ ದ್ವಿತೀಯ ಸುತ್ತಿನ ಹೋರಾಟದಲ್ಲಿ ಸ್ಥಳೀಯ ಆಟಗಾರ್ತಿ ಅಯಾ ಓಹೊರಿ ಸವಾಲನ್ನು ಸಿಂಧೂ ಎದುರಿಸಲಿದ್ದಾರೆ. ಓಹೊರಿ ವಿರುದ್ಧ 7-0 ಅಂತರದ ಜಯ-ಸೋಲಿನ ಅನುಪಾತವನ್ನು ಕಾಪಾಕೊಂಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ygcs0P

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...