ರಕ್ತ ಹರಿಯುತ್ತಿದ್ದರೂ ಬದ್ದತೆಯನ್ನು ಮೆರೆದ ಧೋನಿ

ಬರ್ಮಿಂಗ್‌ಹ್ಯಾಮ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಕಳೆದ ಭಾನುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ಗಾಗಿ ವಿರುದ್ಧ ಸಾಕಷ್ಟು ಟೀಕೆಗಳು ಎದ್ದಿದ್ದವು. ಕೊನೆಯ ಹಂತದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿರುವ ಧೋನಿ ಬದ್ಧತೆಯ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಆದರೆ ಇದೀಗ ತಡವಾಗಿ ಬೆಳಕಿಗೆ ಬಂದಿರುವ ಚಿತ್ರವು ಧೋನಿ ಬದ್ಧತೆಗೆ ಪುರಾವೆಯನ್ನು ನೀಡಿದೆ. 37 ಹರೆಯ ಹಿರಿಯ ಆಟಗಾರ ಧೋನಿ ಬ್ಯಾಟಿಂಗ್‌ ಸಂದರ್ಭದಲ್ಲಿ ಮೈದಾನದಲ್ಲಿ ಪದೇ ಪದೆ ರಕ್ತ ಉಗುಳಿದ್ದ ವಿಷಯ ಇದೀಗ ವೈರಲ್‌ ಆಗಿದೆ. ಆ ಪಂದ್ಯದಲ್ಲಿ ಎರಡು ಬಾರಿ (ವಿಕೆಟ್‌ಕೀಪಿಂಗ್‌ ಮತ್ತು ಬ್ಯಾಟಿಂಗ್‌ ಸಂದರ್ಭಗಳಲ್ಲಿ) ಧೋನಿಯ ಹೆಬ್ಬೆರಳಿಗೆ ಚೆಂಡು ಅಪ್ಪಳಿಸಿತ್ತು. ಹೀಗಾಗಿ ಅವರು ಮತ್ತೆ ಮತ್ತೆ ಬೆರಳು ಚೀಪಿ ರಕ್ತ ಉಗುಳುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧೋನಿ ಬಗ್ಗೆ ಟೀಕೆ ಮಾಡುತ್ತಿದ್ದವರು ಈಗ ತಣ್ಣಗಾಗಿದ್ದು, ತಂಡದ ಬಗೆಗಿನ ಅವರ ಶ್ರದ್ಧೆ ಮತ್ತು ಬದ್ಧತೆಯನ್ನು ಕೊಂಡಾಡತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಚಿತ್ರಗಳು ವೈರಲ್ ಆಗಿ ಹರಡುತ್ತಿದ್ದು, ಅಭಿಮಾನಿಗಳು ಧೋನಿಗೆ ಬೆಂಬಲವನ್ನು ಸೂಚಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2XtwcxG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...