87ರ ಹರೆಯದ ಸೂಪರ್ ಫ್ಯಾನ್‌ಗೆ ವಿರಾಟ್ ಸಂದೇಶ

ಲೀಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಭಾರತಕ್ಕೆ ಚಿಯರ್ ಹಾಡಲು 87ರ ಹರೆಯದ ಸೂಪರ್ ಫ್ಯಾನ್ ಆಗಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಿದ 87ರ ಅಜ್ಜಿಯ ಕ್ರಿಕೆಟ್ ಅಭಿಮಾನಿಕ್ಕೆ ಕ್ರೀಡಾಭಿಮಾನಿಗಳು ಮನ ಸೋತಿದ್ದರು. ಬಳಿಕ ಅಜ್ಜಿಯನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ನಾಯಕ ವಿಶ್ವಕಪ್‌ನ ಉಳಿದಿರುವ ಟಿಕೆಟ್‌ಗಳನ್ನು ಕೊಡಿಸುವುದಾಗಿ ಭರವಸೆ ನೀಡಿದ್ದರು. ಶ್ರೀಲಂಕಾ ವಿರುದ್ಧದ ಕೊನೆಯ ಲೀಗ್ ಪಂದ್ಯ, ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಅಜ್ಜಿಗೆ ಕೊಡಿಸಲಾಗಿದೆ. ಪೀಪಿ ಊದುವ ಜತೆಗೆ ತ್ರಿವರ್ಣ ಧ್ವಜ ಹಿಡಿದು ಅತ್ಯಂತ ಉತ್ಸಾಹದಿಂದ ಭಾರತ ತಂಡವನ್ನು ಬೆಂಬಲಿಸಿದ್ದ ಅಜ್ಜಿ ಈ ಬಾರಿ ನೀಲಿ ಜೆರ್ಸಿಯಲ್ಲಿ ಕಾಣಿಸುವ ಮೂಲಕ ತಮ್ಮ ದೇಶ ಪ್ರೇಮವನ್ನು ಮೆರೆದಿದ್ದಾರೆ. ಅಜ್ಜಿಗೆ ವಿಶೇಷ ಸಂದೇಶ ರವಾನಿಸಿರುವ ಕಪ್ತಾನ ಕೊಹ್ಲಿ, ಭಾರತ ತಂಡಕ್ಕಾಗಿ ನಿಮ್ಮ ಪ್ರೀತಿ ಹಾಗೂ ಉತ್ಸಾಹವು ನಮಗೆ ಸ್ಫೂರ್ತಿಯಾಗಿದೆ. ನಿಮ್ಮ ಕುಟುಂಬದ ಜತೆಗೆ ಪಂದ್ಯ ಆನಂದಿಸುವ ನಂಬಿಕೆ ನನಗಿದೆ. ತುಂಬಾನೇ ಪ್ರೀತಿಯೊಂದಿಗೆ ವಿರಾಟ್ ಎಂದು ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2JpOryV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...