ಲಂಡನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಭಾರತ ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ ಏಖದಿನ ಇತಿಹಾಸದಲ್ಲೇ ಭಾರತ ಏಳನೇ ಬಾರಿಗೆ ಸೆಮಿಫೈನಲ್ ಹಂತವನ್ನು ಪ್ರವೇಶಿಸಿದೆ. 1983ನೇ ಇಸವಿಯಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಬಳಿಕ ಫೈನಲ್ ಗೆದ್ದು ಚೊಚ್ಚಲ ವಿಶ್ವಕಪ್ ಟ್ರೋಫಿ ಮುಡಿಗೇರಿಸಿತ್ತು. ಅದಾದ ಬಳಿಕ 1987, 1996, 2003ರಲ್ಲೂ ಇದೇ ಸಾಧನೆಯನ್ನು ಪುನರಾವರ್ತಿಸಿತ್ತು. ತದಾನಂತರ 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಎರಡನೇ ಬಾರಿಗೆ ಕಿರೀಟ ಎತ್ತಿ ಹಿಡಿದಿತ್ತು. 2015ನೇ ಸಾಲಿನಲ್ಲೂ ಭಾರತ ಅಂತಿಮ ನಾಲ್ಕರ ಘಟ್ಟವನ್ನು ಪ್ರವೇಶಿಸಿತ್ತು. ಇದೀಗ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಮಗದೊಂದು ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಈ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಸತತ ಮೂರನೇ ಬಾರಿಗೆ ಸೆಮಿಫೈನಲ್ ಸಾಧನೆ ಮಾಡಿದೆ. ಅಷ್ಟೇ ಯಾಕೆ ಕಳೆದ ಆರು ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ಸೆಮಿಫೈನಲ್ ಪ್ರವೇಶಿಸಿದ ಹಿರಿಮೆಗೂ ಪಾತ್ರವಾಗಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಎಂಟು ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಭಾರತದ ಜತೆ ಜಂಟಿ ಎರಡನೇ ಸ್ಥಾನವನ್ನು ಹಂಚಿಕೊಂಡಿರುವ ನ್ಯೂಜಿಲೆಂಡ್ ಒಂದೇ ಒಂದು ಬಾರಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ. ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸೆಮಿಫೈನಲ್ ಸಾಧನೆಗಳು: 1983 (ಚಾಂಪಿಯನ್) 1987 (ಸೆಮಿಫೈನಲ್) 1996 (ಸೆಮಿಫೈನಲ್) 2003 (ರನ್ನರ್-ಅಪ್) 2011 (ಚಾಂಪಿಯನ್) 2015 (ಸೆಮಿಫೈನಲ್) 2019 (ಸೆಮಿಫೈನಲ್ (ಇದುವರಗಿನ ಫಲಿತಾಂಶ)) ಐಸಿಸಿ ಟೂರ್ನಿಯಲ್ಲಿ ಸತತ ಆರನೇ ಬಾರಿಗೆ ಸೆಮಿಫೈನಲ್ ಸಾಧನೆ: ಚಾಂಪಿಯನ್ಸ್ ಟ್ರೋಫಿ 2013 (ಚಾಂಪಿಯನ್) ಟ್ವೆಂಟಿ-20 ವಿಶ್ವಕಪ್ 2014 (ರನ್ನರ್-ಅಪ್) ಏಕದಿನ ವಿಶ್ವಕಪ್ 2015 (ಸೆಮಿಫೈನಲ್) ಟ್ವೆಂಟಿ-20 ವಿಶ್ವಕಪ್ 2016 (ಸೆಮಿಫೈನಲ್) ಚಾಂಪಿಯನ್ಸ್ ಟ್ರೋಫಿ 2017 (ರನ್ನರ್-ಅಪ್) (ಸೆಮಿಫೈನಲ್ (ಇದುವರಗಿನ ಫಲಿತಾಂಶ))
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2NAZquN