ಲಾರ್ಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಶುಕ್ರವಾರ ಬಾಂಗ್ಲಾದೇಶ ವಿರುದ್ಧ ನೆಡೆಯುತ್ತಿರುವ ಕೊನೆಯ ಲೀಗ್ ಪಂದ್ಯದಲ್ಲಿ 316 ರನ್ ಅಂತರದ ಗೆಲುವು ದಾಖಲಿಸಬೇಕಾದ ಒತ್ತಡಕ್ಕೆ ಸಿಲುಕಿದೆ. ಇದರಂತೆ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿ ಬಾಂಗ್ಲಾ ತಂಡವನ್ನು ಕನಿಷ್ಠ ಮೊತ್ತಕ್ಕೆ ಆಲೌಟ್ ಮಾಡಲು ಪ್ರಯತ್ನಿಸಲಿದ್ದೇವೆ ಎಂದು ನಾಯಕ ಸರ್ಫರಾಜ್ ಅಹ್ಮದ್ ಹೇಳಿಕೆ ನೀಡಿದ್ದರು. ಆದರೆ ಪಂದ್ಯ ಆರಂಭವಾಗಿರುವಂತೆಯೇ ಚಿತ್ರಣ ಬದಲಾಗಿದೆ. ಟಾಸ್ ಗೆದ್ದ ಪಾಕ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರೂ ಕೆಟ್ಟ ಆರಂಭವನ್ನು ಪಡೆದಿದೆ. ಇದರಿಂದಾಗಿ ಪಾಕಿಸ್ತಾನ ಆಟಗಾರರ ಬದ್ಧತೆಯ ಬಗ್ಗೆ ವ್ಯಾಪಕ ಟ್ರೋಲ್‌ಗಳು ಹರಿದಾಡತೊಡಗಿದೆ. 31 ಎಸೆತಗಳನ್ನು ಎದುರಿಸಿದ ಎಡಗೈ ಆರಂಭಿಕ ಫಖಾರ್ ಜಮಾನ್ ಕೇವಲ 13 ರನ್ ಗಳನ್ನಷ್ಟೇ ಗಳಿಸಿದ್ದರು. ಇದರಿಂದಾಗಿ ಮೊದಲ 10 ಓವರ್‌ಗಳಲ್ಲಿ 38 ರನ್ ಗಳಿಸಲಷ್ಟೇ ಯಶಸ್ವಿಯಾಗಿದೆ. ಹಾಗಾಗಿ 500ರನ್ ಗಳಿಸುವುದು ಕಷ್ಟವೇ ಸರಿ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2KZQ5KP