ದಾಖಲೆಯ 500 ರನ್ ಸೆಮೀಸ್ ಗುರಿಯೊಂದಿಗೆ ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ

ಲಾರ್ಡ್ಸ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶುಕ್ರವಾರ ನಡೆತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾದೇಶ ಸವಾಲನ್ನು ಎದುರಿಸುತ್ತಿದೆ. ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಪವಾಡದ ನಿರೀಕ್ಷೆಯಲ್ಲಿ ಪಾಕಿಸ್ತಾನ ಆತಿಥೇಯ ಇಂಗ್ಲೆಂಡ್‌ ತಂಡ ಬುಧವಾರ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿ ಸೆಮಿಫೈನಲ್ಸ್‌ ಪ್ರವೇಶಿಸುವುದರೊಂದಿಗೆ ಪ್ರಶಸ್ತಿ ಸ್ಪರ್ಧೆಯಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ ತಂಡ ಶುಕ್ರವಾರ ಲೀಗ್‌ ಹಂತದಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಬಾಂಗ್ಲಾ ತಂಡವೂ ಈಗಾಗಲೇ ಸೆಮಿಫೈನಲ್ಸ್‌ ಸ್ಪರ್ಧೆಯಿಂದ ಹೊರಬಿದ್ದಿರುವುದರಿಂದ ಈ ಪಂದ್ಯಕ್ಕೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ. ವೆಸ್ಟ್‌ ಇಂಡೀಸ್‌ ಮತ್ತು ಅಫಘಾನಿಸ್ತಾನ ನಡುವಣ ಗುರುವಾರದ ಪಂದ್ಯಕ್ಕೂ ಇದೇ ಸ್ಥಿತಿ ಎದುರಾಗಿತ್ತು. ಭಾರತ ತಂಡ ಕಳೆದ ಭಾನುವಾರ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಸೋತಾಗಲೇ ಪಾಕ್‌ ತಂಡದ ಸೆಮಿಫೈನಲ್ಸ್‌ ಹಾದಿಯ ಮೇಲೆ ಕರಿನೆರಳು ಕವಿದಿತ್ತು. ಬುಧವಾರ ರಾತ್ರಿ ನ್ಯೂಜಿಲೆಂಡ್‌ ವಿರುದ್ಧ ಇಂಗ್ಲೆಂಡ್‌ ಗೆಲ್ಲುವುದರೊಂದಿಗೆ ಸರ್ಫರಾಜ್‌ ಅಹಮದ್‌ ಬಳಗದ ಉಪಾಂತ್ಯ ಹಾದಿ ಸಂಪೂರ್ಣ ಬಂದ್‌ ಆಯಿತು. ಆದರೂ, ನಿಯಮದ ಪ್ರಕಾರ, ಪಾಕ್‌ ತಂಡ ಸೆಮೀಸ್‌ ಸ್ಪರ್ಧೆಯಿಂದ ಅಧಿಕೃತವಾಗಿ ಹೊರಬಿದ್ದಿಲ್ಲ. ಶುಕ್ರವಾರ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಪವಾಡವೇನಾದರೂ ನಡೆದಲ್ಲಿ ಪಾಕ್‌ ತಂಡ ಸೆಮಿಫೈನಲ್ಸ್‌ ಪ್ರವೇಶಿಸಬಹುದು. ಪಾಕ್‌ ಸೆಮಿಫೈನಲ್ಸ್‌ ಸಾಧ್ಯಾಸಾಧ್ಯತೆ... ನ್ಯೂಜಿಲೆಂಡ್‌ (+0.175) ಮತ್ತು ಪಾಕಿಸ್ತಾನ ತಂಡಗಳ ನೆಟ್‌ರನ್‌ರೇಟ್‌ (-0.792) ನಡುವೆ ಅಜಗಜಾಂತರ. ಹೀಗಾಗಿ ಪಾಕ್‌ ತಂಡ ಶುಕ್ರವಾರ ಸೆಮಿಫೈನಲ್ಸ್‌ಗೆ ಅರ್ಹತೆ ಗಳಿಸಬೇಕಾದರೆ ಮೊದಲು ಬ್ಯಾಟ್‌ ಮಾಡಿ ಕನಿಷ್ಠ 308 ರನ್‌ ಪೇರಿಸಬೇಕು. ನಂತರ ಎದುರಾಳಿ ಬಾಂಗ್ಲಾದೇಶ ತಂಡವನ್ನು ಶೂನ್ಯಕ್ಕೆ ಆಲೌಟ್‌ ಮಾಡಬೇಕು. ಪಾಕಿಸ್ತಾನ 308ಕ್ಕಿಂತ ಒಂದು ರನ್‌ ಕಡಿಮೆ ಗಳಿಸಿದರೂ ನಾಲ್ಕರ ಹಂತ ಪ್ರವೇಶಿಸಲು ಸಾಧ್ಯವಿಲ್ಲ. ಒಂದು ವೇಳೆ, ಪಾಕಿಸ್ತಾನ 350 ಅಥವಾ 400 ರನ್‌ ಕಲೆಹಾಕಿದರೆ, ಕ್ರಮವಾಗಿ 312 ಅಥವಾ 316 ರನ್‌ಗಳ ಅಂತರದಿಂದ ಬಾಂಗ್ಲಾ ಎದುರು ಗೆಲ್ಲಬೇಕು. ಮೊದಲು ಫೀಲ್ಡಿಂಗ್‌ ಅವಕಾಶ ದೊರೆತರಂತೂ ಕೇಳುವುದೇ ಬೇಡ, ಉಪಾಂತ್ಯದ ಬಗ್ಗೆ ಕನಸೂ ಕಾಣುವ ಹಾಗಿಲ್ಲ. ಮತ್ತೊಂದೆಡೆ ಬಾಂಗ್ಲಾದೇಶ ತಂಡ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ ಶ್ರೇಷ್ಠ ಆಲ್‌ರೌಂಡ್‌ ಪ್ರದರ್ಶನದ ಬಲದಿಂದ 3 ಪಂದ್ಯಗಳಲ್ಲಿ ಜಯ ಬಳಿಸಿ ಸೆಮಿಫೈನಲ್ಸ್‌ ಹಾದಿಯಲ್ಲಿ ನಾಗಾಲೋಟ ಬೆಳೆಸಿತ್ತು. ಆದರೆ, ನಿರ್ಣಾಯಕ ಪಂದ್ಯದಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು. 1999ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿರುವ ಬಾಂಗ್ಲಾದೇಶ, ಇದೀಗ ಅದೇ ವಿಶ್ವಾಸದಲ್ಲಿ ಗೆಲುವಿನ ಕನಸು ಕಾಣತೊಡಗಿದೆ. ಒಟ್ಟಾರೆ ಏಷ್ಯಾ ತಂಡಗಳ ನಡುವೆ ಇಲ್ಲಿನ 'ಕ್ರಿಕೆಟ್‌ ಕಾಶಿ' ಲಾರ್ಡ್ಸ್ನಲ್ಲಿ ಶುಕ್ರವಾರ ಹೈವೋಲ್ಟೇಜ್‌ ಹಣಾಹಣಿ ನಿರೀಕ್ಷಿಸಬಹುದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Yy2k4h

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...