ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ತೀರ್ಮಾನಿಸಿದ್ದೇನೆ - ಬಿಎಸ್ವೈ ಘೋಷಣೆ

ಬೆಂಗಳೂರು: ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ನೀಡುವುದಾಗಿ ತಿಳಿಸಿದ್ದಾರೆ. ಮಧ್ಯಾಹ್ನ ಊಟದ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸೋಮವಾರ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ತಮ್ಮ ನಿರ್ಗಮನದ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ತೊರೆಯುತ್ತಿರುವ ಬಗ್ಗೆ ಘೋಷಣೆ ಮಾಡುವಾಗ ಗದ್ಗದಿತರಾದರು. ಕಣ್ಣಾಲಿಗಳನ್ನು ತುಂಬಿಕೊಂಡ ಅವರು ಮುಖ್ಯಮಂತ್ರಿಯಾಗಿ ಇದು ತಮ್ಮ ಕೊನೆಯ ದಿನ ಎಂಬ ಮಾಹಿತಿಯನ್ನು ನೀಡಿದರು. ಮಧ್ಯಾಹ್ನ ಊಟದ ನಂತರ ರಾಜಭವನಕ್ಕೆ ತೆರಳಿ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು. ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ. ಸಂತೋಷದಿಂದಲೇ ರಾಜೀನಾಮೆ ಸಲ್ಲಿಸುತ್ತಿದ್ದೇನೆ. 75 ವರ್ಷ ದಾಟಿದ ಬಳಿಕವೂ ಮತ್ತೆ ಎರಡು ವರ್ಷ ಮುಖ್ಯಮಂತ್ರಿಯಾಗಿರಲು ಅವಕಾಶ ನೀಡಿದ್ದ ಅಮಿತ್ ಶಾ, ನರೇಂದ್ರ ಮೋದಿ, ನಡ್ಡಾ ಅವರಿಗೆ ಶಬ್ದಗಳಲ್ಲಿ ವಂದನೆ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಶಿಕಾರಿಪುರ ತಾಲ್ಲೂಕಿನ ಜನರು ನನ್ನನ್ನು ಏಳು ಬಾರಿ ಶಾಸಕರಾಗಿ ಮಾಡಿದ್ದರು. ಅಧಿಕಾರ, ತೋಳ್ಬಲ, ಜಾತಿಯ ಬಳಕೆಗಳನ್ನು ಮಾಡಿದ್ದರೂ ಜನ ನಮ್ಮನ್ನು ಕೈಬಿಡಲಿಲ್ಲ. ನಾವು ಈಗಿರುವ ಸ್ಥಿತಿಗೆ ಲಕ್ಷಾಂತರ ಕಾರ್ಯಕರ್ತರ ಶ್ರಮ ಕಾರಣ ಎಂದು ಹೇಳಿದರು. ಸಮಾವೇಶದಲ್ಲಿ ಆರಂಭದಿಂದಲೂ ಯಡಿಯೂರಪ್ಪ ಅವರ ಮಾತುಗಳು ವಿದಾಯದ ಭಾಷಣದಂತೆ ಕಂಡುಬಂದಿತ್ತು. ಭಾವುಕ ಮಾತುಗಳಲ್ಲಿಯೇ ಅವರು ತಾವು ನಡೆದುಬಂದ ಹಾದಿಯನ್ನು ನೆನೆದರು. ತಾವು ಏಕಾಂಗಿಯಾಗಿ ಹೋರಾಟ ಮಾಡಿದ ಬಗೆ, ಸಾಮಾನ್ಯ ಕಾರ್ಯಕರ್ತನ ಹಂತದಿಂದ ಸಿಎಂ ಸ್ಥಾನದವರೆಗೆ ಬೆಳೆದ ರೀತಿ, ಸರ್ಕಾರ ನಡೆಸಲು ಎದುರಿಸಿದ ಸಂಕಷ್ಟಗಳು, ಎದುರಾದ ಸವಾಲುಗಳನ್ನು ಅವರು ಹಂಚಿಕೊಂಡರು. ಜನರ ಆಶೀರ್ವಾದದಿಂದ ಸಾಧನೆ ಮಾಡಿದ್ದೇನೆ. ಮಾಧ್ಯಮಗಳು ಎಲ್ಲ ಸಂದರ್ಭದಲ್ಲಿ ನನ್ನ ಜೊತೆ ನಿಂತಿದೆ. ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದು ಸಂದರ್ಭದಲ್ಲಿ ಜೆಡಿಎಸ್ ಜೊತೆ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ಮಾಡಲಾಗಿತ್ತು. ಆದರೆ ಒಪ್ಪಂದದಂತೆ ಅವರ ನಡೆಯದ ಕಾರಣ ನಾನು ಸಿಎಂ ಪಡೆಯದೆ ಪಕ್ಷ ಸಂಘಟನೆ ಮಾಡಿದೆ. ಕಾಲಿಗೆ ಚಕ್ರ ಕಟ್ಟಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತಂದೆ. ನಮ್ಮದೇ ಆದ ತಪ್ಪಿನಿಂದ ಕಳೆದ ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯ ಆಗಿಲ್ಲ. ಆದರೆ ಮತ್ತೊಮ್ಮೆ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಅಧಿಕಾರಕ್ಕೆ ತರುತ್ತೇನೆ ಎಂದರು.


from India & World News in Kannada | VK Polls https://ift.tt/3iKZTGV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...