ತೈಲ ಬೆಲೆ ಏರಿಕೆಗೆ ರಾಜ್ಯದ ತೆರಿಗೆ ಕಾರಣ ಎಂಬ ಹಸಿ ಸುಳ್ಳನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ; ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ನಿರ್ಮಲಾ ಸೀತಾರಾಮನ್ ತನ್ನನ್ನು ಆರಿಸಿಕಳಿಸಿರುವ ಕರ್ನಾಟಕಕ್ಕೆ ತಾನೇ ಮಾಡಿರುವ ಅನ್ಯಾಯವನ್ನು ಮುಚ್ಚಿಹಾಕಲು ವಾಸ್ತವಾಂಶವನ್ನು ತಿರುಚಿ ರಾಜ್ಯದ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಈ ಮೋಸವನ್ನು ಪ್ರಜ್ಞಾವಂತ ಕನ್ನಡಿಗರಿಗೆ ಅರ್ಥಮಾಡಿಕೊಳ್ಳುವ ಜಾಣ್ಮೆ ಇದೆ ಎಂದಿರುವ ಸಿದ್ದರಾಮಯ್ಯ, 2020-21ರ ರಾಜಸ್ವ ಕೊರತೆ ಮತ್ತು ತೆರಿಗೆಯಲ್ಲಿ ಕರ್ನಾಟಕಕ್ಕೆ ನ್ಯಾಯಬದ್ಧವಾಗಿ ನೀಡಬೇಕಾದ ಪಾಲಿನಲ್ಲಿ ಆಗಿರುವ ಅನ್ಯಾಯವನ್ನು ಸರಿದೂಗಿಸಲು 15ನೇ ಹಣಕಾಸು ಆಯೋಗ ರಾಜ್ಯ್ಕಕೆ ರೂ.5495 ಕೋಟಿಯ ವಿಶೇಷ ಅನುದಾನವನ್ನು ಶಿಫಾರಸು ಮಾಡಿತ್ತು. ಆ ಅನುದಾನಕ್ಕೆ ಕಲ್ಲು ಹಾಕಿ ರಾಜ್ಯಕ್ಕೆ ದ್ರೋಹ ಬಗೆದಿದ್ದಾರೆ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಕೇಂದ್ರದಿಂದ ಬರುವ ತೆರಿಗೆ ಪಾಲು ರೂ.31,180 ಕೋಟಿ ಎಂದು ಶಿಫಾರಸುಮಾಡಿತ್ತು. 2020-21ರ ಕರ್ನಾಟಕದ ಬಜೆಟ್ ನಲ್ಲಿ ಈ ಪಾಲನ್ನು ರೂ.28.591ಕೋಟಿಗೆ ನಿಗದಿಪಡಿಸಲಾಗಿತ್ತು. ಕೊನೆಗೆ ಪರಿಷ್ಕೃತ ಅಂದಾಜಿನಲ್ಲಿ ತೆರಿಗೆ ಪಾಲನ್ನು ರೂ.20,053 ಕೋಟಿಗೆ ಇಳಿಕೆ ಮಾಡಲಾಗಿತ್ತು. ಈ ಕಾರಣಕ್ಕಾಗಿಯೇ ರಾಜ್ಯಕ್ಕೆ ವಿಶೇಷ ಅನುದಾನದ ಅಗತ್ಯ ಹೆಚ್ಚಿತ್ತು ಎಂದು ಹೇಳಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರವೇ 2020-21ರ ಸಾಲಿನ ರಾಜಸ್ವ ಕೊರತೆ ರೂ.19,485 ಎಂದು ಪರಿಷ್ಕರಿಸಿದ್ದರೂ, ಹಣಕಾಸು ಖಾತೆಯಂತ ಜವಾಬ್ದಾರಿ ಸ್ಥಾನದಲ್ಲಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಅದು ಮಿಗತೆಯಾಗಿ ಹೇಗೆ ಕಾಣಿಸಿದೆ ಎನ್ನುವುದನ್ನು ಅವರೇ ರಾಜ್ಯದ ಜನತೆಗೆ ವಿವರಣೆ ನೀಡಬೇಕಾಗುತ್ತದೆ ಎಂದಿರುವ ಸಿದ್ದರಾಮಯ್ಯ, ಕೇವಲ ವಿಶೇಷ ಅನುದಾನದಲ್ಲಿ ಮಾತ್ರವಲ್ಲ ಜಿಎಸ್ ಟಿ ತೆರಿಗೆ ಪರಿಹಾರದಲ್ಲಿ ಕೂಡಾ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ನಷ್ಟ ಸರಿದೂಗಿಸಲು ರಾಜ್ಯ ಸರ್ಕಾರ ಸಾಲದ ಮೊರೆ ಹೋಗಬೇಕಾಯಿತು. ಹೀಗಿದ್ದರೂ ರಾಜ್ಯದ ಮುಖ್ಯಮಂತ್ರಿಗಳಾಗಲಿ, ಬಿಜೆಪಿ ಸಂಸದರಾಗಲಿ ಈ ಅನ್ಯಾಯದ ವಿರುದ್ಧ ಸಣ್ಣ ವಿರೋಧದ ದನಿಯನ್ನು ಎತ್ತದೆ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ರಾಜ್ಯ ಹೇರಿರುವ ತೆರಿಗೆ ಕಾರಣ ಎಂಬ ಹಸಿಸುಳ್ಳನ್ನು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಸ್ತವದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹೇರಿರುವ ಅಬಕಾರಿ ತೆರಿಗೆಯೇ ಬೆಲೆ ಏರಿಕೆಗೆ ಕಾರಣವಾಗಿದೆ. ಅಬಕಾರಿ ಸುಂಕವನ್ನು ಡೀಸೆಲ್ ಮೇಲೆ ಲೀಟರಿಗೆ ರೂ.3.45ರಿಂದ ರೂ.31.84ಕ್ಕೆ ಮತ್ತು ಪೆಟ್ರೋಲ್ ಮೇಲೆ ರೂ.9.21ರಿಂದ ರೂ.32.98ಕ್ಕೆ ಏರಿಸಲಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ರಾಜ್ಯ ಕಾಂಗ್ರೆಸ್ ನಿರಂತರವಾಗಿ ಪ್ರತಿಭಟಿಸುತ್ತಾ ಬಂದಿದೆ. ರಾಜ್ಯದ ಬಿಜೆಪಿ ನಾಯಕರು ಈ ಅನ್ಯಾಯವನ್ನು ಪ್ರತಿಭಟಿಸದಿರುವುದು ಮಾತ್ರವಲ್ಲ ಪರೋಕ್ಷವಾಗಿ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2TnREbp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...