'ಅವಿವೇಕಿ ಜನಪ್ರತಿನಿಧಿ' ಪದಕ್ಕೆ ಸಂಸದ ಗರಂ: ಸಭೆಯಿಂದ ಹೊರ ನಡೆದ ಪ್ರತಾಪ್‌ ಸಿಂಹ ವಿರುದ್ಧ ರೈತರಿಂದ ಧಿಕ್ಕಾರ

: ರೈತ ಮುಖಂಡರೊಬ್ಬರು ಬಳಸಿದ 'ಅವಿವೇಕಿ ಜನಪ್ರತಿನಿಧಿ' ಪದದಿಂದ ಜಿಲ್ಲಾಪಂಚಾಯಿತಿ ಆವರಣದಲ್ಲಿಕೆಲ ಕಾಲ ಗದ್ದಲ ಉಂಟಾಯಿತು. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಜಿ.ಪಂ.ಗೆ ಆಗಮಿಸಿದ ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದವರು ರೈತರ ಸಮಸ್ಯೆಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಕೊಡುವ ಸಂದರ್ಭ 'ಅವಿವೇಕಿ ಜನಪ್ರತಿನಿಧಿಗಳಿಂದ' ಅನ್ನದಾತರ ಸಮಸ್ಯೆ ಇತ್ಯರ್ಥಗೊಳ್ಳುತ್ತಿಲ್ಲ ಎಂಬ ಸಂಘದ ಮುಖಂಡ ಬಸವರಾಜು ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ''ಜನಪ್ರತಿನಿಧಿಗಳಿಗೆ ಅವಿವೇಕಿಗಳು ಎನ್ನುವ ಇವರಿಗೆ ವಿವೇಕವಿದೆಯೇ,'' ಎಂದು ಪ್ರಶ್ನಿಸಿ ಸಭೆ ಕಡೆಗೆ ಸಚಿವರೊಂದಿಗೆ ಹೆಜ್ಜೆ ಹಾಕಿದರು. ಇದನ್ನು ಖಂಡಿಸಿ ರೈತ ಮುಖಂಡರು ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ಸಂಸದರು ವಿವೇಕದಿಂದ ವರ್ತಿಸಲಿ ಎಂದ ಕುರುಬೂರು! ರೈತರ ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಭೇಟಿ ಮಾಡಲು ಹೋದ ರೈತ ಮುಖಂಡರನ್ನು ಸಂಸದ ಪ್ರತಾಪ್‌ಸಿಂಹ ರೊಚ್ಚಿಗೆಬ್ಬಿಸಿ ಬೇಜವಾಬ್ದಾರಿ ಯಾಗಿ ನಡೆದುಕೊಂಡಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ದೂರಿದ್ದಾರೆ. ''ರೈತರ ಪ್ರಮುಖ ಸಮಸ್ಯೆಗಳಾದ ಕಬಿನಿ, ಕಾವೇರಿ ನಾಲೆಗಳಿಗೆ ನೀರು, ಬಣ್ಣಾರಿ ಸಕ್ಕರೆ ಕಾರ್ಖಾನೆಯ ಕಬ್ಬು ದರ ನಿಗದಿ, ಸಂಕಷ್ಟದಲ್ಲಿರುವ ರೈತರಿಗೆ ಸಹಕಾರಿ ಬ್ಯಾಂಕುಗಳಲ್ಲಿಸಾಲ ಕೊಡಿಸಬೇಕೆಂದು ಜಿಲ್ಲಾಉಸ್ತುವಾರಿ ಸಚಿವರನ್ನು ಜಿಪಂ ಆವರಣದಲ್ಲಿಭೇಟಿಯಾಗಲು ತೆರಳಿದ ಸಂದರ್ಭ ಅನವಶ್ಯಕವಾಗಿ ಮಧ್ಯಪ್ರವೇಶಿಸಿದ್ದು ಸರಿಯಲ್ಲ,'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ''ಸಂಸದರು ಈ ಮುಂಚೆಯೂ ಇದೇ ರೀತಿ ನಡೆದುಕೊಂಡಿದ್ದು, ಜನಪ್ರತಿನಿಧಿಯಾಗಿ ಅಹಂಕಾರ ಬಿಟ್ಟು ವಿವೇಕದಿಂದ ನಡೆದುಕೊಳ್ಳಲಿ. ಮಿಠಾಯಿ ಮಾರುವವರನ್ನು, ಹೋಟೆಲ್‌ ನಡೆಸುವವರನ್ನು ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸುತ್ತಾರೆ. ಆದರೆ, ಯಾವ ರೈತ ಮುಖಂಡರನ್ನು ನರೇಂದ್ರ ಮೋದಿ ಅವರಿಗೆ ಪರಿಚಯಿಸಿ ಅನ್ನದಾತರ ಕಷ್ಟ ಪರಿಹರಿಸಿದ್ದಾರೆ,'' ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.


from India & World News in Kannada | VK Polls https://ift.tt/2V26wfO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...