ದೇಶಿ ಕ್ರಿಕೆಟಿಗರ ಸಂಭಾವನೆ ಏರಿಕೆಗೆ ಮುಂದಾದ ಬಿಸಿಸಿಐ! ದಿನಕ್ಕೆ ಆಟಗಾರನ ಸಂಬಳ ಎಷ್ಟು ಗೊತ್ತೆ?

ಹೊಸದಿಲ್ಲಿ: ಮುಂಬರುವ 2021/22ರ ಆವೃತ್ತಿಯ , ವಿಜಯ್‌ ಹಝಾರೆ ಟ್ರೋಫಿ ಹಾಗೂ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಆಡುವ ದೇಶಿ ಕ್ರಿಕೆಟಿಗರ ಪಂದ್ಯದ ಸಂಭಾವನೆಯನ್ನು ಏರಿಕೆ ಮಾಡುವಂತೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬೆಡಿಕೆಯನ್ನು ಸ್ವೀಕರಿಸುವ ಬಹುತೇಕ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದೇಶಿ ಕ್ರಿಕೆಟಿಗರ ಸಂಭಾವನೆಯನ್ನು ಏರಿಕೆ ಮಾಡುವ ಕುರಿತಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಕಾರ್ಯದರ್ಶಿ ಜೇ ಶಾ ಹಾಗೂ ಖಜಾಂಚಿ ಅರುಣ್‌ ಧುಮುಲ್‌ ಅವರನ್ನೊಳಗೊಂಡ ಎರಡು ದಿನಗಳ ಸಭೆಯನ್ನು ಮುಂಬೈನಲ್ಲಿ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಒಂದು ವೇಳೆ ಬಿಸಿಸಿಐ ಇದಕ್ಕೆ ಒಪ್ಪಿಗೆ ನೀಡಿದರೆ, 20 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳಾಡಿರುವ ಅನುಭವ ಹೊಂದಿರುವ ಕ್ರಿಕೆಟಿಗರಿಗೆ ದಿನಕ್ಕೆ 35,000 ರೂ. ಬದಲು 60,000 ರೂ. ಸಂಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. 20ಕ್ಕಿಂತ ಕಡಿಮೆ ಪಂದ್ಯಗಳ ಅನುಭವ ಹೊಂದಿರುವ ಕ್ರಿಕೆಟಿಗರು ದಿನಕ್ಕೆ 45,000 ರೂ.ಗಳನ್ನು ಪಡೆದುಕೊಳ್ಳಲಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ದೈನಿಕ್‌ ಜಾಗ್ರನ್‌ ಹಿಂದಿ ದಿನ ಪತ್ರಿಕೆಗೆ ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. ಅಕ್ಟೋಬರ್‌ನಿಂದ 2021-22ರ ದೇಶಿ ಆವೃತ್ತಿ ಆರಂಭಿಸಲು ಬಿಸಿಸಿಐ ಚಿಂತನೆ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಆವೃತ್ತಿಯಲ್ಲಿ ವಿಜಯ್‌ ಹಝಾರೆ ಟ್ರೋಫಿ ಹಾಗೂ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಗಳನ್ನು ಮಾತ್ರ ಆಯೋಜಿಸಲಾಗಿತ್ತು. ಆದರೆ, ರಣಜಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ರಣಜಿ ಟ್ರೋಫಿ ಆಡಿಸದೇ ಇದ್ದ ಕಾರಣ ಆಟಗಾರರಿಗೆ ಪರಿಹಾರವನ್ನು ನೀಡುವ ಸಲುವಾಗಿ ಬಿಸಿಸಿಐ ಚಂತನೆ ನಡೆಸುತ್ತಿದೆ. 2021/22ರ ದೇಶಿ ಆವೃತ್ತಿಯನ್ನು ಅಕ್ಟೋಬರ್‌ನಿಂದ ಏಪ್ರಿಲ್‌ ವರೆಗೂ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ. ಪುರುಷರ, ಮಹಿಳೆಯರ ಹಾಗೂ ಕಿರಿಯರ ಟೂರ್ನಿಗಳನ್ನು ಬಿಸಿಸಿಐ ಆಯೋಜಿಸಲಿದೆ. ಹಿರಿಯ ಪುರುಷರಿಗೆ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ(ಟಿ20), ವಿಜಯ್‌ ಹಝಾರೆ ಟ್ರೋಫಿ (ಓಡಿಐ) ಹಾಗೂ ರಣಜಿ ಟ್ರೋಫಿ ಟೂರ್ನಿಗಳನ್ನು ಆಡಿಸಲಾಗುತ್ತದೆ. ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಕಳೆದ ಆವೃತ್ತಿಯಲ್ಲಿ ರಣಜಿ ಟ್ರೋಫಿಯನ್ನು ರದ್ದುಗೊಳಿಸಲಾಗಿತ್ತು. ಟೂರ್ನಿ ಆರಂಭವಾದ 87 ವರ್ಷಗಳ ಬಳಿಕ ಇದೇ ಮೊದಲ ಬಾರಿ ನಾಲ್ಕು ದಿನಗಳ ಸ್ವರೂಪದ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಈ ಬಾರಿ ಟೂರ್ನಿಯನ್ನು ಡಿಸೆಂಬರ್‌ ನಿಂದ ಮಾರ್ಚ್‌ವರೆಗೆ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಸದ್ಯ ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3yk6rCB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...