ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಘಟನಾ ಚತುರ. ಪಕ್ಷ ಸಂಘಟಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಮಾತೃ ಸಂಸ್ಥೆಗೆ ವಾಪಸ್ ಕರೆದಿರುವುದು ಅವರ ಸೌಜನ್ಯವನ್ನು ತೋರಿಸುತ್ತದೆ. ಹಾಗಂತ ಕರೆದ ತಕ್ಷಣ ಹೋಗಲು ಯಾರೂ ಸಿದ್ಧರಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ''ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೌಜನ್ಯ ಇಲ್ಲವಲ್ಲಾ ಎಂದು ಬೇಸರವಾಗುತ್ತದೆ. ಮಾತೃಪಕ್ಷಕ್ಕೆ ಮರಳಿದರೆ ಪ್ರಳಯವಾಗುವುದಾದರೆ, ಅವತ್ತು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸ್ವಾಗತಿಸಿದಾಗ ಯಾವ ಪ್ರಳಯವೂ ಆಗಲಿಲ್ಲವಲ್ಲ! ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ.ಕೃಷ್ಣ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ನಾನು ಎಲ್ಲರೂ ಅವರನ್ನು ಸ್ವಾಗತಿಸಿದೆವು. ಇದನ್ನೆಲ್ಲ ಸಿದ್ದರಾಮಯ್ಯ ನೆನಪಿಸಿಕೊಳ್ಳಬೇಕು,'' ಎಂದು ಚಾಟಿ ಬೀಸಿದರು. ಇನ್ನು ಇತ್ತೀಚೆಗೆ ಖಾಸಗಿ ಮಾಧ್ಯಮದ ಸಂದರ್ಶನದ ವೇಳೆ ಕೆಪಿಸಿಸಿ ಅಧ್ಯಕ್ಷ , ಹೋದವರು ಬರೋದಾದರೆ ಅರ್ಜಿ ಹಾಕಲಿ, ನಂತರ ನೋಡಿಕೊಳ್ಳಣ ಎಂದು ಪರೋಕ್ಷವಾಗಿ ಅವರಿಗೆ ಆಹ್ವಾನ ನೀಡಿದ್ದರು. ಡಿಕೆಶಿ ಈ ನಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
from India & World News in Kannada | VK Polls https://ift.tt/3AvhZ87