ಕಳೆದ 10 ದಿನಗಳಿಂದ ಮಲೆನಾಡಲ್ಲಿ ಮಳೆ ಮಾಯ..! ಕೃಷಿಕರಲ್ಲಿ ಮೂಡಿದೆ ಆತಂಕ..!

(): ಮಲೆನಾಡಿನಲ್ಲಿ ಕಳೆದ ಹತ್ತು ದಿನಗಳಿಂದೀಚೆಗೆ ಮಾಯವಾಗಿದ್ದು, ಈ ಭಾಗದ ಕೃಷಿಕರಲ್ಲಿ ಒಂದಷ್ಟು ಆತಂಕ ಮೂಡಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಹುಯ್ದರೆ ಹುಚ್ಚು ಮಳೆ, ಇಲ್ಲವಾದರೆ ಇಲ್ಲವೆ ಇಲ್ಲ ಎನ್ನುವ ಪರಿಸ್ಥಿತಿ ಎದುರಿಸುವಂತಾಗಿದೆ. ಕಳೆದ ಸುಮಾರು 12 ದಿನಗಳ ಹಿಂದೆ (ಜೂ.11-18 ವರೆಗೆ) ಎಡಬಿಡದೆ ಸುರಿದ ಮಳೆ, ಅತಿವೃಷ್ಟಿ ಪರಿಸ್ಥಿತಿ ನಿರ್ಮಿಸುವ ಆತಂಕ ಮೂಡಿಸಿತ್ತು. ಸಕಲೇಶಪುರ ತಾಲೂಕಿನ ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂಡು ಹಾಗೂ ಕಸಬ ಹೋಬಳಿ ವ್ಯಾಪ್ತಿಯಲ್ಲಿ ಕೇವಲ 8 ದಿನಗಳಲ್ಲಿ ಸರಾಸರಿ 500-600 ಮಿ.ಮೀ (20-25 ಇಂಚು) ಮಳೆ ಸುರಿದಿತ್ತು. ಇದೇ ಅವದಿಯಲ್ಲಿ ಪಶ್ಚಿಮ ಘಟ್ಟದ ಅಂಚಿನ ಭಾಗದಲ್ಲಿ ಸರಾಸರಿ ಸುಮಾರು 800-900(32-36 ಇಂಚು) ಮಳೆಯಾಗಿತ್ತು. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಆತಂಕ ಹೆಚ್ಚಿಸಿತ್ತು. ನಂತರದ ದಿನಗಳಲ್ಲಿ ಇದ್ದಕ್ಕಿದ್ದಂತೆ ಮುಂಗಾರು ಸಂಪೂರ್ಣ ಕ್ಷೀಣಿಸಿದ್ದು, ಕಳೆದ ಹತ್ತು ದಿನಗಳಿಂದೀಚೆಗೆ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ಬಿದ್ದಿರುವುದು ಬಿಟ್ಟರೆ, ಉತ್ತಮ ಮಳೆ ಬಿದ್ದಿಲ್ಲ. ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ಈ ರೀತಿ ಮಳೆ ಬಾರದೆ ಇರುವುದೂ ಒಂದಷ್ಟು ಜನರ ಆತಂಕಕ್ಕೆ ಕಾರಣವಾಗಿದೆ.


from India & World News in Kannada | VK Polls https://ift.tt/3As0vtd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...