ಒಂದೆಡೆ ವ್ಯಾಕ್ಸಿನ್ ಸಿಗದೆ ಜನರ ಕ್ಯೂ.. ಮತ್ತೊಂದಡೆ ವೇಸ್ಟ್..! ರಾಜ್ಯದಲ್ಲಿ 1 ಲಕ್ಷ ಲಸಿಕೆ ವ್ಯರ್ಥ..!

: ರಾಜ್ಯದಲ್ಲಿ ಕೋವಿಡ್‌ ಲಸಿಕಾ ಅಭಿಯಾನ ಆರಂಭವಾದಾಗಿನಿಂದ ಇದುವರೆಗೆ ಲಕ್ಷಕ್ಕೂ ಅಧಿಕ ಪ್ರಮಾಣದ ಲಸಿಕೆಗಳು ವ್ಯರ್ಥವಾಗಿವೆ. ಜನವರಿ 16 ರಿಂದ ಇದುವರೆಗೆ 20 ಜಿಲ್ಲೆಗಳಲ್ಲಿ 98,840ಕ್ಕೂ ಹೆಚ್ಚು ಪ್ರಮಾಣ ವ್ಯರ್ಥವಾಗಿದೆ. ಬಾಗಲಕೋಟೆಯಲ್ಲಿ 22,196 (ಶೇ 12.66) ಪೋಲಾಗಿದ್ದರೆ, ಹಾಸನದಲ್ಲಿ 17,028 (ಶೇ 8.01) ಲಸಿಕೆ ವ್ಯರ್ಥವಾಗಿದೆ. ಈ ಜಿಲ್ಲೆಗಳು ಲಸಿಕೆ ವ್ಯರ್ಥದಲ್ಲಿ ಮೊದಲ ಎರಡು ಸ್ಥಾನದಲ್ಲಿವೆ. ಉಳಿದಂತೆ ಕೊಪ್ಪಳ ಶೇ. 5.4, ರಾಮನಗರ ಶೇ. 5.4, ಯಾದಗಿರಿ ಶೇ. 5.1, ಚಿಕ್ಕಮಗಳೂರು ಶೇ. 4.1, ಬಳ್ಳಾರಿ 3.8 ಹಾಗೂ ಚಾಮರಾಜನಗರ ಶೇ. 3.5ರಷ್ಟು ಲಸಿಕೆ ವ್ಯರ್ಥವಾಗಿದೆ. 11 ಎಂಎಲ್‌ ಲಸಿಕೆಗಳನ್ನು ಒಳಗೊಂಡ ಪ್ರತಿ ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ವಯಲ್ಸ್‌ ಅನ್ನು ಗರಿಷ್ಠ 4 ತಾಸು ತೆರೆದಿಡಬಹುದಾಗಿದೆ. ಅಷ್ಟರಲ್ಲಿ ಬಳಸದಿದ್ದರೆ ವ್ಯರ್ಥವಾಗುತ್ತವೆ. ಒಂದು ವೈಯಲ್ಸ್‌ ತೆರೆದರೆ ಕನಿಷ್ಠ 10 ಮಂದಿಗೆ ನೀಡಬೇಕು. ಆದರೆ, ಆರಂಭಿಕ ಹಂತದಲ್ಲಿ 10ಕ್ಕಿಂತಲೂ ಕಡಿಮೆ ಮಂದಿಗೆ ನೀಡಲಾಗಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಸರಾಸರಿ ಶೇ. 2.29ರಷ್ಟು ವ್ಯರ್ಥವಾಗಿದ್ದರೆ, ಉಳಿದ ಹತ್ತು ಜಿಲ್ಲೆಗಳ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಈ ಜಿಲ್ಲೆಗಳಲ್ಲಿ ಒಂದು ವಯಲ್‌ನ್ನು ನಿಗದಿಗಿಂತ ಹೆಚ್ಚು ಜನರಿಗೆ ನೀಡಲಾಗಿದೆ. ಇದನ್ನು ನೇತ್ಯಾತ್ಮಕ ಪೋಲು ಎಂದರೆ ಪರಿಗಣಿಸಲಾಗುತ್ತದೆ. 10 ಮಂದಿಗೆ ನೀಡಬಹುದಾದ ಲಸಿಕೆಯನ್ನು ಅದಕ್ಕಿಂತ ಹೆಚ್ಚು ಮಂದಿಗೆ ನೀಡಿದರೆ ಅದು ಬೀರುವ ಪರಿಣಾಮದಲ್ಲಿ ವ್ಯತ್ಯಾಸ ಉಂಟಾಗುತ್ತದೆ.


from India & World News in Kannada | VK Polls https://ift.tt/3dFRUtd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...