ಕುಲ್ದೀಪ್‌ ಅಥವಾ ಚಕ್ರವರ್ತಿ? ಟಿ20 ವಿಶ್ವಕಪ್‌ಗೆ ಭಾರತೀಯ ಸ್ಪಿನ್ನರ್ ಆಯ್ಕೆ ಮಾಡಿದ ಮುರಳಿ!

ಹೊಸದಿಲ್ಲಿ: ಭಾರತ ತಂಡ ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳಲ್ಲಿ ಪೈಪೋಟಿ ನಡೆಸಿದೆ. ತಲಾ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಭಾರತ ತಂಡ ಜಯ ದಾಖಲಿಸಿದರೆ, ಅಷ್ಟೇ ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಆತಿಥೇಯ ಶ್ರೀಲಂಕಾ ಜಯ ತನ್ನದಾಗಿಸಿಕೊಂಡಿತು. ಅಂದಹಾಗೆ ಈ ಸರಣಿ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿತ್ತು. ಪ್ರಮುಖವಾಗಿ ಭಾರತ ತಂಡ ಈ ಸರಣಿ ಮೂಲಕ ಮುಂಬರುವ ಟೂರ್ನಿಗೆ ಕೆಲ ಪ್ರತಿಭಾನ್ವಿತ ಯುವ ಆಟಗಾರರನ್ನು ಹೆಕ್ಕುವ ಲೆಕ್ಕಾಚಾರ ಹೊಂದಿತ್ತು. ಒಡಿಐ ಮತ್ತು ಟಿ20 ಸರಣಿಗಳಲ್ಲಿ ಭಾರತ ತಂಡದ ಲೆಗ್‌ ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಹಲ್ ಮತ್ತು ರಾಹುಲ್ ಚಹರ್‌ ಮನಮೋಹಕ ಪ್ರದರ್ಶನ ನೀಡಿದ್ದು, ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಖಾತ್ರಿ ಪಡಿಸಿಕೊಂಡಿದ್ದಾರೆ. ತಂಡದಲ್ಲಿನ ಮತ್ತೊಬ್ಬ ಸ್ಪಿನ್ನರ್‌ ಸ್ಥಾನಕ್ಕೆ ಮತ್ತು ನಡುವೆ ಭಾರಿ ಪೈಪೋಟಿಯಿದ್ದು, ಈ ಬಗ್ಗೆ ಮಾತನಾಡಿರುವ ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮರಳೀಧರನ್ ಭಾರತ ತಂಡಕ್ಕೆ ಸೂಕ್ತ ಸ್ಪಿನ್ನರ್‌ ಯಾರೆಂದು ಹೆಸರಿಸಿದ್ದಾರೆ. "ನನ್ನ ಪ್ರಕಾರ ಮುಂದಿನ ಐಪಿಎಲ್‌ ಟೂರ್ನಿ ವರೆಗೂ ಭಾರತ ತಂಡ ಕಾಯಬೇಕಾಗುತ್ತದೆ. ಏಕೆಂದರೆ ಯುಎಇನಲ್ಲಿ ಐಪಿಎಲ್‌ನ ಎರಡನೇ ಚರಣ ನಡೆಯಲಿದ್ದು, ಆಟಗಾರರ ಪ್ರದರ್ಶನ ಅನುಗುಣವಾಗಿ ಟಿ20 ವಿಶ್ವಕಪ್‌ಗೆ ತಂಡ ಆಯ್ಕೆ ಮಾಡಿಕೊಳ್ಳಬೇಕು. ಈಗಲೇ ಆಯ್ಕೆ ಮಾಡುವುದಾದರೆ ನನ್ನ ಪ್ರಕಾರ ಕುಲ್ದೀಪ್‌ ಯಾದವ್ ಅವರನ್ನೇ ತೆಗೆದುಕೊಳ್ಳಬೇಕು. ಏಕೆಂದರೆ ಅವರು ವಿಕೆಟ್‌ ಟೇಕಿಂಗ್ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ದುರದೃಷ್ಟವಶಾತ್‌ ಐಪಿಎಲ್‌ ಟೂರ್ನಿಯಲ್ಲಿ ಅವರಿಗೆ ಆಡುವ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ," ಎಂದು ಮುತ್ತಯ್ಯ ಮರಳೀಧರನ್‌ ಅಭಿಪ್ರಾಯ ಪಟ್ಟಿದ್ದಾರೆ. "ವರುಣ್ ಚಕ್ರವರ್ತಿ ಅತ್ಯುತ್ತಮ ಬೌಲರ್‌. ಟೀಮ್ ಇಂಡಿಯಾಗೆ ಮುಂಬರುವ ವಿಶ್ವಕಪ್‌ನಲ್ಲಿ ಉತ್ತಮ ಆಯ್ಕೆ ಕೂಡ ಆಗುತ್ತಾರೆ. ಐಪಿಎಲ್‌ನಲ್ಲೂ ಅವರಿಗೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಆದರೆ, ಅಜಂತಾ ಮೆಂಡಿಸ್‌ ಅಥವಾ ಸುನಿಲ್‌ ನರೈನ್‌ ಅವರ ಹಂತಕ್ಕೆ ತಲುಪಲು ವರುಣ್‌ಗೆ ಇನ್ನು ಸಾಕಷ್ಟು ಸಮಯ ಬೇಕು. ಮೆಂಡಿಸ್‌ ಮತ್ತು ನರೈನ್‌ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡುತ್ತಿದ್ದ ಬೌಲರ್‌ಗಳು. ಆ ರೀತಿಯ ಸಾಮರ್ಥ್ಯ ವರುಣ್ ಅವರಲ್ಲಿ ಈವರೆಗೆ ಕಾಣಲು ಸಿಕ್ಕಿಲ್ಲ. ಆದರೂ ಉತ್ತಮ ಬೌಲರ್‌, ಅಷ್ಟೇ ಉತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ," ಎಂದು ಮುರಳಿ ಹೇಳಿದ್ದಾರೆ. ಯುಎಇ ಮತ್ತು ಒಮಾನ್‌ ಆತಿಥ್ಯದಲ್ಲಿ ಈ ವರ್ಷ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ನಡೆಯಲಿದೆ. ಭಾರತದಲ್ಲಿ ಈ ಟೂರ್ನಿಯ ಆಯೋಜನೆ ಆಗಬೇಕಿತ್ತಾದರೂ, ಕೊರೊನಾ ವೈರಸ್‌ ಕಾರಣ ಯುಎಇ ಅಂಗಣದಲ್ಲಿ ನಡೆಸಲು ಬಿಸಿಸಿಐ ಮುಂದಾಗಿದೆ. ಐಪಿಎಲ್‌ನ ಎರಡನೇ ಚರಣ ಸೆಪ್ಟೆಂಬರ್‌ 19ರಂದು ಆರಂಭವಾಗಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ylmFMb

ಸಂಪುಟ ರಚನೆ ಸಂಕಷ್ಟ: ದೇವರ ಮೊರೆ ಹೋದ ಕೆ.ಎಸ್ ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ಸಂಪುಟ ರಚನೆ ಸರ್ಕಸ್ ಮುಂದುವರಿದಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬುವುದು ಇನ್ನೂ ಕುತೂಹಲಕಾರಿಯಾಗಿದೆ. ಈ ನಡುವೆ ಕೆ.ಎಸ್‌ ಈಶ್ವರಪ್ಪ ಅವರು ಡಿಸಿಎಂ ಪಟ್ಟಕ್ಕಾಗಿ ಲಾಬಿ ನಡೆಸುತ್ತಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಇದರ ಬೆನ್ನಲ್ಲೇ ಈಶ್ವರಪ್ಪ ದೇವರ ಮೊರೆ ಹೋಗಿದ್ದಾರೆ. ಭಾನುವಾರ ಬೆಳಗ್ಗೆ ಬಾಗಲಕೋಟೆ ಬದಾಮಿ ಬನಶಂಕರಮ್ಮ ಶ್ರೀ ಕ್ಷೇತ್ರಕ್ಕೆ ಕುಟುಂಬ ಸಮೇತ ವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ದಿನದ ಹಿಂದೆ ಅವರು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬೊಮ್ಮಾಯಿ ಸಚಿವ ಸಂಪುಟದಲ್ಲಿ ನಾನು ಸಚಿವನಾಗುವುದಿಲ್ಲ ಎಂದು ಜಗದೀಶ್ ಶೆಟ್ಟರ್‌ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಅವರಿಗೂ ಸಚಿವ ಸ್ಥಾನ ಸಿಗುತ್ತಾ ಇಲ್ಲವೋ ಎಂಬ ಕುತೂಹಲ ಕೆರಳಿದೆ. ಆದರೆ ಜಗದೀಶ್ ಶೆಟ್ಟರ್ ರೀತಿ ನಾನು ಸಚಿವ ಸ್ಥಾನ ನಿರಾಕರಣೆ ಮಾಡುವುದಿಲ್ಲ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಈಶ್ವರಪ್ಪ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆಕಾಂಕ್ಷಿಗಳಿಂದ ಬೊಮ್ಮಾಯಿ ಭೇಟಿ ಇನ್ನು ಸಂಪುಟ ರಚನೆ ಸುಳಿವು ಹಿನ್ನೆಲೆಯಲ್ಲಿ ಹಲವು ಆಕಾಂಕ್ಷಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ವಿ. ಸೋಮಣ್ಣ ಅವರು ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು.


from India & World News in Kannada | VK Polls https://ift.tt/3fimMkl

ರಾಜ್ಯದಲ್ಲಿ ಮತ್ತೆ ಹೆಚ್ಚಾದ ಕೋವಿಡ್ ಆತಂಕ; ಯಾರು ಎಲ್ಲಿ ಎಡವಿದರು?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಆತಂಕ ಮತ್ತೆ ಎದುರಾಗಿದೆ. ಎರಡನೇ ಅಲೆಯಿಂದ ಕಂಗಾಲಾಗಿದ್ದ ಜನರು ಮತ್ತೊಮ್ಮೆ ಮಹಾಮಾರಿಯನ್ನು ಎದಿರಿಸಲು ಸಜ್ಜಾಗಬೇಕಾದ ಪರಿಸ್ಥಿತಿ ನಿರ್ಮಾನವಾಗಿದೆ. ಆದರೆ ಲಾಕ್ ಡೌನ್ ಸಡಿಲಿಕೆ ಬಳಿಕ ತೋರಿದ ನಿರ್ಲಕ್ಷ್ಯ ಇದೀಗ ದುಬಾರಿಯಾಗಿ ಪರಿಣಮಿಸಲಿದೆಯಾ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಈ ನಡುವೆ ಗಡಿ ರಾಜ್ಯವಾದ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದರ ಗಡಿಣಾಮ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರಿನಲ್ಲಿ ನಿರ್ಬಂಧ ಹೇರಲಾಗಿದೆ. ಅಷ್ಟೇ ಅಲ್ಲದೆ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧ ಹೇರದೇ ಇದ್ದರೆ ಕಷ್ಟ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ. ಸರ್ಕಾರದ ನಿರ್ಲಕ್ಷ್ಯ, ಜನರ ಬೇಜವಾಬ್ದಾರಿ ಕೋವಿಡ್ ಎರಡನೇ ಅಲೆ ಮುಕ್ತಾಯವಾದ ಬಳಿಕ ಮೂರನೇ ಅಲೆ ಬರಲಿದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಶಿಫಾರಸು ಮಾಡಲಾಗಿತ್ತು. ಮೂರನೇ ಅಲೆ ಎದುರಿಸಲು ಸಂಪೂರ್ಣ ಸಜ್ಜಾಗಿದ್ದೇವೆ ಎಂದಿದ್ದ ಸರ್ಕಾರ ರಾಜಕೀಯ ಜಂಜಾಟದಲ್ಲಿ ಮುಳುಗಿಹೋಗಿದೆ. ರಾಜ್ಯದಲ್ಲಿ ನಡೆದ ರಾಜಕೀಯ ನಾಟಕದ ಪರಿಣಾಮ ಸದ್ಯ ಮುಖ್ಯಮಂತ್ರಿಗಳ ಬದಲಾವಣೆ ಆಗಿದೆ. ಬಿಎಸ್‌ ಯಡಿಯೂರಪ್ಪ ಬದಲಾಗಿ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನದಲ್ಲಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಆದ್ಯತೆ ನೀಡುವ ಬದಲಾಗಿ ಬಿಎಸ್ ಯಡಿಯೂರಪ್ಪ ಅವರು ಅಧಿಕಾರ ಉಳಿಸಿಕೊಳ್ಳುವಲ್ಲೇ ಬ್ಯುಸಿಯಾಗಿದ್ದರು. ಇವರಷ್ಟೇ ಅಲ್ಲ, ಜನರು ಕೂಡಾ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿದ್ದಾರೆ. ಪಾಲನೆ ಮಾಡಬೇಕಾಗಿದ್ದ ನಿಯಮಗಳ ಸಂಪೂರ್ಣ ಉಲ್ಲಂಘಣೆ ಆಗಿದೆ. ಮದುವೆ ಕಾರ್ಯಕ್ರಮಗಳಿಗೂ ಹಾಕಲಾಗಿದ್ದ ನಿರ್ಬಂಧ ಪಾಲನೆ ಆಗಿಲ್ಲ. ರಾಜಕೀಯ ಸಭೆ ಸಮಾರಂಭಗಳು ನಡೆದವು. ಪ್ರತಿಭಟನೆಗಳು ನಡೆದವು. ಆದರೆ ಇದೀಗ ಮತ್ತೆ ದಿಢೀರ್ ಆಗಿ ಕೋವಿಡ್ ಅಪಾಯ ಎದುರಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಗಡಿ ಭಾಗಗಳ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಇನ್ನು ರಾಜ್ಯದಲ್ಲಿ ಶನಿವಾರ 1987 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2844742 ಕ್ಕೆ ಏರಿಕೆ ಆಗಿದೆ. ಈ ನಿಟ್ಟಿನಲ್ಲಿ ಈಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಸಂಪುಟ ರಚನೆ ಮಾಡಿ ಸಚಿವರಿಗೆ ಜವಾಬ್ದಾರಿ ನೀಡಬೇಕಿದೆ. ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ.


from India & World News in Kannada | VK Polls https://ift.tt/3xk8ZQa

ಚಂದ್ರನ ಮೇಲೆ ಕಾರು ಓಡಿಸಿ 50 ವರುಷ: ಮರೆಯಲಾಗದು ಆ ಐತಿಹಾಸಿಕ ಹರುಷ!

ಚಂದ್ರನ ನೆಲದಲ್ಲಿ ಹೆಜ್ಜೆ ಇಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ ಸ್ಟ್ರಾಂಗ್ ಎಂಬುದೆನೋ ಸರಿ. ಜುಲೈ 20, 1969ರಲ್ಲಿ ಚಂದ್ರನ ನೆಲ ಮುತ್ತಿಕ್ಕಿದ ನೀಲ್ ಆರ್ಮ್‌ ಸ್ಟ್ರಾಂಗ್, 'ಮಾನವನ ಈ ಪುಟ್ಟ ಹೆಜ್ಜೆ ಮಾನವ ಕುಲದ ದೈತ್ಯ ಜಿಗಿತ್ತಕ್ಕೆ ಬುನಾದಿ' ಎಂಬ ಐತಿಹಾಸಿಕ ಹೇಳಿಕೆಯನ್ನು ನಾವು ನೀವೆಲ್ಲರೂ ಮರೆಯವಂತೆಯೇ ಇಲ್ಲ. ಆದರೆ ನಾಸಾದ ಮೊದಲ ಮೂನ್ ಮಿಷನ್‌ನಲ್ಲಿ ಯಾವುದೇ ಯಂತ್ರ ಚಾಲಿತ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಅದು ಸಾಧ್ಯವಾಗಿದ್ದು 1971ರ ಅಪೋಲೊ 15 ಮೂನ್ ಮಿಷನ್‌ನಲ್ಲಿ. ಹೌದು, ಅಪೋಲೊ 15 ಮೂನ್ ಮಿಷನ್‌ನಲ್ಲಿ ಮೊದಲ ಬಾರಿಗೆ ಚಂದ್ರನ ನೆಲಕ್ಕೆ ಲುನಾರ್ ರೋವಿಂಗ್ ವೆಹಿಕಲ್(LRV)) ಎಂಬ ಯಂತ್ರ ಚಾಲಿತ ಕಾರನ್ನು ಕೊಂಡೊಯ್ಯಲಾಯಿತು. ಅಪಲೊ 15 ಗಗನಯಾತ್ರಿಗಳಾದ ಡೆವಿಡ್ ಸ್ಕಾಟ್ ಹಾಗೂ ಜೇಮ್ಸ್ ಇರ್ವಿನ್ ಈ ಕಾರನ್ನು ಚಂದ್ರನ ನೆಲೆ ಮೇಲೆ ಓಡಿಸಿ ಇತಿಹಾಸ ಬರೆದಿದ್ದರು. ಹಾಗಾದರೆ ಚಂದ್ರನ ಮೇಲ್ಮೈ ಮೇಲೆ ಮಾನವ ನಿರ್ಮಿತ ಕಾರೊಂದನ್ನು ಹೇಗೆ ಚಲಾಯಿಸಲಾಯಿತು. ಈ ಕಾರು ಚಲಾಯಿಸಲು ಗಗನಯಾತ್ರಿಗಳಿಗೆ ಎದುರಾದ ಸವಾಲುಗಳೇನು? ಹೇಗೆ ಚಂದ್ರನೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸಿ ಗಗನಯಾತ್ರಿಗಳು ತಮ್ಮ ಯೋಜನೆಯಲ್ಲಿ ಸಫಲರಾದರು ಎಂಬಿತ್ಯಾದಿ ಇತಿಹಾಸವನ್ನು ಗಮನಿಸುವುದಾದರೆ...

ಚಂದ್ರನ ನೆಲದಲ್ಲಿ ಹೆಜ್ಜೆ ಇಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ ಸ್ಟ್ರಾಂಗ್ ಎಂಬುದೆನೋ ಸರಿ. ಆದರೆ ಚಂದ್ರನ ನೆಲದಲ್ಲಿ ಮಾನವ ನಿರ್ಮಿತ ಕಾರನ್ನು ಓಡಿಸಿದ ಮೊದಲ ವ್ಯಕ್ತಿ ಯಾರೆಂದು ಗೊತ್ತಾ? ಅಷ್ಟಕ್ಕೂ ಚಂದ್ರನ ನೆಲದ ಮೇಲೆ ಯಂತ್ರ ಚಾಲಿತ ವಾಹನ ಓಡಿಸಲು ನಾಸಾ ಪಟ್ಟ ಶ್ರಮ ಎಂತಹುದು ಎಂದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.


ಚಂದ್ರನ ಮೇಲೆ ಕಾರು ಓಡಿಸಿ 50 ವರುಷ: ಮರೆಯಲಾಗದು ಆ ಐತಿಹಾಸಿಕ ಹರುಷ!

ಚಂದ್ರನ ನೆಲದಲ್ಲಿ ಹೆಜ್ಜೆ ಇಟ್ಟ ಮೊದಲ ವ್ಯಕ್ತಿ ನೀಲ್ ಆರ್ಮ್‌ ಸ್ಟ್ರಾಂಗ್ ಎಂಬುದೆನೋ ಸರಿ. ಜುಲೈ 20, 1969ರಲ್ಲಿ ಚಂದ್ರನ ನೆಲ ಮುತ್ತಿಕ್ಕಿದ ನೀಲ್ ಆರ್ಮ್‌ ಸ್ಟ್ರಾಂಗ್, 'ಮಾನವನ ಈ ಪುಟ್ಟ ಹೆಜ್ಜೆ ಮಾನವ ಕುಲದ ದೈತ್ಯ ಜಿಗಿತ್ತಕ್ಕೆ ಬುನಾದಿ' ಎಂಬ ಐತಿಹಾಸಿಕ ಹೇಳಿಕೆಯನ್ನು ನಾವು ನೀವೆಲ್ಲರೂ ಮರೆಯವಂತೆಯೇ ಇಲ್ಲ. ಆದರೆ ನಾಸಾದ ಮೊದಲ ಮೂನ್ ಮಿಷನ್‌ನಲ್ಲಿ ಯಾವುದೇ ಯಂತ್ರ ಚಾಲಿತ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಅದು ಸಾಧ್ಯವಾಗಿದ್ದು 1971ರ ಅಪೋಲೊ 15 ಮೂನ್ ಮಿಷನ್‌ನಲ್ಲಿ. ಹೌದು, ಅಪೋಲೊ 15 ಮೂನ್ ಮಿಷನ್‌ನಲ್ಲಿ ಮೊದಲ ಬಾರಿಗೆ ಚಂದ್ರನ ನೆಲಕ್ಕೆ ಲುನಾರ್ ರೋವಿಂಗ್ ವೆಹಿಕಲ್(LRV)) ಎಂಬ ಯಂತ್ರ ಚಾಲಿತ ಕಾರನ್ನು ಕೊಂಡೊಯ್ಯಲಾಯಿತು. ಅಪಲೊ 15 ಗಗನಯಾತ್ರಿಗಳಾದ ಡೆವಿಡ್ ಸ್ಕಾಟ್ ಹಾಗೂ ಜೇಮ್ಸ್ ಇರ್ವಿನ್ ಈ ಕಾರನ್ನು ಚಂದ್ರನ ನೆಲೆ ಮೇಲೆ ಓಡಿಸಿ ಇತಿಹಾಸ ಬರೆದಿದ್ದರು. ಹಾಗಾದರೆ ಚಂದ್ರನ ಮೇಲ್ಮೈ ಮೇಲೆ ಮಾನವ ನಿರ್ಮಿತ ಕಾರೊಂದನ್ನು ಹೇಗೆ ಚಲಾಯಿಸಲಾಯಿತು. ಈ ಕಾರು ಚಲಾಯಿಸಲು ಗಗನಯಾತ್ರಿಗಳಿಗೆ ಎದುರಾದ ಸವಾಲುಗಳೇನು? ಹೇಗೆ ಚಂದ್ರನೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸಿ ಗಗನಯಾತ್ರಿಗಳು ತಮ್ಮ ಯೋಜನೆಯಲ್ಲಿ ಸಫಲರಾದರು ಎಂಬಿತ್ಯಾದಿ ಇತಿಹಾಸವನ್ನು ಗಮನಿಸುವುದಾದರೆ...



ಏನಿದು ಲುನಾರ್ ರೋವಿಂಗ್ ವೆಹಿಕಲ್?
ಏನಿದು ಲುನಾರ್ ರೋವಿಂಗ್ ವೆಹಿಕಲ್?

ಚಂದ್ರನ ಮೇಲೆ ಗುರುತ್ವಾಕರ್ಷಣೆ ಬಲ ಕಡಿಮೆ ಇರುವುದರಿಂದ ಮಾನವನ ಓಡಾಟ ತುಸು ಕಷ್ಟ. ಹೀಗಾಗಿ ಈ ಹಿಂದಿನ ಮೂನ್ ಮಿಷನ್‌ನಲ್ಲಿ ಗಗನಯಾತ್ರಿಗಳು ನಡೆದುಕೊಂಡು ಚಂದ್ರನ ನೆಲದ ಮದರಿಗಳನ್ನು ಸಂಗ್ರಹಿಸಬೇಕಿತ್ತು. ಇದು ಕಷ್ಟಕರ ಕೆಲಸವಾದ್ದರಿಂದ ಚಂದ್ರನ ನೆಲದ ಮೇಲೆ ಯಂತ್ರ ಚಾಲಿತ ಕಾರನ್ನು ಓಡಿಸಲು ನಾಸಾ ಯೋಜನೆ ಸಿದ್ಧಪಡಿಸಿತು.

ಅದರಂತೆ ನಾಸಾದ ರಾನ್ ಕ್ರೀಲ್ ಥರ್ಮಲ್ ಕಂಟ್ರೋಲ್ ಎಂಜಿನಿಯರ್ ಲುನಾರ್ ರ ಓವಿಂಗ್ ವೆಹಿಕಲ್(LRV) ನಿರ್ಮಾಣಕ್ಕೆ ಮುಂದಡಿ ಇಟ್ಟರು. ಕ್ರೀಲ್ ಅವರ ಯೋಜನೆಯಂತೆ ಸಾಂಪ್ರದಾಯಿಕ ಸ್ಟೀರಿಂಗ್ ವೀಲ್ ಮತ್ತು ಪೆಡಲ್‌ಗಳ ಬಳಕೆಯ ಓಪನ್ ಏರ್ ವಿನ್ಯಾಸದ ಕಾರನ್ನು ಸಿದ್ದಪಡಿಸಲಾಯಿತು.

ಆರಂಭಿಕ ಗ್ರಹಗಳ ಡಿಕ್ಕಿ ಚಂದ್ರನ ಉಗಮಕ್ಕೆ ಕಾರಣ: ಸಾಕ್ಷ್ಯ ಒದಗಿಸಿದ ನಾಸಾ!

ಈ ಕಾರಿನ ಸಹಾಯದಿಂದ ಅಪೋಲೊ 15 ಗಗನಯಾತ್ರಿಗಳಾದ ಡೇವಿಡ್ ಸ್ಕಾಟ್ ಮತ್ತು ಜೇಮ್ಸ್ ಇರ್ವಿನ್, ಚಂದ್ರನ ಮೇಲೆ 17.5 ಮೈಲುಗಳನ್ನು ಕ್ರಮಿಸಿ 170 ಪೌಂಡ್‌ಗಳ ಮಾದರಿಗಳನ್ನು ಸಂಗ್ರಹಿಸಿದ್ದರು.



LRV ಎದುರಿಸಿದ ಸವಾಲುಗಳೇನು?
LRV ಎದುರಿಸಿದ ಸವಾಲುಗಳೇನು?

ಚಂದ್ರನ ಮೇಲೆ ಮಾನವ ನಿರ್ಮಿತ ವಾಹನವನ್ನು ಓಡಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಚಂದ್ರನ ಧೂಳು ಸೌರ ವಿಕಿರಣವನ್ನು ಹೀರಿಕೊಳ್ಳುತ್ತದೆ. ಚಂದ್ರನ ಮೇಲೆ ಗಾಳಿ ಅಥವಾ ನೀರಿನ ಲಭ್ಯತೆ ಇಲ್ಲ. ಹೀಗಾಗಿ ಧೂಳು ತೀಕ್ಷ್ಣವಾದ ಗಾಜಿನಂತಹ ಗುಣವನ್ನು ಹೊಂದಿರುತ್ತದೆ.

ಇದು ಗಗನಯಾತ್ರಿಗಳ ಸ್ಪೇಸ್ ಸೂಟ್‌ಗಳಿಗೂ ಹಾನಿ ಮಾಡಬಲ್ಲದು. ಅಲ್ಲದೇ ಎಲ್‌ಆರ್‌ವಿ ವಾಹನದ ಚಕ್ರಗಳಿಗೂ ಹಾನಿ ಮಾಡಬಹುದಾಗಿತ್ತು. ವಾಹನ ಚಾಲನೆ ಸಮಯದಲ್ಲಿ ಧೂಳು ಕವಚದ ರೇಡಿಯೇಟರ್‌ಗಳನ್ನು ಆವರಿಸುತ್ತಿದುರಿಂದ ಧೂಳನ್ನು ಒರೆಸಲು ವಿಶೇಷ ಬ್ರಷ್‌ಗಳನ್ನು ಬಳಸಲಾಗುತ್ತಿತ್ತು.

ಚಂದ್ರನಲ್ಲಿದೆ ಅಗಾಧ ಜಲ ಸಂಪತ್ತು..! ನಾಸಾದ ಸಂಶೋಧನೆಯಲ್ಲಿ ಬಹಿರಂಗ

ಇಷ್ಟೇ ಅಲ್ಲದೇ ಎಲ್‌ಆರ್‌ವಿಯಲ್ಲಿ ಬಳಸಲಾಗಿರುವ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಘನೀಕರಿಸುವ ಮತ್ತು ಅಧಿಕ ಬಿಸಿಯಾಗದಂತೆ ನೋಡಿಕೊಳ್ಳುವ ಸವಾಲು ಕೂಡ ಎದುರಿಸಬೇಕಾಯಿತು. ಆದರೆ ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ನಾಸಾ, ಕೊನೆಗೂ ಚಂದ್ರನ ಮೇಲೆ ತನ್ನ ಕಾರನ್ನು ಓಡಿಸುವಲ್ಲಿ ಯಶಸ್ವಿಯಾಯಿತು.



ಭವಿಷ್ಯದ ಯೋಜನೆಗಳಲ್ಲೂ ಎಲ್‌ಆರ್‌ವಿ ಬಳಕೆ!
ಭವಿಷ್ಯದ ಯೋಜನೆಗಳಲ್ಲೂ ಎಲ್‌ಆರ್‌ವಿ ಬಳಕೆ!

ಅಪೋಲೊ 15 ಮೂನ್ ಮಿಷನ್‌ನಲ್ಲಿ ಎಲ್‌ಆರ್‌ವಿ ಪರಯೋಗ ಯಶಸ್ವಿಯಾದ ಬಳಿಕ, ಭವಿಷ್ಯದ ಅಪೋಲೊ 16 ಮತ್ತು ಅಪೋಲೊ 17 ಮೂನ್ ಮಿಷನ್‌ನಗಳಲ್ಲೂ ಎಲ್‌ಆರ್‌ವಿಗಳನ್ನು ಬಳಕೆ ಮಾಡಲಾಯಿತು.

ಆದರೆ ಈ ಎರಡೂ ಮಿಷನ್‌ನಗಳಲ್ಲಿ ಎಲ್‌ಆರ್‌ವಿ ಯಂತ್ರಕ್ಕೆ ಹಲವು ರೀತಿಯ ಸಮಸ್ಯೆಗಳು ಕಾಡಿದವು. ಆದರೆ ಹಿಂದಿನ ಚಕ್ರಗಳಿಂದ ಧೂಳನ್ನು ಹೊರತೆಗೆಯಲು ಅಪೋಲೊ 17 ಗಗನಯಾತ್ರಿ ಯುಜೀನ್ ಸೆರ್ನಾನ್ ರಾಗ್‌ಟ್ಯಾಗ್ ಪರಿಹಾರವನ್ನು ಕಂಡುಕೊಂಡರು.

ಏ.17ಕ್ಕೆ ನಭೋಮಂಡಲದಲ್ಲಿ ಕೌತುಕ: ಮಂಗಳನ ಮುಂದೆ ಹಾದು ಹೋಗಲಿದೆ ಚಂದ್ರ!

ಹಲವು ಏಳು-ಬೀಳುಗಳ ಹೊರತಾಗಿಯೂ ಚಂದ್ರನ ನೆಲದ ಮೇಲೆ ನಾಸಾದ ಯಂತ್ರ ಚಾಲಿತ ವಾಹನ ಉತ್ತಮವಾಗಿ ಕೆಲಸ ಮಾಡಿತು. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಚಂದ್ರನ ಮಾದರಿಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು.



ಭವಿಷ್ಯದ ಯೋಜನೆಯಲ್ಲೂ ಯಂತ್ರ ಚಾಲಿತ ವಾಹನದ ಬಳಕೆ!
ಭವಿಷ್ಯದ ಯೋಜನೆಯಲ್ಲೂ ಯಂತ್ರ ಚಾಲಿತ ವಾಹನದ ಬಳಕೆ!

ಹೌದು, ಹಿಂದಿನ ಮೂನ್ ಮಿಷನ್‌ಗಳಲ್ಲಿ ಎಲ್‌ಆರ್‌ವಿ ನೀಡಿದ ಕೊಡುಗೆಯನ್ನು ಪರಿಗಣಿಸಿರುವ ನಾಸಾ, 2023ರಲ್ಲಿ ಕೈಗೊಳ್ಳಲಿರುವ ಮೂನ್ ಮಿಷನ್‌ನಲ್ಲೂ ಯಂತ್ರ ಚಾಲಿತ ವಾಹನವನ್ನು ಬಳಕೆ ಮಾಡಲಿದೆ. VIPER ಹೆಸರಿನ ಈ ವಾಹನವನ್ನು ARTEMIS2 ಯೋಜನೆಯಲ್ಲಿ ಬಳಕೆ ಮಾಡಲಾಗುವುದು ಎಂದು ನಾಸಾ ಹೇಳಿದೆ.

2024ರಲ್ಲಿ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆ ಕಳುಹಿಸಲು ಸಜ್ಜಾದ ಯುಎಇ!

ಆದರೆ ಈ ಹಿಂದಿನ ಮೂರು ಎಲ್‌ಆರ್‌ವಿ ವಾಹನಗಳು ಚಂದ್ರನ ಮೇಲ್ಮೈ ಮೇಲೆ ಈಗಲೂ ನಿಂತಿದ್ದು, ಚಂದ್ರ ಅನ್ಚೇಷಣೆಯ ಗತವೈಭವದ ಇತಿಹಾಸವನ್ನು ಸಾರಿ ಹೇಳುತ್ತಿವೆ. ಭವಿಷ್ಯದ ಮಾನವಸಹಿತ ಚಂದ್ರಯಾನದಲ್ಲಿ ಈ ವಾಹನಗಳು ನಿಂತಿರುವ ಜಾಗಕ್ಕೆ ಗಗನಯಾತ್ರಿಗಳು ಭೇಟಿ ನೀಡಲಿದ್ದಾರೆ.





from India & World News in Kannada | VK Polls https://ift.tt/2V1kfEd

ಉತ್ತರಾದಿ ಹಾಗೂ ರಾಯರ ಮಠಗಳ ಅರ್ಚಕರ ನಡುವೆ ಗಲಾಟೆ; ವಿಡಿಯೋ ವೈರಲ್‌

ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ನವಬೃಂದಾವನ ಗಡ್ಡೆಯಲ್ಲಿ ತೀರ್ಥರ ಬೃಂದಾವನ ಪೂಜಾ ವಿವಾದಕ್ಕೆ ಸಂಬಂಧಪಟ್ಟಂತೆ ಉತ್ತಾರಾದಿ ಹಾಗೂ ರಾಯರ ಮಠಗಳ ಅರ್ಚಕರ ನಡುವೆ ನಡೆದ ಗಲಾಟೆಯ ದೃಶ್ಯಾವಳಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗುರುವಾರ, ಜಯತೀರ್ಥರ ಆರಾಧನೆಯಿತ್ತು. ಈ ವೇಳೆ ನಡೆದಿದೆ ಎನ್ನಲಾಗಿದೆ. ಆರಾಧನೆ ನಿಮಿತ್ತ ರಾಯರ ಮಠದ ಅರ್ಚಕರು ಹಾಗೂ ಭಕ್ತರು ಪೂಜೆಗೆ ನವಬೃಂದಾವನಕ್ಕೆ ಆಗಮಿಸಿದ್ದರು. ಉತ್ತಾರಾದಿ ಮಠದ ಅರ್ಚಕರು ಪೂಜೆಗೆ ಅಡ್ಡಿಪಡಿಸಿದ್ದಾರೆ. ನೀವು ಪೂಜೆ ಮಾಡಲು ಹೊರಟಿರುವ ಬೃಂದಾವನ ಜಯತೀರ್ಥರ ಮೂಲ ಬೃಂದಾವನವಲ್ಲ. ಜಯತೀರ್ಥರ ಮೂಲ ಬೃಂದಾವನ ಮಳಖೇಡದಲ್ಲಿದೆ. ಅಲ್ಲಿಯೇ ಅವರ ಆರಾಧನೆ ನೆರವೇರಿಸಬೇಕು. ನೀವು ಪೂಜೆ ಮಾಡಲು ಹೊರಟಿರುವುದು ರಘುವರ್ಯ ತೀರ್ಥರ ಬೃಂದಾವನವಾಗಿದ್ದು, ಪೂಜೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಉತ್ತರಾದಿ ಮಠದವರ ವಿರೋಧದ ಮಧ್ಯೆಯೂ ರಾಯರ ಮಠದವರು, ಜಯತೀರ್ಥರ ಮೂಲ ಬೃಂದಾವನ ಇರುವುದು ನವಬೃಂದಾವನ ಗಡ್ಡೆಯಲ್ಲಿಯೇ ಎಂದು ವಾದಿಸಿ, ಪೂಜೆ ನಡೆಸಲು ಮುಂದಾದಾಗ ಉಭಯ ಮಠಗಳ ಅರ್ಚಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ದೃಶ್ಯಾವಳಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಕ್ತರಲ್ಲಿಗೊಂದಲ ಸೃಷ್ಟಿಯಾಗಿದೆ.


from India & World News in Kannada | VK Polls https://ift.tt/3rMNir5

ಸ್ಕೂಲ್‌ಗಳಲ್ಲಿ ಶೌಚಾಲಯ ಸರಿಯಿಲ್ಲ, ‘ಮುಟ್ಟಿನ ರಜೆ’ ಕೊಡಿ ಎಂದು ಪಟ್ಟು ಹಿಡಿದ ಉ.ಪ್ರದೇಶದ ಶಿಕ್ಷಕಿಯರು

ಲಖನೌ: ಶಿಕ್ಷಕಿಯರಿಗೆ ಮಾಸಿಕ ಋುತುಸ್ರಾವದ ಅವಧಿಯಲ್ಲಿ ಮೂರು ದಿನ '' ನೀಡಬೇಕು ಎಂದು ಉತ್ತರ ಪ್ರದೇಶದ ಶಿಕ್ಷಕಿಯರ ಸಂಘ ಆಗ್ರಹಿಸಿದೆ. ರಾಜ್ಯಗಳ ಸರಕಾರಿ ಶಾಲೆಗಳಲ್ಲಿರುವ ಶೌಚಾಲಯಗಳು ಉತ್ತಮವಾಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕಿಯರು ಮುಟ್ಟಿನ ದಿನಗಳಲ್ಲಿ ಮೂರು ದಿನ ರಜೆ ನೀಡಬೇಕು ಎಂದು ಉತ್ತರ ಪ್ರದೇಶ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸುಲೋಚನಾ ಮೌರ್ಯ ಒತ್ತಾಯಿಸಿದ್ದಾರೆ. ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಶಿಕ್ಷಕಿಯರೂ ಹೊರತಾಗಿಲ್ಲ. ಹಾಗಾಗಿ ಶಿಕ್ಷಕಿಯರ ಪರವಾಗಿ ನಾವು ಧ್ವನಿ ಎತ್ತುತ್ತಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಹಾರದಲ್ಲಿಈಗಾಗಲೇ ಶಿಕ್ಷಕಿಯರಿಗೆ ಮುಟ್ಟಿನ ರಜೆ ನೀಡಲಾಗುತ್ತಿದೆ. ಇಂತಹ ಸೌಲಭ್ಯವನ್ನು ಉತ್ತರ ಪ್ರದೇಶದ ಶಿಕ್ಷಕಿಯರಿಗೂ ನೀಡಬೇಕು. ನಮ್ಮ ಮನವಿಗೆ ಶಿಕ್ಷಣ ಸಚಿವರು ಸ್ಪಂದಿಸದಿದ್ದರೆ ಶೀಘ್ರವೇ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನೂ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಸುಲೋಚನಾ ತಿಳಿಸಿದ್ದಾರೆ. ರಾಜ್ಯದಲ್ಲಿ ಬಹುಪಾಲು ಶಾಲೆಗಳಲ್ಲಿ ಸುಮಾರು 200-400 ಮಕ್ಕಳು ಬಳಸುವ ಶಾಲಾ ಶೌಚಾಲಯವನ್ನೇ ಶಿಕ್ಷಕಿಯರು ಬಳಸುತ್ತಿದ್ದಾರೆ ಎಂದಿರುವ ಅವರು, ಶೌಚಾಲಯದಲ್ಲಿ ಶುಚಿತ್ವ ಇಲ್ಲವಾಗಿದೆ. ಇದರಿಂದಾಗಿ ಹಲವು ಶಿಕ್ಷಕಿಯರು ಮೂತ್ರದ ಸೋಂಕಿನಿಂದ ಬಳಲುತ್ತಿದ್ದಾರೆ. ಶೌಚಾಲಯಕ್ಕೆ ಹೋಗುವುದನ್ನು ತಪ್ಪಿಸಲು ನೀರು ಕುಡಿಯುವುದನ್ನು ಕಡಿಮೆ ಮಾಡಿದ್ದಾರೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಭಿಯಾನ ಆರಂಭಿಸಿದ್ದೇವೆ ಎಂದು ಸುಲೋಚನಾ ಅವರು ಹೇಳಿದ್ದಾರೆ. ಇನ್ನು ‘ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಶೇ 60-70 ಮಹಿಳೆಯರಿದ್ದಾರೆ. ನಮಗೆ ಶಿಕ್ಷಕರ ಸಂಘಗಳಲ್ಲಿ ಸ್ಥಾನಮಾನ ನೀಡಬಹುದಾದರೂ ಇದರಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿರುತ್ತದೆ. ಜೊತೆಗೆ ಪುರುಷರು ಮುಟ್ಟಿನ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಮಹಿಳೆಯರಾದ ನಮಗೆ ಇದು ಅತಿ ಕಾಳಜಿಯ ವಿಷಯ. ಇದೇ ಕಾರಣ ನಮ್ಮ ವೃತ್ತಿ, ಆರೋಗ್ಯದ ಮೇಲೂ ಪರಿಣಾಮ ಬೀರಬಾರದಲ್ಲವೇ. ಹೀಗಾಗಿ ಅಭಿಯಾನ ಆರಂಭಿಸಿದ್ದೇವೆ ಎಂದು ಶಿಕ್ಷಕಿಯರ ಸಂಘದ ಸದಸ್ಯೆ ಮೌರ್ಯ ಅವರು ತಿಳಿಸಿದ್ದಾರೆ.


from India & World News in Kannada | VK Polls https://ift.tt/2WIkvsb

ಕೊರೊನಾದಿಂದ ಕೆಲಸ ಕಳೆದುಕೊಂಡು ಕಳ್ಳತನಕ್ಕಿಳಿದ ಎಂಬಿಎ ಪದವೀಧರ ಈಗ ಪೊಲೀಸ್‌ ಅತಿಥಿ!

ಬೆಂಗಳೂರು: ಎಂಬಿಎ ಓದಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದವನೊಬ್ಬ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು, ಸರಗಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಜಯನಗರದ ಪೂರ್ಣಿಮಾ ಕನ್ವೆನ್ಷನ್‌ ಹಾಲ್‌ನಿಂದ ಬರುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ ಆರೋಪಿ ಶೇಖ್‌ ಗೌಸ್‌ ಎಂಬಾತನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯು ಎಂಬಿಎ ಪದವಿ ವ್ಯಾಸಂಗ ಮಾಡಿ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕೊರೊನಾ ಹಾವಳಿಯಿಂದ ಕಂಪನಿ ನಷ್ಟಕ್ಕೊಳಗಾಗಿ ಈತ ಸೇರಿದಂತೆ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಈ ವೇಳೆ ಗೌಸ್‌ 35 ಸಾವಿರ ರೂ. ಸಾಲಗಾರನಾಗಿದ್ದ. ಜತೆಗೆ ಜೀವನ ನಿರ್ವಹಣೆಯೂ ಕಷ್ಟವಾಗಿತ್ತು. ಸಾಲಗಾರರು ಸಾಲ ಮರುಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ, ಹಣ ಸಂಪಾದನೆ ಮಾಡಲು ಕಳ್ಳತನದ ಹಾದಿ ಹಿಡಿಯಬೇಕಾಯಿತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.


from India & World News in Kannada | VK Polls https://ift.tt/2VkXx9J

‘ಬೇಡಿಕೆ ಈಡೇರೋವರೆಗೆ ಜಿಎಸ್‌ಟಿ ಪಾವತಿಸ್ಬೇಡಿ’; ವ್ಯಾಪಾರಿಗಳಿಗೆ ನರೇಂದ್ರ ಮೋದಿ ಸಹೋದರ ಕರೆ

ಮುಂಬಯಿ: ಬೇಡಿಕೆ ಈಡೇರಿಸದಿದ್ದರೆ ಸರಕು ಮತ್ತು ಸೇವಾ ತೆರಿಗೆ () ಪಾವತಿಸಬೇಡಿ ಎಂದು ಪ್ರಧಾನಿ ಅವರ ಸಹೋದರ, ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಅಸೋಸಿಯೇಷನ್‌ ಉಪಾಧ್ಯಕ್ಷ ಪ್ರಹ್ಲಾದ್‌ ಮೋದಿ ಅವರೇ ವ್ಯಾಪಾರಿಗಳಿಗೆ ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್‌ ಮೋದಿ ಅವರು, ನರೇಂದ್ರ ಮೋದಿ ಅವರೇ ಇರಲಿ, ಯಾರೇ ಇರಲಿ. ಅವರು ನಮ್ಮ ಮಾತು ಕೇಳಬೇಕು, ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಮನೆಬಾಗಿಲಿಗೆ ಬರಬೇಕು. ಆ ರೀತಿ ಹೋರಾಟ ಮಾಡಿ. ಬೇಡಿಕೆ ಈಡೇರಿಸುವವರೆಗೆ ಜಿಎಸ್‌ಟಿ ಪಾವತಿಸದಿರಿ ಎಂದು ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟು ಹಾಗೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳನ್ನು ಅವರು ಈಡೇರಿಸಲೇಬೇಕು. ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ ಹೊರತು, ಗುಲಾಮಗಿರಿ ಪದ್ಧತಿಯಲ್ಲಿ ಇಲ್ಲ. ನ್ಯಾಯ ಸಿಗುವವರೆಗೆ ವಿರಮಿಸುವುದು ಬೇಡ. ಮೊದಲು, ಬೇಡಿಕೆ ಈಡೇರಿಸದಿದ್ದರೆ ನಾವು ಜಿಎಸ್‌ಟಿ ಪಾವತಿಸುವುದಿಲ್ಲ ಎಂಬುದಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಪತ್ರ ಬರೆಯಿರಿ. ಸಕಾರಾತ್ಮಕ ಸ್ಪಂದನೆ ದೊರೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸಿ. ಆದರೆ ನಿಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿರಲಿ ಎಂದು ಹೇಳಿದ್ದಾರೆ. ಇನ್ನು ನಾನು ಸುಮಾರು 6.5 ಲಕ್ಷ ನ್ಯಾಯ ಬೆಲೆ ಅಂಗಡಿಗಳ ಪ್ರತಿನಿಧಿಯಾಗಿದ್ದೇನೆ. ಸರಿಯಾದ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ. ಆಗ ಸರಕಾರಗಳು ನಮ್ಮ ಮಾತು ಕೇಳಲೇಬೇಕು. ಒಂದು ವೇಳೆ ಕೇಳದಿದ್ದರೆ ಜಿಎಸ್‌ಟಿ ಪಾವತಿ ಮಾಡದಿರಿ. ಆಗ ನೋಡಿ ಸರಕಾರ ನಮ್ಮ ಬೇಡಿಕೆಗಳಿಗೆ ಕಿವಿಯಾಗುತ್ತದೆ ಎಂದು ತಿಳಿಸಿದ್ದಾರೆ.


from India & World News in Kannada | VK Polls https://ift.tt/3fhGVqm

ಸದನದಲ್ಲಿ ಶಿಸ್ತು ತರಲು ನಿಯಮಾವಳಿಗೆ ತಿದ್ದುಪಡಿ -ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು: ಸದನದಲ್ಲಿ ಸದಸ್ಯರ ನಡವಳಿಕೆ, ಶಿಸ್ತು, ಸಭ್ಯತೆ ಬಗ್ಗೆ ನಿಯಮಾವಳಿಗಳಿಗೆ ತಿದ್ದುಪಡಿ ಶಿಫಾರಸು ಸಿದ್ಧವಾಗಿದ್ದು, ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ವಿಧಾನಸಭಾಧ್ಯಕ್ಷರಾಗಿ ಜು. 31ಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಾಧನೆಗಳ ಮಾಹಿತಿಯುಳ್ಳ ಹೊತ್ತಗೆಯನ್ನು ವಿಧಾನಸೌಧದಲ್ಲಿ ಶನಿವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ''ಹೊಸತನಕ್ಕೆ ಸ್ಪಂದಿಸದ ಅಧಿಕಾರಶಾಹಿ ಬ್ರಿಟಿಷ್‌ ಮನಸ್ಥಿತಿ ಹಾಗೂ ಸರಕಾರ ಬಳಿ ಹಣಕಾಸಿನ ಲಭ್ಯತೆ ಇಲ್ಲದ ಕಾರಣ 'ಇ-ವಿಧಾನ್‌' ಯೋಜನೆ 2014ರಿಂದ ತೆವಳುತ್ತಾ ಸಾಗಿದ್ದು, ಪೂರ್ಣವಾಗಿ ಜಾರಿಯಾಗದಿರುವ ಬಗ್ಗೆ ನೋವಿದೆ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.

''ಪಕ್ಷಾಂತರ ನಿಷೇಧ ಕಾಯಿದೆ ಹಾಗೂ ಪೀಠಾಸೀನ ಅಧಿಕಾರಿಗಳ (ಸ್ಪೀಕರ್ಸ್) ಅಧಿಕಾರ ಬಲವರ್ಧನೆಯ ಸಂವಿಧಾನದ 10ನೇ ಪರಿಚ್ಛೇದದ ತಿದ್ದುಪಡಿ ಕರಡಿಗೆ ಸಂಬಂಧಿಸಿದ ಶಿಫಾರಸುಗಳಿಗೆ ಅಂತಿಮ ರೂಪ ನೀಡಲಾಗಿದ್ದು, ಲೋಕಸಭಾಧ್ಯಕ್ಷರಿಗೆ ಸಲ್ಲಿಕೆಯಾಗಲಿದೆ,'' ಎಂದು ಹೇಳಿದರು. ''ಕೋವಿಡ್‌ ಕಾರಣದಿಂದ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕೆಲ ಅಹಿತಕರ ಘಟನೆಗಳಿಂದಾಗಿ ಮೇಲ್ಮನೆ ಅಗತ್ಯದ ಬಗ್ಗೆಯೇ ಚರ್ಚೆಯಾಗುತ್ತಿದ್ದು, ಪರಿಷತ್‌ ಬೇಕು ಎಂಬ ಜನಾಭಿಪ್ರಾಯ ರೂಪುಗೊಳ್ಳುವಂತೆ ಮೇಲ್ಮನೆ ಸದಸ್ಯರೇ ನೋಡಿಕೊಳ್ಳಬೇಕು,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ''ಸದನಲ್ಲಿ ಕ್ರಿಯಾಶೀಲತೆ, ಚರ್ಚೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆ, ಮೌಲ್ಯಯುತ ವಿಚಾರ ಮಂಡನೆ ಆಧರಿಸಿ 'ಅತ್ಯುತ್ತಮ ಶಾಸಕ' ಪ್ರಶಸ್ತಿ ನೀಡುವುದನ್ನು ಮುಂದಿನ ಅಧಿವೇಶನದಿಂದ ಜಾರಿಗೆ ಬರಲಿದೆ," ಎಂದರು. ಸಾಧನೆಯ ವಿವರ ಎರಡು ವರ್ಷದಲ್ಲಿ ಒಟ್ಟು 5 ಅಧಿವೇಶನದಲ್ಲಿ 54 ದಿನದಲ್ಲಿಕಲಾಪ ನಡೆದಿದೆ. ಮಂಡನೆಯಾದ 98 ವಿಧೇಯಕಗಳಲ್ಲಿ 96 ಚರ್ಚೆಯಾಗಿ ಅಂಗೀಕೃತವಾಗಿವೆ. ಪ್ರಶ್ನೋತ್ತರ ಕಲಾಪದಲ್ಲಿ 825 ಚುಕ್ಕೆ ಗುರುತಿನ ಪ್ರಶ್ನೆಗಳ ಪೈಕಿ 804ಕ್ಕೆ ಉತ್ತರ, ಲಿಖಿತ ಮೂಲಕ ಉತ್ತರಿಸುವ 10,427 ಪ್ರಶ್ನೆಗಳ ಪೈಕಿ 9,767 ಉತ್ತರವನ್ನು ಸದಸ್ಯರಿಗೆ ಒದಗಿಸಲಾಗಿದೆ. 982 ಗಮನ ಸೆಳೆಯುವ ಸೂಚನೆಗಳಲ್ಲಿ 597ಕ್ಕೆ ಉತ್ತರ ಒದಗಿಸಲಾಗಿದೆ ಎಂದು ವಿವರಿಸಿದರು.


from India & World News in Kannada | VK Polls https://ift.tt/2V1vaOg

ಸಿಎಂ ದಿಲ್ಲಿ ಭೇಟಿ ಯಶಸ್ವಿ, ಕೇಂದ್ರದಿಂದ ಹಂತ ಹಂತವಾಗಿ ಜಿಎಸ್‌ಟಿ ಹಣ ಬಿಡುಗಡೆಯ ಭರವಸೆ

ಬೆಂಗಳೂರು: ರಾಜ್ಯಕ್ಕೆ ಬರಬೇಕಾದ 11,400 ಕೋಟಿ ರೂ. ಬಾಕಿಯನ್ನು ಮಾಸಿಕವಾರು ಬಿಡುಗಡೆ ಮಾಡಲು ಒಪ್ಪಿರುವ , ಕೋವಿಡ್‌ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಆರೋಗ್ಯ ಮೂಲ ಸೌಕರ್ಯಕ್ಕೆ 800 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದೆ. ದಿಲ್ಲಿಯಲ್ಲಿ ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರನ್ನು ಭೇಟಿಯಾದ ನೂತನ ಸಿಎಂ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು. ಈ ಬಗ್ಗೆ ದಿಲ್ಲಿಯಲ್ಲಿ ಪ್ರತಿಕ್ರಿಯಿಸಿದ ಬೊಮ್ಮಾಯಿ, "ಕಳೆದ ಆರ್ಥಿಕ ವರ್ಷದ ಜಿಎಸ್‌ಟಿ ಪರಿಹಾರದಲ್ಲಿ 12,000 ಕೋಟಿ ರೂ. ಬಿಡುಗಡೆಯಾಗಿದ್ದು, ಬಾಕಿಯಿರುವ 11,400 ಕೋಟಿ ರೂ. ಬಿಡುಗಡೆಗೆ ಕೋರಲಾಯಿತು. ಇದಕ್ಕೆ ಒಪ್ಪಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ," ಎಂದರು. "ಕೇಂದ್ರ ಸರಕಾರವು ಕೋವಿಡ್‌ 3ನೇ ಅಲೆ ತಡೆಗೆ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ ರಾಜ್ಯಕ್ಕೆ 800 ಕೋಟಿ ರೂ. ನೀಡಲಿದೆ. ಇದರಿಂದ ಆರೋಗ್ಯ ಮೂಲ ಸೌಕರ್ಯ ವೃದ್ಧಿಸಲು ನೆರವಾಗಲಿದೆ," ಎಂದು ಬೊಮ್ಮಾಯಿ ಹೇಳಿದರು. ಸದ್ಯ ತಿಂಗಳಿಗೆ 63 ರಿಂದ 64 ಲಕ್ಷ ಕೋವಿಡ್‌ ಲಸಿಕೆ ಡೋಸ್‌ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಆದರೆ ರಾಜ್ಯಕ್ಕೆ ತಿಂಗಳಿಗೆ 1.5 ಕೋಟಿ ಡೋಸ್‌ ನೀಡುವಂತೆ ಕೋರಲಾಯಿತು. ಒಂದು ಕೋಟಿ ಡೋಸ್‌ ಲಸಿಕೆ ಪೂರೈಸುವ ಭರವಸೆ ನೀಡಿದ್ದು, ಇದರಿಂದ ರಾಜ್ಯದಲ್ಲಿ ನಿತ್ಯ 3 ರಿಂದ 4 ಲಕ್ಷ ಮಂದಿಗೆ ಲಸಿಕೆ ನೀಡಲು ನೆರವಾಗಲಿದೆ ಎಂದು ತಿಳಿಸಿದರು. ಗಡಿಯಲ್ಲಿ ನಿಯಂತ್ರಣ ಕೇರಳದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೇರಳದ ಕಡೆಯಿಂದ ಕರ್ನಾಟಕಕ್ಕೆ ಪ್ರವೇಶ ನಿಯಂತ್ರಿಸುವ ಬಗ್ಗೆ ಮಾರ್ಗಸೂಚಿ ಹೊರಡಿಸಲಾಗುವುದು. ಕೋವಿಡ್‌ ಮೂರನೇ ಅಲೆ ನಿಯಂತ್ರಣ, ಲಸಿಕೆ ಅಭಿಯಾನ ಇತರೆ ಅಂಶಗಳ ಬಗ್ಗೆಯೂ ಮಾರ್ಗಸೂಚಿಯಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ. ಒಟ್ಟಾರೆ ದಿಲ್ಲಿ ಪ್ರವಾಸದಲ್ಲಿ ಕೇಂದ್ರದಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು. ಡೌಟೇ ಬೇಡ, ಮೇಕೆದಾಟು ಶತಃಸಿದ್ಧ ಮೇಕೆದಾಟು ಯೋಜನೆಗೆ ವಿರೋಧಿಸಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಉಪವಾಸ ಕೂರುವುದಕ್ಕೂ ನಮಗೂ ಸಂಬಂಧವಿಲ್ಲ. ಮೇಕೆದಾಟು ಯೊಜನೆಯ ಮೇಲೆ ನಮ್ಮ ಹಕ್ಕಿದೆ. ಆ ನೀರಿನ ಪಾಲಿನ ಮೇಲೂ ಹಕ್ಕಿದೆ. ಯೋಜನೆಗೆ ಈಗಾಗಲೇ ಡಿಪಿಆರ್‌ ಸಿದ್ಧಪಡಿಸಲಾಗಿದ್ದು, ಅನುಮೋದನೆ ಪಡೆದು ಮಾಡಿಯೇ ತೀರುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಯಾರಾದರೂ ಉಪವಾಸ ಕುಳಿತುಕೊಳ್ಳಲಿ, ಯಾರಾದರೂ ಊಟ ಮಾಡಲಿ ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಗಣ್ಯರ ಸ್ಮರಣೆ ದಿಲ್ಲಿ ಪ್ರವಾಸದಲ್ಲಿದ್ದ ಸಿಎಂ ಬೊಮ್ಮಾಯಿ ಶನಿವಾರ ಬೆಳಗ್ಗೆ ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಹಾಗೆಯೇ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳಕ್ಕೂ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.


from India & World News in Kannada | VK Polls https://ift.tt/37ejYjw

ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ಏರಿಕೆ: ಕಠಿಣ ಕ್ರಮಕ್ಕೆ ಕೇಂದ್ರದ ಸೂಚನೆ

ಹೊಸದಿಲ್ಲಿ: ಸೇರಿದಂತೆ ಹತ್ತು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ಕೇಂದ್ರ ಸರಕಾರ ಶನಿವಾರ ಹೇಳಿದೆ. ಶೇ 10ಕ್ಕಿಂತಲೂ ಅಧಿಕ ಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಅದು ಒತ್ತಿ ಹೇಳಿದೆ. ಕಠಿಣ ಕ್ರಮಗಳ ಜಾರಿಗೊಳಿಸುವುದರ ಜತೆಗೆ, 45 ರಿಂದ 60 ಹಾಗೂ 60 ವರ್ಷ ಮೇಲಿನ ವಯೋಮಾನದ ವರ್ಗದವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಚುರುಕುಗೊಳಿಸುವುದು ಅಗತ್ಯವಾಗಿದೆ. ಈ ಅಪಾಯಕಾರಿ ವಯಸ್ಸಿನ ಗುಂಪಿನಲ್ಲಿಯೇ ಸುಮಾರು ಶೇ 80ರಷ್ಟು ಸಾವುಗಳು ಸಂಭವಿಸುತ್ತಿವೆ ಎಂದು ತಿಳಿಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಒಡಿಶಾ, ಮಿಜೋರಾಂ, ಮೇಘಾಲಯ, ಮಣಿಪುರ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಅಥವಾ ಪಾಸಿಟಿವಿಟಿ ದರದಲ್ಲಿ ಹೆಚ್ಚಳ ಕಂಡುಬರುತ್ತಿವೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ. 46 ಜಿಲ್ಲೆಗಳಲ್ಲಿ ಶೇ 10ಕ್ಕಿಂತಲೂ ಅಧಿಕ ಪಾಸಿಟಿವಿಟಿ ದರ ದಾಖಲಾಗುತ್ತಿದೆ. 53 ಜಿಲ್ಲೆಗಳಲ್ಲಿ ಶೇ 5-10ರವರೆಗೆ ಪಾಸಿಟಿವಿಟಿ ದರವಿದೆ. ಹೀಗಾಗಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಈ ಹಂತದಲ್ಲಿ ಯಾವುದೇ ಕೊರತೆಯು ಈ ಜಿಲ್ಲೆಗಳಲ್ಲಿನ ಸನ್ನಿವೇಶ ಮತ್ತಷ್ಟು ಕೆಡಲಿದೆ ಎಂದು ಕೇಂದ್ರ ಎಚ್ಚರಿಕೆ ನೀಡಿದೆ. 'ಹೋಮ್ ಐಸೋಲೇಷನ್‌ನಲ್ಲಿರುವ ಜನರ ಮೇಲೆ ಸೂಕ್ಷ್ಮ ನಿಗಾ ಇರಿಸಬೇಕು. ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇರುವವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕುವಂತೆ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಒದಗಿಸುವುದಕ್ಕೆ ಸಂಬಂಧಿಸಿದ ಪರಿಣಾಮಕಾರಿಯಾಗಿ ಅನುಸರಿಸಬೇಕು' ಎಂದು ಆರೋಗ್ಯ ಸಚಿವಾಲಯದ ಸೂಚನೆ ನೀಡಿದೆ.


from India & World News in Kannada | VK Polls https://ift.tt/3ffyqfH

ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ: ಕರ್ನಾಟಕದ ಹೊಸ ಆದೇಶ

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಹಾಗೂ ಮೂರನೇ ಅಲೆ ಸೋಂಕು ಹರಡುವ ಭೀತಿ ಎದುರಾಗಿರುವ ನಡುವೆ, ನೆರೆಯ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರಿಗೆ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯಕ್ಕೆ ಪ್ರವೇಶಿಸುವವರು ಎರಡು ಡೋಸ್ ಲಸಿಕೆ ಪಡೆದಿದ್ದರೂ, ಒಳ ಬರುವ 72 ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಿ, ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ ಎಂದು ಸರಕಾರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ವಿಮಾನ, ರೈಲು, ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಆರ್‌ಟಿ ಪಿಸಿಆರ್ ಪರೀಕ್ಷೆಯ ವರದಿ ಕಡ್ಡಾಯವಾಗಿದೆ. '72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ವಿಮಾನಯಾನ ಸಂಸ್ಥೆಗಳು ಬೋರ್ಡಿಂಗ್ ಪಾಸ್ ನೀಡಬೇಕು' ಎಂದು ಸರಕಾರ ಹೇಳಿದ್ದು, ಇದೇ ರೀತಿಯ ಸೂಚನೆಯನ್ನು ರೈಲ್ವೆ ಅಧಿಕಾರಿಗಳು ಮತ್ತು ಬಸ್ ನಿರ್ವಾಹಕರಿಗೂ ನೀಡಲಾಗಿದೆ. ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿನ ಕೇರಳ ಗಡಿ ಹಾಗೂ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿನ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ತಪಾಸಣಾ ನೆಲೆಗಳನ್ನು ಸ್ಥಾಪಿಸುವಂತೆ ಸರಕಾರ ಆದೇಶಿಸಿದೆ. ಪ್ರತಿ ಹದಿನೈದು ದಿನಕ್ಕೆ ಪರೀಕ್ಷೆಶಿಕ್ಷಣ, ಉದ್ಯಮ ಮತ್ತು ಇತರೆ ಕಾರಣಗಳಿಂದ ಕರ್ನಾಟಕಕ್ಕೆ ನಿತ್ಯವೂ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿ 15 ದಿನಗಳಿಗೆ ಒಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಹಾಗೂ ನೆಗೆಟಿವ್ ಪರೀಕ್ಷೆ ವರದಿ ಹೊಂದಿರಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳು ಮತ್ತು ಆರೋಗ್ಯ ವೃತ್ತಿಪರರು, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ತುರ್ತುಪರಿಸ್ಥಿತಿಯ ಸನ್ನಿವೇಶದಲ್ಲಿ (ಕುಟುಂಬದಲ್ಲಿ ಸಾವು, ವೈದ್ಯಕೀಯ ಚಿಕಿತ್ಸೆ ಇತ್ಯಾದಿ) ಆಗಮಿಸುವ ಪ್ರಯಾಣಿಕರ ಗಂಟಲು ದ್ರವವನ್ನು ಅವರ ಸಂಪೂರ್ಣ ವಿವರಗಳೊಂದಿಗೆ ಪಡೆದುಕೊಳ್ಳಬೇಕು. ಅವರ ವರದಿ ಆಧಾರದಲ್ಲಿ ರಾಜ್ಯದ ನಿಯಮಗಳಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


from India & World News in Kannada | VK Polls https://ift.tt/3xkanSW

Tokyo Olympics: ತಾಯ್ ತ್ಸು-ಯಿಂಗ್ ವಿರುದ್ಧ ಪಿವಿ ಸಿಂಧೂಗೆ ಸೋಲು!

ಟೋಕಿಯೋ (ಜಪಾನ್‌): ಟೋಕಿಯೋ ಒಲಿಂಪಿಕ್ಸ್‌ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತದ , ಚೈನೀಸ್‌ ತೈಪೆಯ ತಾಯ್‌ ತ್ಸು-ಯಿಂಗ್‌ ವಿರುದ್ಧ 2-0 ಅಂತರದಲ್ಲಿ ಸೋಲುವ ಮೂಲಕ ಫೈನಲ್‌ ತಲುಪುವಲ್ಲಿ ವಿಫಲರಾಗಿದ್ದಾರೆ. ಆ ಮೂಲಕ ಭಾರತದ ಆಟಗಾರ್ತಿಯ ಚಿನ್ನದ ಪದಕದ ಕನಸು ಭಗ್ನವಾಯಿತು. ಶನಿವಾರ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಅತ್ಯುತ್ತಮ ಹೋರಾಟ ನಡೆಸಿದ್ದ ಪಿವಿ ಸಿಂಧೂ, ಎರಡನೇ ಗೇಮ್‌ನಲ್ಲಿ ನೀರಸ ಪ್ರದರ್ಶನ ತೋರಿದರು. ಇದರ ಪರಿಣಾಮ ತಾಯ್‌ ತ್ಸು-ಯಿಂಗ್‌ ವಿರುದ್ಧ 18-21 ಹಾಗೂ 11-21 ಅಂತರದ ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಕಳೆದ ಪಂದ್ಯಗಳ ಗೆಲುವಿನ ವಿಶ್ವಾಸದಲ್ಲಿ ಇಂದು ಕೋರ್ಟ್‌ಗೆ ಆಗಮಿಸಿದ್ದ ಪಿವಿ ಸಿಂಧೂ, ಮೊದಲ ಗೇಮ್‌ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಅದರಂತೆ 5-2 ಮುನ್ನಡೆ ಗಳಿಸಿದ್ದರು. ನಂತರ ಮೊದಲ ಗೇಮ್‌ ವಿರಾಮದ ಹೊತ್ತಿಗೆ ಕೂಡ ಭಾರತೀಯ ಆಟಗಾರ್ತಿ 11-8 ಮುನ್ನಡೆ ಪಡೆಯುವ ಮೂಲಕ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ತಾಯ್‌ ತ್ಸು-ಯಿಂಗ್‌, 21-18 ಅಂತರದಲ್ಲಿ ಪಿವಿ ಸಿಂಧೂಗೆ ಆಘಾತ ನೀಡಿದರು. ನಂತರ ಎರಡನೇ ಗೇಮ್‌ನಲ್ಲಿ ಕಣಕ್ಕೆ ಇಳಿದ ಪಿವಿ ಸಿಂಧೂ ಹಾಗೂ ತಾಯ್‌ ತ್ಸು-ಯಿಂಗ್‌ ಆರಂಭದಲ್ಲಿ ಸಮಬಲದ ಹೋರಾಟ ನಡೆಸಿದ್ದರು. ಆ ಮೂಲಕ 4-4 ಸಮಬಲ ಕಾಯ್ದುಕೊಂಡಿದ್ದರು. ಆದರೆ, ತಾನು ಮಾಡಿದ ತಪ್ಪುಗಳಿಂದ ಪಿವಿ ಸಿಂಧೂ, ಎರಡನೇ ಗೇಮ್‌ ವಿರಾಮದ ಹೊತ್ತಿಗೆ ಚೈನೀಸ್‌ ತೈಪೆ ಆಟಗಾರ್ತಿಯ ವಿರುದ್ಧ 7-11 ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ವಿರಾಮದ ಬಳಿಕ ಕೋರ್ಟ್‌ಗೆ ಮರಳಿದ , ಆಡಿದ ಆರರಲ್ಲಿ ಐದು ಅಂಕಗಳನ್ನು ಕಲೆ ಹಾಕಿ 16-8 ಅಂತರದಲ್ಲಿ ಎಂಟು ಅಂಕಗಳ ಮುನ್ನಡೆ ಗಳಿಸಿದರು. ಆದರೆ, ಚೈನೀಸ್‌ ತೈಪೆ ಆಟಗಾರ್ತಿಯ ವಿರುದ್ಧ ಕಮ್‌ಬ್ಯಾಕ್‌ ಮಾಡುವಲ್ಲಿ ವಿಫಲರಾದ ಸಿಂಧೂ, ಅಂತಿಮವಾಗಿ 11 ಅಂಕಗಳಿಗೆ ಸೀಮಿತರಾದರು. ಅಂತಿಮವಾಗಿ 11-21 ಅಂತರದಲ್ಲಿ ಸಿಂಧೂ ಸೋಲು ಅನುಭವಿಸಿದರು. ಪಂದ್ಯದ ಸೋಲಿನೊಂದಿಗೆ ಪಿವಿ ಸಿಂಧೂ ಅವರ ಚೊಚ್ಚಲ ಚಿನ್ನದ ಪದಕದ ಕನಸು ಭಗ್ನವಾಯಿತು. ಇನ್ನು ಕಂಚಿನ ಪದಕದ ಪಂದ್ಯದಲ್ಲಿ ಭಾರತೀಯ ಆಟಗಾರ್ತಿ, ಚೀನಾದ ಹಿ ಬಿಂಗ್ ಜಿಯಾವ್ ವಿರುದ್ಧ ಸೆಣಸಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3C3Dc9E

ಈಶ್ವರಪ್ಪ-ಕಲ್ಲಡ್ಕ ಪ್ರಭಾಕರ್ ಭೇಟಿ: 'ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಮುಂದಿನ ಚುನಾವಣೆ'

ಬೆಂಗಳೂರು: ತಮಗೆ ಉಪ ಮುಖ್ಯಮಂತ್ರಿ ಪಟ್ಟ ಬೇಕೇ ಬೇಕು ಎಂದು ಮಾಜಿ ಸಚಿವ ಪಟ್ಟು ಹಿಡಿದಿರುವ ನಡುವೆ, ಆರೆಸ್ಸೆಸ್ ಹಿರಿಯ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಬೆಂಗಳೂರಿನಲ್ಲಿ ಈಶ್ವರಪ್ಪ ಅವರ ಮನೆಗೆ ಶನಿವಾರ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಈ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಈಶ್ವರಪ್ಪ, ಪಕ್ಷ, ಸಂಘಟನೆ ಹಾಗೂ ಸರಕಾರದ ಭಾಗವಾಗಿರುವ ನಾವು ಆಗಾಗ ಈ ರೀತಿ ಭೇಟಿ ನಡೆಸಿ ಚರ್ಚಿಸುವುದು ಸಾಮಾನ್ಯ ಎಂದಿದ್ದಾರೆ. ಸಂಪುಟದಿಂದ ಹಿರಿಯರನ್ನು ಕೈ ಬಿಡುವ ವಿಚಾರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರ ಸಂಪುಟದಲ್ಲಿ ಹಿರಿಯರನ್ನ ಕೈ ಬಿಡುತ್ತಾರೋ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಕೇಂದ್ರದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದಿದ್ದಾರೆ. ಇಂದು ಸಂಜೆ ಬೊಮ್ಮಾಯಿ ಅವರು ದೆಹಲಿಯಿಂದ ಬರುತ್ತಾರೆ. ಹಿರಿಯರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಅವರನ್ನೇ ಕೇಳಬೇಕು. ಈ ಬಗ್ಗೆ ಯಾವುದೇ ಮಾಹಿತಿ ನಮಗಿಲ್ಲ. ಇದೇನು ಬಹಳ ಚರ್ಚೆ ಮಾಡುವ ವಿಷಯವೂ ಅಲ್ಲ ಎಂದು ಹೇಳಿದ್ದಾರೆ. ಕಟೀಲ್ ನೇತೃತ್ವದಲ್ಲಿ ಚುನಾವಣೆಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಬರಲಿದೆ. ಬದಲಾಗಿರುವ ಇಂದಿನ ಪರಿಸ್ಥಿತಿಗಳಲ್ಲಿ ಈ ಬಾರಿ ಬಿಜೆಪಿ ಸಂಘಟನಾ ಶಕ್ತಿಯಿಂದಲೇ ಚುನಾವಣೆ ಗೆಲ್ಲುವ ಯೋಜನೆಯನ್ನು ಕೇಂದ್ರ ಮಾಡಿದೆ. ಹಿಂದೆ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಹೀಗಾಗಿ ಗೊಂದಲಗಳು ಎದ್ದಿವೆ. ಈ ಹಿನ್ನಲೆಯಲ್ಲಿ ಮುಂದಿನ ಚುನಾವಣೆ ಪಕ್ಷದ ಸಂಘಟನೆ ಶಕ್ತಿ ಮೇಲೆಯೇ ಚುನಾವಣೆ ಗೆಲ್ಲಬೇಕು ಎಂಬ ಒಲವು ವ್ಯಕ್ತವಾಗಿದೆ. ಈ ಸಂಬಂಧ ನೇತೃತ್ವದಲ್ಲಿ ಸಂಘಟನೆ ಮಾಡುತ್ತಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕೇಂದ್ರ ನಾಯಕರು ತೀರ್ಮಾನಿಸುತ್ತಾರೆ'ನಾನು ಡಿಸಿಎಂ ಏಕೆ ಆಗಿಲ್ಲ, ಸಿಎಂ ಏಕೆ ಆಗಿಲ್ಲ ಅಂತ ಕೇಳಲು ಸ್ವಾಮೀಜಿಗಳು ಮತ್ತು ಕಾರ್ಯಕರ್ತರು ಪ್ರೀತಿ ವಿಶ್ವಾಸದಿಂದ ಬರುತ್ತಾರೆ. ಸಾವಿರಾರು ಮಂದಿ ದೂರವಾಣಿ ಕರೆ ಮಾಡಿ ಅವರ ಆಸೆ ಹಂಚಿಕೊಂಡಿದ್ದಾರೆ. ನಾನು ಅವರಿಗೆ ಋಣಿಯಾಗಿದ್ದೇನೆ. ಆದರೆ ಪಕ್ಷದ ಹಿತದೃಷ್ಟಿಯಿಂದ ಯಾವ ಸ್ಥಾನ ನೀಡಿದರೆ ಅನುಕೂಲ ಆಗಲಿದೆ ಎಂಬುದನ್ನು ಆಧರಿಸಿ ತೀರ್ಮಾನವನ್ನು ಕೇಂದ್ರದ ನಾಯಕರು ತೆಗೆದುಕೊಳ್ಳುತ್ತಾರೆ. ಯಾವ ಪಕ್ಷವೂ ನೀಡದಷ್ಟು ಸ್ಥಾನಮಾನವನ್ನು ಬಿಜೆಪಿಯಲ್ಲಿ ಹಿಂದುಳಿದ ನಾಯಕರಿಗೆ ನೀಡಲಾಗಿದೆ' ಎಂದು ಹೇಳಿದರು.


from India & World News in Kannada | VK Polls https://ift.tt/3llSelz

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿದ ಇಸುರು ಉದಾನ!

ಹೊಸದಿಲ್ಲಿ: ಭಾರತ ವಿರುದ್ಧ ಸೀಮಿತ ಓವರ್‌ಗಳ ಸರಣಿ ಮುಗಿಸಿದ ಕೇವಲ ಎರಡು ದಿನಗಳಲ್ಲಿಯೇ ಶ್ರೀಲಂಕಾ ತಂಡದ ಆಲ್‌ರೌಂಡರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ. ಜುಲೈ 29 ರಂದು ಮುಗಿದಿದ್ದ ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಇಸುರು ಉದಾನ ಕಾಣಿಸಿಕೊಂಡಿದ್ದರು. ಮೊದಲನೇ ಓಡಿಐ ಪಂದ್ಯ ಹಾಗೂ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಲ್‌ರೌಂಡರ್ ಕಾಣಿಸಿಕೊಂಡಿದ್ದರು. ಅಂದಹಾಗೆ ಮೂರೂ ಪಂದ್ಯಗಳಿಂದ ಕೇವಲ ಎಂಟು ರನ್‌ ಗಳಿಸಿ, ವಿಕೆಟ್‌ ಪಡೆಯುವಲ್ಲಿ ಉದಾನ ವಿಫಲರಾಗಿದ್ದರು. 2009ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಸುರು ಉದಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಡೇವಿಡ್‌ ಹಸ್ಸಿ ಹಾಗೂ ಬ್ರಾಡ್‌ ಹೆಡ್ಡಿನ್ ಅವರ ವಿಕೆಟ್‌ ಪಡೆದ ಹೊರತಾಗಿಯೂ 47 ರನ್ ನೀಡುವ ಮೂಲಕ ದುಬಾರಿಯಾಗಿದ್ದರು. ಇನ್ನು 2012ರಲ್ಲಿ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಉದಾನ, ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್‌ಮನ್‌ ಕೂಡ ಆಗಿದ್ದರು. ಅಂದಹಾಗೆ ಕಳೆದ ಹಲವು ವರ್ಷಗಳಿಂದ ಇಸುರು ಉದಾನ ನಿಧಾನಗತಿಯ ಪಿಚ್‌ಗಳಲ್ಲಿ ಕಟ್ಟರ್‌ ಹಾಗೂ ವಿಭಿನ್ನ ಎಸೆತಗಳಿಂದ ಶ್ರೀಲಂಕಾ ತಂಡದ ಬೌಲಿಂಗ್‌ ವಿಭಾಗಕ್ಕೆ ಅವಿಭಾಜ್ಯ ಅಂಗವಾಗಿದ್ದರು. ಆದರೆ, ಟಿ20 ವಿಶ್ವಕಪ್‌ ಟೂರ್ನಿಗೂ ಮೊದಲೇ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ತಲಾ ಒಂದೊಂದು ಅರ್ಧಶತಕ ಸಿಡಿಸಿರುವ ಉದಾನ, 21 ಏಕದಿನ ಪಂದ್ಯಗಳಿಂದ 18 ವಿಕೆಟ್‌ ಹಾಗೂ 35 ಟಿ20 ಪಂದ್ಯಗಳಿಂದ 27 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ವೃತ್ತಿ ಜೀವನದಲ್ಲಿ 450 ರನ್‌ಗಳನ್ನು ಬ್ಯಾಟ್‌ನಿಂದ ಗಳಿಸಿದ್ದಾರೆ. 2020ರ ಐಪಿಎಲ್‌ನಲ್ಲಿ ಪರ ಆಡಿದ್ದ ಉದಾನ: ಕಳೆದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಇಸುರು ಉದಾನ ಕಣಕ್ಕೆ ಇಳಿದಿದ್ದರು. ಅವರನ್ನು ಮಿನಿ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿಯು 50 ಲಕ್ಷ ರೂ. ಗಳಿಗೆ ಖರೀದಿಸಿತ್ತು. ಅದರಂತೆ ಲಂಕಾ ಆಲ್‌ರೌಂಡರ್‌ ಆಡಿದ್ದ 10 ಪಂದ್ಯಗಳಿಂದ 8 ವಿಕೆಟ್‌ ಕಬಳಿಸಿದ್ದರು ಹಾಗೂ 9.75 ರಷ್ಟು ಎಕಾನಮಿ ರೇಟ್‌ ಹೊಂದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fgbgFS

ತ್ರಿವಳಿ ಗ್ಯಾಲಕ್ಸಿ ಸಹೋದರರ ಕಲಹ: ಬಿಟ್ಟರೂ ಬಿಡಲಾರದು ಗುರುತ್ವಾಕರ್ಷಣೆಯ ಮೋಹ!

ವಾಷಿಂಗ್ಟನ್: ವಿಶ್ವ ಎಂಬುದು ಬಿಲಿಯನ್‌ಗಟ್ಟಲೇ ಇರುವ ನಕ್ಷತ್ರಪುಂಜ(ಗ್ಯಾಲಕ್ಸಿ)ಗಳ ಸಮೂಹ. ವೀಕ್ಷಣೆಗೆ ಲಭ್ಯ ವಿಶ್ವದಲ್ಲಿ ಸುಮಾರು 2 ಟ್ರಿಲಿಯನ್ ಗ್ಯಾಲಕ್ಸಿಗಳಿವೆ ಎಂಬುದು ಖಗೋಳ ವಿಜ್ಞಾನಿಗಳ ಅಂದಾಜು. ನಕ್ಷತ್ರಗಳ ತವರೂರಾಗಿರುವ ಈ ಗ್ಯಾಲಕ್ಸಿಗಳು, ಅನಂತ ವಿಶ್ವದಲ್ಲಿ ತಮ್ಮ ತಮ್ಮ ಸ್ಥಾನವನ್ನು ಖಾತರಿಪಡಿಸಿಕೊಂಡಿವೆ. ನಮ್ಮ ಭೂಮಿ ಕೂಡ ಮಿಲ್ಕಿ ವೇ(ಹಾಲು ಹಾದಿ) ಗ್ಯಾಲಕ್ಸಿಯಲ್ಲಿ ಆಶ್ರಯ ಪಡೆದಿರುವ ವಿಶಿಷ್ಟ ಸದಸ್ಯ. ಈ ಗ್ಯಾಲಕ್ಸಿಗಳ ಉಗಮ, ಬೆಳವಣಿಗೆ, ಅಂತ್ಯ ಎಲ್ಲವೂ ರೋಚಕ. ಗ್ಯಾಲಕ್ಸಿಗಳ ಅಸ್ತಿತ್ವವೇ ಖಗೋಳ ಪ್ರಿಯರ ಗಮನ ಸೆಳೆಯುವಂತದ್ದು. ಊಹಿಸಲು ಸಾಧ್ಯವಾಗದಷ್ಟು ಪರಸ್ಪರ ದೂರ ಇರುವ ಈ ಗ್ಯಾಲಕ್ಸಿಗಳು, ಗುರುತ್ವಾಕರ್ಷಣೆಯ ಮೋಹಕ್ಕೆ ಸಿಲುಕಿ ಪರಸ್ಪರ ಸಂಬಂಧವನ್ನೂ ಬೆಸೆದುಕೊಂಡಿರುತ್ತವೆ. ಕೆಲವೊಮ್ಮೆ ಅವಳಿ ಮತ್ತೂ ಕೆಲವೊಮ್ಮೆ ತ್ರಿವಳಿ ಗ್ಯಾಲಕ್ಸಿಗಳ ಸಮೂಹ ನಮ್ಮ ಕಣ್ಣಿಗೆ ಕಾಣುವುದುಂಟು. ಅದರಂತೆ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕ ಯಂತ್ರ ತ್ರಿವಳಿ ಗ್ಯಾಲಕ್ಸಿಗಳ ಸಮೂಹವೊಂದನ್ನು ಪತ್ತೆ ಮಾಡಿದ್ದು, ಗುರುತ್ವಾಕರ್ಷಣೆ ಈ ಮೂರೂ ಗ್ಯಾಲಕ್ಸಿಗಳ ನಡುವೆ ಕಲಹಕ್ಕೆ ಕಾರಣವಾಗಿದೆ. ಭೂಮಿಯಿಂದ ಬರೋಬ್ಬರಿ 763 ಮಿಲಿಯನ್ ಜ್ಯೋತಿರ್ವರ್ಷ ದೂರ ಇರುವ Arp 195(ಅಟ್ಲಾಸ್ ಆಫ್ ಪೆಕ್ಯೂಲಿಯರ್ ಗ್ಯಾಲಕ್ಸಿ) ಎಂಬ ಮೂರು ಗ್ಯಾಲಕ್ಸಿಗಳ ಸಮೂಹ ಹಬಲ್ ಕಣ್ಣಿಗೆ ಬಿದ್ದಿದೆ. ಗುರುತ್ವಾಕರ್ಷಣೆಯ ಪರಿಣಾಮವಾಗಿ ಈ ಮೂರೂ ಗ್ಯಾಲಕ್ಸಿಗಳು ನಿರಂತರವಾಗಿ ಸಹೋದರರ ಕಲಹದಲ್ಲಿ ನಿರತವಾಗಿವೆ. ಹಬಲ್ ವೀಕ್ಷಣೆಗಳ ವೇಳಾಪಟ್ಟಿಯನ್ನು ಕಂಪ್ಯೂಟರ್ ಅಲ್ಗಾರಿದಮ್ ಬಳಸಿ ಲೆಕ್ಕಹಾಕಲಾಗುತ್ತದೆ. ಇದು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‌ನಂತಹ ಭವಿಷ್ಯದ ದೂರದರ್ಶಕಗಳಲ್ಲೂ ಬಳಕೆ ಮಾಡಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.


from India & World News in Kannada | VK Polls https://ift.tt/3xdBxuQ

ಕಪ್ಪುಹಣ ಬಿಳಿ ಮಾಡುವ ಆಸೆಗೆ ಬಿದ್ದು ₹9.20ಲಕ್ಷ ಕಳೆದುಕೊಂಡ ಮಂಗಳೂರಿನ ಕಂಟ್ರಾಕ್ಟರ್‌

ಮಂಗಳೂರು: ಕಪ್ಪು ಹಣ ಬಿಳಿ ಮಾಡುವ ಆಸೆಗೆ ಬಿದ್ದು ಪಿಡಬ್ಲ್ಯುಡಿ ಕಂಟ್ರಾಕ್ಟುದಾರನೊಬ್ಬ ಬರೋಬ್ಬರಿ 9.20 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಿಡಬ್ಲ್ಯುಡಿ ಕಂಟ್ರಾಕ್ಟುದಾರ ರೋಹಿದಾಸ್‌ ಎಂಬುವವರು ರಿಯಲ್‌ ಎಸ್ಟೇಟ್‌ ಉದ್ದೇಶದಿಂದ ದಿನಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದು, ಆ ವಾರದಲ್ಲೇ ನಿತಿನ್‌ ರಾಜ್‌ ಬೆಂಗಳೂರು ಮತ್ತು ಧನರಾಜ್‌ ವಿಟ್ಲಎಂಬವರು ಕರೆ ಮಾಡಿ, ತಾವು ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದು, ಸಂಸ್ಥೆಯ ಮಾಲೀಕರಿಗೆ ಮಂಗಳೂರಿನಲ್ಲಿ ಮನೆ ಅಗತ್ಯತೆಯಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವರಿಂದ ಮನೆಗೆ 50 ಲಕ್ಷ ರೂ. ಸಾಲ ತೆಗೆಸಿಕೊಡುವುದಾಗಿಯೂ ಹೇಳಿದ್ದಾರೆ. ಬಳಿಕ ಧನರಾಜ್‌ ಸಂತ್ರಸ್ತ ರೋಹಿದಾಸ್‌ರನ್ನು ಶ್ರೀರಂಗಪಟ್ಟಣಕ್ಕೆ ಬರಲು ಹೇಳಿದ್ದಾನೆ. ಈ ಸಂದರ್ಭ ನಿತಿನ್‌ ರಾಜ್‌ ಸಾಲದ ರೂಪವಾಗಿ 1.50 ಕೋಟಿ ರೂ. ಕಪ್ಪುಹಣ ನೀಡಿ, ಅದನ್ನು ಬಿಳಿ ಮಾಡಲು ಸೂಚಿಸಿದ್ದಾರೆ. ಈ ಕಪ್ಪುಬಣ್ಣದ ಕಾಗದವನ್ನು ಲಿಕ್ವಿಡ್‌ನಂತೆ ತೋರುವ ನೀರಿಗೆ ಮುಳುಗಿಸಿ ತೆಗೆದಾಗ ಕಪ್ಪುಬಣ್ಣದ ಕಾಗದ 500 ರೂ. ನೋಟಿನ ರೂಪ ತಾಳಿದೆ. ಇದೇ ರೀತಿ ಮಾಡುವಂತೆ ಹೇಳಿ 1.5 ಕೋಟಿ ರೂ.ನ್ನು ರೋಹಿದಾಸ್‌ಗೆ ನೀಡಿದ್ದಾರೆ. ಇದನ್ನು ನಂಬಿದ ರೋಹಿದಾಸ್‌ ಹಣದ ಬ್ಯಾಗ್‌ ಹಾಗೂ ಲಿಕ್ವಿಡ್‌ನ್ನು ವಿಟ್ಲದ ಧನರಾಜ್‌ ಕಾರಿನ ಡಿಕ್ಕಿಯಲ್ಲಿರಿಸಿ ಹೊರಟು ಬಂದಿದ್ದಾರೆ. ಆದರೆ, ಒಂದು ಕಿ.ಮೀ. ಮುಂದೆ ಬಂದಾಗ ಕಾರಿನಲ್ಲಿ ಯಾವುದೋ ಶಬ್ದ ಬಂದಂತೆ ಕೇಳಿದ್ದು, ಧನರಾಜ್‌ ಕಾರು ನಿಲ್ಲಿಸಿ ಡಿಕ್ಕಿ ತೆರೆದು ನೋಡುವಾಗ ಲಿಕ್ವಿಡ್‌ ಕ್ಯಾನ್‌ ಕೆಳಗೆ ಬಿದ್ದು, ಎಲ್ಲವೂ ಚೆಲ್ಲಿದೆ. ತಕ್ಷಣ ಈ ಬಗ್ಗೆ ನಿತಿನ್‌ ರಾಜ್‌ಗೆ ಕರೆಮಾಡಿ ನಡೆದ ವಿಷಯವನ್ನು ತಿಳಿಸಿದಾಗ ಆತ ಬಂದು ಲಿಕ್ವಿಡ್‌ ಚೆಲ್ಲಿರುವುದಕ್ಕೆ ಬೈಯ್ದು, ಈ ಲಿಕ್ವಿಡ್‌ 25 ಲಕ್ಷ ರೂ. ಬೆಲೆಬಾಳುವ ವಸ್ತು ಆಗಿದ್ದು, ಬೇಜವಾಬ್ದಾರಿಯಿಂದ ಚೆಲ್ಲಿದ್ದು, ಇನ್ನು ಇದು ಸಿಗುವುದು ಕಷ್ಟ ಎಂದು ಹೇಳಿದ್ದಾನೆ. ಅಲ್ಲದೆ, ಯುವತಿಯೊಬ್ಬರಿಗೆ ಕರೆ ಮಾಡಿ ರೋಹಿದಾಸ್‌ರೊಂದಿಗೆ ಮಾತನಾಡಲು ತಿಳಿಸಿದ್ದಾನೆ. ಆಕೆ ಬೇರೆ ಲಿಕ್ವಿಡ್‌ ಬೇಕಾದಲ್ಲಿ 25 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದಾಳೆ. ಬಳಿಕ ನಿತಿನ್‌ ತಾನು 10 ಲಕ್ಷ ರೂ. ರೆಡಿ ಮಾಡುತ್ತೇನೆ. ನೀವಿಬ್ಬರೂ ಸೇರಿ 15 ಲಕ್ಷ ರೂ. ರೆಡಿ ಮಾಡಿ ಕೂಡಲೇ ನೀಡಬೇಕಾಗಿ ತಿಳಿಸಿದ್ದಾನೆ. ನಂತರ ಕಾರಿನಲ್ಲಿರುವ ಕಪ್ಪುಬಣ್ಣದ ಕಾಗದದ ಬ್ಯಾಗನ್ನು ನಿತಿನ್‌ ತನ್ನ ಕಾರಿನಲ್ಲಿಇರಿಸಿ, ನೀವು ಕೂಡಲೇ ಊರಿಗೆ ಹೋಗಿ ಹಣವನ್ನು ನೀಡಿದರೆ ಲಿಕ್ವಿಡ್‌ ತರಿಸುವುದಾಗಿ ತಿಳಿಸಿದ್ದಾನೆ. ಮರುದಿನ ವಿಟ್ಲದ ಧನರಾಜ್‌ ಕರೆ ಮಾಡಿ, ತಾನು ಹೇಗಾದರೂ ಮಾಡಿ 7 ಲಕ್ಷ ರೂ. ರೆಡಿ ಮಾಡುತ್ತೇನೆ. ತಾವು ಕೂಡ ಏನಾದರೂ ಮಾಡಿ ಎಂದಿದ್ದಾನೆ. ಈ ಬಗ್ಗೆ ಆತ ಪದೇ ಪದೇ ಪೋನ್‌ ಮಾಡುತ್ತಿದ್ದರಿಂದ ರೋಹಿದಾಸ್‌ ಪತ್ನಿ, ಮಕ್ಕಳ ಒಡವೆಗಳನ್ನು 7.20 ಲಕ್ಷ ರೂ.ಗೆ ಅಡವಿಟ್ಟು ಅದಕ್ಕೆ ತನ್ನಲ್ಲಿದ್ದ 2 ಲಕ್ಷ ರೂ.ನ್ನೂ ಇರಿಸಿ ಒಟ್ಟು 9.20 ಲಕ್ಷ ರೂ. ನೀಡಿದ್ದಾರೆ. ಆದರೆ ಆ ಬಳಿಕ ಅವರು ಲಿಕ್ವಿಡ್‌, ಕಪ್ಪುಹಣ ನೀಡದೆ ಇಬ್ಬರು ತಮಗೆ ವಂಚಿಸಿದ್ದಾರೆಂದು ರೋಹಿದಾಸ್‌ ಕಾವೂರು ಪೊಲೀಸ್‌ ಠಾಣೆಯಲ್ಲಿ ತಡವಾಗಿ ದೂರು ದಾಖಲಿಸಿದ್ದಾರೆ.


from India & World News in Kannada | VK Polls https://ift.tt/3xgea3R

ಸ್ಮೃತಿ, ವಸುಂಧರಾ ಫೋನಿನಲ್ಲಿ ಮೋದಿ ಏನನ್ನೋ ನೋಡಲು ಬಯಸಿದ್ದರು: ಕಾಂಗ್ರೆಸ್ ವಕ್ತಾರೆ ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ: ಕುರಿತಾದ ಸುದ್ದಿವಾಹಿನಿ ಚರ್ಚೆಯ ವೇಳೆ ರಾಷ್ಟ್ರೀಯ ವಕ್ತಾರೆ ಅವಹೇಳನಾಕಾರಿ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ನಡೆದ ಚರ್ಚೆಯ ವೇಳೆ ಅವರು, ಪೆಗಾಸಸ್ ಸ್ಪೈವೇರ್ ಬೇಹುಗಾರಿಕೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 'ಈ ವಿಷಯ ಸ್ವಲ್ಪ ಸೂಕ್ಷ್ಮವಾಗಿದೆ. ಮಹಿಳೆಯಾಗಿ ನಾನು ಖಂಡಿತವಾಗಿಯೂ ಈ ಪ್ರಶ್ನೆ ಕೇಳಲು ಬಯಸಿದ್ದೇನೆ. ಈ ಸರಕಾರ ಏಕೆ ಮಹಿಳೆಯರ ಫೋನ್‌ಗಳಿಗೆ ಅಂಟಿಕೊಂಡಿದೆ? ಸ್ಮೃತಿ ಇರಾನಿ ಮತ್ತು ವಸುಂಧರಾ ರಾಜೆ ಅವರನ್ನು ಕೇಳಿ. ಆ ಮಹಿಳಾ ಪತ್ರಕರ್ತರನ್ನು ಕೇಳಿ. ಮುಖ್ಯ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆಯನ್ನು ಕೇಳಿ' ಎಂದು ಹೇಳಿದ್ದರು. 'ಸ್ಮೃತಿ ಇರಾನಿ ಮತ್ತು ವಸುಂಧರಾ ರಾಜೆ ಅವರ ಫೋನ್‌ಗಳಲ್ಲಿ ಏನನ್ನೋ ನೋಡಲು ಪ್ರಧಾನಿ ಅವರು ಪೆಗಾಸಸ್ ಅನ್ನು ಬಳಸಿದ್ದರು' ಎಂದು ಸುಪ್ರಿಯಾ ಹೇಳಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 'ಶೇಮ್ ಆನ್ ಸುಪ್ರಿಯಾ' ಎಂಬ ಟ್ರೆಂಡ್ ನಡೆಯುತ್ತಿದ್ದು, ಸುಪ್ರಿಯಾ ವಿರುದ್ಧ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಕರ್ತೆಯೂ ಆಗಿದ್ದ ಸುಪ್ರಿಯಾ ಅವರು ಪ್ರಧಾನಿ ಬಗ್ಗೆ ಕೀಳುಮಟ್ಟದ ಪದ ಬಳಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಮತ್ತು ಸುಪ್ರಿಯಾ ನಡುವೆ ತೀವ್ರ ವಾಗ್ವಾದ ನಡೆಯಿತು. ಮಹಿಳೆಯರ ಮೇಲೆ ಪೆಗಾಸಸ್ ಸ್ಪೈವೇರ್ ಗುರಿ ಮಾಡಲಾಗಿದ್ದರೆ, ನಿಮ್ಮ ಪಕ್ಷದ ಯಾರೊಬ್ಬರ ಹೆಸರಾದರೂ ಹೆಸರು ಇದರಲ್ಲಿ ಇದೆಯೇ? ಸೋನಿಯಾ ಗಾಂಧಿ ಅವರ ಮೇಲೆ ಪೆಗಾಸಸ್ ಬಳಸಲಾಗಿದೆಯೇ ಎಂದು ಸಂಬಿತ್ ಪ್ರಶ್ನಿಸಿದರು. ನಮ್ಮ ಪಕ್ಷದೊಳಗೆ ಯಾರು ಬಲಿಪಶು ಅಥವಾ ಯಾರು ಅಲ್ಲ ಎಂಬುದನ್ನು ನಿರ್ಧರಿಸುತ್ತೇವೆ. ನಿಮ್ಮ ಪಕ್ಷದ ಯಾವ ಮಹಿಳೆಯ ಫೋನ್ ಅನ್ನು ನಾವು ಹ್ಯಾಕ್ ಮಾಡಿದ್ದೇವೆ ಎಂದು ಹೇಳಿ. ಆ ಎಲ್ಲಾ ಮಹಿಳೆಯರೂ ಬಿಜೆಪಿಗೆ ಸೇರಿದವರಾಗಿದ್ದರೆ ಅದು ನಿಜಕ್ಕೂ ಉತ್ತಮ ವಿಚಾರ. ಜಗತ್ತಿನಲ್ಲಿ ಇಂತಹ ವಿರೋಧಪಕ್ಷವನ್ನು ಎಲ್ಲಾದರೂ ಕಂಡಿದ್ದೀರಾ? ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರಿಯಾ, ನೀವು ಏನನ್ನು ನೋಡಲು ಬಯಸಿದ್ದೀರೋ ಎನ್ನುವುದು ನನಗೆ ತಿಳಿದಿಲ್ಲ. ನೀವು ಬಹಳ ಕೊಳಕು ಜನರು. ನೀವು ಮಹಿಳೆಯರ ಫೋನಲ್ಲಿ ಏನನ್ನು ಕಾಣಲು ಬಯಸಿದ್ದಿರಿ ಎನ್ನುವುದು ದೇವರಿಗೇ ಗೊತ್ತು ಎಂದರು.


from India & World News in Kannada | VK Polls https://ift.tt/3fgKzRA

'ಇಂಗ್ಲೆಂಡ್‌ ಟೆಸ್ಟ್‌ ಸರಣಿ ಗೆಲ್ಲಬೇಕೆಂದರೆ ಈ ಕೆಲಸ ಮಾಡಿ' ಕೊಹ್ಲಿ-ಶಾಸ್ತ್ರಿಗೆ ಲಕ್ಷ್ಮಣ್‌ ಟಿಪ್ಸ್‌!

ಹೊಸದಿಲ್ಲಿ: ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡವನ್ನು ಸೋಲಿಸುವ ಅವಕಾಶ ಭಾರತ ತಂಡಕ್ಕೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಬ್ಯಾಟ್ಸ್‌ಮನ್‌ , ಕೊಹ್ಲಿ ಪಡೆಯ ಬ್ಯಾಟಿಂಗ್‌ ವಿಭಾಗದಲ್ಲಿ ಒಂದೇ ಒಂದು ಅಂಶದಲ್ಲಿ ಸುಧಾರಣೆ ಕಾಣುವ ಅಗತ್ಯವಿದೆ ಎಂದು ಹೇಳಿದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ ನಡೆದಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡ ಬ್ಯಾಟಿಂಗ್‌ ವೈಫಲ್ಯತೆಯಿಂದ ನ್ಯೂಜಿಲೆಂಡ್‌ ಎದುರು ಸೋಲು ಅನುಭವಿಸಿತ್ತು. ಈಗಲೂ ಕೂಡ ಭಾರತ ತಂಡ, ಕೇವಲ ಒಬ್ಬ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳ ಮೇಲೆ ಅವಲಂಬಿತವಾಗಿದೆ ಎಂದು ಲಕ್ಷ್ಮಣ್‌ ಹೇಳಿದ್ದಾರೆ. ಸ್ಟಾರ್‌ ಸ್ಪೋರ್ಟ್ಸ್ ಕ್ರೀಡಾ ವಾಹಿನಿಯ 'ಗೇಮ್‌ ಪ್ಲ್ಯಾನ್‌ ಶೋ'ನಲ್ಲಿ ಮಾತನಾಡಿದ ಭಾರತ ಟೆಸ್ಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಯಶಸ್ವಿಯಾಗಬೇಕಾದರೆ, ಬ್ಯಾಟಿಂಗ್‌ ವಿಭಾಗದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ. "ತಮ್ಮ ಬ್ಯಾಟ್ಸ್‌ಮನ್‌ಗಳಿಂದ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ಹೊರ ತರುವ ಒಂದೇ ಒಂದು ಅಂಶದ ಕಡೆಗೆ ಹೆಡ್‌ ಕೋಚ್‌ ಹಾಗೂ ನಾಯಕ ಹೆಚ್ಚಿನ ಗಮನ ಹರಿಸಬೇಕಾಗಿದೆ. ವಿದೇಶಿ ಪರಿಸ್ಥಿತಿಗಳು ಅದರಲ್ಲೂ ಇಂಗ್ಲೆಂಡ್‌ನಲ್ಲಿ ಒಬ್ಬ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಅವಲಂಬನೆಯಾಗುವುದು ತಂಡಕ್ಕೆ ವರ್ಕ್‌ ಔಟ್‌ ಆಗುವುದಿಲ್ಲ," ಎಂದಿದ್ದಾರೆ. "ಇಂಗ್ಲೆಂಡ್‌ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಗೆಲುವು ಸಾಧಿಸಬೇಕೆಂದರೆ, ಬ್ಯಾಟಿಂಗ್‌ ವಿಭಾಗ ಶಕ್ತಿಯುತವಾಗಿ ಪುಟಿದೇಳಬೇಕು. ತಂಡದಲ್ಲಿ ಒಬ್ಬ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದರೆ, ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ, ಈ ಅಂಶದ ಕಡೆಗೆ ಹೆಡ್‌ ಕೋಚ್‌ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್‌ ಕೊಹ್ಲಿ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಬೇಕು," ಎಂದು ವಿವಿಎಸ್‌ ಲಕ್ಷ್ಮಣ್‌ ಸಲಹೆ ನೀಡಿದ್ದಾರೆ. ಹಿರಿಯ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಸೇರಿದಂತೆ ಬ್ಯಾಟಿಂಗ್‌ ವಿಭಾಗದಲ್ಲಿ ಪ್ರತಿಯೊಬ್ಬರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಬಲಿಸುವ ಅಗತ್ಯವಿದೆ ಎಂದು ಹೇಳಿದ ಮಾಜಿ ಆಟಗಾರ, ಒಬ್ಬೊಬ್ಬರು ತಮ್ಮದೇ ಆದ ವೈಯಕ್ತಿಕ ಶೈಲಿಯಲ್ಲಿ ರನ್‌ ಗಳಿಸುತ್ತಾರೆ. ಹಾಗಾಗಿ, ಆಟಗಾರರು ಮುಕ್ತವಾಗಿ ಸ್ವಾಭಾವಿಕ ಆಟವಾಡಲು ಟೀಮ್‌ ಮ್ಯಾನೇಜ್‌ಮೆಂಟ್‌ ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ. "ಪ್ರತಿಯೊಬ್ಬರು ವಿಭಿನ್ನವಾದ ಫಾರ್ಮುಲಾ ಹೊಂದಿರುತ್ತಾರೆ ಹಾಗೂ ವಿಭಿನ್ನ ಶೈಲಿಯಲ್ಲಿ ರನ್‌ಗಳನ್ನು ಗಳಿಸುತ್ತಾರೆ. ಅದರಂತೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಅವರದು ಕೂಡ ಫಾರ್ಮುಲಾ ವಿಭಿನ್ನವಾಗಿದೆ. ಅದರಂತೆ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ರನ್‌ ಗಳಿಸುವ ವಿಚಾರದಲ್ಲಿ ಅವರದೇ ದಾಟಿ ಇದೆ. ಹಾಗಾಗಿ, ಟೀಮ್‌ ಮ್ಯಾನೇಜ್‌ಮೆಂಟ್‌ ಆಟಗಾರರನ್ನು ಬೆಂಬಲಿಸಿ, ಅವರಿಗೆ ವಿಶ್ವಾಸ ಹೆಚ್ಚಿಸುವುದು ತುಂಬಾ ಮುಖ್ಯ," ಎಂದು ಲಕ್ಷ್ಮಣ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rKbcmK

ಮಕ್ಕಳ ಮೃತದೇಹ ತುಂಬಿಸಿಕೊಂಡು ಒಂದು ವರ್ಷ ಕಾರ್ ಓಡಿಸಿದ್ದ ಮಹಿಳೆ ಬಂಧನ

ವಾಷಿಂಗ್ಟನ್: ಎರಡು ಪುಟ್ಟ ಮಕ್ಕಳ ಮೃತದೇಹಗಳನ್ನು ಟ್ರಂಕ್ ಒಂದರಲ್ಲಿ ತುಂಬಿಸಿಕೊಂಡು ತಿಂಗಳುಗಟ್ಟಲೆ ಕಾರ್ ಚಲಾಯಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ತಮ್ಮ ಎಂದಿನ ಸಂಚಾರ ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ. ಬಲ್ಟಿಮೋರ್‌ನ ಪೂರ್ವ ಕರಾವಳಿ ನಗರದ ನಿಕೋಲೆ ಜಾನ್ಸನ್ ಎಂಬಾಕೆಯ ವಿರುದ್ಧ ತನ್ನ ಅಕ್ಕನ ಏಳು ವರ್ಷದ ಹೆಣ್ಣುಮಗು ಹಾಗೂ ಐದು ವರ್ಷದ ಮಗನನ್ನು ಕಿರುಕುಳ ನೀಡಿ ಮಾಡಿದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 33 ವರ್ಷದ ಜಾನ್ಸನ್, ಕಳೆದ ವರ್ಷದ ಮೇ ತಿಂಗಳಲ್ಲಿ ಬಾಲಕಿಯ ದೇಹವನ್ನು ಸೂಟ್‌ಕೇಸ್ ಒಂದರಲ್ಲಿ ತುಂಬಿಸಿ, ಬಳಿಕ ಅದನ್ನು ಟ್ರಂಕ್‌ನಲ್ಲಿ ಇರಿಸಿ ಕಾರಿನಲ್ಲಿ ಹಾಕಿದ್ದಳು. ನಂತರ ಎಂದಿನಂತೆ ಕಾರ್ ಬಳಸುತ್ತಿದ್ದಳು. ಒಂದು ವರ್ಷದ ಬಳಿಕ ಆ ಬಾಲಕಿಯ ಸಹೋದರನ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಸುತ್ತಿ ಟ್ರಂಕ್ ಒಳಗೆ ಇರಿಸಿದ್ದಳು. ಅತಿ ವೇಗದ ಚಾಲನೆಗಾಗಿ ಬುಧವಾರ ಆಕೆಯನ್ನು ತಡೆದಿದ್ದ ಪೊಲೀಸರು, ಆಕೆಯ ಬಳಿ ಸೂಕ್ತ ದಾಖಲೆ ಪತ್ರಗಳು ಕಾಣಿಸದ ಹಿನ್ನೆಲೆಯಲ್ಲಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಕಾರನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗುವುದು ಎಂದು ಪೊಲೀಸರು ತಿಳಿಸಿದಾಗ, 'ನನಗೇನೂ ತೊಂದರೆ ಇಲ್ಲ, ನಾನು ಇನ್ನು ಐದು ದಿನ ಇಲ್ಲಿ ಇರುವುದಿಲ್ಲ' ಎಂದು ಆಕೆ ಹೇಳಿದ್ದಳು. ಜಾನ್ಸನ್ 2019ರಲ್ಲಿ ಈ ಮಕ್ಕಳನ್ನು ನೋಡಿಕೊಳ್ಳುವಂತೆ ಆಕೆಯ ಆರೈಕೆಗೆ ಒಪ್ಪಿಸಿದ್ದರು. ಸೊಸೆಯನ್ನು ಅನೇಕ ಬಾರಿ ಹೊಡೆದಿದ್ದು, ನೆಲಕ್ಕೆ ತಲೆ ತಾಗಿ ಆಕೆ ಸತ್ತುಹೋಗಿದ್ದಳು ಎಂದು ವಿಚಾರಣೆ ವೇಳೆ ಜಾನ್ಸನ್ ಒಪ್ಪಿಕೊಂಡಿದ್ದಾಳೆ. ಎರಡು ತಿಂಗಳ ಹಿಂದೆ ಬಾಲಕನಿಗೆ ಪೆಟ್ಟಾಗಿತ್ತು. ಆತ ಮತ್ತೆ ಏಳಲಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಮಕ್ಕಳನ್ನು ನೋಡಲು ಸಹೋದರಿ ಕೆಲವು ಬಾರಿ ಬಯಸಿದ್ದರೂ, ಆಕೆ ನೆಪಗಳನ್ನು ಹೇಳಿ ಅದನ್ನು ತಪ್ಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.


from India & World News in Kannada | VK Polls https://ift.tt/3lcbCRO

ಆಫ್ರಿಕಾ ವಿರುದ್ಧ ರಾಣಿ ಪಡೆಗೆ ಜಯ : ಭಾರತದ ಕ್ವಾರ್ಟರ್‌ ಫೈನಲ್ಸ್ ಆಸೆ ಜೀವಂತ!

ಟೋಕಿಯೋ (ಜಪಾನ್): ಅವರ ಆಕರ್ಷಕ ಮೂರು ಗೋಲುಗಳ ನೆರವಿನಿಂದ 'ಎ' ಗುಂಪಿನ ತಮ್ಮ ಕೊನೆಯ ಪಂದ್ಯದಲ್ಲಿ ವಿರುದ್ಧ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ವಾರ್ಟರ್‌ ಫೈನಲ್ಸ್‌ ಆಸೆ ಜೀವಂತವಾಗಿರಿಸಿಕೊಂಡಿದೆ. ಇಲ್ಲಿಯವರೆಗೂ ಐದು ಗುಂಪು ಹಂತದ ಪಂದ್ಯಗಳಲ್ಲಿ ಕಾದಾಟ ನಡೆಸಿದ್ದ ರಾಣಿ ರಾಂಪಾಲ್‌ ನಾಯಕತ್ವದ ಭಾರತ ವನಿತೆಯರ ತಂಡ, ಮೂರರಲ್ಲಿ ಸೋತು, ಇರಡು ಹಣಾಹಣಿಗಳಲ್ಲಿ ಗೆಲುವಿನ ನಗೆ ಚೆಲ್ಲಿದೆ. ಭಾರತ ತಂಡ ಕ್ವಾರ್ಟರ್‌ ಫೈನಲ್ಸ್‌ ತಲುಪುವುದು ಐರ್ಲೆಂಡ್‌ ಹಾಗೂ ಗ್ರೇಟ್‌ ಬ್ರಿಟನ್‌ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಕಳೆದ ಪಂದ್ಯದ ಗೆಲುವಿನ ವಿಶ್ವಾಸದಲ್ಲಿ ಇಂದು ಕಣಕ್ಕೆ ಇಳಿದಿದ್ದ ಭಾರತ ತಂಡಕ್ಕೆ ವಂದನಾ ಕಟಾರಿಯಾ ಅವರು ಗೋಲಿನ ಖಾತೆ ತೆರೆದರು. ಮೊದಲನೇ ಕ್ವಾರ್ಟರ್‌ ಅಂತಿಮ ಕ್ಷಣದಲ್ಲಿ ಟೆರಿನ್ ಗ್ಲಾಸ್ಬೀ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೋಲ್‌ ತಂದು ಕೊಡುವ ಮೂಲಕ 1-1 ಸಮಬಲ ಸಾಧಿಸಲು ನೆರವಾದರು. ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಚೆಂಡಿನೊಂದಿಗೆ ಅದ್ಭುತ ಕೌಶಲ ಮೆರೆದ ಕಟಾರಿಯಾ ಭಾರತ ತಂಡಕ್ಕೆ ಎರಡನೇ ಗೋಲು ಸಿಡಿಸಿದರು. ಆ ಮೂಲಕ ರಾಣಿ ರಾಂಪಾನ್‌ ಬಳಗ 2-1 ಮುನ್ನಡೆ ಪಡೆಯಿತು. ಮೊದಲನೇ ಕ್ವಾರ್ಟರ್‌ನಂತೆಯೇ ಎರಡನೇ ಕ್ವಾರ್ಟರ್‌ನಲ್ಲಿಯೂ ಆಫ್ರಿಕಾ ತಂಡ ಎರಿನ್‌ ಹಂಟರ್‌ ಅವರ ಗೋಲಿನ ಸಹಾಯದಿಂದ 2-2 ಸಮಬಲ ಸಾಧಿಸಿತು. ನೇಹಾ ಗಳಿಸಿದ ತಮ್ಮ ಮೊದಲ ಗೋಲಿನ ನೆರವಿನಿಂದ ಭಾರತ ತಂಡ ಮೂರನೇ ಕ್ವಾರ್ಟರ್‌ನಲ್ಲಿ 3-2 ಮುನ್ನಡೆ ಪಡೆಯಿತು. ಇದರಿಂದ ಎಚ್ಚೆತ್ತುಕೊಂಡ ಟೆರಿನ್ ಗ್ಲಾಸ್ಬೀ, ಎರಡನೇ ಗೋಲು ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ 3-3 ಸಮಬಲ ತಂದುಕೊಟ್ಟರು. ಆ ಮೂಲಕ ಮೂರನೇ ಕ್ವಾರ್ಟರ್‌ ಅಂತ್ಯಕ್ಕೆ ಉಭಯ ತಂಡಗಳು 3-3 ಸಮಬಲ ಕಾಯ್ದುಕೊಂಡವು. ಪಂದ್ಯದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ವಂದನಾ ಕಟಾರಿಯಾ ಅವರು ನಾಲ್ಕನೇ ಕ್ವಾರ್ಟರ್‌ನಲ್ಲಿ ತಮ್ಮ ಮೂರನೇ ಗೋಲು ಸಿಡಿಸಿದರು. ಆ ಮೂಲಕ ಭಾರತ ತಂಡದ 4-3 ಮುನ್ನಡೆಗೆ ನೆರವಾದರು. ಅಂತಿಮ ಕ್ಷಣದಲ್ಲಿ ಸಮಬಲ ಸಾಧಿಸಲು ಎದುರಾಳಿ ದಕ್ಷಿಣ ಆಫ್ರಿಕಾ ತಂಡ ಕಠಿಣ ಹೋರಾಟ ನಡೆಸಿತು. ಆದರೆ, ಭಾರತ ತಂಡದ ರಕ್ಷಣ ವಿಭಾಗದ ಆಟಗಾರ್ತಿಯರು ಆಫ್ರಿಕಾ ಫಾವರ್ಡ್‌ ಆಟಗಾರ್ತಿಯರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rS0bjC

ಯಡಿಯೂರಪ್ಪಗೇ ಅನುದಾನ ತರಲು ಆಗಲಿಲ್ಲ, ಜನತಾದಳದಿಂದ ಹೋದ ಬೊಮ್ಮಾಯಿಗೆ ಆಗುತ್ತಾ?: ಸಿದ್ದರಾಮಯ್ಯ ಪ್ರಶ್ನೆ

ಮೈಸೂರು: 'ಬಿಜೆಪಿಯಲ್ಲೇ ಬೆಳೆದ ಯಡಿಯೂರಪ್ಪ ಅವರಿಗೇ ಕೇಂದ್ರದಿಂದ ಅನುದಾನ ತರಲು ಆಗಲಿಲ್ಲ. ಇನ್ನು ಜನತಾದಳದಿಂದ ಹೋದ ಅವರಿಗೆ ಆಗುತ್ತಾ? ಜನತಾದಳದಿಂದ ಹೋದವರ ಮಾತು ಕೇಳುತ್ತಾರಾ?' ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧಪಕ್ಷದ ನಾಯಕ ಪ್ರಶ್ನಿಸಿದ್ದಾರೆ. ವಿಭಾಗೀಯ ಮಟ್ಟದ ಸಭೆಯಲ್ಲಿ ಭಾಗವಹಿಸಲು ಶನಿವಾರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ, ಪ್ರವಾಹ ಪರಿಸ್ಥಿತಿ ಹಾಗೂ ಕೋವಿಡ್ ಸನ್ನಿವೇಶದ ನಿರ್ವಹಣೆಯ ಕುರಿತಂತೆ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಳೆದ ಬಾರಿಯ ನೆರೆ ಪರಿಹಾರವೇ ಇನ್ನು ಸರ್ಕಾರ ನೀಡಿಲ್ಲ. ಮನೆ ಬಿದ್ದವರಿಗೆ 10 ಸಾವಿರ ಪರಿಹಾರ ಸಹ ಬಂದಿಲ್ಲ. ಕೇಂದ್ರದ ಬಳಿ ರಾಜ್ಯದ ಜಿಎಸ್‌ಟಿ ಪಾಲು ಕೇಳುವುದು ಯಡಿಯೂರಪ್ಪ ಅವರ ಕೈಯಲ್ಲೂ ಆಗಲಿಲ್ಲ. ಇನ್ನು ಬಸವರಾಜ ಬೊಮ್ಮಾಯಿಗೆ ಆಗುತ್ತದೆಯೇ? ಎಂದು ಬೊಮ್ಮಾಯಿ ಅವರ ಜನತಾದಳದಿಂದ ಹೋಗಿ ಸಿಎಂ ಆದವರು ಎಂಬುದನ್ನು ಸಿದ್ದರಾಮಯ್ಯ ಉಲ್ಲೇಖಿಸಿದರು. ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಇಡೀ ರಾಜ್ಯ ಕೊರೊನಾ ಮೂರನೇ ಅಲೆಗೆ ಸಿಲುಕಲಿದೆ. ಪ್ರಸ್ತುತ ಸಚಿವರು ಇಲ್ಲದಿದ್ದರೂ ಅಧಿಕಾರಿಗಳ ಮೂಲಕ ನಿರ್ವಹಣೆ ಮಾಡಬೇಕು. ಸಚಿವರು ಇದ್ದರೂ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳ ಮೂಲಕ ಈ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮತ್ತಷ್ಟು ಅಪಾಯ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ಒಬ್ಬರೇ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಸಚಿವ ಸಂಪುಟ ರಚನೆ ಆದರೆ ಜವಾಬ್ದಾರಿ ಹಂಚಿಕೆಯಾಗುತ್ತದೆ. ಕೋವಿಡ್ 19 ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಪುಟ ರಚನೆಯನ್ನು ಆದಷ್ಟು ಬೇಗನೆ ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಅದ್ದೂರಿ ಸ್ವಾಗತ- ಕೋವಿಡ್ ನಿಯಮ ಮರೆತ ಕಾರ್ಯಕರ್ತರುಹುಬ್ಬಳ್ಳಿಯಲ್ಲಿ ಶುಕ್ರವಾರ ಸಭೆ ನಡೆಸಿದ್ದ ಕಾಂಗ್ರೆಸ್ ನಾಯಕರು, ಶನಿವಾರ ಮೈಸೂರಿಗೆ ರೈಲಿನಲ್ಲಿ ಆಗಮಿಸಿದರು. ಆಗ ಅವರಿಗೆ ಪಕ್ಷದ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ರೈಲು ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ನಾದಸ್ವರ ವಾದನದೊಂದಿಗೆ ಪೂರ್ಣಕುಂಭ ಸ್ವಾಗತ ನೀಡಿದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ನಾಯಕರನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತಂದರು. ದಾರಿಯುದ್ದಕ್ಕೂ ಪುಷ್ಟವೃಷ್ಟಿ ಮಾಡಿದರು. ಆದರೆ ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳ ಪಾಲನೆಯನ್ನು ಮರೆತಿದ್ದರು. ಗುಂಪು ಗುಂಪಾಗಿ ಸೇರಿದ್ದ ಕಾರ್ಯಕರ್ತರು ಸಾಮಾಜಿಕ ಅಂತರ ಪಾಲಿಸಲಿಲ್ಲ. ಮಾಸ್ಕ್ ಕೂಡ ಧರಿಸಿರಲಿಲ್ಲ. ಸುರ್ಜೆವಾಲ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸೇಬು ಹಣ್ಣಿನ ದೊಡ್ಡ ಹಾರಗಳನ್ನು ಹಾಕಲಾಯಿತು. ನಾಯಕರು ಅಲ್ಲಿಂದ ನಿರ್ಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಸೇಬು ಹಣ್ಣಿಗೆ ಮುಗಿಬಿದ್ದರು. ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಣ್ಣುಗಳನ್ನು ತುಂಬಿಸಿಕೊಂಡರು.


from India & World News in Kannada | VK Polls https://ift.tt/3zShjbE

Tokyo olympics: ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಕಮಲ್‌!

ಟೋಕಿಯೋ (ಜಪಾನ್‌): ಭಾರತದ ಕಮಲ್‌ಪ್ರೀತ್‌ ಕೌರ್‌ ಅವರು ಟೋಕಿಯೋ ಒಲಿಂಪಿಕ್ಸ್‌ ಮಹಳೆಯರ ವಿಭಾಗದಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಶನಿವಾರ ನಡೆದಿದ್ದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಡಿಸ್ಕಸ್‌ ಎಸೆದ , ತಮ್ಮ 'ಬಿ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಅಂತಿಮ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಮೂರನೇ ಹಾಗೂ ಅಂತಿಮ ಪ್ರಯತ್ನದಲ್ಲಿ 64 ಮೀಟರ್‌ ದೂರ ಡಿಸ್ಕಸ್‌ ಎಸೆಯುವ ಮೂಲಕ 25ರ ಪ್ರಾಯದ ಭಾರತೀಯ ಅಥ್ಲಿಟ್‌ ನೇರವಾಗಿ ಪ್ರಶಸ್ತಿ ಸುತ್ತಿಗೆ ಟಿಕೆಟ್‌ ಪಡೆದುಕೊಂಡರು. 66.42 ಮೀಟರ್‌ ದೂರ ಡಿಸ್ಕಸ್‌ ಎಸೆದ ಅಮೆರಿಕದ ವ್ಯಾಲೆರಿ ಆಲ್ಮನ್ ಅವರು ಮೊದಲನೇ ಸ್ಥಾನ ಅಲಂಕರಿಸುವ ಮೂಲಕ ನೇರವಾಗಿ ಅಂತಿಮ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಪ್ರಶಸ್ತಿ ಸುತ್ತಿನ ಸ್ಪರ್ಧೆಯು ಆಗಸ್ಟ್‌ 2 ರಂದು ನಡೆಯಲಿದೆ. ಅರ್ಹತಾ ಸುತ್ತಿನಲ್ಲಿ ಪಾರಮ್ಯ ಮೆರೆದ ಕಮಲ್‌ ಪ್ರೀತ್‌ ಕೌರ್‌ ಅವರು, ಹಾಲಿ ಚಿನ್ನದ ಪದಕ ವಿಜೇತೆ ಕ್ರೊವೇಷ್ಯಾದ ಸಾಂಡ್ರಾ ಪೆರ್ಕೋವಿಕ್‌ (63.75 ಮೀ) ಹಾಗೂ ಹಾಲಿ ವಿಶ್ವ ಚಾಂಪಿಯನ್‌ ಕ್ಯೂಬಾದ ಯೈಮ್ ಪೆರೆಜ್(63.18) ಅವರನ್ನು ಹಿಂದಿಕ್ಕುವ ಮೂಲಕ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ. ಸಾಂಡ್ರಾ ಪೆರ್ಕೋವಿಕ್‌ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಹಾಗೂ ಪೆರೆಜ್‌ ಏಳನೇ ಸ್ಥಾನ ಪಡೆಯುವ ಮೂಲಕ ಅಂತಿಮ ಸುತ್ತಿಗೆ ಪ್ರವೇಶ ಮಾಡಿದ್ದಾರೆ. ಆದರೆ, ಭಾರತದ ಅನುಭವಿ ಅವರು ಅರ್ಹತಾ ಸುತ್ತಿನ 'ಎ' ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆ 16ನೇ ಸ್ಥಾನ ಪಡೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಅಭಿಯಾನ ಮುಗಿಸಿದ್ದಾರೆ. ಅಂದಹಾಗೆ ಭಾರತದ ಕಮಲ್‌ ಪ್ರೀತ್‌ ಕೌರ್‌ ಅವರು, 60.29 ಡಿಸ್ಕಸ್‌ ಎಸೆಯುವ ಮೂಲಕ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿದ್ದರು. ನಂತರ ಎರಡನೇ ಪ್ರಯತ್ನದಲ್ಲಿ 63.97 ಮೀಟರ್‌ ಎಸೆಯುವ ಮೂಲಕ ತಮ್ಮ ಪ್ರದರ್ಶನವನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡಿದ್ದರು. ಬಳಿಕ ಮೂರನೇ ಹಾಗೂ ಅಂತಿಮ ಪ್ರಯತ್ನದಲ್ಲಿ 64 ಮೀಟರ್‌ ಡಿಸ್ಕಸ್‌ ಎಸೆಯುವ ಮೂಲಕ ಅಂತಿಮ ಸುತ್ತಿಗೆ ತಮ್ಮ ಹೆಸರನ್ನು ನೋಂದಾಯಿಸಿದರು. ಪ್ರಸಕ್ತ ವರ್ಷದಲ್ಲಿ ಪಂಜಾಬ್‌ ಮೂಲದ ಅಥ್ಲಿಟ್‌ ಕಮಲ್‌ ಪ್ರೀತ್‌ ಕೌರ್‌ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅದರಂತೆ ಇತ್ತೀಚೆಗೆ ಅವರು ಎರಡು ಬಾರಿ 65 ಮೀಟರ್‌ಗೂ ಹೆಚ್ಚು ದೂರ ಡಿಸ್ಕಸ್‌ ಎಸೆದಿದ್ದರು. ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಫೆಡೆರೇಷನ್‌ ಕಪ್‌ ಸ್ಪರ್ಧೆಯಲ್ಲಿ ಅವರು 65.06 ಮೀಟರ್‌ ಎಸೆದಿದ್ದರು. ಆ ಮೂಲಕ 65ಕ್ಕೂ ಹೆಚ್ಚಿನ ಮೀಟರ್ ಡಿಸ್ಕಸ್‌ ಎಸೆದ ಭಾರತದ ಮೊದಲ ಅಥ್ಲಿಟ್‌ ಎಂಬ ದಾಖಲೆಗೆ ಕೌರ್ ಭಾಜನರಾಗಿದ್ದರು. ಇನ್ನು ಕಳೆದ ಜೂನ್‌ ತಿಂಗಳಲ್ಲಿ ನಡೆದಿದ್ದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌-4 ಸ್ಪರ್ಧೆಯಲ್ಲಿ ಕಮಲ್ ಪ್ರೀತ್‌ ಕೌರ್‌ ಅವರು 66.59 ಮೀಟರ್‌ ಡಿಸ್ಕಸ್‌ ಎಸೆಯುವ ಮೂಲಕ ತಮ್ಮ ಹೆಸರಿನಲ್ಲಿಯೇ ಇದ್ದ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದ್ದರು. ಆ ಮೂಲಕ ವಿಶ್ವದ ಆರನೇ ಶ್ರೇಯಾಂಕವನ್ನು ಅಲಂಕರಿಸಿದ್ದರು. ಪ್ರಸಕ್ತ ಆವೃತ್ತಿಯ ಲೀಡರ್‌ ಎನಿಸಿರುವ ನೇದರ್ಲೆಂಡ್ಸ್‌ನ ಜೊರಿಂಡೆ ವಾನ್‌ ಕ್ಲಿಂಕೆನ್‌ ಅವರು ಒಟ್ಟಾರೆ 61.15 ಮೀಟರ್‌ನಲ್ಲಿ ಡಿಸ್ಕಸ್‌ ಎಸೆಯುವ ಮೂಲಕ ಟೋಕಿಯೋ ಒಲಿಂಪಿಕ್ಸ್ ಅಂತಿಮ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಜೊರಿಂಡೆ ವಾನ್‌ ಕ್ಲಿಂಕೆನ್‌ ಅವರು 70.22 ಮೀಟರ್‌ ಡಿಸ್ಕಸ್ ಎಸೆದಿದ್ದು, ಈ ವರ್ಷದ ಅತ್ಯುತ್ತಮ ಪ್ರದರ್ಶನವಾಗಿದೆ. ಇನ್ನು 70.01 ಮೀಟರ್‌ ಡಿಸ್ಕಸ್ ಎಸೆಯುವ ಮೂಲಕ ಈ ವರ್ಷದ ಎರಡನೇ ಶ್ರೇಷ್ಠ ಪ್ರದರ್ಶನವನ್ನು ಅಲ್ಮಾನ್‌ ತೋರಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3faUJmL

ಗಡಿ ಹಿಂಸಾಚಾರ: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ವಿರುದ್ಧ ಮಿಜೋರಾಂನಲ್ಲಿ ಎಫ್‌ಐಆರ್

ಗುವಾಹಟಿ: ಮತ್ತು ಗಡಿಯಲ್ಲಿ ಸೋಮವಾರ ಸಂಭವಿಸಿದ ಹಿಂಸಾಚಾರ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಅವರ ವಿರುದ್ಧ ದಾಖಲಿಸಿರುವುದಾಗಿ ಮಿಜೋರಾಂ ಪೊಲೀಸರು ಹೇಳಿದ್ದಾರೆ. ಮುಖ್ಯಮಂತ್ರಿ ಜತೆಗೆ ಇನ್ನೂ ಆರು ಮಂದಿ ಹಿರಿಯ ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಮುಖ್ಯಮಂತ್ರಿ ಹಿಮಾಂತ ಹಾಗೂ ಸುಮಾರು 200 ಮಂದಿ ಅಪರಿಚಿತ ಪೊಲೀಸ್ ಸಿಬ್ಬಂದಿ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಪ್ರಯತ್ನ) ಮತ್ತು 120 ಬಿ (ಅಪರಾಧ ಸಂಚು) ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗಸ್ಟ್ 1ರಂದು ವೈರೆಂಗ್ಟೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅಸ್ಸಾಂನ ಆರು ಮಂದಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಸ್ಸಾಂ ಕೂಡ ಮಿಜೋರಾಂನ ರಾಜ್ಯಸಭಾ ಸಂಸದ ಕೆ. ವನ್ಲಲ್ವೆನಾ ಹಾಗೂ ಕೆಲವು ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಸೋಮವಾರ ಎರಡೂ ರಾಜ್ಯಗಳ ಪೊಲೀಸರು ಪರಸ್ಪರ ಸಂಘರ್ಷಕ್ಕೆ ಇಳಿಯಲು ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ಎಸ್‌ಪಿ ಕಾರಣ ಎಂದು ಆರೋಪಿಸಿರುವ ಅಸ್ಸಾಂನ ಬಾರಕ್ ಕಣಿವೆ ಜಿಲ್ಲೆಗಳ ಮೂವರು ಶಾಸಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಸತ್‌ನಲ್ಲಿ ಹೇಳಿಕೆ ನೀಡಿರುವ ಮಿಜೋರಾಂನ ಏಕೈಕ ರಾಜ್ಯಸಭೆ ಸಂಸದ ಕೆ. ವನ್ಲಲ್ವೆನಾ ವಿರುದ್ಧ ಕೂಡ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಲ್ಚಾರ್‌ನಲ್ಲಿ ನಡೆದ ಕಚಾರ್, ಕರೀಂಗಂಜ್ ಮತ್ತು ಹೈಲಕಂಡಿ ಜಿಲ್ಲೆಗಳ ಶಾಸಕರ ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.


from India & World News in Kannada | VK Polls https://ift.tt/3zWIVN0

ರಬ್ಬರ್‌ ಸ್ಟಾಂಪ್‌ ಸಿಎಂ ಅನ್ನೋದನ್ನು ಬೊಮ್ಮಾಯಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ; ಸಿದ್ದರಾಮಯ್ಯ

ಹುಬ್ಬಳ್ಳಿ: ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಹೇಳಿಲ್ಲ. ಆದರೆ, ಅವರೇ ತಾವು ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಅಲ್ಲ ಎಂದಿದ್ದಾರೆ. ಯಾರೂ ಹೇಳದೇ ಇದ್ದಾಗ ತಾವೇ ಸ್ಪಷ್ಟನೆ ನೀಡುವ ಮೂಲಕ ಪರೋಕ್ಷವಾಗಿ ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಲೇವಡಿ ಮಾಡಿದರು. ಇಲ್ಲಿ ನಡೆದ ಎರಡು ದಿನಗಳ ಬೆಳಗಾವಿ ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಭಾಗವಹಿಸಿದ ನಂತರ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳುವುದನ್ನು ಗಮನಿಸಿದರೆ ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಿದ್ದಾರೆಯೇ ಹೊರತು ಭ್ರಷ್ಟ ಬಿಜೆಪಿ ಸರಕಾರ ಬದಲಾಗಿಲ್ಲ. ಯಡಿಯೂರಪ್ಪ ಅವರ ಭ್ರಷ್ಟ ಸರಕಾರದಲ್ಲೇ ಬೊಮ್ಮಾಯಿ ಸಚಿವರಾಗಿದ್ದರು. ಈಗ ಸಿಎಂ ಆಗಿದ್ದಾರೆ. ಹೀಗಾಗಿ ಅದೇ ಭ್ರಷ್ಟಾಚಾರ ಮುಂದುವರಿಯಲಿದೆ ಎಂದು ಆರೋಪಿಸಿದರು. ಕಾಟಾಚಾರದ ಪ್ರವಾಸ: ಬಿಜೆಪಿಯವರು ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಅಧಿಕಾರಕ್ಕಾಗಿ ದಿಲ್ಲಿಗೆ ಓಡಾಡುತ್ತಿದ್ದಾರೆ. ಬೊಮ್ಮಾಯಿ ಸಹ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಕಾಟಾಚಾರದ ಪ್ರವಾಸ ಮಾಡಿ ದಿಲ್ಲಿಗೆ ತೆರಳಿದ್ದಾರೆ. ಪರಿಹಾರ ತರುತ್ತೇನೆ ಎಂದು ಹೇಳಿಲ್ಲ. ಹಾಗಾದರೆ ದಿಲ್ಲಿಗೆ ಹೋಗಿದ್ದರ ಔಚಿತ್ಯವೇನು? ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಸಚಿವ ಸಂಪುಟ ರಚಿಸಬೇಕು. ಸಚಿವರನ್ನು ನೆರೆ ಪ್ರದೇಶಗಳಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ನೂತನ ಸಿಎಂ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ಹೆಚ್ಚಳ ಮಾಡಿದ್ದಾರೆ. ರೈತರ ಮಕ್ಕಳಿಗೆ ಯೋಜನೆ ಘೋಷಿಸಿದ್ದಾರೆ. ಆದರೆ ಕೊಡುವುದಕ್ಕೆ ಹಣ ಎಲ್ಲಿದೆ ಎಂದು ಪ್ರಶ್ನಿಸಿದರು. ನಾನು ಸಂಯಮ ಮೀರಿ ಮಾತನಾಡಿಲ್ಲ. ಶಾಂತವಾಗಿ ಸಹನೆಯಿಂದ ಸಮಾಧಾನದಿಂದಲೇ ಇದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.


from India & World News in Kannada | VK Polls https://ift.tt/3j5m3np

ಜಿಎಸ್‌ಟಿ ಪಾವತಿಸಬೇಡಿ: ಪ್ರಧಾನಿ ಮೋದಿ ವಿರುದ್ಧವೇ ಸಿಡಿದೇಳಲು ಸಲಹೆ ನೀಡಿದ ಸಹೋದರ ಪ್ರಹ್ಲಾದ್ ಮೋದಿ

ಉಲ್ಹಾಸನಗರ: ಸರಕಾರದ ವಿರುದ್ಧದ ಹೋರಾಟ ನಡೆಸುವಂತೆ ಪ್ರಧಾನಿ ಅವರ ಸಹೋದರ ಅವರೇ ವ್ಯಾಪಾರಗಳಿಗೆ ಉತ್ತೇಜನ ನೀಡಿದ್ದಾರೆ. ಸರಕಾರ ನಿಮ್ಮ ಬೇಡಿಕೆಗಳನ್ನು ಆಲಿಸದೆ ಇದ್ದರೆ ಸರಿಯಾದ ಮಾರ್ಗದಲ್ಲಿ ಹೋರಾಟ ನಡೆಸಿ ಎಂದು ಪ್ರಹ್ಲಾದ್ ಮೋದಿ ಹೇಳಿದ್ದಾರೆ. ಆದರೆ, ಆಗಲೂ ಸರಕಾರ ನಿಮ್ಮ ಮಾತು ಕೇಳದೆ ಇದ್ದರೆ, ಪಾವತಿಸಬೇಡಿ. ಆಗ ಸರಕಾರ ನಿಮ್ಮ ಮಾತು ಹೇಗೆ ಕೇಳುತ್ತದೆಯೋ ನೋಡಿ ಎಂದಿದ್ದಾರೆ. ಮಹಾರಾಷ್ಟ್ರದ ಉಲ್ಹಾಸನಗರದಲ್ಲಿರುವ ಉಲ್ಹಾಸನಗರ ವ್ಯಾಪಾರಿಗಳ ಸಂಘಟನೆ (ಯುಟಿಎ) ಪ್ರಹ್ಲಾದ್ ಮೋದಿ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿತ್ತು. ಅದರಲ್ಲಿ ಶುಕ್ರವಾರ ಮಾತನಾಡಿದ ಪ್ರಹ್ಲಾದ್, ತಮ್ಮ ಸಹೋದರನ ಸರಕಾರದ ವಿರುದ್ಧವೇ ಸಿಡಿದೇಳುವಂತೆ ವ್ಯಾಪಾರಿಗಳಿಗೆ ಸಲಹೆ ನೀಡಿರುವುದು ಕುತೂಹಲ ಮೂಡಿಸಿದೆ. ಪ್ರಹ್ಲಾದ್ ಮೋದಿ ಅವರು ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ಡೀಲರ್‌ಗಳ ಸಂಸ್ಥೆ (ಎಐಎಫ್‌ಪಿಎಸ್‌ಡಿಎಫ್) ಉಪಾಧ್ಯಕ್ಷರಾಗಿದ್ದಾರೆ. 'ಅದು ರಾಜ್ಯ ಅಥವಾ ಕೇಂದ್ರ ಸರಕಾರವೇ ಇರಲಿ, ನೀವು ನಿಮ್ಮ ಬೇಡಿಕೆಗಳನ್ನು ಸರಿಯಾದ ರೀತಿಯಲ್ಲಿ ಪ್ರಸ್ತಾಪಿಸಿದರೆ, ಅವರು ನಿಮ್ಮ ಸಮಸ್ಯೆಗಳನ್ನು ಆಲಿಸಲೇಬೇಕು ಮತ್ತು ಅದನ್ನು ಪರಿಹರಿಸಬೇಕು ಎಂದು ಅವರು ಹೇಳಿದ್ದಾರೆ. 'ನಗರದ ಸರಿಯಾದ ರೀತಿಯಲ್ಲಿ ತಮ್ಮ ಧ್ವನಿಯನ್ನು ಎತ್ತಬೇಕಿದೆ. ಜಗತ್ತಿನಾದ್ಯಂತ ನಿಷೇಧಿಸಲಾಗಿರುವ ರಾಸಾಯನಿಕಗಳನ್ನು ಬಳಸಲು ಗುಜರಾತ್‌ನಲ್ಲಿ ಸರಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ರಾಸಾಯನಿಕಗಳ ತ್ಯಾಜ್ಯದ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿದೆ. ಗುಜರಾತ್ ಅದನ್ನು ಮಾಡಲು ಸಾಧ್ಯವಾದರೆ ಸರಕಾರಕ್ಕೆ ಏಕೆ ಸಾಧ್ಯವಿಲ್ಲ?' ಎಂದು ಪ್ರಶ್ನಿಸಿದ್ದಾರೆ. ಅಪನಗದೀಕರಣ, ಜಿಎಸ್‌ಟಿ, ಲಾಕ್‌ಡೌನ್ ಮತ್ತು ಆರ್ಥಿಕ ಹಿಂಜರಿತಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವ್ಯಾಪಾರಿಗಳು ಅವರಿಗೆ ಮನವಿ ಪತ್ರವೊಂದನ್ನು ನೀಡಿದರು.


from India & World News in Kannada | VK Polls https://ift.tt/2VhhGxs

ಭಾರತಕ್ಕೆ ಫುಲ್‌ ಟೈಮ್‌ ಕೋಚ್‌ ಆಗುವ ಬಗ್ಗೆ ಕೊನೆಗೂ ಮೌನ ಮುರಿದ ದ್ರಾವಿಡ್‌!

ಕೊಲಂಬೊ: ಭಾರತ ತಂಡದ ಪೂರ್ಣ ಅವಧಿಯ ಮುಖ್ಯ ಕೋಚ್‌ ಆಗುವ ಬಗ್ಗೆ ನಾನು ಯೋಚಿಸಿಲ್ಲ. ಸದ್ಯ ನಾನು ನಿರ್ವಹಿಸುತ್ತಿರುವ ಕೆಲಸಗಳನ್ನು ಆನಂದಿಸುತ್ತಿದ್ದೇನೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ಎನ್‌ಸಿಎ ನಿರ್ದೇಶಕ ರಾಹುಲ್‌ ದ್ರಾವಿಡ್ ಹೇಳಿದ್ದಾರೆ. ದಿ ವಾಲ್‌ ಖ್ಯಾತಿಯ ರಾಹುಲ್‌ ದ್ರಾವಿಡ್‌ ಅವರು ಶ್ರೀಲಂಕಾ ಪ್ರವಾಸದ ಭಾರತ ತಂಡಕ್ಕೆ ಮುಖ್ಯ ಕೋಚ್‌ ಆಗಿ ನೇಮಕ ಮಾಡಿದ ಬಳಿಕ ಸಾಕಷ್ಟು ಕ್ರಿಕೆಟ್‌ ಪಂಡಿತರು ನಿರ್ಧಾರವನ್ನು ಸ್ವಾಗತಿಸಿದ್ದರು. ಜತೆಗೆ ರಾಹುಲ್‌ ದ್ರಾವಿಡ್‌, ಭಾರತ ತಂಡದ ಹೆಡ್‌ ಕೋಚ್‌ ಆಗಿ ಸ್ಥಾನ ತುಂಬಲು ಸಕಾಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಳಲ್ಲಿ ದ್ರಾವಿಡ್‌ ಅಡಿಯಲ್ಲಿ ಭಾರತ ತಂಡ ಯಶಸ್ವಿಯಾದರೆ, ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿರುವ ರವಿಶಾಸ್ತ್ರಿ ಮೇಲೆ ಒತ್ತಡ ಜಾಸ್ತಿ ಆಗಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದಹಾಗೆ ಮುಂದಿನ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ರವಿಶಾಸ್ತ್ರಿ ಅವರ ಗುತ್ತಿಗೆ ಅವಧಿ ಮುಗಿಯಲಿದೆ. ಒಂದು ವೇಳೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿಯೂ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾದರೆ, ರವಿಶಾಸ್ತ್ರಿ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗೆ ಇಳಿಸುವ ಸಾಧ್ಯತೆ ಇದೆ. ಇನ್ನು, ಶ್ರೀಲಂಕಾ ಪ್ರವಾಸದಲ್ಲಿ 2-1 ಅಂತರದಲ್ಲಿ ಓಡಿಐ ಸರಣಿ ಗೆದ್ದಿದ್ದ ಭಾರತ, ಟಿ20 ಸರಣಿಯಲ್ಲಿಯೂ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಕೃಣಾಲ್‌ ಪಾಂಡ್ಯಗೆ ಕೋವಿಡ್‌-19 ಪಾಸಿಟಿವ್‌ ಬಂದಿದ್ದರಿಂದ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾದವು. ಕೃಣಾಲ್‌ ಜೊತೆ ಸಂಪರ್ಕ ಹೊಂದಿದ್ದ ಎಂಟು ಮಂದಿ ಮೊದಲ ಆಯ್ಕೆಯ ಆಟಗಾರರು ಐಸೋಲೇಷನ್‌ಗೆ ಒಳಗಾದ ಕಾರಣ ಅವರೆಲ್ಲ, ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದರ ಪರಿಣಾಮ ಭಾರತ 1-2 ಅಂತರದಲ್ಲಿ ಟಿ20 ಸರಣಿಯನ್ನು ಶ್ರೀಲಂಕಕ್ಕೆ ಬಿಟ್ಟುಕೊಟ್ಟಿತ್ತು. ಅಂದಹಾಗೆ ಟಿ20 ಸರಣಿಯ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ರಾಹುಲ್‌ ದ್ರಾವಿಡ್‌ಗೆ ಭಾರತ ತಂಡಕ್ಕೆ ಪೂರ್ಣ ಅವಧಿಯ ಮುಖ್ಯ ಕೋಚ್‌ ಆಗುವ ಅವಕಾಶ ಬಂದರೆ, ಏನು ಮಾಡುತ್ತೀರಿ? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ದ್ರಾವಿಡ್‌, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಬಗ್ಗೆ ನಾನು ಯೋಚಿಸಿಲ್ಲ. ಸದ್ಯ ನಾನು ಮಾಡುತ್ತಿರುವ ಕಾರ್ಯವನ್ನು ಆನಂದಿಸುತ್ತಿದ್ದೇನೆ," ಎಂದಿದ್ದಾರೆ. ಎನ್‌ಸಿಎ ನಿರ್ದೇಶಕರಾಗಿ ಜವಾಬ್ದಾರಿ ಸ್ವೀಕರಿಸುವುದಕ್ಕೂ ಮುನ್ನ ರಾಹುಲ್‌ ದ್ರಾವಿಡ್, ಭಾರತ 19 ವಯೋಮಿತಿ ತಂಡ ಹಾಗೂ ಭಾರತ 'ಎ' ತಂಡಗಳಿಗೆ ಮುಖ್ಯ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಮುಗಿದಿರುವ ಶ್ರೀಲಂಕಾ ಪ್ರವಾಸದ ಭಾರತ ತಂಡದಲ್ಲಿಯೂ ಬಹುತೇಕರು ದ್ರಾವಿಡ್‌ ಅಡಿಯಲ್ಲಿ ಪಳಗಿರುವ ಆಟಗಾರರಾಗಿದ್ದರು. "ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಆಗಿ ನನ್ನ ಕೆಲಸವನ್ನು ಆನಂದಿಸಿದ್ದೇನೆ. ಈ ಹುಡುಗರ ಜೊತೆ ಕೆಲಸ ಮಾಡುವುದನ್ನು ತುಂಬಾ ಇಷ್ಟಪಟ್ಟಿದ್ದೇನೆ. ಇಲ್ಲಿನ ಅನುಭವ ಅದ್ಭುತವಾಗಿತ್ತು. ಆದರೆ, ಹೆಡ್‌ ಕೋಚ್‌ ಆಗಿ ಮುಂದುವರಿಯುವ ಬಗ್ಗೆ ನಾನು ಯೋಚಿಸಿಲ್ಲ. ಆದರೆ, ಪೂರ್ಣ ಅವಧಿಯಲ್ಲಿ ಈ ಪಾತ್ರ ನಿರ್ವಹಿಸುವಾಗ ಸಾಕಷ್ಟು ಸವಾಲು ಎದುರಾಗುತ್ತವೆ. ಹಾಗಾಗಿ, ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ," ಎಂದು ರಾಹುಲ್‌ ದ್ರಾವಿಡ್‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zUN8R7

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 40 ಲಕ್ಷ ಮೌಲ್ಯದ 46 ಬೈಕ್‌ ವಶ; ಐವರ ಬಂಧನ

ನೆಲಮಂಗಲ: ಪ್ರೈವೇಟ್‌ ಡಿವೆಕ್ಟರ್‌ ಸೇರಿದಂತೆ ಕುಖ್ಯಾತ 5 ಜನ ಬೈಕ್‌ ಕಳ್ಳರನ್ನು ಬಂಧಿಸಿ 40ಲಕ್ಷ ಮೌಲ್ಯದ 46 ಐಶಾರಾಮಿ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ದೊಡ್ಡ ಬೈಕ್‌ ಕಳ್ಳರ ಜಾಲವನ್ನು ಪತ್ತೆ ಹಚ್ಚಿ ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಎಂ ಚಂದ್ರಶೇಖರ್‌ ತಿಳಿಸಿದರು. ನೆಲಮಂಗಲ ಉಪವಿಭಾಗ ವ್ಯಾಪ್ತಿಯ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯ ಸಮೀಪ ಶಾಲಾ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಮನೆಯ ಮುಂದೆ, ಕಚೇರಿ, ರಸ್ತೆ ಬದಿ ನಿಲ್ಲಿಸಿದ್ದ ಐಶಾರಾಮಿ ಬೈಕ್‌ಗಳನ್ನು ಗಮನಿಸಿ, ಯಾರಿಗೂ ಅನುಮಾನ ಬಾರದಂತೆ ಕದ್ದು ಮಾರಾಟ ಮಾಡುತಿದ್ದ ಕುಖ್ಯಾತ ಬೈಕ್‌ ಕಳ್ಳರನ್ನು ಮಾದನಾಯಕನಹಳ್ಳಿ ಪೊಲೀಸರು ವಿಶೇಷ ತಂಡದ ಮೂಲಕ ಪತ್ತೆ ಹಚ್ಚಿರುವುದು ಶ್ಲಾಘನೀಯ. ತರಕಾರಿ, ಹೂ ಮಾರುತ್ತಿರುವವರು ಲಾಕ್‌ಡೌನ್‌ ನಂತರ ಹಣಕ್ಕಾಗಿ ಕಳ್ಳತನ ಮಾಡುವ ಜಾಲಕ್ಕೆ ಮುಂದಾಗಿರುವುದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂದರು. 25 ಪ್ರಕರಣಗಳ 46 ಬೈಕ್‌ ವಶ: ಮಾದನಾಯಕನಹಳ್ಳಿ ಪೊಲೀಸರ ಕಾರ್ಯಾಚಾರಣೆಯಲ್ಲಿ ತಾವರೆಕೆರೆಯ 5, ಕಾಮಾಕ್ಷಿಪಾಳ್ಯದ 2, ಮಾದನಾಯಕನಹಳ್ಳಿಯ 9, ಕೆಂಗೇರಿಯ 2, ಬ್ಯಾಡರಹಳ್ಳಿಯ 2, ರಾಜಗೋಪಾಲನಗರ, ಜ್ಞಾನಭಾರತಿ, ವಿಜಯನಗರ, ಗಿರಿನಗರ, ನೆಲಮಂಗಲ ಗ್ರಾಮಾಂತರ ತಲಾ ಒಂದು ಪ್ರಕರಣ ಸೇರಿದಂತೆ 25 ಬೈಕ್‌ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ಕೆಟಿಎಂ ಡ್ಯೂಕ್‌ 5, ರಾಯಲ್‌ ಎನ್‌ಪಿಲ್ಡ್‌ ಬುಲೇಟ್‌ 3, ಬಜಾಜ್‌ಪಲ್ಸರ್‌ 9, ಯಮಹ ಆರ್‌ಎಕ್ಸ್‌ 4, ಹೊಂಡಾಡಿಯೋ 10, ಆಕ್ಟಿವಾ 4, ಸುಜುಕಿ ಆಕ್ಸೆಸ್‌ 3, ಟಿವಿಎಸ್‌ ಎಕ್ಸ್‌ಲ್‌ 4, ಅಪಾಚಿ, ಸ್ಟಾರಿಸಿಟಿ, ಬಜಾಜ್‌ ಸಿಟಿ, ಸುಜಿಕಿ ತಲಾ ಒಂದು ವಾಹನ ಸೇರಿದಂತೆ 46 ವಾಹನಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಕಳ್ಳತನದಲ್ಲಿ ಯುವಕರು ಭಾಗಿ: 25 ಪ್ರಕರಣದ 46 ಬೈಕ್‌ ಕಳ್ಳತನದಲ್ಲಿ ರವಿಕುಮಾರ್‌(21), ಮುನಿರಾಜು(20), ಜಗದೀಶ್‌(21), ಮೋಹನ್‌ಕುಮಾರ್‌(22), ಶಿವಶಂಕರ್‌(25) ಸೇರಿದಂತೆ ಐದು ಖದೀಮರನ್ನು ಬಂಧನ ಮಾಡಿದ್ದಾರೆ. ಲಾಕ್‌ಡೌನ್‌ನಲ್ಲಿ ಸಾಲ ಮಾಡಿ ಹಣಕ್ಕಾಗಿ ಕಳ್ಳತನ ಮಾಡಿರುವ ಮಾಹಿತಿ ತಿಳಿಸಿದ್ದು, ಪ್ರಕರಣದಲ್ಲಿ 20 ರಿಂದ 25 ವರ್ಷ ಒಳಗಿನ ಯುವಕರು ಭಾಗಿ ಆಗಿರುವುದರಿಂದ ಕಂಡುಬಂದಿದೆ. ಶಂಕಿತ ಯುವಕರ ಮೇಲೆ ಕಣ್ಗಾವಲಿಡುವಂತೆ ಐಜಿಪಿ ಸಲಹೆ ನೀಡಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಕೆ: ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಹನ ನೋಂದಣಿ ಸಂಖ್ಯೆ ಗುರುತಿಸುವ ಎಎನ್‌ಪಿಆರ್‌ ಮತ್ತು ಪಿಟಿಜೆಡ್‌ ಸಿಸಿ ಕ್ಯಾಮೆರಾಗಳನ್ನು ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಅಳವಡಿಸಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ಮೇಲೆ ಕಮಾಂಡ್‌ ಸೆಂಟರ್‌ ನಿರ್ಮಾಣ ಮಾಡಿದ್ದು ಐಜಿಪಿ ಉದ್ಘಾಟನೆ ಮಾಡಿದರು.


from India & World News in Kannada | VK Polls https://ift.tt/2Vhawt4

ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ; ಕೋಡಿಮಠ ಶ್ರೀ

ಕೋಲಾರ: ಯಡಿಯೂರಪ್ಪರನ್ನು ಸಿಎಂ ಸ್ಥಾನದಲ್ಲಿ ಉಳಿಸಿ ಎಂದು ನಾವು ಹೇಳಿಲ್ಲ. ಬದಲಾಗಿ ಸ್ವಾಮೀಜಿಗಳು ಬೀದಿಗೆ ಬಂದಾಗ, ಕೇಂದ್ರ ಸರಕಾರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು. ಆದರೆ, ಆ ಕೆಲಸ ಮಾಡದೆ ಮಠಾಧೀಶರಿಗೆ ಅಗೌರವ ತೋರಿದ್ದಾರೆಂದು ಕೋಡಿ ಮಠದ ಶ್ರೀ ಶಿವಾನಂದ ಸ್ವಾಮೀಜಿ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದರು. ತಾಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಶುಕ್ರವಾರ ನಡೆದ ಚಾಮುಂಡಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ದೊಡ್ಡ ಅವಘಡ ಆಗಲಿದೆ. ರಾಷ್ಟ್ರ ಮಟ್ಟದ ದೊಡ್ಡ ಅವಘಡವಾಗಲಿದೆ. ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಇದೆ. ಕೊರೊನಾ ಇನ್ನೂ ಹೆಚ್ಚಾಗಲಿದೆ. ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಭವಿಷ್ಯವನ್ನೂ ನುಡಿದರು.


from India & World News in Kannada | VK Polls https://ift.tt/3ffhaag

ಟೀಮ್ ಇಂಡಿಯಾ ವಿರುದ್ಧ ಟೆಸ್ಟ್‌ ಸರಣಿಯಿಂದ ಬೆನ್‌ ಸ್ಟೋಕ್ಸ್‌ ಔಟ್‌!

ಬೆಂಗಳೂರು: ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ , ಮಾನಸಿಕ ಆರೋಗ್ಯ ಸುಧಾರಣೆ ಸಲುವಾಗಿ ಕ್ರಿಕೆಟ್‌ನಿಂದ ಅನಿರ್ಧಿಷ್ಟಾವಧಿ ಕಾಲ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಇದರೊಂದಿಗೆ ಪ್ರವಾಸಿ ವಿರುದ್ಧ ಆಗಸ್ಟ್‌ 4ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಬರೋಬ್ಬರಿ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡ ತನ್ನ ಮ್ಯಾಚ್‌ ವಿನ್ನಿಂಗ್‌ ಆಲ್‌ರೌಂಡರ್ ಸೇವೆ ಇಲ್ಲದೇ ಕಣಕ್ಕಿಳಿಯುವಂತ್ತಾಗಿದೆ. "ಸ್ಟೋಕ್ಸ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದು, ಮಾನಸಿಕ ಆರೋಗ್ಯ ಸುಧಾರಣೆಗೆ ಮೊದಲ ಆದ್ಯತೆ ನೀಡಿದ್ದಾರೆ," ಎಂದು ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ () ಮಾಹಿತಿ ಹೊರಹಾಕಿದೆ. ಸ್ಟೋಕ್ಸ್‌ ಸ್ಥಾನದಲ್ಲಿ ಕ್ರೇಗ್ ಓವರ್‌ಟರ್ನ್ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ ತಂಡ ಸೇರಿಕೊಳ್ಳಲಿದ್ದಾರೆ. "ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯಿಂದ ಬೆನ್‌ ಸ್ಟೋಕ್ಸ್‌ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ. ಮಾನಸಿಕ ಆರೋಗ್ಯದಲ್ಲಿ ಸುಧಾರಣೆ ತಂದುಕೊಳ್ಳುವುದು ಮತ್ತು ಅವರ ಎಡ ತೋರು ಬೆರಳಿನ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗಲು ಸ್ಟೋಕ್ಸ್‌ ಮೊದಲ ಆದ್ಯತೆ ನೀಡಿದ್ದಾರೆ. ಇದೇ ವರ್ಷ ಐಪಿಎಲ್ 2021 ಟೂರ್ನಿ ವೇಳೆ ಅವರು ಗಾಯಗೊಂಡಿದ್ದರು. ಇದರಿಂದ ಸಂಪೂರ್ಣ ಚೇತರಿಸಿಲ್ಲ," ಎಂದು ಇಸಿಬಿ ಹೇಳಿದೆ. "ಬೆನ್‌ ಸ್ಟೋಕ್ಸ್‌ ಅವರ ಅತ್ಯಂತ ಧೈರ್ಯಯುತ ನಡೆಯಿದು. ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ನಮ್ಮ ಆಟಗಾರರ ಮಾನಸಿಕ ಆರೋಗ್ಯದ ಕಡೆಗೆ ನಾವು ಸಾದಾ ಮೊದಲ ಆದ್ಯತೆ ನೀಡಿದ್ದೇವೆ. ಸದ್ಯದ ಕೊರೊನಾ ವೈರಸ್‌ ಸಂಕಷ್ಟದ ಸಮಯದಲ್ಲಿ ಆಟಗಾರರು ತಮ್ಮ ಸಾಮರ್ಥ್ಯ ಒಗ್ಗೂಡಿಸಿಕೊಂಡು ಆಟವಾಡುವುದು ಬಹಳಾ ಸವಾಲಿನ ಕೆಲಸವಾಗಿದೆ," ಎಂದು ಇಂಗ್ಲೆಂಡ್ ತಂಡ ನಿರ್ದೇಶಕ ಆಷ್ಲೇ ಜೈಲ್ಸ್‌ ಹೇಳಿದ್ದಾರೆ. ಭಾರತ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಇಂಗ್ಲೆಂಡ್‌ ತಂಡ ಹೀಗಿದೆಜೋ ರೂಟ್ (ಯಾರ್ಕ್‌ಶೈರ್, ನಾಯಕ), ಜೇಮ್ಸ್ ಆಂಡರ್ಸನ್ (ಲಂಕಾಶೈರ್), ಜಾನಿ ಬೈರ್‌ಸ್ಟೋವ್ (ಯಾರ್ಕ್‌ಶೈರ್), ಡಾಮ್ ಬೆಸ್ (ಯಾರ್ಕ್‌ಶೈರ್), ಸ್ಟುವರ್ಟ್ ಬ್ರಾಡ್ (ನಾಟಿಂಗ್‌ಹ್ಯಾಮ್‌ಶೈರ್), ರೋರಿ ಬರ್ನ್ಸ್ (ಸರ್ರೆ), ಜೋಸ್ ಬಟ್ಲರ್ (ಲಂಕಾಶೈರ್), ಝ್ಯಾಕ್‌ ಕ್ರಾವ್ಲೀ (ಕೆಂಟ್), ಸ್ಯಾಮ್ ಕರ್ರನ್ (ಸರ್ರೆ), ಹಸೀಬ್ ಹಮೀದ್ (ನಾಟಿಂಗ್‌ಹ್ಯಾಮ್‌ಶೈರ್), ಡ್ಯಾನ್ ಲಾರೆನ್ಸ್ (ಎಸೆಕ್ಸ್), ಜಾಕ್ ಲೀಚ್ (ಸಮರ್‌ಸೆಟ್), ಓಲ್ಲೀ ಪೋಪ್ (ಸರ್ರೆ), ಓಲ್ಲೀ ರಾಬಿನ್ಸನ್ (ಸಸೆಕ್ಸ್), ಡಾಮ್ ಸಿಬ್ಲಿ (ವಾರ್ವಿಕ್‌ಶೈರ್), ಕ್ರೇಗ್ ಓವರ್‌ಟರ್ನ್ (ಸಮರ್ಸೆಟ್), ಮಾರ್ಕ್‌ ವುಡ್‌ (ಡುರ್ಹ್ಯಾಮ್). ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತದ ಪರಿಷ್ಕೃತ ತಂಡರೋಹಿತ್‌ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಶಾರ್ದುಲ್‌ ಠಾಕೂರ್‌, ಉಮೇಶ್‌ ಯಾದವ್, ಕೆಎಲ್‌ ರಾಹುಲ್, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್. ಕಾಯ್ದಿರಿಸಲ್ಪಟ್ಟ ಆಟಗಾರರು: ಪ್ರಸಿಧ್ ಕೃಷ್ಣ ಮತ್ತು ಅರ್ಝಾನ್‌ ನಾಗವಾಸವಾಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3j3sx6h

'ಪ್ರಚೋದಿತ ಪಿಐಎಲ್‌': ಅರ್ಜಿದಾರರಿಂದ 5 ಲಕ್ಷ ರೂ. ವಸೂಲಿಗೆ ಸುಪ್ರೀಂ ಕೋರ್ಟ್‌ ಆದೇಶ

: 2017ರಲ್ಲಿ ಅಂದಿನ ಸುಪ್ರೀಂ ಕೋರ್ಟ್‌ ನೇಮಕ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಂದ 5 ಲಕ್ಷ ರೂ. ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಇದು 'ಪ್ರಚೋದಿತ' ಅರ್ಜಿಯಾಗಿದ್ದು, ವಿಚಾರಣೆಯ ವೆಚ್ಚವನ್ನು ಅರ್ಜಿದಾರರಿಂದ ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. 2017ರಲ್ಲಿ ದೀಪಕ್‌ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಆದರೆ, ಮುಖ್ಯ ನ್ಯಾಯಮೂರ್ತಿ ಅವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ರಾಷ್ಟ್ರಪತಿಗೆ ಶಿಫಾರಸು ಮಾಡುವ ಪದ್ಧತಿಯನ್ನು ಪ್ರಶ್ನಿಸಿ ಸ್ವಾಮಿ ಓಂ (ಈಗ ನಿಧನರಾಗಿದ್ದಾರೆ) ಮತ್ತು ಮುಕೇಶ್‌ ಜೈನ್‌ ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್‌ ಮತ್ತು ಎಂ. ಆರ್‌. ಶಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದೆ. '5 ಲಕ್ಷ ರೂ. ವಿಚಾರಣೆಯ ವೆಚ್ಚದ ಮೊತ್ತವಾಗಿದ್ದು, ಅರ್ಜಿದಾರರ ಭೂಮಿಯನ್ನು ಮಾರಿ, ಅದನ್ನು ವಸೂಲಿ ಮಾಡಬೇಕು. ಅಲ್ಲಿಯವರೆಗೂ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಸಲ್ಲಿಸಲು ಅವಕಾಶ ನೀಡುವುದಿಲ್ಲ' ಎಂದು ನ್ಯಾಯಾಲಯ ಹೇಳಿದೆ. 'ಜೈನ್‌ ಅವರಿಗೆ ಯಾವುದೇ ಜಮೀನು ಇಲ್ಲ' ಎಂದು ಅವರ ಪರ ವಾದಿಸಿದ ವಕೀಲ ಎ.ಪಿ. ಸಿಂಗ್‌ ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಹಾಗಿದ್ದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ' ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಈ ಮೊತ್ತವನ್ನು ಕಡಿಮೆ ಮಾಡುವಂತೆ ಜೈನ್‌ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. 2017ರಲ್ಲೇ 10 ಲಕ್ಷ ರೂ. ವಸೂಲಿ ಮಾಡುವಂತೆ ಸೂಚಿಸಲಾಗಿತ್ತು. ನಂತರ, ಈ ಮೊತ್ತವನ್ನು ಕಳೆದ ವರ್ಷ 5 ಲಕ್ಷ ರೂಗೆ ಇಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿತು. ಸ್ವಾಮಿ ಓಂ ಅವರು ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಜೈನ್‌ ಕಳೆದ ಒಂದು ವರ್ಷದಿಂದ ಮತ್ತೊಂದು ಪ್ರಕರಣದಲ್ಲಿ ಒಡಿಶಾದ ಬಾಲ್‌ಸೋರ್‌ ಜೈಲಿನಲ್ಲಿದ್ದಾರೆ.


from India & World News in Kannada | VK Polls https://ift.tt/3lirK4b

ಹಣ, ದಾಖಲೆ ಕಳೆದುಕೊಂಡ ಪ್ರಯಾಣಿಕರಿಗೆ ಆಪತ್ಬಾಂಧವರಾದ ಕೆಎಸ್‌ಆರ್‌ಟಿಸಿ ಅಧಿಕಾರಿ

: ಕೊರೊನಾ ಸಂಕಷ್ಟ ಕಾಲದಲ್ಲಿ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಮಾನವೀಯ ಗುಣ ಅನಾವರಣಗೊಂಡ ಅಪರೂಪದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಜುಲೈ 30 ಶುಕ್ರವಾರದಂದು ಇಬ್ಬರು ಪ್ರಯಾಣಿಯರು ಮಂಡ್ಯದಿಂದ ಬೆಂಗಳೂರಿಗೆ ಬಂದಿಳಿದರು. ಇವರು ನಗರದ ಸಂಜಯ್‌ ಗಾಂಧಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ತೆರಳಬೇಕಿತ್ತು. ಸಮಯದ ಅಭಾವ ಇದ್ದ ಕಾರಣ, ಈ ಪ್ರಯಾಣಿಕರು ಗಡಿಬಿಡಿಯಲ್ಲಿ ಬಸ್ ಇಳಿದು ಆಸ್ಪತ್ರೆಗೆ ಆಟೋ ಹತ್ತಿದ್ದರು. ಆಟೋ ಹತ್ತಿದ ಬಳಿಕ ಅವರಿಗೆ ತಾವು ಮಾಡಿದ ಪ್ರಮಾದದ ಅರಿವಾಗಿತ್ತು..! ಆಟೋದಲ್ಲಿ ಸಾಗುವಾಗ ಮಾರ್ಗಮಧ್ಯೆ ಅವರು ತಮ್ಮ ಲಗೇಜ್ ಪರಿಶೀಲಿಸಿದರು. ಆಗ ಸ್ಕ್ಯಾನಿಂಗ್ ರಿಪೋರ್ಟ್‌ ಹಾಗೂ 50,500 ರೂ. ಬಸ್‌ನಲ್ಲೇ ಬಿಟ್ಟಿರೋದು ನೆನಪಾಯ್ತು. ಕೂಡಲೇ ಆಟೋದಲ್ಲಿ ವಾಪಸ್‌ ಬಂದ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿ ಗೋಳಿಡಲು ಆರಂಭಿಸಿದರು. ಇವರನ್ನು ಗಮನಿಸಿದ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇಗೌಡ ಅವರು, ಪ್ರಯಾಣಿಕರ ಬಳಿಗೆ ತೆರಳಿ ಅವರಿಂದ ಮಾಹಿತಿ ಪಡೆದರು. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ ಶುಕ್ರವಾರ ಬೆಳಗ್ಗೆ 10.35ರ ಸುಮಾರಿಗೆ ಈ ಇಬ್ಬರೂ ಪ್ರಯಾಣಿಕರು ಆಗಮಿಸಿದ್ದರು. ಕೆ. ಎ. 11, ಎಫ್ 0465 ಸಂಖ್ಯೆಯ ಬಸ್‌ನಲ್ಲಿ ಅವರು ಮಂಡ್ಯದಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಇಷ್ಟು ಮಾಹಿತಿ ಸಿಕ್ಕಿದ್ದೇ ತಡ ಕೂಡಲೇ ಮಂಡ್ಯದ ಘಟಕದ ಘಟಕ ವ್ಯವಸ್ಥಾಪಕರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಲಕ್ಷ್ಮೇಗೌಡರು, ಬಸ್‌ನ ಚಾಲಕ ಮಹೇಶ್ ಹಾಗೂ ನಿರ್ವಾಹಕ ಸೋಮಶೇಖರಪ್ಪ ಅವರ ಮೊಬೈಲ್ ನಂಬರ್ ಪಡೆದು ಅವರ ಜೊತೆ ನೇರವಾಗಿ ಮಾತನಾಡಿದರು. ಬಸ್‌ನ 5ನೇ ಸೀಟಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್‌ ಹಾಗೂ 50,500 ರೂ. ಹಣ ಇದೆ ಎಂದು ಚಾಲಕ, ನಿರ್ವಾಹಕನಿಗೆ ತಿಳಿಸಿ ಅದನ್ನು ಹುಡುಕುವಂತೆ ಹೇಳಿದರು. ಕೂಡಲೇ ಹಣ ಹಾಗೂ ಸ್ಕ್ಯಾನಿಂಗ್ ರಿಪೋರ್ಟ್‌ ಇರೋದಾಗಿ ಬಸ್‌ನ ನಿರ್ವಾಹಕ ಸೋಮಶೇಖರಪ್ಪ ಹೇಳಿದರು. ಅಷ್ಟರಲ್ಲಾಗಲೇ ಬಸ್‌ ಚನ್ನಪಟ್ಟಣ ತಲುಪಿತ್ತು. ಕೂಡಲೇ ಚನ್ನಪಟ್ಟಣದ ಘಟಕ ವ್ಯವಸ್ಥಾಪಕರ ಜೊತೆ ಮಾತನಾಡಿದ ಲಕ್ಷ್ಮೇಗೌಡರು, ವ್ಯವಸ್ಥಾಪಕರ ಬಳಿ ಪೂರ್ಣ ಪ್ರಮಾಣದಲ್ಲಿ ಹಣವನ್ನು ಲೆಕ್ಕಾಚಾರ ಮಾಡಿಸಿ ಮಂಡ್ಯದಲ್ಲಿ ಪ್ರಯಾಣಿಕರ ಮಗಳಿಗೆ ಹಣ ಮತ್ತು ಸ್ಕ್ಯಾನಿಂಗ್ ರಿಪೋರ್ಟ್‌ ತಲುಪಿಸುವ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಮೈಸೂರು ರಸ್ತೆ ಬಸ್‌ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇಗೌಡ ಅವರ ಸಮಯ ಪ್ರಜ್ಞೆ ಹಾಗೂ ಬಸ್‌ನ ಸಿಬ್ಬಂದಿ ವರ್ಗದ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


from India & World News in Kannada | VK Polls https://ift.tt/3xedY50

ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ನೆರವು ಬಯಸಿ 292 ಮಕ್ಕಳ ನೋಂದಣಿ

ಹೊಸದಿಲ್ಲಿ: ಕೊರೊನಾದಿಂದ ಇಬ್ಬರೂ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ 292 ಮಕ್ಕಳನ್ನು ಪಿಎಂ ಕೇರ್ಸ್ ಫಾರ್‌ ಚಿಲ್ಡ್ರನ್‌ ಸ್ಕೀಂ ಅಡಿಯಲ್ಲಿ ನೆರವಿಗಾಗಿ ನೋಂದಣಿ ಮಾಡಲಾಗಿದೆ. ''ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂದರೆ ಕ್ರಮವಾಗಿ 112 ಮತ್ತು 85 ಮಕ್ಕಳ ನೋಂದಣಿಯಾಗಿದೆ. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇಬ್ಬರೂ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಇಂತಹ ಮಕ್ಕಳ ಕುರಿತು 15 ದಿನಗಳ ಒಳಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ,'' ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ತಿಳಿಸಿದ್ದಾರೆ. ಈ ಯೋಜನೆ ಅಡಿಯಲ್ಲಿ ಪ್ರತಿ ಮಗುವಿನ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ, ಆರೈಕೆಯ ವೆಚ್ಚ ನಿರ್ವಹಣೆಗಾಗಿ 10 ಲಕ್ಷ ರೂಪಾಯಿ ಠೇವಣಿ ಇರಿಸಲಾಗುತ್ತದೆ. ಮಗುವಿಗೆ 18 ವರ್ಷ ತುಂಬಿದ ಬಳಿಕ ಮುಂದಿನ ಐದು ವರ್ಷ ಕಾಲ ನಿಗದಿತ ಮೊತ್ತದ ಸ್ಟೈಫಂಡ್‌ ಪಡೆಯಲಿದ್ದಾರೆ. 23 ವರ್ಷ ತುಂಬಿದ ಬಳಿಕ ನಿರ್ದಿಷ್ಟ ಮೊತ್ತವನ್ನು ನೀಡಲಾಗುತ್ತದೆ. ದೇಶದ 63 ಜಿಲ್ಲೆಗಳಲ್ಲಿಬ್ಲಡ್‌ಬ್ಯಾಂಕ್‌ ಇಲ್ಲವೆಂದು ಮಾಹಿತಿ ನೀಡಿದ ಸರಕಾರ ಹೊಸದಿಲ್ಲಿ: ದೇಶದ 63 ಜಿಲ್ಲೆಗಳಲ್ಲಿ ರಕ್ತ ನಿಧಿ (ಬ್ಲಡ್‌ ಬ್ಯಾಂಕ್‌) ಇಲ್ಲ ಎಂದು ಕೇಂದ್ರ ಸರಕಾರ ಶುಕ್ರವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ಅವರು, ‘‘ರಕ್ತ ನಿಧಿಗಳಿಲ್ಲದ ಜಿಲ್ಲೆಗಳಲ್ಲಿ ಸದ್ಯ ಅಕ್ಕಪಕ್ಕದ ಜಿಲ್ಲೆಗಳಿಂದ ರಕ್ತ ಪಡೆದು ಅಗತ್ಯ ಇರುವವರಿಗೆ ಪೂರೈಸಲಾಗುತ್ತಿದೆ. ಕೇಂದ್ರ ಸರಕಾರ ರಾಷ್ಟ್ರೀಯ ರಕ್ತ ನೀತಿ ರೂಪಿಸುತ್ತಿದ್ದು, ಅದರ ಪ್ರಕಾರ ಪ್ರತಿ ಜಿಲ್ಲೆಯಲ್ಲಿಯೂ ಪರವಾನಗಿ ಪಡೆದ ಒಂದು ರಕ್ತ ನಿಧಿ ಇರಬೇಕು. ಅಲ್ಲದೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬ್ಲಡ್‌ ಬ್ಯಾಂಕ್‌ಗಳು ಒಂದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದನ್ನೂ ಈ ನೀತಿ ತಡೆಯಲಿದೆ,’’ ಎಂದು ತಿಳಿಸಿದರು.


from India & World News in Kannada | VK Polls https://ift.tt/2V5sQWm

ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದ ಗೋವಿಂದ ಕಾರಜೋಳ; ಕುತೂಹಲ ಕೆರಳಿಸಿದ ಮಾಜಿ ಡಿಸಿಎಂ ನಡೆ

ಬೆಂಗಳೂರು: ಅವರಿಗೆ ಡಿಸಿಎಂ ಸ್ಥಾನ ಕೈತಪ್ಪುತ್ತಾ? ಹೌದು, ಇಂತಹದೊಂದು ಪ್ರಶ್ನೆ ಇದೀಗ ಉದ್ಭವವಾಗಿದೆ. ಬಿಎಸ್‌ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಗೋವಿಂದ ಕಾರಜೋಳ ಅವರು ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ಗೋವಿಂದ ಕಾರಜೋಳ ಧನ್ಯವಾದ ಸಲ್ಲಿಸಿದ್ದು ಕುತೂಹಲ ಕೆರಳಿಸಿದೆ. ಜನಪ್ರಿಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ತಾವು ಉಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಿರ್ವಹಿಸಿದ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯು ಕೋವಿಡ್ 19, ಪ್ರವಾಹ, ಅತಿವೃಷ್ಠಿಯ ವಿಷಮ ಪರಿಸ್ಥಿತಿಯ ಸಂಕಷ್ಟದ ಸಂದರ್ಭದಲ್ಲೂ ಇಲಾಖೆಗೂ ಹಾಗೂ ತಮಗೂ ಶ್ರೇಯಸ್ಸು ದೊರಕುವಂತೆ ಅಲ್ಲದೇ, ಜನತೆಯ ಪ್ರಶಂಸೆಗೂ ಪಾತ್ರವಾಗುವಂತೆ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದೀರಿ. ರಾಜ್ಯದ ಬಲವರ್ಧನೆಗೆ ಪೂರಕವಾಗಿ ಸದೃಢ ರಸ್ತೆಗಳು, ಸೇತುವೆಗಳು, ಕಟ್ಟಡಗಳನ್ನು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದ ಇಲಾಖೆಯ ಎಲ್ಲಾ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಸಹಜವಾಗಿ ಕಾರಜೋಳ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಸಂಪುಟದಲ್ಲಿ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡದೆ ಅರವಿಂದ ಲಿಂಬಾವಳಿ ಅವರಿಗೆ ನೀಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತಾದ ಸುಳಿವಿನ ಹಿನ್ನೆಲೆಯಲ್ಲಿ ಇದೀಗ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.


from India & World News in Kannada | VK Polls https://ift.tt/3fdqhZ1

ಮಧ್ಯಪ್ರಾಚ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆ: ನಾಲ್ಕನೇ ಅಲೆ ಆರಂಭ ಎಂದ WHO

ಜಿನೇವಾ: ಮಧ್ಯಪ್ರಾಚ್ಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ನಾಲ್ಕನೆಯ ಅಲೆಯನ್ನು ಆರಂಭಿಸಿದೆ ಎಂದು ತಿಳಿಸಿದೆ. ಭಾಗಗಳಲ್ಲಿ ಲಸಿಕೆ ಕಾರ್ಯಕ್ರಮ ಬಹಳ ನಿಧಾನಗತಿಯಲ್ಲಿದ್ದು, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದೆ. ಭಾರತದಲ್ಲಿ ಮೊದಲು ಪತ್ತೆಯಾಗಿದ್ದ ಅತ್ಯಧಿಕ ಪ್ರಸರಣ ಸಾಮರ್ಥ್ಯದ ವೈರಸ್ ತಳಿ ಡೆಲ್ಟಾ, ತನ್ನ ನಿಗಾದಲ್ಲಿರುವ ಈ ವ್ಯಾಪ್ತಿಯ 22 ದೇಶಗಳು ಮತ್ತು ಪ್ರದೇಶಗಳ ಪೈಕಿ 15 ದೇಶಗಳಲ್ಲಿ ಕಂಡುಬಂದಿವೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ. 'ಡೆಲ್ಟಾ ಪ್ರಭೇದದ ಪ್ರಸರಣವು ಕೋವಿಡ್ 19 ಪ್ರಕರಣಗಳು ಮತ್ತು ಸಾವಿನ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಡಬ್ಲ್ಯೂಎಚ್‌ಒದ ಪೂರ್ವ ಮೆಡಿಟರೇನಿಯನ್ ವಲಯದಲ್ಲಿನ ದೇಶಗಳ ಸಂಖ್ಯೆಯ ಏರಿಕೆಯಾಗುತ್ತಿದೆ' ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. 'ಬಹುತೇಕ ಹೊಸ ಪ್ರಕರಣಗಳು ಮತ್ತು ಆಸ್ಪತ್ರೆಗೆ ದಾಖಲಿಸಲಾದ ರೋಗಿಗಳು ಲಸಿಕೆ ಪಡೆದುಕೊಳ್ಳದ ಜನರಾಗಿದ್ದಾರೆ. ಈ ಪ್ರದೇಶದಲ್ಲಿ ನಾವು ಕೋವಿಡ್ 19 ನಾಲ್ಕನೆಯ ಅಲೆಗೆ ಕಾಲಿರಿಸಿದ್ದೇವೆ' ಎಂದು ಡಬ್ಲ್ಯೂಎಚ್‌ಒ ಪೂರ್ವ ಮೆಡಿಟರೇನಿಯನ್ ಪ್ರದೇಶದ ನಿರ್ದೇಶಕ ಅಹ್ಮದ್ ಅಲ್ ಮಂಧಾರಿ ತಿಳಿಸಿದ್ದಾರೆ. ಜುಲೈ ಕೊನೆಯ ವಾರದವರೆಗೆ ಕೇವಲ 41 ಮಿಲಿಯನ್, ಅಂದರೆ ಶೇ 5.5ರಷ್ಟು ಜನರಿಗೆ ಮಾತ್ರವೇ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ಸೋಂಕಿನ ಪ್ರಮಾಣ ಶೇ 55ರಷ್ಟು ಹಾಗೂ ಮರಣ ಪ್ರಮಾಣ ಶೇ 15ರಷ್ಟು ಏರಿಕೆಯಾಗಿದೆ. ಪ್ರತಿ ವಾರ 3,10,000ಕ್ಕೂ ಅಧಿಕ ಪ್ರಕರಣ ಹಾಗೂ 3,500 ಸಾವುಗಳು ವರದಿಯಾಗುತ್ತಿವೆ. ಉತ್ತರ ಆಫ್ರಿಕಾದಲ್ಲಿ ಟ್ಯುನಿಷಿಯಾದಂತಹ ದೇಶಗಳು ಅತ್ಯಧಿಕ ಕೋವಿಡ್ ಸಾವುಗಳನ್ನು ಕಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹೆಣಗಾಡುತ್ತಿವೆ.


from India & World News in Kannada | VK Polls https://ift.tt/3ldDVPU

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ! ಕಾರಣ ಏನು?

ಬೆಂಗಳೂರು: ವಿರೋಧ ಪಕ್ಷದ ನಾಯಕ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಕಟು ಟೀಕಾಕಾರರು ಎಂದೇ ಗುರುತಿಸಿಕೊಂಡವರು. ಆದರೆ ಇದೀಗ ಟ್ವಿಟ್ಟರ್‌ನಲ್ಲಿ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಹೌದು, ಅಖಿಲಭಾರತ ಕೋಟಾದಡಿ ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಗಳಲ್ಲಿ 27% ಮೀಸಲಾತಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಅಧ್ಯಕ್ಷರಾದ ಸೋನಿಯಾಗಾಂಧಿಯವರ ಪತ್ರವನ್ನು ಪರಿಗಣಿಸಿ ಅಖಿಲಭಾರತ ಕೋಟಾದಡಿ ಒಬಿಸಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಗಳಲ್ಲಿ 27% ಮೀಸಲಾತಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಹಾಗೂ ಸಕಾಲದಲ್ಲಿ ಸರ್ಕಾರವನ್ನು ಎಚ್ಚರಿಸಿದ ಸೋನಿಯಾಗಾಂಧಿಯವರಿಗೆ ಕೃತಜ್ಞತೆಗಳು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ಅವರು ಈ ಹಿಂದೆ ಸಾಕಷ್ಟು ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಸೈದ್ಧಾಂತಿಕವಾಗಿಯೂ ಅವರ ನಿಲುವುಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಮೋದಿ ಕುರಿತಾದ ಕಟು ವಿಮರ್ಶೆಗೆ ಬಿಜೆಪಿ ಮುಖಂಡರು ಸಿದ್ದರಾಮಯ್ಯ ವಿರುದ್ಧ ಹಲವು ಬಾರಿ ತಿರುಗಿ ಬಿದ್ದಿದ್ದರು.ಇದೀಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮೀಸಲಾತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.


from India & World News in Kannada | VK Polls https://ift.tt/3zSuQ32

ಭಾರತ-ಪಾಕಿಸ್ತಾನ ಗಡಿಯಂತಾದ ಅಸ್ಸಾಂ ಮತ್ತು ಮಿಜೋರಾಂ ಪರಿಸ್ಥಿತಿ: ಪ್ರತಿ ವಾಹನದ ಮೇಲೂ ಪೊಲೀಸರ ಕಣ್ಣು

ಗುವಾಹಟಿ: ಈಶಾನ್ಯ ರಾಜ್ಯಗಳಾದ ಮತ್ತು ನಡುವಿನ ವಿಕೋಪಕ್ಕೆ ತಲುಪಿದೆ. ಮಿಜೋರಾಂನಿಂದ ಅಸ್ಸಾಂಗೆ ಪ್ರವೇಶಿಸುವ ಪ್ರತಿ ವಾಹನವನ್ನೂ 'ಅಕ್ರಮ ಮಾದಕವಸ್ತು' ಸಲುವಾಗಿ ನಡೆಸುವುದಾಗಿ ಅಸ್ಸಾಂ ಸರಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ. ಉಭಯ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟ ಘಟನೆ ನಡೆದು ಕೆಲವು ದಿನಗಳ ಬಳಿಕ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇನ್ನೊಂದೆಡೆ ಮಿಜೋರಾಂ, ಗಡಿ ಭಾಗದ ಕರೀಂಗಂಜ್ ಜಿಲ್ಲೆಯ ಬಾರಕ್ ಕಣಿವೆಯುದ್ದಕ್ಕೂ ಅಕ್ರಮ ಪ್ರವೇಶಗಾರರು ಬಂಕರ್‌ಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಮಿಜೋರಾಂಗೆ ತೆರಳಬಾರದು ಎಂದು ಗುರುವಾರ ಸೂಚನೆ ಹೊರಡಿಸಿರುವ ಅಸ್ಸಾಂ, ತಮ್ಮ ವೈಯಕ್ತಿಕ ಸುರಕ್ಷತೆಗೆ ಎದುರಾಗುವ ಬೆದರಿಕೆಗಳನ್ನು ಒಪ್ಪುವುದಿಲ್ಲ ಎಂದಿದೆ. ಮಿಜೋರಾಂನಿಂದ ಬರುವ ಎಲ್ಲ ವಾಹನಗಳನ್ನೂ ತಪಾಸಣೆ ಮಾಡುವ ನಡೆಯನ್ನು ಸಮರ್ಥಿಸಿಕೊಂಡಿರುವ ಅಸ್ಸಾಂ, ಕಳೆದ ಎರಡು ತಿಂಗಳ ಒಳಗೆ 912 ಪ್ರಕರಣಗಳು ದಾಖಲಾಗಿವೆ, 1,560 ಮಂದಿಯನ್ನು ಬಂಧಿಸಲಾಗಿದೆ ಮತ್ತು ಭಾರಿ ಪ್ರಮಾಣದ ಅಕ್ರಮ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದೆ. ಕರೀಂಗಂಜ್ ಜಿಲ್ಲೆಯ ರತನ್‌ಬರಿ ಪ್ರದೇಶದ ಭೂಬಿರ್ಬಂದ್ ಗಡಿಯಲ್ಲಿ ಮಿಜೋ ಒಳನುಸುಳುಕೋರರು ಬಂಕರ್‌ಗಳನ್ನು ನಿರ್ಮಿಸಿದ್ದಾರೆ ಎಂದು ಅಸ್ಸಾಂ ಆರೋಪಿಸಿದೆ. ಕಳೆದ ಕೆಲವು ವರ್ಷಗಳಿಂದ ಭೂಬಿರ್ಬಂದ್ ಪ್ರದೇಶದಲ್ಲಿ ಮಿಜೋಗಳು ಅಕ್ರಮವಾಗಿ ಒಳನುಸುಳಿಕೊಂಡು ದೊಡ್ಡ ಭಾಗವನ್ನು ಅತಿಕ್ರಮಿಸಿದ್ದಾರೆ ಎಂದು ದೂರಿದೆ. ವಾಹನಗಳಲ್ಲಿ ಯಾವುದೇ ಮಾದಕವಸ್ತು ಇಲ್ಲ ಎಂಬುದು ಖಚಿತವಾದ ಬಳಿಕವೇ ಒಳಕ್ಕೆ ಬಿಡಲಾಗುವುದು. ಅಸ್ಸಾಂ ಪೊಲೀಸರು ಪ್ರತಿ ವಾಹನವನ್ನೂ ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ ಎಂದು ಅಸ್ಸಾಂ ಹೇಳಿದೆ. ಅಸ್ಸಾಂನ ಈ ಕ್ರಮದಿಂದ ಗಡಿಯಲ್ಲಿ ಕಿಲೋಮೀಟರ್‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ.


from India & World News in Kannada | VK Polls https://ift.tt/3j6pgmG

ಬಂಗಾರಪ್ಪನವರ ವಾರಸುದಾರರಾಗಿ ಕೆಲಸ ಮಾಡಿ; ಕಾಂಗ್ರೆಸ್‌ ಸೇರಿದ ಮಧು ಬಂಗಾರಪ್ಪಗೆ ಸಿದ್ದು ಸಲಹೆ

ಹುಬ್ಬಳ್ಳಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರು ಕೇವಲ ಒಂದು ಜಾತಿಯ ನಾಯಕರಾಗಿರಲಿಲ್ಲ. ಅವರೊಬ್ಬ ಸಮೂಹ ನಾಯಕರಾಗಿದ್ದರು ಎಂದು ವಿಪಕ್ಷ ನಾಯಕ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಬಂಗಾರಪ್ಪ ಅವರು ಇಡೀ ರಾಜ್ಯ ಒಪ್ಪುವಂತ ನಾಯಕರಾಗಿದ್ರು. ಮಧು ಬಂಗಾರಪ್ಪನವರಿಗೂ ಶಕ್ತಿ ಇದೆ. ಇಡೀ ರಾಜ್ಯದಲ್ಲಿ ಅವರಿಗೆ ಬೆಂಬಲಿಗರಿದ್ರು. ಅದನ್ನ ನೀವು ಮುಂದುವರೆಸಬೇಕು ಎಂದು ಹೇಳಿದರು. ಇನ್ನು ಈ ಸನ್ನಿವೇಶ ಹೇಗಿದೆ ಅಂದ್ರೆ ಯಡಿಯೂರಪ್ಪ ರಾಜಕೀಯ ಅಂತ್ಯ ಆಗ್ತಿದೆ. ಅವರನ್ನ ಸಿಎಂ ಸ್ಥಾನದಿಂದ ತೆಗೆದಿದ್ದಾರೆ. ನೀವು ಕಾಂಗ್ರೆಸ್‌ಗೆ ಬಂದಿದ್ದೀರಿ. ಬಂಗಾರಪ್ಪನವರ ವಾರಸುದಾರರಾಗಿ ಕೆಲಸ ಮಾಡಿ. ಇಡೀ ರಾಜ್ಯ ಸುತ್ತಾಡೋ ಶಕ್ತಿ ನಿಮಗೆ ಇದೆ. ಬಂಗಾರಪ್ಪನವರು ಸಿಎಂ ಆಗಿದ್ದಾಗ ನಾನು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಬಂಗಾರಪ್ಪನವರಿಂದ ಕಾಂಗ್ರೆಸ್ ಏನು ನಷ್ಟ ಆಗಿತ್ತು, ಅದನ್ನ ತುಂಬೋ ಕೆಲಸ ನೀವು ಮಾಡಬೇಕು ಎಂದು ಹೇಳಿದರು.


from India & World News in Kannada | VK Polls https://ift.tt/376U55l

ಸಂಪುಟ ರಚನೆ: ಜೆ.ಪಿ ನಡ್ಡಾ ಏನು ಮಾರ್ಗದರ್ಶನ ಕೊಡುತ್ತಾರೆ ಎಂದು ನೋಡುತ್ತೇನೆ; ಬಸವರಾಜ ಬೊಮ್ಮಾಯಿ

ಹೊಸದಿಲ್ಲಿ: ಸಂಪುಟ ರಚನೆ ಕುರಿತಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಏನು ಮಾರ್ಗದರ್ಶನ ನೀಡುತ್ತಾರೆ ಎಂಬುವುದನ್ನು ನೋಡುತ್ತೇನೆ ಎಂದು ನೂತನ ಸಿಎಂ ಹೇಳಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ದೆಹಲಿಗೆ ಮೊದಲನೇ ಭೇಟಿ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ಸಲ್ಲಿಸುವುದಾಗಿದೆ.ಅವರ ಆಶೀರ್ವಾದ ಕೋರುತ್ತೇನೆ. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಆಗಲಿದ್ದೇನೆ ಎಂದರು. ಶುಕ್ರವಾರ ದೆಹಲಿಯಲ್ಲಿ ಇರುತ್ತೇನೆ ಹಾಗೂ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರ ಜೊತೆ ರಾಜ್ಯಕ್ಕೆ ಕೇಂದ್ರದಿಂದ ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತಾಗಿ ಸಭೆ ನಡೆಸಲಾಗುವುದು. ಶನಿವಾರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದರು. ಸಂಪುಟ ರಚನೆ ಬಗ್ಗೆ ಪಿಎಂ ಮೋದಿ ಜೊತೆ ಚರ್ಚೆ ಸಾಧ್ಯತೆ ಇಲ್ಲ ಆದರೆ ಜೆಪಿ ನಡ್ಡಾ ಅವರು ಏನು ಮಾರ್ಗದರ್ಶನ ನೀಡುತ್ತಾರೆ ಎಂದು ನೋಡುತ್ತೇನೆ. ಸಂಪುಟ ವಿಸ್ತರಣೆ ಆದ್ಯತೆ ವಿಚಾರವಾಗಿದೆ ಎಂದು ತಿಳಿಸಿದರು. ಕೇರಳದಲ್ಲಿ ಕೋವಿಡ್ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ದ.ಕ, ಕೊಡಗು ಹಾಗೂ ಮೈಸೂರು ಡಿಸಿಗಳ ಜೊತೆ ಮಾತನಾಡುತ್ತೇನೆ. ಕೋವಿಡ್ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ತಪಾಸಣೆ ಬಿಗಿಗೊಳಿಸಬೇಕು. ರೈಲ್ವೇ ನಿಲ್ದಾಣದಲ್ಲೂ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗುವುದು. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಡಿಸಿ ಎಸ್‌ಪಿಗಳ ಜೊತೆ ಸಭೆ ಮಾಡುತ್ತಾರೆ. ಶನಿವಾರ ವಿಡಿಯೋ ಸಂವಾದದ ಮೂಲಕ ಇತರ ಜಿಲ್ಲೆಗಳ ಡಿಸಿ ಎಸ್‌ಪಿಗಳ ಜೊತೆಗೆ ಸಂವಾದ ನಡೆಸುತ್ತೇನೆ ಎಂದು ತಿಳಿಸಿದರು. ಆರೋಗ್ಯ ಅಧಿಕಾರಿಗಳ ಜೊತೆಗೂ ಸಂವಾದ ನಡೆಸಲಾಗುವುದು. ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಚಿವಾಕಾಂಕ್ಷಿಗಳ ಬೇಡಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ರಾಷ್ಟ್ರೀಯ ಪಕ್ಷ ಇದಕ್ಕೆ ಶಕ್ತಿ ಹಾಗೂ ಉತ್ತಮ ನಾಯಕತ್ವ ಇದೆ. ಸಹಜವಾಗಿ ಆಕಾಂಕ್ಷಿಗಳು ಇದ್ದಾರೆ. ಎಲ್ಲವನ್ನು ನಿಭಾಯಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದರು. ಇನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಪಟ್ಟಿ ಸುಳ್ಳಿನ ಕಂತೆ ಅದಕ್ಕೆ ಸರಿಯಾದ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು. ರಾಜನಾಥ್ ಸಿಂಗ್ ಭೇಟಿಯಾದ ಬೊಮ್ಮಾಯಿ ನೂತನ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ನವದೆಹಲಿಯಲ್ಲಿ ಶುಕ್ರವಾರ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಆಗಲಿದ್ದಾರೆ.


from India & World News in Kannada | VK Polls https://ift.tt/3faZFrR

ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು: ಹುಬ್ಬಳ್ಳಿ 'ಕೈ' ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ

ಹುಬ್ಬಳ್ಳಿ: 'ನಾನು ಬಂಗಾರಪ್ಪನವರ ಗರಡಿಯಲ್ಲಿ ಬೆಳೆದವನು. ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ನನ್ನ ಭಾಗ್ಯ' ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದರು. ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಬೆಳಗಾವಿ ವಿಭಾಗ‌ಮಟ್ಟದ ಸಮಾವೇಶದಲ್ಲಿ, ಶಿವಮೊಗ್ಗ ಜಿಲ್ಲೆಯ ಜೆಡಿಎಸ್ ಮುಖಂಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದರು. ತಮ್ಮ ಅನೇಕ ಬೆಂಬಲಿಗರೊಂದಿಗೆ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾದರು. 'ಕಳೆದ ಹಲವು ದಿನಗಳಿಂದ ಮಧುಗೆ ನಾನು ಗಾಳ ಹಾಕಿದ್ದೆ. ಆದರೆ ಆ ಮೀನು ಕಚ್ಚಲಿಲ್ಲ. ಕಚ್ಚಿದ್ದರೆ ಈ ವೇಳೆಗಾಗಲೇ ಅವರು ಮಾಜಿ ಮಂತ್ರಿಯಾಗಿರುತ್ತಿದ್ದರು. ಆದರೆ ಇವಾಗ ಅವರನ್ನು ಬಲೆ ಹಾಕಿ ಕರೆದುಕೊಂಡು ಬಂದಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಹಾಗೂ ಬಂಗಾರಪ್ಪ ನಡುವೆ ಬಹಳ ನಂಟಿದೆ. ಸದ್ಯ ಅವರು ಇತಿಹಾಸ ಹಾಗೂ ಭವಿಷ್ಯದ ಸೇತುವೆಯಾಗಿದ್ದಾರೆ. ಬಂಗಾರಪ್ಪನವರಿಗೆ ಗಾಂಧಿ ಕುಟುಂಬದ ಜೊತೆ ಉತ್ತಮ ಸಂಬಂಧವಿತ್ತು. ಮಧು ಬಂಗಾರಪ್ಪನವರಿಗೂ ಸೋನಿಯಾ, ರಾಹುಲ್ ಗಾಂಧಿ ಆಶೀರ್ವಾದ ಇರುತ್ತದೆ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಹೇಳಿದರು. ಮಧು ಬಂಗಾರಪ್ಪ ಅವರಿಗೆ ತ್ರಿವರ್ಣ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಅನ್ನು ಯಾರಿಂದಲೂ ಅಳಿಸಲಾಗದು. ನಮ್ಮ ಸಮಯ ಸರಿ ಇರಲಿಲ್ಲ. ಈಗ ಎಲ್ಲವೂ ಬದಲಾಗುತ್ತಿದೆ. ಕಾಂಗ್ರೆಸ್ ಒಂದು ಶಕ್ತಿಯಾಗಿ ದೇಶ ಮತ್ತು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಸುರ್ಜೆವಾಲ, ಕಾರ್ಯಕರ್ತರು ಪಕ್ಷಕ್ಕೆ ಹೊಸಬರನ್ನು ಕರೆತರಬೇಕು ಎಂದರು. 'ಬಂಗಾರಪ್ಪ ಜಾತಿಯ ನಾಯಕರಲ್ಲ''ದಿವಂಗತ ಬಂಗಾರಪ್ಪನವರು ಕೇವಲ ಒಂದು ಜಾತಿಯ ನಾಯಕರಾಗಿರಲಿಲ್ಲ. ಅವರೊಬ್ಬ ಸಮೂಹ ನಾಯಕರಾಗಿದ್ದರು. ಇಡೀ ರಾಜ್ಯ ಒಪ್ಪುವಂತ ನಾಯಕರಾಗಿದ್ದರು. ಮಧು ಬಂಗಾರಪ್ಪನವರಿಗೂ ಆ ಶಕ್ತಿ ಇದೆ. ಇಡೀ ರಾಜ್ಯದಲ್ಲಿ ಅವರಿಗೆ ಬೆಂಬಲಿಗರಿದ್ದರು. ಅದನ್ನ ನೀವು ಮುಂದುವರೆಸಬೇಕು' ಎಂದು ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಹೇಳಿದರು. ಈ ಸನ್ನಿವೇಶ ಹೇಗಿದೆ ಅಂದರೆ ಯಡಿಯೂರಪ್ಪ ರಾಜಕೀಯ ಅಂತ್ಯ ಆಗುತ್ತಿದೆ. ಅವರನ್ನ ಸಿಎಂ ಸ್ಥಾನದಿಂದ ತೆಗೆದಿದ್ದಾರೆ. ನೀವು ಕಾಂಗ್ರೆಸ್‌ಗೆ ಬಂದಿದ್ದೀರಿ. ಬಂಗಾರಪ್ಪನವರ ವಾರಸುದಾರರಾಗಿ ಕೆಲಸ ಮಾಡಿ. ಇಡೀ ರಾಜ್ಯ ಸುತ್ತಾಡುವ ಶಕ್ತಿ ಇದೆ. ಬಂಗಾರಪ್ಪನರು ಸಿಎಂ ಆಗಿದ್ದಾಗ ನಾನು ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಬಂಗಾರಪ್ಪನವರಿಲ್ಲದೆ ಕಾಂಗ್ರೆಸ್ ಏನು ನಷ್ಟ ಆಗಿತ್ತೋ, ಅದನ್ನು ತುಂಬೋ ಕೆಲಸ ನೀವು ಮಾಡಬೇಕು ಎಂದು ಸಲಹೆ ನೀಡಿದರು. ಮಧು ಬಂಗಾರಪ್ಪ ಸೇರ್ಪಡೆಜೆಡಿಎಸ್ ನಾಯಕರಾಗಿದ್ದ ಮಧು ಬಂಗಾರಪ್ಪ, ಕೆಲವು ತಿಂಗಳಿಂದ ಪಕ್ಷದ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿತ್ತು. ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ರಣದೀಪ್ ಸುರ್ಜೆವಾಲ, ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಬಾವುಟ ‌ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಅಲ್ಲಂ ವೀರಭದ್ರಪ್ಪ, ಕೆ.ಎಚ್. ‌ಮುನಿಯಪ್ಪ,‌ ಎ.ಆರ್. ‌ಪಾಟೀಲ, ಎಚ್.ಕೆ. ಪಾಟೀಲ್, ‌ಶಾಸಕ‌ ಪ್ರಸಾದ ಅಬ್ಬಯ್ಯ, ಎ.ಎಂ.‌ ಹಿಂಡಸಗೇರಿ, ಕೆ.ಬಿ.‌ಕೋಳಿವಾಡ, ಐ.ಜಿ.‌ಸನದಿ, ಅಲ್ತಾಫ ಹಳ್ಳೂರ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.


from India & World News in Kannada | VK Polls https://ift.tt/37a9dPm

ಭಾರತ ಹಾಕಿ ತಂಡದ ಕ್ವಾರ್ಟರ್‌ ಫೈನಲ್ ಕನಸು ಜೀವಂತ!

ಬೆಂಗಳೂರು: ಭಾರತದ ಪಾಲಿಗೆ ಶುಕ್ರವಾರ ಶುಭದಿನ. ಏಕೆಂದರೆ ಮೊದಲಿಗೆ ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್‌ ಭಾರತಕ್ಕೆ ಕ್ರೀಡಾಕೂಟದಲ್ಲಿ ಪದಕ ಖಾತ್ರಿ ಪಡಿಸಿದರೆ, ಅತ್ತ ವೈಫಲ್ಯದಿಂದ ಹೊರಬಂದ ಭಾರತ ಮಹಿಳಾ ತಂಡ ಕ್ವಾರ್ಟರ್‌ ಫೈನಲ್‌ ಹಾದಿಯಲ್ಲಿ ಜೀವಂತವಾಗಿ ಉಳಿದಿದೆ. ಆರು ತಂಡಗಳ ನಡುವಣ ಗ್ರೂಪ್ ಹಂತದ ಕಾದಾಟದಲ್ಲಿ ನೆದರ್ಲೆಂಡ್ಸ್‌ (5-1), ಜರ್ಮನಿ (2-0) ಮತ್ತು ಗ್ರೇಟ್‌ ಬ್ರಿಟನ್ (4-1) ಎದುರು ಸೋತು ಸುಣ್ಣವಾಗಿದ್ದ ರಾಣಿ ರಾಮ್‌ಪಾಲ್‌ ಸಾರಥ್ಯದ ಭಾರತದ ಮಹಿಳಾ ಹಾಕಿ ತಂಡಕ್ಕೆ ಅಂತಿಮ 8ರ ಘಟ್ಟಕ್ಕೆ ಕಾಲಿಡಲು ಶುಕ್ರವಾರ ಅಪಾಯಕಾರಿ ಐರ್ಲೆಂಡ್‌ ಎದುರು ಗೆಲುವು ಅನಿವಾರ್ಯವಾಗಿತ್ತು. ಇತ್ತಂಡಗಳಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದ ಕಾರಣ ತುರುಸಿನ ಪೈಪೋಟಿ ಆರಂಭದಿಂದಲೂ ಕಂಡುಬಂದಿತು. ಎರಡೂ ತಂಡದ ಆಟಗಾರ್ತಿಯರು ಗೋಲ್‌ಗಳಿಕೆಗೆ ಹಲವು ಬಾರಿ ಪ್ರಯತ್ನ ಮಾಡಿದರೂ ಯಶಸ್ಸು ಕೈ ಹಿಡಿದಿರಲಿಲ್ಲ. ಆದರೆ, ಅಂತಿಮ ಕ್ವಾರ್ಟರ್‌ನಲ್ಲಿ ಪಂದ್ಯ ಮುಕ್ತಾಯಕ್ಕೆ ಇನ್ನು ಕೇವಲ 3 ನಿಮಿಷಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ ಭಾರತ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಗೆಲುವಿನ ಗೋಲ್‌ ಬಾರಿಸಿದರು. ಗೋಲ್‌ ಪೋಸ್ಟ್‌ನ ಸಮೀಪದಲ್ಲಿ ರಾಣಿ ಬಾರಿಸಿದ ಚೆಂಡು ನವನೀತ್‌ ಕೌರ್‌ ಅವರ ಸ್ಟಿಕ್‌ಗೆ ಬಡಿದು ದಿಕ್ಕು ಬದಲಾಯಿಸಿದರೂ ಗೋಲ್‌ ಪೆಟ್ಟಿಗೆ ಪ್ರವೇಶಿಸಿತ್ತು. ಅಂತಿಮವಾಗಿ 1-0 ಗೋಲ್‌ಗಳ ರೋಚಕ ಗೆಲುವು ಭಾರತ ತಂಡದ ಕೈ ಹಿಡಿಯಿತು. 'ಎ' ಗುಂಪಿನಲ್ಲಿ ಸ್ಪರ್ಧಿಸುತ್ತಿರುವ ಭಾರತ ತಂಡಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದೆ. ಈ ಗುಂಪಿನಲ್ಲಿ ಸತತ ನಾಲ್ಕು ಸೋಲಿನೊಂದಿಗೆ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಎದುರು ಭಾರತ ಜುಲೈ 31ರಂದು (ಶನಿವಾರ) ಸೆಣಸಲಿದ್ದು, ಗೆಲುವು ಸಿಕ್ಕರೆ ಸುಲಭವಾಗಿ ಕ್ವಾರ್ಟರ್‌ ಫೈನಲ್ಸ್‌ಗೆ ಕಾಲಿಡುವ ಸಾಧ್ಯತೆ ಇದೆ. ಅತ್ತ ಐರ್ಲೆಂಡ್‌ ತಂಡಕ್ಕೂ 8ರ ಘಟ್ಟ ತಲುಪುವ ಅವಕಾಶ ಇದೇ ಆದರೂ, ಈ ಸಲುವಾಗಿ ಬಲಿಷ್ಠ ಗ್ರೇಟ್‌ ಬ್ರಿಟನ್‌ ಎದುರು ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಬೇಕಿದೆ. ಹೀಗಾಗಿ ಭಾರತ ತಂಡಕ್ಕೆ ನಾಕ್‌ಔಟ್‌ ಹಂತ ಪ್ರವೇಶಿಸುವ ಉತ್ತಮ ಅವಕಾಶವಿದೆ. ಗ್ರೂಪ್‌ ಹಂತದಲ್ಲಿ ಅಗ್ರಸ್ಥಾನ ಪಡೆಯುವ ನಾಲ್ಕು ತಂಡಗಳಿಗೆ ನಾಕ್‌ಔಟ್‌ ಹಂತ ತಲುಪುವ ಅರ್ಹತೆ ಸಿಗಲಿದೆ. 'ಎ' ಗುಂಪಿನಲ್ಲಿ ಈಗಾಗಲೇ ನೆದರ್ಲೆಂಡ್ಸ್‌, ಜರ್ಮನಿ ಮತ್ತು ಗ್ರೇಟ್‌ ಬ್ರಿಟನ್‌ ಅರ್ಹತೆ ಪಡೆದಾಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಭಾರತ ಮತ್ತು ಐರ್ಲೆಂಡ್‌ ನಡುವೆ ಪೈಪೋಟಿಯಿದೆ. ರಾಣಿ ರಾಮ್‌ಪಾಲ್‌ ಬಾರಿಸಿದ ಏಕೈಕ ಗೋಲ್‌ನ ವಿಡಿಯೋವನ್ನು ಈ ವೀಕ್ಷಿಸಬಹುದಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2WADVPE

ನನ್ನನ್ನು ಮುಖ್ಯಮಂತ್ರಿಯಂತೂ ಮಾಡಲಿಲ್ಲ, ಡಿಸಿಎಂ ಆದರೂ ಮಾಡಲಿ: ಈಶ್ವರಪ್ಪ ಬೇಡಿಕೆ!

ಮೈಸೂರು: ತಮ್ಮನ್ನು ಮುಖ್ಯಮಂತ್ರಿಯಂತೂ ಮಾಡಲಿಲ್ಲ, ಉಪ ಮುಖ್ಯಮಂತ್ರಿಯನ್ನಾದರೂ ಮಾಡಲಿ ಎಂದು ಮಾಜಿ ಸಚಿವ ಹೇಳಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಪಕ್ಷಕ್ಕಾಗಿ ಹಲವು ವರ್ಷ ದುಡಿದಿದ್ದೇನೆ. ಹೀಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಬಹುದು ಎಂದು ಬೆಂಬಲಿಗರು ನಿರೀಕ್ಷೆ ಮಾಡಿದ್ದರು. ಪಕ್ಷದ ಹೈಕಮಾಂಡ್ ಬಸವರಾಜು ಬೊಮ್ಮಾಯಿ ಅವರನ್ನು ಸಿಎಂ ಮಾಡಿದೆ. ಈಗ ಈಶ್ವರಪ್ಪ ಉಪಮುಖ್ಯಮಂತ್ರಿ ಆಗಲಿ ಅಂತ ಸ್ವಾಮೀಜಿಗಳು, ಬೆಂಬಲಿಗರು ಮತ್ತು ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹಿರಿತನ ಪರಿಗಣಿಸಿ ಹುದ್ದೆ ನೀಡುವ ನಿರೀಕ್ಷೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ, ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟಿಲ್ಲ. ಆದರೆ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಕೆಲವು ಗೊಂದಲಗಳು ಇದ್ದಿದ್ದು ನಿಜ. ಆದರೆ ಬಿಜೆಪಿಯ ಎಲ್ಲ ಗೊಂದಲಗಳನ್ನೂ ಹೈಕಮಾಂಡ್ ಬಗೆಹರಿಸಿದೆ ಎಂದು ಹೇಳಿದರು. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಬಿಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ. ನಮ್ಮಲ್ಲಿ ಇದ್ದ ಗೊಂದಲ ಬಗೆಹರಿದಿದೆ. ಆದರೆ ಈಗ ಕಾಂಗ್ರೆಸ್‌ನಲ್ಲಿ ಗೊಂದಲ ಶುರುವಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ತನ್ವೀರ್ ಸೇಠ್, ಎಂ.ಬಿ.ಪಾಟೀಲ್ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದಾರೆ. ಇವರಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಅಂತ ಅವರ ಹೈಕಮಾಂಡ್ ಘೋಷಿಸಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.


from India & World News in Kannada | VK Polls https://ift.tt/3BUWOwS

Tokyo Olympics: ಭಾರತಕ್ಕೆ ಪದಕ ಖಚಿತಪಡಿಸಿದ ಬಾಕ್ಸರ್‌ ಲೊವ್ಲಿನಾ!

ಟೋಕಿಯೋ (ಜಪಾನ್‌) : ಭಾರತದ ಮಹಿಳಾ ಬಾಕ್ಸರ್‌ ಅವರು 69 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಚೈನೀಸ್‌ ಬಾಕ್ಸರ್‌ ನೀನ್‌-ಚಿನ್‌ ಚೆನ್‌ ವಿರುದ್ಧ ಗೆಲುವು ಸಾಧಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ಖಚಿತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ನಡೆದಿದ್ದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಲೊವ್ಲಿನಾ ಬೊರ್ಗೊಹೈನ್‌, 4-1 ಅಂತರದಲ್ಲಿ ಎದುರಾಳಿ ಚಿನ್‌-ಚೆನ್‌ ವಿರುದ್ಧ ಗೆದ್ದು ವಿಶ್ವದ ಶ್ರೇಷ್ಠ ಕ್ರೀಡಾಕೂಟದಲ್ಲಿ ಚೊಚ್ಚಲ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆದ್ದಿರುವ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಭಾರತೀಯ ಬಾಕ್ಸರ್‌ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ. ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತೀಯ ಬಾಕ್ಸರ್‌ ಗೆಲುವು ದಾಖಲಿಸಿದರೆ, ಫೈನಲ್‌ ತಲುಪುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಒಂದು ವೇಳೆ ಅಂತಿಮ ನಾಲ್ಕರ ಘಟ್ಟದಲ್ಲಿ ಸೋಲು ಅನುಭವಿಸಿದರೆ, ಕಂಚಿನ ಪದಕ ಮುಡಿಗೇರಿಸಿಕೊಳ್ಳಲಿದ್ದಾರೆ. ಆ ಮೂಲಕ ಭಾರತಕ್ಕೆ ಎರಡನೇ ಪದಕ ತಂದುಕೊಡಲಿದ್ದಾರೆ. 2008ರಲ್ಲಿ ವಿಜೇಂದರ್‌ ಸಿಂಗ್‌ ಹಾಗೂ 2012ರಲ್ಲಿ ಮೇರಿ ಕೋಮ್‌ ಭಾರತಕ್ಕೆ ವಿಭಾಗದಲ್ಲಿ ಭಾರತಕ್ಕೆ ಪದಕ ತಂದುಕೊಟ್ಟಿದ್ದರು. ಈ ಇಬ್ಬರೂ ಬಾಕ್ಸರ್‌ಗಳು ಕಂಚಿನ ಪಂದಕ ಗೆದ್ದಿದ್ದರು. ಆದರೆ, ಈ ಬಾರಿ ಲೊವ್ಲಿನಾ ಬೊರ್ಗೊಹೈನ್‌ ಅವರು ಇದಕ್ಕಿಂತ ಉತ್ತಮ ಸಾಧನೆ ಮಾಡುವ ಹಾದಿಯಲ್ಲಿದ್ದಾರೆ. ಒಂದು ವೇಳೆ ಬೆಳ್ಳಿ ಅಥವಾ ಚಿನ್ನದ ಪದಕ ಗೆದ್ದರೆ, ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್‌ ಎಂಬ ದಾಖಲೆಗೆ ಲೊವ್ಲಿನಾ ಭಾಜನರಾಗಲಿದ್ದಾರೆ. ಇದಕ್ಕೂ ಮುನ್ನ ಭಾರತದ ಬಾಕ್ಸರ್‌ ಸಿಮ್ರಾನ್‌ಜಿತ್‌ ಕೌರ್‌ ಅವರು 60 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ ಸೀಸೊಂಡಿ ವಿರುದ್ಧ 0-5 ಭಾರಿ ಅಂತರದಲ್ಲಿ ಸೋಲು ಅನುಭವಿಸಿದ್ದರು. ಆ ಮೂಲಕ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕಂಟದಿಂದ ಹೊರ ನಡೆದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3j5uQps

ಸಂಪುಟ ಸರ್ಕಸ್: ಹಿರಿಯರಿಗೆ ಕೈತಪ್ಪುತ್ತಾ ಮಂತ್ರಿಗಿರಿ?

ಬೆಂಗಳೂರು: ನೂತನ ಸಿಎಂ ಸಂಪುಟದಲ್ಲಿ ಯಾರ್ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಶುರುವಾಗಿದೆ. ಈಗಾಗಲೇ ಸಾಕಷ್ಟು ಜನರು ಲಾಬಿ ಶುರುಮಾಡಿಕೊಂಡಿದ್ದು ಯಡಿಯೂರಪ್ಪ ಸಂಪುಟದಲ್ಲಿ ಇದ್ದ ಹಿರಿಯ ಸಚಿವರಿಗೆ ಈ ಬಾರಿ ಮಂತ್ರಿಗಿರಿ ಕೈತಪ್ಪುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಹಿರಿಯರ ಲಿಸ್ಟ್‌ನಲ್ಲಿ ಯಾರಿದ್ದಾರೆ? ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಸಂಪುಟದಲ್ಲಿ ಜಗದೀಶ್ ಶೆಟ್ಟರ್‌, ಜೆ.ಸಿ ಮಾಧುಸ್ವಾಮಿ, ವಿ. ಸೋಮಣ್ಣ, ಕೆ.ಎಸ್ ಈಶ್ವರಪ್ಪ, ಸುರೇಶ್ ಕುಮಾರ್ ಹಿರಿಯ ಸಚಿವರಾಗಿದ್ದರು. ಈ ಪೈಕಿ ಜಗದೀಶ್ ಶೆಟ್ಟರ್‌ ಅವರು ನಾನು ಸಚಿವನಾಗಿ ಇರುವುದಿಲ್ಲ ಎಂದು ಈಗಾಗಲೇ ಬಹಿರಂಗ ಹೇಳಿಕೆ ನೀಡಿದ್ದಾರೆ. ಬದಲಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಕೆ.ಎಸ್ ಈಶ್ವರಪ್ಪ ಅವರು ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದು ಸಚಿವ ಸ್ಥಾನ ಸಿಕ್ಕರೂ ಬೇಡ ಎನ್ನಲ್ಲ ಎಂದಿದ್ದಾರೆ. ಇನ್ನುಳಿದಂತೆ ವಿ. ಸೋಮಣ್ಣ, ಜೆ.ಸಿ ಮಾಧುಸ್ವಾಮಿ, ಸುರೇಶ್ ಕುಮಾರ್ ಅವರನ್ನು ಈ ಬಾರಿ ಸಂಪುಟದಲ್ಲಿ ಹಿರಿತನ ಎಂಬ ಕಾರಣಕ್ಕಾಗಿ ಕೈಬಿಡಲಾಗುತ್ತಾ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಹೊಸ ಮುಖಗಳಿಗೆ ಆದ್ಯತೆ ಹಿರಿಯರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸ ಮುಖಗಳಿಗೆ ಆದ್ಯತೆ ನೀಡುವ ಕಸರತ್ತು ನಡೆಯುತ್ತಿದೆ ಎನ್ನಲಾಗಿದೆ. ಆದರೆ ಇದು ಅಷ್ಟೊಂದು ಸುಲಭದ ಮಾತು ಅಲ್ಲ. ಅನುಭವಿ ಸಚಿವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕೈಬಿಟ್ಟರೆ ಅದು ಬೇರೆಯದ್ದೇ ರೀತಿಯ ಪರಿಣಾಮವನ್ನು ಬೀರಬಹುದು. ಈ ನಿಟ್ಟಿನಲ್ಲಿ ಎಲ್ಲ ಹಿರಿಯರನ್ನು ಕೈಬಿಡದೆ ಒಂದಿಷ್ಟು ಹೊಸ ಮುಖಗಳನ್ನು ಸೇರ್ಪಡೆ ಮಾಡುವ ಮೂಲಕ ಸಂಪುಟ ಸರ್ಜರಿ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅಂತಿಮ ನಿರ್ಧಾರ ವರಿಷ್ಠರ ಕೈಯಲ್ಲಿ ಸಂಪುಟ ರಚನೆ ಕಸರತ್ತು ಶುರುವಾದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗಿದೆ. ಕೆಲವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಿದರೆ ಮತ್ತೆ ಕೆಲವರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಯಾರು ಬೊಮ್ಮಾಯಿ ಸಂಪುಟದಲ್ಲಿ ಇನ್‌ ಆಗುತ್ತಾರೆ ಯಾರು ಔಟ್ ಆಗುತ್ತಾರೆ ಎಂಬುವುದು ಶೀಘ್ರದಲ್ಲೇ ನಿರ್ಧಾರವಾಗಲಿದೆ.


from India & World News in Kannada | VK Polls https://ift.tt/3BZTr82

17 ತಿಂಗಳ ಬಳಿಕ ವಿದೇಶಿ ಪ್ರವಾಸಿಗರ ಮೇಲಿನ ನಿರ್ಬಂಧ ತೆರವುಗೊಳಿಸಿದ ಸೌದಿ ಅರೇಬಿಯಾ

ರಿಯಾದ್: ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುಮಾರು 17 ತಿಂಗಳ ಕಾಲ ತನ್ನ ಗಡಿಯನ್ನು ಮುಚ್ಚಿದ್ದ , ಸಂಪೂರ್ಣವಾಗಿ ಲಸಿಕೆಗಳನ್ನು ಪಡೆದುಕೊಂಡ ವಿದೇಶಿಗರಿಗೆ ಗಡಿಗಳನ್ನು ಮತ್ತೆ ತೆರೆಯುವುದಾಗಿ ಶುಕ್ರವಾರ ಘೋಷಿಸಿದೆ. ಆದರೆ, ಉಮ್ರಾಹ್ ಯಾತ್ರೆಯ ಮೇಲಿನ ನಿರ್ಬಂಧ ತೆರವುಗೊಳಿಸುವ ಬಗ್ಗೆ ರಿಯಾದ್ ಯಾವುದೇ ಪ್ರಕಟಣೆ ನೀಡಿಲ್ಲ. ಪ್ರತಿ ವರ್ಷ ಜಗತ್ತಿನ ಲಕ್ಷಾಂತರ ಮಂದಿ ಮುಸ್ಲಿಮರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ಯಾವುದೇ ಸಮಯದ ಮಿತಿಯಿಲ್ಲ. 'ರಾಜಮನೆತನವು ವಿದೇಶಿ ಪ್ರವಾಸಿಗರಿಗೆ ಬಾಗಿಲು ತೆರೆಯುವುದಾಗಿ ಸಚಿವಾಲಯ ಪ್ರಕಟಿಸಿದೆ. ಇದು ಪ್ರವಾಸಿ ವೀಸಾದಾರರ ಮೇಲಿನ ನಿರ್ಬಂಧವನ್ನು ತೆರವುಗೊಳಿಸುತ್ತಿದೆ. ಆಗಸ್ಟ್ 1ರಿಂದ ಇದು ಜಾರಿಯಾಗಲಿದೆ' ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಸೌದಿ ಅನುಮೋದಿಸಿದ ಕಂಪೆನಿಗಳಾದ ಫೈಜರ್, ಆಸ್ಟ್ರಾಜೆನಿಕಾ, ಮಾಡೆರ್ನಾ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳ ಎರಡೂ ಡೋಸ್‌ಗಳನ್ನು ಪಡೆದ ಸೌದಿಗೆ ಪ್ರಯಾಣಿಸಬಹುದು. ಅವರಿಗೆ ಯಾವುದೇ ಸಾಂಸ್ಥಿಕ ಕ್ವಾರೆಂಟೈನ್ ಅಗತ್ಯವಿಲ್ಲ. ಆದರೆ ಕಳೆದ 72 ಗಂಟೆಗಳ ಒಳಗೆ ಪಡೆದುಕೊಂಡ ಪಿಸಿಆರ್ ಕೋವಿಡ್ 19 ನೆಗೆಟಿವ್ ವರದಿಯನ್ನು ಮತ್ತು ತಮ್ಮ ವಿವರಗಳನ್ನು ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದೆ.


from India & World News in Kannada | VK Polls https://ift.tt/3lcbq4U

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...