ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಯಾರಾಗಬೇಕು ಎಂಬ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಿಎಂ ಸ್ಥಾನಕ್ಕೆ ಇಬ್ಬರು ಮೂವರು ಆಕಾಂಕ್ಷಿಗಳು ಇರುವುದು ಸಹಜ. ಪ್ರತಿ ಬಾರಿ ಚುನಾವಣೆ ಗೆಲುವಿನ ನಂತರ ಹೀಗಾಗುತ್ತದೆ. ಅಂತಿಮವಾಗಿ ಒಬ್ಬರನ್ನು ಪಕ್ಷದ ಶಾಸಕರು ಹಾಗೂ ಹೈಕಮಾಂಡ್ ಆಯ್ಕೆ ಮಾಡುತ್ತದೆ. ಈ ಬಗ್ಗೆ ಚರ್ಚೆಯಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎಲ್ಲರೂ ಶ್ರಮಿಸುತ್ತೇವೆ. ಸಂಘಟನೆಯಲ್ಲಿ ಕೊರತೆಯಾದರೆ ಹಾನಿಯಾಗುತ್ತದೆ, ಪರಮೇಶ್ವರ್ ಹಾಗೂ ಖರ್ಗೆ ಅವರೂ ಸಿಎಂ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ ಎಂದು ಹೇಳಿದರು. ಆಯಾ ನಾಯಕರ ಬಗ್ಗೆ ಅಭಿಮಾನಿಗಳು ಸಿಎಂ ಆಗಬೇಕು ಎಂದು ಹೇಳಿಕೆ ನೀಡುವುದು ಸಹಜ. ನಾನು ನಿನ್ನೆ ಇದನ್ನೇ ಹೇಳಿದ್ದೇನೆ, ಯಾರದ್ದಾದರೂ ಬಾಯಿ ಮುಚ್ಚಿಸಬೇಕು ಎಂದಿಲ್ಲ. ಕಾಂಗ್ರೆಸ್‌ನಲ್ಲಿ ಬಹುದೊಡ್ಡ ಕಾರ್ಯಕರ್ತರ ಪಡೆಯಿದೆ, ಹೀಗಾಗಿ ಅಭಿಮಾನಿಗಳ ಹೇಳಿಕೆ ನಿಯಂತ್ರಿಸಲು ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನೀವು ಸಿಎಂ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ‘ನಾನು ಸಿಎಂ ಸ್ಥಾನದ ಆಕಾಂಕ್ಷಿಗಳ ಪೈಪೋಟಿಯಲ್ಲಿ ಇಲ್ಲ. ನನಗೆ ಇನ್ನೂ ತಾಳ್ಮೆ ಹಾಗೂ ಸಮಯವಿದೆ. ಮುಂದೊಂದು ದಿನ ನನಗೂ ಸಮಯ ಬರಲಿದೆ' ಎಂದು ಆಶಯ ವ್ಯಕ್ತಪಡಿಸಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ನಮ್ಮನ್ನು ಬಿಟ್ಟು ಬೇರೆ ಯಾರೂ ಬೆಳಗಾವಿ ಕ್ಷೇತ್ರ ಕೇಳುವುದಿಲ್ಲ, ನಾವು ಇಲ್ಲ ಎನ್ನಲೂ ಬರುವುದಿಲ್ಲ. ಮುಂಬರುವ ಚುನಾವಣೆಗೆ ನಾನು ಇಲ್ಲವೇ ನನ್ನ ಇಬ್ಬರು ಮಕ್ಕಳಲ್ಲಿ ಒಬ್ಬರು ಸ್ಪರ್ಧಿಸಬಹುದು. ನನ್ನ ಮಕ್ಕಳು ರಾಜಕೀಯದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷೆ ಮಾಡುತ್ತಿದ್ದೇನೆ. ಅವರಿಗೆ ಆಸಕ್ತಿಯಿದ್ದರೆ ಬರುತ್ತಾರೆ. ಒತ್ತಾಯಪೂರ್ವಕವಾಗಿ ನಾವು ರಾಜಕಾರಣಕ್ಕೆ ಕರೆ ತರಬಾರದು. ಮಕ್ಕಳು ರಾಜಕೀಯಕ್ಕೆ ಬಂದರೆ ನನ್ನ ಒತ್ತಡ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂಬ ಶಾಸಕ ಜಮೀರ್ ಅಹ್ಮದ್ ಹೇಳಿಕೆಗೆ ನಮ್ಮಲ್ಲಿ ಜಮೀರ್ ಆಲ್ ರೌಂಡರ್ ಇದ್ದಂತೆ. ಅವರು ಗೆಲ್ಲಬೇಕಾದಾಗ ಸಿಕ್ಸರ್ ಬಾರಿಸುತ್ತಾರೆ. ಯಾರಿಗೆ ಯಾರೂ ಹೀಗೆ ಹೇಳಿಕೊಡುವುದಿಲ್ಲ, ಅವರವರ ಅಭಿಮಾನದಿಂದ ಹೇಳುತ್ತಾರೆ. ಕೆಲವರು ಸಿದ್ದರಾಮಯ್ಯ, ಕೆಲವರು ಶಿವಕುಮಾರ್ ಹಾಗೂ ಅಭಿಮಾನಿಗಳು ನನ್ನ ಹೆಸರೂ ಹೇಳುತ್ತಾರೆ. ಈ ಬಗ್ಗೆ ತಪ್ಪು ಗ್ರಹಿಕೆ ಬೇಡ' ಎಂದು ಉತ್ತರಿಸಿದರು. 'ರಮೇಶ್ ಜಾರಕಿಹೊಳಿ ರಾಜೀನಾಮೆ ವಿಷಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಈ ಬಗ್ಗೆ ಅವರನ್ನೇ ಕೇಳಬೇಕು. ನಾವು ವಿಪಕ್ಷದವರು ಆ ಕುರಿತು ಮಾತನಾಡುವುದಿಲ್ಲ. ಬಿಜೆಪಿ ಸೇರ್ಪಡೆಯಾದ ನಂತರದ ಸ್ಥಿತಿಯ ಬಗ್ಗೆ ಕಾಂಗ್ರೆಸ್ ಬಿಟ್ಟು ಹೋದವರೇ ಹೇಳಬೇಕು. ಈಗಾಗಲೇ ವಿಶ್ವನಾಥ್ ಅಲ್ಲಿನ ಸ್ಥಿತಿ ಬಗ್ಗೆ ಹೇಳುತ್ತಿದ್ದಾರೆ. ಅವರು ಕಾಂಗ್ರೆಸ್‌ಗೆ ವಾಪಸ್ಸಾಗುವ ಚರ್ಚೆ ನಡೆದಿಲ್ಲ, ಹೈಕಮಾಂಡ್ ಹೇಳಿದ ಹಾಗೆ ನಾವು ನಡೆದುಕೊಳ್ಳುತ್ತೇವೆ' ಎಂದು ಹೇಳಿದರು.
from India & World News in Kannada | VK Polls https://ift.tt/3xKFpnC