ಬೆಂಗಳೂರು: ಬರ್ತ ಡೇ ಪಾರ್ಟಿಯಲ್ಲಿ ಸ್ನೇಹಿತ ನೀಡಿದ ಸೇವಿಸಿದ ಯುವಕನ ದೇಹದಲ್ಲಿ ವ್ಯತ್ಯಾಸಗೊಂಡು ವೈದ್ಯರು ಆತನ ಮೊಣಕೈಯನ್ನೇ ತೆಗೆದಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಶ್ರೀನಿವಾಸನಗರದ ಮೋಹನ್ ತನ್ನ ಬಲಗೈ ಕಳೆದುಕೊಂಡಿರುವ . ಮೋಹನ್ ತನ್ನ ಸ್ನೇಹಿತ ಸಿರಿಂಜ್ ರೂಪದಲ್ಲಿ ನೀಡಿದ ಡ್ರಗ್ಸ್ ಪಡೆದು ಅಡ್ಡಪರಿಣಾಮ ಉಂಟಾಗಿದೆ ಎಂದು ಮೋಹನ್ ತಾಯಿ ನೀಲಾ ಎಂಬುವರು ನೀಡಿದ ದೂರಿನ ಮೇರೆಗೆ ಮನೋಜ್ ಎಂಬಾತನ ವಿರುದ್ಧ ಚಾಮರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ್ದ ಮೋಹನ್, ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ. ಈತನ ಸ್ನೇಹಿತ ಮನೋಜ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೇ 31ರಂದು ಬರ್ತ ಡೇ ಪಾರ್ಟಿಗೆ ಆಹ್ವಾನಿಸಿದ್ದ. ಪಾರ್ಟಿಯಲ್ಲಿ ಮನೋಜ್, ಮೋಹನ್‌ಗೆ ಮತ್ತು ಬರುವ ಮಾತ್ರೆ ಪುಡಿ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿದ್ದ ಎನ್ನಲಾಗಿದೆ. ಮೋಹನ್ ಪಾರ್ಟಿ ಮುಗಿಸಿಕೊಂಡು ಎಂದಿನಂತೆ ಮನೆಗೆ ಬಂದಿದ್ದ. ಮೂರ್ನಾಲ್ಕು ದಿನಗಳ ಬಳಿಕ ಮೋಹನ್‌ಗೆ ಬಲಗೈಯಲ್ಲಿ ವಿಪರೀತ ಊತ ಕಂಡು ಬಂದಿದೆ. ಅಲ್ಲದೆ ಚಿಕ್ಕ ಚಿಕ್ಕ ಗುಳ್ಳೆ ಬಂದಿದ್ದರಿಂದ ತೀವ್ರ ನೋವು ಅನುಭವಿಸಿದ್ದ. ಈ ಹಿನ್ನೆಲೆಯಲ್ಲಿ ಸಂಜಯಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ತಪಾಸಣೆ ವೇಳೆ ಬಲಗೈನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಇದು ಬಲಗೈನ ಮೊಣಕೈವರೆಗೂ ವ್ಯಾಪಿಸಿದ್ದರಿಂದ ಶಸ್ತ್ರ ಚಿಕಿತ್ಸೆ ನಡೆಸಿ ಆತನ ಕೈಯನ್ನೇ ತೆಗೆದಿದ್ದಾರೆ. ಕಳ್ಳತನ ಮಾಡಿ ಜೈಲು ಸೇರಿರುವ ಸ್ನೇಹಿತಹಗಲಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮನೋಜ್, ರಾತ್ರಿಯಾಗುತ್ತಿದ್ದಂತೆ ಡ್ರಗ್ಸ್ ಚಟಕ್ಕೆ ದಾಸನಾಗಿ ಬೈಕ್ ಕಳ್ಳತನ ಮಾಡುತ್ತಿದ್ದ. ಗಾಡಿಯಲ್ಲಿ ತರಕಾರಿ ಮಾರುವ ಸೋಗಿನಲ್ಲಿ, ಮನೆ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿರುವುದನ್ನು ಗುರುತಿಸಿ, ಕತ್ತಲಾದ ಮೇಲೆ ವಾಪಸ್ ಬಂದು ಆ ಬೈಕ್ ಎಗರಿಸುತ್ತಿದ್ದ. ಕಳ್ಳತನದ ಜಾಡು ಹಿಡಿದ ಪೊಲೀಸರು ಜೂ.15ರಂದು ಈತನನ್ನು ಬಂಧಿಸಿ ಜೈಲಿಗಟ್ಟಿದ್ದರು. ಕಳೆದ ವರ್ಷ ಕೂಡ 12 ಬೈಕ್ ಕದ್ದು ಜೈಲಿಗೆ ಹೋಗಿ ಬಂದಿದ್ದು, ಚಾಮರಾಜಪೇಟೆ ಠಾಣೆಯ ಪೊಲೀಸರೇ ಬಂಧಿಸಿ ಜೈಲಿಗಟ್ಟಿದ್ದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗಬೇಡ ಎಂದು ಪೋಷಕರು ಎಷ್ಟೇ ಬುದ್ಧಿ ಮಾತು ಹೇಳಿದರೂ ಗಾಂಜಾ, ಡ್ರಗ್ಸ್, ಕುಡಿಯುವ ಚಟಕ್ಕೆ ದಾಸನಾಗಿದ್ದ. ಕಳ್ಳತನದಿಂದ ಬಂದ ಹಣವನ್ನು ದುಶ್ಚಟಗಳಿಗೆ ಬಳಸುತ್ತಿದ್ದ ಎನ್ನಲಾಗಿದೆ. ಸದ್ಯ ಜೈಲಿನಲ್ಲಿರುವ ಮನೋಜ್‌ನನ್ನು ಬಾಡಿ ವಾರೆಂಟ್ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.
from India & World News in Kannada | VK Polls https://ift.tt/3j8mSh7