ಹನುಮಂತನನ್ನು ಸಾಯಿಸುತ್ತಿರುವಾಗ ಶ್ರೀರಾಮ ಸುಮ್ಮನಿರುವುದು ಸರಿಯಲ್ಲ: ಮೋದಿ ಮೌನಕ್ಕೆ ಚಿರಾಗ್ ಪಾಸ್ವಾನ್ ಬೇಸರ

ಹೊಸದಿಲ್ಲಿ: ಅಪ್ಪ ಸ್ಥಾಪಿಸಿದ ಪಕ್ಷದಿಂದಲೇ ಹೊರದಬ್ಬಿಸಿಕೊಂಡಿರುವ ಲೋಕ ಜನಶಕ್ತಿ ಪಕ್ಷದ () ಮುಖ್ಯಸ್ಥ , ಬಿಜೆಪಿ ನಾಯಕರು ಹಾಗೂ ಪ್ರಧಾನಿ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎಂದು ಹೇಳಿಕೊಂಡಿದ್ದ ಪಾಸ್ವಾನ್, ತಮ್ಮ ವ್ಯಾಖ್ಯಾನವನ್ನು ನೆನಪಿಸಿಕೊಂಡಿದ್ದಾರೆ. 'ಹನುಮಾನ್‌ನನ್ನು ಕೊಲ್ಲುತ್ತಿರುವಾಗ ರಾಮ ಮೌನವಾಗಿರುವುದು ಸರಿಯಲ್ಲ' ಎಂದು ಎಲ್‌ಜೆಪಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದರೂ ತಮ್ಮ ಸಹಾಯಕ್ಕೆ ಧಾವಿಸದ ಮೋದಿ ಅವರ ಮೌನದ ಬಗ್ಗೆ ಚಿರಾಗ್ ಬೇಸರ ವ್ಯಕ್ತಪಡಿಸಿದ್ದಾರೆ. ಸತ್ಯಯುಗದಿಂದ ಈದಿನದವರೆಗೂ ಶ್ರೀರಾಮನನ್ನು ಪ್ರತಿ ಹೆಜ್ಜೆಯಲ್ಲಿಯೂ ಹನುಮಂತ ಬೆಂಬಲಿಸುತ್ತಾ ಬಂದಿರುವುದನ್ನು ರಾಮಾಯಣದಲ್ಲಿ ಕಂಡಿದ್ದೇವೆ. ಶ್ರೀರಾಮನೊಂದಿಗೆ ಪ್ರತಿ ಹೆಜ್ಜೆಯಲ್ಲಿಯೂ ಹಮಮಂತ ಜತೆಗಿದ್ದ. ಅದೇ ರೀತಿ ಪ್ರತಿ ಸಣ್ಣ ಮತ್ತು ದೊಡ್ಡ ನಿರ್ಧಾರಗಳಲ್ಲಿಯೂ ನರೇಂದ್ರ ಮೋದಿ ಅವರೊಂದಿಗೆ ಎಲ್‌ಜೆಪಿ ಜತೆಗಿತ್ತು ಎಂದಿದ್ದಾರೆ. 'ಹನುಮಂತನಂತೆಯೇ ಬಿಜೆಪಿ ಜತೆಗೆ ಪ್ರತಿ ನಿರ್ಧಾರದಲ್ಲಿಯೂ ಎಲ್‌ಜೆಪಿ ಜತೆಗಿತ್ತು. ಈಗ ಎಲ್‌ಜೆಪಿಗೆ ಬಿಕ್ಕಟ್ಟಿನ ಸಮಯ ಉಂಟಾಗಿದೆ. ಈ ವೇಳೆ ಬಿಜೆಪಿ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಹೇಗಾದರೂ ಬಗೆಹರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯ ಮೌನ ನನಗೆ ತೀವ್ರ ನೋವುಂಟುಮಾಡಿದೆ. ಆದರೂ ಈ ರಾಜಕೀಯ ಸಮಸ್ಯೆಯಲ್ಲಿ ಮಧ್ಯಪ್ರವೇಶಿಸಿ ಬಗೆಹರಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಾನು ಪ್ರಧಾನಿಯವರ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದೇನೆ' ಎಂದು ಚಿರಾಗ್ ಹೇಳಿದ್ದಾರೆ. ಪಕ್ಷದ ಚಿಹ್ನೆಯ ಮೇಲಿನ ಹಕ್ಕು ಉಳಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಚಿರಾಗ್ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಚಿರಾಗ್ ಅವರನ್ನು ಎಲ್‌ಜೆಪಿ ನಾಯಕತ್ವದಿಂದ ಹೊರಹಾಕಿರುವ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್, ರಾಷ್ಟ್ರೀಯ, ರಾಜ್ಯ ಪದಾಧಿಕಾರಿಗಳು ಮತ್ತು ವಿವಿಧ ಘಟಕಗಳ ಸಮಿತಿಗಳನ್ನು ಶನಿವಾರ ವಿಸರ್ಜಿಸಿದ್ದರು.


from India & World News in Kannada | VK Polls https://ift.tt/3A2QDpJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...