ಸಚಿವರು ಗುರುವಾರದಂದು ವಿಧಾನಸೌಧದ ಕಚೇರಿಯಲ್ಲಿರುವುದು ಕಡ್ಡಾಯ, ಅರುಣ್ ಸಿಂಗ್ ಸೂಚನೆ ಪಾಲನೆ ಆಗುತ್ತಾ?

ಬೆಂಗಳೂರು: ಗುರುವಾರದಂದು ಪ್ರತಿಯೊಬ್ಬ ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿದ್ದು ಶಾಸಕರು ಹಾಗೂ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಉಸ್ತುವಾರಿ ನೀಡಿರುವ ಸೂಚನೆ ಪಾಲನೆ ಆಗುತ್ತಾ ಎಂಬ ಕುತೂಹಲ ಇದೀಗ ಕೆರಳಿದೆ. ರಾಜ್ಯ ಬಿಜೆಪಿಯಲ್ಲಿ ತಲೆಧೋರಿದ್ದ ನಾಯಕತ್ವ ಗೊಂದಲ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಜೂನ್ 16 ರಂದು ಸಚಿವರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಚಿವರಿಗೆ ಕೆಲವೊಂದು ಸೂಚನೆಗಳನ್ನು ನೀಡಿದ್ದರು. ಅದರಂತೆ ಪ್ರತಿಯೊಬ್ಬ ಸಚಿವರು ಗುರುವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಇರಬೇಕು. ಶಾಸಕರು ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಸೂಚನೆ ನೀಡಿದ್ದರು. ಇದೀಗ ಅರುಣ್ ಸಿಂಗ್ ಸೂಚನೆ ನೀಡಿರುವ ಬಳಿಕ ಮೊದಲ ಗುರುವಾರ. ಆದರೆ ಎಷ್ಟು ಮಂದಿ ಸಚಿವರು ಅರುಣ್ ಸಿಂಗ್ ಅವರ ಸೂಚನೆಯನ್ನು ಪಾಲನೆ ಮಾಡುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಚಿವರು ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದು ಕನಿಷ್ಠ ಪಕ್ಷ ಶಾಸಕರ ಭೇಟಿಗೆ ಅವಕಾಶ ಕಲ್ಪಿಸಿ ಅವರ ಸಮಸ್ಯೆಗನ್ನು ಬಗೆಹರಿಸುತ್ತಾರಾ ಎಂಬುವುದು ಕಾದು ನೋಡಬೇಕಿದೆ. ಸಚಿವರು ಶಾಸಕರ ಬೇಡಿಕೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಈ ಕಾರಣಕ್ಕಾಗಿ ಕ್ಷೇತ್ರದ ಹಲವು ಸಮಸ್ಯೆಗಳು ಹಾಗೇ ಉಳಿದಿವೆ ಎಂಬ ಆರೋಪವನ್ನು ಕೆಲವು ಶಾಸಕರು ಮಾಡಿದ್ದರು. ಈ ನಿಟ್ಟಿನಲ್ಲಿ ಆಡಳಿತಕ್ಕೆ ಚುರುಕು ನೀಡುವ ಉದ್ದೇಶದಿಂದ ಸಚಿವರ ಜೊತೆಗಿನ ಸಭೆಯಲ್ಲಿ ಅರುಣ್ ಸಿಂಗ್ ಈ ಸೂಚನೆ ನೀಡಿದ್ದರು. ಆದರೆ ಇದು ಎಷ್ಟರ ಮಟ್ಟಿಗೆ ಪಾಲನೆ ಆಗಲಿದೆ ಎಂಬುವುದು ಇಂದು (ಗುರುವಾರ) ಗೊತ್ತಾಗಲಿದೆ.


from India & World News in Kannada | VK Polls https://ift.tt/3xSaWnR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...