ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ ಭಾರತದ ಝೈಕೋವ್-ಡಿ

ಹೊಸದಿಲ್ಲಿ: ಜಗತ್ತಿನ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಎನಿಸಿರುವ ತನ್ನ ಝೈಕೊವ್-ಡಿ ಲಸಿಕೆಯ ಅನುಮೋದನೆ ನೀಡುವಂತೆ ಮತ್ತೊಂದು ಸ್ವದೇಶಿ ಸಂಸ್ಥೆ ಮನವಿ ಮಾಡಿದೆ. ಮೂರು ಡೋಸ್‌ನ ಈ ಲಸಿಕೆಯು 'ಸೂಜಿ-ಮುಕ್ತ' ಮತ್ತು ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ಕಂಒಎನಿ ಹೇಳಿಕೊಂಡಿದೆ. ವರ್ಷಕ್ಕೆ 120 ಮಿಲಿಯನ್ ಡೋಸ್ ಲಸಿಕೆಗಳನ್ನು ಉತ್ಪಾದಿಸಲು ಕಂಪೆನಿ ಯೋಜಿಸಿದೆ. ಲಸಿಕೆಗೆ ಅನುಮೋದನೆ ದೊರೆತರೆ ಭಾರತದ ಔಷಧ ನಿಯಂತ್ರಕ ಪ್ರಾಧಿಕಾರವು ಅಂಗೀಕಾರ ನೀಡಿದ ಐದನೇ ಲಸಿಕೆ ಎನ್ನಲಾಗಿದೆ. ಭಾರತದಲ್ಲಿ ಈಗಾಗಲೇ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಅಮೆರಿಕದ ಮಾಡೆರ್ನಾ ಲಸಿಕೆಗಳಿಗೆ ಅನುಮೋದನೆ ದೊರಕಿದೆ. ತನ್ನ ಲಸಿಕೆಯು ಲಕ್ಷಣವಿರುವ ಕೋವಿಡ್ ಪ್ರಕರಣಗಳ ವಿರುದ್ಧ ಶೇ 66.6ರಷ್ಟು ಪರಿಣಾಮಕಾರಿ ಹಾಗೂ ಮಧ್ಯಮ ಹಂತದ ರೋಗದ ವಿರುದ್ಧ ಶೇ 100ರಷ್ಟು ಪರಿಣಾಮಕಾರಿಯಾಗಿದೆ. ಹಾಗೆಯೇ 12-18 ವರ್ಷದ ನಡುವಿನ ಮಕ್ಕಳಿಗೂ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದೆ. ಆದರೆ ಅದರ ಪ್ರಯೋಗದ ದತ್ತಾಂಶಗಳನ್ನು ಇನ್ನೂ ವಿಶ್ಲೇಷಣೆಗೆ ಒಳಪಡಿಸಿಲ್ಲ. ದೇಶಾದ್ಯಂತ 28,000ಕ್ಕೂ ಅಧಿಕ ಸ್ವಯಂಸೇವಕರ ಮೇಲೆ ಬೃಹತ್ ಪ್ರಮಾಣದ ಪ್ರಯೋಗ ನಡೆಸಿದ್ದು, ಝೈಕೋವ್-ಡಿ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ತೋರಿಸಿದೆ. ಇದರಲ್ಲಿ 12-18 ವರ್ಷದ ಸುಮಾರು 1,000 ಮಕ್ಕಳು ಕೂಡ ಭಾಗವಹಿಸಿದ್ದಾರೆ ಎಂದು ಝೈಡಸ್ ತಿಳಿಸಿದೆ. ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಸೋಕು ಪ್ರಸಾರ ಮಾಡುತ್ತಿದೆ ಎನ್ನಲಾಗಿರುವ ಹಾಗೂ ಭಾರತದಲ್ಲಿ ಎರಡನೆಯ ಅಲೆಗೆ ಕಾರಣವಾಗಿರುವ ಡೆಲ್ಟಾ ತಳಿಯ ಹರಡುವಿಕೆ ಮಧ್ಯೆ ತನ್ನ ಮೂರನೇ ಹಂತದ ಪ್ರಯೋಗ ನಡೆಸಲಾಗಿದೆ. ಹೀಗಾಗಿ ಇದು ಹೊಸ ರೂಪಾಂತರ, ಮುಖ್ಯವಾಗಿ ಡೆಲ್ಟಾ ಪ್ರಭೇದದ ವಿರುದ್ಧವೂ ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿದೆ ಎಂದು ಅದು ಹೇಳಿದೆ. ಮೂರು ಡೋಸ್ ಲಸಿಕೆಝೈಕೋವ್-ಡಿ ಲಸಿಕೆಯು ದೇಶದಲ್ಲಿ ಈವರೆಗೆ ನೀಡಲಾಗಿರುವ ಎರಡು ಡೋಸ್ ಲಸಿಕೆಗಳಂತಲ್ಲ. ಇದು ಮೂರು ಡೋಸ್ ಹೊಂದಿದ್ದು, ಸೂಜಿ-ರಹಿತ ವ್ಯವಸ್ಥೆಯಲ್ಲಿ ನೀಡಲಾಗುತ್ತದೆ. ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಲಾಗುತ್ತಿದೆ. ಆದರೆ ಕಳೆದ ಮೂರು ತಿಂಗಳಿನಿಂದ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿಯೂ ಉತ್ತಮ ಸ್ಥಿರತೆ ತೋರಿಸಿದೆ. ಹೀಗಾಗಿ ಲಸಿಕೆಯನ್ನು ಸಾಗಿಸುವುದು ಸುಲಭವಾಗಿದ್ದು, ಕೋಲ್ಡ್ ಚೈನ್ ವ್ಯವಸ್ಥೆ ಕೆಡುವ ಸವಾಲುಗಳನ್ನು ತಗ್ಗಿಸುತ್ತದೆ ಎಂದು ಕಂಪೆನಿ ತಿಳಿಸಿದೆ. ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಇದು ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯಾಗಿರುವುದರಿಂದ ವೆಕ್ಟರ್ ಆಧಾರಿತ (ಕೋಶವೊಂದಕ್ಕೆ ಡಿಎನ್‌ಎ ರವಾನಿಸಲು ಬಳಸುವ ವೈರಸ್ ಅಥವಾ ಇತರೆ ಅಂಶ) ಪ್ರತಿರಕ್ಷಣೆಗೆ ಸಂಬಂಧಿಸಿದಂತೆ ಝೈಕೋವ್-ಡಿ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ. ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯನ್ನು ನೀಡಿದಾಗ ಅದು ಕೊರೊನಾ ವೈರಸ್‌ನ ಸ್ಪೈಕ್ ಪ್ರೊಟೀನ್ ಉತ್ಪಾದನೆ ಮಾಡುತ್ತದೆ ಮತ್ತು ಪ್ರತಿಕರಕ್ಷಣೆ ಸ್ಪಂದನೆಯನ್ನು ಪ್ರಚೋದಿಸುತ್ತದೆ. ಪ್ಲಾಸ್ಮಿಡ್ ಡಿಎನ್‌ಎ ಅಂಶಗಳು ಹೊಸ ರೂಪಾಂತರಗಳನ್ನು ಎದುರಿಸಲು ಕೂಡಲೇ ಮಾರ್ಪಾಡು ಮಾಡಿಕೊಳ್ಳಬಲ್ಲವು ಎಂದು ವಿವರಿಸಿದೆ.


from India & World News in Kannada | VK Polls https://ift.tt/2UaRnIK

ನಿರಂಕುಶ ಪ್ರಭುತ್ವದ ಆಯ್ಕೆಯ ಬಗ್ಗೆ ಚುನಾವಣೆ ಯಾವ ಖಾತರಿಯನ್ನೂ ನೀಡಲಾರದು: ಸಿಜೆಐ ಎನ್‌ವಿ ರಮಣ

ಹೊಸದಿಲ್ಲಿ: ಅಧಿಕಾರದಲ್ಲಿರುವವರನ್ನು ಚುನಾವಣೆಯ ಮೂಲಕ ಬದಲಾಯಿಸುವ ಜನರ ಹಕ್ಕು ಆಯ್ಕೆಯಾಗುವುದಿಲ್ಲ ಎಂಬ ಯಾವ ಖಾತರಿಯನ್ನೂ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಹಾಗೂ ಅದರ ಪ್ರಯೋಜನಗಳು ಯೋಗ್ಯ ಹಾಗೂ ಯೋಗ್ಯವಲ್ಲದ ಸಾರ್ವಜನಿಕ ಭಾಷಣಗಳಲ್ಲಿ ಮಾತ್ರವೇ ಸ್ಥಾನಪಡೆದುಕೊಳ್ಳುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮಗಳ ಪರಿಣಾಮದ ಬಗ್ಗೆ ಮಾತನಾಡಿರುವ , ಯಾವುದು ಸರಿಯಾಗಿದೆಯೋ ಅದರ ಅಗತ್ಯವಿಲ್ಲ ಅಥವಾ ಹೆಚ್ಚಿನವರು ನಂಬುವ ಸಂಗತಿಗಳ ಕುರಿತಾದ 'ಗದ್ದಲ'ದ ಬಗ್ಗೆ ಜಾಗರೂಕತೆ ಅಗತ್ಯವಿರುತ್ತದೆ ಎಂದಿದ್ದಾರೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಸಂಗತಿಗಳಿಂದ ನ್ಯಾಯಾಧೀಶರು ಮತ್ತು ನ್ಯಾಯಾಂಗ ಸಂಪೂರ್ಣ ದೂರವಿರಬೇಕು ಎನ್ನುವುದು ಇದರ ಅರ್ಥವಲ್ಲ ಎಂದು ಹೇಳಿದ್ದಾರೆ. 'ನ್ಯಾಯಾಧೀಶರು ದಂತದ ಅರಮನೆಗಳಲ್ಲಿ ಕೂರಲು ಸಾಧ್ಯವಿಲ್ಲ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಿರ್ಧರಿಸಬೇಕು' ಎಂದು ತಿಳಿಸಿದ್ದಾರೆ. 17ನೇ ಪಿಡಿ ದೇಸಾಯಿ ಸಂಸ್ಮರಣಾ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪ್ರತಿ ಕೆಲವು ವರ್ಷಗಳಿಗೊಮ್ಮೆ ಆಡಳಿತಗಾರನನ್ನು ಬದಲಿಸುವ ಹಕ್ಕು, ನಿರಂಕುಶಪ್ರಭುತ್ವದ ವಿರುದ್ಧ ಯಾವುದೇ ಖಾತರಿ ನೀಡುವುದಿಲ್ಲ. ಜನರು ಅಂತಿಮ ಸಾರ್ವಭೌಮರು ಎನ್ನುವ ಅಭಿಮತವು ಮಾನವ ಘನತೆ ಹಾಗೂ ಸ್ವಾಯತ್ತತೆಯ ಪರಿಕಲ್ಪನೆಗಳಲ್ಲಿ ಕಾಣಿಸಬೇಕು. ಯೋಗ್ಯ ಮತ್ತು ಯೋಗ್ಯವಲ್ಲದ ಎರಡೂ ಬಗೆಯ ಸಾರ್ವಜನಿಕ ಪ್ರವಚನಗಳು ಮಾನವ ಘನತೆಯ ಸ್ವಾಭಾವಿಕ ಅಂಶದಂತೆ ಕಾಣಿಸುತ್ತವೆ ಮತ್ತು ಸಮರ್ಪಕ ಕಾರ್ಯನಿರ್ವಹಣೆಯ ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದೆ. ದೈನಂದಿನ ರಾಜಕೀಯ ಭಾಷಣಗಳು, ಟೀಕೆ ಮತ್ತು ಪ್ರತಿಭಟನೆಯ ಧ್ವನಿಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅವಿಭಾಜ್ಯ ಅಂಗಗಳಾಗಿವೆ ಎಂದಿದ್ದಾರೆ. 'ನಾವು ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಪ್ರತಿ ಸತ್ವವೂ ಜನರು ಅವುಗಳನ್ನು ಆಳುವ ಕಾನೂನುಗಳ ಮೂಲಕ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ನಿರ್ವಹಿಸುವ ಪಾತ್ರವನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಅದನ್ನು ಮೂಲಕ ನಡೆಸಲಾಗುತ್ತದೆ. ಕಟ್ಟಳೆಗಳನ್ನು ರೂಪಿಸುವ ಸಂಸತ್‌ನ ಭಾಗವಾಗುವ ಜನರನ್ನು ಆಯ್ಕೆ ಮಾಡುವ ಸಾರ್ವತ್ರಿಕ ಅಧಿಕಾರವನ್ನು ನಾಗರಿಕರಿಗೆ ನೀಡುತ್ತದೆ. ಕೆಲವು ಮುಂದುವರಿದ ಪ್ರಜಾಪ್ರಭುತ್ವ ದೇಶಗಳಿಗಿಂತ ವಿಭಿನ್ನವಾಗಿ, ಭಾರತೀಯರಾದ ನಾವು ನಮ್ಮ ಗಣರಾಜ್ಯ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಸಾರ್ವತ್ರಿಕ ವಯಸ್ಕ ಅಧಿಕಾರವನ್ನು ನೀಡಿಕೊಂಡಿದ್ದೇವೆ' ಎಂದು ಭಾರತದ ಪ್ರಜಾಪ್ರಭುತ್ವದ ವಿಶೇಷತೆಯನ್ನು ವರ್ಣಿಸಿದ್ದಾರೆ. 'ಇದುವರೆಗೂ 17 ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಗಳಾಗಿವೆ. ಇದರಲ್ಲಿ ಆಡಳಿತ ಪಕ್ಷ ಅಥವಾ ಪಕ್ಷಗಳ ಸಂಯೋಜನೆಯನ್ನು ಎಂಟು ಬಾರಿ ಜನರು ಬದಲಾಯಿಸಿದ್ದಾರೆ. ಬೃಹತ್ ಪ್ರಮಾಣದ ಅಸಮಾನತೆ, ನಿರಕ್ಷರತೆ, ಹಿಂದುಳಿದಿರುವಿಕೆ, ಬಡತನ ಮತ್ತು ನಿರ್ಲಕ್ಷ್ಯದ ನಡುವೆಯೂ, ಸ್ವತಂತ್ರ ಭಾರತದ ಜನರು ತಾವು ಬುದ್ಧಿವಂತರು ಹಾಗೂ ತಮ್ಮ ಕೆಲಸವನ್ನು ಸಮರ್ಪಕವಾಗಿ ನೆರವೇರಿಸುತ್ತಿದ್ದೇವೆ ಎಂಬುದನ್ನು ಸಾಭಿತುಪಡಿಸಿದ್ದಾರೆ' ಎಂದು ಸಿಜೆಐ ಹೇಳಿದ್ದಾರೆ.


from India & World News in Kannada | VK Polls https://ift.tt/3dxt12K

ಉಸಿರು ಕೈಚೆಲ್ಲುವ ಕಷ್ಟಕಾಲದಲ್ಲಿ ಭರವಸೆಯಾಗಿ ಬರುವ ‘ವೈದ್ಯರು’ ಎಂಬ ದೇವರಿಗೊಂದು ನಮನ

ಇಡೀ ಮನುಕುಲವನ್ನು ಕೋವಿಡ್ ಎಂಬ ವೈರಸ್ ಆಕ್ರಮಿಸಿಕೊಂಡಾಗ ಲಕ್ಷಾಂತರ ಜನರು ಸೋಂಕಿಗೀಡಾಗಿ ಸಾವಿನ ಜೊತೆ ಸೆಣಸಾಡುತ್ತಿರುವ ಸಮಯದಲ್ಲಿ ತಮ್ಮ ಜೀವ ಲೆಕ್ಕಿಸದೆ ಹಗಲಿರುಳು ಶ್ರಮಿಸಿದವರು . ತಮ್ಮ ಮನೆ, ಕುಟುಂಬ ತೊರೆದು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಗಡಿಯಲ್ಲಿ ನಮ್ಮ ರಕ್ಷಣೆ ಮಾಡುವ ಸೈನಿಕರಂತೆ, ದೇಶವನ್ನು ಕೋವಿಡ್‌ ಮುಕ್ತವಾಗಿಸಲು ವೈದ್ಯರು ರಾತ್ರಿ-ಹಗಲೆನ್ನದೆ ದುಡಿಯುತ್ತಿದ್ದಾರೆ. ಸೋಂಕಿಗೀಡಾದ ಜನರ ಪ್ರಾರ್ಥನೆಯ ಕೂಗು ದೇವರಿಗೆ ಕೇಳಿಸದಾದಾಗ, ಮನೆಯವರನ್ನೂ ಕಾಣಲು ಸಾಧ್ಯವಾಗದೇ ಇದ್ದಾಗ ಬಳಿಬಂದು ಚಿಕಿತ್ಸೆ ನೀಡುವ ಕಣ್ಣಿಗೆ ಕಾಣುವ ದೇವರೇ ವೈದ್ಯರು ಎಂದು ಹೇಳಿದರೆ ತಪ್ಪಿಲ್ಲ. ದೇಶವೇ ಪ್ರಾಣ ರಕ್ಷಣೆಗಾಗಿ ಲಾಕ್‌ಡೌನ್‌ ಹೆಸರಲ್ಲಿ ಮನೆಯಲ್ಲಿ ಇರುವಾಗ ಕಿಂಚಿತ್ತೂ ಹಿಂಜರಿಯದೆ, ತಮ್ಮ ಕರ್ತವ್ಯಕ್ಕೆ ಪೂರ್ಣವಿರಾಮ ನೀಡದೆ ಮಾನವೀಯ ಸೇವೆ ಮೆರೆಯುವ ವೈದ್ಯರಿಗೆ ಹೃದಯಪೂರ್ವಕ ಅಭಿನಂದನೆಗಳು. ಸೋನಿಕಾ ತೃತೀಯ ಬಿಎ ವಿವಿ ಕಾಲೇಜು, ಮಂಗಳೂರು, ಹಂಪನಕಟ್ಟೆ ಕಠಿಣ ಸಮಯದ ಏಕೈಕ ಭರವಸೆಯೇ ವೈದ್ಯ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಪ್ರತಿಯೊಬ್ಬ ರೋಗಿಯನ್ನೂ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿ ರೋಗಿಗೆ ಮರುಜನ್ಮ ನೀಡುವ ವೈದ್ಯ ದೇವರ ರೂಪವೇ ಸರಿ. ವೈದ್ಯರ ದಿನದಂದು ನಾವು ಈ ಆಚರಣೆಯ ಹಿಂದಿರುವ ಬಹುಮಾನ್ಯ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರನ್ನು ನೆನೆಯಲೇ ಬೇಕು. ವೈದ್ಯರು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಎಂಬ ಸಾಂಕ್ರಾಮಿಕ ರೋಗದ ಕಂಬಂಧಬಾಹುಗೆ ಸಿಲುಕಿದ ಲಕ್ಷಾಂತರ ಜನರಿಗೋಸ್ಕರ ತಮ್ಮ ಮನೆ, ಕುಟುಂಬಗಳನ್ನು ಬಿಟ್ಟು ಆಸ್ಪತ್ರೆಗಳಲ್ಲಿ ಕಾಲ ಕಳೆಯುವ ನಮ್ಮ ಡಾಕ್ಟರ್ ಗಳು ನಿಜಕ್ಕೂ ಆಪತ್ಬಾಂಧವರು. ಅಪಘಾತವಾದಾಗ, ರಾತ್ರೋರಾತ್ರಿ ಕಾಯಿಲೆ ಉಲ್ಭಣವಾಗಿ ಇನ್ನೇನು ಪ್ರಾಣವೇ ಕೈಚೆಲ್ಲಿ ಹೋಗುತ್ತೆ ಎಂಬ ಸಂದರ್ಭದಲ್ಲಿ ನಮಗೆ ಏಕೈಕ ಭರವಸೆಯಾಗಿ ಕಾಣೋದು ವೈದ್ಯರು ಮಾತ್ರ. ಕಣ್ಣಿಗೆ ಕಾಣದ ಆ ದೇವರನ್ನು ಮತ್ತು ಕಣ್ಣೆದುರೇ ಇರುವ ವೈದ್ಯರನ್ನು ನಾನು ಸದಾ ಗೌರವಿಸುತ್ತೇನೆ. ಎಲ್ಲಾ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು. ಸ್ಪೂರ್ತಿ ಕಮಲ್ ಪಿ.ಎಸ್ ದ್ವಿತೀಯ ಬಿಎ, ಪತ್ರಿಕೋದ್ಯಮ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಹಂಪನಕಟ್ಟೆ


from India & World News in Kannada | VK Polls https://ift.tt/2TibCUW

ಕೋವಿಶೀಲ್ಡ್, ಕೋವ್ಯಾಕ್ಸಿನ್ ಲಸಿಕೆ ಅನುಮೋದಿಸದ ಐರೋಪ್ಯ ಒಕ್ಕೂಟಕ್ಕೆ ಎಚ್ಚರಿಕೆ ನೀಡಿದ ಭಾರತ

ಹೊಸದಿಲ್ಲಿ: ತನ್ನ ' ಪಾಸ್‌ಪೋರ್ಟ್‌'ನಲ್ಲಿ ಭಾರತದಲ್ಲಿ ತಯಾರಿಸಿದ ಲಸಿಕೆಗಳನ್ನು ಸೇರಿಸಲು ನಿರಾಕರಿಸುತ್ತಿರುವ ಐರೋಪ್ಯ ಒಕ್ಕೂಟದ ನಡೆ ಭಾರತಕ್ಕೆ ತೀವ್ರ ಅಸಮಾಧಾನ ಮೂಡಿಸಿದೆ. ತನ್ನ ಲಸಿಕೆಗಳನ್ನು ಒಪ್ಪದ ಒಕ್ಕೂಟಕ್ಕೆ ಪ್ರತಿಯಾಗಿ ಎದಿರೇಟು ನೀಡಲು ಮುಂದಾಗಿದೆ. ಕ್ವಾರೆಂಟೈನ್ ನೀತಿಯಲ್ಲಿ ನೀಡಿರುವ ವಿನಾಯಿತಿಯನ್ನು ರದ್ದುಗೊಳಿಸುವ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ಕೊಡಲು ವಿದೇಶಾಂಗ ಸಚಿವಾಲಯ ಚಿಂತನೆ ನಡೆಸಿದೆ ಎನ್ನಲಾಗಿದೆ. ಭಾರತದ ಮತ್ತು ಕೋವ್ಯಾಕ್ಸಿನ್ ಲಸಿಕೆ ಪ್ರಮಾಣಪತ್ರಗಳನ್ನು ಒಪ್ಪಿಕೊಳ್ಳದೆ ಹೋದರೆ, ಅವರ ಪ್ರಮಾಣಪತ್ರಗಳನ್ನೂ ದೇಶದಲ್ಲಿ ಒಪ್ಪಿಕೊಳ್ಳುವುದಿಲ್ಲ ಹಾಗೂ ಅವರು ಭಾರತಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಡ್ಡಾಯ ಕ್ವಾರೆಂಟೈನ್ ನಿಯಮ ಪಾಲಿಸಬೇಕಾಗುತ್ತದೆ. ತನ್ನ ಡಿಜಿಟಲ್ ಕೋವಿಡ್ ಪ್ರಮಾಣಪತ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಿಗಣಿಸಬೇಕು ಎಂದು ಒಕ್ಕೂಟಕ್ಕೆ ಭಾರತ ಆಗ್ರಹಿಸಿದೆ ಎಂದು ವರದಿಯಾಗಿದೆ. ಹೊಸ '' ಯೋಜನೆಯಡಿ, ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಐರೋಪ್ಯ ಒಕ್ಕೂಟದ ಸದಸ್ಯ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡುವ ಸಾಧ್ಯತೆ ಇಲ್ಲ. ಯುರೋಪಿಯನ್ ಔಷಧೀಯ ಸಂಸ್ಥೆ ಅನುಮೋದಿಸಿದ ಲಸಿಕೆಗಳನ್ನು ಪಡೆದವರಿಗೆ ಮಾತ್ರವೇ ಯುರೋಪಿಯನ್ ದೇಶಗಳು ತಮ್ಮೊಳಗೆ ಬರಲು ಅವಕಾಶ ನೀಡುತ್ತಿವೆ. ಫೈಜರ್, ಮಾಡೆರ್ನಾ, ಆಸ್ಟ್ರಾಜೆನಿಕಾ ಮತ್ತು ಜಾನ್ಸೆನ್ ಲಸಿಕೆಗಳು ಇದರಲ್ಲಿ ಸೇರಿವೆ. ಆಸ್ಟ್ರಾಜೆನಿಕಾ ಸಂಸ್ಥೆಯದ್ದೇ ಆದರೂ ಅದರ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್‌ಗೆ ಇನ್ನೂ ಅನುಮತಿ ನೀಡಿಲ್ಲ. 'ಪ್ರತಿ ಲಸಿಕೆಯ ಅನುಮೋದನೆ ಪ್ರಕ್ರಿಯೆಯು ಅದರದ್ದೇ ಆದ ಮಾನದಂಡಗಳಿಗೆ ಅನುಗುಣವಾಗಿ ನಡೆಯಲಿದೆ' ಎಂದು ಭಾರತದಲ್ಲಿನ ಐರೋಪ್ಯ ಒಕ್ಕೂಟದ ರಾಯಭಾರಿ ಹೇಳಿದ್ದಾರೆ. ಸೀರಂಗೆ ಅನುಮೋದನೆ ಭರವಸೆ ಕೋವಿಶೀಲ್ಡ್ ತಯಾರಕ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ತನ್ನ ಯುರೋಪಿಯನ್ ಪಾಲುದಾರ ಆಸ್ಟ್ರಾಜೆನಿಕಾ ಮೂಲಕವೇ ಒಕ್ಕೂಟದ ಅನುಮೋದನೆಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದೆ. ಆದರೆ ತನಗೆ ಯಾವುದೇ ಮನವಿ ಬಂದಿಲ್ಲ ಎಂದು ಯುರೋಪಿಯನ್ ಔಷಧಗಳ ಸಂಸ್ಥೆ ಹೇಳಿದೆ. ಈ ತಿಂಗಳಲ್ಲಿ ಕೋವಿಶೀಲ್ಡ್‌ಗೆ ಅನುಮೋದನೆ ದೊರಕುವ ಎಲ್ಲ ವಿಶ್ವಾಸವಿದೆ ಎಂದು ಸೀರಂ ಸಿಇಒ ಆದಾರ್ ಪೂನಾವಲ್ಲಾ ಬುಧವಾರ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಬ್ರಿಟನ್‌ನ ಆರೋಗ್ಯ ನಿಯಂತ್ರಕರ ಅನುಮೋದನೆ ಈಗಾಗಲೇ ಸಿಕ್ಕಿರುವುದರಿಂದ ಒಕ್ಕೂಟದ ಅನುಮೋದನೆ ಕೆಲವೇ ಸಮಯದ ವಿಷಯ ಎಂದು ಅವರು ತಿಳಿಸಿದ್ದಾರೆ. 'ಇದರಲ್ಲಿ ಯಾವ ವಿವಾದವೂ ಇಲ್ಲ. ಅವರು ಅದಕ್ಕೆ ತಡೆ ನೀಡಿರುವ ಕಾರಣವನ್ನು ನಾವು ಈಗ ಬಗೆಹರಿಸಬೇಕಿದೆ. ಭಾರತವು ಕೆಂಪುಪಟ್ಟಿಯಿಂದ ಹೊರಗೆ ಬಂದರೆ ಮತ್ತು ನಾಗರಿಕರು ಪ್ರಯಾಣಿಸಲು ಬಯಸಿದರೆ, ಅವರು ಕೋವಿಶೀಲ್ಡ್ ಪ್ರಮಾಣಪತ್ರ ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ದೇಶದೊಳಗೆ ಪ್ರವೇಶ ನಿರಾಕರಿಸಬಾರದು' ಎಂದು ಆದಾರ್ ಹೇಳಿದ್ದಾರೆ.


from India & World News in Kannada | VK Polls https://ift.tt/3dxf84C

ಚುನಾವಣೆ ಹತ್ತಿರ ಬರುತ್ತಿದ್ದಂತೆ ಉ.ಪ್ರದೇಶದಲ್ಲಿ ಅಭಿವೃದ್ಧಿ ಮಂತ್ರ ಶುರು ಮಾಡಿದ ಆದಿತ್ಯನಾಥ್

ಲಖನೌ: 20 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಲೇ ಜಾತಿ ಲೆಕ್ಕಾಚಾರ ಜೋರಾಗುತ್ತದೆ. ಆದರೆ, ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ತಂತ್ರ ರೂಪಿಸುತ್ತಿದ್ದಾರೆ. ಲಖನೌನಿಂದ ಘಾಜಿಪುರವರೆಗಿನ ಪೂರ್ವಾಂಚಲ ಎಕ್ಸ್‌ಪ್ರೆಸ್‌ ವೇಗೆ ಸೆ.1ರಂದು ಚಾಲನೆ ನೀಡಲಾಗುತ್ತದೆ. ಇದೇ ವರ್ಷಾಂತ್ಯದ ವೇಳೆಗೆ ಕಾನ್ಪುರ ಮೆಟ್ರೋ ಆರಂಭಿಸುವ ಯೋಜನೆ ಇದೆ. ನೋಯ್ಡಾ ವಿಮಾನ ನಿಲ್ದಾಣ ಹಾಗೂ ಗಂಗಾ ಎಕ್ಸ್‌ಪ್ರೆಸ್‌ವೇನಂತಹ ಬೃಹತ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಕರೆಸುವ ಚಿಂತನೆ ಇದೆ. ಇವೆಲ್ಲ ಯೋಜನೆಗಳನ್ನು ನೋಡಿದರೆ ಬಿಜೆಪಿ ಈ ಬಾರಿ ರಾಜ್ಯದಲ್ಲಿ ನಡೆಯುವ ಚುನಾವಣೆಯನ್ನು ಅಭಿವೃದ್ಧಿ ಯೋಜನೆಗಳ ಮೂಲಕ ಗೆಲ್ಲಲು ಯೋಜನೆ ರೂಪಿಸುತ್ತಿದೆ. ಇದನ್ನೇ ಚುನಾವಣೆ ತಂತ್ರವನ್ನಾಗಿ ಮಾಡಿಕೊಳ್ಳುತ್ತದೆ ಎನ್ನಲಾಗುತ್ತಿದೆ. ಮಾಯಾವತಿಯವರು ಮುಖ್ಯಮಂತ್ರಿಯಾಗಿದ್ದಾಗ 2012ರವರೆಗೆ ಯಮುನಾ ಎಕ್ಸ್‌ಪ್ರೆಸ್‌ವೇ ಜಾರಿಗೊಳಿಸುವ ಜತೆಗೆ ಅಂಬೇಡ್ಕರ್‌ ಮೆಮೋರಿಯಲ್‌ ಪಾರ್ಕ್, ದಲಿತ ಪ್ರೇರಣಾ ಸ್ಥಳ ನಿರ್ಮಿಸಿ ಮತ ಲೆಕ್ಕಾಚಾರ ಮೆರೆದರು. ಆದರೆ, 2017ರ ಚುನಾವಣೆ ವೇಳೆಗೆ ಜಾತಿ ಜತೆಗೆ ಅಭಿವೃದ್ಧಿ ಯೋಜನೆಗಳನ್ನೂ ಚುನಾವಣೆ ಕಾರ್ಯತಂತ್ರವಾಗಿ ಬಳಸಲು ಆರಂಭಿಸಲಾಯಿತು. ಹಾಗಾಗಿಯೇ 2017ರ ಚುನಾವಣೆ ವೇಳೆ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್‌ ಯಾದವ್‌, 'ಕೆಲಸವೇ ಮಾತನಾಡುತ್ತದೆ' (ಕಾಮ್‌ ಬೋಲ್ತಾ ಹೈ)' ಎಂಬ ಘೋಷಣೆ ಮೂಲಕ ಸ್ಪರ್ಧೆಗೆ ಇಳಿದರು. ಆ ಮೂಲಕ ಜಾತಿ ಜತೆಗೆ ಕೆಲಸವೂ ಜನರಿಗೆ ತಿಳಿಸಲು ಯತ್ನಿಸಿದರು. ಇದೇ ತಂತ್ರವನ್ನು ಈಗ ಬಿಜೆಪಿಯು ಪೂರ್ಣವಾಗಿ ಬಳಸಲು ಮುಂದಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ಯಾವ ರೀತಿ ಸೆಡ್ಡೊಡೆಯುತ್ತವೆ ಎಂಬುದು ಕುತೂಹಲ ಮೂಡಿಸಿದೆ.


from India & World News in Kannada | VK Polls https://ift.tt/3jxYzcG

ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, 2021ರ ಐಪಿಎಲ್‌ ಸೆಕೆಂಡ್‌ ಹಾಫ್‌ಗೆ ಆಸೀಸ್‌ ಆಟಗಾರರು ಲಭ್ಯ!

ಹೊಸದಿಲ್ಲಿ: ಅರ್ಧಕ್ಕೆ ನಿಂತಿರುವ 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯು ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ ಯುಎಇಯಲ್ಲಿ ಮುಂದುವರಿಯಲಿದ್ದು, ಆಸ್ಟ್ರೇಲಿಯಾ ಆಟಗಾರರು ಸೆಕೆಂಡ್‌ ಹಾಫ್‌ಗೆ ಲಭ್ಯರಾಗಲಿದ್ದಾರೆಂದು ಮೂಲಗಳು ತಿಳಿಸಿವೆ. ಐಪಿಎಲ್‌ನ ಅತ್ಯಂತ ದುಬಾರಿ ವಿದೇಶಿ ಆಟಗಾರ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ವೇಗಿ ಪ್ಯಾಟ್‌ ಕಮಿನ್ಸ್ ಅವರು ಐಪಿಎಲ್‌ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗುತ್ತಿರುವ ಸುದ್ದಿಯನ್ನು ಈ ಹಿಂದೆ ಕ್ರಿಕ್‌ಬಝ್‌ ಸ್ಪಷ್ಟಪಡಿಸಿತ್ತು. ಆದರೆ, ಇನ್ನುಳಿದ ಆಸೀಸ್‌ ಸ್ಟಾರ್‌ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದ್ದಾರೆ. ಮುಂಬರುವ ವೆಸ್ಟ್ ಇಂಡೀಸ್‌ ಹಾಗೂ ಬಾಂಗ್ಲಾದೇಶ ಪ್ರವಾಸಗಳ ಆಸ್ಟ್ರೇಲಿಯಾ ತಂಡದಿಂದ ವಿಥ್‌ಡ್ರಾ ಮಾಡಿಕೊಂಡಿದ್ದ ಸಹ ಆಟಗಾರರನ್ನು ಈ ಹಿಂದೆ ಆಸಿಸ್‌ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್‌ ಫಿಂಚ್‌ ಟೀಕಿಸಿದ್ದ ಬಳಿಕ ಈ ಬೆಳವಣಿಗೆಗಳು ನಡೆದಿವೆ. ರಾಷ್ಟ್ರೀಯ ತಂಡದಲ್ಲಿ ಆಡುವ ಬದಲು ಐಪಿಎಲ್‌ ಆಡುವ ಮೂಲಕ ನ್ಯಾಯವನ್ನು ಒದಗಿಸುತ್ತಿರುವ ಆಟಗಾರರ ಕರೆ ಕಠಿಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. "ಐಪಿಎಲ್‌ ದ್ವಿತೀಯಾರ್ಧಕ್ಕೆ ಹಿಂತಿರುಗಿ ತಮ್ಮ-ತಮ್ಮ ಫ್ರಾಂಚೈಸಿ ಪರ ಆಡುವುದನ್ನು ಸಮರ್ಥಿಸುವುದು ಅವರಿಗೆ ಕಷ್ಟ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಬೇಸಿಗೆ ಹಾಗೂ ಟಿ20 ವಿಶ್ವಕಪ್‌ ಟೂರ್ನಿಯ ವರ್ಕ್‌ಲೋಡ್‌ನಿಂದಾಗಿ ಐಪಿಎಲ್‌ ಆಡುವುದು ಆಟಗಾರರಿಗೆ ಸ್ವಲ್ಪ ಕಷ್ಟವಾಗುತ್ತದೆ. ಆಟಗಾರರು ಐಪಿಎಲ್‌ ಆಡುವ ಮೂಲಕ ಎಲ್ಲರನ್ನು ಕ್ಲಿಷ್ಟಕರ ಸನ್ನಿವೇಶಕ್ಕೆ ತಳ್ಳುತ್ತಿದ್ದಾರೆ. ಆದರೆ, ವೈಯಕ್ತಿಕವಾಗಿ ಇದು ಮಾನಸಿಕ ಹಾಗೂ ದೈಹಿಕವಾಗಿ ಕಠಿಣ ಎಂದು ನಾನು ಭಾವಿಸುತ್ತೇನೆ," ಎಂದು ಫಿಂಚ್‌ ಹೇಳಿದ್ದಾರೆ. 2021ರ ಆವೃತ್ತಿಯ ಐಪಿಎಲ್‌ ಟೂರ್ನಿಯ ವಿವಿಧ ಫ್ರಾಂಚೈಸಿಗಳ ಪರ ಒಟ್ಟು 20 ಆಸ್ಟ್ರೇಲಿಯಾ ಆಟಗಾರರು ಆಡುತ್ತಿದ್ದಾರೆ. ಇದರಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್, ಮಾರ್ಕಸ್‌ ಸ್ಟೋಯ್ನಿಸ್‌, ಜೇ ರಿಚರ್ಡ್‌ಸನ್‌ ಹಾಗೂ ಡೇನಿಯಲ್‌ ಸ್ಯಾಮ್ಸ್ ಸೇರಿದಂತೆ ಒಟ್ಟು 9 ಆಟಗಾರರು ಆಸ್ಟ್ರೇಲಿಯಾ ತಂಡದ ವಿಂಡೀಸ್‌ ಮತ್ತು ಬಾಂಗ್ಲಾ ಪ್ರವಾಸಗಳನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಆ ಮೂಲಕ ಐಪಿಎಲ್‌ ಸೆಕೆಂಡ್‌ ಹಾಫ್‌ ಆಡಲು ಎದುರು ನೋಡುತ್ತಿದ್ದಾರೆ. 14ನೇ ಐಪಿಎಲ್‌ ಎರಡನೇ ಭಾಗಕ್ಕೆ ವಿದೇಶಿ ಆಟಗಾರರ ಲಭ್ಯತೆಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಎಲ್ಲಾ ಮಂಡಳಿಗಳ ಬಳಿ ಮಾತುಕತೆ ನಡೆಸುತ್ತಿದೆ. ಆದರೆ, 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಯುಎಇಯಲ್ಲಿ ನಡೆಯುತ್ತಿರುವುದರಿಂದ ಐಪಿಎಲ್‌ ಆಡುವ ಮೂಲಕ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಾಣಿಕೆ ಸಾಧಿಸಲು ನೆರವಾಗುತ್ತದೆ. 2021ರ ಆವೃತ್ತಿಯ ಐಪಿಎಲ್‌ ಎರಡನೇ ಭಾಗಕ್ಕೆ ಇಂಗ್ಲೆಂಡ್‌ ಆಟಗಾರರು ಲಭ್ಯರಾಗುವಂತೆ ಮಾಡಲು ಇಸಿಬಿ ಬಳಿ ಮಾತುಕತೆ ನಡೆಸುವ ಮೂಲಕ ಬಿಸಿಸಿಐ ಪ್ರಯತ್ನಿಸುತ್ತಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3Ah78yj

ಬಿಎಸ್‌ವೈ & ವಿಜಯೇಂದ್ರ ವಿರುದ್ಧದ ಭ್ರಷ್ಟಾಚಾರ ಕೇಸ್‌; ಜು. 8ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಆಪ್ತರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ಪೂರ್ಣಗೊಳಿಸಿದೆ. ಆದೇಶವನ್ನು ಜು. 8ಕ್ಕೆ ಕಾಯ್ದಿರಿಸಿದೆ. ಸಿಎಂ ಮತ್ತು ಅವರ ಪುತ್ರ, ಆಪ್ತರಾದ ಶಶಿಧರ ಮರಡಿ, ವಿರೂಪಾಕ್ಷಪ್ಪ ಯಮಕನಮರಡಿ, ಸಂಜಯಶ್ರೀ, ಚಂದ್ರಕಾಂತ್‌ ರಾಮಲಿಂಗಂ, ಸಚಿವ ಎಸ್‌.ಟಿ. ಸೋಮಶೇಖರ್‌, ಐಎಎಸ್‌ ಅಧಿಕಾರಿ ಡಾ.ಜಿ.ಸಿ ಪ್ರಕಾಶ್‌, ಕ್ರೆಸೆಂಟ್‌ ಹೋಟೆಲ್‌ ಮಾಲೀಕರಾದ ಕೆ. ರವಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆಯಡಿ ತನಿಖೆ ಮಾಡುವಂತೆ ಕೋರಿ ಟಿ.ಜೆ. ಅಬ್ರಹಾಂ ನಗರದ 82ನೇ ಸಿಟಿ ಸಿವಿಲ್‌ ಅಂಡ್‌ ಸೆಷನ್ಸ್‌ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಪ್ರಕರಣದ ಹಿನ್ನೆಲೆ: ಸಿಎಂ ಬಿ.ಎಸ್‌. ಯಡಿಯೂರಪ್ಪ, ಪುತ್ರ ವಿಜಯೇಂದ್ರ ಹಾಗೂ ಇತರೆ ಆಪ್ತರು ಅಧಿಕಾರ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಎಂ ಕುಟುಂಬದವರು ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸರಕಾರದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಕಿಕ್‌ ಬ್ಯಾಕ್‌ ಪಡೆದಿದ್ದಾರೆ. ಹೀಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕು ಎನ್ನುವುದು ದೂರಿನ ಸಾರಾಂಶ.


from India & World News in Kannada | VK Polls https://ift.tt/3dwFKm5

ರಮೇಶ್‌ ಜಾರಕಿಹೊಳಿದು ಕ್ರಿಮಿನಲ್‌ ಪ್ರಕರಣ ಅಲ್ಲ; ಮೂವರು ಸಚಿವರ ಪ್ರತಿಪಾದನೆ

ರಾಮನಗರ: ರಮೇಶ್‌ ಜಾರಕಿಹೊಳಿ ಮೇಲಿರುವುದು ಕ್ರಿಮಿನಲ್‌ ಕೇಸ್‌ ಅಲ್ಲ, ಆರೋಪಗಳಿಂದ ಮುಕ್ತಿ ಹೊಂದಿ ಮತ್ತೆ ಮಂತ್ರಿಯಾಗಲಿದ್ದಾರೆ ಎಂದು ಮೂವರು ಸಚಿವರು ಪ್ರತಿಪಾದಿಸಿದ್ದಾರೆ. ಸಚಿವರಾದ ನಾರಾಯಣ ಗೌಡ, ಸುಧಾಕರ್‌, ಮಾಧುಸ್ವಾಮಿ ಪ್ರತ್ಯೇಕ ಕಡೆಗಳಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ರಮೇಶ್‌ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಮತ್ತೆ ಮಂತ್ರಿಯಾಗುವುದು ಖಚಿತ’ ಎಂದು ಹೇಳಿದ್ದಾರೆ. ರಾಮನಗರದ ಬಿಡದಿ ಬಳಿಯ ಭೈರಮಂಗಲದಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ‘ರಮೇಶ್‌ ಜಾರಕಿಹೊಳಿ ಅವರ ಮೇಲಿರುವ ಪ್ರಕರಣ ಕ್ರಿಮಿನಲ್‌ ಕೇಸ್‌ ಅಲ್ಲ ಅವರು ನಿರ್ದೋಷಿಯಾಗಿ ಹೊರಬರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಜಾರಕಿಹೋಳಿ ಪ್ರಕರಣದಲ್ಲಿ ಏನೂ ಇಲ್ಲ ಎಂದು ಹಿಂದೆಯೇ ಹೇಳಿದ್ದೆ, ನಾನು ಕಾನೂನು ಸಚಿವನಾಗಿದ್ದಿದ್ದರೆ, ಇದು ಕ್ರಿಮಿನಲ್‌ ಕೇಸಿಗೆ ಒಳಪಡುವುದಿಲ್ಲ ಎಂಬ ಅಭಿಪ್ರಾಯವನ್ನು ಕೊಡುತ್ತಿದ್ದೆ. ಅವರು ಪ್ರಕರಣದಿಂದ ಹೊರಬಂದರೆ ಮತ್ತೆ ಸಚಿವರಾಗುತ್ತಾರೆ. ಸಚಿವ ಸ್ಥಾನದಿಂದ ಅವರನ್ನು ತೆಗೆಯಲು ಕಾರಣವೇ ಇರಲಿಲ್ಲ. ನೈತಿಕ ಹೊಣೆ ಹೊತ್ತು ಅವರೇ ರಾಜೀನಾಮೆ ಕೊಟ್ಟಿದ್ದಾರೆ ಎಂದರು.


from India & World News in Kannada | VK Polls https://ift.tt/3hksYsg

ಬೆಂಗಳೂರು: ಪತ್ನಿ ಸಾವಿನ ಬೆನ್ನಲ್ಲೇ ಇಬ್ಬರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ, ಕೊರೊನಾಗೆ ಇಡೀ ಕುಟುಂಬವೇ ಸರ್ವನಾಶ!

ಆನೇಕಲ್‌: ಆ ಸಣ್ಣ ಕುಟುಂಬ ಸಂತೋಷದ ಜೀವನ ನಡೆಸುತ್ತಿತ್ತು, ಆದರೆ ಎಂಬ ಮಹಾಮಾರಿ ಇಡೀ ಕುಟುಂಬವನ್ನು ಸರ್ವನಾಶವಾಗುವಂತೆ ಮಾಡಿದೆ. ಹೌದು, ಕೊರೊನಾ ಸೋಂಕಿನಿಂದ ಮೃತಪಟ್ಟ ಬೆನ್ನಲ್ಲೇ ಪತಿಯು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ. ಅತ್ತಿಬೆಲೆ ನಿವಾಸಿ ಸತೀಶ್‌(45) ಹಾಗೂ ಪುತ್ರಿಯರಾದ ಕೀರ್ತಿ (18), ಮೋನಿಶಾ (14) ಮೃತಪಟ್ಟವರು. ಒಂದೂವರೆ ತಿಂಗಳ ಹಿಂದೆ ಸತೀಶ್‌ ಪತ್ನಿ ಆಶಾ (40) ಕೊರೊನಾದಿಂದ ಮೃತಪಟ್ಟಿದ್ದರು. ಬಳಿಕ ಸತೀಶ್‌ ಹಾಗೂ ಮಕ್ಕಳು ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು. ಸೋಮವಾರದವರೆಗೂ ಮನೆಯಲ್ಲಿಸಂಬಂಧಿಕರು ಇದ್ದರು. ಮಂಗಳವಾರ ಬೆಳಗಿನ ಜಾವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ ಸಾವಿನಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸತೀಶ್‌ ಡೆತ್‌ನೋಟ್‌ ಬರೆದಿಟ್ಟಿದ್ದಾರೆ. ಸತೀಶ್‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 19 ವರ್ಷಗಳ ಹಿಂದೆ ಆಶಾರನ್ನು ಪ್ರೇಮ ವಿವಾಹವಾಗಿದ್ದರು ಎನ್ನಲಾಗಿದೆ. ದಂಪತಿಗಳ ಮೊದಲನೆ ಮಗಳಾದ ಕೀರ್ತಿ ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೇ.98 ಅಂಕಗಳಿಸಿದ್ದಳು. ಎರಡನೆಯ ಮಗಳಾದ ಮೋನಿಷಾ ಉತ್ತಮ ನೃತ್ಯಗಾರ್ತಿಯಾಗಿದ್ದಳು.ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/3ho2Xbp

ಕೆಜಿ ಹಳ್ಳಿ, ಡಿಜೆ ಹಳ್ಳಿ ಹಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ ಎನ್‌ಐಎ

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳದ () ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಗೋವಿಂದಪುರ ನಿವಾಸಿ ಸೈಯದ್‌ ಅಬ್ಬಾಸ್‌ (38) ಬಂಧಿತ. ಆಗಸ್ಟ್‌ 11ರಂದು ಕೆ.ಜಿ.ಹಳ್ಳಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಭಾಗಿಯಾಗಿದ್ದ ಅಬ್ಬಾಸ್‌ ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಅಬ್ಬಾಸ್‌ ತಲೆಮರೆಸಿಕೊಂಡಿದ್ದ. ತನಿಖೆ ಕೈಗೆತ್ತಿಕೊಂಡಿದ್ದ ಎನ್‌ಐಎ, ಅಬ್ಬಾಸ್‌ನ ಬಗ್ಗೆ ಮಾಹಿತಿ ಕಲೆ ಹಾಕಿತ್ತು. ಅಬ್ಬಾಸ್‌ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ () ನಾಗವಾರ ಘಟಕದ ಅಧ್ಯಕ್ಷ. ಅಬ್ಬಾಸ್‌ ಗಲಭೆ ವೇಳೆ ಹಲವು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಪೊಲೀಸ್‌ ಠಾಣೆಗೆ ಬೆಂಕಿಯಿಟ್ಟು ಧ್ವಂಸಕ್ಕೆ ಕಾರಣವಾಗಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಎನ್‌ಐಎ ಅಧಿಕಾರಿಗಳು, ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ವಿಚಾರಣೆ ನಡೆಸಲು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ 2020ರ ಆಗಸ್ಟ್‌ 11ರಂದು ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಗಲಭೆ ನಡೆದಿತ್ತು. ಆಗಸ್ಟ್‌ 12 ರಂದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ಬಂಧಿಸಲಾಗಿತ್ತು. ಆದರೆ, ಸೈಯದ್‌ ಅಬ್ಬಾಸ್‌ ಮಾತ್ರ ಅಂದಿನಿಂದ ತಲೆಮರೆಸಿಕೊಂಡಿದ್ದ. ಈ ಪ್ರಕರಣದ ಸಂಬಂಧ 138 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.


from India & World News in Kannada | VK Polls https://ift.tt/3duFFzD

ಬನ್ನೇರುಘಟ್ಟ ಜೈವಿಕ ಉದ್ಯಾನ ಜುಲೈ 1 ರಿಂದ ಓಪನ್‌..! ಸಫಾರಿಗೆ ಎಸಿ ವಾಹನ ಸಿಗಲ್ಲ..

ಬನ್ನೇರುಘಟ್ಟ (): ಅನ್‌ಲಾಕ್‌ ಪ್ರಕ್ರಿಯೆಗೆ ಅನುಗುಣವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಾರ್ವಜನಿಕರ ವೀಕ್ಷಣೆಗಾಗಿ ಜುಲೈ 1 ರಿಂದ ತೆರೆಯಲಿದೆ. ಕೋವಿಡ್‌ 19 ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಬನ್ನೇರುಘಟ್ಟ ಜೈವಿಕ ವನವನ್ನು ಮಾರ್ಚ್ 28 ರಿಂದ ಮುಚ್ಚಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಉದ್ಯಾನ ವನವನ್ನು ಸಾರ್ವಜನಿಕರ ವೀಕ್ಷಣೆಗಾಗಿ ತೆರೆಯಲು ಒಪ್ಪಿಗೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗರೂಕತಾ ಕ್ರಮಗಳೊಂದಿಗೆ ಕಾರ್ಯಾಚರಿಸಲು ಸಿದ್ಧತೆ ನಡೆಸಲಾಗಿದೆ. ಆನ್‌ಲೈನ್‌ ಬುಕ್ಕಿಂಗ್‌: ಜೈವಿಕ ಉದ್ಯಾನ ವನದ ಕಾರ್ಯನಿರ್ವಾಹಕ ಅಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ಈ ಕುರಿತು ಪ್ರತಿಕ್ರಿಯಿಸಿ, 'ಜೈವಿಕ ಉದ್ಯಾನಕ್ಕೆ ಬರಲು ಇಚ್ಛಿಸುವವರು ಬುಧವಾರದಿಂದ ಆನ್‌ಲೈನ್‌ ಟಿಕೆಟ್‌ ಬುಕ್‌ ಮಾಡಬಹುದು. ಪ್ರವಾಸಿಗರಿಗೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಪ್ರತಿಯೊಬ್ಬರ ದೇಹದ ತಾಪಮಾನ ಪರೀಕ್ಷಿಸಿದ ಬಳಿಕವಷ್ಟೇ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು. ವಾಹನಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಎಸಿ ವಾಹನಗಳ ಸೇವೆ ಇರುವುದಿಲ್ಲ. ಶೇ.50ರ ಸಾಮರ್ಥ್ಯದಲ್ಲಿ ಸಫಾರಿ ವಾಹನಗಳು ಕಾರ್ಯಾಚರಿಸಲಿವೆ' ಎಂದು ಹೇಳಿದರು.


from India & World News in Kannada | VK Polls https://ift.tt/3hn8tuH

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ: 6 ವಾರಗಳಲ್ಲಿ ನಿಗದಿಗೊಳಿಸಲು ಎನ್‌ಡಿಎಂಎಗೆ ಸುಪ್ರೀಂಕೋರ್ಟ್ ಸೂಚನೆ

ಹೊಸದಿಲ್ಲಿ: ಪ್ರತಿ ಕೋವಿಡ್ ಸಂತ್ರಸ್ತರಿಗೂ ಪಾವತಿಸಬಹುದಾದ ಕೃಪಾಧನ (ಎಕ್ಸ್‌ ಗ್ರೇಷಿಯಾ) ಮೊತ್ತವನ್ನು ಆರು ವಾರಗಳಲ್ಲಿ ನಿರ್ಧರಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ () ಬುಧವಾರ ಸೂಚಿಸಿದೆ. ಕೋವಿಡ್ ಸಂತ್ರಸ್ತರಿಗೆ ಕೃಪಾಧನ ಒದಗಿಸುವುದು ಸೇರಿದಂತೆ ಕನಿಷ್ಠ ಪ್ರಮಾಣದ ಒದಗಿಸುವುದು ಎನ್‌ಡಿಎಂಎ ಹೊಂದಿರುವ ಕಡ್ಡಾಯ ಶಾಸನಬದ್ಧ ಕರ್ತವ್ಯ. ಕೃಪಾಧನ ಮೊತ್ತವನ್ನು ಒದಗಿಸದೆ ಇರುವ ಮೂಲಕ ಎನ್‌ಡಿಎಂಎ ತನ್ನ ಶಾಸನಬದ್ಧ ಕರ್ತವ್ಯ ನೆರವೇರಿಸುವುದರಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಇಬ್ಬರು ಸದಸ್ಯರ ನ್ಯಾಯಪೀಠವು ಕಾರಣದಿಂದ ಮೃತಪಟ್ಟ ಸಂತ್ರಸ್ತರಿಗೆ ನಿರ್ದಿಷ್ಟ ಮೊತ್ತದ ಕೃಪಾಧನವನ್ನು ನಿಗದಿಗೊಳಿಸಲು ನಿರಾಕರಿಸಿದೆ. ಇದು ಹಣಕಾಸು ವಿಚಾರವಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ಹೇಳಿದೆ. 'ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಕೃಪಾಧನ ಪರಿಹಾರವನ್ನು ನೀಡಲು ಕನಿಷ್ಠ ಪರಿಹಾರ ಪ್ರಮಾಣಕ್ಕೆ ಅನುಗುಣವಾಗಿ ಮಾರ್ಗಸೂಚಿ ರಚಿಸುವಂತೆ ನಾವು ಎನ್‌ಡಿಎಂಎಗೆ ಸೂಚಿಸುತ್ತಿದ್ದೇವೆ' ಎಂದು ನ್ಯಾ. ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿದೆ. ಕೋವಿಡ್ 19 ಅಥವಾ ಕೋವಿಡ್ ನಂತರದ ಸಮಸ್ಯೆಗಳಿಂದಾಗಿ ಮೃತಪಟ್ಟವರ ಕುಟುಂಬದವರಿಗೆ ತಲಾ 4 ಲಕ್ಷ ರೂ ಪರಿಹಾರ ಒದಗಿಸಲು ಆದೇಶಿಸುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಅಂತಹ ಪರಿಹಾರಗಳು ನೈಸರ್ಗಿಕ ವಿಕೋಪಗಳಿಗೆ ಮಾತ್ರವೇ ಅನ್ವಯವಾಗುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ರಾಜ್ಯಗಳು ಭರಿಸುವಷ್ಟು ಆರ್ಥಿಕ ಶಕ್ತಿ ಇಲ್ಲ ಎಂದು ಕೇಂದ್ರ ಸರಕಾರ ಕಳೆದ ವಾರ ಹೇಳಿತ್ತು.


from India & World News in Kannada | VK Polls https://ift.tt/3dvubMd

ಬಿಬಿಎಂಪಿಗೆ ತೆರಿಗೆ ಕಟ್ಟದವರ ಆಸ್ತಿ ಮುಟ್ಟುಗೋಲು..! ಸುಸ್ತಿದಾರರ ಸ್ಥಿರಾಸ್ತಿ, ಚರಾಸ್ತಿ ಜಪ್ತಿಗೆ ತೀರ್ಮಾನ

ನಾಗಪ್ಪ ನಾಗನಾಯಕನಹಳ್ಳಿ : ವ್ಯಾಪ್ತಿಯಲ್ಲಿ 25 ಲಕ್ಷ ರೂ. ಮೇಲ್ಪಟ್ಟು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಹಾಕಿಕೊಂಡು ಬಿಸಿ ಮುಟ್ಟಿಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲ, ಬ್ಯಾಂಕ್‌ ಖಾತೆಗಳನ್ನೂ ಮಾಡಿ, ತೆರಿಗೆ ವಸೂಲು ಮಾಡಲು ಉದ್ದೇಶಿಸಲಾಗಿದೆ. ತೆರಿಗೆಯೇ ಪಾಲಿಕೆಯ ಪ್ರಮುಖ ಆದಾಯ ಮೂಲ. ಪ್ರತಿ ವರ್ಷವೂ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಮುಟ್ಟಲಾಗುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ, ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳ ಮಾಲೀಕರನ್ನು ಟಾರ್ಗೆಟ್‌ ಮಾಡಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ತೆರಿಗೆ ಕಟ್ಟದ ಹಾಗೂ ಸುಸ್ತಿದಾರರಿಗೆ ಜುಲೈ ತಿಂಗಳಿನಲ್ಲಿ ನೋಟಿಸ್‌ ನೀಡಲಾಗುತ್ತಿದೆ. ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿರುವವರಿಗೆ ತೆರಿಗೆ ಕಟ್ಟಲು ಒಂದು ತಿಂಗಳು ಕಾಲಾವಕಾಶ ಕೊಡಲು ನಿರ್ಧರಿಸಲಾಗಿದೆ. ಇದಾಗಿ ಒಂದು ತಿಂಗಳೊಳಗೆ ತೆರಿಗೆ ಪಾವತಿಸದ ಸುಸ್ತಿದಾರರಿಗೆ ಜಪ್ತಿ ವಾರಂಟ್‌ ನೋಟಿಸ್‌ ನೀಡಲಾಗುತ್ತದೆ. ಬಳಿಕ ಅವರ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಜಪ್ತಿ ಮಾಡಿ, ಬೀಗಮುದ್ರೆ ಹಾಕಲಾಗುತ್ತದೆ. ಜತೆಗೆ ಸ್ವತ್ತುಗಳ ಮಾಲೀಕರು ಖಾತೆ ಹೊಂದಿರುವ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಪತ್ರ ಬರೆದು, ಅವರ ಖಾತೆಗಳಲ್ಲಿರುವ ಹಣವನ್ನು ಪಾಲಿಕೆ ಖಾತೆಗೆ ವರ್ಗಾಯಿಸುವಂತೆ ಕೋರಲು ತೀರ್ಮಾನಿಸಲಾಗಿದೆ. ಬಾಕಿ ವಸೂಲಿಗಾಗಿಯೇ ವಲಯವಾರು ಮತ್ತು ವಾರ್ಡ್‌ ಮಟ್ಟದಲ್ಲಿ'ಎ', 'ಬಿ' ಮತ್ತು 'ಸಿ' ಎಂಬ ಮೂರು ವರ್ಗಗಳಲ್ಲಿ ಸುಸ್ತಿದಾರರ ಪಟ್ಟಿ ಸಿದ್ಧಪಡಿಸಲಾಗಿದೆ. 'ಎ' ವರ್ಗದಲ್ಲಿ 1 ಕೋಟಿ ರೂ., 'ಬಿ'ಯಲ್ಲಿ 50 ಲಕ್ಷ ಮೇಲ್ಪಟ್ಟ ಹಾಗೂ 'ಸಿ' ವರ್ಗದಲ್ಲಿ 25 ಲಕ್ಷ ಮೇಲ್ಪಟ್ಟು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿ ತಯಾರಿಸಿ ವಸೂಲಿಗೆ ಕ್ರಮ ವಹಿಸಲಾಗಿದೆ. ಸುಸ್ತಿದಾರರಿಂದ 785 ಕೋಟಿ ಬಾಕಿ: ಪಾಲಿಕೆಯು ಒಟ್ಟು 19.80 ಲಕ್ಷ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿದೆ. ಆದರೆ, ಆಯಾ ಹಣಕಾಸು ವರ್ಷದಲ್ಲಿ 12-13 ಲಕ್ಷ ಸ್ವತ್ತುಗಳಿಂದ ಮಾತ್ರ ತೆರಿಗೆ ಸಂಗ್ರಹವಾಗುತ್ತಿದೆ. 3.15 ಲಕ್ಷ ಮಂದಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 785 ಕೋಟಿ ರೂ. ಬಾಕಿ ಬರಬೇಕಿದೆ. ಇದರಲ್ಲಿ 10-12 ವರ್ಷಗಳಿಂದ ತೆರಿಗೆ ಕಟ್ಟದವರೂ ಇದ್ದಾರೆ. ಪ್ರತಿಷ್ಠಿತ ಕಂಪನಿಗಳು, ಬಿಲ್ಡರ್‌ಗಳು, ಮಾಲ್‌ಗಳು, ಅಂಗಡಿ-ಮುಂಗಟ್ಟುಗಳು, ಶಾಲಾ-ಕಾಲೇಜುಗಳು ಸೇರಿದಂತೆ ಹಲವರು ಲಕ್ಷಾಂತರ ರೂ. ತೆರಿಗೆ ಕಟ್ಟಿಲ್ಲ. ಹೀಗಾಗಿಯೇ, 25 ಲಕ್ಷ ಮೇಲ್ಪಟ್ಟು ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಸಮರ ಸಾರಿರುವ ಬಿಬಿಎಂಪಿಯು, ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಜತೆಗೆ ಸ್ವತ್ತುಗಳ ಪ್ರವೇಶ ದ್ವಾರದಲ್ಲೇ ಜಪ್ತಿ ವಾರಂಟ್‌ ನೋಟಿಸ್‌ ಅನ್ನು ಅಂಟಿಸಿ, ಮಾಲೀಕರಿಗೆ ಮುಜುಗರ ಉಂಟು ಮಾಡುವ ಮೂಲಕ ತೆರಿಗೆ ವಸೂಲು ಮಾಡಲು ತೀರ್ಮಾನಿಸಲಾಗಿದೆ. ತೆರಿಗೆ ವಂಚಕರ ಪತ್ತೆಗೂ ಕ್ರಮ: ಸ್ವಯಂಘೋಷಿತ ಪದ್ಧತಿಯಡಿ (ಎಸ್‌ಎಎಸ್‌) ತಪ್ಪು ವಿಸ್ತೀರ್ಣ ಘೋಷಿಸಿಕೊಂಡು ತೆರಿಗೆ ವಂಚಿಸುತ್ತಿದ್ದವರ ಪತ್ತೆಗಾಗಿ ಟೋಟಲ್‌ ಸ್ಟೇಷನ್‌ ಸರ್ವೇ ಕಾರ್ಯ ಕೈಗೊಳ್ಳಲಾಗಿತ್ತು. ಇದರಲ್ಲಿ ಕೆಲವರಷ್ಟೇ ವ್ಯತ್ಯಾಸದ ತೆರಿಗೆ ಪಾವತಿಸಿದ್ದರು. ಪ್ರತಿ ವಾರ್ಡ್‌ನಲ್ಲಿ 100 ಕಟ್ಟಡಗಳ ಟೋಟಲ್‌ ಸ್ಟೇಷನ್‌ ಸರ್ವೇ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಇದು ಈವರೆಗೆ ಆಗಿಲ್ಲ. ಆದರೆ, ಕಂದಾಯ ವಿಭಾಗದ ಅಧಿಕಾರಿಗಳು ತಪ್ಪು ವಲಯ ನಮೂದಿಸಿ ಕಡಿಮೆ ತೆರಿಗೆ ಪಾವತಿಸುವವರ ಪತ್ತೆಗೆ ಮುಂದಾಗಿದ್ದಾರೆ. 'ಎ' ವಲಯದಲ್ಲಿರುವ ಆಸ್ತಿಗಳ ಮಾಲೀಕರು 'ಸಿ' ವಲಯದಲ್ಲಿ ತಮ್ಮ ಸ್ವತ್ತು ಇರುವುದಾಗಿ ನಮೂದಿಸಿ ತೆರಿಗೆ ವಂಚಿಸಿದ್ದಾರೆ. ಇಂಥಹ ಆಸ್ತಿ ಮಾಲೀಕರಿಂದಲೂ ವ್ಯತ್ಯಾಸದ ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕೆಲವರು ಭಾಗಶಃ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡಿದ್ದರೂ, ವಸತಿ ತೆರಿಗೆ ಕಟ್ಟಿದ್ದು, ಅಂಥವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತಿದೆ. ನಗರದಲ್ಲಿ ಖಾತಾ ಮೇಳ: ನಗರದಲ್ಲಿನ ಅಪಾರ್ಟ್‌ಮೆಂಟ್‌ಗಳ ಫ್ಲಾಟ್‌ಗಳು ಸೇರಿದಂತೆ ಇತರೆ ಕಟ್ಟಡಗಳಿಗೆ 'ಎ' ಅಥವಾ 'ಬಿ' ಖಾತಾ ನೀಡುವ ಸಲುವಾಗಿ 'ಖಾತಾ ಮೇಳ'ವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ತೆರಿಗೆ ಜಾಲದಿಂದ ಹೊರಗಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಆದಾಯ ಹೆಚ್ಚಿಸಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ. ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದಿತ ಕ್ರಮಬದ್ಧ ಆಸ್ತಿಗಳಿಗೆ 'ಎ' ಖಾತಾ ಪಡೆಯುವ ಭಾಗ್ಯ ಸಿಗಲಿದೆ. ಕಂದಾಯ ನಿವೇಶನಗಳಲ್ಲಿನ ಸ್ವತ್ತುಗಳಿಗೆ 'ಬಿ' ಖಾತಾ ವಿತರಿಸಿ, ತೆರಿಗೆ ವಸೂಲು ಮಾಡಲು ಉದ್ದೇಶಿಸಲಾಗಿದೆ.


from India & World News in Kannada | VK Polls https://ift.tt/3w7kTfF

ವಿರಾಟ್‌ ಕೊಹ್ಲಿ ಜೊತೆಗಿನ ಆರ್‌ಸಿಬಿ ಅನುಭವ ಹಂಚಿಕೊಂಡ ಜೇಮಿಸನ್‌!

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ವಿರುದ್ಧ ಮೇಲುಗೈ ಸಾಧಿಸಲು ಅನುಭವ ಹೇಗೆ ಸಹಾಯ ಮಾಡಿತು ಎಂಬ ಪ್ರಶ್ನೆಗೆ ನ್ಯೂಜಿಲೆಂಡ್‌ ಆಲ್‌ರೌಂಡರ್‌ ಕೈಲ್‌ ಜೇಮಿಸನ್‌ ಉತ್ತರಿಸಿದ್ದಾರೆ. ಸೌಥ್‌ಹ್ಯಾಂಪ್ಟನ್‌ನಲ್ಲಿ ಕಳೆದ ವಾರ ಮುಕ್ತಾಯವಾಗಿದ್ದ ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಕೈಲ್‌ ಜೇಮಿಸನ್‌ ಔಟ್‌ ಮಾಡಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದ ಕೊಹ್ಲಿ, ದ್ವಿತೀಯ ಇನಿಂಗ್ಸ್‌ನಲ್ಲಿ ಕಾಟ್‌ ಬಿಹೈಂಡ್‌ ಆಗಿದ್ದರು. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್‌ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್‌ ಕೊಠಡಿಗೆ ಅನುಭವ ಹಂಚಿಕೊಂಡ ಕೈಲ್‌ ಜೇಮಿಸನ್‌, "ಹೌದು, ಇದು ನಿಜಕ್ಕೂ ಚೆನ್ನಾಗಿತ್ತು. ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಅವರ(ಕೊಹ್ಲಿ) ಜೊತೆ ಆರು ವಾರ ಕಳೆದಿದ್ದು ಅತ್ಯುತ್ತಮವಾಗಿತ್ತು. ಕೊಹ್ಲಿ ವಿಶ್ವ ದರ್ಜೆಯ ಆಟಗಾರನಾಗಿದ್ದು, ಆಫ್‌ ಹಾಗೂ ಆನ್‌ ಫೀಲ್ಡ್‌ಗಳಲ್ಲಿ ಹೇಗೆ ಇರುತ್ತಾರೆ ಎಂಬುದನ್ನು ಗಮನಿಸಿದ್ದೇನೆ ಹಾಗೂ ಅವರ ಕಾರ್ಯವೈಖರಿಯನ್ನು ಕೂಡ ತುಂಬಾ ಹತ್ತಿರದಿಂದ ವೀಕ್ಷಿಸಿದ್ದೆ. ಪಂದ್ಯದ ನಡುವೆ ಅವರು ತಮಾಷೆ ಮಾಡುತ್ತಿದ್ದರು ಹಾಗೂ ಎಲ್ಲರ ಜೊತೆ ಸ್ನೇಹಯುತವಾಗಿರುತ್ತಿದ್ದರು," ಎಂದು ಹೇಳಿದರು. ಕೈಲ್‌ ಜೇಮಿಸನ್‌ ಆರ್‌ಸಿಬಿಯಲ್ಲಿ ಆಡಿದ್ದರ ಫಲವಾಗಿ ವಿರಾಟ್‌ ಕೊಹ್ಲಿ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಮೇಲುಗೈ ಸಾಧಿಸಲು ನೆರವಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಿವೀಸ್‌ ಆಟಗಾರ, ಇದರ ಬಗ್ಗೆ ನನಗೆ ಖಚಿತತೆ ಇಲ್ಲ ಎಂದು ಹೇಳಿದರು. "ಈ ಬಗ್ಗೆ ನಾನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಆಟದ ಬಗ್ಗೆ ಅಪಾರ ಉತ್ಸಾಹ ಹಾಗೂ ಅನುಭವ ಹೊಂದಿರುವ ಸ್ಟಾರ್‌ ಆಟಗಾರನ ಜೊತೆ ಬಾಂಧವ್ಯ ಬೆಳೆಸುವುದು ನಿಜಕ್ಕೂ ಅದ್ಭುತವಾಗಿರುತ್ತದೆ. ಆರ್‌ಸಿಬಿಯಲ್ಲಿ ಆಡಿದ್ದರಿಂದ ಕೊಹ್ಲಿ ವಿರುದ್ಧ ಮೇಲುಗೈ ಸಾಧಿಸಲು ಕಾರಣವಾಗಿರಬಹುದು ಎಂದು ನಿರ್ದಿಷ್ಟವಾಗಿ ಹೇಳುವುದು ಅಸಾಧ್ಯ," ಎಂದು ಜೇಮಿಸನ್ ತಿಳಿಸಿದರು. "ನೀವು ಯಾವುದೇ ಸಮಯದಲ್ಲಿ ವಿಶ್ವ ದರ್ಜೆಯ ಆಟಗಾರರ ಬಳಿ ಸಮಯ ಕಳೆದರೆ, ಅದು ನಿಮ್ಮಲ್ಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ, ನೀವು ಇನ್ನಷ್ಟು ಕಲಿಯುತ್ತೀರಿ. ಜತೆಗೆ ಮರಳಿದಾಗ ನೀವು ಎಲ್ಲಾ ವಿಷಯದಲ್ಲೂ ಸಾಕಷ್ಟು ಬದಲಾವಣೆಯಾಗಿರುತ್ತೀರಿ," ಎಂದರು. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಬಳಿಕ ನ್ಯೂಜಿಲೆಂಡ್‌ಗೆ ಮರಳಿರುವ ಕೈಲ್‌ ಜೇಮಿಸನ್‌, ಸರ್ರೆ ಪರ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಆಡಿದ ತಮ್ಮ ಮೊದಲನೇ ಹಣಾಹಣಿಯಲ್ಲಿ ಮೂರು ಓವರ್‌ಗಳಿಗೆ 26 ರನ್‌ ನೀಡಿದ್ದರು ಹಾಗೂ ಒಂದೂ ವಿಕೆಟ್‌ ಪಡೆದಿರಲಿಲ್ಲ. ಆದರೆ, ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ ಮುಂದುವರಿಯುವ 14ನೇ ಐಪಿಎಲ್‌ ಟೂರ್ನಿಯಲ್ಲಿ ಕೊಹ್ಲಿ ಹಾಗೂ ಜೇಮಿಸನ್‌ ಮತ್ತೆ ಜೊತೆಯಾಗಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3AdoQmp

ಕೇಂದ್ರದ ತೆರಿಗೆ ನೀತಿಯಿಂದ ಮಧ್ಯಮ, ದುಡಿಯುವ ವರ್ಗಗಳ ಮೇಲೆ ಭೀಕರ ಪರಿಣಾಮ, ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ಕೇಂದ್ರದ ತೆರಿಗೆ ನೀತಿಯಿಂದ ಮಧ್ಯಮ, ದುಡಿಯುವ ವರ್ಗಗಳ ಮೇಲೆ ಭೀಕರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷದ ನಾಯಕ ಅವರು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ದೇಶದ ಪ್ರಗತಿ-ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತದೆ. ಸದ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಬೀರುತ್ತಿರುವ ಭೀಕರ ಪರಿಣಾಮಗಳನ್ನು ಬೀರುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಮಹಾಭಾರತದಲ್ಲಿ ಭೀಷ್ಮನು ಧರ್ಮರಾಯನಿಗೆ, ರಾಜನು ತೋಟವನ್ನು ಕಾಯುವ ಮಾಲಿಯಂತಿರಬೇಕೆ ಹೊರತು ಇದ್ದಿಲನ್ನು ಮಾರುವವನಂತಾಗಬಾರದು. ಹಣ್ಣಿನ ಮರಗಳನ್ನು ಕಡಿದು ಇದ್ದಿಲು ಮಾರುವಂತಹ ಸ್ವಭಾವದ ರಾಜನು ಜನಪೀಡಕನಾಗಿರುತ್ತಾನೆ. ಆಕಳನ್ನು ಪ್ರೀತಿಯಿಂದ ಸಾಕುವ ಗೋವಳಿಗನು ನವಿರಾಗಿ ಹಾಲು ಕರೆದುಕೊಳ್ಳುವಂತೆ ತೆರಿಗೆ ಇರಬೇಕು. ಹಾಲು ಕರೆಯುವ ನೆಪದಲ್ಲಿ ರಕ್ತ ಹೀರಿಕೊಂಡರೆ ಹಸು ಮತ್ತು ಕರುಗಳೆರಡೂ ಮರಣ ಹೊಂದುತ್ತವೆ. ಕರುವಿಗೂ ಹಾಲು ಸಿಗುವಂತಾದರೆ ಅದು ಮುಂದೆ ಎತ್ತಾಗಿ ಅಥವಾ ಹಸುವಾಗಿ ರಾಜ್ಯದ ಸಂಪತ್ತನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ತೆರಿಗೆ ಮೂಲಗಳೆಲ್ಲ ಬತ್ತಿ ಹೋಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ ಎಂದಿದ್ದಾರೆ. ತೆರಿಗೆಯು, ದುಂಬಿಯು ಹೂವಿನಿಂದ ಮಕರಂದವನ್ನು ಹೀರುವ ರೀತಿಯಲ್ಲಿರಬೇಕು. ಇದರಿಂದ ಹೂವು ಫಲ ಕಟ್ಟುತ್ತದೆ ಜೇನು ಸಂತತಿಯನ್ನೂ ಹೆಚ್ಚಿಸಿಕೊಳ್ಳುತ್ತದೆ ಎಂದು ತೆರಿಗೆ ನೀತಿಯನ್ನು ಬೋಧಿಸುತ್ತಾನೆ.ಮಾತೆತ್ತಿದರೆ ರಾಮಾಯಣ, ಮಹಾಭಾರತದ ಹೆಸರುಗಳನ್ನು ಪ್ರಸ್ತಾಪಿಸುವ ಮೋದಿಯವರಿಗೆ ಯಾರಾದರೂ ಭೀಷ್ಮರ ಈ ಮಾತುಗಳನ್ನು ಓದಿ ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ. ಮನಮೋಹನ್‌ಸಿಂಗ್ ರವರು ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5 ನೇ ಸ್ಥಾನದಲ್ಲಿತ್ತು. ಆದರೆ 2020 ರ ಜಿ.ಡಿ.ಪಿ. ಬೆಳವಣಿಗೆಯನ್ನು ಆಧರಿಸಿ ಕೌಶಿಕ್ ಬಸು ಮುಂತಾದ ಅರ್ಥಶಾಸ್ತಜ್ಞರು ವಿಶ್ವದ 193 ದೇಶಗಳಲ್ಲಿ ಭಾರತ 164 ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಂದಾಜು ಮಾಡಿದ್ದಾರೆ. ನಮ್ಮ ಪಕ್ಕದಲ್ಲೇ ಇರುವ ಬಾಂಗ್ಲಾದೇಶದ ತಲಾವಾರು ಜಿ.ಡಿ.ಪಿ. ಶೇ. 4 ರಷ್ಟು ಬೆಳವಣಿಗೆ ಹೊಂದಿದೆ. ಬಾಂಗ್ಲಾದಲ್ಲಿ ತಲಾವಾರು ಜಿ.ಡಿ.ಪಿ. 1888 ಡಾಲರ್ ಇದೆ. 2020 ರಲ್ಲಿ ಭಾರತದ ತಲಾವಾರು ಜಿ.ಡಿ.ಪಿ. 1877 ಡಾಲರ್‌ಗೆ ಕುಸಿದಿದೆ. 2014 ರಲ್ಲಿ ಬಾಂಗ್ಲಾದೇಶಕ್ಕಿAತ ಸುಮಾರು 40 ಪಟ್ಟು ಮುಂದೆ ಇದ್ದ ದೇಶದ ಆರ್ಥಿಕತೆ ನರೇಂದ್ರ ಮೋದಿಯವರ ಅಪಕ್ವ, ಕಾರ್ಪೊರೇಟ್ ಪರ ಆರ್ಥಿಕ ನೀತಿಗಳಿಂದಾಗಿ ನೆಲ ಕಚ್ಚುವಂತಾಗಿದೆ. 2004 ರಲ್ಲಿ ವಾಜಪೇಯಿಯವರ ನೇತೃತ್ವದ ಕೇಂದ್ರ ಸರ್ಕಾರವು ಜನರಿಂದ ಶೇ.72 ರಷ್ಟು ಮತ್ತು ಕಾರ್ಪೊರೇಟ್ ಬಂಡವಾಳಿಗರಿಂದ ಶೇ.28 ರಷ್ಟು ತೆರಿಗೆಯನ್ನು ಸಂಗ್ರಹಿಸುತಿತ್ತು. ಆದರೆ 2010 ಕ್ಕೆ ಬರುವ ವೇಳೆಗೆ ಮನಮೋಹನಸಿಂಗ್ ಅವರು ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ.58 ಕ್ಕೆ ಇಳಿಸಿದರು. ಕಾರ್ಪೊರೇಟ್ ಕಂಪೆನಿಗಳಿAದ ಸಂಗ್ರಹಿಸುವ ತೆರಿಗೆಯನ್ನು ಶೇ 28 ರಿಂದ ಶೇ.40 ಕ್ಕೆ ಹೆಚ್ಚಿಸಿದರು. ಅವರು ಅಧಿಕಾರದಿಂದ ಇಳಿದಾಗಲೂ ತೆರಿಗೆ ಸಂಗ್ರಹಣೆಯಲ್ಲಿ ಪರೋಕ್ಷ ತೆರಿಗೆ ಶೇ.63 ಮತ್ತು ಪ್ರತ್ಯಕ್ಷ ತೆರಿಗೆ ಶೇ.37 ರಷ್ಟು ಇತ್ತು ಎಂದು ಅಂಕಿ ಅಂಶಗಳ ಜೊತೆ ವಿವರಣೆ ನೀಡಿದ್ದಾರೆ. ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಇದ್ದರೆ ಜನ ನೆಮ್ಮದಿಯಿಂದಿರುತ್ತಾರೆ. ಆದರೆ ಮೋದಿಯವರ ಸರ್ಕಾರದ ನೀತಿಗಳಿಂದಾಗಿ ಜನರ ಮೇಲಿನ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ಎಂದರೆ, “15 ನೇ ಹಣಕಾಸು ಆಯೋಗವು ಅಂದಾಜು ಮಾಡಿರುವಂತೆ 2024-25 ಕ್ಕೆ ಕಾರ್ಪೊರೇಟ್ ತೆರಿಗೆ ಸಂಗ್ರಹದ ಗುರಿ ಕೇವಲ ಶೇ. 34.75 ರಷ್ಟು ಹೆಚ್ಚಾಗುತ್ತದೆ. ಅದೇ ಸಂದರ್ಭದಲ್ಲಿ ಜನರು ಪಾವತಿಸುವ ಜಿ.ಎಸ್‌ಟಿ ಯು ಶೇ.45.48 ರಷ್ಟು ಹಾಗೂ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ವಿಧಿಸುತ್ತಿರುವ ಸುಂಕಗಳು ಶೇ. 62 ರಷ್ಟು ಹೆಚ್ಚಾಗುತ್ತವೆ” ಎಂದಿದೆ. ಅಂದರೆ ಜನರು ಇನ್ನಷ್ಟು ಅನುಭವಿಸಬೇಕಾಗಿದೆ ಎಂದು ಅರ್ಥವಾಗುತ್ತದೆ. ಏಕೆ ಈ ಮಟ್ಟದ ತೆರಿಗೆ ಸುಲಿಗೆ ಎಂದರೆ ಮೋದಿ ಸಮರ್ಥಕರು, “ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲದ ಬಡ್ಡಿ ತೀರಿಸಲು ಮೋದಿ ಅವರು ತೆರಿಗೆ ವಸೂಲಿ ಮಾಡಿದ್ದಾರೆ” ಎನ್ನುವ ಹಾಸ್ಯಾಸ್ಪದ ಕಾರಣ ನೀಡುತ್ತಿದ್ದಾರೆ.ವಾಸ್ತವ ಏನೆಂದರೆೆ, ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ 2014 ರ ಮಾರ್ಚ್ವರೆಗೆ 67 ವರ್ಷಗಳ ಆಡಳಿತದಲ್ಲಿ ಮಾಡಿದ್ದ ಸಾಲ 53.11 ಲಕ್ಷ ಕೋಟಿ ರೂಗಳು. ಆದರೆ 2014 ರ ಜೂನ್ ನಿಂದ 2021 ರ ವೇಳೆಗೆ 7 ವರ್ಷದಲ್ಲಿ ಮಾಡಿರುವ ಸಾಲ 82.7 ಲಕ್ಷ ಕೋಟಿ ರೂಪಾಯಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ 135.87 ಲಕ್ಷ ಕೋಟಿಗಳಾಗುತ್ತವೆ. ಮತ್ತೊಂದು ಕಡೆ ಅದಾನಿ ಮುಂತಾದ ಕೆಲ ಮೋದಿ ಪರಮಾಪ್ತ ಕಾರ್ಪೊರೇಟ್ ಬಂಡವಾಳಿಗರ ಸುಮಾರು 11 ಲಕ್ಷ ಕೋಟಿಗಳಷ್ಟು ಸಾಲವನ್ನು ಎನ್‌ಪಿಎ (ವಸೂಲಾಗದ ಸಾಲ) ಎಂದು ಘೋಷಿಸಲಾಗಿದೆ. 2018 ರಿಂದ ಈಚೆಗೆ ಕಳೆದ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ರೈಟ್ ಆಫ್ [ಮನ್ನಾ?] ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅತ್ಯಂತ ಕಡಿಮೆ ಕಾರ್ಪೊರೇಟ್ ತೆರಿಗೆ ವಿಧಿಸುತ್ತಿರುವ ದೇಶ ಭಾರತ. ಹಾಗೆಯೇ ಕೋಟ್ಯಾಂತರ ಆದಾಯವಿರುವವರಿಗೂ ಸಹ ಅತ್ಯಂತ ಕಡಿಮೆ ಆದಾಯ ತೆರಿಗೆ ವಿಧಿಸುತ್ತಿರುವುದೂ ಸಹ ಭಾರತದಲ್ಲೆ. ಆದರೆ ಇದೇ ಸಂದರ್ಭದಲ್ಲಿ ಕಡಿಮೆ ಆದಾಯದವರಿಗೆ 5-10% ತೆರಿಗೆ ಇದೆ. ಅಂದರೆ 10 ಲಕ್ಷ ದುಡಿಯುವವರು ಶೇ. 20 ರಷ್ಟು ತೆರಿಗೆ ಕಟ್ಟಬೇಕು. 15 ಲಕ್ಷದ ಒಂದು ರೂಪಾಯಿ ದುಡಿಯುವವರು ಶೇ.30 ರಷ್ಟು ತೆರಿಗೆ ಕಟ್ಟಬೇಕು. ಅದೇ ಸಂದರ್ಭದಲ್ಲಿ ಸಾವಿರಾರು ಕೋಟಿ ಆದಾಯ ಇರುವವರೂ ಶೇ.30 ಕಟ್ಟಬೇಕು. ನಮ್ಮ ದೇಶದಲ್ಲಿ ಅತಿ ಹೆಚ್ಚು ಆದಾಯವಿರುವವರು ಮತ್ತು ಕಾರ್ಪೊರೇಟ್ ಬಂಡವಾಳಿಗರು ಕಡಿಮೆ ತೆರಿಗೆ ಕಟ್ಟುತ್ತಾರೆ. ಅದೆ ಸಂದರ್ಭದಲ್ಲಿ ಪರೋಕ್ಷ ತೆರಿಗೆ ಕಟ್ಟುವ ನಮ್ಮ ದೇಶದ ಜನರು ಅಮೆರಿಕ, ಚೀನಾ, ಇಂಗ್ಲೆAಡ್ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶದ ಜನರಿಗಿಂತಲೂ ಹೆಚ್ಚು ತೆರಿಗೆಯನ್ನು ಪಾವತಿಸುತ್ತಾರೆ. ದೇಶದ ದೊಡ್ಡ ಸಂಖ್ಯೆಯ ಯುವಕರು ಮೋದಿಯವರನ್ನು ನಂಬಿ ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಿದರು. ಈಗ ಅವರೆಲ್ಲಾ ಕಣ್ ಕಣ್ ಬಿಡುತ್ತಿದ್ದಾರೆ. 2014 ರಲ್ಲಿ 20 ವರ್ಷದ ಯುವಕನಿಗೆ 2024 ರ ವೇಳೆಗೆ 30 ವರ್ಷ ವಯಸ್ಸಾಗುತ್ತದೆ. 30 ವರ್ಷದವರಿಗೆ 40 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ. ದೇಶವೊಂದರ ದೊಡ್ಡ ಸಂಪತ್ತುಗಳಲ್ಲಿ ಮಾನವ ಸಂಪತ್ತೂ ಒಂದು. ಯಾವ ದೇಶ ದುಡಿಯುವ ಕೈಗಳಿಗೆ ಉದ್ಯೋಗ ನೀಡುತ್ತದೊ ಅಂಥಹ ದೇಶದ ಅಭಿವೃದ್ಧಿ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಆ ದೇಶದ ಆರ್ಥಿಕತೆ ವಿನಾಶದ ಹಾದಿ ಹಿಡಿಯುತ್ತದೆ ಎಂದು ಎಚ್ಚರಿಸಿದ್ದಾರೆ. ಇಂಥ ಹಲವಾರು ಕಾರಣಗಳಿಂದಾಗಿ, ಪ್ರಧಾನಿ ಮೋದಿಯವರು ಮಾಡಿದ ಘೋಷಣೆಗಳನ್ನು, ಮಾತುಗಳನ್ನು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಅರ್ಥ ಮಾಡಿಕೊಂಡರೆ ಮಾತ್ರ ನಿಜ ಏನೆಂದು ಅರ್ಥವಾಗುತ್ತದೆ. ದೇಶವನ್ನು ಅಭಿವೃಧ್ಧಿ ಮಾಡುತ್ತಿದ್ದೇನೆ ಎಂದು ಅವರು ಘೋಷಣೆ ಕೂಗಿದರೆ ದೇಶವನ್ನು ಮಾರಾಟ ಮಾಡುತ್ತಿದ್ದೇನೆ ಎಂಬಂತೆ ಕೇಳಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/3dr0njE

ಬ್ಯಾಕ್‌ಸ್ಟ್ರೋಕ್‌ ಈಜಿನಲ್ಲಿ ಟೋಕಿಯೋ ಟಿಕೆಟ್‌ ಪಡೆದ ಕರ್ನಾಟಕದ ಶ್ರೀಹರಿ!

ಬೆಂಗಳೂರು: ರೋಮ್‌ನಲ್ಲಿ ನಡೆದ ಸೆಟ್ಟೆ ಕಾಲಿ ಟ್ರೋಫಿ ಚಾಂಪಿಯನ್‌ಷಿಪ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ವಾಲಿಫೈಯಿಂಗ್‌ ರೌಂಡ್‌ನಲ್ಲಿ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್‌ ನೀಡಿದ ಅದ್ಭುತ ಪ್ರದರ್ಶನಕ್ಕೆ 100 ಮೀ. ಬ್ಯಾಕ್‌ಸ್ಟ್ರೋಕ್‌ ವಿಭಾಗದ ಅರ್ಹತೆ ಲಭ್ಯವಾಗಿದೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜಿನಲ್ಲಿ 53.85 ಸೆಕೆಂಡ್‌ಗಳ ಒಳಗೆ ಗುರಿ ಮುಟ್ಟಬೇಕಿತ್ತು. ಅರ್ಹತಾ ಟ್ರಯಲ್ಸ್‌ನಲ್ಲಿ ಶ್ರೀಹರಿ 53.77 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 'ಎ' ಸ್ಟ್ರಾಂಡರ್ಡ್‌ ಅರ್ಹತೆ ಪಡೆದುಕೊಂಡಿದ್ದಾರೆ. "ಟೋಕಿಯೋ ಒಲಿಂಪಿಕ್ಸ್‌ಗೆ ಶ್ರೀಹರಿ ನಟರಾಜ್‌ 53.77 (ಸೆಕೆಂಡ್ಸ್‌) ಅರ್ಹತಾ ಸಮಯದೊಂದಿಗೆ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಈಜು ಸಂಸ್ಥೆ (ಫಿನಾ) ರೋಮ್‌ನಲ್ಲಿ ಆಯೋಜಿಸಿದ್ದ ಸೆಟ್ಟೆ ಕಾಲಿ ಟ್ರೋಫಿ ಈಜು ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮೆರೆದಿದ್ದಾರೆ. ಈ ಮೂಲಕ ಸಾಜನ್ ಪ್ರಕಾಶ್‌ ನಂತರ 'ಎ' ಸ್ಟ್ಯಾಂಡರ್ಡ್‌ ಅರ್ಹತೆ ಪಡೆದ ಎರಡನೇ ಈಜುಪಟು ಎಂಬ ಹೆಗ್ಗಳಿಕೆಗೆ ಶ್ರೀಹರಿ ಪಾತ್ರರಾಗಿದ್ದಾರೆ," ಎಂದು ಭಾರತದ ಈಜು ಒಕ್ಕೂಟ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಿದೆ. ಶ್ರೀಹರಿ ನಟರಾಜ್‌, ಭಾನುವಾರ ನೂತನ ರಾಷ್ಟ್ರೀಯ ದಾಖಲೆ ಬರೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಟೈಮ್‌ ಟ್ರಯಲ್‌ನಲ್ಲಿ ಈಜುಪಟುಗಳಿಗೆ ಬೇರೆ ಅವರೊಂದಿಗೆ ಸ್ಪರ್ಧಿಸುವಂತೆ ಇರುವುದಿಲ್ಲ. ಬದಲಿಗೆ ತಮ್ಮ ಸಮಯವನ್ನು ಸುಧಾರಿಸಿಕೊಳ್ಳುವ ಅವಕಾಶ ಇರುತ್ತದೆ. ಬೆಂಗಳೂರು ಮೂಲದ ಈಜುಪಟು ಇದರ ಲಾಭ ಪಡೆದು ಒಲಿಂಪಿಕ್ಸ್‌ ಟಿಕೆಟ್‌ ಸಂಪಾದಿಸಿದ್ದಾರೆ. ಬಸವನಗುಡಿ ಈಜು ಕೇಂದ್ರದ ಮತ್ತೊಬ್ಬ ಈಜುಪಟು ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಂತ್ತಾಗಿದೆ. ಒಲಿಂಪಿಕ್ಸ್‌ನಲ್ಲಿ ಇಬ್ಬರು ಈಜುಪಟುಗಳು 'ಎ' ಸ್ಟ್ಯಾಂಡರ್ಡ್‌ ಅರ್ಹತೆಯಲ್ಲಿ ಸ್ಪರ್ಧಿಸುತ್ತಿರುವುದು ಕೂಡ ಇದೇ ಮೊದಲು. ಇದಕ್ಕೂ ಮುನ್ನ ಸಾಜನ್‌ ಪ್ರಕಾಶ್‌ 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಈ ಸಾಧನೆ ಮೆರೆದಿದ್ದರು. 27 ವರ್ಷದ ಈಜುಪಟು ಸಾಜನ್‌, ಏಷ್ಯನ್‌ ಕಂಚಿನ ಪದಕ ವಿಜೇತ ಸ್ವಿಮ್ಮರ್‌ ವೀರ್‌ಧವಳ್‌ ಖಾಡೆ (1:49.86 ಸೆ.) ಅವರ ದಾಖಲೆಯನ್ನು ಮುರಿದು ಈ ಅರ್ಹತೆ ಗಿಟ್ಟಿಸಿದ್ದಾರೆ. ಸಾಜನ್‌ 2016ರ ರಿಯೊ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು, ಇನ್ನು ಶ್ರೀಹರಿ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3y6bQwR

ಆನ್‌ಲೈನ್ ಕ್ಲಾಸ್‌ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮಸ್ತಿ..! ಪೋಷಕರೇ ಮಕ್ಕಳ ಮೇಲೆ ಇರಲಿ ನಿಗಾ..!

ನಾಗರಾಜು ಅಶ್ವತ್ಥ್ : ಎಲ್ಲೆಡೆ ಕೊರೊನಾದಿಂದಾಗಿ ನೇರ ತರಗತಿಗೆ ಪರ್ಯಾಯವಾಗಿ ಆನ್‌ಲೈನ್‌ ಶಿಕ್ಷಣ ಮಕ್ಕಳನ್ನು ತಲುಪುತ್ತಿದೆ. ಈ ಹಂತದಲ್ಲಿ ಅನಿವಾರ್ಯವಾಗಿ ಮೊಬೈಲ್‌ ಅವಲಂಬಿಸಬೇಕಿದ್ದು, ಸೈಬರ್‌ ಕ್ರೈಂ, ಆನ್‌ಲೈನ್‌ ವಂಚನೆಗಳಿಗೆ ಮಕ್ಕಳು ಒಳಗಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಮೊಬೈಲ್‌ ಕೊಡಿಸುವ ಪೋಷಕರು, ಮಕ್ಕಳ ಚಲನ ವಲನದತ್ತ ಗಮನ ಹರಿಸಬೇಕಿದೆ. ಶೈಕ್ಷಣಿಕ ಉದ್ದೇಶಗಳಿಗಲ್ಲದೆ ಬಹುತೇಕ ಎಲ್ಲಾ ದೈನಂದಿನ ಚಟುವಟಿಕೆಗಳಿಗೆ ಮೊಬೈ ಲ್‌ ಬಳಸುವುದರಿಂದಾಗಿ ಮಕ್ಕಳು ತಪ್ಪು ದಾರಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚಿವೆ. ಮಕ್ಕಳಿಗೆ ಮೊಬೈಲ್‌ನಲ್ಲಿ ಯಾವುದು ಸರಿ, ತಪ್ಪು ಎಂಬುದನ್ನು ವಿವೇಚಿಸುವ ಪರಿಜ್ಞಾನ ಇರಲ್ಲ. ಹಾಗಾಗಿ ಎಲ್ಲಾ ಅಪ್ಲಿಕೇಶನ್‌ಗಳ ಕೂಪಕ್ಕೆ ಬೀಳುತ್ತಿದ್ದಾರೆ. ಹೀಗಾಗಿ, ಪೋಷಕರು ಮಕ್ಕಳ ಮೊಬೈಲ್‌ಗೆ ತಮ್ಮ ಮೊಬೈಲ್‌ ಲಿಂಕ್‌ ಮಾಡಿಕೊಳ್ಳಲು ಕೆಲವೊಂದು ಅಪ್ಲಿಕೇಶನ್‌ಗಳಿವೆ. ಯೂಟ್ಯೂಬ್‌ ಸಹಾಯದಿಂದ ಮಕ್ಕಳ ಮೊಬೈಲ್‌ ನಿಯಂತ್ರಿಸಲು ಅನೇಕ ಮಾರ್ಗದರ್ಶಿ ವೀಡಿಯೊಗಳಿವೆ. ಒಂದೇ ಮೊಬೈಲ್‌ ಪೋಷಕರು, ಮಕ್ಕಳು ಬಳಸುವಂತಿದ್ದರೆ ಸಮಸ್ಯೆ ಸ್ವಲ್ಪ ಕಡಿಮೆ. ಹೀಗಿರುವಾಗ ಮಕ್ಕಳು ಯಾವ ಅಪ್ಲಿಕೇಶನ್‌ ಬಳಸಿದ್ದಾರೆ ಎನ್ನುವ ಹಿಸ್ಟರಿ ಸೇವ್‌ ಆಗಿರುತ್ತದೆ. ಹೀಗಾಗಿ, ಪೋಷಕರು ನಿಗಾ ವಹಿಸಲು ಉಪಯುಕ್ತವಾಗುತ್ತದೆ. ಎಚ್ಚರವಿರಲಿ: ಆನ್‌ಲೈನ್‌ ವಂಚನೆಗಳು, ಸೈಬರ್‌ ಕ್ರೈಂನಂತಹ ಪ್ರಕರಣಗಳಿಗೆ ಮಕ್ಕಳು ಒಳಗಾಗಲು ಸದ್ಯದ ಆನ್‌ಲೈನ್‌ ತರಗತಿಗಳು ಸಕಾಲವಾಗಿ ಪರಿಣಮಿಸಿದೆ. ಪಾರ್ಟ್‌ ಟೈಂ ಜಾಬ್‌, ಬಹುಮಾನ ಗೆದ್ದಿರುವಿರಿ, ಬ್ಯಾಂಕ್‌ ಖಾತೆಗೆ ಸಂಬಂಧಿಸಿದ ಅಪ್‌ಡೇಟ್‌, ಉಚಿತ ಕ್ರೆಡಿಟ್‌ ಕಾರ್ಡ್‌ ಎನ್ನುವ ನೆಪದಲ್ಲಿ ಬರುವ ಅನಾಮಧೇಯ ಕರೆಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. 10 ವರ್ಷದಿಂದ 18 ವರ್ಷದೊಳಗಿನ ಮಕ್ಕಳು ಹಣ, ಬಹುಮಾನ ಮತ್ತಿತರೆ ಕಾರಣಗಳಿಂದಾಗಿ ಆನ್‌ಲೈನ್‌ ವಂಚಕರ ಮಾತುಗಳಿಗೆ ಮರಳಾಗುತ್ತಿದ್ದು, ಪೋಷಕರು ನಿಗಾ ವಹಿಸದಿದ್ದರೆ ಮುಂದೊಂದು ದಿನ ಸಮಸ್ಯೆ ಎದುರಿಸಬೇಕಾದೀತು. ಫೇಸ್‌ಬುಕ್‌, ಇನ್‌ಸ್ಟಾಗ್ರಾಂನಲ್ಲೂ ವಂಚನೆ: ಶಾಲಾ, ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳ ನೆಪದಲ್ಲಿ ಮೊಬೈಲ್‌ ಬಳಕೆ ಹೆಚ್ಚಿಸಿದ್ದಾರೆ. ಈ ಮಧ್ಯೆ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಬಳಕೆ ಹೆಚ್ಚಿಸಿದ್ದು, ಅನಾಮಧೇಯರನ್ನು ಸ್ನೇಹಿತರಾಗಿ ಮಾಡಿಕೊಂಡು ಹಣಕಾಸಿನ ವಂಚನೆಗೆ ಒಳಗಾಗುತ್ತಿದ್ದಾರೆ. ಜತೆಗೆ, ಇ-ಬ್ಯಾಂಕಿಂಗ್‌ಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವ ಪೋಷಕರು ಮಕ್ಕಳಿಗೆ ಪಾಸ್‌ವರ್ಡ್‌ ಕೊಡುವ ಮುನ್ನ ಎಚ್ಚರಿಕೆ ವಹಿಸುವುದು ಉತ್ತಮ. ಜೂನ್ 30 ಸೋಶಿಯಲ್‌ ಮೀಡಿಯಾ ದಿನ: ಸಾಮಾಜಿಕ ಜಾಲತಾಣಗಳ ಸ್ಮರಣೆಗೂ ಒಂದು ದಿನವಿದೆ. ಜಾಲತಾಣಗಳನ್ನು ಕ್ರಾಂತಿಯ ಅಸ್ತ್ರವನ್ನಾಗಿ ಬಳಸಿದರೆ ಒಂದು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಬದಲಾವಣೆಗಳಿಗೆ ವೇದಿಕೆಯಾಗಲಿದೆ. ಇತ್ತೀಚಿಗೆ ಕನ್ನಡ ಭಾಷೆಗಾದ ಅಪಮಾನಕ್ಕೆ ಸಾಮಾಜಿಕ ಜಾಲತಾಣದಲ್ಲಾದ ಚರ್ಚೆಯ ಶೇರ್‌ಗಳೇ ಸಾಕ್ಷಿ. ಒಂದೇ ದಿನದಲ್ಲಿ ಗೂಗಲ್‌ನಂತಹ ದೊಡ್ಡ ಕಂಪನಿ ಕನ್ನಡದ ಕ್ಷಮೆ ಕೋರಿ ಸಂದೇಶ ರವಾನಿಸುವ ಮಟ್ಟಿಗೆ ಜಾಲತಾಣ ಪ್ರಭಾವಿಯಾಗಿದೆ. ಜಾಲತಾಣಗಳನ್ನು ಸಕಾರಾತ್ಮಕ ವಿಚಾರಗಳಿಗೆ ಮಾತ್ರ ಬಳಸಿ ಎನ್ನುವುದು ವಿಕ ಕಳಕಳಿ.


from India & World News in Kannada | VK Polls https://ift.tt/3dslyC4

ಭಾರತದ ಕೋವ್ಯಾಕ್ಸಿನ್‌ಗೆ ಆಘಾತ: 20 ಮಿಲಿಯನ್ ಡೋಸ್ ಲಸಿಕೆ ಒಪ್ಪಂದ ಅಮಾನತುಗೊಳಿಸಿದ ಬ್ರೆಜಿಲ್

ರಿಯೊ ಡಿ ಜನೈರೊ: ಭಾರತದ ಸಂಸ್ಥೆಯ ಕೋವ್ಯಾಕ್ಸಿನ್ ಖರೀದಿಗಾಗಿ ಮಾಡಿಕೊಂಡಿದ್ದ 324 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಅಮಾನತುಗೊಳಿಸಿದೆ. ಈ ಒಪ್ಪಂದದ ಮೂಲಕ ಅಧ್ಯಕ್ಷ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದು, ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಭಾರತ್ ಬಯೋಟೆಕ್‌ನ ಲಸಿಕೆಯ 20 ಮಿಲಿಯನ್ ಡೋಸ್ ಖರೀದಿಗಾಗಿ ಮಾಡಿಕೊಂಡ ಒಪ್ಪಂದದ ಬಳಿಕ ಅಕ್ರಮದ ಕುರಿತಾಗಿ ಮಧ್ಯವರ್ತಿಗಳು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದು ಬೊಲ್ಸೊನರೊ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಅವ್ಯವಹಾರದ ಕುರಿತಾದ ತಮ್ಮ ಆತಂಕವನ್ನು ಅಧ್ಯಕ್ಷರಿಗೆ ವೈಯಕ್ತಿಕವಾಗಿ ತಿಳಿಸಿದ್ದಾಗಿ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ್ ಬಯೋಟೆಕ್ ಜತೆಗಿನ ಒಪ್ಪಂದ ಅಮಾನತುಗೊಂಡಿದ್ದು, ಅಕ್ರಮದ ಕುರಿತಾದ ಆರೋಪಗಳ ಬಗ್ಗೆ ತಮ್ಮ ತಂಡ ತನಿಖೆ ನಡೆಸಲಿದೆ ಎಂದು ಆರೋಗ್ಯ ಸಚಿವ ಮರ್ಸೆಲೊ ಕ್ಯುರೊಗಾ ತಿಳಿಸಿದ್ದಾರೆ. 'ಸಿಜಿಯು ನಡೆಸಿದ ಪ್ರಾಥಮಿಕ ವಿಶ್ಲೇಷಣೆ ಪ್ರಕಾರ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆದರೆ ಇನ್ನಷ್ಟು ಹೆಚ್ಚಿನ ತನಿಖೆಗೆ ಅನುಕೂಲವಾಗುವಂತೆ ಒಪ್ಪಂದವನ್ನು ಅಮಾನತು ಮಾಡಲು ಆರೋಗ್ಯ ಸಚಿವಾಲಯ ನಿರ್ಧರಿಸಿದೆ' ಎಂದು ಸಚಿವಾಲಯ ಹೇಳಿಕೆ ನೀಡಿದೆ. ಇದಕ್ಕೂ ಮುನ್ನ ಮಂಗಳವಾರ ಸಿಎನ್ಎನ್ ಬ್ರೆಸಿಲ್, ಸಚಿವಾಲಯವು ಒಪ್ಪಂದವನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ವರದಿ ಮಾಡಿತ್ತು. ಬೇರೆ ಲಸಿಕೆಗಳಿಗೆ ಹೋಲಿಸಿದರೆ ದುಬಾರಿಯಾಗಿರುವ ಕೋವ್ಯಾಕ್ಸಿನ್ ಲಸಿಕೆಗೆ ಒಪ್ಪಂದ ಮಾಡಿಕೊಂಡಿರುವುದು, ತುರ್ತು ಮಾತುಕತೆಗಳನ್ನು ನಡೆಸಿರುವುದು ಮತ್ತು ಇನ್ನೂ ಔಷಧ ನಿಯಂತ್ರಕರು, ಡಬ್ಲ್ಯೂಎಚ್‌ಒ ಅನುಮೋದನೆಯಂತಹ ಪ್ರಮುಖ ಹಂತಗಳು ಬಾಕಿ ಇರುವಾಗಲೇ ಒಪ್ಪಂದ ನಡೆಸಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಫೆಬ್ರವರಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಒಪ್ಪಂದವನ್ನು ಸೆನೆಟ್ ಸಮಿತಿಯೊಂದು ಕೂಡ ತನಿಖೆ ನಡೆಸುತ್ತಿದೆ.


from India & World News in Kannada | VK Polls https://ift.tt/35ZsDpu

ಆರ್‌ಸಿಬಿಯಲ್ಲಿ ಕೊಹ್ಲಿಗೆ ಬೌಲಿಂಗ್‌ ನಿರಾಕರಿಸಿದ್ದ ಅಸಲಿ ಘಟನೆ ತೆರೆದಿಟ್ಟ ಜೇಮಿಸನ್‌!

ಹೊಸದಿಲ್ಲಿ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ವೇಳೆ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಡ್ಯೂಕ್‌ ಬಾಲ್‌ನಲ್ಲಿ ಬೌಲ್ ಮಾಡಲು ನಿರಾಕರಿಸಿದ್ದ ಅಸಲಿ ಘಟನೆಯನ್ನು ನ್ಯೂಜಿಲೆಂಡ್‌ ಯುವ ಆಲ್‌ರೌಂಡರ್‌ ಬಹಿರಂಗಪಡಿಸಿದ್ದಾರೆ. ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯ ನಿಮಿತ್ತಾ ಕೈಲ್‌ ಜೇಮಿಸನ್ ಅವರು ಕೆಲ ಡ್ಯೂಕ್‌ ಬಾಲ್‌ಗಳೊಂದಿಗೆ ಐಪಿಎಲ್‌ ಆಡಲು ಭಾರತಕ್ಕೆ ಬಂದಿದ್ದರು. ಈ ವೇಳೆ ಡ್ಯೂಕ್‌ ಬಾಲ್‌ನಲ್ಲಿ ತಮಗೆ ನೆಟ್ಸ್‌ನಲ್ಲಿ ಬೌಲ್‌ ಮಾಡುವಂತೆ ತಮಾಷೆಯಾಗಿ ಕೇಳಿದ್ದ ಕೊಹ್ಲಿಗೆ ಜೇಮಿಸನ್‌ ನಿರಾಕರಿಸಿದ್ದರು ಎಂಬ ಬಗ್ಗೆ ಆರ್‌ಸಿಬಿಯ ಡ್ಯಾನ್‌ ಕ್ರಿಸ್ಟಿಯನ್‌ ಬಹಿರಂಗಪಡಿಸಿದ್ದರು. ಆದರೆ, ಇತ್ತೀಚೆಗೆ ಮುಕ್ತಾಯವಾಗಿದ್ದ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಕೈಲ್‌ ಜೇಮಿಸನ್‌ ಎರಡೂ ಇನಿಂಗ್ಸ್‌ಗಳಲ್ಲಿ ಔಟ್‌ ಮಾಡಿದ್ದರು. ಆ ಮೂಲಕ ಟೀಮ್‌ ಇಂಡಿಯಾ ನಾಯಕನ ವಿರುದ್ಧ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸ್ಪೋರ್ಟಿಂಗ್‌ ನ್ಯೂಸ್‌ ಜೊತೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೈಲ್‌ ಜೇಮಿಸನ್‌, "ಇಲ್ಲವೇ ಇಲ್ಲ, ಅವರು(ಕೊಹ್ಲಿ) ನನಗೆ ಬೌಲ್‌ ಮಾಡುವಂತೆ ಜಾಸ್ತಿ ಕೇಳಲಿಲ್ಲ. ಆದರೆ, ಡ್ಯಾನ್‌ ಕ್ರಿಸ್ಟಿಯನ್‌ ಅವರು ಈ ಘಟನೆಯನ್ನು ಸ್ವಲ್ಪ ಹಾಸ್ಯಭರಿತವಾಗಿ ಹೇಳಿಕೊಂಡಿದ್ದಾರಷ್ಟೆ. ಐಪಿಎಲ್‌ ಆರಂಭಕ್ಕೂ ಮುನ್ನ ಅಭ್ಯಾಸದ ಸಮಯದಲ್ಲಿ ಯುಕೆ ಪ್ರವಾಸದ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು. ಈ ವೇಳೆ ನನ್ನ ಬಳಿ ಕೆಲ ಡ್ಯೂಕ್‌ ಬಾಲ್‌ಗಳಿರುವುದರ ಬಗ್ಗೆ ಹೇಳಿಕೊಂಡಿದ್ದೆ. ಆಗ ಅವರು(ಕ್ರಿಸ್ಟಿಯನ್‌) ನನ್ನ ಬಳಿಯೂ ಕೆಲ ಚೆಂಡುಗಳಿವೆ ಎಂದಿದ್ದರು," ಎಂದು ಹೇಳಿದರು. ನಾಯಕ ಅವರೊಂದಿಗೆ ಈ ಬಗ್ಗೆ ನಡೆಸಿದ್ದ ಸಂಭಾಷಣೆಯನ್ನೂ ಅವರು ಬಹಿರಂಗಪಡಿಸಿದರು. ನೆಟ್ಸ್‌ನಲ್ಲಿ ಬೌಲ್‌ ಮಾಡುವಂತೆ ಕೊಹ್ಲಿ ಹೇಳಿದ್ದರಲ್ಲಿ ಯಾವುದೇ ಕಪಟ ಅಥವಾ ಮೋಸ ಇರಲಿಲ್ಲ. ಅವರ ಮಾತುಗಳು ಹಾಸ್ಯಭರಿತವಾಗಿತ್ತು ಎಂದರು. "ನಾವು ತರಬೇತಿ ಮಾಡಲು ಬಯಸುವುದಾದರೆ ಐಪಿಎಲ್‌ ಟೂರ್ನಿಯ ಕೊನೆಯಲ್ಲಿ ನೋಡೋಣ. ಆದರೆ, ನನಗೆ ಬೌಲಿಂಗ್‌ ಮಾಡಬೇಕು ಎಂದು ಅವರು ವಿಶೇಷವಾಗಿ ಹೇಳಿರಲಿಲ್ಲ ಅಥವಾ ಇದಕ್ಕೆ ಅವರು ಸಮಯ ಕೂಡ ನಿಗದಿಪಡಿಸಿರಲಿಲ್ಲ. ಅವರು (ಕೊಹ್ಲಿ) ನಿಮಗೆ ಹೇಳಬಹುದಾದ ಯಾವುದನ್ನಾದರೂ ಪ್ರಚೋದಿಸುತ್ತಾರೆ, ಆದರೆ ಅದು ಸ್ಪಷ್ಟವಾಗಿ ತಮಾಷೆಯಾಗಿರುತ್ತದೆ," ಎಂದು ಕೈಲ್‌ ಜೇಮಿಸನ್‌ ತಿಳಿಸಿದರು. ಅರ್ಧಕ್ಕೆ ನಿಂತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎರಡನೇ ಭಾಗವನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಸೆಪ್ಟೆಂಬರ್‌-ಅಕ್ಟೋಬರ್‌ ಅವಧಿಯಲ್ಲಿ ಮುಂದುವರಿಯಲಿದೆ. ಈ ವೇಳೆ ವಿರಾಟ್‌ ಕೊಹ್ಲಿ ಹಾಗೂ ಕೈಲ್‌ ಜೇಮಿಸನ್‌ ಮತ್ತೊಮ್ಮೆ ಒಂದಾಗಲಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2US31bT

ಅಮೆರಿಕದ ಪ್ರಮುಖ ಸಂಸ್ಥೆಯಿಂದ ಮೆಚ್ಚುಗೆ ಪಡೆದ ಭಾರತದ ಕೋವ್ಯಾಕ್ಸಿನ್: ಡೆಲ್ಟಾ, ಆಲ್ಫಾ ವಿರುದ್ಧ ಲಸಿಕೆ ಪರಿಣಾಮಕಾರಿ

ವಾಷಿಂಗ್ಟನ್: ಭಾರತದ ಹೊರಗಿನ ಮಾರುಕಟ್ಟೆಯನ್ನು ಪ್ರವೇಶಿಸಲು ಶತಪ್ರಯತ್ನ ನಡೆಸುತ್ತಿರುವ ಭಾರತ್ ಬಯೋಟೆಕ್‌ನ ಲಸಿಕೆಗೆ ಖುಷಿ ಸುದ್ದಿಯೊಂದು ದೊರಕಿದೆ. ಐಸಿಎಂಆರ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಲಸಿಕೆಯು ಆಲ್ಫಾ ಹಾಗೂ ಡೆಲ್ಟಾ ಪ್ರಭೇದಗಳ ಅನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸಬಲ್ಲದು ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಐಎಚ್) ತಿಳಿಸಿದೆ. ಕೋವ್ಯಾಕ್ಸಿನ್ ಪಡೆದುಕೊಂಡ ವ್ಯಕ್ತಿಗಳ ರಕ್ತ ಸಾರದ ಮಾದರಿಗಳನ್ನು ಇರಿಸಿಕೊಂಡು ನಡೆಸಿದ ಎರಡು ಅಧ್ಯಯನಗಳಲ್ಲಿ, ಲಸಿಕೆಯು ಬ್ರಿಟನ್ ಹಾಗೂ ಭಾರತದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್‌ನ B.1.1.7 (ಆಲ್ಫಾ) ಮತ್ತು B.1.617 (ಡೆಲ್ಟಾ) ತಳಿಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸುವ ಆಂಟಿಬಾಡಿಗಳನ್ನು ಸೃಷ್ಟಿಸುವುದು ಪತ್ತೆಯಾಗಿದೆ. ಲ್ಯಾನ್ಸೆಟ್ ಇನ್‌ಫೆಕ್ಟಿಯಸ್ ಡಿಸೀಸ್‌ನಲ್ಲಿ ಪ್ರಕಟವಾದ 2ನೇ ಹಂತದ ಪ್ರಯೋಗದ ವರದಿಯನ್ನು ಉಲ್ಲೇಖಿಸಿರುವ ಎನ್‌ಐಎಚ್, ಕೋವ್ಯಾಕ್ಸಿನ್ ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಈ ಫಲಿತಾಂಶಗಳು ದೃಢಪಡಿಸಿವೆ ಎಂದಿದೆ. ಭಾರತದೊಂದಿಗೆ ಅನೇಕ ವೈಜ್ಞಾನಿಕ ಸಹಭಾಗಿತ್ವದ ಇತಿಹಾಸ ಹೊಂದಿರುವ ಎನ್‌ಐಎಚ್, ಕೋವ್ಯಾಕ್ಸಿನ್ ಲಸಿಕೆಯು ಪ್ರತಿರಕ್ಷಣಾ ಪ್ರತಿಕ್ರಿಯೆ ನೀಡುವ ಹಾಗೂ ಅದರ ದಕ್ಷತೆಯನ್ನು ವೃದ್ಧಿಸುವಂತಹ ಪೂರಕ ಅಂಶಗಳನ್ನು ಹೊಂದಿದೆ ಎಂದು ತಿಳಿಸಿದೆ. 'ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಅಪ್ರಕಟಿತ ಮಧ್ಯಂತರ ಫಲಿತಾಂಶವು ಲಕ್ಷಣಕಾರಕ ರೋಗದ ವಿರುದ್ಧ ಶೇ 78ರಷ್ಟು ಪರಿಣಾಮಕಾರಿ ಎನಿಸಿದೆ. ಜತೆಗೆ ಆಸ್ಪತ್ರೆ ದಾಖಲೀಕರಣ ಸೇರಿದಂತೆ ತೀವ್ರ ವಿರುದ್ಧ ಶೇ 100ರಷ್ಟು ಮತ್ತು ಲಕ್ಷಣರಹಿತ ಕೊರೊನಾ ವೈರಸ್ ಸೋಂಕಿನಿಂದ ಶೇ 70ರಷ್ಟು ಪರಿಣಾಮಕಾರಿ' ಎಂದು ಅದು ವಿವರಿಸಿದೆ. ಸಂಸ್ಥೆ ತನ್ನ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಬಳಸಿರುವ ಸಹಾಯಕ ಅಂಶ ಅಲ್ಹಿಡ್ರೋಕ್ಸಿಕ್ಯುಮ್-II ಅನ್ನು ಕನ್ಸಾಸ್‌ನ ಲಾರೆನ್ಸ್‌ನಲ್ಲಿರುವ ವೈರೋವ್ಯಾಕ್ಸ್ ಎಲ್‌ಎಲ್‌ಸಿ ಎಂಬ ಬಯೋಟೆಕ್ ಕಂಪೆನಿಯು ಎನ್‌ಐಎಐಡಿ ಅಡ್ಜುವಾಂಟ್ ಡೆವೆಲಪ್‌ಮೆಂಟ್ ಪ್ರೋಗ್ರಾಂ ನೆರವಿನೊಂದಿಗೆ ಪತ್ತೆಹಚ್ಚಲಾಗಿತ್ತು.


from India & World News in Kannada | VK Polls https://ift.tt/3y8Pdbq

ಕಾಂಗ್ರೆಸ್‌ನಲ್ಲಿ ವಲಸಿಗ ಚರ್ಚೆ: ಸಿದ್ದರಾಮಯ್ಯ ಆಪ್ತ ಎಚ್‌.ಸಿ ಮಹದೇವಪ್ಪ ಕೊಟ್ಟ ಉತ್ತರವೇನು?

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆಯ ಬೆನ್ನಲ್ಲೆ ವಲಸಿಗ ಎಂಬ ಚರ್ಚೆ ಶುರುವಾಗಿದ್ದು ಇದಕ್ಕೆ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡುತ್ತಾ ಬೇರೆ ಪಕ್ಷದಿಂದ ಬಂದವರು ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿ ಮಾಡಬಾರದು ಎಂದು ಹೇಳಿದ್ದರು. ಡಿಕೆಶಿ ಈ ಹೇಳಿಕೆ ನಾನಾ ಅರ್ಥದಲ್ಲಿ ಚರ್ಚೆಗೊಳಪಟ್ಟಿತ್ತು. ಇದಕ್ಕೆ ಇದೀಗ ಟ್ವಿಟ್ಟರ್‌ನಲ್ಲಿ ಉತ್ತರ ನೀಡಿರುವ ಮಾಜಿ ಸಚಿವ ಎಚ್ ಸಿ ಮಹದೇವಪ್ಪ, ಒಂದು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಬಂದು ಸರ್ಕಾರವನ್ನು ರಚಿಸಿ, ವಿರೋಧ ಪಕ್ಷದವರಿಂದಲೇ ಸೈ ಎನಿಸಿಕೊಳ್ಳುವಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಿ ಪಕ್ಷಕ್ಕೆ ಹೆಸರು ಮತ್ತು ಶಕ್ತಿಯನ್ನು ತಂದ ಮೇಲೂ ನಮ್ಮ ಪಕ್ಷನಿಷ್ಠೆಯನ್ನು ಸಾಬೀತುಪಡಿಸಬೇಕಾದ ಅಗತ್ಯವೇನಿದೆ ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಎಂಬುದೇ ಒಂದು ಹೋರಾಟ ಮತ್ತು ಚಳುವಳಿ. ಇಂತಹ ಚಳುವಳಿಗೆ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬರುವ ಜನರನ್ನು ಸೇರಿಸಿಕೊಂಡು ಹಿರಿಯರು ಮತ್ತು ಕಿರಿಯೆರೆಲ್ಲಾ ಒಟ್ಟಾಗಿ ಮುನ್ನಡೆಯುವುದು ಸೂಕ್ತ ಎಂಬ ಸಲಹೆಯನ್ನು ಅವರು ನೀಡಿದ್ದಾರೆ. ಸದ್ಯದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾನುವಾರ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ತಮ್ಮ ಆಪ್ತ ಅವರ ನಿವಾಸಕ್ಕೆ ತೆರಳಿದ್ದರು. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಮಹದೇವಪ್ಪ ಹೇಳಿಕೆ ನೀಡಿದ್ದರು. ಇದೀಗ ಇದರ ಬೆನ್ನಲ್ಲೆ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.


from India & World News in Kannada | VK Polls https://ift.tt/3xZdVea

ಕಾಂಗ್ರೆಸ್‌ನಲ್ಲಿ ಭವಿಷ್ಯದ ಸಿಎಂ ಸ್ಥಾನಕ್ಕಾಗಿ ಫೈಟ್: ಗೊಂದಲ ಬಗೆಹರಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ ಸುರ್ಜೇವಾಲ!

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕಾಗಿ ಸಮರ ತೀವ್ರಗೊಂಡ ಹಿನ್ನೆಲೆಯಲ್ಲಿ ಗೊಂದಲ ಬಗೆಹರಿಸಲು ರಾಜ್ಯ ಉಸ್ತುವಾರಿ ಅವರು ಜುಲೈ 4 ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಭವಿಷ್ಯದ ಸಿಎಂ ಸ್ಥಾನ ಯಾರಿಗೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಲ್ಲದೆ ಪದಾಧಿಕಾರಿಗಳ ನೇಮಕ, ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವೂ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಇಬ್ಬರು ಪ್ರಭಾವಿ ನಾಯಕರ ನಡುವೆ ಈ ಜಟಾಪಟಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಲಿದ್ದಾರೆ. ಜುಲೈ 4 ರಂದು ರಾಜ್ಯಕ್ಕೆ ಆಗಮಿಸಿ ಇಬ್ಬರು ಮುಖಂಡರ ಜೊತೆ ಮಾತುಕತೆ ನಡೆಸಿ ಗೊಂದಲ ಬಗೆಹರಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಪದಾಧಿಕಾರಿಗಳ ನೇಮಕ ವಿಚಾರವಾಗಿ ಕೆಲ ದಿನಗಳ ಹಿಂದೆಯಷ್ಟೇ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು. ಇದೀಗ ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆಗೆ ಪ್ರತ್ಯೇಕ ಮಾತುಕತೆಯನ್ನು ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನಲಪಾಡ್‌ಗೆ ನೀಡುವ ವಿಚಾರವಾಗಿಯೂ ಇಬ್ಬರು ನಾಯಕರ ನಡುವಿನ ಭಿನ್ನಮತ ತೀವ್ರಗೊಂಡಿದೆ. ಈ ನಡುವೆ ದಲಿತ ಸಿಎಂ ವಿಚಾರವೂ ರಾಜ್ಯದಲ್ಲಿ ಮುನ್ನಲೆಗೆ ಬಂದಿದೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹಾಗೂ ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸುರ್ಜೇವಾಲ ರಾಜ್ಯ ಭೇಟಿ ಈ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.


from India & World News in Kannada | VK Polls https://ift.tt/3xaHd9B

ಕ್ರಿಸ್‌ ವೋಕ್ಸ್ ಮಾರಕ ದಾಳಿ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ 5 ವಿಕೆಟ್‌ ಜಯ!

ಹೊಸದಿಲ್ಲಿ: ಕ್ರಿಸ್‌ ವೋಕ್ಸ್‌(18ಕ್ಕೆ4 ) ಮಾರಕ ಬೌಲಿಂಗ್‌ ದಾಳಿ ಹಾಗೂ (79*) ಅಜೇಯ ಅರ್ಧಶತಕದ ನೆರವಿನಿಂದ ತಂಡ ಮೊದಲನೇ ಓಡಿಐ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಓಡಿಐ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಗಳಿಸಿದ್ದಾರೆ. ಚೆಸ್ಟರ್‌-ಲೀ ಸ್ಟ್ರೀಟ್‌ನ ರಿವರ್ಸ್‌ಸೈಡ್‌ ಅಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ತಂಡ 42.3 ಓವರ್‌ಗಳಿಗೆ 185 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ 34.5 ಓವರ್‌ಗಳಿಗೆ ಐದು ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಸುಲಭ ಗೆಲುವು ಪಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುವಂತೆ ಶ್ರೀಲಂಕಾ ತಂಡವನ್ನು ಆಹ್ವಾನಿಸಿದ ಇಂಗ್ಲೆಂಡ್‌ ನಾಯಕ ಐಯಾನ್‌ ಮಾರ್ಗನ್‌ ಅವರ ನಿರ್ಧಾರವನ್ನು ಸಹ ಆಟಗಾರರು ಸಕಾರಗೊಳಿಸಿದರು. ಆರಂಭದಿಂದಲೇ ಮಾರಕ ದಾಳಿ ನಡೆಸಿದ ಕ್ರಿಸ್‌ ವೋಕ್ಸ್ ಹಾಗೂ ಡೇವಿಡ್‌ ವಿಲ್ಲೀ ಶ್ರೀಲಂಕಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಬಹುಬೇಗ ಕೆಡವಿದರು. ಶ್ರೀಲಂಕಾ ಪರ ಅದ್ಬುತ ಪ್ರದರ್ಶನ ತೋರಿದ ಆರಂಭಿಕ ಬ್ಯಾಟ್ಸ್‌ಮನ್‌ ಕುಸಾಲ್‌ ಪೆರೆರಾ ಹಾಗೂ ಹಸರಂಗ ಇಂಗ್ಲೆಂಡ್‌ ಬೌಲರ್‌ಗಳನ್ನು ಮೆಟ್ಟಿ ನಿಂತರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 99 ರನ್‌ ಜೊತೆಯಾಟವಾಡುವ ಮೂಲಕ ಆರಂಭಿಕ ಮೂರು ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿದ್ದ ಶ್ರೀಲಂಕಾ ತಂಡವನ್ನು ಮೇಲೆತ್ತಿದರು. ಆದರೆ. 65 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 6 ಬೌಂಡರಿಯೊಂದಿಗೆ 54 ರನ್‌ ಗಳಿಸಿ ಆಡುತ್ತಿದ್ದ ಹಸರಂಗ ಅವರನ್ನು ಕ್ರಿಸ್‌ ವೋಕ್ಸ್ ಔಟ್‌ ಮಾಡುವ ಮೂಲಕ ದೊಡ್ಡ ಜೊತೆಯಾಟವನ್ನು ಬ್ರೇಕ್‌ ಮಾಡಿದರು. ನಂತರ ಕ್ರೀಸ್‌ಗೆ ಬಂದ ಧನಂಜಯ್‌ ಲಕ್ಷಣ್‌, ಆರ್‌ ಮೆಂಡಿಸ್‌ ಸೇರಿದಂತೆ ಇನ್ನುಳಿದ ಆಟಗಾರರು ಬಾಲಂಗೋಚಿಗಳಂತೆ ಪೆವಿಲಿಯನ್‌ ಸೇರಿದರು. ಆದರೆ, ಆರಂಭದಿಂದಲೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಆಡುತ್ತಿದ್ದ ಕುಸಾಲ್‌ ಪೆರೆರಾ 81 ಎಸೆತಗಳಲ್ಲಿ 73 ರನ್‌ ಗಳಿಸಿ ಡೇವಿಡ್‌ ವಿಲ್ಲೀಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಪ್ರವಾಸಿಗರು 185ಕ್ಕೆ ಆಲೌಟ್‌ ಆದರು. ಇಂಗ್ಲೆಂಡ್‌ ಪರ ಕ್ರಿಸ್‌ ವೋಕ್ಸ್ 4 ವಿಕೆಟ್‌ ಪಡೆದರೆ, ಡೇವಿಡ್‌ ವಿಲ್ಲೀ 3 ವಿಕೆಟ್‌ ಪಡೆದುಕೊಂಡರು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಇಂಗ್ಲೆಂಡ್‌ ತಂಡಕ್ಕೆ ಆರಂಭಿಕರಾದ ಜಾನಿ ಬೈರ್‌ಸ್ಟೋವ್‌ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 54 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತ್ತು. ಆದರೆ, ಲಿಯಾಮ್‌ ಲಿವಿಂಗ್‌ಸ್ಟೋನ್‌(9) ಹಾಗೂ ಜಾನಿ ಬೈರ್‌ಸ್ಟೋವ್‌(43) ಕೇವಲ 5 ರನ್‌ಗಳ ಅಂತರದಲ್ಲಿ ವಿಕೆಟ್‌ ಒಪ್ಪಿಸಿದರು. ಜೋ ರೂಟ್‌ ಅಜೇಯ ಅರ್ಧಶತಕ: ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜೋ ರೂಟ್‌ ಸೊಗಸಾದ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಎದುರಿಸಿದ 87 ಎಸೆತಗಳಲ್ಲಿ ಅವರು 4 ಬೌಂಡರಿಗಳೊಂದಿಗೆ 79 ರನ್‌ ಗಳಿಸಿ ಇಂಗ್ಲೆಂಡ್‌ ತಂಡದ 5 ವಿಕೆಟ್‌ಗಳ ಗೆಲುವಿಗೆ ನೆರವಾದರು. ಇವರಿಗೆ ಕೆಲ ಕಾಲ ಸಾಥ್‌ ನೀಡಿದ್ದ ಮೊಯೀನ್‌ ಅಲಿ 28 ರನ್‌ ಗಳಿಸಿದ್ದರು. ಶ್ರೀಲಂಕಾ ಪರ ಅತ್ಯುತ್ತಮ ಬೌಲಿಂಗ್‌ ಮಾಡಿದ ದುಷ್ಮಂತ ಚಮೀರಾ 3 ವಿಕೆಟ್ ಪಡೆದು ಯಶಸ್ವಿ ಬೌಲರ್‌ ಎನಿಸಿಕೊಂಡರು. ಇವರಿಗೆ ಸಾಥ್ ನೀಡಿದ ಬಿನುರಾ ಫೆರ್ನಾಂಡೊ ಹಾಗೂ ಚಮಿಕಾ ಕರುಣರತ್ನೆ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3w3ZwvF

ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಸತತ ವೈಫಲ್ಯಕ್ಕೆ ಕಾರಣ ತಿಳಿಸಿದ ಆಂಬ್ರೋಸ್‌!

ಹೊಸದಿಲ್ಲಿ: ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಸತತ ವೈಫಲ್ಯಕ್ಕೆ ಪ್ರಮುಖ ಕಾರಣ ತಿಳಿಸಿದ ವೆಸ್ಟ ಇಂಡೀಸ್‌ ಬೌಲಿಂಗ್‌ ದಿಗ್ಗಜ , ಕೊಹ್ಲಿ ಪಡೆ ನಾಕೌಟ್‌ ಪಂದ್ಯಗಳಲ್ಲಿ ಗೇಮ್‌ ಪ್ಲ್ಯಾನ್‌ ಬದಲಾವಣೆ ಮಾಡುತ್ತಿರುವುದು ಪ್ರದರ್ಶನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸೌಥ್‌ಹ್ಯಾಂಪ್ಟನ್‌ನಲ್ಲಿ ಮುಕ್ತಾಯವಾಗಿದ್ದ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟೂರ್ನಿಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿದೆ. "ಕಳೆದ 6 ರಿಂದ 7 ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡ ಫೈನಲ್ಸ್ ಅಥವಾ ಸೆಮಿಫೈನಲ್ಸ್ ಹಣಾಹಣಿಗಳಲ್ಲಿ ಸೋತು ವೈಫಲ್ಯ ಅನುಭವಿಸಿದೆ. ವಿಶ್ವದ ಅತ್ಯುತ್ತಮ ತಂಡದ ವೈಫಲ್ಯ ನನಗೆ ನಿಜಕ್ಕೂ ಅಚ್ಚರಿ ಮೂಡಿಸಿದೆ. ಇತರೆ ಸರಣಿಗಳಲ್ಲಿ ಯಶಸ್ವಿಯಾಗುವ ಟೀಮ್‌ ಇಂಡಿಯಾ, ಐಸಿಸಿ ಟೂರ್ನಿಗಳಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರುತ್ತದೆ. ಆದರೆ, ನಾಕೌಟ್‌ ಪಂದ್ಯಗಳಲ್ಲಿ ಮಾತ್ರ ವಿಫಲವಾಗುತ್ತಿದೆ," ಎಂದು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದಾರೆ. "ಭಾರತ ತಂಡಕ್ಕೆ ಗೇಮ್‌ ಪ್ಲ್ಯಾನ್‌ ಬದಲಾಯಿಸುವ ಸನ್ನಿವೇಶವಿದೆಯೇ? ಅಥವಾ ಪರಿಸ್ಥಿತಿಗಳ ಕಾರಣದಿಂದಾಗಿ ಅವರು ಒತ್ತಡಕ್ಕೆ ಒಳಗಾಗುತ್ತಿದ್ದಾರೆಯೇ? ಇದು ನಿಜವಾಗಿದ್ದರೆ, ಇದು ನನ್ನ ಪ್ರಕಾರ ತಪ್ಪು. ಈ ಸಂಗತಿಗಳನ್ನು ನೀವು ಯಶಸ್ವಿಗೊಳಿಸಬೇಕು ಎಂದು ಒಬ್ಬ ಮಾಜಿ ಆಟಗಾರನಾಗಿ ಹೇಳಬಲ್ಲೆ. ನೀವು ಎಲ್ಲಾ ಪಂದ್ಯಗಳನ್ನು ಹೇಗೆ ಆಡುತ್ತಿದ್ದೀರಿ, ಅದನ್ನೇ ಮುಂದುವರಿಸಬೇಕು," ಎಂದು ತಿಳಿಸಿದರು. ಭಾರತ ತಂಡ 2013ರಲ್ಲಿ ಎಂಎಸ್‌ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2014ರ ಟಿ20 ವಿಶ್ವಕಪ್‌ ಹಾಗೂ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳ ಫೈನಲ್‌ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿತ್ತು. ಇನ್ನು 2016ರ ಟಿ20 ವಿಶ್ವಕಪ್‌ ಹಾಗೂ 2015 ಹಾಗೂ 2019ರ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಟೀಮ್‌ ಇಂಡಿಯಾ ಸೆಮಿಫೈನಲ್‌ ಹಣಾಹಣಿಗಳಲ್ಲಿ ಪರಾಭವಗೊಂಡಿತ್ತು. "ಸೆಮಿಫೈನಲ್ಸ್ ಅಥವಾ ಫೈನಲ್ಸ್‌ ಹಣಾಹಣಿಗಳಿಗೆ ನೀವು ಗೇಮ್ ಪ್ಲ್ಯಾನ್‌ ಬದಲಾವಣೆ ಮಾಡಬಾರದು. ಈ ಕಾರಣದಿಂದಲೇ ನೀವು ಮಹತ್ವದ ಪಂದ್ಯಗಳಲ್ಲಿ ಸೋಲು ಅನುಭವಿಸುತ್ತಿದ್ದೀರಿ. ಈ ಹಿಂದಿನ ಪಂದ್ಯಗಳಲ್ಲಿ ನೀವು ಏನು ಮಾಡಿದ್ದೀರಿ, ಅದನ್ನೇ ಮುಂದುವರಿಸಬೇಕಾಗುತ್ತದೆ. ಆಗ ಖಂಡಿತಾ ಸಕ್ಸಸ್‌ ಕಾಣುತ್ತೀರಿ," ಎಂದು ಟೀಮ್ ಇಂಡಿಯಾಗೆ ವಿಂಡೀಸ್‌ ದಿಗ್ಗಜ ಸಲಹೆ ನೀಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಇತ್ತೀಚಿನ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ವೇಗಿಗಳಾದ ಟಿಮ್‌ ಸೌಥೀ, ಬೌಲ್ಟ್‌ ಹಾಗೂ ಕೈಲ್‌ ಜೇಮಿಸನ್‌ ಅವರ ಪ್ರಯತ್ನವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. "ನ್ಯೂಜಿಲೆಂಡ್‌ ತಂಡದ ಇತ್ತೀಚಿನ ಪ್ರದರ್ಶನ ಅತ್ಯುತ್ತಮವಾಗಿದೆ. ತಮ್ಮ ಬೌಲಿಂಗ್‌ ಲೈನ್‌ ಅಪ್‌ನಲ್ಲಿ ಅದ್ಭುತ ಬೌಲರ್‌ಗಳಿದ್ದಾರೆ. ಟಿಮ್‌ ಸೌಥೀ, ಟ್ರೆಂಟ್‌ ಬೌಲ್ಟ್‌, ನೀಲ್‌ ವ್ಯಾಗ್ನರ್‌ ಹಾಗೂ ಕೈಲ್‌ ಜೇಮಿಸನ್‌ ಅವರಂಥ ಅದ್ಭುತ ವೇಗಿಗಳನ್ನು ಕಿವೀಸ್‌ ಹೊಂದಿದೆ. ಯಾವುದೇ ಪರಿಸ್ಥಿತಿ ಇದ್ದರೂ ಅವರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಜತೆಗೆ, ನ್ಯೂಜಿಲೆಂಡ್‌ ಅತ್ಯುತ್ತಮ ನಾಯಕನನ್ನು ಹೊಂದಿದೆ. ಕೇನ್‌ ವಿಲಿಯಮ್ಸನ್‌ ಬಗ್ಗೆ ನನಗೆ ತುಂಬಾ ಗೌರವವಿದೆ," ಎಂದು ಕರ್ಟ್ಲಿ ಆಂಬ್ರೋಸ್ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35ZOOMn

ರೇಖಾ ಕದಿರೇಶ್ ಹತ್ಯೆ ಪ್ರಕರಣ: ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ನಾದಿನಿ ಮಾಲಾ!

ಬೆಂಗಳೂರು: ಮಾಜಿ ಕಾರ್ಪೊರೇಟರ್ ಹತ್ಯೆ ನಡೆದ ದಿನದಂದು ಆಕೆಯ ನಾದಿನಿ ಮಾಲಾ ಕಣ್ಣೀರು ಹಾಕಿದ್ದರು. ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡುತ್ತಾ ಹತ್ಯೆಯ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದರು. ಆದರೆ ಇದೀಗ ಅವರೇ ಈ ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್ ಎಂಬ ಸತ್ಯ ಬಯಲಾಗಿದೆ. ಕೊಲೆಯ ರಹಸ್ಯ ಬೇಧಿಸಿರುವ ಪೊಲೀಸರು ಮಾಲಾ ಹಾಗೂ ಅವರ ಪುತ್ರ ಅರುಳ್ ಸೇರಿದಂತೆ ಸೂತ್ರಧಾರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೇಖಾ ಕದಿರೇಶ್ ಹತ್ಯೆ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇದರ ಹಿಂದೆ ರಾಜಕೀಯ ಷಢ್ಯಂತ್ರ ಇದೆ ಎಂಬ ಅನುಮಾನವೂ ಕಾಡಿತ್ತು. ಈ ಸಂಬಂಧಪಟ್ಟಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದರು. ಅವರು ಕೊಟ್ಟ ಸುಳಿವಿನ ಆಧಾರದಲ್ಲಿ ಮಾಲಾ ಹಾಗೂ ಅರುಳ್ ಬಂಧನವಾಗಿದೆ. ಪ್ರಕರಣ ಸಂಬಂಧ ಪೀಟರ್, ಸೂರ್ಯ, ಅಜಯ್ ಹಾಗೂ ಪುರುಷೋತ್ತಮ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮಂಗಳವಾರ ಮಾಲಾ ಹಾಗೂ ಅವರ ಪುತ್ರ ಅರುಳ್ ಅವರನ್ನೂ ವಶಕ್ಕೆ ಪಡೆದಿರುವ ಪೊಲೀರರು ವಿಚಾರಣೆಗೊಳಪಡಿಸಿದ್ದಾರೆ. ಮಾಸ್ಟರ್‌ಮೈಂಡ್‌ ಮಾಲಾ ಕದಿರೇಶ್ ಅವರ ಸಹೋದರಿ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಮಾಸ್ಟರ್‌ ಮೈಂಡ್ ಮಾಲಾ 2018ರಲ್ಲಿ ಹತ್ಯೆಯಾದ ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರ ಹಿರಿಯ ಸಹೋದರಿಯಾಗಿದ್ದಾರೆ. ರೇಖಾ ನಾದಿನಿಯಾಗಿದ್ದ ಮಾಲಾಗೆ ರೇಖಾ ವಿರುದ್ಧ ದ್ವೇಷವಿತ್ತು. ಕದಿರೇಶ್ ಹತ್ಯೆಯ ಬಳಿಕ ಇದು ಮತ್ತಷ್ಟು ತೀವ್ರಗೊಂಡಿತ್ತು. ಕದಿರೇಶ್ ಹತ್ಯೆಯ ಬಳಿಕ ರೇಖಾ ಕಾರ್ಪೊರೇಟರ್‌ ಆಗಿದ್ದರು. ಇದೀಗ ಮುಂದಿನ ಚುನಾವಣೆಯಲ್ಲೂ ಸ್ಪರ್ಧೆ ಮಾಡಲು ರೇಖಾ ತಯಾರಿ ನಡೆಸುತ್ತಿದ್ದರು. ಆದರೆ ಮುಂದಿನ ಬಿಬಿಎಂಪಿ ಚುನಾವಣೆಗೆ ತಮ್ಮ ಪುತ್ರಿ ಅಥವಾ ಸೊಸೆಯನ್ನು ನಿಲ್ಲಿಸಬೇಕೆಂದು ಆರೋಪಿ ಮಾಲಾ ಬಯಸಿದ್ದರು. ರೇಖಾ ಬದುಕಿದ್ದರೆ, ಅದು ಸಾಧ್ಯವಿಲ್ಲ ಎಂಬುವುದು ಇವರ ನಿಲುವಾಗಿತ್ತು. ಮತ್ತೊಂದು ಕಡೆಯಲ್ಲಿ ರೇಖಾ ಪತಿ ಕದಿರೇಶ್ ಜೊತೆಗಿದ್ದ ವ್ಯಕ್ತಿ ಪೀಟರ್‌ಗೂ ರೇಖಾ ಮೇಲೆ ದ್ವೇಷ ಬೆಳೆದಿತ್ತು. ಕದಿರೇಶ್ ಬದುಕಿದ್ದ ಸಂದರ್ಭದಲ್ಲಿ ನಮ್ಮನ್ನು ನೋಡುತ್ತಿದ್ದ ರೀತಿಯಲ್ಲಿ ಇದೀಗ ರೇಖಾ ನೋಡುತ್ತಿಲ್ಲ ಎಂಬ ಕೋಪ ಪೀಟರ್ ನಲ್ಲಿ ಹುಟ್ಟಿತ್ತು. ಪೀಟರ್ ಅಸಹನೆಯನ್ನು ಮಾಲಾ ಬಳಸಿಕೊಂಡು ರೇಖಾ ವಿರುದ್ಧ ಮತ್ತಷ್ಟು ದ್ವೇಷ ಹುಟ್ಟಲು ಕಾರಣರಾದರು. ಇದರ ಮುಂದುವರಿದ ಭಾಗವಾಗಿಯೇ ಮಾಲಾ ಮತ್ತು ಪೀಟರ್ ಇಬ್ಬರೂ ಸೇರಿಕೊಂಡು ರೇಖಾ ಕದಿರೇಶ್ ಹತ್ಯೆಗೆ ಸಂಚು ರೂಪಿಸಿದ್ದರು. ಇದಕ್ಕೆ ಕೆಲವು ವ್ಯಕ್ತಿಗಳು ಸಾಥ್ ನೀಡಿದ್ದರು. ಸಿಸಿ ಕ್ಯಾ,ಮರಾ ತಿರುಗಿಸುವ ಹೊಣೆ ಪುರುಶೋತ್ತಮ್ ಹೊತ್ತಿದ್ದ, ಪೀಟರ್, ಸ್ಫೀಫನ್, ಅಜಯ್, ಸೂರ್ಯ ಜೊತೆಗೂ ಪ್ಲ್ಯಾನ್ ಜಾರಿಗೆ ತಂದರು. ವ್ಯವಸ್ಥಿತವಾಗಿ ಸೇರಿ ರೇಖಾ ಅವರ ಹತ್ಯೆ ಮಾಡಿದರು. ಅಷ್ಟೇ ಅಲ್ಲದೆ ಹತ್ಯೆಯಾದ ಬಳಿಕ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದರೂ ಕಾನೂನು ವೆಚ್ಚವನ್ನು ತಾನೇ ಭರಿಸುವುದಾಗಿಯೂ ಮಾಲಾ ಭರವಸೆ ನೀಡಿದ್ದಳು ಎಂದು ಪೊಲೀಸ್ ತನಿಖೆಯ ಸಂದರ್ಭದಲ್ಲಿ ತಿಳಿದುಬಂದಿದೆ.


from India & World News in Kannada | VK Polls https://ift.tt/35ZgUY0

ಜಮ್ಮುವಿನಲ್ಲಿ ಉಗ್ರರಿಂದ ದಾಳಿ: ಸಣ್ಣ ಡ್ರೋನ್‌ಗಳ ನಿಯಂತ್ರಣಕ್ಕೆ ತ್ವರಿತ ನೀತಿಗಾಗಿ ಪ್ರಧಾನಿ ನೇತೃತ್ವದಲ್ಲಿ ಸಭೆ

ಹೊಸದಿಲ್ಲಿ: ಜಮ್ಮು ವಾಯು ನೆಲೆಯಲ್ಲಿ ಎರಡು ದಾಳಿಗಳು ನಡೆದು, ವಿವಿಧ ಸ್ಥಳಗಳಲ್ಲಿ ಮತ್ತಷ್ಟು ಡ್ರೋನ್ ಹಾರಾಟ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಮಂಗಳವಾರ ಉನ್ನತ ಮಟ್ಟದ ಸಭೆ ನಡೆದಿದೆ. ನಾಗರಿಕ ಡ್ರೋನ್‌ಗಳ ಬಳಕೆಯ ನೀತಿಯ ಕುರಿತು, ರಕ್ಷಣಾ ವಲಯದಲ್ಲಿ ಭವಿಷ್ಯದ ಸವಾಲುಗಳು ಮತ್ತು ಇಂತಹ ಬೆದರಿಕೆಗಳನ್ನು ಎದುರಿಸಲು ಆಧುನಿಕ ಉಪಕರಣಗಳನ್ನು ಸೇನೆಗೆ ಒದಗಿಸುವ ಮೂಲಕ ವ್ಯವಸ್ಥೆಯನ್ನು ಬಲಪಡಿಸುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಸುಮಾರು ಎರಡು ಗಂಟೆ ನಡೆದ ಈ ಸಭೆಯಲ್ಲಿ ಭಾಗವಹಿಸಿದ್ದರು. ದೇಶದಲ್ಲಿ ನಾಗರಿಕ ಆಪರೇಟರ್‌ಗಳು ಡ್ರೋನ್‌ಗಳನ್ನು ಬಳಸುವುದರ ಕುರಿತಾದ ಪರಿಣಾಮಕಾರಿ ನೀತಿಯೊಂದನ್ನು ತ್ವರಿತವಾಗಿ ರೂಪಿಸುವ ಸಂಬಂಧ ನಿರ್ಧಾರಗಳನ್ನು ಕೈಗೊಳ್ಳಲಾಯಿತು. 'ರಕ್ಷಣಾ ವಲಯದ ಭವಿಷ್ಯದ ಸವಾಲುಗಳು ಮತ್ತು ಆಧುನಿಕ ಉಪಕರಣದೊಂದಿಗೆ ನಮ್ಮ ಪಡೆಗಳನ್ನು ಬಲಗೊಳಿಸುವುದರ ಕುರಿತು ಚರ್ಚಿಸಲಾಯಿತು. ಇದರಲ್ಲಿ ಹೆಚ್ಚಿನ ಯುವಜನರು, ಸ್ಟಾರ್ಟ್‌ಅಪ್‌ಗಳು ಮತ್ತು ಕಾರ್ಯತಂತ್ರ ಸಮುದಾಯಗಳನ್ನು ಬಳಸಿಕೊಳ್ಳುವುದರ ಕುರಿತಾಗಿ ಕೂಡ ಸಮಾಲೋಚನೆ ನಡೆಸಲಾಯಿತು' ಎಂದು ಸರಕಾರ ಮೂಲವೊಂದು ತಿಳಿಸಿದೆ. ವಾಣಿಜ್ಯ ಚಟುವಟಿಕೆಗಳಿಗೆ ಸಣ್ಣ ಡ್ರೋನ್‌ಗಳನ್ನು ಬಳಸಲು ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅಂತಿಮ ನೀತಿಯಲ್ಲಿ ನಾಗರಿಕ ಡ್ರೋನ್ ಕಾರ್ಯಾಚರಣೆಗೆ ಮುಕ್ತ ಹಾರಾಟ ಅವಕಾಶ ನೀಡುವುದಕ್ಕೆ ಪೊಲೀಸ್ ಮತ್ತು ಸೇನಾ ಪಡೆಗಳು ವಿರೋಧ ವ್ಯಕ್ತಪಡಿಸಿವೆ. 'ಎಷ್ಟು ಎತ್ತರದಲ್ಲಿ ಈ ಡ್ರೋನ್‌ಗಳು ಕಾರ್ಯನಿರ್ವಹಿಸಬಹುದು ಎಂಬ ವಿಚಾರದಲ್ಲಿ ಕಠಿಣ ನಿಯಂತ್ರಣಗಳ ಅಗತ್ಯವಿದೆ. ಮುಖ್ಯವಾಗಿ, ಹಾರಾಟ ನಡೆಸಬಾರದ ವಲಯಗಳನ್ನು ಸ್ಪಷ್ಟವಾಗಿ ಗುರುತಿಸಬೇಕಿದೆ. ಪ್ರಮುಖ ಸಂಸ್ಥೆಗಳು, ಸೇನಾ ಪ್ರದೇಶಗಳು ಹಾಗೂ ಅಂತಹ ಮಹತ್ವದ ಜಾಗಗಳ 80-100 ಕಿಮೀ ವ್ಯಾಪ್ತಿಯನ್ನು ಬಫರ್ ವಲಯಗಳೆಂದು ಗುರುತಿಸಬೇಕು' ಎಂದು ಹೇಳಲಾಗಿದೆ. ಜಮ್ಮುವಿನಲ್ಲಿ ಎರಡು ಡ್ರೋನ್ ದಾಳಿಗಳು ನಡೆದ ಬೆನ್ನಲ್ಲೇ ಮತ್ತಷ್ಟು ಡ್ರೋನ್ ಹಾರಾಟ ಪತ್ತೆಯಾಗಿದ್ದು, ಸೇನಾ ಪಡೆಗಳನ್ನು ಗುರಿಯನ್ನಾಗಿಸಿ ಹಾಗೂ ಪಾಕಿಸ್ತಾನ ಪಡೆಗಳು ಡ್ರೋನ್ ಕಾರ್ಯಾಚರಣೆ ನಡೆಸುವುದರ ಅನುಮಾನವನ್ನು ದಟ್ಟವಾಗಿಸಿವೆ.


from India & World News in Kannada | VK Polls https://ift.tt/3AdauCw

ಕೋವಿಡ್ ನಿಯಮದಲ್ಲಿ ಪ್ರಮುಖ ಬದಲಾವಣೆ: ರೋಗಿಗಳ ಮೃತದೇಹ ಮನೆಗೆ ಕೊಂಡೊಯ್ಯಲು ಅವಕಾಶ

ತಿರುವನಂತಪುರಂ: ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಸ್ಥಿತಿ ತೀವ್ರವಾಗಿರುವ ನಡುವೆಯೇ, ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲಾಗಿದೆ. ರಿಂದ ಮೃತಪಟ್ಟ ರೋಗಿಗಳ ಮೃತದೇಹಗಳಿಗೆ ಅಂತ್ಯಸಂಸ್ಕಾರ ನಡೆಸಲು ಮನೆಗಳಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ. ಈವರೆಗಿನ ಸಾಂಕ್ರಾಮಿಕ ನಿಯಮಾವಳಿಗಳ ಪ್ರಕಾರ ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ಮನೆಗೆ ಕೊಂಡೊಯ್ಯಲು ಹಾಗೂ ಅವರು ಬಯಸಿದ್ದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಇರಲಿಲ್ಲ. ಅಧಿಕಾರಿಗಳು ಮತ್ತು ತಜ್ಞರ ಜತೆ ಪರಾಮರ್ಶನಾ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಮಂತ್ರಿ , ಕೋವಿಡ್‌ನಿಂದ ಮೃತಪಟ್ಟ ತಮ್ಮ ಪ್ರೀತಿಪಾತ್ರರು ಮತ್ತು ಕುಟುಂಬದವರ ಅಂತಿಮ ದರ್ಶನ ಮಾಡಲು ಕೂಡ ಸಂಬಂಧಿಕರಿಗೆ ಸಾಧ್ಯವಾಗುತ್ತಿರಲಿಲ್ಲ. ಇದು ಈ ಸಾಂಕ್ರಾಮಿಕದ ಅತಿ ದೊಡ್ಡ ಸಮಸ್ಯೆಯಾಗಿತ್ತು ಎಂದಿದ್ದಾರೆ. 'ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ದೇಹಗಳಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ನಿರ್ದಿಷ್ಟ ಸಮಯದವರೆಗೆ ತಮ್ಮ ಮನೆಯಲ್ಲಿ ಇರಿಸಿಕೊಳ್ಳಲು ಹಾಗೂ ಅವರ ನಂಬಿಕೆಗೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಲಾಗುವುದು. ಇರಿಸಿಕೊಳ್ಳಲು ಒಂದು ಗಂಟೆ ಸಮಯ ನೀಡಲಾಗುತ್ತದೆ' ಎಂದು ತಿಳಿಸಿದ್ದಾರೆ. ಭಾರಿ ಸೋಂಕು ಹರಡುವ ಡೆಲ್ಟಾ ಪ್ರಭೇದಗಳು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಸೋಂಕು ಹರಡಲು ಕಾರಣವಾಗಿದೆ. ಮೊದಲ ಅಲೆಗಿಂತಲೂ ತೀವ್ರವಾಗಿ ಎರಡನೆಯ ಅಲೆ ರಾಜ್ಯವನ್ನು ಆವರಿಸಿದ್ದರೂ, ಆರೋಗ್ಯ ಮೂಲಸೌಕರ್ಯವು ಪ್ರಕರಣಗಳ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗಿದ್ದರಿಂದ ಅದನ್ನು ಎದುರಿಸಲಾಗಿದೆ ಎಂದು ಹೇಳಿದ್ದಾರೆ. ಎರಡನೆಯ ಅಲೆಯ ತೀವ್ರತೆ ಕಡಿಮೆಯಾಗಲು ಕೆಲವು ಸಮಯ ಬೇಕಾಗುತ್ತದೆ. ಮತ್ತಷ್ಟು ನಿಯಮಾವಳಿಗಳನ್ನು ಸಡಿಲಿಸಲು ಯಾವುದೇ ಕಾರಣಗಳಿಲ್ಲ. ಮೂರನೇ ಅಲೆ ನಿರೀಕ್ಷೆಯಿರುವುದರಿಂದ ಅಂತರ್ ರಾಜ್ಯ ತಪಾಸಣಾ ನೆಲೆಗಳು ಮತ್ತು ರೈಲ್ವೆ ನಿಲ್ದಾಣದಲ್ಲಿನ ಪರೀಕ್ಷಾ ಘಟಕಗಳನ್ನು ಬಲಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಕೇರಳದಲ್ಲಿ ಎರಡನೆಯ ಅಲೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮಂಗಳವಾರ ರಾಜ್ಯದಲ್ಲಿ 13,500 ಪ್ರಕರಣಗಳು ಹಾಗೂ 104 ಸಾವುಗಳು ವರದಿಯಾಗಿವೆ.


from India & World News in Kannada | VK Polls https://ift.tt/363Mow1

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬಿಕ್ಕಟ್ಟು ಪರಿಹಾರಕ್ಕೆ ರಾಜಿ ಸೂತ್ರ! ಜನವರಿ ಬಳಿಕ ನಲಪಾಡ್‌ಗೆ ಪಟ್ಟ?

ಬೆಂಗಳೂರು : ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ನಲಪಾಡ್ ಹಾಗೂ ನಡುವೆ ನಡೆಯುತ್ತಿದ್ದ ಸಮರ ಬಹುತೇಕ ಅಂತ್ಯ ಕಂಡಿದೆ. ಮಂಗಳವಾರ ರಾತ್ರಿ ಕೆಪಿಸಿಸಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿದ್ದು ಜನವರಿ ಬಳಿಕ ಅಧ್ಯಕ್ಷ ಸ್ಥಾನ ನಲಪಾಡ್‌ಗೆ ಒಲಿಯುವ ಸಾಧ್ಯತೆ ಇದೆ. ಯುವ ಕಾಂಗ್ರೆಸ್ ಆಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಮೊಹಮ್ಮದ್ ನಲಪಾಡ್ ಅವರು ಜಯಗಳಿಸಿದ್ದರು. ರಕ್ಷಾ ರಾಮಯ್ಯ ಎರಡನೇ ಸ್ಥಾನದಲ್ಲಿದ್ದರು. ಆದರೆ ನಲಪಾಡ್ ಕ್ರಿಮಿನಲ್ ಹಿನ್ನೆಲೆಯ ಕಾರಣಕ್ಕಾಗಿ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದು. ನಲಪಾಡ್ ಅವರನ್ನು ಅನರ್ಹಗೊಳಿಸಿ ಅವರ ಬದಲಾಗಿ ಎರಡನೇ ಸ್ಥಾನ ಪಡೆದಿದ್ದ ರಕ್ಷಾ ರಾಮಯ್ಯ ಅವರಿಗೆ ಅಧ್ಯಕ್ಷ ಪಟ್ಟ ನೀಡಲಾಗಿತ್ತು. ಪಕ್ಷದ ಈ ನಡೆಯಿಂದ ನಲಪಾಡ್ ಅಸಮಾಧಾನಗೊಂಡಿದ್ದರು. ದೆಹಲಿ ಮಟ್ಟದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅಧ್ಯಕ್ಷ ಸ್ಥಾನವನ್ನು ಪಡೆಯಲು ತೆರೆಮರೆಯಲ್ಲಿ ನಲಪಾಡ್ ಕಸರತ್ತು ನಡೆಸುತ್ತಿದ್ದರು.ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇಬ್ಬರಿಗೂ ತಲಾ 18 ತಿಂಗಳ ಕಾಲ ಅಧ್ಯಕ್ಷ ಸ್ಥಾನ ನೀಡುವಂತೆ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದರು. ಆದರೆ ನಲಪಾಡ್ ಮಾತ್ರ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದ ಕಾರಣಕ್ಕಾಗಿ ನನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಿಂದ ನಲಪಾಡ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಅಧಿಕೃತ ಪ್ರಕಟಣೆಯನ್ನು ಕೆಪಿಸಿಸಿ ಮಾಡುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3hitSoT

ಮಂಗಳೂರು: ಅಪ್ರಾಪ್ತೆಯೊಂದಿಗೆ ಲಾಡ್ಜ್‌ನಲ್ಲಿ ಮೂವರು ಪತ್ತೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ನಗರದ ವಸತಿ ಗೃಹವೊಂದರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಜತೆ ಯುವತಿ ಸೇರಿದಂತೆ ಮೂವರು ಪತ್ತೆಯಾಗಿದ್ದು, ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಕುದ್ರೋಳಿ ನಿವಾಸಿ ಶೇಖ್‌ ಜೈನ್‌ ಮೊಹಮ್ಮದ್‌ ಮತ್ತು ಬೋಳಾರ ನಿವಾಸಿ ಮುಹಮ್ಮದ್‌ ರಹೀಂ ಹಾಗೂ ಸುರತ್ಕಲ್‌ನ ಯುವತಿ ಬಂಧಿತ ಆರೊಪಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಭಾನುವಾರ ವೀಕೆಂಡ್‌ ಕರ್ಫ್ಯೂವಿದ್ದು, ಇದೇ ಅವಧಿಯಲ್ಲಿ ತರೀಕೆರೆಯ ಅಪ್ರಾಪ್ತ ಯುವತಿಯೊಬ್ಬಳು ನಗರದ ಕಾಲೇಜಿಗೆ ಅಡ್ಮಿಷನ್‌ ನೆಪದಲ್ಲಿ ಬಂದು ಸುರತ್ಕಲ್‌ನ ಯುವತಿ ಜತೆ ಕೆ.ಎಸ್‌.ರಾವ್‌ ರಸ್ತೆಯಲ್ಲಿರುವ ವಸತಿಗೃಹದಲ್ಲಿ ರೂಮು ಪಡೆದುಕೊಂಡಿದ್ದರು. ಇವರ ಜತೆ ಸಂಪರ್ಕವಿರಿಸಿಕೊಂಡಿದ್ದ ಕುದ್ರೋಳಿ ಮತ್ತು ಬೋಳಾರದ ಯುವಕರಿಬ್ಬರು ಇದೇ ಹೊಟೇಲ್‌ನಲ್ಲಿ ಪ್ರತ್ಯೇಕ ರೂಮು ಪಡೆದುಕೊಂಡಿದ್ದರು. ಯುವಕರು ಭಾನುವಾರ ಮಧ್ಯಾಹ್ನ ರೂಮು ಪಡೆದಿದ್ದರೆ, ಯುವತಿಯರು ಸಂಜೆ ರೂಮು ಬುಕ್‌ ಮಾಡಿದ್ದರು. ಈ ವಿಷಯ ಕೆಲವು ಸಂಘಟನೆಗಳ ಗಮನಕ್ಕೆ ಬಂದಿದ್ದು, ಗೊಂದಲ ಸೃಷ್ಟಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಸುದ್ದಿಗಳು ಹರಡುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಂದರು ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಅಪ್ರಾಪ್ತೆ ಯುವತಿಯನ್ನು ರಕ್ಷಣೆ ಮಾಡಿ, ಆಕೆಯೊಂದಿಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ವೀಕೆಂಡ್‌ ಪಾರ್ಟಿ: ಆರೋಪಿಗಳು ರೂಮಿನಲ್ಲಿ ಮದ್ಯ ಸೇವನೆ ಮಾಡಿ ವೀಕೆಂಡ್‌ ಪಾರ್ಟಿ ಮಾಡುತ್ತಿರುವುದು ತಿಳಿದು ಬಂದಿದೆ. ಇದು ಮಾತ್ರವಲ್ಲದೆ ಆರೋಪಿಗಳಲ್ಲಿ ಒಬ್ಬಾತ ಡ್ರಗ್ಸ್‌ ಸೇವನೆ ಚಟ ಹೊಂದಿದ್ದ. ಬಂಧಿತ ಯುವಕರಲ್ಲಿ ಒಬ್ಬಾತ ನಗರದಲ್ಲಿ ಕಟ್ಟಡ ಉದ್ಯಮಿ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ, ವೀಕೆಂಡ್‌ ಲಾಕ್‌ಡೌನ್‌ ಅವಧಿಯಲ್ಲಿ ಆರೋಪಿಗಳು ಸುತ್ತಾಡಿದ್ದು ಕಂಡು ಬಂದ ಆಧಾರದಲ್ಲಿ ಎಪಿಡೆಮಿಕ್‌ ಕೇಸು ದಾಖಲಾಗಿದೆ.


from India & World News in Kannada | VK Polls https://ift.tt/362A0fO

ಟ್ವಿಟ್ಟರ್ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಉತ್ತರಪ್ರದೇಶ ಪೊಲೀಸರು

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಪ್ರಾಂತ್ಯಗಳನ್ನು ಭಾರತದಿಂದ ಪ್ರತ್ಯೇಕ ಎಂದು ತೋರಿಸುವ ನಕ್ಷೆ ಪ್ರಕಟಿಸಿದ್ದ ಟ್ವಿಟರ್‌ ಕಂಪನಿ ವಿರುದ್ಧ ಉತ್ತರಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಬಹುರಾಷ್ಟ್ರೀಯ ಕಂಪನಿ ಟ್ವಿಟರ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಮನೀಶ್‌ ಮಹೇಶ್ವರಿ ಅವರನ್ನು ಕೂಡ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಐಟಿ ಕಾಯಿದೆಯ ಸೆಕ್ಷನ್‌ 74 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 505(2) ಅಡಿಯಲ್ಲಿ'ಶತೃತ್ವ ಬಿತ್ತುವುದು, ಸಮುದಾಯಗಳ ನಡುವೆ ದ್ವೇಷಕ್ಕೆ ಪ್ರಚೋದನೆ' ಆರೋಪವನ್ನು ಕಂಪನಿಯ ವಿರುದ್ಧ ಹೊರಿಸಲಾಗಿದೆ. ಇದೊಂದು ದೇಶದ್ರೋಹದ ಕೃತ್ಯ, ಉದ್ದೇಶಪೂರ್ವಕವಾಗಿಯೇ ಎಸಗಲಾಗಿದೆ ಎಂದು ಬಜರಂಗ ದಳದ ಮುಖಂಡ ಪ್ರವೀಣ್‌ ಭಾತಿ ದೂರಿನಲ್ಲಿ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಹೊಸ ಐಟಿ ಕಾನೂನು ಪಾಲನೆಗೆ ಟ್ವಿಟರ್‌ ಹಿಂದೇಟು ಹಾಕುತ್ತಾ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವ ನಡುವೆಯೇ ಈ ಎಫ್‌ಐಆರ್‌ ದಾಖಲಾಗಿದೆ. ಕೆಲವು ತಿಂಗಳ ಹಿಂದೆ ಕೂಡ ಟ್ವಿಟರ್‌, ಭಾರತೀಯ ನಕ್ಷೆಯಲ್ಲಿ ಲೇಹ್‌ ಪ್ರಾಂತ್ಯವು ಚೀನಾಕ್ಕೆ ಸೇರಿದ್ದು ಎಂದು ಬಿತ್ತರಿಸುವ ಮೂಲಕ ಪ್ರಮಾದ ಎಸಗಿತ್ತು. ತೀವ್ರ ಆಕ್ಷೇಪ ವ್ಯಕ್ತವಾದ ಬಳಿಕ ತಪ್ಪು ನಕ್ಷೆಗಳನ್ನು ಟ್ವಿಟರ್‌ ಡಿಲೀಟ್‌ ಮಾಡಿತ್ತು. ಹಲ್ಲೆ ಪ್ರಕರಣದಲ್ಲೂ ಎಫ್‌ಐಆರ್‌: ಘಾಜಿಯಾಬಾದ್‌ ಮುಸ್ಲಿಂ ವೃದ್ಧರೊಬ್ಬರ ಮೇಲಿನ ಹಲ್ಲೆ ಪ್ರಕರಣದ ವಿಡಿಯೊ ಪ್ರಸಾರಕ್ಕೆ ಅವಕಾಶ ನೀಡಿದ ಪ್ರಕರಣದಲ್ಲೂ ಮನೀಶ್‌ ಮಹೇಶ್ವರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 2 ದಿನಗಳ ಗಡುವು: ಕೆಲವು ಗಂಟೆಗಳವರೆಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಮತ್ತು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ಅಧಿಕೃತ ಟ್ವಿಟರ್‌ ಖಾತೆಗಳನ್ನು ಬ್ಲಾಕ್‌ ಮಾಡಿದ್ದ ಕೃತ್ಯದ ಬಗ್ಗೆ ವಿವರ ನೀಡುವಂತೆ ಸಂಸದೀಯ ಸ್ಥಾಯಿ ಸಮಿತಿಯು ಟ್ವಿಟರ್‌ ಕಂಪನಿಗೆ ಎರಡು ದಿನಗಳ ಗಡುವು ನೀಡಿದೆ. ಜೂ.21ರಂದು ರಾಜಕೀಯ ನಾಯಕರ ಟ್ವಿಟರ್‌ ಖಾತೆಗಳು ತಾತ್ಕಾಲಿಕವಾಗಿ ಬ್ಲಾಕ್‌ ಆಗಿದ್ದವು. ಅಮೆರಿಕದ ಹಕ್ಕು ಸ್ವಾಮ್ಯ ಕಾಯಿದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿತ್ತು ಎಂದು ಈ ಹಿಂದೆ ಟ್ವಿಟರ್‌ ಸಮರ್ಥನೆ ನೀಡಿದೆ. ಮುಂದಿನ ವಾರಗಳಲ್ಲಿ ಯೂಟ್ಯೂಬ್‌, ಫೇಸ್‌ಬುಕ್‌ ಇಂಡಿಯಾ, ಗೂಗಲ್‌ ಇಂಡಿಯಾ ಮುಖ್ಯಸ್ಥರಿಗೆ ಐಟಿ ಕುರಿತಾದ ಸಂಸದೀಯ ಸ್ಥಾಯಿ ಸಮಿತಿಯು ಸಮನ್ಸ್‌ ನೀಡುವ ನಿರೀಕ್ಷೆಯಿದೆ.


from India & World News in Kannada | VK Polls https://ift.tt/3drISzP

‘ನನಗೆ ಬಿಜೆಪಿಯ ಮೂವರಿಂದ ದ್ರೋಹವಾಗಿದೆ, ಯಾರೆಂದು ಸಂದರ್ಭ ಬಂದಾಗ ಹೇಳುವೆ’; ಜಾರಕಿಹೊಳಿ

ಬೆಂಗಳೂರು: ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅನ್ಯಾಯವಾಗಿಲ್ಲ. ಆದರೆ ಬಿಜೆಪಿಯ ಮೂವರಿಂದ ನಂಬಿಕೆ ದ್ರೋಹವಾಗಿದೆ ಎಂದು ಮಾಜಿ ಸಚಿವ, ಶಾಸಕ ರಮೇಶ್‌ ಜಾರಕಿಹೊಳಿ ಹೊಸ ವರಸೆ ತೆಗೆದಿದ್ದಾರೆ. ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ ಮಾತನಾಡುವ ವೇಳೆ, ಅನ್ಯಾಯ ಮಾಡಿದವರ ಬಗ್ಗೆ ಈಗ ಏನು ಹೇಳೋದಿಲ್ಲ. ಆ ಮೂವರು ಯಾರು ಎಂಬ ಗುಟ್ಟು ಸಂದರ್ಭ ಬಂದಾಗ ಹೇಳುವೆ ಎಂದರು. ಅಲ್ಲದೇ ತೊರೆಯುವ ಪ್ರಶ್ನೆಯಿಲ್ಲ. ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದೂ ಇಲ್ಲ. ಸಿಎಂ ಯಡಿಯೂರಪ್ಪ ನನಗೆ ಅನ್ಯಾಯ ಮಾಡಿಲ್ಲ ಎಂದು ಹೇಳಿದರು. ಹೈಕಮಾಂಡ್‌ ಪ್ರತಿನಿಧಿಗಳನ್ನು ಭೇಟಿ ಮಾಡುತ್ತೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರನ್ನು ಭೇಟಿ ಮಾಡುತ್ತೇನೆಂದು ಹೇಳಿದರೆ ಗಾಬರಿಯಾಗುತ್ತೀರಿ ಎಂದರು. ದಿಲ್ಲಿಗೆ ತೆರಳುವ ಮುನ್ನ ರಮೇಶ್‌ ಜಾರಕಿಹೊಳಿ ಅವರು ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆಲ ದಿನಗಳ ಹಿಂದೆ ಹೇಳಿದ್ದ ರಮೇಶ್‌ ಜಾರಕಿಹೊಳಿ ಮುಂಬಯಿಗೂ ಭೇಟಿ ನೀಡಿದ್ದರು. ಅಲ್ಲಿಯೂ ಫಡ್ನವೀಸ್‌ ಅವರನ್ನು ಭೇಟಿಯಾಗಿ ಸಮಾಲೋಚಿಸಿದ್ದರು.


from India & World News in Kannada | VK Polls https://ift.tt/3joOdM4

ಜುಲೈ 31ರೊಳಗೆ 'ಒಂದು ದೇಶ, ಒಂದು ಪಡಿತರ ಚೀಟಿ’ ಜಾರಿಗೊಳಿಸುವಂತೆ ಕೇಂದ್ರಕ್ಕೆ ಸುಪ್ರೀಂ ಗಡುವು

ಹೊಸದಿಲ್ಲಿ: 'ಕೋವಿಡ್‌-19' ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ದೇಶದ ಎಲ್ಲ ಬಡವರ್ಗದವರಿಗೂ ಉಚಿತ ಪಡಿತರ ನೀಡುವ ಕೇಂದ್ರ ಸರಕಾರದ 'ಒಂದು ದೇಶ, ಚೀಟಿ' ಯೋಜನೆಯನ್ನು ದೇಶದಾದ್ಯಂತ ಜುಲೈ 31ರೊಳಗೆ ಅನುಷ್ಠಾನಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಇದೇ ವೇಳೆ, ಸಾಂಕ್ರಾಮಿಕದ ಸಂಕಷ್ಟ ಮುಗಿಯುವವರೆಗೂ ವಲಸಿಗರಿಗಾಗಿ ಸಮುದಾಯ ಪಾಕಶಾಲೆಗಳನ್ನು ನಡೆಸುವಂತೆ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ.ಆರ್‌.ಶಾ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿದೆ. ಕೋವಿಡ್‌-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಕಳವಳದಿಂದ ನ್ಯಾಯಾಲಯವೇ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ,ಕೋವಿಡ್‌ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ನಿಂದಾಗಿ ಪುನಃ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಆಹಾರ ಭದ್ರತೆ, ಮತ್ತಿತರ ಸೌಲಭ್ಯಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರಾದ ಹರ್ಷ್ ಮಂದೇರ್‌, ಅಂಜಲಿ ಭಾರದ್ವಜ್‌ ಮತ್ತು ಜಗದೀಪ್‌ ಛೊಕರ್‌ ಅವರು ಸಹ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರಕಾರಗಳು ಈಗ ಕರ್ಫ್ಯೂ ವಿಚಾರದಲ್ಲಿ ಕೊಂಚ ವಿಕೇಂದ್ರೀಕರಣ ನೀತಿಯನ್ನು ಅನುಸರಿಸುತ್ತಿದ್ದರೂ, ಕಾರ್ಮಿಕರು ಮತ್ತು ವಲಸಿಗರ ಹಿತರಕ್ಷಣೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದರು. ಬಡ ವರ್ಗದವರ ಕಲ್ಯಾಣಕ್ಕಾಗಿ ರೂಪಿಸಿರುವ 'ಒಂದು ದೇಶ, ಒಂದು ಪಡಿತರ ಚೀಟಿ' ಯೋಜನೆಯಡಿ, ವಲಸೆ ಕಾರ್ಮಿಕರು ಕೆಲಸಕ್ಕಾಗಿ ಹೊರ ರಾಜ್ಯಗಳಿಗೆ ಹೋಗಿರುವ ಸಂದರ್ಭದಲ್ಲಿ ಕೆಲಸ ಮಾಡುವ ಸ್ಥಳದಲ್ಲೇ ಉಚಿತ ಪಡಿತರ ಪಡೆಯಬಹುದು. ಇಲ್ಲಿ ಪಡಿತರ ಚೀಟಿ ನೋಂದಣಿ ಮಾಡಿಸದಿದ್ದರೂ ಕಾರ್ಮಿಕರಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಪೀಠ ತಿಳಿಸಿದೆ.


from India & World News in Kannada | VK Polls https://ift.tt/3hgIXYk

ಗಾಲ್ಫ್: ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕನ್ನಡತಿ ಅದಿತಿ ಅಶೋಕ್!

ಬೆಂಗಳೂರು: ಎಲ್‌ಪಿಜಿಎ ಟೂರ್‌ ಮೂಲಕ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಗಾಲ್ಫರ್‌ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ಯುವ ತಾರೆ ಪಾತ್ರರಾಗಿದ್ದಾರೆ. ಕೊರೊನಾ ವೈರಸ್‌ ಕಾರಣ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು 2020ರಿಂದ 2021ಕ್ಕೆ ಮುಂದೂಡಲಾಗಿತ್ತು. ಇದೀಗ ಕ್ರೀಡಾಕೂಟ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಾಗ ಬೆಂಗಳೂರಿನ 23 ವರ್ಷದ ಗಾಲ್ಫರ್‌ ಅದಿತಿ ಶುಭ ಸುದ್ದಿ ನೀಡಿದ್ದಾರೆ. 2018ರಲ್ಲಿ ಆರಂಭಗೊಂಡ ಅರ್ಹತಾ ಸುತ್ತಿನಲ್ಲಿ ಸದಾ ಮುನ್ನಡೆ ಕಾಯ್ದಕೊಂಡು ಬಂದಿರುವ ಅದಿತಿ, ಮೂರು ವರ್ಷಗಳ ಹಿಂದೆ ಒಲಿಂಪಿಕ್ಸ್‌ ಶ್ರೇಯಾಂಕ ಪಟ್ಟಿಯಲ್ಲಿ 28ನೇ ಸ್ಥಾನ ಪಡೆದಿದ್ದರು. ಇದೀಗ ಅಂತಾರಾಷ್ಟ್ರೀಯ ಒಕ್ಕೂಟ ಮಂಗಳವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 45ನೇ ಸ್ಥಾನ ಪಡೆಯುವ ಮೂಲಕ ಟೋಕಿಯೋ ಟಿಕೆಟ್‌ ಪಡೆದಿದ್ದಾರೆ. "ಒಂದಕ್ಕಿಂತ ಹೆಚ್ಚು ಬಾರಿ ಅಂದರೆ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದೇನೆ ಎಂದು ಕರೆಸಿಕೊಳ್ಳುವುದೇ ಹಿತಾನುಭವ ನೀಡುತ್ತಿದೆ. ವಿಶ್ವದ ಅತಿ ದೊಡ್ಡ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದೇ ಬಹುದೊಡ್ಡ ಗೌರವ. ಕೆಲವೇ ಕ್ರೀಡಾಪಟುಗಳಿಗೆ ಇದು ಸಾಧ್ಯ. ಈ ಅವಕಾಶವನ್ನು ಬಳಸಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಟೋಕಿಯೋ ಅಂಗಣಕ್ಕೆ ಕಾಲಿಡಲು ಕಾತುರಳಾಗಿದ್ದೇನೆ," ಎಂದು ಅದಿತಿ ತಮ್ಮ ಸಂಭ್ರಮವನ್ನು ಟೈಮ್ಸ್‌ ಆಫ್‌ ಇಂಡಿಯಾ ಜೊತೆಗೆ ಹಂಚಿಕೊಂಡಿದ್ದಾರೆ. "ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗುತ್ತೇನೆ ಎಂದು ಗೊತ್ತಿತ್ತು. 2016ರ ರಿಯೋ ಒಲಿಂಪಿಕ್ಸ್‌ಗೆ ಬಹಳಾ ಕಷ್ಟಪಟ್ಟು ಅರ್ಹತೆ ಪಡೆದಿದ್ದೆ. ಏಕೆಂದರೆ 2105ರಲ್ಲಿ ನನಗೆ ವಿಶ್ವ ಶ್ರೇಯಾಂಕದ ಟೂರ್ನಿಗಳು ಹೆಚ್ಚು ಸಿಕ್ಕಿರಲಿಲ್ಲ," ಎಂದು ಅದಿತಿ ಹೇಳಿಕೊಂಡಿದ್ದಾರೆ. ಪುರುಷರ ವಿಭಾಗದಲ್ಲಿ ಅನಿರ್ಬನ್‌ ಲಾಹಿರಿ 60ನೇ ಶ್ರೇಯಾಂಕದೊಂದಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಉದಯ್‌ ಮಾನೆ ಕಾಯ್ದಿರಿಸಿದ ಗಾಲ್ಫರ್‌ಗಳ ಪಟ್ಟಿಯಲ್ಲಿ ಇದ್ದಾರೆ. ಜುಲೈ 6ರಂದು ಅಂತಿಮ ಪಟ್ಟಿ ಪ್ರಕಟವಾಗಲಿದ್ದು, ಕೊರೊನಾ ವೈರಸ್‌ ಕಾರಣ ಯಾರಾದರೂ ಕ್ರೀಡಾಕೂಟದಿಂದ ಹಿಂದೆ ಸರಿದಲ್ಲಿ ಉದಯ್‌ಗೆ ಸ್ಥಾನ ಪಡೆದುಕೊಳ್ಳುವ ಅವಕಾಶವಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3h0KmDk

ಅರೆ ಮಲೆನಾಡಿನಲ್ಲಿ ಕೃಷಿ ಭೂಮಿಗೆ ಚಿನ್ನದ ಬೆಲೆ..! ಲೇಔಟ್ ಆಗ್ತಿವೆ ಹೊಲ, ಗದ್ದೆಗಳು..!

ಪ್ರಕಾಶ್‌ ಜಿ.: ಅರೆ ಪ್ರದೇಶವಾದ ಅರಕಲಗೂಡಿನಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಹೌದು.. ಭೂಮಿಯ ಬೆಲೆ ಗಗನ ಕುಸುಮವಾಗಿದೆ. ಜಮೀನುಗಳು ಲೇಔಟ್‌ ಆಗಿ ಪರಿವರ್ತನೆಯಾಗುತ್ತಿದ್ದು, ಹಳ್ಳಿಗರು ಅರಕಲಗೂಡು ಪಟ್ಟಣದತ್ತ ಆಕರ್ಷಿತರಾಗುತ್ತಿದ್ದಾರೆ. ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಶೇ.90ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾ ಕೇಂದ್ರ ಹಾಸನದಲ್ಲೇ ಮನೆ ಮಾಡಿಕೊಂಡು ಓಡಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದವರು ತಾಲೂಕು ಕೇಂದ್ರಕ್ಕೆ ಬಂದು ಮನೆ, ವಾಣಿಜ್ಯ ಸಂಕೀರ್ಣ ಇತ್ಯಾದಿ ನಿರ್ಮಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಹಳ್ಳಿಗಳು ಖಾಲಿಯಾಗುತ್ತಿದ್ದು, ಅರಕಲಗೂಡು ಪಟ್ಟಣ ತುಂಬಿಕೊಳ್ಳುತ್ತಿದೆ. ಅರಕಲಗೂಡು ವಿಧಾನಸಭೆ ಕ್ಷೇತ್ರ 2.20 ಲಕ್ಷ ಜನಸಂಖ್ಯೆ ಹೊಂದಿದ್ದು, ಆಲೂ, ತಂಬಾಕು, ಅಡಿಕೆ ಪ್ರಧಾನ ಬೆಳೆಯಾಗಿ ಆರ್ಥಿಕ ಚಟುವಟಿಕೆಯ ಬೆನ್ನೆಲುಬಾಗಿದ್ದ ಅರಕಲಗೂಡು ತಾಲೂಕಿನ ಮೇಲೆ ರಿಯಲ್‌ ಎಸ್ಟೇಟ್‌ ದೃಷ್ಟಿ ನೆಟ್ಟಿದೆ. ಕೃಷಿಗಿಂತ ಕೃಷಿ ಭೂಮಿಗೆ ಚಿನ್ನದಂತ ಬೆಲೆ ದೊರಕಲು ಪ್ರಾರಂಭವಾಗುತ್ತಿದ್ದಂತೆ ಇಲ್ಲಿನ ವ್ಯವಹಾರವೇ ಬದಲಾಗಿದೆ. ಅರಕಲಗೂಡಿನ ವಿನಾಯಕ ನಗರ, ಕೆಇಬಿ ರಸ್ತೆ, ಎಪಿಎಂಸಿ, ಹೊಳೆನರಸೀಪುರ ರಸ್ತೆಯಲ್ಲಿ ಖಾಸಗಿ ಲೇಔಟ್‌ಗಳು ತಲೆ ಎತ್ತಿವೆ. ಚದರಡಿಗೆ ಮೂರು ಸಾವಿರದಿಂದ ನಾಲ್ಕು ಸಾವಿರಕ್ಕೂ ಮೀರಿ ಸೈಟ್‌ಗಳು ಮಾರಾಟವಾಗುತ್ತಿದೆ. ಲೇಔಟ್‌ ಮಾಡಬಹುದಾದ ಸ್ಥಳದಲ್ಲಿ ಜಮೀನು ಒಂದು ಕುಂಟೆಗೆ 8 ರಿಂದ 10 ಲಕ್ಷ ರೂ. ರಸ್ತೆಗೆ ಸಮೀಪ, ನೀರು, ವಿದ್ಯುತ್‌, ಒಳಚರಂಡಿ ಕಲ್ಪಿಸಲು ಅನುಕೂಲವಾಗುವ ಸ್ಥಳದಲ್ಲಿ ಇದ್ದರೆ ಅದಕ್ಕೆ 10 ರಿಂದ 12 ಲಕ್ಷ ಕೊಡುತ್ತೇವೆ ಎಂದರೂ ಸಿಗುವುದು ಕಷ್ಟ ಎಂಬಂತಾಗಿದೆ. ಭೂಮಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಲೇ ಬೆಂಗಳೂರು, ಮೈಸೂರು ಮತ್ತಿತರ ಕಡೆಯ ರಿಯಲ್‌ ಎಸ್ಟೇಟ್‌ ಬಂಡವಾಳಶಾಹಿಗಳು ಇತ್ತ ಆಗಮಿಸಲು ಪ್ರಾರಂಭಿಸಿದ್ದಾರೆ. ಮೈಸೂರಿಗೆ 105 ಕಿಮೀ, ಜಿಲ್ಲಾ ಕೇಂದ್ರಕ್ಕೆ ಕೇವಲ 30 ಕಿಮೀ ಸಮೀಪದಲ್ಲಿ ಅರಕಲಗೂಡು ಇರುವುದು ಒಂದು ಕಾರಣವಾದರೆ, ಹಾಸನ-ಅರಕಲಗೂಡು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರಾಜ್ಯ ಹೆದ್ದಾರಿ ಹಾದು ಹೋಗಿರುವುದು ಕೂಡ ಇಲ್ಲಿನ ಭೂಮಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಚದರಡಿಗೆ 3,600 ರೂ.: ಅರಕಲಗೂಡು ಕೋಟೆಯ ಹಳೆ ಮನೆಯೊಂದು ಇತ್ತೀಚೆಗೆ ಮಾರಾಟವಾಗಿದ್ದು, ಚದರಡಿಗೆ 3,600 ರೂ. ಕೊಟ್ಟು ಖರೀದಿಸಿರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ನಿವೇಶನ, ಜಮೀನು ಅಷ್ಟೇ ದಿಕ್ಕು, ಶಾಸ್ತ್ರದ ಅನ್ವಯ ಇತ್ತೆಂದರೆ ಬಹುಬೇಡಿಕೆ. ಕೊರೊನಾ ಲಾಕ್‌ಡೌನ್‌ ಬಳಿಕ ಎಲ್ಲ ಉದ್ಯಮ ನೆಲಕಚ್ಚಿದೆ. ಬ್ಯಾಂಕ್‌ ಠೇವಣಿ, ಷೇರು, ಚಿನ್ನ ಯಾವುದರ ಮೇಲೂ ಬಂಡವಾಳ ಹಾಕಿದರೂ, ಅದು ಪ್ರಯೋಜನವಾಗುವುದಿಲ್ಲ ಎಂಬ ಕಾರಣದಿಂದ ಉಳ್ಳವರು ಜಮೀನು, ನಿವೇಶನದ ಮೇಲೆ ಬಂಡವಾಳ ತೊಡಗಿಸುತ್ತಿರುವ ಕಾರಣ ಭೂಮಿಗೆ ಬಹುಬೆಲೆ ಬಂದಿದೆ. ರೈತರ ಒಲವು: ಮಳೆ, ಚಳಿ, ಬಿಸಿಲು ಎನ್ನದೆ ಕಷ್ಟಪಟ್ಟು ಬೆಳೆ ಬೆಳೆದರೂ, ವೈಜ್ಞಾನಿಕ ಬೆಲೆ ಸಿಗಲ್ಲ. ಇಲ್ಲವೇ ಬೆಳೆಗೆ ರೋಗ ತಗುಲಿಯೋ, ಹವಾಮಾನ ವೈಪರಿತ್ಯದಿಂದಾಗಿಯೋ ಬೆಳೆದ ಬೆಳೆ ಕೈಗೆ ಸಿಗುವುದಿಲ್ಲ. ಹೀಗಾಗಿ ಕೆಲ ರೈತರು ಜಮೀನು ಮಾರಾಟ ಮಾಡಿ ಬಂದ ಹಣವನ್ನು ನಿವೇಶನದ ಮೇಲೆಯೋ ಇಲ್ಲವೇ ಮನೆ ಕಟ್ಟಿ ಬಾಡಿಗೆ ಕೊಡುವುದೋ, ಬಡ್ಡಿ ವ್ಯವಹಾರ ಮಾಡಲು ಆ ಹಣ ಬಳಸಿಕೊಳ್ಳುತ್ತಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ. ಭೂಮಿಯ ಬೇಡಿಕೆ ಕೇವಲ ಅರಕಲಗೂಡಿಗೆ ಸೀಮಿತವಾಗಿಲ್ಲ. ತಾಲೂಕಿನ ರಾಮನಾಥಪುರ, ಕೊಣನೂರು ಭಾಗದಲ್ಲೂ ಬೆಲೆ ಹೆಚ್ಚುತ್ತಿದೆ. ಖಾಸಗಿ ಲೇಔಟ್‌ಗಳು ತಲೆ ಎತ್ತಲು ಸಿದ್ಧತೆ ಪ್ರಾರಂಭವಾಗುತ್ತಿದೆ. ಮನೆ ಬಾಡಿಗೆ ದುಬಾರಿ: ಅರಕಲಗೂಡು ತಾಲೂಕು ಕೇಂದ್ರದಲ್ಲಿ ಸಿಂಗಲ್‌ ರೂಂ ಮನೆ ಬೇಕೆಂದರೆ ಕನಿಷ್ಠ 5 ರಿಂದ 6 ಸಾವಿರ ರೂ. ಕೊಡಬೇಕು. ಅದು ಕೂಡ ಮೊದಲು ಅಥವಾ ಎರಡನೇ ಅಂತಸ್ತಿನ ಮನೆ. ಹೀಗಾಗಿ ಇಲ್ಲಿ ಮನೆ ಬಾಡಿಗೆಯೂ ದುಬಾರಿ ಎನ್ನುತ್ತಾರೆ ಸ್ಥಳೀಯರು. 'ಮದುವೆ, ಮಕ್ಕಳು, ಮನೆ ಪ್ರತಿಯೊಬ್ಬರ ಜೀವನದ ಕನಸು. ಉಳಿಸಿಟ್ಟ ಹಣದಲ್ಲಿ ನಿವೇಶನ ಖರೀದಿಸಿದೆ. ನನ್ನ ಲೆಕ್ಕಾಚಾರವೆಲ್ಲ ಮೀರಿಹೋಯಿತು. ಅರಕಲಗೂಡು ಇಷ್ಟೇಕೆ ದುಬಾರಿಯಾಯಿತು ಎಂಬುದೇ ಗೊತ್ತಾಗುತ್ತಿಲ್ಲ' ಎನ್ನುತ್ತಾರೆ ನಿವೇಶನ ಖರೀದಿಸಿದ ವಿರೂಪಾಕ್ಷ.


from India & World News in Kannada | VK Polls https://ift.tt/3A3Te2B

ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ, ಬಿಎಸ್‌ವೈ ಸೂಚನೆ

ಬೆಂಗಳೂರು: ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸುವಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ಇವೆರಡು ಯೋಜನೆಗಳ ಕುರಿತಾಗಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಬಿಎಸ್‌ ಯಡಿಯೂರಪ್ಪ ಎತ್ತಿನಹೊಳೆ ಯೋಜನೆಯಲ್ಲಿ ಈ ವರೆಗೆ 9003.86 ಕೋಟಿ ರೂ. ವೆಚ್ಚವಾಗಿದ್ದು, ಮೊದಲ ಹಂತದಲ್ಲಿ ಜುಲೈ ಅಂತ್ಯದೊಳಗೆ ವೇದಾವತಿ ವ್ಯಾಲಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಎತ್ತಿನಹೊಳೆ ಯೋಜನೆಯು ಏಳು ಜಿಲ್ಲೆಯ 29 ತಾಲ್ಲೂಕುಗಳ 6557 ಗ್ರಾಮಗಳ 68 ಲಕ್ಷಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರು ಒದಗಿಸಲಿದೆ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿಯಿದೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ದೂರವಾಣಿ ಮೂಲಕ‌ ಚರ್ಚಿಸಲಾಗಿದ್ದು ಶೀಘ್ರ ‌ಅನುಮೋದನೆ ನೀಡಲು‌ ಕೋರಲಾಗಿದೆ. ಅಗತ್ಯ ಬಿದ್ದರೆ ಕೇಂದ್ರ ಸಚಿವರನ್ನು ಖುದ್ದು ಭೇಟಿ ಮಾಡಿ‌ ಮಂಜೂರಾತಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.. ಈ ಯೋಜನೆಯಡಿ ಕಳೆದ ರಡು ವರ್ಷಗಳಲ್ಲಿ 2362.62 ಕೋಟಿ ರೂ. ಗಳ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದ್ದು, ಈ ಯೋಜನೆಯಿಂದ ತುಮಕೂರು, ಚಿತ್ರದುರ್ಗಹಾಗೂ ದಾವಣಗೆರೆ ಜಿಲ್ಲೆಗಳಿಗೆ ಅನುಕೂಲವಾಗಲಿದೆ.ನೀರಾವರಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದಂತೆ ಅನುಷ್ಠಾನಗೊಳಿಸಬೇಕು. ಯಾವುದೇ ಲೋಪ ದೋಷಗಳು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಭೆಯಲ್ಲಿ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


from India & World News in Kannada | VK Polls https://ift.tt/3y4cvip

2023ರ ಎಲೆಕ್ಷನ್‌ನಲ್ಲಿ 'ಕೈ' ಹಾದಿ ಸುಗಮ..? 'ದಲಿತ ಮುಖ್ಯಮಂತ್ರಿ' ಎಂಬ ಗಗನ ಕುಸುಮ..!

ಲೇಖಕರು: ಅನಿಲ್ ಕುಮಾರ್ ನಂಜುಂಡಸ್ವಾಮಿ ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲಿ ಬದಲಾವಣೆಯ ಕೂಗು ಕೇಳಿಬಂದಿತ್ತು. ಆದರೆ ಸಿಎಂ ಪಟ್ಟಕ್ಕೆ ಯಾವೊಬ್ಬ ನಾಯಕರ ಹೆಸರೂ ಕೇಳಿ ಬರಲಿಲ್ಲ. ಇದಾದ ಬಳಿಕ, ಈಗ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆ ಶುರುವಾಗಿದೆ. ಅಲ್ಲಿಯೂ ಕೂಡ ಯಾವೊಬ್ಬ ದಲಿತ ನಾಯಕರ ಹೆಸರೂ ಕೇಳಿ ಬರುತ್ತಿಲ್ಲ..! ದಲಿತ ಮುಖ್ಯಮಂತ್ರಿಯ ಕನಸು ಮರೀಚಿಕೆಯಾಗಿಯೇ ಉಳಿದಿದೆ. ದಲಿತ ಸಿಎಂ ಕೂಗು ಕೇಳಿಬಂದಾಗಲೆಲ್ಲಾ ಇತರ ಸಮುದಾಯಗಳು ಅದನ್ನು ದಮನ ಮಾಡುತ್ತಿವೆ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಬಾರಿ ದಲಿತರಿಗೆ ಸಿಎಂ ಆಗುವ ಅವಕಾಶಗಳು ಸಿಕ್ಕಿದ್ದರೂ ಅದು ಸಾಧ್ಯವಾಗಲಿಲ್ಲ. 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷ ಎದುರಿಸಿತ್ತು. ಆಗ ಯಾವ ಪಕ್ಷಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಈ ವೇಳೆ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಆಸಕ್ತಿ ತೋರಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಸಿಗುತ್ತಿತ್ತು. ಇನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದರೂ ಪಕ್ಷದ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಸೋತ ಕಾರಣ ದಲಿತ ಸಿಎಂ ಧ್ವನಿ ಆಡಗಿ ಹೋಯ್ತು. ಬೇರೆ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಲು ದಲಿತ ಸಮುದಾಯ ಸಹಕಾರ ನೀಡಿದ ಹಾಗೆ, ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಲು ಇತರೆ ಸಮುದಾಯದ ಸಹಕಾರ ಸಿಗುತ್ತಿಲ್ಲ. ರಾಜ್ಯ ಆಳುವ ಸಾಮರ್ಥ್ಯ ಇದ್ದರೂ ದಲಿತ ಎಂಬ ಕಾರಣಕ್ಕೆ ಅವಕಾಶ ವಂಚಿತರಾಗಬಾರದು ಅಲ್ಲವೇ..? ದಲಿತರಲ್ಲೂ ಸಾಮರ್ಥ್ಯ ಇರುವವರು, ದೂರದೃಷ್ಟಿ ಇರುವವರು, ಕಾನೂನು ತಿಳಿದವರು ಇದ್ದರೂ ಕೂಡಾ ಅವರು ದಲಿತ ಎಂಬ ಮಾತ್ರಕ್ಕೆ ಅವಕಾಶ ಕೊಡದಿರುವುದು ಅವರಿಗಷ್ಟೇ ಅಲ್ಲ ರಾಜ್ಯಕ್ಕೂ ನಷ್ಟ. ಕಾಂಗ್ರೆಸ್‌ ಪಕ್ಷದ ಮುಂದಿನ ಸಿಎಂ ಕೂಗಿನ ಭವಿಷ್ಯವೇನು..? ರಾಮಕೃಷ್ಣ ಹೆಗ್ಡೆ ಅವರ ನಂತರ ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಆಡಳಿತ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆ ಇಲ್ಲ. ಈ ಕಾರಣದಿಂದ ಕಾಂಗ್ರೆಸ್ ಪಕ್ಷ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಭಾವಿಸಿದೆ. ಹೀಗಾಗಿಯೇ ಮುಂದಿನ ಸಿಎಂ ಕುರಿತಾಗಿ ಚರ್ಚೆ ಆಗುತ್ತಿವೆ. ಆದರೆ ಅತಿಯಾದ ಆತ್ಮ ವಿಶ್ವಾಸದಿಂದ ಇರುವ ಕಾಂಗ್ರೆಸ್‌ಗೆ ಅವರ ಒಳ ಜಗಳವೇ ಮುಳ್ಳಾಗಬಹುದು. ಸ್ವಾಭಾವಿಕವಾಗಿ ಕಾಂಗ್ರೆಸ್‌ನಲ್ಲಿ ಸಿಎಂ ಚರ್ಚೆ ಆರಂಭವಾದಾಗ ಸಿದ್ದರಾಮಯ್ಯನವರ ಹೆಸರು ಮುಂಚೂಣಿಗೆ ಬರುತ್ತದೆ. ಅವರು ಈ ಹಿಂದೆ ಕೊಟ್ಟ ಕಾರ್ಯಕ್ರಮಗಳಿಂದ ಜನಪ್ರಿಯರಾಗಿರುವ ಕಾರಣ ಅವರ ಹೆಸರು ಕೇಳಿ ಬರೋದು ಸಹಜ. ಒಕ್ಕಲಿಗ ನಾಯಕರ ಕಥೆ ಏನು..?: ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್‌, ಪಕ್ಷದ ಶಿಸ್ತಿನ ಸಿಪಾಯಿ. ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಬೆಳೆದು ಬಂದವರು. ಹೀಗಾಗಿ, ಸಿಎಂ ಗಾದಿಗೆ ಪೈಪೋಟಿ ನೀಡುತ್ತಿದ್ದಾರೆ. ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಕ್ಕಲಿಗ ಮತ 'ಕೈ' ಹಿಡಿದರೆ ಡಿಕೆಶಿ ಅವರ ಸಿಎಂ ಹಾದಿ ಸುಲಭ ಆಗಬಹುದೇ..? ಎಸ್‌. ಎಂ. ಕೃಷ್ಣ ಬಳಿಕ ಕಾಂಗ್ರೆಸ್‌ನಲ್ಲಿ ಈವರೆಗೂ ಒಕ್ಕಲಿಗ ನಾಯಕರು ಸಿಎಂ ಆಗಿಲ್ಲ. ಹಾಗಾಗಿ ಈ ಬಾರಿ ಒಕ್ಕಲಿಗ ನಾಯಕರಿಗೆ ಸಿಎಂ ಆಗುವ ಅವಕಾಶ ಸಿಕ್ಕರೆ, ಡಿ. ಕೆ. ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಒಲಿಯಬಹುದು. ಹಾಗೆ ನೋಡಿದರೆ, ಇದೇ ಸಮುದಾಯದ ಕೃಷ್ಣ ಬೈರೇಗೌಡ ಕೂಡಾ ಇದ್ದಾರೆ. ಲಿಂಗಾಯತ ನಾಯಕರ ಸ್ಥಿತಿಗತಿ..?: ಇನ್ನು ಲಿಂಗಾಯಿತ ಸಮುದಾಯದಲ್ಲಿ ವೀರೇಂದ್ರ ಪಾಟೀಲ್ ನಂತರ ಕಾಂಗ್ರೆಸ್‌ನಲ್ಲಿ ಈವರೆಗೂ ಯಾರೂ ಸಿಎಂ ಆಗಿಲ್ಲ. ಶಾಮನೂರು ಶಿವಶಂಕರಪ್ಪ, ಎಚ್‌. ಕೆ. ಪಾಟೀಲ್, ಎಂ. ಬಿ. ಪಾಟೀಲ್, ಈಶ್ವರ ಖಂಡ್ರೆ ಸೇರಿದಂತೆ ಹಲವರು ಈಗ ಕಾಂಗ್ರೆಸ್‌ನಲ್ಲಿ ಸಿಎಂ ರೇಸ್‌ನಲ್ಲಿ ಇದ್ದಾರೆ. ಎಚ್‌. ಕೆ. ಪಾಟೀಲ್ ತಂದೆ ಕೆ. ಎಚ್‌ ಪಾಟೀಲ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಹಾಗಾಗಿ ಎಚ್. ಕೆ. ಪಾಟೀಲ್ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇದ್ದು,ಅನೇಕ ಬಾರಿ ಸಚಿವರಾಗಿದ್ದಾರೆ. ಇನ್ನೂ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಕೂಡಾ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರು. ಹೀಗಾಗಿ, ಈಶ್ವರ ಖಂಡ್ರೆ ಕೂಡಾ ಸಿಎಂ ರೇಸ್‌ನಲ್ಲಿ ಇದ್ದಾರೆ. ಶಾಮನೂರು ಶಿವಶಂಕಪ್ಪ ಅವರು ಮೂಲ ಕಾಂಗ್ರೆಸ್ಸಿಗರು. ಎಂ. ಬಿ. ಪಾಟೀಲರು ಪ್ರತ್ಯೇಕ ಲಿಂಗಾಯಿತ ಧರ್ಮದ ನೇತೃತ್ವ ವಹಿಸಿದ್ದರಿಂದ ಅವರಿಗೆ ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಕೈ ಹಿಡಿಯುತ್ತಾ ಅನ್ನೋ ಅನುಮಾನವಿದೆ. 'ಕೈ' ದಲಿತ ನಾಯಕರ ಸ್ಥಿತಿಗತಿ: ದಲಿತ ಸಮುದಾಯದ ವಿಚಾರಕ್ಕೆ ಬಂದರೆ, ಹಲವು ಬಾರಿ ಸಿಎಂ ಸ್ಥಾನ ವಂಚಿತ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಜಿ. ಪರಮೇಶ್ವರ್ ಕೂಡಾ ಅವಕಾಶ ವಂಚಿತರೇ.. ಮುನಿಯಪ್ಪ ಅವರ ಹೆಸರೂ ಕೂಡಾ ದಲಿತ ಸಿಎಂ ಅಭಿಯಾನದಲ್ಲಿ ಕೇಳಿ ಬರ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಸುಲಭವೇ..?: ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟು ಸುಲಭವಲ್ಲ..! 2013ರಲ್ಲಿ ಕೆಜೆಪಿಯಿಂದ ಬಿಜೆಪಿಗೆ ನಷ್ಟವಾದ ಕಾರಣ, ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂತು. ಆದರೆ ಈ ಬಾರಿ ಬಿಜೆಪಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ, ಕಮಲ ಪಡೆಗೆ ಬಹುಮತ ಬರದಿದ್ದರೂ 2013ಕ್ಕಿಂತಾ ಹೆಚ್ಚಿನ ಸೀಟು ಗೆಲ್ಲುವ ಸಾಮರ್ಥ್ಯವಂತೂ ಇದೆ. ಇತ್ತ ಜೆಡಿಎಸ್ ತನ್ನ ಸಾಂಪ್ರಾದಾಯಿಕ ಮತಗಳನ್ನು ಉಳಿಸಿಕೊಂಡರೆ, ಕಾಂಗ್ರೆಸ್‌ಗೆ 113 ಮ್ಯಾಜಿಕ್ ನಂಬರ್ ತಲುಪೋದು ಕಷ್ಟವಾಗಿ, ಜೆಡಿಎಸ್‌ ಕೈಹಿಡಿದು ಸಮ್ಮಿಶ್ರ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಮಾಸ್ ಲೀಡರ್ ಇಲ್ಲದ ಕಾರಣ, ಬಿಜೆಪಿ ಹೈಕಮಾಂಡ್ ಬಿಹಾರ ಮಾದರಿ ಅನುಸರಿಸಬೇಕಾಗಿ ಬರಬಹುದು..! ಅಂದರೆ, ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟು 2024ರ ಲೋಕಸಭಾ ಚುನಾವಣೆಗೆ ಯೋಜನೆ ರೂಪಿಸಬಹುದು. ಹಾಗೆ ನೋಡಿದ್ರೆ, ಚುನಾವಣೆಗೆ ಇನ್ನು 2 ವರ್ಷ ಬಾಕಿ ಇದೆ. ಈ 2 ವರ್ಷದಲ್ಲಿ ಸರ್ಕಾರ ಸಾಕಷ್ಟು ಕೆಲಸ ಮಾಡಬೇಕಿದೆ. ಹೀಗಾಗಿ, ಈಗಲೇ ಚುನಾವಣೆ ಬಗ್ಗೆ ಚಿಂತಿಸಿ ಎಲ್ಲ ಪಕ್ಷಗಳು ಸಮಯ ವ್ಯರ್ಥ ಮಾಡುವುದು ಬಿಡಬೇಕಿದೆ. ಒಳ್ಳೆಯ ಆಡಳಿತ, ಶಿಕ್ಷಣ, ಉದ್ಯೋಗ ಸೃಷ್ಟಿ ,ಆರೋಗ್ಯ ಇನ್ನೂ ಆನೇಕ ಕ್ಷೇತ್ರಗಳಲ್ಲಿ ರಾಜ್ಯ ಮುಂದುವರಿಯಬೇಕು. ರಾಜ್ಯವನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ತರುವ ಯೋಚನೆಗಳಿರಬೇಕು. ಬಸವಣ್ಣನವರ ವಚನ ಸಾಹಿತ್ಯ, ಕೆಂಪೇಗೌಡರ ಬೆಂಗಳೂರು ನಗರ ನಿರ್ಮಾಣ, ಕನಕದಾಸರ ಕೀರ್ತನೆಗಳು, ಅಂಬೇಡ್ಕರ್‌ ಅವರ ಸಂವಿಧಾನ ರಚನೆ.. ಹೀಗೆ ಯಾವುದೂ ಕೂಡಾ ಒಂದು ಜಾತಿಗೆ ಸೀಮಿತವಾಗಿಲ್ಲ.. ಮೇಲಾಗಿ ಎಲ್ಲ ಜಾತಿ ಜನಾಂಗದ ಏಳಿಗೆ, ಶ್ರೇಯೋಭಿವೃದ್ಧಿ ಸಮಾಜಮುಖಿ ಆಗಿರಬೇಕು. ಆದರೆ, ಇತ್ತೀಚೆಗೆ ಈ ಮಹಾನ್ ನಾಯಕರ ಜಯಂತಿ ಆಚರಣೆಗಳು ಕೇವಲ ಸರ್ಕಾರಿ ಆಚರಣೆ ಆಗುತ್ತಿರುವ ಜೊತೆಯಲ್ಲೇ ಆಯಾ ಸಮುದಾಯಗಳಿಗೆ ಸೀಮಿತ ಆಗುತ್ತಿದೆ.


from India & World News in Kannada | VK Polls https://ift.tt/3637vyJ

ಕೊಹ್ಲಿಗಿಲ್ಲ ಸ್ಥಾನ! ಚೊಪ್ರಾ ಆರಿಸಿದ ತಮ್ಮ ನೆಚ್ಚಿನ ವಿಶ್ವ ಪ್ಲೇಯಿಂಗ್‌ XI ಇಂತಿದೆ..

ಹೊಸದಿಲ್ಲಿ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪಟ್ಟ ಅಲಂಕರಿಸಿರುವ ವಿರುದ್ಧ ಸೆಣಸಬಹುದಾದ ಸಾಮರ್ಥ್ಯವಿರುವ ತಮ್ಮ ನೆಚ್ಚಿನ ವಿಶ್ವ ಇಲೆವೆನ್‌ ತಂಡವನ್ನು ಪ್ರಕಟಿಸಿರುವ ಭಾರತದ ಮಾಜಿ ಆಟಗಾರ , ವಿರಾಟ್‌ ಕೊಹ್ಲಿಗೆ ಸ್ಥಾನ ನೀಡದೆ ಅಚ್ಚರಿ ಮೂಡಿಸಿದ್ದಾರೆ. ಆಧುನಿಕ ದಿಗ್ಗಜ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅತಿ ಹೆಚ್ಚು ರನ್‌ ಗಳಿಸಿದವರ ಅಗ್ರ 10 ಬ್ಯಾಟ್ಸ್‌ಮನ್‌ಗಳಲ್ಲಿಯೂ ಕೊಹ್ಲಿ ಸ್ಥಾನ ಪಡೆದಿಲ್ಲ. ಈ ಕಾರಣದಿಂದ ಆಕಾಶ್‌ ಚೋಪ್ರಾ ಟೀಮ್‌ ಇಂಡಿಯಾ ನಾಯಕನನ್ನು ವಿಶ್ವ ಇಲೆವೆನ್‌ ತಂಡಕ್ಕೆ ಪರಿಗಣಿಸಿಲ್ಲ. ಅಂದಹಾಗೆ ವಿಶ್ವದ ಇಲೆವೆನ್‌ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಆಕಾಶ್‌ ಚೋಪ್ರಾ ಅವಕಾಶ ನೀಡಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ರೋಹಿತ್‌ ಶರ್ಮಾ, ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ಹಾಗೂ ಸ್ಪಿನ್‌ ವಿಭಾಗದಲ್ಲಿ ಆರ್‌ ಅಶ್ವಿನ್‌ಗೆ ಸ್ಥಾನ ಕಲ್ಪಿಸಿದ್ದಾರೆ. "ರೋಹಿತ್‌ ಶರ್ಮಾ ಅವರು ಡಬ್ಲ್ಯುಟಿಸಿ ಆರಂಭಿಕ ಆವೃತ್ತಿಯಲ್ಲಿ 60ರ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ನಾಲ್ಕು ಶತಕಗಳು ಸಿಡಿಸಿದ್ದಾರೆ. ಹಾಗಾಗಿ, ರೋಹಿತ್‌ ಶರ್ಮಾ ಇನಿಂಗ್ಸ್ ಆರಂಭಿಸಲಿದ್ದು, ಅವರ ಜೊತೆಗೆ ಮತ್ತೊಂದು ತುದಿಯಲ್ಲಿ ದಿಮುತ್‌ ಕರುಣರತ್ನೆ ಕಾಣಿಸಿಕೊಳ್ಳಲಿದ್ದಾರೆ. ಲಂಕಾ ಆಟಗಾರ 55.5ರ ಸರಾಸರಿಯಲ್ಲಿ 999 ರನ್‌ ಗಳಿಸಿದ್ದಾರೆ," ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ. "72ರ ಸರಾಸರಿಯಲ್ಲಿ 1675 ರನ್‌ ಸಿಡಿಸಿರುವ ಆಸ್ಟ್ರೇಲಿಯಾ ತಂಡದ ಮಾರ್ನಸ್‌ ಲಾಬುಶೇನ್‌ ಮೂರನೇ ಕ್ರಮಾಂಕಕ್ಕೆ ಆರಿಸಲಾಗಿದ್ದು, ನಾಲ್ಕನೇ ಕ್ರಮಾಂಕಕ್ಕೆ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಆಯ್ಕೆ ಮಾಡಲಾಗಿದೆ. ರೂಟ್‌, 20 ಪಂದ್ಯಗಳಿಂದ 1660 ರನ್‌ ಗಳಿಸಿದ್ದಾರೆ," ಎಂದು ತಿಳಿಸಿದ್ದಾರೆ. "ಐದನೇ ಕ್ರಮಾಂಕಕ್ಕೆ ನಿರೀಕ್ಷೆಯಂತೆ ಸ್ಟೀವನ್‌ ಸ್ಮಿತ್‌ ಅವರನ್ನು ಪರಿಗಣಿಸಲಾಗಿದೆ. ಅವರು 63ರ ಸರಾಸರಿಯಲ್ಲಿ 1341 ರನ್‌ ಗಳಿಸಿದ್ದಾರೆ. ಒಟ್ಟು ನಾಲ್ಕು ಶತಕಗಳನ್ನು ಸಿಡಿಸುವ ಮೂಲಕ ಹಲವು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಏಕಾಂಗಿಯಾಗಿ ಗೆದ್ದು ಕೊಟ್ಟಿದ್ದಾರೆ. ಆಶಷ್‌ ಅಲ್ಲದೆ ಭಾರತ ವಿರುದ್ಧವೂ ಅವರು ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ," ಎಂದರು. ತಮ್ಮ ವಿಶ್ವ ಇಲೆವೆನ್‌ ಆಲ್‌ರೌಂಡರ್ ವಿಭಾಗಕ್ಕೆ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್ ಅವರನ್ನು ಆರಿಸುವ ಮೂಲಕ ಭಾರತದ ರವೀಂದ್ರ ಜಡೇಜಾ ಅವರನ್ನು ಚೋಪ್ರಾ ಕೈ ಬಿಟ್ಟಿದ್ದಾರೆ. "ಜೇಸನ್‌ ಹೋಲ್ಡರ್‌ ಹಾಗೂ ರವೀಂದ್ರ ಜಡೇಜಾ ಬದಲು ಆರನೇ ಕ್ರಮಾಂಕಕ್ಕೆ ಬೆನ್‌ ಸ್ಟೋಕ್ಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಬೌಲಿಂಗ್‌ಗೋಸ್ಕರ ಬೆನ್‌ ಸ್ಟೋಕ್ಸ್ ಅಗತ್ಯವಿದೆ. ಹೆಚ್ಚು ಕಡಿಮೆ ಸ್ಮಿತ್‌ ಅವರಷ್ಟೇ 46ರ ಸರಾಸರಿಯಲ್ಲಿ ಸ್ಟೋಕ್ಸ್‌ 1334 ರನ್‌ ಗಳಿಸಿದ್ದಾರೆ. ವಿಕೆಟ್‌ ಕೀಪರ್‌ಗೆ ರಿಷಭ್‌ ಪಂತ್‌(700 ರನ್‌)ಗೆ ಸ್ಥಾನ ನೀಡಲಾಗಿದ್ದು, ಜಾಸ್‌ ಬಟ್ಕರ್‌ ಅವರನ್ನು ಕೈ ಬಿಡಲಾಗಿದೆ," ಎಂದು ತಿಳಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ಆರ್‌ ಅಶ್ವಿನ್‌ ಅವರನ್ನು ಏಕೈಕ ಸ್ಪಿನ್ನರ್‌ ಆಗಿ ಆಯ್ಕೆ ಮಾಡಲಾಗಿದ್ದು, ವೇಗದ ಬೌಲಿಂಗ್‌ ವಿಭಾಗದಲ್ಲಿ ಸ್ಟುವರ್ಟ್ ಬ್ರಾಡ್‌, ಜಾಶ್‌ ಹೇಝಲ್‌ವುಡ್‌ ಹಾಗೂ ಪ್ಯಾಟ್‌ ಕಮಿನ್ಸ್ ಅವರನ್ನು ಆಕಾಶ್‌ ಚೋಪ್ರಾ ಪರಿಗಣಿಸಿದ್ದಾರೆ. "70 ವಿಕೆಟ್‌ಗಳನ್ನು ಕಬಳಿಸಿರುವ ಪ್ಯಾಟ್‌ ಕಮಿನ್ಸ್, ಏಕೈಕ ಸ್ಪಿನ್ನರ್‌ ಆಗಿ ಆರ್‌ ಅಶ್ವಿನ್‌ ಅವರನ್ನು ಆರಿಸಿದ್ದೇನೆ. 60 ವಿಕೆಟ್‌ ಪಡೆದಿರುವ ಸ್ಟುವರ್ಟ್ ಬ್ರಾಡ್‌ ಅವರನ್ನು ಎರಡನೇ ವೇಗಿಯಾಗಿ ಆರಿಸಲಾಗಿದ್ದು, 11ನೇ ಸ್ಥಾನಕ್ಕೆ ಆಸ್ಟ್ರೇಲಿಯಾದ ಮತ್ತೊಬ್ಬ ವೇಗಿ ಜಾಸ್‌ ಹೇಝಲ್‌ವುಡ್‌ಗೆ ಸ್ಥಾನ ಕಲ್ಪಿಸಲಾಗಿದೆ," ಎಂದು ಆಕಾಶ್‌ ಚೋಪ್ರಾ ಹೇಳಿದ್ದಾರೆ. ಆಕಾಶ್‌ ಚೋಪ್ರಾ ಅವರ ವಿಶ್ವ XI: ರೋಹಿತ್‌ ಶರ್ಮಾ, ದಿಮುತ್‌ ಕರುಣರತ್ನೆ, ಮಾರ್ನಸ್‌ ಲಾಬುಶೇನ್‌, ಜೋ ರೂಟ್‌(ನಾಯಕ), ಸ್ಟೀವನ್‌ ಸ್ಮಿತ್‌, ಬೆನ್‌ ಸ್ಟೋಕ್ಸ್, ರಿಷಭ್‌ ಪಂತ್‌, ಪ್ಯಾಟ್‌ ಕಮಿನ್ಸ್, ಆರ್ ಅಶ್ವಿನ್‌, ಸ್ಟುವರ್ಟ್ ಬ್ರಾಡ್‌, ಜಾಸ್‌ ಹೇಝಲ್‌ವುಡ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3y45CxM

'ಲಾಕ್‌' ಸಡಿಲ.. ಮದುವೆಗೆ ಬಲ.. ಆಷಾಢದಲ್ಲೂ ವಿವಾಹ ಸಂಭ್ರಮ.. ಜವಳಿ, ಆಭರಣ ಮಾರಾಟ ಭರ್ಜರಿ..!

ಯಳನಾಡು ಮಂಜು : ವರ್ಷದ ಆರಂಭದ ಸೀಸನ್‌ ಮುಗಿಯುವ ಹೊತ್ತಿಗಾದರೂ ಕೊರೊನಾ ಅಬ್ಬರ ಕಡಿಮೆಯಾಗಿ ಲಾಕ್‌ಡೌನ್‌ ಸಡಿಲ ಆಗಿರುವುದು ಮದುವೆಗಳಿಗೆ ಬಲ ಬಂದಂತಾಗಿದೆ. ತಾಳಿ ಸೇರಿ ಮದುವೆ ಶಾಸ್ತ್ರದ ವಸ್ತುಗಳೂ ಸಿಗದೆ ಪ್ರಯಾಸದಿಂದ ಪರದಾಡಿ ಮದುವೆಯನ್ನೇ ಮುಂದೂಡಿದ ಎಷ್ಟೋ ಜನ, ಈಗ ನೆಮ್ಮದಿಯಿಂದ ಖರೀದಿಯಲ್ಲಿ ತೊಡಗಿದ್ದು , ಜ್ಯೂವೆಲ್ಲರಿ ಅಂಗಡಿಗಳು ಮದುವೆ ಖರೀದಿದಾರರಿಂದ ತುಂಬುತ್ತಿವೆ. ಹೌದು, ಜುಲೈ 10 ಆಷಾಢ ಕಾಲಿಡುವುದರಿಂದ ಮದುವೆ ಸೀಸನ್‌ ಮುಗಿಯುತ್ತಿತ್ತು. ಆದರೆ, ಈ ಬಾರಿ ಮಿಥನ ಆಷಾಢ ಬಂದಿರುವುದರಿಂದ ಈ ಮಾಸದಲ್ಲೂ ಮದುವೆ ಮಾಡಬಹುದಾಗಿದ್ದು, ಜುಲೈ 18, 20 ತಾರೀಖಿನವರೆಗೂ ಮದುವೆ ಮಹೂರ್ತ ನಿಗದಿ ಆಗಿದ್ದು, ಅಲ್ಲಿಗೆ ವರ್ಷದ ಮೊದಲ ಮದುವೆ ಸೀಸನ್‌ ಕೊನೆಯಾಗಲಿದೆ. ಆಷಾಢ ಮುಗಿದ ನಂತರ ಶ್ರಾವಣದಲ್ಲಿ ಮತ್ತೆ ಮದುವೆಗಳು ಶುರುವಾಗಲಿವೆ. ಆಷಾಢದೊಳಗೆ ಮದುವೆ ಮಹೂರ್ತ ನಿಗದಿ ಪಡಿಸಿಕೊಂಡು ಮದುವೆ ಇನ್ನಿತರೆ ಶುಭ ಕಾರ್ಯ ಆಯೋಜಿಸಿದ್ದ ಕುಟುಂಬಗಳು ಕೊರೊನಾ ಅಬ್ಬರ ಇಳಿಕೆ ಜತೆ ಲಾಕ್‌ಡೌನ್‌ ಸಡಿಲಿಕೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ತಪ್ಪಿದ ಪರದಾಟ: ಲಾಕ್‌ಡೌನ್‌ ಘೋಷಣೆ ನಂತರ ಶುಭ ಸಮಾರಂಭ ಆಯೋಜಿಸಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಜನ ಸೇರುವ ವಿಷಯದಲ್ಲಿ ಕೋವಿಡ್‌ ನಿಯಮ ಪಾಲಿಸಿದರೂ ಕುಟುಂಬಗಳೇ ಸೇರಿ ಮದುವೆ ಮಾಡಿದರೂ ಸಮಾರಂಭಕ್ಕೆ ಬೇಕಾದ ಜವಳಿ, ಜ್ಯೂವೆಲ್ಲರಿ ಅಂಗಡಿಗಳು ಬಾಗಿಲು ಮುಚ್ಚಿದ್ದರಿಂದ ಬಟ್ಟೆಗಳಿರಲಿ, ಮದುವೆಗೆ ಬೇಕಾದ ತಾಳಿ ಖರೀದಿ ಮಾಡಲು ಸಾಕಷ್ಟು ಕುಟುಂಬಗಳು ಪರದಾಡಿದವು. ಆದರೀಗ ಅಂಗಡಿಗಳು ಓಪನ್‌ ಆಗಿರುವುದರಿಂದ ಅದರಲ್ಲೂ ಸೋಮವಾರದಿಂದ ಸಂಜೆ 5 ಗಂಟೆವರೆಗೂ ಅವಕಾಶ ನೀಡಿರುವುದರಿಂದ ಮದುವೆಗಳಿಗೆ ಬಲ ಬಂದಂತಾಗಿದೆ. ಮದುವೆ ಖರೀದಿ ಜೋರು: ಜುಲೈ 18 ರವರೆಗೂ ಮದುವೆ ಮಹೂರ್ತ ನಿಗದಿ ಆಗಿದ್ದು ಆ ಕುಟುಂಬಗಳು ಖರೀದಿಯಲ್ಲಿ ನಿರತರಾಗಿದ್ದಾರೆ. ಲಾಕ್‌ ಸಡಿಲ ನಂತರ ಈಗ ಜವಳಿ ಅಂಗಡಿಗಳಿಗೆ ಬರುತ್ತಿರುವ ಗ್ರಾಹಕರಲ್ಲಿ ಶೇ. 60 ಕ್ಕಿಂತ ಹೆಚ್ಚು ಜನ ಮದುವೆ ಸೇರಿ ಇನ್ನಿತರೆ ಶುಭ ಸಮಾರಂಭದವರು ಇದ್ದಾರೆಂದು ಜವಳಿ ವರ್ತಕರು ಹೇಳುತ್ತಿದ್ದಾರೆ. ಹಾಗೆ ಜ್ಯೂವೆಲ್ಲರಿ ಅಂಗಡಿಗಳಲ್ಲೂ ಮದುವೆಯವರೇ ಹೆಚ್ಚಿನ ಗ್ರಾಹಕರಿದ್ದಾರೆ. ಈಗ ಮದುವೆಗೆ ಜನ ಸೇರುವುದಕ್ಕೆ ನಿರ್ಬಂಧವಿದೆ, ಕೋವಿಡ್‌ ನಿಯಮದಂತೆ ಸದ್ಯ 40 ಜನರಿಗೆ ಅವಕಾಶವಿದೆ. ಕೊರೊನಾ ಹಾವಳಿ ಕಡಿಮೆಯಾಗಿ ಮದುವೆಗೆ ಜನ ಸೇರುವುದಕ್ಕಿರುವ ನಿರ್ಬಂಧ ಇನ್ನಷ್ಟು ಸಡಿಲವಾದರೆ ಮದುವೆಗೆ ಇನ್ನಷ್ಟು ಬಲ ಬರಲಿದೆ. ಆ ಮೂಲಕ ಇನ್ನಿತರೆ ಪೂರಕ ಹೂವು, ಹಣ್ಣು, ಹಾಲು, ಮೊಸರು, ತುಪ್ಪದಂತಹ ಹೈನೋದ್ಯಮ ಕ್ಷೇತ್ರಗಳು ಚೇತರಿಸಿಕೊಳ್ಳಲಿವೆ ಎನ್ನುತ್ತಾರೆ ವರ್ತಕರು. ಲಾಕ್‌ಡೌನ್‌ನಲ್ಲಿ 2,807 ಮದುವೆ..!: ಕೊರೊನಾ ಸೋಂಕು ಉತ್ತುಂಗದಲ್ಲಿದ್ದ ಲಾಕ್‌ಡೌನ್‌ ಅವಧಿಯಲ್ಲಿ ಏಪ್ರಿಲ್‌ 19 ರಿಂದ ಜೂನ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ 2,807 ಮದುವೆಗಳು ನಡೆದಿವೆ. ಅದರಲ್ಲಿ ದಾವಣಗೆರೆ ನಗರ ಮತ್ತು ತಾಲೂಕಲ್ಲಿ ಅತಿ ಹೆಚ್ಚು 867 ಮದುವೆ, ಗೃಹ ಪ್ರವೇಶ ಸೇರಿ ಇನ್ನಿತರೆ ಶುಭ ಸಮಾರಂಭ ನಡೆದಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಮದುವೆ ಸಮಾರಂಭ ನಡೆದಿವೆ. 40 ಮದುವೆಗೆ ಅನುಮತಿ!: ಮುಂದಿನ ತಿಂಗಳು ಜುಲೈ 3 ರವರೆಗೆ ಒಟ್ಟು 40 ಮದುವೆ ಸಮಾರಂಭ ನಡೆಸಲು ಮಹಾನಗರ ಪಾಲಿಕೆಯಲ್ಲಿ ಅನುಮತಿ ಪಡೆಯಲಾಗಿದೆ. ಜುಲೈ 10ಕ್ಕೆ ಆಷಾಢ ಆರಂಭವಾದರೂ ಈ ಬಾರಿ ಮಿಥುನ ಆಷಾಢ ಇರುವುದರಿಂದ ಮದುವೆ ಮುಹೂರ್ತಗಳೂ ಇದ್ದು ಅನುಮತಿಗೆ ಇನ್ನಷ್ಟು ಅರ್ಜಿಗಳು ಬರಲಿವೆ. ಜವಳಿ ಖರೀದಿ 5 ಲಕ್ಷದಿಂದ 50 ಸಾವಿರಕ್ಕೆ ಇಳಿಕೆ: ಮದುವೆಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಜವಳಿ ಖರೀದಿಯಲ್ಲಿ ಗಣನೀಯ ಇಳಿಕೆಯಾಗಿದೆ. ನಮ್ಮಲ್ಲಿ ಒಂದು ಮದುವೆಗೆ 5 ಲಕ್ಷ ರೂ. ವರೆಗೂ ಖರೀದಿ ಮಾಡುತ್ತಿದ್ದರು. ಅದು ಕೇವಲ 50 ಸಾವಿರಕ್ಕೆ ಇಳಿದಿದೆ. ಈ ಮೊದಲು ನೆಂಟರು, ಮದುವೆಗೆ ಬರುವವರಿಗೆಂದು ಎಲ್ಲರಿಗೂ ಜವಳಿ ಖರೀದಿ ಮಾಡುತ್ತಿದ್ದರು. ಆದರೀಗ ಕೇವಲ ವಧು, ವರ ಮತ್ತು ಅವರ ಅಪ್ಪ, ಅಮ್ಮ ಹೀಗೆ ಕುಟುಂಬದವರಿಗೆ ಮಾತ್ರ ಖರೀದಿ ಮಾಡುವುದರಿಂದ ವ್ಯಾಪಾರವೂ ಕುಸಿದಿದೆ ಎಂದು ರವಿತೇಜ ಟೆಕ್ಸ್‌ಟೈಲ್ಸ್‌ ಮಾಲೀಕ ಮಲ್ಲಿಕಾರ್ಜುನ್‌ ಹೇಳುತ್ತಾರೆ. 'ಮದುವೆಯವರು ಮಾತ್ರ ಖರೀದಿಗೆ ಬರುತ್ತಿದ್ದಾರೆ. ಜತೆಗೆ ಲಾಕ್‌ಡೌನ್‌ನಿಂದ ಈ ಹಿಂದೆ ತಾಳಿ ಮಾತ್ರ ತೆಗೆದುಕೊಂಡು ಹೋಗಿದ್ದ ಜನ ಉಳಿದ ಪಡೆಯಲು ಅಂಗಡಿಗಳಿಗೆ ಬರುತ್ತಿದ್ದಾರೆ' ಎಂದು ದಾವಣಗೆರೆಯ ರಾಯ್ಕರ್ ಜ್ಯುವೆಲ್ಲರಿ ಮಾಲೀಕರಾದ ರಾಯ್ಕರ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/3dr4jkp

ವಲಸೆ ಕಾರ್ಮಿಕರಿಗೆ ಜುಲೈ 31ರೊಳಗೆ 'ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್' ಅನುಷ್ಠಾನ: ರಾಜ್ಯಗಳಿಗೆ ಸುಪ್ರೀಂ ಖಡಕ್ ಸೂಚನೆ

ಹೊಸದಿಲ್ಲಿ: ಎಲ್ಲ ರಾಜ್ಯಗಳೂ ಜುಲೈ 31ರ ವೇಳೆಗೆ ವಲಸೆ ಕಾರ್ಮಿಕರಿಗಾಗಿ 'ಒಂದು ದೇಶ, ಒಂದು ಚೀಟಿ' ಯೋಜನೆಯನ್ನು ಜಾರಿಗೆ ತರಬೇಕು ಎಂದು ಮಂಗಳವಾರ ಆದೇಶಿಸಿದೆ. ಜತೆಗೆ, ಸಾಂಕ್ರಾಮಿಕ ಅಂತ್ಯಗೊಳ್ಳುವವರೆಗೂ ವಲಸಿಗರಿಗೆ ಆಹಾರ ಒದಗಿಸಲು ರಾಜ್ಯಗಳು ಸಮುದಾಯ ಕಿಚನ್‌ಗಳನ್ನು ನಡೆಸುವಂತೆ ಅದು ಒತ್ತಿ ಹೇಳಿದೆ. ಈಗಿನ ಕಠಿಣ ಸನ್ನಿವೇಶ ಸಡಿಲವಾಗುವವರೆಗೂ ಸಂಕಷ್ಟದಿಂದ ಪಾರಾಗಲು ಉಚಿತ ಹಂಚಿಕೆಗಾಗಿ ಕೇಂದ್ರ ಸರಕಾರ ಘನ ಪಡಿತರವನ್ನು ಒದಗಿಸಬೇಕು ಎಂದು ಸೂಚಿಸಿದೆ. ವಲಸೆ ಕಾರ್ಮಿಕರ ನೋಂದಣಿಗೆ ಜುಲೈ 31ರ ಒಳಗೆ ಕೇಂದ್ರ ಸರಕಾರ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. 'ಅಸಂಘಟಿತ ಮತ್ತು ವಲಸೆ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರಕಾರ ಪೋರ್ಟಲ್ ಒಂದನ್ನು ಅಭಿವೃದ್ಧಿಪಡಿಸಿ ಅನುಷ್ಠಾನಗೊಳಿಸಬೇಕು. ಜುಲೈ 31ರ ಒಳಗೆ ಪ್ರಕ್ರಿಯೆ ಆರಂಭಿಸಬೇಕು' ಎಂದು ಸೂಚಿಸಿರುವ ಸುಪ್ರೀಂಕೋರ್ಟ್, ದತ್ತಾಂಶಗಳನ್ನು ದಾಖಲು ಮಾಡುವುದರಲ್ಲಿನ ವಿಳಂಬ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 'ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನೀರಸ ವರ್ತನೆ ಅಕ್ಷಮ್ಯ' ಎಂದು ಅದು ಹೇಳಿದೆ. 'ಅಸಂಘಟಿತ ಕೆಲಸಗಾರರು ಮತ್ತು ವಲಸಿಗರ ಕುರಿತಾದ ಪೋರ್ಟಲ್ ಸ್ಥಾಪಿಸುವುದರಲ್ಲಿನ ಕೇಂದ್ರದ ವಿಳಂಬವು ಅದು ವಲಸೆ ಕಾರ್ಮಿಕರ ಕುರಿತಾದ ಕಾಳಜಿ ಹೊಂದಿಲ್ಲ ಹಾಗೂ ಅದನ್ನು ಬಲವಾಗಿ ನಿರಾಕರಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ' ಎಂದು ತರಾಟೆಗೆ ತೆಗೆದುಕೊಂಡಿದೆ. 'ಒಂದು ದೇಶ, ಒಂದು ಪಡಿತರ' ಯೋಜನೆಯು ಹೊಂದಿರುವ ಎಲ್ಲ ಅರ್ಹರು ಅಥವಾ ಫಲಾನುಭವಿಗಳಿಗೆ ದೇಶದ ಯಾವುದೇ ಭಾಗದಲ್ಲಿಯಾದರೂ ಎನ್‌ಎಫ್‌ಎಸ್‌ಎ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ) ಅಡಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ನೀಡುತ್ತದೆ. ಈ ಯೋಜನೆಯನ್ನು ಇನ್ನೂ ಅನುಷ್ಠಾನಗೊಳಿಸದ ರಾಜ್ಯಗಳು ಜುಲೈ 31ರ ಒಳಗೆ ಜಾರಿಗೆ ತರಬೇಕು. ವಲಸಿಗರಿಗೆ ಘನ ಪಡಿತರಗಳನ್ನು ಹಂಚಲು ರಾಜ್ಯಗಳು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಕೋರ್ಟ್ ಸೂಚಿಸಿದೆ. ಕೋವಿಡ್ 19 ಎರಡನೆಯ ಅಲೆಯ ಹಿನ್ನೆಲೆಯಲ್ಲಿ ವಿಧಿಸಲಾದ ನಿರ್ಬಂಧಗಳಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಹರ್ಷ್ ಮಂದೆರ್ ಮತ್ತು ಜಗದೀಪ್ ಛೋಕರ್ ಅರ್ಜಿಗಳನ್ನು ಸಲ್ಲಿಸಿದ್ದರು. ಅಸಂಘಟಿತ ಕಾರ್ಮಿಕರ ನೋಂದಣಿ ಪ್ರಕ್ರಿಯೆಯು ಬಹಳ ನಿಧಾನವಾಗಿದೆ ಎಂದು ಮೇ 24ರಂದು ಕೋರ್ಟ್ ಹೇಳಿತ್ತು.


from India & World News in Kannada | VK Polls https://ift.tt/3h1twnG

ಹಳ್ಳಿಗಳಿಂದ ಜನರ ದಾಂಗುಡಿ: ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗೆ ಡಿಮ್ಯಾಂಡ್‌ ಹೆಚ್ಚುವ ಸಾಧ್ಯತೆ..!

: ನಗರ ತೊರೆದು ಹಳ್ಳಿ ಸೇರಿದ ಜನರು ಮತ್ತೆ ನಗರಕ್ಕೆ ದಾಂಗುಡಿ ಇಡುತ್ತಿದ್ದು, ರಾಜಧಾನಿಯಲ್ಲಿ ಮುಂದಿನ ಕೆಲವು ದಿನ ಕೋವಿಡ್‌ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಲಾಕ್‌ಡೌನ್‌ ತೆರವುಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಇದರಿಂದ ನಗರಕ್ಕೆ ಮರು ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಸೋಮವಾರ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದ್ದು, ನಗರದ ಹೊರ ವಲಯದ ಟೋಲ್‌ಗೇಟ್‌ಗಳು ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿದ್ದರೆ, ರೈಲ್ವೆ ನಿಲ್ದಾಣ ಕೂಡ ಜನಜಂಗುಳಿಯಿಂದ ತುಂಬಿತ್ತು. ನಗರಕ್ಕೆ ಮರು ವಲಸೆ ಬರುತ್ತಿರುವ ಬಹಳಷ್ಟು ಜನರು ಒಂದು ಡೋಸ್‌ ಕೂಡ ಲಸಿಕೆ ಹಾಕಿಸಿಕೊಂಡಿಲ್ಲ. ನಗರಕ್ಕೆ ಬಂದು ಲಸಿಕೆ ತೆಗೆದುಕೊಳ್ಳುವ ಉದ್ದೇಶದಿಂದ ಬಹಳಷ್ಟು ಜನರು ಹಾಗೆಯೇ ಬಂದಿದ್ದಾರೆ. ಹೀಗಾಗಿ ಸ್ವಾಭಾವಿಕವಾಗಿಯೇ ಲಸಿಕೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ಲಕ್ಷ ಗುರಿ ಇಟ್ಟುಕೊಂಡಿರುವ ಬಿಬಿಎಂಪಿ ಸದ್ಯ ಸರಾಸರಿ 60 ರಿಂದ 70 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡುತ್ತಿದೆ. ಹೀಗಿರುವಾಗ ವಲಸಿಗರೂ ಲಸಿಕಾ ಅಭಿಯಾನದಲ್ಲಿ ಸೇರಿಕೊಂಡರೆ ಲಸಿಕೆಗೆ ಬೇಡಿಕೆ ಇನ್ನಷ್ಟು ಹೆಚ್ಚಾಗಲಿದೆ. 'ಬಿಬಿಎಂಪಿಯಲ್ಲಿ ಸದ್ಯಕ್ಕೆ ಕೋವಿಡ್‌ ಲಸಿಕೆಯ ಯಾವುದೇ ಕೊರತೆ ಇಲ್ಲ. ಲಸಿಕಾ ಫಲಾನುಭವಿಗಳು ಹೆಚ್ಚಾದ ಹಾಗೆ ಬೇಡಿಕೆ ಕೂಡ ಹೆಚ್ಚಾಗಲಿದೆ' ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಯೊಬ್ಬರು. ಲಸಿಕೆ ಜತೆ ಸೋಂಕಿನ ಆತಂಕ: ರಾಜಧಾನಿಯಲ್ಲಿ ಒಂದೆಡೆ ಕೋವಿಡ್‌ ಲಸಿಕೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಇನ್ನೊಂದೆಡೆ ಹರಡುವ ಭೀತಿ ಕೂಡ ಕಾಡುತ್ತಿದೆ. ನಗರದಲ್ಲಿ ಸೋಂಕು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ತುಸು ನೆಮ್ಮದಿ ಕಂಡುಕೊಂಡ ಜನ ಮರು ವಲಸೆಯಿಂದ ಮತ್ತೆ ಸೋಂಕು ಹೆಚ್ಚಾಗುವ ಆತಂಕದಲ್ಲಿದ್ದಾರೆ. ರಾಜಧಾನಿಗಿಂತ ಹೊರಗಿನ ಕೆಲವು ಜಿಲ್ಲೆಗಳಲ್ಲಿಯೇ ಸೋಂಕು ಹೆಚ್ಚಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆ ತಪ್ಪಿಸಿಕೊಳ್ಳುವುದು: ಸದ್ಯ ನಗರದಲ್ಲಿ ಸೋಂಕಿನ ಪರೀಕ್ಷೆ ಹೆಚ್ಚು ಪ್ರಮಾಣದಲ್ಲಿ ನಡೆಸಲಾಗುತ್ತಿಲ್ಲ. ರೈಲ್ವೆ, ಬಸ್‌ ನಿಲ್ದಾಣದಲ್ಲಿ ಪರೀಕ್ಷೆ ನಡೆಸುತ್ತಿದ್ದರೂ ಹಲವರು ಪರೀಕ್ಷೆಯಿಂದ ತಪ್ಪಿಸಿಕೊಂಡು ಹೋಗುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ನಗರಕ್ಕೆ ವಾಪಸ್ ಬರುವವರಲ್ಲೂ ಬಹಳಷ್ಟು ಜನರು ಕೋವಿಡ್‌ ಪರೀಕ್ಷೆ ಮಾಡಿಸದೆಯೇ ಇರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3jqSy1g

ಕೋವಿಡ್ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸುಧಾಕರ್‌ v/s ಸುರೇಶ್ ಕುಮಾರ್ ನಡುವೆ ಶೀತಲ ಸಮರ

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ನಿಗದಿ ಮಾಡುವ ನಿರ್ಧಾರವನ್ನು ಶಿಕ್ಷಣ ಸಚಿವ ಪ್ರಕಟಗೊಳಿಸಿದ್ದು ಇದು ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ. ಈ ಕುರಿತಾಗಿ ಸಚಿವರಾದ ಸುರೇಶ್ ಕುಮಾರ್ ಹಾಗೂ ಡಾ. ಕೆ ಸುಧಾಕರ್ ನೀಡುತ್ತಿರುವ ಭಿನ್ನ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗಿದ್ದು ಸಚಿವರ ನಡುವೆ ಸಮನ್ವಯದ ಕೊರತೆ ಇದೆ ಎಂಬುವುದನ್ನು ಎದ್ದು ತೋರಿಸುತ್ತಿದೆ. ಎಸ್‌ಎಸ್‌ಎಲ್ ಸಿ ಪರೀಕ್ಷೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆಯ ಅಭಿಪ್ರಾಯ ಹಾಗೂ ಟಾಸ್ಕ್ ಫೋರ್ಸ್ ಸಲಹೆಯನ್ನು ಶಿಕ್ಷಣ ಸಚಿವರು ಪಡೆಯಲಿಲ್ಲ ಎಂಬ ವಿಚಾರಗಳು ಚರ್ಚೆಯಾಗುತ್ತಿವೆ. ಈ ನಡುವೆ ಶಿಕ್ಷಣದ ಜೊತೆಗೆ ಜೀವ ಕೂಡಾ ಮುಖ್ಯ ಎಂಬ ಸುಧಾಕರ್ ಹೇಳಿಕೆಯೂ ಪರೋಕ್ಷವಾಗಿ ಪರೀಕ್ಷೆ ನಡೆಸುವುದರ ವಿರುದ್ಧವಾಗಿದೆ. ಅಷ್ಟೇ ಅಲ್ಲದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆರೋಗ್ಯ ಸಚಿವ ಸುಧಾಕರ್ ಸಲಹೆ ಪಡೆದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬದಲಾಗಿ ಏಕಪಕ್ಷೀಯ ನಿರ್ಧಾರವನ್ನು ಸುರೇಶ್ ಕುಮಾರ್ ತೆಗೆದುಕೊಂಡಿದ್ದಾರೆ. ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಸುರೇಶ್ ಕುಮಾರ್ ನೀಡುತ್ತಿದ್ದಾರೆ. ಪರೀಕ್ಷೆ ನಡೆಸುವ ಕುರಿತಾಗಿ ತಾಂತ್ರಿಕ ಸಲಹಾ ಸಮಿತಿ ಸಲಹೆ ಕೊಟ್ಟಿದೆ. ಆರೋಗ್ಯ ಇಲಾಖೆ ಆಯುಕ್ತರು ವಿಡಿಯೋ ಸಂವಾದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಸಿಎಂ ಅವರ ಮೌಕಿಕ ಒಪ್ಪಿಗೆಯನ್ನು ಪಡೆಯಲಾಗಿದೆ. ಆರೋಗ್ಯ ಇಲಾಖೆ ನೀಡಿರುವ ಗೈಡ್‌ಲೈನ್ ಮೂಲಕವೇ ಪರೀಕ್ಷೆ ನಡೆಯಲಿದೆ ಎಂದು ಸುರೇಶ್ ಕುಮಾರ್ ಹೇಳುತ್ತಾರೆ. ಸಚಿವರ ನಡುವಿನ ಗೊಂದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬಿಎಸ್‌ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಬೇಕಾಗಿ ಬಂದಿದೆ. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಸಿಎಂ ಬಿಎಸ್‌ವೈ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಗೊಂದಲ ಸೃಷ್ಟಿಸುವುದು ಅನಗತ್ಯ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಇದು ಏಕಪಕ್ಷೀಯ ತೀರ್ಮಾನವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.


from India & World News in Kannada | VK Polls https://ift.tt/3qzSsFW

ನನಗೆ ವಯಸ್ಸಾಗಿದೆ, ಈ ಸನ್ನಿವೇಶದಲ್ಲಿ ವಿಚಾರಣೆಗೆ ಹಾಜರಾಗುವುದು ಸರಿಯಲ್ಲ: ಇ.ಡಿಗೆ ಅನಿಲ್ ದೇಶ್‌ಮುಖ್ ಪತ್ರ

ಮುಂಬಯಿ: ಹಾಗೂ ಲಂಚ ಪ್ರಕರಣ ಎದುರಿಸುತ್ತಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ , ಕೋವಿಡ್ 19 ಸಾಂಕ್ರಾಮಿಕ ಕಾರಣದಿಂದ ತಾವು ವಿಚಾರಣೆಗೆ ಖುದ್ದು ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪತ್ರ ಬರೆದಿದ್ದಾರೆ. ತಮ್ಮ ಹೇಳಿಕೆಯನ್ನು ತಮ್ಮ ಆಯ್ಕೆಯ ಯಾವುದೇ ಆಡಿಯೋ/ದೃಶ್ಯ ಮಾಧ್ಯಮದ ಮೂಲಕ ದಾಖಲಿಸಿಕೊಳ್ಳುವಂತೆ ಅವರು ಕೋರಿದ್ದಾರೆ. ಮಂಗಳವಾರ ಇ.ಡಿಗೆ ಪತ್ರ ಬರೆದಿರುವ ಅನಿಲ್, 'ನಾನು ಎಪ್ಪತ್ತರ ಪ್ರಾಯದವ, ನನಗೀಗ ಸುಮಾರು 72 ವರ್ಷ. ರಕ್ತದೊತ್ತಡ ಹಾಗೂ ಹೃದ್ರೋಗ ಸಮಸ್ಯೆಯಂತಹ ವಿವಿಧ ಅನಾರೋಗ್ಯಗಳಿಂದ ಬಳಲುತ್ತಿದ್ದೇನೆ. ಪರಿಶೀಲನೆ ಹಾಗೂ ನನ್ನ ಹೇಳಿಕೆಯ ದಾಖಲೆಯ ಸಂದರ್ಭದಲ್ಲಿ ಜೂನ್ 25ರಂದೇ ನಾನು ಖುದ್ದಾಗಿ ಹಲವು ಗಂಟೆಗಳ ಕಾಲ ನಿಮ್ಮೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದೇನೆ. ಹೀಗಾಗಿ ಇಂದು ನಾನು ಖುದ್ದು ಹಾಜರಾಗುವುದು ವಿವೇಕಯುತ ಅಥವಾ ಅಪೇಕ್ಷಾರ್ಹವಲ್ಲ. ನಾನು ನನ್ನ ಅಧಿಕೃತ ಪ್ರತಿನಿಧಿಯನ್ನು ಕಳುಹಿಸುತ್ತಿದ್ದೇನೆ' ಎಂದು ಹೇಳಿದ್ದಾರೆ. ತಮಗೆ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಪ್ರತಿ ನೀಡಿದ ಬಳಿಕ ಇ.ಡಿ ಕೇಳಿರುವ ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವುದಾಗಿ ಎಂದಿರುವ ಅನಿಲ್ ದೇಶ್‌ಮುಖ್, ತಮ್ಮ ಖುದ್ದು ಹಾಜರಿಯ ಉದ್ದೇಶವನ್ನು ಇ.ಡಿಯ ಸಮನ್ಸ್ ಸ್ಪಷ್ಟಪಡಿಸುತ್ತಿಲ್ಲ ಎಂದು ಹೇಳಿದ್ದಾರೆ. ನಾಗಪುರದ ನಿವಾಸದಲ್ಲಿ ವ್ಯಾಪಕ ಪರಿಶೀಲನೆ ಬಳಿಕ ಅನಿಲ್ ದೇಶ್‌ಮುಖ್ ಅವರಿಗೆ ಇ.ಡಿ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಹಾಜರಾಗಲು ಇನ್ನಷ್ಟು ಸಮಯ ಬೇಕು ಎಂದು ಅವರು ಕೋರಿದ್ದರು. ಅದರ ಬೆನ್ನಲ್ಲೇ ಇ.ಡಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ನೀಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ್‌ಮುಖ್ ಅವರ ಖಾಸಗಿ ಕಾರ್ಯದರ್ಶಿ ಸಂಜೀವ್ ಪಲಂದೆ ಮತ್ತು ಖಾಸಗಿ ಸಹಾಯಕ ಕುಂದನ್ ಶಿಂದೆ ಅವರನ್ನು ಇ.ಡಿ ಬಂಧಿಸಿತ್ತು. 2020ರ ಡಿಸೆಂಬರ್‌ನಿಂದ 2021ರ ಫೆಬ್ರವರಿವರೆಗೆ ಬಾರ್ ಮಾಲೀಕರಿಂದ ಸಂಗ್ರಹಿಸಿದ 4 ಕೋಟಿಗೂ ಅಧಿಕ ಮೊತ್ತವನ್ನು ದಿಲ್ಲಿಯ ನಾಲ್ಕು ಬೇನಾಮಿ ಕಂಪೆನಿಗಳ ಮೂಲಕ ನಾಗಪುರದಲ್ಲಿರುವ ಅನಿಲ್ ದೇಶ್‌ಮುಖ್ ಚಾರಿಟಬಲ್ ಟ್ರಸ್ಟ್‌ಗೆ ವರ್ಗಾಯಿಸಲಾಗಿತ್ತು ಎಂದು ಅದು ಆರೋಪಿಸಿದೆ.


from India & World News in Kannada | VK Polls https://ift.tt/3x6hor8

ಬಾಗಲಕೋಟೆಯಲ್ಲಿ ಮತ್ತೆ 'ಮಹಾ' ಕೊರೊನಾತಂಕ..! ಅನ್‌ಲಾಕ್‌ ತಂದಿಟ್ಟ ಕಂಟಕ..!

ಅರುಣ ಯಾದವಾಡ ತೇರದಾಳ (): ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಗೊಂಡ ಹಿನ್ನೆಲೆಯಲ್ಲಿ ಸರಕಾರ ಲಾಕ್‌ಡೌನ್‌ ಸಡಿಲಗೊಳಿಸಿ ಅನ್‌ಲಾಕ್‌ ಘೋಷಣೆ ಮಾಡಿದೆ. ಆದರೆ, ಮಹಾರಾಷ್ಟ್ರದಲ್ಲಿ ದಿಢೀರನೆ ಮತ್ತೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿಂದ ರಾಜ್ಯಕ್ಕೆ ಬರುವವರಿಂದ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಭೀತಿ ಎದುರಾಗಿದೆ. ಅನ್‌ಲಾಕ್‌ ನಂತರ ಅಂತಾರಾಜ್ಯ ಹಾಗೂ ಅಂತರ ಜಿಲ್ಲೆ ಬಸ್‌ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಬಾಗಲಕೋಟೆ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಯ ಘಟಕಗಳಿಂದ ಹಲವು ಬಸ್‌ಗಳು ಮಹಾರಾಷ್ಟ್ರಕ್ಕೆ ಸಂಚಾರ ಪ್ರಾರಂಭಿಸಿವೆ. ಇದರಿಂದ ಎರಡು ರಾಜ್ಯಗಳ ನಡುವೆ ಜನ ಸಂಚಾರ ಆರಂಭಗೊಂಡಿರುವುದೇ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ಸೋಂಕಿತರು ಬರುವ ಸಾಧ್ಯತೆಗಳಿವೆ. ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೋಲ್ಹಾಪುರ ಹಾಗೂ ಸಾತಾರ ಜಿಲ್ಲೆಗಳಲ್ಲಿ ಸೋಂಕಿತರು ಹೆಚ್ಚಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ ಜುಲೈ ಮೊದಲ ವಾರದವರೆಗೆ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಆದರೆ, ಬಸ್‌ ಸಂಚಾರ ಪ್ರಾರಂಭ ಆಗಿರುವ ಕಾರಣ ಮಹಾರಾಷ್ಟ್ರದಿಂದ ಪ್ರತಿದಿನ ನಾಲ್ಕೈದು ಬಸ್‌ಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಘಟಕದವರೆಗೆ ಬರುತ್ತವೆ. ಜಮಖಂಡಿ ಹಾಗೂ ಬಾಗಲಕೋಟೆ ಜಿಲ್ಲೆಯ ಬೇರೆ ಬೇರೆ ಘಟಕ ಸೇರಿದಂತೆ ಬೇರೆ ಜಿಲ್ಲೆಯ ಹತ್ತಾರು ಬಸ್‌ಗಳು ತೇರದಾಳ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಪ್ರತಿದಿನ ಹೋಗಿ ಬರುತ್ತಿವೆ. ಸಾಕಷ್ಟು ಪ್ರಯಾಣಿಕರು ಆ ಭಾಗದಿಂದ ನಮ್ಮ ಭಾಗಕ್ಕೆ, ನಮ್ಮ ಭಾಗದಿಂದ ಆ ಭಾಗಕ್ಕೆ ಹೋಗಿ ಬರುತ್ತಿದ್ದಾರೆ. ರಾಜ್ಯದ ಗಡಿ ಪ್ರದೇಶ ಆಗಿರುವ ಕಾಗವಾಡ ಗಡಿಯಲ್ಲಿ ಚೆಕ್‌ಪೋಸ್ಟ್‌ ನಿರ್ಮಿಸಲಾಗಿದ್ದರೂ ಕೂಡ ಅದು ಕೇವಲ ನೆಪಕ್ಕೆ ಮಾತ್ರ ಎನ್ನಲಾಗುತ್ತಿದೆ. ಬಸ್‌ಗಳಿರಲಿ, ಬೈಕ್‌, ಕಾರ್‌ಗಳೂ ಕೂಡ ಬೇಕಾ ಬಿಟ್ಟಿಯಾಗಿ ಅಲೆದಾಡುತ್ತಿವೆ. ಮಹಾರಾಷ್ಟ್ರದ ಕೋಲ್ಹಾಪುರ ಜಿಲ್ಲೆಯ ಗಾಂಧಿನಗರ (ವಲಿವಾಡಿ) ಬಟ್ಟೆ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ. ಅಲ್ಲಿ ಲಾಕ್‌ಡೌನ್‌ ಇದ್ದರೂ ಕೂಡ ಕದ್ದು ಮುಚ್ಚಿ ವಹಿವಾಟು ನಡೆಯುತ್ತಿರುವುದರಿಂದ ಜಿಲ್ಲೆಯ ವ್ಯಾಪಾರಸ್ಥರು ಹೋಗಿ ಬರುತ್ತಿದ್ದಾರೆ. ಇನ್ನು ಅಲ್ಲಿಯ ವ್ಯಾಪಾರಸ್ಥರು ಕೂಡ ಜಿಲ್ಲೆಗೆ ವಸೂಲಿಗಾಗಿ ಕಾರಿನಲ್ಲಿ ಬರುತ್ತಿದ್ದಾರೆ. ಹಾಗೂ ಬಾಗಲಕೋಟೆ ಜಿಲ್ಲೆಗೆ ನಿರಂತರವಾಗಿ ಸಂಪರ್ಕ ಬೆರೆಯುತ್ತಿರುವುದರಿಂದ ಮತ್ತೆ ಈ ಭಾಗದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾದರೂ ಅಚ್ಚರಿ ಇಲ್ಲ. ಆದ್ದರಿಂದ ಈ ಕುರಿತು ಜಿಲ್ಲಾಡಳಿತ ಮುಂಜಾಗ್ರತ ಕ್ರಮ ವಹಿಸುವುದು ಸೂಕ್ತವಾಗಿದೆ ಎಂಬ ಮಾತುಗಳು ನಾಗರಿಕರಲ್ಲಿ ಕೇಳಿ ಬರುತ್ತಿವೆ. 'ಜಮಖಂಡಿ ಘಟಕದಿಂದ ಮಹಾರಾಷ್ಟ್ರದ ಮೀರಜ್‌ವರೆಗೆ ಪ್ರತಿ ದಿನ 8 ರಿಂದ 10 ಬಸ್‌ಗಳನ್ನು ಓಡಿಸಲಾಗುತ್ತಿದೆ. ಭಾನುವಾರ ಪುಣೆಗೆ ಒಂದು ಬಸ್‌ ಬಿಡಲಾಗಿದೆ. ಜಮಖಂಡಿ ಘಟಕದಲ್ಲಿ ಸುಮಾರು 350ರಷ್ಟು ನೌಕರರಿದ್ದು, ಸದ್ಯಕ್ಕೆ 270 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ' ಎಂದು ಜಮಖಂಡಿ ಘಟಕದ ವ್ಯವಸ್ಥಾಪಕ ಸಂಗಮೇಶ ಮುಟ್ಟೊಳಿ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/3A4TKxn

ಅಂಗವಿಕಲರಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸಲಾಗದು: ಸುಪ್ರೀಂಕೋರ್ಟ್

ಹೊಸದಿಲ್ಲಿ: ಸರಕಾರಿ ಉದ್ಯೋಗಗಳಲ್ಲಿ ಅಂಗವಿಕಲರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸಲಾಗದು ಎಂದು ಪುನರುಚ್ಚರಿಸಿದೆ. ಕಳೆದ ವರ್ಷ ಮಹಿಳೆಯೊಬ್ಬರಿಗೆ ಬಡ್ತಿ ನೀಡುವ ಸಂಬಂಧ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅಂಗವೈಕಲ್ಯವುಳ್ಳ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಪಾಲ್ಗೊಳ್ಳುವಿಕೆ) ಕಾಯ್ದೆ 1995ರ ಅಡಿ ಮೀಸಲಾತಿಗಳಿಗಾಗಿ ಹುದ್ದೆಗಳನ್ನು ಕೂಡಲೇ ಗುರುತಿಸಬೇಕು. ಆದರೆ ಹೆಚ್ಚಿನ ಸರಕಾರಿ ಅಧಿಕಾರಿಗಳು ಅದನ್ನು ನಿಜಕ್ಕೂ ಅಳವಡಿಸುವ ಉದ್ದೇಶವಿಲ್ಲದೆ ವಿಳಂಬ ಮಾಡುವ ತಂತ್ರ ಅನುಸರಿಸುವುದು ಇದಕ್ಕೆ ನಿರಾಕರಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಶಾಸನವೊಂದನ್ನು ತರುವುದು ಕೆಲವು ಬಾರಿ ಸುಲಭವಾಗಿರುತ್ತದೆ. ಆದರೆ ಕಾನೂನನ್ನು ಮಣಿಸುವ ಉದ್ದೇಶವಿರುವ ಕೆಲವು ಸಾಮಾಜಿಕ ಮನಸ್ಥಿಗಳನ್ನು ಬದಲಾಯಿಸುವುದು ಬಹಳ ಕಷ್ಟವಾಗಿರುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ. ಮಹಿಳೆಯೊಬ್ಬರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂಬಂಧ 2020ರ ಮಾರ್ಚ್ 9ರಂದು ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಆರ್ ಸುಭಾಷ್ ರೆಡ್ಡಿ ಅವರನ್ನು ಒಳಗೊಂಡ ನ್ಯಾಯಪೀಠ ಎತ್ತಿಹಿಡಿದಿದೆ. ಉದ್ದೇಶದಿಂದ ಹುದ್ದೆಗಳನ್ನು ಗುರುತಿಸುವುದು ಕಡ್ಡಾಯ ಹಾಗೂ ಒಂದೇ ಕೇಂದ್ರದಲ್ಲಿ ಕೆಲಸ ಮಾಡುವ ಇತರೆ ವ್ಯಕ್ತಿಗಳ ಜತೆಗೆ ಅಂಗವಿಕಲರನ್ನು ಕೂಡ ಬಡ್ತಿಗೆ ಪರಿಗಣಿಸಬೇಕು ಎಂದು ತನ್ನ ಹಿಂದಿನ ತೀರ್ಪುಗಳಲ್ಲಿ ಸುಪ್ರೀಂಕೋರ್ಟ್ ಸೂಚಿಸಿದ್ದನ್ನು ನ್ಯಾಯಪೀಠ ನೆನಪಿಸಿತು. ತಮ್ಮ ಜತೆಗಿರುವವರನ್ನು ಬಡ್ತಿಗೆ ಪರಿಗಣಿಸಿ ತಮ್ಮಗೆ ನಿರಾಕರಿಸುವುದು ಅಂಕವಿಕಲರು ಹತಾಶೆಗೊಳ್ಳಲು ಕಾರಣವಾಗುತ್ತದೆ ಎಂದು ಅದು ಹೇಳಿದೆ.


from India & World News in Kannada | VK Polls https://ift.tt/3A72rah

ವಿರಾಟ್‌ ಕೊಹ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮೌನ ಮುರಿದ ವಿಲಿಯಮ್ಸನ್‌!

ಹೊಸದಿಲ್ಲಿ: ನಾಯಕ ಹಾಗೂ ನಾನು ದೀರ್ಘ ಕಾಲದಿಂದಲೂ ಜೊತೆಗಾರರಾಗಿದ್ದು, ನಮ್ಮ ನಡುವೆ ಅತ್ಯುತ್ತಮ ಬಾಂಧ್ಯವ್ಯವಿದೆ ಎಂದು ನ್ಯೂಜಿಲೆಂಡ್‌ ತಂಡದ ನಾಯಕ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಕಳೆದ ವಾರವಷ್ಟೇ ಕೇನ್‌ ವಿಲಿಯಮ್ಸನ್‌ ನಾಯಕತ್ವದ ನ್ಯೂಜಿಲೆಂಡ್‌, ಉದ್ಘಾಟನಾ ಆವೃತ್ತಿಯ ಹಣಾಹಣಿಯಲ್ಲಿ ಭಾರತವನ್ನು ಎಂಟು ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಆ ಮೂಲಕ 2000ರ ವರ್ಷದ ಬಳಿಕ ಮೊದಲ ಬಾರಿ ನ್ಯೂಜಿಲೆಂಡ್‌ ತಂಡ ಐಸಿಸಿ ಪ್ರಶಸ್ತಿ ಗೆದ್ದಿತ್ತು. ಪಂದ್ಯ ಗೆದ್ದ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಅವರನ್ನು ಅಪ್ಪಿಕೊಂಡಿದ್ದರು. ಈ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇತ್ತೀಚೆಗೆ ಇಂಡಿಯಾ ಟುಡೇ ಜೊತೆ ಮಾತನಾಡಿದ ವಿಲಿಯಮ್ಸನ್‌, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಯೊಂದಿಗಿನ ತಮ್ಮ ಸುದೀರ್ಘ ಗೆಳೆತನವನ್ನು ತೆರೆದಿಟ್ಟಿದ್ದಾರೆ. "ಡಬ್ಲ್ಯುಟಿಸಿ ಫೈನಲ್‌ ಹಣಾಹಣಿಯ ಕೊನೆಯ ದಿನ ನ್ಯೂಜಿಲೆಂಡ್‌ ಪಾಲಿಗೆ ಅದ್ಭುತವಾಗಿತ್ತು. ಅದರಲ್ಲೂ ಪಂದ್ಯ ಗೆದ್ದ ಬಳಿಕ ವಿರಾಟ್‌ ಕೊಹ್ಲಿ ಅಪ್ಪಿಕೊಂಡ ಕ್ಷಣವಂತೂ ನನ್ನ ಪಾಲಿಗೆ ದೊಡ್ಡದು. ನಾನು ಹಾಗೂ ವಿರಾಟ್‌ ಕೊಹ್ಲಿ ಬಹುದಿನಗಳಿಂದಲೂ ಜೊತೆಯಾಗಿದ್ದೇವೆ. ವಿಶ್ವದಾದ್ಯಂತ ಕ್ರಿಕೆಟ್‌ ಆಡುವ ಮೂಲಕ ಹೊಸ-ಹೊಸ ಸ್ನೇಹಿತರನ್ನು ಪಡೆಯಲು ಉತ್ತಮ ಅವಕಾಶ ಸಿಕ್ಕಿದೆ. ಪಂದ್ಯದಲ್ಲಿ ಕಾದಾಟ ನಡೆಸಿದರು ಕೂಡ ನಮ್ಮ ಗೆಳೆತನ ವಿಭಿನ್ನ ಅನುಭವವನ್ನು ನೀಡುತ್ತದೆ. ಪಂದ್ಯದಲ್ಲಿ ಗೆಲುವು-ಸೋಲು ಉಂಟಾದರೂ ನಮ್ಮ ಬಾಂಧವ್ಯ ಎಂದಿಗೂ ಬದಲಾಗುವುದಿಲ್ಲ. ಇದು ನಮ್ಮ ಗೆಳೆತನದ ವಿಶೇಷ," ಎಂದು ವಿಲಿಯಮ್ಸನ್‌ ಹೇಳಿದರು. ಪಂದ್ಯದ ಗೆಲುವಿನ ಬಳಿಕ ಸಂಭ್ರಮಾಚರಣೆ ಹೇಗಿತ್ತು ಎಂಬುದರ ಬಗ್ಗೆಯೂ ವಿಲಿಯಮ್ಸನ್‌ ಹಂಚಿಕೊಂಡಿದ್ದಾರೆ. "ಪಂದ್ಯ ಗೆದ್ದ ಬಳಿಕ ನಮ್ಮ ಆಟಗಾರರಿಗೆ ಶಾಂತ ರೀತಿಯಲ್ಲಿ ಇರಿ ಎಂದು ಹೇಳಿದರು ಕೂಡ ಅವರು ನನ್ನ ಮಾತನ್ನು ಕೇಳಲಿಲ್ಲ. ಆ ಕ್ಷಣದಲ್ಲಿ ಸಾಕಷ್ಟು ಉಲ್ಲಾಸವಿತ್ತು. ಆಟಗಾರರಿಂದ ಮಿಶ್ರ ಭಾವನೆಗಳು ವ್ಯಕ್ತವಾಗುತ್ತಿದ್ದವು. ಹಿಂದಿನ ಅನುಭವಗಳಲ್ಲಿ ಭಾಗವಹಿಸಿದ್ದ ಕೆಲ ಆಟಗಾರರು ಕೂಡ ತಂಡದಲ್ಲಿದ್ದರು. ಹಾಗಾಗಿ ಅವರೆಲ್ಲಾ ಈ ಕ್ಷಣವನ್ನು ವಿಭಿನ್ನವಾಗಿ ಆನಂದಿಸಿದ್ದಾರೆ," ಎಂದು ತಿಳಿಸಿದರು. ಡಬ್ಲ್ಯುಟಿಸಿ ಫೈನಲ್‌ ಪಂದ್ಯದ ಕೊನೆಯ ದಿನವರೆಗೂ ಭಾರತ ತಂಡಕ್ಕೆ ಗೆಲ್ಲಲು ಹೇಗೆ ಅವಕಾಶವಿತ್ತು ಎಂಬ ಬಗ್ಗೆಯೂ ಕೇನ್‌ ಕಿವೀಸ್‌ ನಾಯಕ ವಿಲಿಯಮ್ಸನ್‌ ವಿವರಿಸಿದ್ದಾರೆ. "ಇಂತಹ ಸಂಗತಿಗಳು ನಮ್ಮ ಪಾಲಿಗೆ ನಡೆಯುತ್ತಿರುತ್ತವೆ. ನಿರೀಕ್ಷಿಸುತ್ತಿದ್ದ ಎಲ್ಲಾ ಫಲಿತಾಂಶಗಳು ಕೂಡ ವಾಸ್ತವಿಕವಾಗಿದ್ದು, ಅದನ್ನು ಪಡೆಯಲು ನಾವು ಸಾಧ್ಯವಾದಷ್ಟು ಪ್ರಯತ್ನವನ್ನು ನಡೆಸುತ್ತಿದ್ದೇವೆ. ಕಳೆದ ಕೆಲ ದಿನಗಳಿಂದ(ಡಬ್ಲ್ಯುಟಿಸಿ ಫೈನಲ್‌) ಯಾವುದೇ ವಿಭಿನ್ನತೆ ಇರಲಿಲ್ಲ. ಆಟ ಹೇಗೆ ಬದಲಾವಣೆಯಾಗಿತ್ತು ಹಾಗೂ ಅವಕಾಶಗಳು ಹೇಗೆ ಲಭ್ಯವಾಗುತ್ತಿದ್ದವು ಎಂಬುದನ್ನು ನೀವೇ ನೋಡಿರಬಹುದು. ಮೀಸಲು ದಿನ ಬಹುಬೇಗ ವಿಕೆಟ್‌ಗಳನ್ನು ಪಡೆದುಕೊಂಡಿದ್ದರಿಂದ ಫಲಿತಾಂಶ ಹೊರಬರುವ ಅವಕಾಶ ದಟ್ಟವಾಗಿತ್ತು. ಇದರ ಹೊರತಾಗಿಯೂ ಟೀಮ್‌ ಇಂಡಿಯಾ ಬೌಲಿಂಗ್‌ನಲ್ಲಿ ಕೌಂಟರ್‌ ದಾಳಿ ನಡೆಸಿತ್ತು," ಎಂದು ವಿಲಿಯಮ್ಸನ್‌ ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gZLZkK

ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ,ಕೇರಳದ ಸ್ಪಷ್ಟನೆ ಸಮಾಧಾನ ಮೂಡಿಸಿದೆ; ಎಚ್‌ಡಿಕೆ

ಬೆಂಗಳೂರು: ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರವಾಗಿ ಸರ್ಕಾರ ನೀಡಿರುವ ಸ್ಪಷ್ಟನೆ ಸಮಾಧಾನ ಮೂಡಿಸಿದೆ ಎಂದು ಮಾಜಿ ಸಿಎಂ ತಿಳಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಕಾಸರಗೋಡಿನ ಗ್ರಾಮಗಳ ಕನ್ನಡ ಹೆಸರಿನ ಮಲಯಾಳೀಕರಣ ವಿಚಾರ ಮುನ್ನೆಲೆಗೆ ಬರುವುದರ ಹಿಂದೆ ಯಾವ ತಂತ್ರವಿತ್ತೋ ತಿಳಿಯದು. ಆದರೆ, ‘ಕನ್ನಡ, ಕನ್ನಡಿಗ, ಕರ್ನಾಟಕ‘ಕ್ಕೆ ಏನೋ ಅಪಚಾರವಾಗುತ್ತಿದೆ ಎಂದು ಭಾವಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆಯಲಾಯಿತು. ಆದರೆ, ಅಂಥ ಪ್ರಸ್ತಾವ ಇಲ್ಲ ಎಂಬ ಕೇರಳದ ಸ್ಪಷ್ಟನೆಯು ಸಮಾಧಾನ ಮೂಡಿಸಿದೆ ಎಂದಿದ್ದಾರೆ. ಕಾಸರಗೋಡಿನಲ್ಲಿ ಕನ್ನಡಕ್ಕೆ ದಕ್ಕೆಯಾದರೆ ಹೋರಾಟ ನಡೆಸುವುದಾಗಿಯೂ, ಅದರ ನೇತೃತ್ವ ತಾವೇ ವಹಿಸುವುದಾಗಿಯೂ ಮಂಜೇಶ್ವರದ ಶಾಸಕ ಹೇಳಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಭಿಮಾನ ಮೆರೆದಿದ್ದ ಅಶ್ರಫ್‌ ಹೇಳಿಕೆಯು ಮತ್ತಷ್ಟು ಸಮಾಧಾನ ತಂದಿದೆ. ಕನ್ನಡಪರವಾದ ನಿಲುವು ಪ್ರಕಟಿಸಿರುವ ಅಶ್ರಫ್‌ ಅವರನ್ನು ಅಭಿನಂದಿಸುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಭಾಷಾ ಸಾಮರಸ್ಯದ ವಿಚಾರದಲ್ಲಿ ಕರ್ನಾಟಕ–ಕೇರಳ ರಾಜ್ಯಗಳು ಪರಸ್ಪರ ಪೂರಕವಾಗಿ ನಡೆದುಕೊಂಡು ಬಂದಿವೆ. ಆದರೂ ಹೆಸರು ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದ್ದು ಹೇಗೆ, ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಈ ಪ್ರಯತ್ನವು ಸಾಮರಸ್ಯವನ್ನು ಕೆಡಿಸುವ ಉದ್ದೇಶವನ್ನೇ ಹೊಂದಿದ್ದರೆ ಎರಡೂ ರಾಜ್ಯಗಳು ಜಾಗೃತರಾಗಬೇಕಾದ ಅಗತ್ಯವಿದೆ. ಕಾಸರಗೋಡು ಗ್ರಾಮಗಳ ಹೆಸರುಗಳ ಮಲಯಾಳೀಕರಣವನ್ನು ವಿರೋಧಿಸುವ ಮೂಲಕ ಕನ್ನಡಿಗರು ಕನ್ನಡದ ವಿಚಾರದಲ್ಲಿ ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ಬಗ್ಗೆ ಅತಿ ಶೀಘ್ರದಲ್ಲೇ ಕೇರಳ ಸರ್ಕಾರದಿಂದ ಸ್ಪಷ್ಟೆನೆ ಬರುವಂತೆ ಮಾಡಿದ್ದಾರೆ. ಈ ಸಾತ್ವಿಕ ಹೋರಾಟದಲ್ಲಿ ಭಾಗಿಯಾದ ಕನ್ನಡಿಗರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.


from India & World News in Kannada | VK Polls https://ift.tt/3hbx3yK

ಜಮ್ಮು ಮತ್ತು ಕಾಶ್ಮೀರ ಭೂಪಟ ವಿವಾದ: ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥನ ವಿರುದ್ಧ ಎಫ್‌ಐಆರ್

ಹೊಸದಿಲ್ಲಿ: ಹಾಗೂ ಲಡಾಖ್‌ಗಳನ್ನು ಪ್ರತ್ಯೇಕ ದೇಶ ಎಂಬಂತೆ ಭೂಪಟ ತೋರಿಸುವ ಮೂಲಕ ವಿವಾದ ಸೃಷ್ಟಿಸಿರುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ ಇಂಡಿಯಾ ಮುಖ್ಯಸ್ಥ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರಕಾರದ ಜತೆಗಿನ ಟ್ವಿಟ್ಟರ್ ಸಂಘರ್ಷದ ಮಧ್ಯೆ ಉತ್ತರ ಪ್ರದೇಶದಲ್ಲಿ ಈ ತಿಂಗಳು ಸಾಮಾಜಿಕ ಮಾಧ್ಯಮದ ವಿರುದ್ಧ ದಾಖಲಾದ ಎರಡನೆಯ ಎಫ್‌ಐಆರ್ ಇದಾಗಿದೆ. ಬಜರಂಗ ದಳ ಮುಖಂಡ ಪ್ರವೀಣ್ ಭಾಟಿ ಎಂಬುವವರು ದೂರು ನೀಡಿದ್ದು, 'ಈ ವಿಶ್ವಾಸಘಾತದ ಕೃತ್ಯವು ಉದ್ದೇಶಪೂರ್ವಕವಾಗಿದ್ದು, ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 505 (2)ರ ಅಡಿ (ವರ್ಗಗಳ ನಡುವೆ ವೈರತ್ವ ಅಥವಾ ದ್ವೇಷ ಅಥವಾ ಕೆಡುಕು ಸೃಷ್ಟಿಸುವ ಅಥವಾ ಪ್ರಚಾರ ಮಾಡುವ) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008ರ ಸೆಕ್ಷನ್ 74ರ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಟ್ವಿಟ್ಟರ್ ಇಂಡಿಯಾದಲ್ಲಿ ಕೆಲಸ ಮಾಡುವ ಅಮೃತಾ ತ್ರಿಪಾಠಿ ಅವರನ್ನೂ ಹೆಸರಿಸಲಾಗಿದೆ. ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಅರ್ಜಿಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ನಡೆದ ಹಲ್ಲೆಯ ಕುರಿತಾದ ವಿಡಿಯೋದ ಮೂಲಕ ಸುಳ್ಳು ಸುದ್ದಿಗಳನ್ನು ಹರಡಿಸಲಾಗಿದೆ ಎಂದು ಆರೋಪಿಸಿ ಟ್ವಿಟ್ಟರ್ ವಿರುದ್ಧ ದಾಖಲಾಗಿದ್ದ ದೂರಿಗೆ ಸಂಬಂಧಿಸಿದಂತೆ, ಟ್ವಿಟ್ಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರಿಗೆ ಬಂಧನದಿಂದ ತಾತ್ಕಾಲಿಕ ರಕ್ಷಣೆ ಒದಗಿಸಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಟ್ವಿಟ್ಟರ್‌ನಲ್ಲಿ ಸುಳ್ಳು ವಿಡಿಯೋವನ್ನು ಹರಡುತ್ತಿದ್ದರೂ ಅದನ್ನು ತೆರವುಗೊಳಿಸುವ ಅಥವಾ ಫ್ಲ್ಯಾಗ್ ಮಾಡದ ಟ್ವಿಟ್ಟರ್ ವಿರುದ್ಧ ಉತ್ತರ ಪ್ರದೇಶದಲ್ಲಿ ಗಲಭೆಯ ಉದ್ದೇಶ, ದ್ವೇಷ ಪ್ರಚಾರ ಮತ್ತು ಅಪರಾಧ ಸಂಚಿನ ಪ್ರಕರಣಗಳನ್ನು ದಾಖಲಿಸಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಉತ್ತರ ಪ್ರದೇಶ ಪೊಲೀಸರು ಮನೀಶ್ ಅವರಿಗೆ ಸಮನ್ಸ್ ನೀಡಿತ್ತು. ಅವರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಕಳೆದ ವಾರ ಕರ್ನಾಟಕ ಹೈಕೋರ್ಟ್ ಉತ್ತರ ಪ್ರದೇಶ ಪೊಲೀಸರಿಗೆ ಸೂಚನೆ ನೀಡಿತ್ತು. ಬೆಂಗಳೂರಿನ ನಿವಾಸಿಯಾಗಿರುವ ಮನೀಶ್, ಈಗ ಉತ್ತರ ಪ್ರದೇಶಕ್ಕೆ ಪ್ರಯಾಣಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಜಿ. ನರೇಂದರ್ ಅವರ ಏಕಸದಸ್ಯ ನ್ಯಾಯಪೀಠ ಹೇಳಿತ್ತು.


from India & World News in Kannada | VK Polls https://ift.tt/3hfAMLM

ಕೆಪಿಸಿಸಿ ಅಧ್ಯಕ್ಷರು ಅಥವಾ ಸಿಎಲ್‌ಪಿ ನಾಯಕರ ಪೈಕಿ ಒಬ್ಬರು ಸಿಎಂ ಆಗುತ್ತಾರೆ, ಇದು ಕಾಂಗ್ರೆಸ್ ಸಂಪ್ರದಾಯ, ಕೆ ಸುಧಾಕರ್‌

ಬೆಂಗಳೂರು:ಕೆಪಿಸಿಸಿ ಅಧ್ಯಕ್ಷರು ಅಥವಾ ಸಿಎಲ್‌ಪಿ ನಾಯಕರ ಪೈಕಿ ಯಾರಾದರು ಒಬ್ಬರು ಸಿಎಂ ಆಗುತ್ತಾರೆ, ಇದು ಕಾಂಗ್ರೆಸ್‌ನಲ್ಲಿ ನಡೆದುಕೊಂಡು ಬಂದ ಸಂಪ್ರದಾಯ ಎಂದು ಸಚಿವ ಡಾ. ಹೇಳಿದರು. ದಲಿತ ಸಿಎಂ ಚರ್ಚೆಯ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಇದು ಆಂತರಿಕ ವಿಚಾರ ಆದರೆ ಕಾಂಗ್ರೆಸ್‌ನಲ್ಲಿ ಯಾರು ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೋ ಅಥವಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿರುತ್ತಾರೋ ಅವರೇ ಮುಂದಿನ ಸಿಎಂ ಆಗುತ್ತಾರೆ. ಇದು ಆ ಪಕ್ಷದಲ್ಲಿ ನಡೆದುಕೊಂಡು ಬಂದ ಸಂಪ್ರದಾಯ ಎಂದು ತಿಳಿಸಿದರು. ಇದೇ ವೇಳೆ ಲಸಿಕೆ ಕೊರತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ, ಹೀಗಿದ್ದರೂ ದೆಹಲಿಗೆ ಸೋಮವಾರ ಪ್ರವಾಸ ಮಾಡುತ್ತೇನೆ. ಆರೋಗ್ಯ ಸಚಿವರ ಜೊತೆಗೆ ಸಮಾಲೋಚನೆ ನಡೆಸಿ ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡಬೇಕು ಎಂದು ಮನವಿ ಸಲ್ಲಿಸುತ್ತೇನೆ ಎಂದರು. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ನಿಗದಿ ಕುರಿತಾಗಿ ಮಾತನಾಡಿದ ಅವರು, ಈ ಕುರಿತಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿಸಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತಾಗಿ ಸುರೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


from India & World News in Kannada | VK Polls https://ift.tt/35Z1sep

5 ಲಕ್ಷ ರೂ ಸಂಬಳದಲ್ಲಿ 2.75 ಲಕ್ಷ ರೂ ತೆರಿಗೆ ಪಾವತಿಸುತ್ತೇನೆ: ರಾಷ್ಟ್ರಪತಿ ಕೋವಿಂದ್

ಕಾನ್ಪುರ: ತಮ್ಮ ಮಾಸಿಕ ವೇತನದ ಸುಮಾರು ಶೇ 55ರಷ್ಟು ಮೊತ್ತವನ್ನು ಆದಾಯ ತೆರಿಗೆಯಾಗಿ ಪಾವತಿಸುತ್ತಿರುವುದಾಗಿ ತಿಳಿಸಿರುವ ರಾಮನಾಥ್ ಕೋವಿಂದ್, ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದಕ್ಕಾಗಿ ಜನರು ಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ಪರೌಂಖ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. 'ಪ್ರತಿಯೊಬ್ಬರಿಗೂ ತಿಳಿದಿದೆ- ಮತ್ತು ಇದರಲ್ಲಿ ತಪ್ಪೇನೂ ಇಲ್ಲ. ದೇಶದ ರಾಷ್ಟ್ರಪತಿ ಅತ್ಯಧಿಕ ವೇತನ ಇರುವ ಉದ್ಯೋಗಿ. ಆದರೆ ಅವರು ತೆರಿಗೆಯನ್ನೂ ಪಾವತಿಸುತ್ತಾರೆ. ನಾನು ತಿಂಗಳಿಗೆ 2.75 ಲಕ್ಷ ತೆರಿಗೆ ಕಟ್ಟುತ್ತೇನೆ. ನನಗೆ ಮಾಸಿಕ 5 ಲಕ್ಷ ರೂ ಬರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದಕ್ಕೂ ತೆರಿಗೆ ಇದೆ. ಈಗ ನನ್ನ ಬಳಿ ಎಷ್ಟು ಉಳಿಯುತ್ತದೆ? ನಾನು ಉಳಿತಾಯ ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ನನ್ನ ಅಧಿಕಾರಿಗಳು ಉಳಿಸುತ್ತಾರೆ. ಶಿಕ್ಷಕರು ಹೆಚ್ಚು ಸಂಪಾದಿಸುತ್ತಾರೆ' ಎಂದು ಕೋವಿಂದ್ ಹೇಳಿದ್ದಾರೆ. ಆದರೆ ಕೋವಿಂದ್ ಅವರ ತೆರಿಗೆ ಪಾವತಿಯ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ರಾಷ್ಟ್ರಪತಿಯವರ ವೇತನವು ತೆರಿಗೆಗೆ ಒಳಪಟ್ಟಿಲ್ಲ ಎಂದು ಅನೇಕರು ಹೇಳಿದ್ದಾರೆ. ಅತ್ಯಂತ ಶ್ರೀಮಂತ ವ್ಯಕ್ತಿಗಳೂ ಸೆಸ್, ಸರ್‌ಚಾರ್ಜ್ ಮುಂತಾದವುಗಳನ್ನು ಒಳಗೊಂಡ 5 ಕೋಟಿಗೂ ಅಧಿಕ ಆದಾಯವಿದ್ದವರು ಪಾವತಿಸುವ ತೆರಿಗೆ ಶೇ 42.7 ಪ್ರಮಾಣವನ್ನು ಮೀರುವುದಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. 2017ರಲ್ಲಿ ರಾಷ್ಟ್ರಪತಿಯ ವೇತನವನ್ನು ಮಾಸಿಕ 1.5 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. ವೇತನದ ಜತೆಗೆ ರಾಷ್ಟ್ರಪತಿಗೆ ಉಚಿತ ನಿವಾಸ, ಜೀವಿತಾವಧಿ ಉಚಿತ ಔಷಧೀಯ ಚಿಕಿತ್ಸೆ ಸೇರಿದಂತೆ ಹಲವಾರು ಭತ್ಯೆಗಳು ಸಿಗುತ್ತವೆ. ರಾಷ್ಟ್ರಪತಿಯವರ ಪಿಂಚಣಿ ಕಾಯ್ದೆ, 1951ರಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದ ವ್ಯಕ್ತಿಯ , ಸೌಲಭ್ಯಗಳು ಮತ್ತು ನಿವೃತ್ತ ನಂತರದ ಸವಲತ್ತುಗಳ ಬಗ್ಗೆ ವಿವರಿಸಿದೆ. ಸುಪ್ರೀಂಕೋರ್ಟ್‌ನ ವಿವಿಧ ಆದೇಶಗಳ ಪ್ರಕಾರ ಆದಾಯ ತೆರಿಗೆಯಿಂದ ಕಾನೂನು ಒಂದರ ಅಡಿ ನಿರ್ದಿಷ್ಟವಾಗಿ ವಿನಾಯಿತಿ ನೀಡಿರದ ಆದಾಯವನ್ನು ತೆರಿಗೆ ಯೋಗ್ಯ ಆದಾಯ ಎಂದೇ ಪರಿಗಣಿಸಲಾಗುತ್ತದೆ. ಆದರೆ ಸ್ವಯಂಪ್ರೇರಿತ ವೇತನಗಳನ್ನು ಒಪ್ಪಿಸುವಿಕೆ (ತೆರಿಗೆ ವಿನಾಯಿತಿ) ಕಾಯ್ದೆ 1961ರ ಪ್ರಕಾರ ರಾಷ್ಟ್ರಪತಿಯವರು ಭಾರತೀಯ ಕ್ರೋಡೀಕೃತ ನಿಧಿಗೆ ತಮ್ಮ ವೇತನವನ್ನು ಒಪ್ಪಿಸಿದರೆ ಅದಕ್ಕೆ ತೆರಿಗೆಯಿಂದ ವಿನಾಯಿತಿ ಇದೆ. ಇದು ದೇಶದ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ. ಲೆಕ್ಕಪರಿಶೋಧಕರ ಪ್ರಕಾರ 5 ಲಕ್ಷ ಮಾಸಿಕ ಆದಾಯ ಹೊಂದಿರುವವರು ಈಗಿನ ನಿಯಮದ ಪ್ರಕಾರ ವರ್ಷಕ್ಕೆ 17.60 ಲಕ್ಷ ರೂ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ ಪ್ರತಿ ತಿಂಗಳೂ 1.47 ಲಕ್ಷ ಕಡಿತಗೊಳ್ಳುತ್ತದೆ. ರಾಷ್ಟ್ರಪತಿ ಯಾವುದೇ ವಿನಾಯಿತಿ ತೆರಿಗೆ ದರದ ನೀತಿಯನ್ನು ಆಯ್ಕೆ ಮಾಡಿರದೆ ಇದ್ದರೆ ಈ ಮಾಸಿಕ ತೆರಿಗೆ 1.53 ಲಕ್ಷ ರೂ ಇರುತ್ತದೆ. ಆದರೆ ಅದು 2.75 ಲಕ್ಷ ರೂ ಇರಲು ಸಾಧ್ಯವಿಲ್ಲ. ಬಹುಶಃ ಕೋವಿಡ್ 19ರ ಕಾರಣದಿಂದ ಕಡಿತಗೊಳಿಸುತ್ತಿರುವ ಶೇ 30ರಷ್ಟು ವೇತನ ಕಡಿತವನ್ನು ರಾಷ್ಟ್ರಪತಿ ತೆರಿಗೆ ಎಂದೇ ಭಾವಿಸಿರಬೇಕು ಎಂದು ಲೆಕ್ಕ ಪರಿಶೋಧಕರು ವಾದ ಮಂಡಿಸಿದ್ದಾರೆ.


from India & World News in Kannada | VK Polls https://ift.tt/3h9lNCQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...