RR vs SRH Live Score: ಟಾಸ್‌ ಗೆದ್ದ ಸನ್‌ರೈಸರ್ಸ್‌ ಚೇಸಿಂಗ್‌ ಆಯ್ಕೆ!

ಹೊಸದಿಲ್ಲಿ: ಕೇನ್‌ ವಿಲಿಯಮ್ಸನ್‌ ಸಾರಥ್ಯ ಪಡೆದಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಚೇಸಿಂಗ್‌ ಆಯ್ಕೆ ಮಾಡಿಕೊಂಡಿದೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಟೂರ್ನಿಯಲ್ಲಿ ಈವರೆಗೆ ನಡೆದ ಎಲ್ಲ ಪಂದ್ಯಗಳಲ್ಲಿ ರನ್‌ ಚೇಸ್‌ ಮಾಡಿದ ತಂಡಗಳಿಗೆ ಯಶಸು ಸಿಕ್ಕಿದೆ. ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ 170ಕ್ಕೂ ಹೆಚ್ಚು ರನ್‌ ಗಳಿಸಿದರೂ ಚೇಸಿಂಗ್‌ ತಂಡಗಳು ಜಯ ದಕ್ಕಸಿಕೊಳ್ಳುತ್ತಿವೆ. ರಾಜಸ್ಥಾನ್ ರಾಯಲ್ಸ್‌ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ತಂದಿದೆ. ಅನುಜ್ ರಾವತ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದು, ವೇಗಿ ಜಯದೇವ್ ಉನಾದ್ಕಟ್ ಸ್ಥಾನದಲ್ಲಿ ಯುವ ವೇಗದ ಬೌಲರ್‌ ಕಾರ್ತಿಕ್ ತ್ಯಾಗಿ ಕಣಕ್ಕಿಳಿದಿದ್ದಾರೆ. ಮತ್ತೊಂದೆಡೆ ಸನ್‌ರೈಸರ್ಸ್‌ ಪರ ಮಾಜಿ ನಾಯಕ ಡೇವಿಡ್‌ ವಾರ್ನರ್‌ ಆಡುತ್ತಿಲ್ಲಿ. ಅವರ ವಿಶ್ರಾಂತಿಗೆ ನೈಜ ಕಾರಣ ತಿಳಿದುಬಂದಿಲ್ಲ. ಅವರ ಸ್ಥಾನದಲ್ಲಿ ಮೊಹಮ್ಮದ್ ನಬಿ ಆಡುವ ಅವಕಾಶ ಪಡೆದಿದ್ದಾರೆ. ಭುವನೇಶ್ವರ್‌ ಕುಮಾರ್‌ ಮತ್ತು ಅಬ್ದುಲ್ ಸಮದ್‌ ಆಡುವ ಹನ್ನೊಂದರ ಬಳಗಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಆರ್‌ಆರ್‌ ಪ್ಲೇಯಿಂಗ್ ಇಲೆವೆನ್ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌/ ನಾಯಕ), ಅನುಜ್ ರಾವತ್, ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯ, ಕ್ರಿಸ್ ಮಾರಿಸ್‌, ಕಾರ್ತಿಕ್ ತ್ಯಾಗಿ, ಚೇತನ್ ಸಾಕರಿಯ, ಮುಸ್ತಾಫಿಝುರ್ ರೆಹಮಾನ್. ಎಸ್‌ಆರ್‌ಎಚ್‌ ಪ್ಲೇಯಿಂಗ್ ಇಲೆವೆನ್ಜಾನಿ ಬೈರ್‌ಸ್ಟೋವ್ (ವಿಕಟ್‌ಕೀಪರ್‌), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಅಬ್ದುಲ್ ಸಮದ್, ಮೊಹಮ್ಮದ್ ನಬಿ, ಕೇದಾರ್ ಜಾಧವ್, ವಿಜಯ್ ಶಂಕರ್, ರಶೀದ್ ಖಾನ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್, ಭುವನೇಶ್ವರ್ ಕುಮಾರ್.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3nHo5Ml

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...