ಮೈಸೂರು: ಚಾಮರಾಜನಗರದಲ್ಲಿ ನಡೆದ ದುರಂತಕ್ಕೆ ಮೈಸೂರು ಹಾಗು ಚಾಮರಾಜನಗರ ಜಿಲ್ಲಾಡಳಿತವೇ ನೇರ ಹೊಣೆ ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕ್ಸಿಜನ್ ದುರಂತದಲ್ಲಿ 24ಜನರ ಸಾವಿಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಡಳಿತವೇ ನೇರ ಹೊಣೆ ಎಂದು ಆರೋಪಿಸಿದರು. ಕೋವಿಡ್ ಹೆಸರಿನಲ್ಲಿ ಹಣ ಲೂಟಿ ಆಗ್ತಿದೆ, ಈ ಬಗ್ಗೆ ನನಗೆ ಸಾಕಷ್ಟು ಅನುಮಾನ ಬಂದಿದೆ ಎಂದು ಕೆಲವೊಂದು ಮಾಹಿತಿ ತೋರಿಸಿ ಗಂಭೀರ ಆರೋಪವನ್ನು ಮಾಡಿದ್ದಾರೆ. 40 ಜನ ಬಿಲ್ ಮಾಡಲು ಡಿಸಿ ಆಫೀಸ್ ನಲ್ಲಿದ್ದಾರೆ. ಹೋಮ್ ಕ್ವಾರೈಂಟನ್‌ನಲ್ಲಿರುವವರ ಹೆಸರಿನಲ್ಲಿ ಹಣ ಮಾಡಿದ್ದಾರೆ. ಬಕೆಟ್, ಮನೆ ಒರೆಸುವ ಬಟ್ಟೆ, ಹೆಸರಿನಲ್ಲಿ ಬಿಲ್ ಹಾಕಲಾಗಿದೆ. ಇದು ಒಂದೇ ಕೇಸ್ ವರ್ಕರ್ ಹೆಸರಿನಲ್ಲಿ ಒಂದು ಕೋಟಿ ಬಿಲ್ ಆಗಿದೆ. ನನಗೆ ಅನುಮಾನ ಬಂದ ಬಳಿಕ ಈ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ಪಡೆದಿದ್ದೇನೆ. ಕಾನೂನು ಪ್ರಕಾರ ಹಣ ಕಟ್ಟಿ ನಾನು ಬಿಲ್ ಪಡೆದಿದ್ದೇನೆ ಆದರೆ 7 ತಿಂಗಳಿಂದ ಈವರೆಗೂ ಕೂಡ ನನಗೆ ಮಾಹಿತಿ ಕೊಟ್ಟಿಲ್ಲ ಎಂದರು. 10ನೇ ತಿಂಗಳಿಂದ ಇಲ್ಲಿಯವರೆಗೂ ಬಿಲ್‌ಗಳನ್ನು ಕೊಟ್ಟಿಲ್ಲ. ಉಸ್ತುವಾರಿ ಸಚಿವರೇ ದಯವಿಟ್ಟು ಗಮನಿಸಿ. ಪ್ರತಿ ದಿನ ಖರ್ಚಾಗುವ ವೆಚ್ಚವನ್ನು ಜನರಿಗೆ ಮಾಹಿತಿ ನೀಡಿ. ನೀವೂ ಮಾಹಿತಿಯನ್ನ ಕೊಟ್ಟಿದ್ರೆ ನಾವ್ಯಾಕೆ ಆಯೋಗದ ಕದ ತಟ್ಟಬೇಕಿತ್ತು ಎಂದರು. ಚಾಮರಾಜನಗರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಡಳಿತದ ಸ್ಪಷ್ಟನೆ ಸುಳ್ಳು. ರಾತ್ರಿ 2.30ಕ್ಕೆ ಸದರನ್ ಗ್ಯಾಸ್‌ನಿಂದ 90 ಸಿಲಿಂಡರ್ ಹೋಗಿದೆ. ಮೈಸೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ 24 ಮಂದಿ ಮೃತಪಟ್ಟಿದ್ದಾರೆ. ಐಎಎಸ್ ಅಧಿಕಾರಿಯಿಂದ ತನಿಖೆ ಮಾಡಿಸಿದ್ರೆ ನ್ಯಾಯ ಸಿಗುತ್ತಾ ಸ್ವಾಮಿ.? ಎಂದು ಪ್ರಶ್ನಿಸಿದರು. ಯಾರ ಒತ್ತಡಕ್ಕೆ ಈ ರೀತಿ ಜಿಲ್ಲಾಧಿಕಾರಿಯನ್ನ ಇಟ್ಟುಕೊಂಡಿದ್ದೀರಿ ಇಲ್ಲಿ ಗೊತ್ತಿಲ್ಲ.ಆದರೆ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಕೋವಿಡ್ ನಿರ್ವಹಣೆಗಾದ್ರು ಸರಿ ಒಬ್ಬ ಹಿರಿಯ ಅಧಿಕಾರಿಯನ್ನ ನೇಮಿಸಿ ಎಂದು ಆಗ್ರಹಿಸಿದರು. ಸಚಿವರು ಹೇಳಿದ್ದಾರೆ ಮೂರು ಜನ ಮಾತ್ರ ಆಕ್ಸಿಜನ್ ಸಾವು ಅಂತ.ಆಗಿದ್ರೆ ಅದು ಸಾವು ಅಲ್ಲವಾ ಸ್ವಾಮಿ.? ಮೊದಲು ಡ್ರಗ್ ಕಂಟ್ರೋಲ್‌ರ ವಿರುದ್ಧ ಕ್ರಮ ತಗೊಳ್ಳಿ. ಇದು ಜನರ ಜೀವನದ ಪ್ರಶ್ನೆ. ದಯವಿಟ್ಟು ಉದ್ಧಟತನ ಅಧಿಕಾರಿಯನ್ನ ಇಟ್ಕೊಂಡು ಆಟ ಆಡಬೇಡಿ. ನಿಮ್ಮ ಭೂ ವ್ಯವಹಾರ ಇದ್ದರೆ ಇಂತಹ ಜಿಲ್ಲಾಧಿಕಾರಿ ಇಟ್ಟುಕೊಳ್ಳಿ. ಆದರೆ ಕೋವಿಡ್ ನಿರ್ವಹಣೆ ಮಾಡೋದಾದ್ರೆ ಒಬ್ಬ ಪ್ರಾಮಾಣಿಕರನ್ನ ನೇಮಿಸಿ ಎಂದು ಆಗ್ರಹಿಸಿದರು. ಈಗಾಗಲೇ ಮೈಸೂರು ಅದ್ವಾನ ಆಗ್ತಿದೆ. ಚಾಮರಾಜನಗರದ ಪರಿಸ್ಥಿತಿ ಮೈಸೂರಿಗೂ ಆಗುವ ಸಾಧ್ಯತೆ ಇದೆ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
from India & World News in Kannada | VK Polls https://ift.tt/3xKEJQ8